ಬ್ಯಾರಿ (ಬಾರಿ) ಗಳಾರು.? ಈ ಬ್ಯಾರಿ ಎಂಬ ಹೆಸರು ಎಲ್ಲಿಂದ ಬಂತು.? ಹೇಗೆ ಬಂತು.? ಏಕೆ ಬಂತು.?

‘ತಖಲ್ಲಸ ಮಿನ್ ಕುಲ್ಲಿ ಐಬಿನ್ (تخلص من كل غيب) ಅಂದರೆ ಎಲ್ಲಾ ನ್ಯೂನತೆಗಳಿಂದಲೂ ಪಾರದವನು ಈ ‘ಬಾರಿ’. ✍️. ಬಹು ಭಾಷಾ ಸಾಹಿತಿ, ಮಹಮ್ಮದ್ ಬಡ್ಡೂರ್ ​25 ವರ್ಷಗಳ ಮೊದಲು ಬ್ಯಾರಿ ಆಂದೋಲನ ಆರಂಭವಾಯಿತು. ಆಮೇಲೆ ಕಳೆಗಿಡಗಳಂತೆ(ಜಗಟೆ-ತಜಂಕೆ) ಬ್ಯಾರಿ ಹೆಸರಲ್ಲಿ ಹಲವಾರು ಸಂಘಟನೆಗಳು ಹುಟ್ಟಿಕೊಂಡವು. ಸರಕಾರದ ವತಿಯಿಂದ ಬ್ಯಾರಿ ಸಾಹಿತ್ಯ ಅಕಾಡೆಮಿಯೂ ದಕ್ಕಿತು. ಇಷ್ಟೆಲ್ಲಾ ಆದುದು ಒಂದು ಸ್ಪರ್ಧಾತ್ಮಕ ಪೈಪೋಟಿ ಮತ್ತು ಸ್ವಾರ್ಥದ ಲಾಲಚೆಯಿಂದ ಹೊರತು, ಸಾಮುದಾಯಿಕ ದೃಷ್ಟಿಕೋನದಿಂದ ಆದುದೇನೂ ಅಲ್ಲ. ಈ ಬ್ಯಾರಿ ಎಂಬ […]

Continue Reading

ಸಿಂಗಾರಿ ಬೀಡಿ ಮನೆ ದರೋಡೆ: ಕೇಡಿ ಪೊಲೀಸ್ ಅರೆಸ್ಟ್

ದರೋಡೆಗೆ ಇಂಚಿಂಚೂ ಮಾಹಿತಿ ನೀಡಿದ್ದ ನಾರ್ಶ ಸಿರಾಜ್, ಮಟನ್ ಇಕ್ಬಾಲ್, ಅಳಪೆ ಅನ್ಸಾರ್ ಅಂದರ್ ಬಂಟ್ವಾಳ ಬೋಳಂತೂರು ನಾರ್ಶದ ಉದ್ಯಮಿ ಸಿಂಗಾರಿ ಬೀಡಿ ಮಾಲಕರಾದ ಸುಲೈಮಾನ್ ಹಾಜಿ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಕೃತ್ಯದಲ್ಲಿ ಸ್ಥಳೀಯರು ಸೇರಿದಂತೆ ಮಲಯಾಳಿ ಎಎಸ್ ಐ ಯೊಬ್ಬನಿಗೆ ಕೋಳ ತೊಡಿಸುವಲ್ಲಿ ಜಿಲ್ಲೆಯ ಪೊಲೀಸರು ಸಫಲರಾಗಿದ್ದಾರೆ. ಜನವರಿ 3 ರಂದು ಇ.ಡಿ ಅಧಿಕಾರಿಗಳೆಂದು ನಂಬಿಸಿ ಸಿಂಗಾರಿ ಬೀಡಿ ಮಾಲಿಕರ ಮನೆಗೆ ನುಗ್ಗಿ ಹಣ ಲೂಟಿ ಮಾಡಿ […]

