ಯುವ ಕಾಂಗ್ರೆಸ್ – ಯುವ ಮೋರ್ಚಾ ಯಾರಿಗೆ ಹೆಚ್ಚು ಪವರ್…?

ಬಿಜೆಪಿ ಯು.ಮೋ ಅಧ್ಯಕ್ಷರಾದವರು ಭವಿಷ್ಯತ್ತಿನ ರಾಜಕಾರಣಿ ಆಗುವುದು ಪಕ್ಕಾ. ಕಾಂಗ್ರೆಸ್ಸಿನಲ್ಲಿ ಅಂತಹ ಟ್ರೆಂಡ್ ಇಲ್ಲದೆ ಇರುವುದು ಪಕ್ಷ ಸೊರಗಲು ಕಾರಣ. ಕಳೆದೊಂದು ತಿಂಗಳಿನಿಂದ ರಾಜ್ಯದ ಕಾಂಗ್ರೆಸ್‌ನಲ್ಲಿ ಹೆಚ್ಚು ಸುದ್ಧಿ ಮಾಡಿದ್ದು ಯುವ ಕಾಂಗ್ರೆಸ್ ಚುನಾವಣೆ. ಹಲವಾರು ತಿಂಗಳ ಹಿಂದೆ ಯುವ ಕಾಂಗ್ರೆಸ್‌ಗೆ ಚುನಾವಣೆ ನಡೆದರೂ ಫಲಿತಾಂಶ ಹೊರಬಿದ್ದಿದ್ದು ಇತ್ತೀಚೆಗೆ, ಸ್ಪರ್ಧಿಸಿ ದವರೆಲ್ಲ ಗೆದ್ದಿದ್ದಾರೆ. ಕಾಂಗ್ರೆಸ್ ಯುವ ಕಾರ್ಯಕರ್ತರಂತೂ ಜಗತ್ತು ಗೆದ್ದ ಖುಷಿಯಲ್ಲಿದ್ದಾರೆ. ಅಲ್ಲಲ್ಲಿ ನಾಯಕರ ಭೇಟಿ, ಸನ್ಮಾನ, ಹಾರ, ತುರಾಯಿ ಎಲ್ಲವೂ ನಡೆಯುತ್ತಿದೆ. ಅಷ್ಟಕ್ಕೂ ಯುವ ಕಾಂಗ್ರೆಸ್ಸಿಗೇಕೆ […]

Continue Reading

ಯುರೇಖಾ ಪೋರ್ಬ್ಸ್ ವ್ಯಾಪಾರ ಮಳಿಗೆಯ ವಾಟರ್ ಫಿಲ್ಟರ್ ದೋಷಪೂರಿತ; ಗ್ರಾಹಕ ಶಕೀಲ್ ಸೂರಲ್ಪಾಡಿಗೆ ಪೂರ್ತಿ ವೆಚ್ಚ ಪಾವತಿಸುವಂತೆ ಜಿಲ್ಲಾ ಗ್ರಾಹಕ ನ್ಯಾಯಾಲಯ ಮಹತ್ವದ ಆದೇಶ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ನ್ಯಾಯಾಲಯವು ಮಹತ್ವದ ಆದೇಶವೊಂದನ್ನು ನೀಡಿದ್ದು, ದೋಷಪೂರಿತ ವಾಟರ್ ಫಿಲ್ಟರ್ ಖರೀದಿಸಿದ ಗ್ರಾಹಕನಿಗೆ ಪೂರ್ತಿ ಹಣ ಹಿಂತಿರುಗಿಸುವಂತೆ ಆದೇಶಿಸಿದೆ. ಮಂಗಳೂರು ತಾಲೂಕಿನ ಸೂರಲ್ಪಾಡಿ ನಿವಾಸಿ ಶಕೀಲ್ ಇವರು ಯುರೇಖಾ ಪೋರ್ಬ್ಸ್ ಇದರ ಮಂಗಳೂರಿನ ವ್ಯಾಪಾರ ಮಳಿಗೆಯಿಂದ 1,18,069 ರೂ. ನೀಡಿ ನೀರು ಶುದ್ದೀಕರಿಸುವ ಯಂತ್ರವನ್ನು ಖರೀದಿಸಿದ್ದರು. ಆದರೆ ಅವರು ಖರೀದಿಸಿದ ವಾಟರ್ ಫಿಲ್ಟರ್ ಯಂತ್ರವು ಸರಿಯಾಗಿ ಕಾರ್ಯನಿರ್ವಹಿಸದೆ ದೋಷಪೂರಿತವಾಗಿ ಕಂಡುಬಂದ ಹಿನ್ನೆಲೆಯಲ್ಲಿ ಹಲವಾರು ಬಾರಿ ಸಂಬಂಧ ಪಟ್ಟವರನ್ನು ಸಂಪರ್ಕಿಸಿದರೂ ಸರಿಯಾದ ಪ್ರತಿಕ್ರಿಯೆ […]

