ಹೆಣ್ಣು ಮಕ್ಕಳು, ವೃದ್ಧರು ಕಿಡ್ನಾಪ್ ಆಗುವುದನ್ನು ತಪ್ಪಿಸಲು ನೀವು ಭಿಕ್ಷೆ ನೀಡಬೇಡಿ.. ಭಿಕ್ಷಾಟನೆ ದಂಧೆಯ ಕರಾಳತೆಯ ನೈಜ ದರ್ಶನ..!

ಭಿಕ್ಷಾಟನೆ ಅನ್ನುವುದು ಕಾನೂನು ಬಾಹಿರ ಚಟುವಟಿಕೆ ಆಗಿದ್ದು, ‘ನಾವು ಅಯ್ಯೋ ಪಾಪ’ ಎಂದು ಭಿಕ್ಷುಕರಿಗೆ ದುಡ್ಡು ನೀಡಿದರೆ ಕಾನೂನು ಬಾಹಿರ ಚಟುವಟಿಕೆಗಳನ್ನು ನಾವು ಪ್ರೋತ್ಸಾಹಿಸಿದಂತಾಗುತ್ತದೆ. ನೀವು ನಗರದ ಯಾವುದೇ ಸಿಗ್ನಲ್ ಬಳಿ ನೋಡಿದರೂ ಒಂದು ಸಣ್ಣ ಹಸುಗೂಸು ಹಿಡಿದು ಭಿಕ್ಷೆ ಬೇಡುವ ಮಹಿಳೆಯರನ್ನು ನೋಡುತ್ತೇವೆ. ಆ ಸಣ್ಣ ಮಗುವನ್ನು ನೋಡಿ ಕಿಸೆಯಿಂದ ಹತ್ತೋ ಇಪ್ಪತ್ತೋ ರೂಪಾಯಿ ಅವರಿಗೆ ನೀಡುತ್ತೇವೆ. ದಿನವಿಡೀ ಸಾವಿರಾರು ರೂಪಾಯಿ ಹೀಗೆ ಸಂಪಾದಿಸುತ್ತಾರೆ. ಇದೊಂದು ದಂಧೆಯಾಗಿ ಬಿಟ್ಟಿದೆ. ಅವರ ಕೈಯಲ್ಲಿರುವ ಮಗು ಅವರ ಸ್ವಂತ […]

Continue Reading

BMTCಯಲ್ಲೂ ಬಿಟ್‌ ಕಾಯಿನ್‌ ದಂಧೆ: ನಾಲ್ವರ ಅಮಾನತು, ಸಿಬ್ಬಂದಿಗಳ ಎದೆ ಬಡಿತ ಜೋರು.!

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೂ ಬಿಟ್‌ ಕಾಯಿನ್‌ ದಂಧೆ ಕಾಲಿಟ್ಟಿದ್ದು, ಈ ದಂಧೆಯಲ್ಲಿ ತೊಡಗಿರುವ ಆರೋಪದಡಿ ಬನಶಂಕರಿಯಲ್ಲಿರುವ ಬಿಎಂಟಿಸಿ 20ನೇ ಘಟಕದ 10 ಸಿಬ್ಬಂದಿಗಳ ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆಯೇ ನಾಲ್ವರನ್ನು ಸ್ಥಳದಲ್ಲೇ ಅಮಾನತು ಮಾಡಲಾಗಿದೆ. ಬಿಎಂಟಿಸಿ 20ನೇ ಘಟಕದ ಸಿಬ್ಬಂದಿಗಳಾದ ಮಹೇಶ್‌, ರಾಕೇಶ್‌, ಮದನ್‌, ಪವನ್‌, ನವೀನ್‌, ಸಂತೋಷ್‌ ಕುಮಾರ್‌, ವೀರೇಶ್‌ ಸೇರಿದಂತೆ 10 ಮಂದಿಯನ್ನು ಪ್ರತ್ಯೇಕವಾಗಿ ವಿಚಾರಣೆಗೊಳಪಡಿಸಿ ಅವರಲ್ಲಿ ನಾಲ್ಕು ಮಂದಿಯನ್ನು ಅಮಾನತು ಮಾಡಲಾಗಿದೆ. ಇನ್ನೂ ಏಳು ಮಂದಿಯ ಅಮಾನತಾಗುವ ಸಾಧ್ಯತೆ ಇದೆ. ಈ […]

