ಡಿಕೆಶಿ ಪಟ್ಟಾಭಿಷೇಕಕ್ಕೆ ಕೌಂಟ್ ಡೌನ್.. ಕನಕಪುರ ಬಂಡೆ ಸಿಎಂ ಕನಸು ನನಸಾಗಲು ನೆರವಾದ ಪ್ರಿಯಾಂಕಾ ಗಾಂಧಿ

ಈಗಲೇ ನಾಯಕತ್ವ ಬದಲಾವಣೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಲಾಭವಾಗಬಹುದು ಅನ್ನುವ ದೂರದೃಷ್ಟಿ ಕರ್ನಾಟಕ ರಾಜಕೀಯದ ಭವಿಷ್ಯ ನಿರ್ಧಾರವಾಗುವ ಸಮಯ ಹತ್ತಿರ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆಶಿ ನಡುವಿನ ನಾಯಕತ್ವದ ಸಂಘರ್ಷ ಈಗ ಅಂತಿಮ ಹಂತಕ್ಕೆ ತಲುಪಿದ್ದು ಹೈಕಮಾಂಡ್ ಸರಣಿ ಸಭೆಗಳನ್ನು ನಡೆಸುತ್ತಿದೆ. ಈ ಮಧ್ಯೆ ಪ್ರಿಯಾಂಕಾ ಗಾಂಧಿ ಅವರು ಡಿ.ಕೆ ಶಿವಕುಮಾರ್ ಪರ ಬ್ಯಾಟಿಂಗ್ ಮಾಡಿರುವುದು ಸಿದ್ದರಾಮಯ್ಯ ಬಣದಲ್ಲಿ ಭಾರಿ ತಲ್ಲಣ ಮೂಡಿಸಿದೆ. ಪ್ರಬಲ ಒಕ್ಕಲಿಗ ಸಮುದಾಯವನ್ನು ಪ್ರತಿನಿಧಿಸುವ ಡಿಕೆ ಶಿವಕುಮಾರ್ ಪಕ್ಷದ […]

Continue Reading

ಬೇಕರಿ ಪದಾರ್ಥ, ಮಿಕ್ಸರ್, ಚಿಪ್ಸ್, ಬಣ್ಣ ಬಣ್ಣದ ಸ್ವೀಟ್ ಗಳಲ್ಲಿ ನಿಷೇಧಿತ ಕೃತಕ ಬಣ್ಣಗಳ ಬಳಕೆ

ಕ್ಯಾನ್ಸರ್ ಕಾರಕ ರಾಸಾಯನಿಕ ಪತ್ತೆ: ತಿನ್ನಲು ಯೋಗ್ಯವಲ್ಲ: ಆಹಾರ ಇಲಾಖೆ ಬೇಕರಿ ಪದಾರ್ಥ, ಮಿಕ್ಸರ್, ಚಿಪ್ಸ್ ಹಾಗೂ ಬಣ್ಣ ಬಣ್ಣದ ಸ್ವೀಟ್ ಗಳು ಮಾನವನ ಬಳಕೆಗೆ ಅಸುರಕ್ಷಿತವಾಗಿವೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ನಿರ್ವಹಣಾ ಇಲಾಖೆ ಆಘಾತಕಾರಿ ಮಾಹಿತಿಯೊಂದನ್ನು ಹಂಚಿಕೊಂಡಿದೆ. ಆಹಾರ ಸುರಕ್ಷತಾ ಅಧಿಕಾರಿಗಳು ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಹೋಟೆಲ್ ಗಳು, ಬೇಕರಿಗಳು, ಸ್ವೀಟ್ ಸ್ಟಾಲ್ ಗಳು ಮತ್ತು ಉತ್ಪಾದನಾ ಘಟಕಗಳಿಂದ ಒಟ್ಟು 35,639 ಆಹಾರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಇವುಗಳಲ್ಲಿ ಒಟ್ಟಾರೆ […]

Continue Reading

ಒಂದೇ ಕುಟುಂಬದ ಹತ್ತು ಮಂದಿ ಜಲ ಸಮಾಧಿ. ಕಪ್ಪೆ ಚಿಪ್ಪು ತಂದ ಆಪತ್ತು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಭೀಕರ ಜಲ ದುರಂತವೊಂದು ಸಂಭವಿಸಿದ್ದು, ಕಪ್ಪೆಚಿಪ್ಪು ಆರಿಸಲು ನದಿಗೆ ಇಳಿದಿದ್ದ ಒಂದೇ ಕುಟುಂಬಕ್ಕೆ ಸೇರಿದ ಹತ್ತು ಜನ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ​ ಭಟ್ಕಳ ತಾಲೂಕಿನ ಶಿರಾಲಿ ಸಮೀಪ ತಟ್ಟಿಹಕ್ಕಲ ಕಳಿನಟ್ಟಿ ಹೊಳೆಯಲ್ಲಿ ಭಾನುವಾರ ಈ ಭೀಕರ ದುರಂತ ಸಂಭವಿಸಿದೆ. ಕಪ್ಪೆಚಿಪ್ಪು ಆರಿಸಲು ಇಳಿದವರು ಒಬ್ಬರ ಕೈಯನ್ನು ಮತ್ತೊಬ್ಬರು ಹಿಡಿದು ಸಾಗುತ್ತಿದ್ದರು ಎನ್ನಲಾಗಿದೆ. ಈ ವೇಳೆ ಹತ್ತು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನದಿಯಲ್ಲಿ ನೀರಿನ […]