Continue Reading

ಬಂಟ್ವಾಳ: ಸರಕಾರಿ ಅಧಿಕಾರಿ ಮಟ್ಕಾ ದಾಸ.! ಅಕ್ರಮ-ಸಕ್ರಮದಲ್ಲೂ ಸಖತ್ ಲೂಟಿ

ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ಬಕಾಸುರರ ಕಥೆಗಳನ್ನು ಪತ್ರಿಕೆಯ ಕಳೆದ ಸಂಚಿಕೆಯಲ್ಲಿ ಓದಿದ್ದೀರಿ ತಾನೇ. ಬಂಟ್ವಾಳ ಹೃದಯ ಭಾಗದ ಮಿನಿ ವಿಧಾನಸೌಧದಲ್ಲಿ ಮುಕ್ಕಲು ರೆಡಿಯಾಗಿ ಕೂತ ತಿಮಿಂಗಿಲಗಳ ಬಗ್ಗೆ ವಿಸ್ತೃತ ವರದಿಯನ್ನು ದಾಖಲಿಸಿದ್ದೆವು. ಅಲ್ಲಿ ಕುರ್ಚಿಗೆ ಅಂಟಿಕೊಂಡು ಕೂತಿರುವ ಅಧಿಕಾರಿಯೊಬ್ಬನ ರಗಳೆಯನ್ನು ಓದಿರಬೇಕು ತಾನೇ. ಇದೀಗ ಈತನ ಒಂದೊಂದು ಬಣ್ಣ ಬಯಲಾಗುತ್ತಿದೆ. ಬಂಟ್ವಾಳ ತಾಲೂಕಿನಲ್ಲೇ ಪರಮಭ್ರಷ್ಟ ಈತ. ವಿವಿಧ ನಾಮಕರಣದಿಂದ ಬಂಟ್ವಾಳ ತಾಲೂಕಿನಲ್ಲಿ ಕುಖ್ಯಾತಿಯ ಈತನ ದಗಲ್ಬಾಜಿ ಪುರಾಣಗಳು ಒಂದೊಂದಾಗಿ ಹೊರಬರುತ್ತಿದೆ. 12 ವರ್ಷಗಳ ಮುಂಚೆ ಪಾಣೆಮಂಗಳೂರು ಕಸ್ಬಾದಲ್ಲಿ […]

Continue Reading

ಬಂಟ್ವಾಳ ಪ್ರಾದೇಶಿಕ ಸಾರಿಗೆ ಇಲಾಖೆ ಮತ್ತು ವಿಟ್ಲ ಪೊಲೀಸ್ ಇಲಾಖೆಯ ಆಶ್ರಯದಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆ.

ವಿಟ್ಲದ ಹೃದಯ ಭಾಗದ ನಾಲ್ಕು ರಸ್ತೆಯಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳು ಮತ್ತು ವಿಟ್ಲ ಪೊಲೀಸ್ ಠಾಣೆಯ ಅಧಿಕಾರಿಗಳು ಜಂಟಿಯಾಗಿ ಸಾರಿಗೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮ ನಡೆಸಿದರು. ದ್ವಿಚಕ್ರ ವಾಹನಗಳ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯವಾಗಿದ್ದರೂ ಬೇಕಾಬಿಟ್ಟಿಯಾಗಿ ನಿಯಮ ಉಲ್ಲಂಘಿಸುವ ಸವಾರರಿಗೆ ಇಂದಿನ ಕಾರ್ಯಾಚರಣೆ ಬಿಸಿ ಮುಟ್ಟಿಸಿದೆ. ಮಾಸಾಚರಣೆ ಅಂಗವಾಗಿ ಯಾವುದೇ ದಂಡ ವಿಧಿಸದೇ ಸವಾರರಿಗೆ ಕಾನೂನಿನ ಬಗ್ಗೆ ವಿವರಿಸಿದ ಅಧಿಕಾರಿಗಳು ಮಿತಿ ದರದಲ್ಲಿ ತಲಾ ಐನೂರರಂತೆ ಹೆಲ್ಮೆಟ್ ಪಡೆಯಲು ಸೂಚಿಸಿದರು. ಎಳೆಯ ಪುಟಾಣಿಗಳ ಬೇಜವಾಬ್ದಾರಿಯಿಂದ ಕುಳ್ಳಿರಿಸುವ ಸವಾರರಿಗೆ […]