Continue Reading

ಪತ್ನಿಗೆ ಹಲ್ಲೆ ನಡೆಸಿ, ಬಲವಂತದ ವಿಷಪ್ರಾಶನ ಮಾಡಿ ಹತ್ಯೆಗೈದ ಪತಿಗೆ ಜೀವಾವಧಿ ಶಿಕ್ಷೆ.

ಪತ್ನಿಗೆ ಹಲ್ಲೆ ನಡೆಸಿ ವಿಷಪ್ರಾಶನ ಮಾಡಿ ಹತ್ಯೆಗೈದ ಪತಿಗೆ ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಶಿಕ್ಷೆಗೊಳಗಾದ ಆರೋಪಿಯನ್ನು ಉಳ್ಳಾಲ ತಾಲೂಕಿನ ಸೋಮೇಶ್ವರ ಕುಂಪಲ ನಿವಾಸಿ ಜೋಸೆಫ್ ಫ್ರಾನ್ಸಿಸ್ ರೆನ್ಸನ್ ಅಲಿಯಾಸ್ ರೆನ್ಸನ್ ಎಂದು ಗುರುತಿಸಲಾಗಿದೆ. ಜೋಸೆಫ್ ಫ್ರಾನ್ಸಿಸ್ ರೆನ್ಸನ್ ಮದ್ಯಪಾನ, ಜೂಜಾಟ ಮತ್ತು ಇತರ ದುಶ್ಚಟಗಳಿಗೆ ವ್ಯಸನಿಯಾಗಿದ್ದು, ಮೇ 11, 2022 ರಂದು, ಶೈಮಾ ಮನೆಯಲ್ಲಿದ್ದ ಸಮಯ ತನ್ನ ಗಂಡನಿಗೆ ಬುದ್ದಿ ಮಾತು ಹೇಳಿದ್ದಳು. ಇದರಿಂದ ಕೋಪಗೊಂಡ ಗಂಡ […]

Continue Reading

ಗಟ್ಟಿಗಿತ್ತಿ ಮಹಿಳೆ ಕೃಷ್ಣವೇಣಿ. ಗಣಿ ಇಲಾಖೆಯಲ್ಲೇ ನಡೆಯುತ್ತಿದೆ ಷಡ್ಯಂತ್ರ.!

ಆಕೆ ಗಣಿಯನ್ನೇ ನುಂಗಿ ನೀರು ಕುಡಿದಿದ್ದಾಳೆ.! ಈಕೆ ಬರೀ ಕೃಷ್ಣವೇಣಿಯಲ್ಲ; ಚಿನ್ನದ ಗಣಿ. ಹೀಗೆ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೃಷ್ಣವೇಣಿ ವಿರುದ್ಧ ಸಾಲು ಸಾಲು ಆರೋಪಗಳನ್ನು ಹಾಕುತ್ತಿದ್ದರೂ ಕೃಷ್ಣವೇಣಿ ಮಗುಮ್ಮಾಗಿ ಕುಳಿತಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಹೆಚ್ಚುತ್ತಿದ್ದು, ಇದಕ್ಕೆಲ್ಲ ಗಣಿ ಇಲಾಖೆಯ ಅಧಿಕಾರಿಗಳ ವೈಫಲ್ಯವೇ ಕಾರಣವೆಂದು ಪಕ್ಷ ಭೇದ ಮರೆತು ಎಲ್ಲರ ಗುರಿಯೂ ಕೃಷ್ಣವೇಣಿಯೇ ಆಗಿದ್ದರು.ತಾವು ಮಾತ್ರ ಸತ್ಯ ಹರಿಶ್ಚಂದ್ರರು, ಗಣಿ ಇಲಾಖೆ ಮಾತ್ರ ಅಕ್ರಮ […]

Continue Reading

ಸರಕಾರಿ ಅಧಿಕಾರಿಗಳಿಗೆ ಮಾದರಿ ಮಂಗಳೂರು ತಾಲೂಕು ಕಛೇರಿಯ ಆರ್ ಆರ್ ಟಿ ಯಲ್ಲಿನ ಅಧಿಕಾರಿ ರವಿ ಶೆಟ್ಟಿ

