ಕೈಕಂಬ: ಬಜಪೆ ಪೊಲೀಸರ ಕಾರ್ಯಾಚರಣೆ, ಗಾಂಜಾ ಸಹಿತ ಓರ್ವನ ಬಂಧನ

ಕೈಕಂಬ: ಗುರುಪುರ ಮೂಳೂರು ಗ್ರಾಮದ ಬಂಗ್ಲಗುಡ್ಡೆ ಸೈಟ್‌ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಓರ್ವನನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಗುರುಪುರ ಮೂಳೂರು ಗ್ರಾಮದ ನಿವಾಸಿ ನವಾಜ್ ಎಂದು ಗುರುತಿಸಲಾಗಿದೆ. ಈತನಿಂದ 430 ಗ್ರಾಂ ತೂಕದ ಅಂದಾಜು 8 ಸಾವಿರ ರೂ. ಮೌಲ್ಯದ ಗಾಂಜಾ, 50 ಸಾವಿರ ರೂ. ಮೌಲ್ಯದ ಒಂದು ಬೈಕ್, 500 ರೂ. ಮೌಲ್ಯದ ತೂಕ ಮಾಪಕ, ಒಂದು ಮೊಬೈಲ್‌ ಹಾಗೂ ಕೆಲವು ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಆ.3ರಂದು ಬೆಳಗ್ಗೆ ಮೂಳೂರು ಗ್ರಾಮದ ಬಂಗ್ಲೆಗುಡ್ಡೆ […]

Continue Reading

ನಕಲಿ ದಾಖಲೆ ಸೃಷ್ಟಿಸಿ ಟ್ರಸ್ಟ್ ಹಣ ದುರುಪಯೋಗ: ಜನಪ್ರಿಯ ಸೆಂಟ್ರಲ್ ಶಾಲಾ ಟ್ರಸ್ಟ್ ಕಾರ್ಯದರ್ಶಿಯಿಂದ ಇತರ ಟ್ರಸ್ಟಿಗಳ ಮೇಲೆ ಎಫ್ಐಆರ್

ಟ್ರಸ್ಟ್ ಕಾರ್ಯದರ್ಶಿಯ ಗಮನಕ್ಕೆ ತಾರದೆ, ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ ನಲ್ಲಿದ್ದ ಲಕ್ಷಾಂತರ ರೂಪಾಯಿ ದುರುಪಯೋಗ ಪಡಿಸಿದ ವಿಟ್ಲ ಕಂಬಳಬೆಟ್ಟುವಿನ ಜನಪ್ರಿಯ ಸೆಂಟ್ರಲ್ ಶಾಲೆಯ ಟ್ರಸ್ಟಿಗಳ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸು ದಾಖಲಾಗಿದೆ. ವಿಟ್ಲ ಮುಡ್ನೂರು ಗ್ರಾಮದಲ್ಲಿರುವ ಜನಪ್ರಿಯ ಸೆಂಟ್ರಲ್ ಸ್ಕೂಲ್ ಆಡಳಿತವು ಟ್ರಸ್ಟ್ ಡೀಡ್ ಪ್ರಕಾರ ನೋಂದಣಿಗೊಂಡಿದ್ದು, ಮಹಮ್ಮದ್ ಇರ್ಫಾನ್ ಅವರು ಟ್ರಸ್ಟ್ ಕಾರ್ಯದರ್ಶಿಯಾಗಿರುತ್ತಾರೆ. ಟ್ರಸ್ಟೀಗಳಾದ ಹಾಸನದಲ್ಲಿ ವಾಸ್ತವ್ಯವಿರುವ ಫಾತಿಮಾ ನಸ್ರೀನ್ ಬಶೀರ್ ಕೋಂ ಡಾ ಅಬ್ದುಲ್ ಬಶೀರ್ ವಿ.ಕೆ , ಶಾರೂಕ್ […]

Continue Reading

ಉಳ್ಳಾಲ: ಸ್ಪೀಕರ್ ಕ್ಷೇತ್ರದಲ್ಲಿ ಜನರ ಸಂಕಷ್ಟ ಕೇಳುವವರು ಇಲ್ಲ; ಮನವಿ ಕೊಡಲು ಹೋದರೆ ಅಧಿಕಾರಿಗಳೇ ನಾಪತ್ತೆ