Continue Reading

ಅಮ್ಮುಂಜೆ: ರಿಕ್ಷಾ ಪಲ್ಟಿ; ಚಾಲಕ ಸ್ಪಾಟ್ ಡೆತ್: ಮೂವರು ಮಕ್ಕಳಿಗೆ ಗಂಭೀರ ಗಾಯ

ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಕಬೈಲ್ ಗಾಣೆಮಾರ್ ಎಂಬಲ್ಲಿ ಫೆಬ್ರವರಿ 14 ರ ಮಧ್ಯರಾತ್ರಿ ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಚರಂಡಿಗೆ ಉರುಳಿ ಬಿದ್ದ ಘಟನೆ ನಡೆದಿದೆ. ಘಟನೆಯಲ್ಲಿ ರಿಕ್ಷಾ ಚಾಲಕ ಅಮ್ಮುಂಜೆ ನಿವಾಸಿ ಮಹಾಬಲ ಪೂಜಾರಿ ಮೃತಪಟ್ಟ ದುರ್ದೈವಿಯಾಗಿದ್ದಾನೆ. ರಿಕ್ಷಾದಲ್ಲಿದ್ದ ಮೂವರು ಮಕ್ಕಳು ಗಂಭೀರ ಗಾಯಗೊಂಡಿದ್ದಾರೆ. ಎಡಪದವು ಮಿಜಾರಿನಲ್ಲಿ ನಡೆಯುತ್ತಿರುವ ಜಾತ್ರೆಗೆ ಸಂಬಂಧಿಕ ಮೂವರು ಮಕ್ಕಳೊಂದಿಗೆ ತೆರಳಿದ್ದ ಮಹಾಬಲ ಪೂಜಾರಿ ಜಾತ್ರೆ ಮುಗಿಸಿ ಮನೆಗೆ ವಾಪಸ್ಸಾಗುತ್ತಿರುವ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ಚಾಲಕನ […]

Continue Reading

ಸ್ಯಾಂಡಲ್ ವುಡ್ ಗೆ ‘ಕಪ್ಪು’.. ಕೋಸ್ಟಲ್ ವುಡ್ ಗೆ ‘ಚಿಪ್ಪು’

ಒರಿಯರ್ದೊರಿ ಅಸಲ್..! ತುಳು ಚಿತ್ರರಂಗ ಸಾಗಿ ಬಂದ ಹಾದಿ ಹೂವ ಹಾಸಿಗೆಯಲ್ಲ.ಕನ್ನಡ ಚಿತ್ರರಂಗದ ಮಡಿಲಲ್ಲೇ ತುಳು ಚಿತ್ರರಂಗವೂ ಇದೆ. ಸೀಮಿತ ಮಾರುಕಟ್ಟೆ, ಸೀಮಿತ ಬಜೆಟ್‌ನಲ್ಲಿಯೇ ಜನರನ್ನು ರಂಜಿಸುತ್ತಾ, ಪ್ರಯೋಗಗಳನ್ನು ಮಾಡುತ್ತಾ ಬಹುದೂರ ಸಾಗಿ ಬಂದಿದೆ ತುಳು ಚಿತ್ರೋದ್ಯಮ. ಅರ್ಧ ಶತಕ ದಾಟಿರುವ ತುಳು ಚಿತ್ರೋದ್ಯಮ ಸಾಗಿ ಬಂದ ಹಾದಿ ಹೂವಿನದ್ದಾಗಿರಲಿಲ್ಲ. ಹಲವು ಕಲ್ಲು-ಮಳ್ಳುಗಳನ್ನು ದಾಟಿಯೇ ಐದು ದಶಕ ತನ್ನ ಅಸ್ಥಿತ್ವ ಉಳಿಸಿಕೊಂಡು ಬಂದಿದೆ. ಅಸ್ಥಿತ್ವ ಉಳಿಸಿಕೊಳ್ಳುವ ಹೋರಾಟ ಈಗಲೂ ಜಾರಿಯಲ್ಲಿದೆ. ತುಳು ಚಿತ್ರರಂಗದ ಇತಿಹಾಸ ಆರಂಭವಾಗುವುದು ‘ಎನ್ನ […]

Continue Reading

ಶಿಕ್ಷಕಿಯರಿಬ್ಬರ ಜಡೆಜಗಳ. ಕನ್ಯಾನ-ಕಣಿಯೂರು ಸರ್ಕಾರಿ ಶಾಲೆಯ ದುರಂತ ಕಥೆ.