ಸರಕಾರಿ ಅಧಿಕಾರಿಗಳೆಂದರೆ ಸಾಕು ಮಾರುದ್ಧ ನಿಲ್ಲುವ ಜನಸಾಮಾನ್ಯರು. ಸರಕಾರಿ ಅಧಿಕಾರಿಗಳೆಂದರೆ ಲಂಚಬಾಕರು, ಜನಸಾಮಾನ್ಯರ ಕೆಲಸ ಮಾಡದೆ ಅಸಭ್ಯವಾಗಿ ವರ್ತಿಸುವವರು, ಇಂತಹದ್ದೇ ಬಹುಪಾಲು ಸುದ್ದಿಗಳನ್ನು ಕೇಳುತ್ತೇವೆ. ಪತ್ರಿಕೆಗಳಲ್ಲಿ ಇಂತಹದ್ದೇ ಸುದ್ದಿ ಕಾಣಸಿಗುತ್ತದೆ. ಸರಕಾರಿ ಅಧಿಕಾರಿಗಳಲ್ಲೂ ಒಳ್ಳೆಯವರು ಇದ್ದಾರೆ. ಸರಕಾರದ ಕೆಲಸವೆಂದರೆ ದೇವರ ಕೆಲಸ ಎಂದು ನಂಬಿಕೊಂಡು ಅದನ್ನು ಚಾಚೂ ತಪ್ಪದೆ ಪಾಲಿಸಿ ಜನಸ್ನೇಹಿಯಾಗಿರುವ ಅನೇಕ ಅಧಿಕಾರಿಗಳು ನಮ್ಮ ಮುಂದಿದ್ದಾರೆ. ಅವರಲ್ಲಿ ಮಂಗಳೂರು ಮಿನಿ ವಿಧಾನಸೌಧದಲ್ಲಿ ಆರ್‌ಆರ್‌ಟಿ ಕಚೇರಿಯಲ್ಲಿ ಕರ್ತವ್ಯ ನಿರ್ವ ಹಿಸುತ್ತಿರುವ ರವಿ ಶೆಟ್ಟಿಯವರು ಕೂಡಾ ಒಬ್ಬರು. ರವಿ […]

Continue Reading

ಪೋಷಕರಿಲ್ಲದ ಸಂದರ್ಭ ಬಾಲಕ ನೇಣಿಗೆ ಶರಣು.. ವಿಟ್ಲ ಸಮೀಪದ ಕಡಂಬು ನೆತ್ರಕೆರೆ ಎಂಬಲ್ಲಿ ಘಟನೆ.

ಮನೆಯಲ್ಲಿ ಪೋಷಕರು ಇಲ್ಲದ ಸಂದರ್ಭ ತನ್ನ ಮನೆಯೊಳಗೆ ಬಾಲಕ ನೇಣಿಗೆ ಶರಣಾದ ಘಟನೆ ವಿಟ್ಲ ಸಮೀಪ ನಡೆದಿದೆ. ವಿಟ್ಲ ಸಮೀಪದ ಕಡಂಬು ನೆತ್ರಕೆರೆ ನಿವಾಸಿ ದಿವಾಕರ ಶೆಟ್ಟಿಗಾರ್ ಪುತ್ರ ವಿಶಾಲ್(22) ಆತ್ಮಹತ್ಯೆ. ತಂದೆ ವಿಟ್ಲದ ಅಯ್ಯಪ್ಪ ದೇವಸ್ಥಾನಕ್ಕೆ ಹೋಗಿದ್ದು ತಾಯಿ ಪೇಟೆಗೆ ಹೋಗಿದ್ದ ಸಂದರ್ಭದಲ್ಲೇ ವಿಶಾಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಕಾರಣ ಏನೆಂಬುದು ಇನ್ನಷ್ಟೇ ತಿಳಿಯಬೇಕಾಗಿದ್ದು ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ತನಿಖೆ ಆರಂಭಿಸಿದ್ದಾರೆ.‌ ಮೃತ ವಿಶಾಲ್ ತಂದೆ, ತಾಯಿ, ಪುಟ್ಟ ತಂಗಿಯನ್ನು ಅಗಲಿದ್ದಾನೆ. ಪ್ರತಿನಿತ್ಯ […]

Continue Reading

ಮೂಲ್ಕಿ- ಪಾವಂಜೆಯಲ್ಲಿ ಮರಳು ಕದಿಯುವವರೇ ಬಾಸ್ ಗಳು.! ಹಸಿರುಪೀಠದ ನಿರ್ದೇಶನವಿದ್ದರೂ ಮರಳು ದೋಚುವ ಖದೀಮರು.!

