ಕಮೀಷನರ್ ಅನುಪಮ್ ಅಗರವಾಲ್ ವರ್ಗಾವಣೆಗೆ ಆಗ್ರಹಿಸಿ ಸರಣಿ ಹೋರಾಟ, ಗೃಹ ಸಚಿವ, ಮುಖ್ಯಮಂತ್ರಿಗಳ ಭೇಟಿ; ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನಿರ್ಧಾರ.

ಪ್ರತಿಭಟನೆ, ಧರಣಿಗಳಿಗೆ ಅವಕಾಶ ನಿರಾಕರಿಸುವ, ಪ್ರತಿಭಟನಾಕಾರರ ಮೇಲೆ ಸರಣಿ ಮೊಕದ್ದಮೆ ಹೂಡುತ್ತಿರುವ, ಸರ್ವಾಧಿಕಾರಿ ಧೋರಣೆಯ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ ವಾಲ್ ಮೇಲೆ ಶಿಸ್ತು ಕ್ರಮ ಜರುಗಿಸಲು, ಮಂಗಳೂರು ನಗರ ಕಮೀಷನರೇಟ್ ನಿಂದ ವರ್ಗಾಯಿಸಲು ಒತ್ತಾಯಿಸಿ ಹೋರಾಟ ತೀವ್ರಗೊಳಿಸಲು, ಸರಣಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತೀರ್ಮಾನಿಸಿದೆ. ಕಮೀಷನರ್ ಅಗರ್ ವಾಲ್ ಹಾಗೂ ಡಿಸಿಪಿ ಗೋಯಲ್ ನಡೆ ಪೊಲೀಸ್ ಇಲಾಖೆಯ ಗೌರವಕ್ಕೆ ತಕ್ಕುದಾಗಿಲ್ಲ. ಜನ ಸಾಮಾನ್ಯರು, ದುರ್ಬಲ ವಿಭಾಗಗಳು ತಮ್ಮ […]

Continue Reading

ಮುಮ್ತಾಜ್ ಅಲಿ ಅನುಸ್ಮರಣೆ ಕಾರ್ಯಕ್ರಮದಲ್ಲಿ ಕೆಲವು ಬ್ಯಾರಿ ಕಾಕಾ.. ಗಳು ನಾಪತ್ತೆ.!

ರೈಟ್ -ಲೆಪ್ಟ್ ಎಂದು ಕಾಣಿಸಿಕೊಂಡವರೆಲ್ಲ ಮಾಯ..ಮಾಯ! ಓರ್ವ ವ್ಯಕ್ತಿಯ ಬಳಿ ಸಾಕಷ್ಟು ದುಡ್ಡು, ಅಧಿಕಾರ, ಶ್ರೀಮಂತಿಕೆ ಇದ್ದರೆ ಇರುವೆಗಳು ಮುತ್ತಿಕ್ಕುವಂತೆ ಸ್ನೇಹಿತರ ಬಳಗವೇ ಇರುತ್ತದೆ, ಆತ ಖಾಲಿಯಾದಾಗ ಆತನನ್ನು ಮೂಸುವವರು ಯಾರೂ ಇಲ್ಲ ಎಂದು ಸಾಮಾನ್ಯವಾಗಿ ಜನ ಹೇಳುವುದುಂಟು. ಅದೇ ರೀತಿ ಅಧಿಕಾರ, ಹುದ್ದೆ ಇದ್ದಾಗ ಲೆಫ್ಟ್, ರೈಟ್ ಎಂದು ದೋಸ್ತ್ ಗಳು ಅಡ್ಡಾಡುತ್ತಲೇ ಇರುತ್ತಾರೆ. ಆದರೆ ಆತ ಮರಣವನ್ನಪ್ಪಿದಾಗ ಆತನ ಕುಟುಂಬಕ್ಕೆ ಕನಿಷ್ಠ ಸಾಂತ್ವನ ಹೇಳಲು ಯಾರೂ ಇರುವುದಿಲ್ಲ. ಆತನಿಂದ ಲಾಭ ಪಡೆದವರೇ ಮಾಯವಾಗಿ ಬಿಡುತ್ತಾರೆ. […]

Continue Reading

ಅಣೆಕಟ್ಟು ನೀರಿನಲ್ಲಿ ಮೋಜಿನಾಟ; ವೇಣೂರು ಬಳಿ ಮೂವರು ಯುವಕರ ದುರ್ಮರಣ.