ಸ್ಪೀಕರ್ ಕ್ಷೇತ್ರವಾದ ಉಳ್ಳಾಲದ ನಗರ ಸಭೆ ಕಚೇರಿಗೆ ಹೋದರೆ ಜನರ ಸಂಕಷ್ಟ ಕೇಳುವವರೇ ಇಲ್ಲ.ಕನಿಷ್ಠ ಮನವಿ ಸ್ವೀಕರಿಸಲು ಅಲ್ಲಿನ ಅಧಿಕಾರಿಗಳೇ ನಾಪತ್ತೆಯಾಗಿದ್ದಾರೆ. ತೊಕ್ಕೊಟ್ಟು ಜಂಕ್ಷನ್ ನಲ್ಲಿರುವ ಆಟೋರಿಕ್ಷಾ ಪಾರ್ಕ್ ಕಳೆದ ಹಲವಾರು ದಶಕಗಳಿಂದ ಕಾರ್ಯಾಚರಿಸುತ್ತಿದ್ದು,ಸದ್ಯಕ್ಕೆ ಈ ಪಾರ್ಕ್ ತೀರಾ ಅವ್ಯವಸ್ಥೆಗಳಿಂದ ಕೂಡಿದೆ. ರಿಕ್ಷಾ ಪಾರ್ಕ್ ಬಳಿಯಲ್ಲೇ ಕಳೆದ ಒಂದು ತಿಂಗಳಿನಿಂದ ಡ್ರೈನೇಜ್ ತ್ಯಾಜ್ಯ ಹರಿದಾಡುತ್ತಿದ್ದು ದುರ್ನಾತದಿಂದ ಅಲ್ಲಿ ನಿಲ್ಲಲು ಅಸಾದ್ಯವಾಗಿದೆ.ನಗರ ಸಭೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರೂ, ಇಲ್ಲಿಯವರೆಗೆ ಸಮಸ್ಯೆ ಪರಿಹಾರ ಕಂಡಿಲ್ಲ. ಸುಸಜ್ಜಿತ […]

Continue Reading

ಬಜಪೆ ಪೊಲೀಸರ ಕಾರ್ಯಾಚರಣೆ,ಮಾದಕ ವಸ್ತು ಸಹಿತ ಆರೋಪಿಯ ಬಂಧನ; ಏಳು ಲಕ್ಷ ರೂಪಾಯಿ ಮೌಲ್ಯದ ಸ್ವತ್ತು ವಶ

ಮಂಗಳೂರು ನಗರದ್ಯಾಂತ “ಮಾದಕ ವ್ಯಸನ ಮುಕ್ತ ಮಂಗಳೂರು” ಮಾಡುವ ನಿಟ್ಟಿನಲ್ಲಿ ಮೇಲಾಧಿಕಾರಿಗಳು ನೀಡಿದ ಸೂಚನೆಯಂತೆ ಬಜಪೆ ಠಾಣಾ ಪೊಲೀಸರು ಮುರ ನಗರದ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ಸಮಯದಲ್ಲಿ ನಂಬರ್ ಫ್ಲೇಟ್ ಇಲ್ಲದ ಕಂದು ಬಣ್ಣದ ಸ್ವಿಫ್ಟ್ ಕಾರನ್ನು ಚಾಲಕನಿಗೆ ನಿಲ್ಲಿಸಲು ಸೂಚನೆ ನೀಡಿದಾಗ ಕಾರು ಚಾಲಕನು ಕಾರನ್ನು ನಿಲ್ಲಿಸದೇ ವೇಗವಾಗಿ ಚಲಾಯಿಸಿದ ಪರಿಣಾಮ, ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ನಿಂತಿದ್ದು ತಕ್ಷಣ ಪೊಲೀಸರು ಕಾರಿನ ಬಳಿ ತೆರಳಿ ಕಾರಿನಿಂದ ಓಡಿ ಹೋದ […]

Continue Reading

ಉಡುಪಿ:ವಿದ್ಯಾರ್ಥಿನಿ ವಿಡಿಯೋ ವಿವಾದದ ಹಿಂದಿದೆ ಸಾಮರಸ್ಯದ ಕತೆ !