ಬಿಜೆಪಿ -ಕಾಂಗಿ, ಸಂಘಿ ಭಾಯಿ-ಭಾಯಿ ವ್ಯವಹಾರ.. ಹಳೇ ಪಾತಕಿಗಳ ಮಿಶ್ರಣ.! ಕಾಂಡ್ಲಾವನ ನಾಶಪಡಿಸುವುದು ಕರ್ನಾಟಕ ಅರಣ್ಯ ಕಾಯಿದೆ ಪ್ರಕಾರ ಶಿಕ್ಷಾರ್ಹ ಅಪರಾಧ ಮಂಗಳೂರು ನಗರ ಪೊಲೀಸ್ ಕಮಿಷನರ್ ವ್ಯಾಪ್ತಿ ಪೂರ್ತಿ ದಂಧೆಕೋರರ ಸ್ವರ್ಗವಾಗಿ ಬಿಟ್ಟಿದೆ. ಅದರಲ್ಲೂ ಮರಳು ಮಾಫಿಯಾವನ್ನು ಕೇಳುವವರೇ ಇಲ್ಲದಂತಾಗಿದೆ. ಸ್ಥಳೀಯ ಪೊಲೀಸ್ ಇಲಾಖೆಗಳೇ ಇಂತಹ ದಂಧೆಕೋರರಿಗೆ ಸಾಥ್ ಕೊಡುತ್ತಿದೆ. ಜಿಲ್ಲಾ ದಂಡಾಧಿಕಾರಿಯಂತೂ ಮೌನಕ್ಕೆ ಶರಣಾಗಿದ್ದಾರೆ. ಜಿಲ್ಲೆಯ ಹಲವು ಕಡೆ ಅಕ್ರಮ ಮರಳುಗಾರಿಕೆಯಿಂದ ಸೇತುವೆಗಳು ದುರ್ಬಲಗೊಂಡಿರುವುದು ಎಲ್ಲರಿಗೂ ತಿಳಿದ ವಿಚಾರ. ಮೂಲ್ಕಿ ಪರಿಸರದಲ್ಲಂತೂ ಅಕ್ರಮ ಮರಳುಗಾರಿಕೆ […]

Continue Reading

ಫರಂಗಿಪೇಟೆ ಯಲ್ಲಿ ‘ಟೆರರಿಸ್ಟ್’ ಗಳಿದ್ದಾರೆ ಎಂದ ಸಂಘಿ ಮುಖಂಡರು ಮೌನ.. ಕೋಮು ಕಿಚ್ಚು ಪ್ಲ್ಯಾನ್ ಫೇಲ್.!

ಸಹಜ ಪ್ರಕರಣಕ್ಕೆ ಧರ್ಮದ ಲೇಪನ..ಹುಡುಗಾಟಿಕೆಯ ದಿಗಂತ್, ಬೆತ್ತಲಾದ ನಾಯಕರು.! ಕರಾವಳಿಯ ಸರ್ವಧರ್ಮೀಯರು ದಿಗಂತ್ ಜೀವಂತ ಮನೆ ಸೇರಲಿ ಎಂದು ಪ್ರಾರ್ಥಿಸಿದ್ದರು. ಕೊನೆಗೂ ಪ್ರಾರ್ಥನೆಗೆ ಫಲ ಸಿಕ್ಕಿದೆ. ದಿಗಂತ್ ಸುರಕ್ಷಿತವಾಗಿ ಪತ್ತೆಯಾಗಿದ್ದಾನೆ. ವಾರಕ್ಕೊಂದರಂತೆ ಕರಾವಳಿಯಲ್ಲಿ ಸಹಜ ನಾಪತ್ತೆ ಪ್ರಕರಣ ಮಾಮೂಲಿಯಾಗಿ ನಡೆಯುತ್ತಲೇ ಇದೆ. ನಾಪತ್ತೆ ಯಾದ ರೀತಿಯಲ್ಲೇ ಮನೆ ಸೇರುತ್ತಾರೆ. ಅದು ದೊಡ್ಡ ಸುದ್ಧಿಯಾಗುವುದಿಲ್ಲ. ಆದರೆ ಫರಂಗಿಪೇಟೆಯಲ್ಲಿ ನಡೆದ ಸಹಜ ನಾಪತ್ತೆ ಪ್ರಕರಣಕ್ಕೆ ಧರ್ಮದ ಲೇಪನ ಹಚ್ಚಲು ಹೊರಟ ಪರಿವಾರದ ಮುಖಂಡರು ಇದೀಗ ದಿವ್ಯ ಮೌನಕ್ಕೆ ಶರಣಾಗಿದ್ದಾರೆ. ದಿಗಂತ್ […]