Continue Reading

ಶಾಲೆಗಳು 9 ಮತ್ತು 10 ನೇ ತರಗತಿ ಆರಂಭಿಸಲು ಪ್ರತಿ ವಿದ್ಯಾರ್ಥಿಗೆ ಒಂದು ಚ.ಮೀ ಸ್ಥಳಾವಕಾಶ ಹೊಂದಿದ್ದರೆ ಮಾತ್ರ ಅನುಮತಿ

ರಾಜ್ಯದಲ್ಲಿ ಹಳೇ ಶಾಲೆಗಳು 9 ಮತ್ತು 10 ನೇ ತರಗತಿ ಆರಂಭಿಸಬೇಕಾದಲ್ಲಿ ಪ್ರತಿ ವಿದ್ಯಾರ್ಥಿಗೆ ಒಂದು ಚದರ ಮೀಟರ್ ಸ್ಥಳಾವಕಾಶ ಹೊಂದಿರಲೇಬೇಕು. ಇಲ್ಲವಾದರೆ, ಅನುಮತಿ ಸಿಗೋದಿಲ್ಲ! ಶಿಕ್ಷಣ ಇಲಾಖೆಯು ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ಕಲ್ಪಿಸಿಕೊಡುವ ಉದ್ದೇಶದಿಂದ ಈ ಹೊಸ ನಿಯಮ ಜಾರಿಗೊಳಿಸಿದೆ. ಇದರಿಂದ 9 ಮತ್ತು 10 ನೇ ತರಗತಿ ಪ್ರಾರಂಭಕ್ಕೆ ಮಾನ್ಯತೆ ಪಡೆಯುವುದು ಖಾಸಗಿ ಶಾಲೆಗಳಿಗೆ ಕಷ್ಟವಾಗಲಿದೆ. ಒಂದು ಚದರ ಮೀಟರ್ ಅಂದರೆ, ಇದು ಅಂದಾಜು 10 ಅಡಿಗಳಷ್ಟು ಆಗಲಿದೆ. […]

Continue Reading

10 ಕೋಟಿ ಲಂಚ ಪಡೆದು, 200 ಕೋಟಿ ಮೌಲ್ಯದ ಭೂಮಿಯ ಪರಾಭಾರೆ; ತಹಶೀಲ್ದಾರ್ ಭಾಗ್ಯ ವಿರುದ್ದ ಕ್ರಮಕ್ಕೆ ಆದೇಶ

ಬೆಂಗಳೂರಿನಲ್ಲಿ ನಡೆದಿರುವ 200 ಕೋಟಿ ರೂ.ಮೌಲ್ಯದ ಭೂಹಗರಣ ಬಯಲಾಗಿದೆ. ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಮಂಜೂರು ಮಾಡಿದ ಭಾರೀ ಅಕ್ರಮವನ್ನು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ಬಯಲಿಗೆಳೆದು, ತಹಶೀಲ್ದಾರ್ ಆರ್ ಭಾಗ್ಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಆದೇಶ ನೀಡಿದ್ದಾರೆ ಉತ್ತರಹಳ್ಳಿ ವಡ್ಡರಪಾಳ್ಯ ಸರ್ವೇ ನಂ 6, 7ರಲ್ಲಿ 15 ಎಕರೆ ಭೂಮಿಯನ್ನು ಭೂ ಮಾಫಿಯಾದ ಗಿರಿಧರ್ ಎಂಬವರ ಹೆಸರಿಗೆ ನಕಲಿ ದಾಖಲೆ ಸೃಷ್ಟಿಸಿ ಮಂಜೂರು ಮಾಡಿದ್ದಾರೆ. ವಿಶೇಷ ತಹಸೀಲ್ದಾರ್ ಆಗಿದ್ದ ಆರ್.ಭಾಗ್ಯರ […]

Continue Reading

ಆರ್ ಟಿ ಐ ಕಾರ್ಯಕರ್ತರಿಗೆ ಶರಣು.!