ನೇತ್ರಾ ಕಾಲೇಜಿನ ಗೆಳತಿಯರ ತಂಡದಿಂದ ಹಿಂದುತ್ವ ಸಂಘಟನೆಗಳು ಮತ್ತು ಬೆತ್ತಲೆ ಶಾಸಕರು ಕಲಿಯೋದು ಸಾಕಷ್ಟಿದೆ‌. ✍🏻. ನವೀನ್ ಸೂರಿಂಜೆ ಉಡುಪಿಯ ನೇತ್ರಾ ಜ್ಯೋತಿ ಕಾಲೇಜಿನಲ್ಲಿ ಓದುತ್ತಿರುವ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಮತ್ತು ನಾಲ್ವರು ಹಿಂದೂ ವಿದ್ಯಾರ್ಥಿನಿಯರದ್ದೇ ಒಂದು ಅತ್ಯಂತ ಆಪ್ತವಾದ ಗೆಳತಿಯರ ಬಳಗವಾಗಿತ್ತು. ಎಲ್ಲಾ ಕಾಲೇಜುಗಳಲ್ಲಿ ಇರುವಂತೆ ಗೆಳತಿಯರ ಈ ಗುಂಪು ತುಂಟಾಟಗಳನ್ನು ಮಾಡುತ್ತಿರುತ್ತದೆ. ಪರಸ್ಪರ ಊಟ, ತಿಂಡಿ ಹಂಚಿಕೊಳ್ಳುವುದರಿಂದ ಹಿಡಿದು ತೀರಾ ಖಾಸಗಿ ವಿಷಯಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳುವವರೆಗೆ ಆತ್ಮೀಯರಾಗಿದ್ದ ವಿದ್ಯಾರ್ಥಿನಿಯರ ಗುಂಪು ಅದಾಗಿತ್ತು. ತನ್ನ […]

Continue Reading

ಬಂಟ್ವಾಳದ ನೈತಿಕ ಪೊಲೀಸ್ ಗಿರಿ – ಆಂಟಿ ಕಮ್ಯುನಲ್ ವಿಂಗ್ ಸಂಪೂರ್ಣ ನಿಷ್ಕ್ರಿಯ- ಡಿವೈಎಫ್ಐ ಆರೋಪ

ಮೊನ್ನೆ ಬಂಟ್ವಾಳದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ತಮ್ಮ ಮಡದಿ ಮತ್ತು ಸಂಬಂಧಿ ಜತೆ ಬಿ.ಸಿ ರೋಡ್ ಹೋಟೇಲೊಂದಕ್ಕೆ ಊಟಕ್ಕೆ ಹೋಗುವ ವೇಳೆ ಸಂಘಪರಿವಾರಕ್ಕೆ ಸೇರಿದ ಇಬ್ಬರು ದುಷ್ಕರ್ಮಿಗಳು ನೈತಿಕಪೊಲೀಸ್ ಗಿರಿ ನಡೆಸಿರುವ ಘಟನೆ ಪೊಲೀಸ್ ಇಲಾಖೆಯ ದಯನೀಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಮತ್ತು ಇತ್ತಿಚೇಗೆ ಕಾರ್ಯರೂಪಕ್ಕೆ ಬಂದ ಸಿಟಿ ಸ್ಪೆಷಲ್ ಬ್ಯಾಂಚ್ ನ ಆಂಟಿ ಕಮ್ಯೂನಲ್ ವಿಂಗ್ ಸಂಪೂರ್ಣ ನಿಷ್ಕ್ರಿಯ ಘಟಕ ಎಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಆರೋಪಿಸಿದೆ. ಜಿಲ್ಲೆಯಲ್ಲಿ ಅನೇಕ ವರುಷಗಳಿಂದ ನೈತಿಕ ಪೊಲೀಸ್ ಗಿರಿ […]

