ದೇವೆಗೌಡರ ಸೊಸೆ ಕಾರಿಗೆ ಬೈಕ್​ ಡಿಕ್ಕಿ; ಬೈಕನ್ನು ಸುಟ್ಟು ಹಾಕುವಂತೆ ಕರೆ. ಸ್ಥಳೀಯರಿಗೂ ಭವಾನಿ ರೇವಣ್ಣ ತರಾಟೆ

ತನ್ನ ಕಾರಿಗೆ ಬೈಕ್​ ಸವಾರನೊಬ್ಬ ಡಿಕ್ಕಿ ಹೊಡೆದಿದ್ದಕ್ಕೆ ಆಕ್ರೋಶಗೊಂಡ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರ ಸೊಸೆ ಭವಾನಿ ರೇವಣ್ಣ, ಮಾನವೀಯತೆ ಮರೆತು ಬೈಕ್​ ಸವಾರನನ್ನು ಹಿಗ್ಗಾಮುಗ್ಗಾ ನಿಂದಿಸಿದ್ದಕ್ಕೆ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಭವಾನಿ ರೇವಣ್ಣ ಅವರು ಸಾಲಿಗ್ರಾಮದಿಂದ ಹೊಳೆನರಸೀಪುರಕ್ಕೆ ಪ್ರಯಾಣಿಸುತ್ತಿದ್ದಾಗ ರಾಂಪುರ ಗ್ರಾಮದ ಗೇಟ್‌ನಲ್ಲಿ ಈ ಘಟನೆ ಸಂಭವಿಸಿದೆ. ಭವಾನಿ ರೇವಣ್ಣ ಸಂಚರಿಸುತ್ತಿದ್ದ ಕಾರಿಗೆ ತಪ್ಪಾದ ಮಾರ್ಗದಲ್ಲಿ ಬಂದ ಬೈಕ್ ಸವಾರನೋರ್ವ ಡಿಕ್ಕಿ ಹೊಡೆದಿದ್ದಾನೆ. ಇದರ ಪರಿಣಾಮ ಕಾರಿನ ಮುಂಭಾಗ ಕೊಂಚ ಜಖಂಗೊಂಡಿತು. ಕೂಡಲೇ ಕೆಳಗೆ ಇಳಿದು […]

Continue Reading

ಸರ್ಕಾರಿ ದಾಖಲೆ ಲಭ್ಯವಿಲ್ಲವೆಂದು ಉತ್ತರಿಸಿದರೆ, ಕ್ರಿಮಿನಲ್ ಕೇಸ್ ಬೀಳಬಹುದು

ಕಂದಾಯ ಇಲಾಖೆ, ಸಬ್ ರಿಜಿಸ್ಟ್ರಾರ್ ಇನ್ನಿತರ ಸರ್ಕಾರಿ ಕಚೇರಿಗಳಲ್ಲಿ ಸರ್ಕಾರದ ದಾಖಲೆಗಳನ್ನು ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ ಕಾಯ್ದೆ-2010 ರಂತೆ ಸಂರಕ್ಷಿಸಬೇಕಾಗಿರುವುದು ಪ್ರತಿಯೊಬ್ಬ ಸರ್ಕಾರಿ ಅಧಿಕಾರಿಯ ಕರ್ತವ್ಯವಾಗಿದೆ. ಅವುಗಳ ಮಾಹಿತಿಗಳನ್ನು ಕೇಳಿದರೆ “ಕಡತ ಲಭ್ಯವಿಲ್ಲ” ಎಂಬ ಸಿದ್ಧ ಉತ್ತರ ಕೊಡುವವರಿಗೆ ಜೈಲು ಶಿಕ್ಷೆ ಕಾದಿದೆ ಎಂಬುದು ಕರ್ನಾಟಕ ಮಾಹಿತಿ ಆಯೋಗ ನೀಡಿರುವ ಆದೇಶದಿಂದ ತಿಳಿದುಬರುತ್ತದೆ. ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ ಕಾಯ್ದೆ-2010 2010 ರಲ್ಲಿ ಜಾರಿಯಾದ ಈ ಕಾನೂನಿನಡಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸರ್ಕಾರದ ದಾಖಲೆಗಳನ್ನು ಸಂರಕ್ಷಿಸಬೇಕಿರುತ್ತದೆ. […]

Continue Reading

‘ಗುಮ್ಮ’ ತೋರಿಸಿ ಬೆದರಿಸಲಾಗುತ್ತಿದೆಯೇ ಮುಸ್ಲಿಂ ಸಮುದಾಯವನ್ನು.?