ಅಧಿಕಾರಿಗಳ ಮುಂದೆ ಶಿಕ್ಷಕಿಯರ ಜನ್ಮ ಜಾಲಾಡಿ ಪೋಷಕರ ಆಕ್ರೋಶ.‌ ವಿಟ್ಲ: ಶಿಕ್ಷಕಿಯರಿಬ್ಬರ ಒಣ ಪ್ರತಿಷ್ಠೆ ಮತ್ತು ಒಳಜಗಳದಿಂದಾಗಿ ಕನ್ಯಾನ ಗ್ರಾಮದ ಕಣಿಯೂರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಂತಾಗಿದೆ. ನಲ್ವತ್ತಾರು ವಿದ್ಯಾರ್ಥಿಗಳಿರುವ ಕಣಿಯೂರು ಸರ್ಕಾರಿ ಶಾಲೆಯಲ್ಲಿ ಮೂವರು ಶಿಕ್ಷಕಿಯರಿದ್ದಾರೆ. ಇಪ್ಪತ್ತಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅನಿತಾ ಎಂಬವರು ಮುಖ್ಯ ಶಿಕ್ಷಕಿಯಾಗಿದ್ದಾರೆ. ಏಳೆಂಟು ವರ್ಷಗಳಿಂದ ಲವಿನಾ ಎಂಬವರು ಸಹಾಯಕ ಶಿಕ್ಷಕಿಯಾಗಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಹಾಸನ ಮೂಲದ ಸುಮಯ್ಯ ಎಂಬವರು ಇದೇ ಕಣಿಯೂರು ಶಾಲೆಗೆ ಶಿಕ್ಷಕಿಯಾಗಿ ಕರ್ತವ್ಯಕ್ಕೆ ಬಂದಿದ್ದಾರೆ. […]

Continue Reading

ಉಳ್ಳಾಲ: ಕೋಟೆಕಾರ್ ಬ್ಯಾಂಕ್ ದರೋಡೆ ಆರೋಪಿಯ ಪತ್ತೆಗೆ 5 ಲಕ್ಷ ಪೀಡನೆ ಆರೋಪ; ಉಳ್ಳಾಲ ಇನ್ಸ್ ಪೆಕ್ಟರ್ ಬಾಲಕೃಷ್ಣ ಗೆ ರಜೆಯ ಸಜೆ.!

ಬಜರಂಗದಳ ರೌಡಿ ಗೆ ‘ಮನ್ನಾ’.. ಕಾಂಗ್ರೆಸ್ ರೌಡಿಗೆ ‘ಕೋಳ’.. ಇನ್ಸ್ ಪೆಕ್ಟರ್ ನಡೆಯ ವಿರುದ್ಧ ಕೆರಳಿ ಕೆಂಡವಾಗಿದ್ದ ಕಾಂಗ್ರೆಸ್ ನಾಯಕರು..! ರಾಜ್ಯದಾದ್ಯಂತ ತೀವ್ರ ಸಂಚಲನವನ್ನೇ ಸೃಷ್ಟಿಸಿದ್ದ, ಮುಖ್ಯಮಂತ್ರಿ ಮಂಗಳೂರು ಭೇಟಿಯ ಸಮಯದಲ್ಲಿ ಮಟ ಮಟ ಮಧ್ಯಾಹ್ನವೇ ಉಳ್ಳಾಲ ತಾಲೂಕಿನ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಗೆ ದರೋಡೆಕೋರರು ನುಗ್ಗಿ 15 ಕೋಟಿ ಲಪಟಾಯಿಸಿ ಎಸ್ಕೇಪ್ ಆಗಿದ್ದರು. ಈ ಘಟನೆ ರಾಜ್ಯ ಸರಕಾರಕ್ಕೆ ತೀವ್ರ ಮುಜುಗರವನ್ನು ಸೃಷ್ಟಿಸಿತ್ತು. ಉತ್ತರ ಪ್ರದೇಶ, ಬಿಹಾರದಲ್ಲಿ ಕೇಳಿ ಬರುತ್ತಿದ್ದ ಇಂತಹ ಮಾದರಿಯ […]