ಗೆಳೆಯನ ಮನೆಗೆ ಬಂದ ಮೂವರು ಯುವಕರು ಕಿಂಡಿ ಅಣೆಕಟ್ಟು ನೀರಿನಲ್ಲಿ ಮೋಜಿನಾಟ ನಡೆಸಲು ಹೋಗಿ ಪ್ರಾಣತೆತ್ತ ಘಟನೆ ವೇಣೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವೇಣೂರು ಬರ್ಕಜೆ ನದಿಗೆ ಹಾಕಲಾಗಿದ್ದ ಕಿಂಡಿ ಅಣೆಕಟ್ಟು ನೀರಿನಲ್ಲಿ ಮುಳುಗಿ ಮೂವರು ಯುವಕರ ದುರ್ಮರಣ. ವೇಣೂರು ಚರ್ಚಿನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗೆಳೆಯನ ಮನೆಗೆ ಬಂದಿದ್ದ ಲಾರೆನ್ಸ್(21), ಸೂರಜ್ (19) ಹಾಗೂ ಜೈಸನ್ (19) ಸಾವಿಗೀಡಾಗಿದ್ದಾರೆ. ಕಟ್ಟೆ ರೆಸ್ಕ್ಯೂಮ್ ತಂಡದ ಕಾರ್ಯಕರ್ತರು ಅಣೆಕಟ್ಟು ನೀರಿನಲ್ಲಿ ಮುಳುಗಿದ್ದ ಮೂವರು ಯುವಕರ ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ. ವೇಣೂರು […]

Continue Reading

ಇದ್ಯಾವ ನ್ಯಾಯ ಸ್ವಾಮಿ..!ಗುಂಡಿ ಮುಚ್ಚಿ, ರಸ್ತೆ ಸರಿಪಡಿಸಲು ಹೋರಾಟ ಮಾಡಿದರೆ ಕೇಸು.. ದೊಡ್ಡವರು ರಸ್ತೆ ಬಂದ್ ಮಾಡಿ ಕಾರ್ಯಕ್ರಮ ಮಾಡಿದರೆ ಅನುಮತಿ.!

ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರವಾಲ್, ಮಂಗಳೂರು, ಸುರತ್ಕಲ್ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಶಾಂತಿಯುತ ಧರಣಿ ನಡೆಸಿದ್ದು ಅಪರಾಧ ಅಂತ ಹೇಳಿ ಮೊಕದ್ದಮೆ ಹೂಡಿದ್ದಾರೆ. ಕಾವೂರು ಪೊಲೀಸ್ ಠಾಣೆಯಲ್ಲಿ “ಮುನೀರ್ ಕಾಟಿಪಳ್ಳ” ಎಂದು ಒಂದು ಹೆಸರನ್ನು ಮಾತ್ರ ಉಲ್ಲೇಖಿಸಿ ಸ್ವಯಂಪ್ರೇರಿತ FIR ಹಾಕಿದ್ದಾರೆ. ಇದರ ಉದ್ದೇಶ ಸ್ಪಷ್ಟ, ಮುನೀರ್ ಕಾಟಿಪಳ್ಳ ಈಗ ಮಂಗಳೂರು ಕಮೀಷನರ್ ಅವರಿಗೆ ಟಾರ್ಗೆಟ್, ಆ ಮೂಲಕ ಮಂಗಳೂರಿನ ಜನಪರ ಚಳವಳಿಗಳನ್ನು ಬೆದರಿಸುವ, ಬಾಯಿ ಮುಚ್ಚಿಸುವ ಯತ್ನ ನಡೆಸುತ್ತಿದ್ದಾರೆ‌. ಇದು ಬಿಜೆಪಿ ಶಾಸಕರುಗಳ ನಿರ್ದೇಶನದಂತೆ […]

