ಪಡೀಲ್ ಜಂಕ್ಷನ್ ನಿಂದ ಪಂಪ್ ವೆಲ್ ವರೆಗಿನ ಕಾಂಕ್ರಟೀಕರಣ ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಒತ್ತಾಯ- ಸಿಪಿಐಎಂ

ಮಂಗಳೂರು ಸ್ಮಾರ್ಟ್ ಸಿಟಿಯೋಜನೆಯಡಿ ಪಡೀಲ್ ಜಂಕ್ಷನ್ ನಿಂದ ಪಂಪ್ ವೆಲ್ ವರೆಗಿನ ಮುಖ್ಯರಸ್ತೆಯ ಅಗಲೀಕರಣ ಮತ್ತು ಕಾಂಕ್ರಟೀಕರಣ ಕಾಮಗಾರಿ ಕೆಲಸ ಕೈಗೊಂಡು ಹಲವು ವರುಷಗಳು ಕಳೆದರೂ ಈವರೆಗೂ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಈ ರಸ್ತೆಯಲ್ಲಿ ಸಾಗುವ ವಾಹನ ಸವಾರರು ಮಿತಿ ಮೀರಿದ ಟ್ರಾಫೀಕ್ ಅಡಚಣೆಯಿಂದ ದಿನನಿತ್ಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಈ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆ ಬಿಜೆಪಿ ಆಡಳಿತ ಹಾಗೂ ಜಿಲ್ಲಾಡಳಿತ ಕೂಡಲೇ ಗಮನಹರಿಸಿ ರಸ್ತೆ ಕಾಮಗಾರಿ ಕೆಲಸದ ವೇಗ ಹೆಚ್ಚಿಸಿ ಶೀಘ್ರಗತಿಯಲ್ಲಿ ಪೂರ್ಣಗೊಳಿಸಬೇಕೆಂದು ಸಿಪಿಐಎಂ ಮಂಗಳೂರು […]

Continue Reading

ಬಜಪೆ: ಮನೆಗೆ ಕನ್ನ ಹಾಕಿ ಕಳವು ಮಾಡುತ್ತಿದ್ದ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರನ್ನು ಪತ್ತೆ ಮಾಡಿದ ಪೊಲೀಸರು

ಬಜಪೆ ಠಾಣಾ ವ್ಯಾಪ್ತಿಯ ಬಜಪೆ, ಪೆರ್ಮುದೆ, ಕೈಕಂಬ, ಸೂರಲ್ಪಾಡಿ, ಕಂದಾವರ ಮುಂತಾದ ಕಡೆಗಳಲ್ಲಿ ಸಣ್ಣ ಪುಟ್ಟ ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರನ್ನು ಪತ್ತೆಮಾಡಿ, ಅವರಿಂದ ಕಳವು ಮಾಡಿದ್ದ ಪಲ್ಸರ್ ಬೈಕ್-1 ಹಾಗೂ ಪೆರ್ಮುದೆಯ ಮನೆಯಲ್ಲಿ ಕಳ್ಳತನ ಮಾಡಿದ್ದ 30,000 ರೂಪಾಯಿ ಮೌಲ್ಯದ ಬೆಳ್ಳಿಯ ವಸ್ತುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರನ್ನು ಬಾಲ ನ್ಯಾಯ ಮಂಡಳಿಯ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದೆ. ಕಳವು ಮಾಡಿದವರ ಪತ್ತೆ […]

Continue Reading

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಉಮರ್ ಯು. ಹೆಚ್ ಅಧಿಕಾರ ಸ್ವೀಕಾರ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಇತ್ತೀಚೆಗಷ್ಟೇ ನೇಮಕಗೊಂಡಿದ್ದ ಉಮರ್ ಯು ಹೆಚ್ ಅವರು ಇಂದು ಮಂಗಳೂರಿನ ತಾಲೂಕು ಪಂಚಾಯಿತಿ ಕಟ್ಟಡದಲ್ಲಿರುವ ಅಕಾಡೆಮಿಯ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, “ಬ್ಯಾರಿ ಸಮುದಾಯದ ಬಹುವರ್ಷಗಳ ಕನಸಾಗಿರುವ ಬ್ಯಾರಿ ಭವನ ನಿರ್ಮಾಣವನ್ನು ನನ್ನ ಅವಧಿಯಲ್ಲಿ ನನಸಾಗಿಸುತ್ತೇನೆ” ಎಂದು ಉಮರ್ ಯು.ಹೆಚ್. ತಿಳಿಸಿದ್ದಾರೆ. “ಬ್ಯಾರಿ ಭವನಕ್ಕೆ ಜಾಗ ಇದ್ದು 6 ಕೋಟಿ ರೂ. ಹಣವೂ ಇದೆ. ಭವನ ನಿರ್ಮಾಣದ ಜೊತೆಗೆ ಕೊಂಕಣಿ, ತುಳು ಅಕಾಡೆಮಿಯಲ್ಲಿ […]