ಕಾಂಗ್ರೆಸ್ ಮುಸ್ಲಿಂ ಮುಖಂಡರು ‘ಹಕ್ಕು’ ಕೇಳಲು ಯಾಕೆ ಹಿಂಜರಿಯುತ್ತಿದ್ದಾರೆ.? ಬಿಟ್ಟಿ.. ಬೇಡ, ಸಂವಿಧಾನ ಬದ್ದವಾದ ಹಕ್ಕನ್ನು ಜಾರಿ ಮಾಡಿ. ಚುನಾವಣೆ ಹತ್ತಿರ ಬರುವಾಗ ಪ್ರತ್ಯಕ್ಷರಾಗುವ ಮುಸ್ಲಿಂ ಮುಖಂಡರು ಚುನಾವಣೆ ಮುಗಿದ ನಂತರ ಯಾವ ಬಿಲದಲ್ಲಿ ಅಡಗಿಕೂತಿದ್ದಾರೆ ಅನ್ನುವ ಸಂಶಯ ಸಮುದಾಯದ ಜನರಲ್ಲಿ ಕಾಡುವುದಂತೂ ಸತ್ಯ. ಇದಕ್ಕೂ ಕಾರಣವಿದೆ. ಚುನಾವಣೆ ಸಮಯದಲ್ಲಿ ಬಿಜೆಪಿ ಎಂಬ ಗುಮ್ಮ ನನ್ನು ತೋರಿಸಿ, ಬಿಜೆಪಿ ಬಂದರೆ ಹಾಗಾಗುತ್ತದೆ? ಹೀಗಾಗುತ್ತದೆ? ಎಂದೆಲ್ಲಾ ಸಮುದಾಯದ ಮತದಾರರನ್ನು ಬ್ರೈನ್ ವಾಶ್ ಮಾಡುವ ಕೆಲವು ಕಾಂಗಿ ಮುಸ್ಲಿಂ ಮುಖಂಡರು […]

Continue Reading

ಪ್ರತಿಷ್ಠಿತ ವಿಮ್ಸ್ ಆಸ್ಪತ್ರೆಯ ನಿರ್ದೇಶಕರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ

ಬಳ್ಳಾರಿ ಜಿಲ್ಲೆಯ ಪ್ರತಿಷ್ಠಿತ ವಿಮ್ಸ್ ಆಸ್ಪತ್ರೆಯನಿರ್ದೇಶಕ ಗಂಗಾಧರ್ ಗೌಡ ವಿರುದ್ಧ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ವಿಮ್ಸ್​ನ ಟ್ರಾಮಾ ಕೇರ್ ಸೆಂಟರ್​ನಲ್ಲಿ ಸಿಸ್ಟಮ್ ಇಂಜಿನಿಯರ್ ಆಗಿದ್ದ ಮಹಿಳೆ ಬಳ್ಳಾರಿಯ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದು, ಗಂಗಾಧರ್ ಗೌಡ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ನೇಮಕಾತಿ ಆದೇಶ ಪ್ರತಿ ಪಡೆಯಲು ಹೋದಾಗ ಕೈ ಚಾಚಿ ಅಪ್ಪಿಕೊಳ್ಳಲು ಬಂದಿದ್ದರು. ಸಹಕಾರ ಮಾಡದಿದ್ದಕ್ಕೆ ಕೆಲಸದಿಂದ ವಜಾಗೊಳಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ. ವಿಮ್ಸ್ ಸಿಬ್ಬಂದಿಗಳಾಗಿರುವ ಪಾರ್ವತಿ ಹಾಗೂ ಶಿವು ನಾಯ್ಕ […]