Continue Reading

ಭ್ರಷ್ಟರ ಪರಮ ಅಡ್ಡೆ ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ

ಕಂತೆ ಕಂತೆ ನೋಟು, ಕೆಜಿ ಗಟ್ಟಲೆ ಒಡವೆ ಲೋಕಾಯುಕ್ತ ಅಧಿಕಾರಿಗಳೇ ಹೈರಾಣು.! ಮರಳು.. ಕಲ್ಲು.. ಮಣ್ಣು.. ಮುಕ್ಕಿ ಮುಕ್ಕಿ ಕೋಟಿ.. ಕೋಟಿ ಡೀಲು.. ಇದು ಮಂಗಳೂರು. ಬುದ್ಧಿವಂತರ ಜಿಲ್ಲೆ. ಶಿಕ್ಷಿತರ ತವರೂರು. ಇಲ್ಲಿನ ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಲಕ ಲಕ ಹೊಳೆಯುತ್ತಿದೆ. ಉತ್ತರ ಕರ್ನಾಟಕ ಅಥವಾ ಇತರ ಭಾಗಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದಾಗ ಭ್ರಷ್ಟ ಅಧಿಕಾರಿಗಳು ಕಂತೆ ಕಂತೆ ನೋಟುಗಳನ್ನು ಪೈಪುಗಳಲ್ಲಿ ಅಡಗಿಸಿಟ್ಟಿರುವುದು, ಕೋಣೆಯಲ್ಲಿ ಬಚ್ಚಿಟ್ಟಿರುವುದು ಇಂತಹ ನ್ಯೂಸ್ ಗಳನ್ನು ಕೇಳಿರಬಹುದು. ಆದರೆ ಮಂಗಳೂರಿನಲ್ಲಿ ಲೋಕಾಯುಕ್ತರು […]

Continue Reading

ಅಂತರಾಜ್ಯ ಹೆದ್ದಾರಿಯ ವಿಟ್ಲ-ಉಕ್ಕುಡ-ಪಡಿಬಾಗಿಲು ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ.

ಶಾಸಕ-ಸಂಸದರ ಬೇಜವಾಬ್ದಾರಿಗೆ ವಾಹನ ಚಾಲಕರು ಹೈರಾಣ. ಅಂತರಾಜ್ಯ ಹೆದ್ದಾರಿಯ ವಿಟ್ಲ- ಉಕ್ಕುಡ- ಪಡಿಬಾಗಿಲು ರಸ್ತೆ ದುರವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ಆಟೋರಿಕ್ಷಾ, ಟೂರಿಸ್ಟ್ ಕಾರು, ಖಾಸಗಿ ಬಸ್, ಲಾರಿ ಮಾಲಕರ ಸಂಘದ ವತಿಯಿಂದ ಕಾಶಿಮಠ ಬಳಿ ಪ್ರತಿಭಟನೆ ನಡೆಯಿತು. ಕಲ್ಲಡ್ಕ- ಚೆರ್ಕಳ ಅಂತರಾಜ್ಯ ಹೆದ್ದಾರಿಯ ವಿಟ್ಲದಿಂದ ಪಡಿಬಾಗಿಲು ತನಕದ ಮೂರು ಕಿಲೋಮೀಟರ್ ರಸ್ತೆ ಹೊಂಡಗುಂಡಿಗಳಿಂದಾಗಿ ನಾಪತ್ತೆಯಾಗಿದೆ. ಗುಂಡಿ ತಪ್ಪಿಸುವ ಭರದಲ್ಲಿ ಪ್ರತಿನಿತ್ಯ ವಾಹನ ಅಪಘಾತಗಳು ನಡೆಯುತ್ತಿವೆ. ರಸ್ತೆ ದುರಸ್ತಿಗಾಗಿ ಪಟ್ಟಣ ಪಂಚಾಯತಿಗೆ ದೂರು ನೀಡಿದರೆ ಹೆದ್ದಾರಿ ದುರಸ್ತಿ ನಾವು […]

Continue Reading

ಸಾಲೆತ್ತೂರು ಬಳಿ ಆಟೋ-ಬೈಕ್ ಮಧ್ಯೆ ಅಪಘಾತ. ಮೂವರಿಗೆ ಗಂಭೀರ ಗಾಯ.