Continue Reading

ಉಡುಪಿ: ಕೆ.ರಘುಪತಿ ಭಟ್ ಪತ್ನಿ ಪದ್ಮಪ್ರಿಯ ಆತ್ಮಹತ್ಯೆ ಪ್ರಕರಣ; ಅತುಲ್‌ ರಾವ್‌ ಖುಲಾಸೆ

​ಮಾಜಿ ಶಾಸಕ ಕೆ. ರಘುಪತಿ ಭಟ್‌ ಅವರ ಪತ್ನಿ ಪದ್ಮಪ್ರಿಯ ನಾಪತ್ತೆ ಹಾಗೂ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಮೋಸ, ವಂಚನೆ ಹಾಗೂ ನಕಲಿ ದಾಖಲೆ ಸೃಷ್ಟಿಸಿರುವ ಪ್ರಕಣದ ಆರೋಪಿಯಾಗಿದ್ದ ಅತುಲ್‌ ರಾವ್‌ ಅವರನ್ನು ಖುಲಾಸೆಗೊಳಿಸಿ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಆದೇಶ ನೀಡಿದೆ. 2008 ಜೂನ್‌ 10ರಂದು ಪದ್ಮಪ್ರಿಯ ಅವರು ಕರಂಬಳ್ಳಿಯ ಮನೆಯಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ರಘುಪತಿ ಭಟ್‌ ಸ್ನೇಹಿತ ಅತುಲ್‌ ರಾವ್‌ ಅವರ ವಿರುದ್ಧ 2008 ಜೂನ್‌ 19ರಂದು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. […]

Continue Reading

ದ.ಕ ಜಿಲ್ಲೆ: ಬಂಟರದ್ದೇ ಪಾರುಪತ್ಯ; ಜಿಲ್ಲೆಯ ನಾಲ್ಕು ಮಂದಿ ಶಾಸಕರು, ಒಬ್ಬ ಎಂ ಎಲ್ ಸಿ, ಒಬ್ಬ ಸಂಸದ ಎಲ್ಲಾ ಬಂಟರು.

ಬಿಲ್ಲವರು-ಬ್ಯಾರಿಗಳು ತಲವಾರು ಝಳಪಿಸಿ ಹೊಡೆದಾಡಿಕೊಂಡದರಲ್ಲಿ ನಂಬರ್ ಒನ್.! ಇದು ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದ ಸುದ್ದಿ. ಜಿಲ್ಲೆಯ ಎರಡು ಪ್ರಬಲ ಪಕ್ಷವಾಗಿರುವ ಕಾಂಗ್ರೆಸ್-ಬಿಜಿಪಿಯಲ್ಲಿ ಗುತ್ತಿನ ಬಂಟರದ್ದೇ ಪಾರುಪತ್ಯ. ನೀವು ಪ್ರತಿಯೊಂದು ವಿಧಾನಸಭಾ ಕ್ಷೇತ್ರವನ್ನೊಮ್ಮೆ ಕೂಲಂಕಷವಾಗಿ ನೋಡಿದಾಗ ನಿಮಗೆ ಖಂಡಿತ ಅರಿವಿಗೆ ಬರಲಿದೆ. ಬಿಲ್ಲವ-ಬ್ಯಾರಿಗಳಲ್ಲಿ ರಾಜಕೀಯ ಪ್ರಜ್ಞೆ, ತಮ್ಮ ಸಮುದಾಯದ ಅಭ್ಯರ್ಥಿಗಳನ್ನು ಗೆಲ್ಲಿಸುವ ಚಾಕಚಕ್ಯತೆ ಇಲ್ಲದರಿಂದ, ಸಿಕ್ಕ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಅವಕಾಶವನ್ನು ಬಂಟರು ಸದುಪಯೋಗಪಡಿಸಿಕೊಂಡು ಮೆರೆಯುತ್ತಿದ್ದಾರೆ. ಬಿಲ್ಲವ-ಬ್ಯಾರಿಗಳು ಪಕ್ಷಕ್ಕೆ ಹೋಲ್ ಸೇಲ್ ಮಾರಾಟ ಆಗಿರುವುದರಿಂದ ಒಂದು ಸಣ್ಣ […]

Continue Reading

ಬಡವರ ಸಾಲ ಮನ್ನಾ ಮಾಡಿ, ಕಿರುಕುಳ ನೀಡುವ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಿ: ಬಿ.ಕೆ ಇಮ್ತಿಯಾಜ್ ಆಗ್ರಹ