Continue Reading

ಫೈನಲ್ ಸೆಟ್ಲ್ ಮೆಂಟಿಗೆ ಸಿದ್ರಾಮಯ್ಯ ರೆಡಿ; ರಾಹುಲ್ ಗೆ ಕಾಡುತ್ತಿರುವ ಚಿಂತೆ, ಕೈ ಪಾಳಯದಿಂದ ದಿಲ್ಲಿ ಅಭ್ಯರ್ಥಿ.?

ಕೆ.ಸಿ.ವೇಣು ಮುನಿಸು, ಸಂತೈಸುವ ರಾಹುಲ್ ಯತ್ನಕ್ಕೆ ಮನ್ಸೂರ್ ಅಲಿ ಖಾನ್ ಆಸರೆ ✍️. ಆರ್.ಟಿ.ವಿಠ್ಠಲಮೂರ್ತಿ ಸಿಎಂ ಸಿದ್ಧರಾಮಯ್ಯ ಈ ಬಾರಿ ಫೈನಲ್ ಸೆಟ್ಲ್ ಮೆಂಟ್ ಗೆ ಸಜ್ಜಾಗಿದ್ದಾರೆ. ಅಷ್ಟೇ ಅಲ್ಲ, ‘ನಿಮ್ಮ ಜತೆ ಮಾತನಾಡಬೇಕು ಟೈಮು ಕೊಡಿ’ ಅಂತ ರಾಹುಲ್ ಗಾಂಧಿಯವರನ್ನು ಕೇಳಿಕೊಂಡಿದ್ದಾರೆ. ಅಂದ ಹಾಗೆ ಸಿದ್ಧರಾಮಯ್ಯ ಅವರು ಸೆಟ್ಲ್ ಮಾಡಿಕೊಳ್ಳಲು ನಿರ್ಧರಿಸಿರುವ ವಿಷಯ ಯಾವುದು ಎಂಬುದು ರಹಸ್ಯವೇನಲ್ಲ. ಕಳೆದ ಎರಡು ವರ್ಷಕ್ಕೂ ಹೆಚ್ಚು ಕಾಲದಿಂದ ವೆಂಕಟೇಶ್ವರ ಸ್ತೋತ್ರದಂತಾಗಿರುವ ಅಧಿಕಾರ ಹಂಚಿಕೆಯ ಮಾತನ್ನು ಸೆಟ್ಲ್ ಮಾಡಿಕೊಳ್ಳುವುದು ಸಿದ್ಧರಾಮಯ್ಯ […]

Continue Reading

ಮಹಾ ವಂಚಕ, ಅವತಾರ ಪುರುಷ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣನವರ್ ಜೈಲು ಪಾಲು

ಸಿನಿಮಾ ಸ್ಟೈಲ್‌ನಲ್ಲಿ ಅಬ್ಬರಿಸುತ್ತಿದ್ದ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣನವರ್ ಅಸಲಿ ಬಣ್ಣ ಕೊನೆಗೂ ಬಯಲಾಗಿದೆ. ಮುಗ್ಧ ಜನರಿಗೆ ವಾರ್ಷಿಕ ಬರೋಬ್ಬರಿ 36% ಬಡ್ಡಿಯ ಆಮಿಷ ಒಡ್ಡಿ, ಬರೊಬ್ಬರಿ 4,500 ಕೋಟಿ ರೂಪಾಯಿ ಲೂಟಿ ಹೊಡೆದಿದ್ದ ಈ ಮಹಾ ವಂಚಕನ ಸಾಮ್ರಾಜ್ಯದ ಮೇಲೆ ಜಿಲ್ಲಾಡಳಿತ ಹಾಗೂ ಪೊಲೀಸರು ನಡುರಾತ್ರಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ಬಂಧಿಸಿದ್ದಾರೆ. ದಾಳಿಯ ಸಮಯದಲ್ಲಿ ಸಿಕ್ಕ ರಹಸ್ಯ ದಾಖಲೆಗಳನ್ನು ನೋಡಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಹಣ ವಂಚನೆ ಆರೋಪದಡಿ ಅವತಾರ ಪುರುಷ ಶಿವಾನಂದ ನೀಲಣ್ಣವರ್ ವಿರುದ್ಧ […]