ಆರ್ ಟಿ ಐ ಕಾರ್ಯಕರ್ತರ ಮಾಹಿತಿ ಪಡೆಯುವ ಕ್ರಮದಿಂದ ಸರಕಾರ ಹಿಂದೆ ಸರಿದಿದೆ. 3 ತಿಂಗಳ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆರ್ ಟಿ ಐ ಅಡಿ ಅರ್ಜಿ ಸಲ್ಲಿಸುವ ಅರ್ಜಿದಾರರ ಮಾಹಿತಿ ಪಡೆಯುವ ಕೆಲಸ ನಡೆಯುತ್ತಿತ್ತು. ಇದಕ್ಕೆ ವಿರೋಧ ವ್ಯಕ್ತವಾಗತೊಡಗಿತ್ತು. ಇದರ ಬೆನ್ನಲ್ಲೇ ಸರಕಾರದಿಂದ ಯಾವುದೇ ಅನುಮತಿ ಪಡೆಯದೆ ಅಥವಾ ಗಮನಕ್ಕೆ ತರದೇ ಜಾರಿಗೊಳಿಸಿದ ಕಾರಣಕ್ಕೆ ಹಿಂಪಡೆದಿರುವುದಾಗಿ ಸಮಜಾಯಿಷಿ ನೀಡಿದೆ. ಮಾಹಿತಿ ಆಯೋಗ ಕಲಬುರಗಿ ಪೀಠದ ಆದೇಶದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(ಆಡಳಿತ ಸುಧಾರಣೆ, ತರಬೇತಿ […]

Continue Reading

October 24ರ ವರೆಗೆ ಶಾಲೆಗಳಿಗೆ ದಸರಾ ರಜೆ

ಶಿಕ್ಷಣ ಇಲಾಖೆಯ ಶೈಕ್ಷಣಿಕ ವೇಳಾಪಟ್ಟಿಯಂತೆ ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪರೀಕ್ಷೆಗಳು ಮುಕ್ತಾಯವಾಗಿದ್ದು, ಮೊದಲನೇ ಅವಧಿಯ ಶಾಲಾ ದಿನಗಳು ಮುಕ್ತಾಯಗೊಳ್ಳಲಿದ್ದು, ಇಂದಿನಿಂದ October 24ರವರೆಗೆ ದಸರಾ ರಜೆ ಇರಲಿದೆ. October 8ರಿಂದ ದಸರಾ ರಜೆ ಆರಂಭವಾಗಲಿದೆ. ಎಲ್ಲಾ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪರೀಕ್ಷೆಗಳು ಮುಕ್ತಾಯವಾಗಿವೆ. ಹೀಗಾಗಿ October 8ರಿಂದ October 24ರ ವರೆಗೆ ದಸರಾ ರಜೆ ಇರಲಿದ್ದು, October 25ರಿಂದ 2ನೇ ಅವಧಿಯ ಶಾಲಾ ಕರ್ತವ್ಯದ ದಿನಗಳು ಆರಂಭವಾಗಲಿವೆ. […]