Continue Reading

ದ.ಕ ಜಿಲ್ಲೆಯ ಪೊಲೀಸರಿಗೆ ಸವಾಲಾದ ನಿಗೂಢ ಪ್ರಕರಣಗಳು..! ಪ್ರಕರಣ ಭೇದಿಸಲು ವಿಫಲರಾಗಿ ಕೈ ಕಟ್ಟಿ ಕುಳಿತ ಪೊಲೀಸ್ ಇಲಾಖೆ

ಪಂಜಿಮೊಗರು ಡಬಲ್ ಮರ್ಡರ್,ಎ.ಜೆ ಅಸ್ಪತ್ರೆ ಬಳಿ ಕಾಣೆಯಾದ ರಫೀನಾ,ಯುವ ವಕೀಲ ಪ್ರೀತಂ,ಪ್ರಕರಣದ ನಿಗೂಢ ರಹಸ್ಯ.! ಜಿಲ್ಲೆಯಲ್ಲಿ ದಶಕಗಳಿಂದ ಭೇದಿಸಲಾಗದ ಕೊಲೆ,ಮಿಸ್ಸಿಂಗ್ ಕೇಸ್ ಗಳು ಹಾಗೆ ಧೂಳು ಹಿಡಿದರೆ, ನೊಂದ ಕುಟುಂಬಗಳಿಗೆ ನ್ಯಾಯ ಸಿಗುವುದು ಯಾವಾಗ.? ದಕ್ಷ ಅಧಿಕಾರಿ,ಮಂಗಳೂರು ಕಮೀಷನರ್ ಕುಲ್ ದೀಪ್ ಕುಮಾರ್ ಆರ್.ಜೈನ್ ರವರು ಈ ಪ್ರಕರಣಗಳಿಗೆ ಜೀವ ನೀಡುವರೇ.. ಮಂಗಳೂರು ನಗರದ ಹೃದಯ ಭಾಗದಲ್ಲಿ ನಡೆದ ಎಷ್ಟೊ ಕೊಲೆ ಕೇಸ್ ಗಳನ್ನು ಪೊಲೀಸರು ಭೇದಿಸಿ, ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. ಅಪರಾಧ ಲೋಕದಲ್ಲಿ ದ್ವೇಷ ಪ್ರತಿಕಾರಕ್ಕಾಗಿ ನಡೆಯುವ […]

Continue Reading

ಡಿವೈಎಫ್‌ಐ ಮತ್ತು ವಿಶ್ವಕರ್ಮ ಸಮುದಾಯದ ಸಂಘಟನೆಗಳು ಎ.ಜೆ ಆಸ್ಪತ್ರೆ ಮುಂದೆ ಪ್ರತಿಭಟನೆ

ನುರಿತ ವೈದ್ಯರುಗಳ ತಂಡದಿಂದ ಶಿಲ್ಪಾ ಸಾನಿನ ಸಮಗ್ರ ತನಿಖೆಗೆ ತಂಡ ರಚನೆ.ಪ್ರತಿಭಟನೆಗೆ ಮಣಿದ ಜಿಲ್ಲಾಢಳಿತ ✍️. ಸಂತೋಷ್ ಬಜಾಲ್ ಮಂಗಳೂರು: ಹೆರಿಗೆಗಾಗಿ ನಡೆದ ಶಸ್ತ್ರಚಿಕಿತ್ಸೆಯ ವೇಳೆ ಎಡವಟ್ಟಾಗಿ ಗರ್ಭಕೋಶವನ್ನು ಕಳೆದುಕೊಂಡಿದ್ದಲ್ಲದೆ ಮೆದುಳು ನಿಷ್ಕ್ರಿಯಗೊಂಡು ಕೋಮಕ್ಕೆ ತೆರಳಿದ್ದ ಬೆಳ್ತಂಗಡಿಯ ವೇಣೂರು ಬಳಿಯ ಶಿಲ್ಪಾ ಆಚಾರ್ಯ (36) ಮಂಗಳವಾರ ಮೃತಪಟ್ಟಿದ್ದಾರೆ. ಶಿಲ್ಪಾ ಅವರು ನಗರದ ಖಾಸಗಿ ಆಸ್ಪತ್ರೆಯಾದ ಎ.ಜೆ. ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಜುಲೈ 2 ರಂದು ಹೆರಿಗೆಗೆಂದು ದಾಖಲಾಗಿದ್ದರು. ಆದರೆ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಾಗಿ ಕೋಮಕ್ಕೆ ತೆರಳಿದ್ದರು. ಇದಾಗಿ […]