ಮಂಗಳೂರು: ಸ್ವಸಹಾಯ ಸಂಘಗಳಿಗೆ ಟ್ರಸ್ಟುಗಳ ಮೂಲಕ ನಡೆಯುವ ಹಣಕಾಸು ವ್ಯವಹಾರಗಳ ಬಗ್ಗೆ ತನಿಖೆ ಆಗಬೇಕು, ಸಾಲ ಪಡೆದವರ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳ ಸಮೀಕ್ಷೆ ನಡೆಸಿ ಬಡವರಿಗ ಸ್ವಸಹಾಯ ಸಂಘಗಳ ಮೂಲಕ ನೀಡಲಾಗಿರುವ ಸಾಲ ಮನ್ನಾ ಮಾಡಬೇಕೆಂದು ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿಕೆ ಇಮ್ತಿಯಾಜ್ ಸರಕಾರವನ್ನು ಆಗ್ರಹಿಸಿದ್ದಾರೆ ಅವರು ಇಂದು ನಗರದ ನಾಸಿಕ್ ಬಂಗೇರಾ ಭವನದಲ್ಲಿ ಸ್ವಸಹಾಯ ಗುಂಪಿನ ಮತ್ತು ಮೈಕ್ರೋ ಸಾಲ ಸಂತ್ರಸ್ತರ ಮಂಗಳೂರು ತಾಲೂಕು ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಿದ್ದರು. ಬಡವರ ಆದಾಯ ಮೂಲಗಳನ್ನು ಪರಿಶೀಲಿಸದೆ , […]

Continue Reading

ಕೋಟಾ ಶ್ರೀನಿವಾಸ ಪೂಜಾರಿಗೆ ಲಂಚ ಸಂದಾಯವಾಗಿದೆ: ಗೂಳಿಹಟ್ಟಿ

ಭೋವಿ ನಿಗಮದ ಭ್ರಷ್ಟಾಚಾರ ಪ್ರಕರಣ ಎಸ್ಐಟಿಗೆ ಸಾಧ್ಯತೆ.? ನೂತನ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿಗೆ ಸಂಕಷ್ಟ.? ಬಿಜೆಪಿ ಅಧಿಕಾರವಧಿಯಲ್ಲಿ ಭೋವಿ ಅಭಿವೃದ್ಧಿ ನಿಗಮದಲ್ಲಿ ನೂರಾರು ಕೋಟಿ ಅವ್ಯವಹಾರವಾಗಿದ್ದು, ಅಂದಿನ ಸಮಾಜ ಕಲ್ಯಾಣ ಸಚಿವರಾಗಿದ್ದ ಕೋಟಾ ಶ್ರೀನಿವಾಸ ಪೂಜಾರಿಗೆ ಲಂಚ ಸಂದಾಯವಾಗಿದೆ ಎಂದು ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ ಈ ಪ್ರಕರಣದ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ದಳವನ್ನು ರಚನೆ ಮಾಡಲು ತೀರ್ಮಾನಿಸಿದೆ ಎಂದು ವರದಿಯಾಗಿದೆ.ವಾಲ್ಮೀಕಿ ನಿಗಮದ ಪ್ರಕರಣವನ್ನು ಈಗಾಗಲೇ ಸರ್ಕಾರ ಎಸ್‍ಐಟಿ […]

Continue Reading

ಅಕ್ರಮ ದನ ಸಾಗಾಟ; ವಾಹನ ಸಮೇತ 8 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡ ಬಜಪೆ ಪೊಲೀಸರು

ಬಜಪೆ ಶಾಂತಿಗುಡ್ಡೆ ಚೆಕ್ ಪೋಸ್ಟ್ ಬಳಿ ಬಜಪೆ ಕಡೆಯಿಂದ ಇಬ್ಬರು ವ್ಯಕ್ತಿಗಳು ಬಿಳಿ ಬಣ್ಣದ ಗೂಡ್ಸ್ ವಾಹನದಲ್ಲಿ ದನಗಳನ್ನು ತುಂಬಿಸಿ, ಜೋಕಟ್ಟೆ-ಶಾಂತಿಗುಡ್ಡೆ ಮಾರ್ಗವಾಗಿ ಸಾಗಾಟ ಮಾಡುತ್ತಿದ್ದ ಗೂಡ್ಸ್ ವಾಹನವನ್ನು ನಿಲ್ಲಿಸುವಂತೆ ಸೂಚನೆ ನೀಡಿದಾಗ ಆರೋಪಿಗಳು ವಾಹನವನ್ನು ಬಿಟ್ಟು ಓಡಿ ಹೋಗಿದ್ದು, ಪೊಲೀಸರು ಆರೋಪಿತರನ್ನು ಬೆನ್ನಟ್ಟಿ ಹಿಡಿಯಲು ಪ್ರಯತ್ನಿಸಿದಾಗ ಪಕ್ಕದಲ್ಲಿದ್ದ ಗುಡ್ಡೆಯಲ್ಲಿ ತಪ್ಪಿಸಿಕೊಂಡಿರುತ್ತಾರೆ. ವಾಹನದಲ್ಲಿದ್ದ 7 ದನಗಳನ್ನು, 2 ಕೋಣಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ KA-51 AJ 6770 ಸಂಖ್ಯೆಯ ಮಿನಿ ಗೂಡ್ಸ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, […]