Continue Reading

40% ಕಮೀಷನ್ ಪ್ರಕರಣ; ನಾಗಮೋಹನ್‌ ದಾಸ್‌ ಆಯೋಗಕ್ಕೆ ಗುತ್ತಿಗೆದಾರರ ಸಂಘದಿಂದ ದೂರು ಮತ್ತು 600ಕ್ಕೂ ಮಿಕ್ಕ ಪುಟಗಳ ದಾಖಲೆ ಸಲ್ಲಿಕೆ

ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿವಿಧ ಇಲಾಖೆಗಳ ಕಾಮಗಾರಿಗಳಲ್ಲಿ ಶೇಕಡ 40ರಷ್ಟು ಕಮಿಷನ್‌ ಪಡೆಯಲಾಗುತ್ತಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಗುತ್ತಿಗೆದಾರರ ಸಂಘವು ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ ದಾಸ್‌ ನೇತೃತ್ವದ ಆಯೋಗಕ್ಕೆ ಮಂಗಳವಾರ ದೂರು ದಾಖಲಿಸಿದೆ. ಇತರ ಪದಾಧಿಕಾರಿಗಳೊಂದಿಗೆ ನಿಯೋಗದಲ್ಲಿ ತೆರಳಿ ನಾಗಮೋಹನ್‌ ದಾಸ್‌ ಅವರನ್ನು ಭೇಟಿ ಮಾಡಿದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ, ದೂರು ಮತ್ತು 600ಕ್ಕೂ ಹೆಚ್ಚು ಪುಟಗಳಷ್ಟು ದಾಖಲೆಗಳನ್ನು ಸಲ್ಲಿಸಿದರು. ‘ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರದ ಅವಧಿಯಲ್ಲಿ ಕಾಮಗಾರಿಗಳಲ್ಲಿ ಶೇ 40ರಷ್ಟು […]

Continue Reading

ಮಕ್ಕಳ ಮಾರಾಟ ದಂದೆಯನ್ನು ಪತ್ತೆಹಚ್ಚಿದ ಬೆಂಗಳೂರು ಸಿಸಿಬಿ ಪೊಲೀಸರು; ಹೆರುವ ಬಡ ತಾಯಂದಿರೇ ಇವರ ಟಾರ್ಗೆಟ್, ನಾಲ್ವರ ಬಂಧನ

ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣ ಬಳಿಕ ಮತ್ತೊಂದು ದಂಧೆ ಬೆಳಕಿಗೆ ಬಂದಿದ್ದು, ನಗರದಲ್ಲಿ ಹಸುಗೂಸುಗಳ ಮಾರಾಟದ ಕರಾಳ ದಂಧೆ ಬಯಲಾಗಿದೆ. ಎಳೆ ಕಂದಮ್ಮಗಳನ್ನು ಮಾರಾಟ ಮಾಡುವ ಬೃಹತ್ ಜಾಲವೊಂದನ್ನು ಬಂಗಳೂರು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಈವರೆಗೆ ಸುಮಾರು 55 ಕ್ಕು ಹೆಚ್ಚು ಮಕ್ಕಳ ಮಾರಾಟವಾಗಿದ್ದು, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಹೆಚ್ಚು ಮಕ್ಕಳನ್ನು ಮಾರಾಟ ಮಾಡಲಾಗಿದೆ ಎನ್ನಲಾಗಿದೆ.. ಮಾರಾಟವಾಗಿದ್ದ 10 ಮಕ್ಕಳ ವಿಳಾಸ ಪತ್ತೆ ಹಚ್ಚಿರುವ ಸಿಸಿಬಿ ಪೊಲೀಸರು ಹೆಚ್ಚಿನ ತನಿಖೆ ಕೈಕೊಂಡಿದ್ದಾರೆ. ಒಂದು ಮಗು ಹೆತ್ತು […]

Continue Reading

ಬಿಜೆಪಿಯ ಹಾಲಿ ಹತ್ತು ಮಂದಿ ಸಂಸದರಿಗೆ ಕೊಕ್ ನೀಡುವ ಸಾಧ್ಯತೆ; ನಿರಾಣಿ, ಸುಧಾಕರ್ ಗೆ ಟಿಕೆಟ್ ಪಕ್ಕಾ.! ಕಟೀಲ್, ಅನಂತ್ ಕುಮಾರ್ ಡೌಟ್.!