Continue Reading

ಪರಂಗಿಪೇಟೆ ದಿಗಂತ್ ಉಡುಪಿಯಲ್ಲಿ ಪತ್ತೆ.. ಭಾರೀ ಕುತೂಹಲ ಕೆರಳಿಸಿದ್ದ ಪ್ರಕರಣ ಸುಖಾಂತ್ಯ

ಕಳೆದ ಹನ್ನೆರಡು ದಿನಗಳಿಂದ ಕರಾವಳಿಯಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ದಿಗಂತ್ ಮಿಸ್ಸಿಂಗ್ ಕೇಸ್ ಸುಖಾಂತ್ಯಗೊಂಡಿದ್ದು, ಬಾಲಕ ದಿಗಂತ್ ಉಡುಪಿಯಲ್ಲಿ ಪತ್ತೆಯಾಗಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಕರಾವಳಿಯಲ್ಲಿ ತೀವ್ರ ಸೆನ್ಸೇಷನಲ್ ಸೃಷ್ಟಿಸಿದ್ದ ದಿಗಂತ್ ಮಿಸ್ಸಿಂಗ್ ಪ್ರಕರಣ ಬಗ್ಗೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಆತನದ್ದು ಅಪಹರಣವಲ್ಲ, ಸ್ವಯಂಪ್ರೇರಿತವಾಗಿ ನಾಪತ್ತೆಯಾಗಿರುವುದು ಧೃಡಪಟ್ಟಿದ್ದವು. ಪರೀಕ್ಷೆ ಭಯ, ಒನ್ ವೇ ಲವ್ ಸ್ಟೋರಿ, ಲಿಂಗ ಪರಿವರ್ತನೆ ಜಾಲ ಈ ಮೂರು ಆಯಾಮಗಳು ಸುದ್ದಿ ಮಾಡಿದ್ದವು. ಆದರೆ ಇದೀಗ ಈತನ ನಾಪತ್ತೆ […]

Continue Reading

ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್ ವಿಧಿವಶ

ಮಂಗಳೂರು ಮಹಾನಗರ ಪಾಲಿಕೆ ಉಪಮೇಯರ್ ಆಗಿದ್ದ ಮುಹಮ್ಮದ್ ಕುಂಜತ್ತಬೈಲ್ ಇಂದು ಬೆಳಿಗ್ಗೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ನೇರನಡೆನುಡಿಯ ಸರಳಸಜ್ಜನಿಕೆಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಬಡವರ, ದೀನದಲಿತರ, ಶೋಷಿತರ ಪರವಾಗಿ ಕೆಲಸ ಮಾಡುವ ನೈಜ ಜನಪ್ರತಿನಿಧಿಯಾಗಿದ್ದರು. ಕುಂಜತ್ತಬೈಲ್ ವಾರ್ಡ್ ಕಾರ್ಪೊರೇಟರ್ ಆಗಿದ್ದ ಸಂದರ್ಭ ಕುಂಜತ್ತಬೈಲ್, ಕಾವೂರು, ಪಂಜಿಮೊಗರು ಮೊದಲಾದ ಪ್ರದೇಶಗಳಲ್ಲಿ ವಾಸವಿದ್ದ 800 ರಿಂದ 900 ರಷ್ಟು ಬಡಜನರು ಹಕ್ಕುಪತ್ರವಿಲ್ಲದೆ ಸರಕಾರಿ ಸೌಲಭ್ಯದಿಂದ ವಂಚಿತರಾಗಿದ್ದ ಸಮಯದಲ್ಲಿ ಅಂತಹವರಿಗೆ ಹಕ್ಕುಪತ್ರ ನೀಡಿದ್ದ ಹಿರಿಮೆ ಕುಂಜತ್ತಬೈಲ್ ಅವರದ್ದು. 1997 ರಲ್ಲಿ ಜನತಾಪಕ್ಷದಿಂದ ರಾಜಕಾರಣ ಆರಂಭಿಸಿದ […]

Continue Reading