Continue Reading

ಪೊಲೀಸ್ ಠಾಣೆಗಳಲ್ಲಿ ಸಿಸಿ ಕ್ಯಾಮೆರಾ ಕಡ್ಡಾಯ: ಮಾಹಿತಿ ಹಕ್ಕು ಆಯೋಗ ತಾಕೀತು

ಲಾಕಪ್ ಡೆತ್, ದೌರ್ಜನ್ಯ, ಕರ್ತವ್ಯ ಲೋಪ ಹಾಗೂ ಪಾರದರ್ಶಕ ಕಾರ್ಯವೈಖರಿ ಸಲುವಾಗಿ ಪೊಲೀಸ್ ಠಾಣೆಗಳಲ್ಲಿ ಕನಿಷ್ಠ ಒಂದು ವರ್ಷದ ಬ್ಯಾಕ್ ಆಪ್ ಇರುವ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಕ್ರಮ ವಹಿಸುವಂತೆ ಮಾಹಿತಿ ಹಕ್ಕು ಆಯೋಗ, ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ತಾಕೀತು ಮಾಡಿದೆ. ಕಸ್ಟೋಡಿಯಲ್ ಡೆತ್ ಆರೋಪ ಕೇಸ್ ನಲ್ಲಿ ಠಾಣೆಯ ಸಿಸಿಟಿವಿ ದೃಶ್ಯಾವಳಿ ನೀಡಲು ನಿರಾಕರಿಸಿ, ದುರಸ್ತಿ ನೆಪ ಹೇಳಿದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವಿರುದ್ಧ ದಂಡಾಸ್ತ್ರ ಪ್ರಯೋಗಿಸಿರುವ ಆಯೋಗ, ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮರಾ ದುರಸ್ತಿ […]

Continue Reading

ಪೊಲೀಸ್‌ ಆಯುಕ್ತರ ಕಚೇರಿ ಬಳಿಯಲ್ಲಿರುವ ಬಿಎಂಟಿಸಿ ಬಸ್‌ ತಂಗುದಾಣಕ್ಕೆ ಖದೀಮರಿಂದ ಕನ್ನ

ಬೆಂಗಳೂರು: ಬೆಂಗಳೂರು ನಗರ ಪೊಲೀಸ್‌ ಆಯುಕ್ತರ ಕಚೇರಿ ಬಳಿಯಲ್ಲಿರುವ ಕನ್ನಿಂಗಾ ಹ್ಯಾಮ್ ರಸ್ತೆ ಪಕ್ಕ ನಿರ್ಮಿಸಿರುವ ಬಿಎಂಟಿಸಿ ಬಸ್‌ ತಂಗುದಾಣವೊಂದಕ್ಕೆ ಖದೀಮರು ಕನ್ನ ಹಾಕಿದ್ದಾರೆ. ಬೆಂಗಳೂರಿನ ಕನ್ನಿಂಗ್‌ ಹ್ಯಾಮ್‌ ರಸ್ತೆಯಲ್ಲಿರುವ ಬಸ್‌ ತಂಗುದಾಣ ಹಳೆಯದಾಗಿದ್ದರಿಂದ ಇತ್ತೀಚೆಗಷ್ಟೇ ಬಿಬಿಎಂಪಿ ನೂತನ ಬಸ್‌ ತಂಗುದಾಣವನ್ನು ನಿರ್ಮಿಸಿತ್ತು. ಆದರೆ ಖದೀಮರು ಶೆಲ್ಟರ್‌ನಲ್ಲಿದ್ದ ಸ್ಟೀಲ್ ಮುಂತಾದ ಬೆಲೆಬಾಳುವ ಸಾಮಗ್ರಿಗಳನ್ನು, ಹಂತಹಂತವಾಗಿ ಕದ್ದು ನಾಪತ್ತೆಯಾಗಿದ್ದಾರೆ. ಈ ಶೆಲ್ಟರ್‌ ನಿರ್ಮಿಸಲು ಗುತ್ತಿಗೆ ಪಡೆದಿದ್ದ ಕಂಪನಿಯ ಅಧಿಕಾರಿಯೊಬ್ಬರು ಬಸ್‌ ತಂಗುದಾಣವನ್ನು ನೋಡಲು ಬಂದಿದ್ದರು. ಆದರೆ ಅಲ್ಲಿ ಬಸ್‌ […]

Continue Reading

ಪುತ್ರ ವ್ಯಾಮೋಹ: ಹಗಲು ಕಂಡ ಬಾವಿಗೆ ಬೀಳುವುದು ಎಂದರೆ ಇದೇನಾ..?