2023ರ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿರುವ ಬಿಜೆಪಿ ಅಭ್ಯರ್ಥಿಗಳ ಕಣ್ಣು ಈಗ ಲೋಕಸಭೆ ಚುನಾವಣೆ ಮೇಲೆ ನೆಟ್ಟಿದೆ. ಚುನಾವಣೆಯಲ್ಲಿ ಸೋತಿರುವ ಮುರುಗೇಶ್ ನಿರಾಣಿ, ಕೆ ಸುಧಾಕರ್, ಸಿ.ಟಿ ರವಿ ಸೇರಿದಂತೆ ಅನೇಕರು ಮುಂದಿನ ವರ್ಷ ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ ಎನ್ನಲಾಗಿದೆ. ಹಾಗೆಯೇ ಜಿ.ಎಂ.ಸಿದ್ದೇಶ್ವರ್, ಸುರೇಶ ಅಂಗಡಿ, ಬಿ.ಎನ್.ಬಚ್ಚೇಗೌಡ, ಜಿ.ಎಸ್ ಬಸವರಾಜ್, ಡಿ.ವಿ.ಸದಾನಂದ ಗೌಡ, ಪಿ.ಸಿ. ಗದ್ದಿಗೌಡರ, ಕರಡಿ ಸಂಗಣ್ಣ, ಉದಾಸಿ ಸೇರಿದಂತೆ ಕನಿಷ್ಠ 10 ಹಾಲಿ ಬಿಜೆಪಿ ಸಂಸದರು ಕಣಕ್ಕಿಳಿಯುವ ಸಾಧ್ಯತೆಯಿಲ್ಲ. […]

Continue Reading

ಮೊದಲನೇ ಪತ್ನಿ ಬದುಕಿದ್ದಾಗ ಎರಡನೇ ವಿವಾಹಕ್ಕೆ ಮಾನ್ಯತೆಯಿಲ್ಲ; ಎರಡನೇ ಪತ್ನಿಗೆ ಪಿಂಚಣಿಯ ಹಕ್ಕು ನೀಡಲಾಗುವುದಿಲ್ಲ: ಹೈಕೋರ್ಟ್

ಮೊದಲ ಪತ್ನಿಗೆ ಮಾತ್ರ ಮೃತ ಪತಿಯ ಪಿಂಚಣಿ ಪಡೆಯುವ ಅಧಿಕಾರವಿದೆ. ಮೊದಲನೇ ಪತ್ನಿ ಬದುಕಿದ್ದಾಗ ಎರಡನೇ ವಿವಾಹಕ್ಕೆ ಮಾನ್ಯತೆಯಿಲ್ಲ. ಹಾಗಾಗಿ ಎರಡನೇ ಪತ್ನಿಗೆ ಪಿಂಚಣಿಯ ಹಕ್ಕು ನೀಡಲಾಗುವುದಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ. ಎರಡನೇ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ ವರ್ಲೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು “ಹಿಂದೂ ಧರ್ಮದಲ್ಲಿ ಏಕಪತ್ನಿತ್ವ ಚಾಲ್ತಿಯಲ್ಲಿದೆ. ಮೊದಲನೇ ಪತ್ನಿ ಜೀವಂತವಾಗಿರಬೇಕಾದರೆ ಎರಡನೇ […]