Continue Reading

ವಚನಾನಂದ ಸ್ವಾಮೀಜಿಯಿಂದ ಲೈಂಗಿಕ ದೌರ್ಜನ್ಯ; ಪೋಕ್ಸೋ ಪ್ರಕರಣ ದಾಖಲು

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪದಚ್ಯುತ ಪೀಠಾಧಿಪತಿ ವಚನಾನಂದ ಸ್ವಾಮೀಜಿ ಅವರ ವಿರುದ್ಧ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದ್ದು, ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕನ ತಾಯಿ ಮೇ 7ರಂದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಠಾಣೆಯಲ್ಲಿ ದೂರು ನೀಡಿದ್ದರು. ಘಟನೆ ನಡೆದ ಸ್ಥಳ ಹರಿಹರ ಗ್ರಾಮಾಂತರ ಠಾಣಾ ವ್ಯಾಪ್ತಿಗೆ ಬರುವುದರಿಂದ, ಅಲ್ಲಿ ಮೊದಲು ‘ಜೀರೋ ಎಫ್‌ಐಆರ್’ ದಾಖಲಿಸಿ ನಂತರ ಹರಿಹರಕ್ಕೆ ಪ್ರಕರಣವನ್ನು ವರ್ಗಾಯಿಸಲಾಯಿತು. ಮೇ 8ರಂದು ಹರಿಹರ ಪೊಲೀಸರು ಪೋಕ್ಸೋ […]

Continue Reading

ಸಿದ್ದು ಸಂದೇಶ ರಾಹುಲ್ ಕಿವಿಗೆ ತಲುಪಿತು; ಬಿಜೆಪಿ ವರಿಷ್ಟರ ಪ್ಲಾನು; ಆರೆಸ್ಸೆಸ್ ಕರ್ನಾಟಕದಲ್ಲಿ ರಂಗಪ್ರವೇಶ

ಕರ್ನಾಟಕದಲ್ಲಿ SIR ನಡೆದರೆ, ರಾಜ್ಯ ಕಾಂಗ್ರೆಸ್ 1994 ರ ಪರಿಸ್ಥಿತಿಗೆ ✍️. ಆರ್.ಟಿ.ವಿಠ್ಠಲಮೂರ್ತಿ ತೃಣಮೂಲ ಕಾಂಗ್ರೆಸ್ ನ ಅಧಿನಾಯಕಿ ಮಮತಾ ಬ್ಯಾನರ್ಜಿ ಕುಸಿದು ಬಿದ್ದ ರೀತಿಯಿಂದ ದಿಲ್ಲಿಯ ಕಾಂಗ್ರೆಸ್ ವರಿಷ್ಟರಿಗೆ ಚಿಂತೆ ಸುರುವಾಗಿದೆ. ಅಷ್ಟೇ ಅಲ್ಲ, ಈ ಚಿಂತೆಯ ಪರಿಣಾಮವಾಗಿ ಅವರೀಗ ಕರ್ನಾಟಕದ ಮೇಲೆ ಕಣ್ಣು ನೆಟ್ಟಿದ್ದಾರೆ. ಅಂದ ಹಾಗೆ ಪಶ್ಚಿಮ ಬಂಗಾಳವನ್ನು ಅಭೇದ್ಯ ಕೋಟೆಯನ್ನಾಗಿ ಮಾಡಿಕೊಂಡಿದ್ದ ಮಮತಾ ಬ್ಯಾನರ್ಜಿ ಇತ್ತೀಚಿನ ಚುನಾವಣೆಯಲ್ಲಿ ಕುಸಿದು ಬಿದ್ದರು. ಬಿಜೆಪಿಯ ಮಾರಕ ಧಾಳಿಯ ಎದುರು ಅವರ ತೃಣಮೂಲ ಕಾಂಗ್ರೆಸ್‌ ಪಕ್ಷ […]

Continue Reading

ಅಪ್ರಾಪ್ತ ವಯಸ್ಸಿನಲ್ಲಿದ್ದಾಗ ಮಾಡಿದ ಅಪರಾಧ ಕೃತ್ಯಕ್ಕೆ ವಯಸ್ಕನಾದಾಗ ಬಂಧನ ಹೊರಡಿಸಲು ಅಧಿಕಾವಿಲ್ಲ: ಹೈಕೋರ್ಟ್