ವಿಟ್ಲ : ಸಾಲೆತ್ತೂರು ಸಮೀಪದ ಕಾಡುಮಠ ಸೇತುವೆಯಲ್ಲಿ ಆಟೋರಿಕ್ಷಾ ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಟೋ ಚಾಲಕ ಸಾಲೆತ್ತೂರು ನಿವಾಸಿ ರಫೀಕ್, ಬೈಕ್ ಸವಾರರಾದ ಕಡಂಬು ನಿವಾಸಿ ಉಮ್ಮರ್ ಮತ್ತು ರಾದುಕಟ್ಟೆ ನಿವಾಸಿ ಅಬೂಬಕ್ಕರ್ ಗಾಯಾಳುಗಳು. ಸುಂಕದಕಟ್ಟೆ ಮಜೀರ್ ಪಳ್ಳದಲ್ಲಿ ಸೆಂಟ್ರಿಂಗ್ ಕೆಲಸ ಮುಗಿಸಿ ಮನೆಗೆ ಹಿಂತಿರುತ್ತಿದ್ದ ಉಮ್ಮರ್ ಮತ್ತು ಅಬೂಬಕ್ಕರ್ ಅವರ ಬೈಕ್ ಸಾಲೆತ್ತೂರು ಕಡೆಗೆ ಸಂಚರಿಸುತ್ತಿದ್ದ ರಫೀಕ್ ಎಂಬವರ ಆಟೋಗೆ ಕಾಡುಮಠ ಸೇತುವೆಯಲ್ಲಿ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತದ […]

Continue Reading

ಆಸ್ಕರ್ ಪಟ್ಟಾ ಶಿಷ್ಯ ಇನಾಯತ್ ಅಲಿ ತಂತ್ರಗಾರಿಕೆಯ ಚರಿಷ್ಮಾ.. ಮಕಾಡೆ ಮಲಗಿದ ಭರತ್ ಶೆಟ್ಟಿ.!

ಮಂಗಳೂರು ಉತ್ತರದ ಪಂಚಾಯತ್ ಉಪಚುನಾವಣೆ: ಮೂರರಲ್ಲೂ ಕಾಂಗ್ರೆಸ್ ಕ್ಲೀನ್ ಸ್ವೀಪ್; ಬಿಜೆಪಿ ಧೂಳೀಪಟ ರಾಜಕಾರಣದಲ್ಲಿ ವರ್ಕೌಟ್ ಆಗುವುದು ತಂತ್ರಗಾರಿಕೆ ಅನ್ನುವುದು ನೂರಕ್ಕೆ ನೂರು ಸತ್ಯ. ಎಂತಹ ಬಲಾಢ್ಯರನ್ನು ಮಣ್ಣು ಮುಕ್ಕಿಸಬಹುದು ಅನ್ನುವುದಕ್ಕೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರವೇ ಸ್ಪಷ್ಟ ನಿದರ್ಶನ. ಮಂಗಳೂರು ಉತ್ತರದಲ್ಲಿ ಬಿಜೆಪಿ ಶಾಸಕರಿದ್ದರೂ, ಬಿಜೆಪಿ ಗೆಲುವಿಗೆ ಹಗಲು ರಾತ್ರಿ ಫೀಲ್ಡಿಗಿಳಿದ ಶಾಸಕರು ಹಾಗೂ ಅವರ ಬಂಟರಿಗೆ ಮತದಾರರು ಚಳ್ಳೆ ಹಣ್ಣು ತಿನ್ನಿಸಿದ್ದಾರೆ. ಆಸ್ಕರ್ ಫರ್ನಾಂಡಿಸ್ ಗರಡಿಯಲ್ಲಿ ಪಳಗಿದ ಇನಾಯತ್ ಅಲಿ ತಂತ್ರಗಾರಿಕೆಯ ಚರೀಷ್ಮಾ ವರ್ಕೌಟ್ […]

Continue Reading

ಲಂಚ.. ಲಂಚ..ಲಂಚ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಲಂಚ ಮುಟ್ಟದವನು ಪಾಪಿ.!