Continue Reading

ಸರಿ-ಸುಮಾರು 900 ಕ್ಕೂ ವಿುಕ್ಕ ಗರ್ಭಪಾತ ಮಾಡಿಸಿ, ಹೆಣ್ಣು ಭ್ರೂಣ ಹತ್ಯೆ ಮಾಡಿರುವ ಆರೋಪಿ ವೈದ್ಯನ ಬಂಧನ

ಭ್ರೂಣ ಲಿಂಗ ಪತ್ತೆ ಹಾಗೂ ಗರ್ಭಪಾತ ಪ್ರಕರಣದ ತನಿಖೆ ಮುಂದುವರಿಸಿರುವ ಬೈಯಪ್ಪನಹಳ್ಳಿ ಠಾಣೆ ಪೊಲೀಸರು, ಮೈಸೂರಿನ ವೈದ್ಯ ಡಾ. ಚಂದನ್ ಬಲ್ಲಾಳ್ ಹಾಗೂ ಲ್ಯಾಬ್ ಟೆಕ್ನಿಷಿಯನ್ ನಿಸಾರ್ ಅವರನ್ನು ಬಂಧಿಸಿದ್ದಾರೆ. ಮೈಸೂರಿನ‌ ಮಾತಾ ಆಸ್ಪತ್ರೆ ಹಾಗೂ ಅಲ್ಲಿನ ರಾಜ್‌ಕುಮಾರ್ ರಸ್ತೆಯಲ್ಲಿರುವ ಆಯುರ್ವೇದಿಕ್ ಪೈಲ್ ಡೇ ಕೇರ್ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಡಾ. ಚಂದನ್, ಸರಿ ಸುಮಾರು 900 ಕ್ಕೂ ವಿುಕ್ಕ ಗರ್ಭಪಾತ ಮಾಡಿಸಿ, ಹೆಣ್ಣು ಭ್ರೂಣ ಹತ್ಯೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸ್ ಮೂಲಗಳು […]

Continue Reading

ಅಪ್ಪ ‘ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟುವೆ’.. ಮಗ ‘ಕಠೋರ ಹಿಂದು’..! ಇದು ರಾಜಕಾರಣದ ವ್ಯಭಿಚಾರ ಸ್ಟೋರಿ.!

ಅಂದು ಓಟಿಗಾಗಿ ದರ್ಗಾ ಸುತ್ತಿ ಟೊಪ್ಪಿ ಹಾಕಿದರು; ಇಂದು ಓಟಿಗಾಗಿ ದತ್ತಮಾಲೆ ಧರಿಸಲು ಮುಂದಾದರು.! ಅಬ್ಬಬ್ಬಾ..ಇವರ ವೆರೈಟಿ ವೆರೈಟಿ ಮಾತು ಕೇಳಿ ಒಂದೊಮ್ಮೆ ಮುಸ್ಲಿಂ ಸಮುದಾಯ ನಮ್ಮ ರಕ್ಷಣೆಗೆ ದೇವಲೋಕದಿಂದ ಇಳಿದು ಬಂದವರು ಎಂದು ನಂಬಿದ್ದರು. ಅಷ್ಟರಮಟ್ಟಿಗೆ ಮುಸ್ಲಿಂ ಸಮುದಾಯವನ್ನು ನಂಬಿಸಿ ಬೆನ್ನಿಗೆ ಚೂರಿ ಹಾಕಿ ತಮ್ಮ ರಾಜಕೀಯ ಅಧಿಕಾರ, ದುಡ್ಡು ಕಾಸುಗಳನ್ನು ಸಂಪಾದಿಸಿದರು. ಕೇವಲ ಮುಸಲ್ಮಾನರನ್ನು ನಂಬಿಸಿ, ಇದೀಗ ಮೋಸ ಮಾಡಿದ ಪರಿ ಇದು. ರಾಜಕೀಯ ವ್ಯಭಿಚಾರ ಅಂದರೆ ಏನು ಎಂಬುದನ್ನು ಅಪ್ಪ-ಮಕ್ಕಳಿಂದ ನೋಡಿ ಕಲಿಯಬೇಕು. […]

Continue Reading