Continue Reading

ಮಂಗಳೂರು ಅಕ್ರಮ ಮರಳು ದಂಧೆಕೋರರಿಗೆ ಸ್ವರ್ಗ, ಹೊಸ ಸೇತುವೆಗಳೂ ಅಪಾಯದಲ್ಲಿ

✍️. ಕಾಮ್ರೇಡ್ ಮುನೀರ್ ಕಾಟಿಪಳ್ಳ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿ ಪೂರ್ತಿಯಾಗಿ ದಂಧೆಕೋರರ ಸ್ವರ್ಗವಾಗಿ ಬಿಟ್ಟಿದೆ. ಅದರಲ್ಲೂ, ಮರಳು ಮಾಫಿಯಾದವರನ್ನು ಹೇಳುವವರು, ಕೇಳುವವರು ಇಲ್ಲ ಎಂಬ ಸ್ಥಿತಿ ನಿರ್ಮಾಣಗೊಂಡಿದೆ. ಪೊಲೀಸ್ ಕಮೀಷನರೇಟ್ ಮರಳು ದಂಧೆಕೋರರ ಜೊತೆಗೆ ನೇರವಾಗಿ ಗುರುತಿಸಿಕೊಂಡರೆ, ಜಿಲ್ಲಾಧಿಕಾರಿ ಕಚೇರಿ ಮೌನ ಶಾಮೀಲಾತಿ ಹೊಂದಿದೆ. ದೂರು ನೀಡಿದವರ ಮಾಹಿತಿಯನ್ನು ಪೂರ್ಣ ವಿಳಾಸದೊಂದಿಗೆ ಮರಳು ದಂಧೆಕೋರರಿಗೆ ತಿಳಿಸಿ, ಅವರನ್ನು ಅಪಾಯಕ್ಕೊಡ್ಡುವ ಕಾರ್ಯವೂ ಮಂಗಳೂರಿನಲ್ಲಿದೆ. ಉಡುಪಿ ಪೊಲೀಸ್ ವರಿಷ್ಟಾಧಿಕಾರಿ, ಜಿಲ್ಲಾಧಿಕಾರಿಗಳು ನಿರ್ಬಂಧಿತ ಪ್ರದೇಶಗಳಲ್ಲಿ ಒಂದು ಹಿಡಿ ಮರಳು […]

Continue Reading

ಲೋಕಾಯುಕ್ತದಲ್ಲಿ ಲೇಡಿ ಸಿಂಗಂ.. ಆಗಿ ಜನಪ್ರಿಯತೆ ಪಡೆದುಕೊಳ್ಳುತ್ತಿರುವ ಗಾನಾ ಪ್ರಸನ್ನಕುಮಾರ್. ಭ್ರಷ್ಟರ ಪಾಲಿಗೆ ಈಕೆ ಸಿಂಹಸ್ವಪ್ನೆ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಸಿಂಗಂ ಆಗಿ ಜನಪ್ರಿಯರಾದವರು ಎಸ್ಪಿ ಅಣ್ಣಾಮಲೈ. ಉಡುಪಿ ಎಸ್ಪಿಯಾಗಿದ್ದ ಸಂದರ್ಭದಲ್ಲಿ ಅಣ್ಣಾಮಲೈರದ್ದೇ ಸುದ್ದಿ. ಪಾತಕಿಗಳು, ದಂಧೆಕೋರರ ಪಾಲಿಗಂತೂ ಅಣ್ಣಾಮಲೈ ಸಿಂಗಂ ಆಗಿ ಗುರುತಿಸಿಕೊಂಡಿದ್ದರು. ಸಿನೆಮಾ ತಾರೆಯರಿಗೆ ಇರುವಷ್ಟು ಜನಪ್ರಿಯತೆ ಪೊಲೀಸ್ ಇಲಾಖೆಯಲ್ಲಿ ಇವರಿಗಿತ್ತು. ಆದರೆ ಯಾವಾಗ ಪೊಲೀಸ್ ಸಮವಸ್ತ್ರ ಕಳಚಿಟ್ಟು ರಾಜಕಾರಣ ಪ್ರವೇಶಿಸಿದರೋ ಸಿಂಗಂ ಅಣ್ಣಾಮಲೈ ಚುಯಿಂಗಂ ಆಗಿ ಬದಲಾದರು. ಆ ನಂತರ ತುಂಬಾ ಸಮಯದ ನಂತರ ಪೊಲೀಸ್ ಇಲಾಖೆಯಲ್ಲಿ ಸಿಂಗಂ ಇಮೇಜಿನಿಂದ ಯಾರೂ ಗುರುತಿಸಿಕೊಳ್ಳಲಿಲ್ಲ. ಆದರೆ ತರುಣ […]

Continue Reading