ಅಪ್ರಾಪ್ತ ವಯಸ್ಸಿನಲ್ಲಿದ್ದಾಗ ಎಸಗಿರುವ ಅಪರಾಧಗಳನ್ನು ಆಧಾರವಾಗಿಟ್ಟುಕೊಂಡು ಗೂಂಡಾ ಕಾಯಿದೆಯಡಿ ಮುನ್ನೆಚ್ಚರಿಕಾ ಕ್ರಮವಾಗಿ ಬಂಧನ ಆದೇಶ ಹೊರಡಿಸಲು ಅಧಿಕಾರವಿಲ್ಲ ಎಂದು ಹೈಕೋರ್ಟ್​ ಆದೇಶಿಸಿದೆ. ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರುವ ಬಂಧಿತರಾಗಿರುವ ಅಭಿಚೆರ್ಲಿ ಅಲಿಯಾಸ್​ ಅಭಿ ಎಂಬುವವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಸೂಚನೆ ನೀಡಿದೆ. ತಮ್ಮ ಮಗನನ್ನು ಬಂಧಿಸಿರುವ ಆದೇಶವನ್ನು ಪ್ರಶ್ನಿಸಿ ಕೋಲಾರ ಜಿಲ್ಲೆಯ ಕೆಜಿಎಫ್​ನ ಮೇರಿ ಉಷಾ ಎಂಬುವರು ಸಲ್ಲಿಸಿದ್ದ ಹೆಬಿಯಸ್​ ಕಾರ್ಪಸ್​ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ತಾರಾ ವಿತಸ್ತ ಗಂಜು ಅವರಿದ್ದ […]

Continue Reading

ರೇಷನ್ ಕಾರ್ಡ್ ತಿದ್ದುಪಡಿ ಕಾರ್ಯಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಹಸಿರು ನಿಶಾನೆ; ಹೊಸ ಪಡಿತರ ಚೀಟಿಗೂ ಅರ್ಜಿ ಸಲ್ಲಿಸಬಹುದು

ದೀರ್ಘಕಾಲದಿಂದ ಕಾಯುತ್ತಿದ್ದ ರೇಷನ್ ಕಾರ್ಡ್ ತಿದ್ದುಪಡಿ ಕಾರ್ಯಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಹಸಿರು ನಿಶಾನೆ ತೋರಿಸಿದೆ. ತಮ್ಮ ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ, ಹೆಸರು ತೆಗೆದುಹಾಕುವುದು ಅಥವಾ ವಿಳಾಸ ಬದಲಾವಣೆಯಂತಹ ತಿದ್ದುಪಡಿಗಳಿದ್ದರೆ ಈಗ ಸರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಸರ್ವರ್ ಸಮಸ್ಯೆ ಅಥವಾ ತಾಂತ್ರಿಕ ಕಾರಣಗಳಿಂದಾಗಿ ಈ ಪ್ರಕ್ರಿಯೆ ವಿಳಂಬವಾಗಿತ್ತು, ಆದರೆ ಈಗ ಇಲಾಖೆಯು ವ್ಯವಸ್ಥೆಯನ್ನು ಸರಿಪಡಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿದೆ. ​ಹೊಸ ಅರ್ಜಿ ಸಲ್ಲಿಕೆಗೆ ಅವಕಾಶ​ಕೇವಲ ತಿದ್ದುಪಡಿ ಮಾತ್ರವಲ್ಲದೆ, ಹೊಸದಾಗಿ ಪಡಿತರ […]

Continue Reading

ರಾಜ್ಯದ ನಾಯಕತ್ವ ಬದಲಾವಣೆ, ಸಚಿವ ಸಂಪುಟ ಪುನಾರಚನೆಯ ಗೊಂದಲಗಳಿಗೆ ಅಂತಿಮ ತೆರೆ ಎಳೆಯಲು ಮೂಹೂರ್ತ ಫಿಕ್ಸ್

ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿರುವ ನಾಯಕತ್ವ ಬದಲಾವಣೆಯ ಕುರಿತಾದ ಚರ್ಚೆಗಳಿಗೆ ಇದೀಗ ಹೈಕಮಾಂಡ್ ತೆರೆ ಎಳೆಯಲು ಮುಂದಾಗಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಸಿ ನಡುವಿನ ಪವರ್ ಫೈಟ್‌ಗೆ ಮುಕ್ತಾಯ ಹಾಡಲು ದೆಹಲಿ ನಾಯಕರು ಮುಹೂರ್ತ ಫಿಕ್ಸ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ, ಮೇ 15ರ ಒಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿಕೊಳ್ಳಲು ಹೈಕಮಾಂಡ್ ತೀರ್ಮಾನಿಸಿದೆ. ಈ ಸಭೆಯಲ್ಲಿ ರಾಜ್ಯದ ನಾಯಕತ್ವ ಬದಲಾವಣೆ ಹಾಗೂ ಸಂಪುಟ ಪುನಾರಚನೆಯ ಕುರಿತು ಸುದೀರ್ಘ […]

Continue Reading