Continue Reading

ಬಿಜೆಪಿಯನ್ನೇ ಹೈಜಾಕ್ ಮಾಡಿದ ಪುತ್ತಿಲ ಪರಿವಾರ; ಕರಾವಳಿಯಲ್ಲಿ ಇನ್ನೇನಿದ್ದರೂ ಪುತ್ತಿಲ ಹವಾ

ಒಂದಲ್ಲ.. ಎರಡಲ್ಲ.. ಪ್ರತಿ ಬಾರಿಯೂ ಬಿಜೆಪಿಯನ್ನು ಮಣ್ಣು ಮುಕ್ಕಿಸುವಲ್ಲಿ ಪುತ್ತಿಲ ಆಂಡ್ ಟೀಂ ಸಫಲವಾಗಿದೆ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆಯ ಬಳಿಕ ಸಕ್ರೀಯವಾಗಿ ರಾಜಕಾರಣಕ್ಕೆ ಇಳಿದಿರುವ ಪುತ್ತಿಲ ಆಂಡ್ ಟೀಂ, ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ತೊಡೆ ತಟ್ಟುತ್ತಾ ಬಿಜೆಪಿಗೆ ಟಕ್ಕರ್ ಕೊಡುವಲ್ಲಿ ಯಶಸ್ವಿಯಾಗಿದೆ. ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಉಮೇದುದಾರರಾಗಿದ್ದ ಅರುಣ್ ಕುಮಾರ್ ಪುತ್ತಿಲರಿಗೆ ಬಿಜೆಪಿಯಿಂದ ಟಿಕೆಟ್ ತಪ್ಪಿಸಿ ಡಮ್ಮಿ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಇದರಿಂದ ಕೆರಳಿದ ಪುತ್ತಿಲ ಆಂಡ್ ಟೀಂ ಬಂಡಾಯವಾಗಿ ಸ್ಪರ್ಧಿಸಿ […]

Continue Reading

ಉಡುಪಿ: ಕೋಮು ತಲ್ಲಣ ಸೃಷ್ಟಿಸಿದ ಸ್ವಯಂ ಘೋಷಿತ ಹಿಂದೂ ಹೋರಾಟಗಾರ್ತಿ ರಶ್ಮಿ ಸಾವಂತ್ ಳ ಟ್ವಿಟ್ಟರ್ ಪೋಸ್ಟ್

ಕಳೆದ ಬಾರಿ ಹಿಜಾಬ್, ಈ ಬಾರಿ ಸ್ನಾನಗೃಹದ ವೀಡಿಯೋ; ಏನಿದರ ವಾಸ್ತವಾಂಶ ಕರಾವಳಿ ಹೇಳಿ ಕೇಳಿ ಮತೀಯವಾದದ ತವರೂರು. ಒಂದು ಕ್ಷುಲ್ಲಕ ಘಟನೆ ಎರಡು ಸಮುದಾಯಗಳ ನಡುವೆ ಮತೀಯ ಗಲಭೆಗೆ ಕಾರಣವಾದ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಅದರಲ್ಲೂ ಉಡುಪಿ ಕಳೆದ ಬಾರಿ ಹಿಜಾಬ್ ವಿಚಾರದಲ್ಲಿ ದೇಶದಾದ್ಯಂತ ಸುದ್ದಿಯಾಗಿತ್ತು. ರಾಜ್ಯಾದಾದ್ಯಂತ ವಿವಾದದ ಕಿಡಿ ಹೊತ್ತಿ ಉರಿಯಲು ಕಾರಣವಾಗಿತ್ತು. ಅದೇ ಉಡುಪಿಯಲ್ಲಿ ಈ ಬಾರಿ ಮುಸ್ಲಿಂ ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ವಿಡಿಯೋ ಕ್ಯಾಮೆರಾ ಇಟ್ಟು ಹಿಂದೂ ವಿದ್ಯಾರ್ಥಿನಿಯರ ಖಾಸಗಿ […]

Continue Reading