ಡಿಕೆಶಿಗೆ ಸ್ಟ್ರೋಕ್ ಕೊಡಲು ಹೋಗಿ ಬರ್ಬದಾಗುತ್ತಾ ಜೆಡಿಎಸ್.? ಇಲ್ಲಿದೆ ಕಂಪ್ಲೀಟ್ ಸ್ಟೋರಿ ಜೆಡಿಎಸ್ ಪಕ್ಷ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಈಗ ಅದೇ ಮೈತ್ರಿ ಜೆಡಿಎಸ್ ಪಕ್ಷವನ್ನು ಬುಡಮೇಲುಗೊಳಿಸುತ್ತದೆಯೋ ಅನ್ನುವ ಅನುಮಾನ ಜೆಡಿಎಸ್ ನಲ್ಲಿ ನಡೆಯುತ್ತಿರುವ ಆಂತರಿಕ ಬೆಳವಣಿಗೆ ಸಹಜವಾಗಿ ಕಾಡುತ್ತಿದೆ. ರಾಜ್ಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೇಂದ್ರದ ಹೈಕಮಾಂಡ್ ಮಟ್ಟದಲ್ಲಿ ನಡೆದ ಬಿಜೆಪಿ ಜೆಡಿಎಸ್ ಮೈತ್ರಿಕೂಟದ ಬಗ್ಗೆ ರಾಜ್ಯ ಬಿಜೆಪಿ ನಾಯಕರಲ್ಲೂ ಅಸಮಾಧಾನ ಭುಗಿಲೆದ್ದಿದ್ದು ಬಹಿರಂಗವಾಗಿ ತೋರ್ಪಡಿಸದೆ ಒಳಗೊಳಗೇ ಕುದಿಯುತ್ತಿದೆ‌. ಜೆಡಿಎಸ್ ಪಕ್ಷದ […]

Continue Reading

ಕರಾವಳಿಯ ಹಾಗೂ ಉತ್ತರ ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಡಿಕೆಶಿ ಭೇಟಿಯಾಗಿ ಚರ್ಚೆ ನಡೆಸಿದ ಇನಾಯತ್ ಅಲಿ

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಕ್ಷೇತ್ರದಲ್ಲಿ ಸೋತರೂ ತನ್ನ ಹವಾ ಮುಂದುವರಿಸಿಕೊಂಡು ಬಂದಿದ್ದಾರೆ. ಹಾಲಿ ಶಾಸಕರು ಜನರ ಕೈಗೆ ಸಿಗದಿದ್ದರೂ, ಇನಾಯತ್ ಅಲಿ ಕ್ಷೇತ್ರದ ಸಭೆ, ಸಮಾರಂಭಗಳಲ್ಲಿ ನಿರಂತರವಾಗಿ ಭಾಗಿಯಾಗುತ್ತಾ ಜನಸ್ನೇಹಿಯಾಗಿ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಹಳಿ ತಪ್ಪಿದ ಪಕ್ಷವನ್ನು ಪುನರ್ ಸಂಘಟಿಸುವಲ್ಲಿ ಸತತ ಪ್ರಯತ್ನ ಮಾಡುತ್ತಿದ್ದಾರೆ. ಇದರ ಜೊತೆಗೆ ಅಭಿವೃದ್ಧಿ ರಾಜಕಾರಣ ಬಗ್ಗೆ ವಿಶೇಷ ಒಲವು ಹೊಂದಿರುವ ಇನಾಯತ್ ಅಲಿ ಪ್ರವಾಸೋದ್ಯಮ ಸಹಿತ ಕರಾವಳಿ ಅಭಿವೃದ್ಧಿಗೆ […]

Continue Reading