Continue Reading

ಕೋಟಾ ಶ್ರೀನಿವಾಸ್ ಪೂಜಾರಿ ಮಂತ್ರಿಯಿದ್ದ ಸಂದರ್ಭದಲ್ಲಿ ಭೋವಿ ನಿಗಮದಲ್ಲಿನ ಕೋಟಿ ಕೋಟಿ ಹಣ ಲೂಟಿ: ಗೂಳಿಹಟ್ಟಿ ಶೇಖರ್

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು, ಸಿದ್ದರಾಮಯ್ಯ ಸಿಎಂ ಆದ ಬಳಿಕ ಈ ತನಿಖೆ ನಿಂತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಭೋವಿ ನಿಗಮದಲ್ಲಿನ 100 ಕೋಟಿ ರೂ. ಅವ್ಯವಹಾರದ ತನಿಖೆ ನಡೆಸುವಂತೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಹೊಸದುರ್ಗ ಮಾಜಿ ಸಚಿವ ಗೂಳಿಹಟ್ಟಿ ಚಂದ್ರಶೇಖರ್ ಆಗ್ರಹಿಸಿದ್ದಾರೆ. ಸದ್ಯ ವಾಲ್ಮೀಕಿ ನಿಗಮದ ಹಗರಣ ರಾಜ್ಯದಲ್ಲಿ ಸದ್ದು ಮಾಡುತ್ತಿದೆ. ಸಚಿವ ನಾಗೇಂದ್ರ ರಾಜೀನಾಮೆ ಸಾಧ್ಯತೆ ಎಂದು ಮಾಧ್ಯಮಗಳಲ್ಲಿ ನೋಡುತ್ತಿದ್ದೇನೆ. ಹಿಂದಿನ ಸರ್ಕಾರದಲ್ಲಿ ಕೋಟಾ ಶ್ರೀನಿವಾಸ್ ಪೂಜಾರಿ ಮಂತ್ರಿಯಿದ್ದ ಸಂದರ್ಭದಲ್ಲಿ ಭೋವಿ ನಿಗಮದಲ್ಲಿನ […]

Continue Reading

2025 ನೇ ಸಾಲಿನಲ್ಲಿ ನೀಟ್ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಅಂತಿಮ ಹಂತದ ಪ್ರಕ್ರಿಯೆ ಪುತ್ತೂರು ಕಮ್ಯೂನಿಟಿ ಸೆಂಟರ್ ನಲ್ಲಿ ನಡೆಯಿತು.

ದ್ವಿತೀಯ ಪಿಯುಸಿ ಮುಗಿಸಿ ಲಾಂಗ್ ಟರ್ಮ್ ನೀಟ್ ಮತ್ತು ಹತ್ತನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ಇಂಟಿಗ್ರೆಟೆಡ್ ನೀಟ್ ಗೆ ತರಭೇತಿಗಾಗಿ ಕಮ್ಯೂನಿಟಿ ಸೆಂಟರ್ ಈ ಬಾರಿ 50 ವಿದ್ಯಾರ್ಥಿಗಳಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿತ್ತು. ಮೊದಲ ಹಂತದಲ್ಲಿ ವಿದ್ಯಾರ್ಥಿಗಳ ಅಂಕವನ್ನು ಆದರಿಸಿ 65 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿತ್ತು. ಅನಂತರ ಕೌನ್ಸಿಲಿಂಗ್ ನಡೆಸಿ ಅವರಲ್ಲಿ ಎಲ್ಲರಿಗೂ ಸೆಂಟರಿನ ಅರ್ಹತಾ ಪರೀಕ್ಷೆಗೆ ಅವಕಾಶ ನೀಡಲಾಯಿತು. ಆದಿತ್ಯವಾರದಂದು ನಡೆದ ಸೆಂಟರಿನ ಅರ್ಹತಾ ಪರೀಕ್ಷೆಯಲ್ಲಿ 35 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು. ಈ ಮೊದಲು ಹದಿನೈದು […]

Continue Reading