ಮಣ್ಣಗುಡ್ಡೆ ಕ್ವಾಟ್ರಸ್ ನಲ್ಲಿ ನಡೆಯುತ್ತಿರುವುದೇನು..? ಲಂಚ.. ಲಂಚ..ಲಂಚ ಮಂಗಳೂರು ಮಹಾನಗರ ಪಾಲಿಕೆಯ ಒಳಹೊಕ್ಕರೆ ಕೇಳಿ ಬರುವ ವೇದವಾಕ್ಯ ಇದೊಂದೆ. ಇಲ್ಲಿ ಲಂಚ ಮುಟ್ಟದವನು ಪಾಪಿ ಅನ್ನುವಂತೆ ಭ್ರಷ್ಟಾಚಾರದ ಪರಮಾವಧಿ ಮೇಳೈಸಿದೆ. ಇಡೀ ಮಂಗಳೂರು ನಗರದ ಶಕ್ತಿ ಕೇಂದ್ರವಾದ ಮನಪಾದಲ್ಲಿ ಊಟದ ಸ್ಪೀಡಂತೂ ಬಲು ಜೋರು. ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಮೃಷ್ಟಾನ್ನ ಭೋಜನ ನೀಡುವ ಇಲಾಖೆಯೆಂದರೆ ಅದು ಕಂದಾಯ ಇಲಾಖೆ. ಇಲ್ಲಿದ್ದು ಎತ್ತಂಗಡಿಯಾದ ಅನೇಕರು ಮತ್ತೆ ಮತ್ತೆ ಇಲ್ಲಿಯೆ ಬೀಡು ಬಿಟ್ಟಿರುತ್ತಾರೆ. ಕಂದಾಯ ಸೆಕ್ಷನ್ ಬಿಟ್ಟು ಹೋಗಲು […]

Continue Reading

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಜರುಗಿದ ಅತ್ಯಂತ ಉದ್ದದ ಮಾನವ ಸರಪಳಿ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಎರಡನೇ ಸ್ಥಾನಕ್ಕೆ ಆಯ್ಕೆ

ಕರ್ನಾಟಕ ಸರಕಾರವು ಸೆಪ್ಟೆಂಬರ್ 15 ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಪ್ರಜಾಪ್ರಭುತ್ವ ಜಾಗೃತಿ ಮೂಡಿಸಲು ಬೀದರ್ ನಿಂದ ಚಾಮರಾಜನಗರ ಜಿಲ್ಲೆಯವರೆಗೆ ಮಾನವ ಸರಪಳಿ ನಿರ್ಮಾಣ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆಗೊಂಡಿತ್ತು. ಪ್ರಜಾಪ್ರಭುತ್ವ ದಿನಾಚರಣೆಯ ಮಾನವ ಸರಪಳಿಯ ನಿರ್ಮಾಣ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಜಿಲ್ಲೆಗಳಿಗೆ ಪ್ರಶಸ್ತಿ ನೀಡಲಾಗುತ್ತಿದ್ದು, ಅದರಂತೆ ದಕ್ಷಿಣ ಕನ್ನಡ ಜಿಲ್ಲೆ ಅತ್ಯಂತ ಉದ್ದದ ಮಾನವ ಸರಪಳಿ ವಿಭಾಗದಲ್ಲಿ ದ್ವಿತೀಯ ಸ್ಥಾನಕ್ಕೆ ಆಯ್ಕೆಯಾಗಿದೆ. ನವೆಂಬರ್ […]

Continue Reading