ಹೃದಯದಲ್ಲಿ ಸಂಭವಿಸಿದ ಬ್ಲಾಕ್(ತಡೆ)ಗಳನ್ನು ಸರಿಪಡಿಸಲು ವೈದ್ಯರುಗಳು ಸ್ಟಂಟ್‌ಗಳನ್ನು ಉಪಯೋಗಿಸಿ ಹೃದಯ ಸಂಬಂಧವಾದ ಬ್ಲಾಕ್‌ಗಳಿದ್ದರೆ ಅದನ್ನು ಸರಿಪಡಿಸುತ್ತಾರೆ. ಆದರೆ ಇದಕ್ಕೆ ಉಪಯೋಗಿಸುವ ಸ್ಟಂಟ್‌ಗೆ ಸರಿಸುಮಾರು ರೂ.7,000 ಸಾವಿರದಿಂದ 35 ಸಾವಿರ ರೂಪಾಯಿವರೆಗೆ ಬೆಲೆಬಾಳುವ ಸ್ಟಂಟ್ ಇರುತ್ತದೆ. ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಹೃದಯ ಸಂಬಂಧಿ ರೋಗಿಗಳು ಇದನ್ನು ಅಳವಡಿಸಿಕೊಳ್ಳುತ್ತಾರೆ. ಯಾವ ಕಂಪೆನಿಯಿಂದ ಯಾವ ಸ್ಟೆಂಟ್‌ನ್ನು ಡಾಕ್ಟರ್ ಅಳವಡಿಸುತ್ತಾರೆ ಎಂದು ಯಾರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.
ಮಾತ್ರವಲ್ಲದೆ ವೈದ್ಯಾಧಿಕಾರಿಗಳು, ಸಂಬಂಧಪಟ್ಟ ಆಸ್ಪತ್ರೆಯವರು ಇದರ ಬಗ್ಗೆ ರೋಗಿಗಳ ಗಮನಕ್ಕೂ ತರುವುದಿಲ್ಲ. ನಾವುಗಳು ಈ ಬಗ್ಗೆ ಮಾಹಿತಿಯನ್ನು ಪಡಕೊಳ್ಳುವುದಿಲ್ಲ. ಆದರೆ ಈ ಬಗ್ಗೆ ವಿಚಾರಿಸಲು ನಮಗೆ ಕಾನೂನಾತ್ಮಕವಾಗಿ ಹಕ್ಕು ಇರುತ್ತದೆ. ಚಿಂತಾಜನಕದ ಸಂಧಿಗ್ಧ ಪರಿಸ್ಥಿತಿಯಲ್ಲಿ ಈ ಬಗ್ಗೆ ವಿಚಾರಿಸಲು ಯಾರು ಮುತುವರ್ಜಿ ವಹಿಸುವುದಿಲ್ಲ. ಕಾರಣ ರೋಗಿಯ ಜೀವವನ್ನು ಬಚಾವ್ ಮಾಡುವ ಏಕೈಕ ಉದ್ದೇಶವಾಗಿರುತ್ತದೆ. ರೋಗಿಯ ಸಂಬಂಧ ಪಟ್ಟವರದ್ದು.

ನಾವು ನಮ್ಮ ಹೃದಯಕ್ಕೆ ಸ್ಟಂಟ್ ಅಳವಡಿಸುವ ಸಮಯದಲ್ಲಿ ಗುಣಮಟ್ಟದ ಸ್ಟಂಟ್ ಉಪಯೋಗಿಸಬೇಕು, ಮಾತ್ರವಲ್ಲದೆ ವಿಮೆ(ಇನ್ಸುರೆನ್ಸ್) ಇರುವ ಸ್ಟಂಟ್‌ಗಳನ್ನೇ ನಾವು ಉಪಯೋಗಿಸಬೇಕು. ಅದ್ದರಿಂದ ಬಹಳ ಉಪಯೋಗವಿದೆ. ಈ ಮಾಹಿತಿಯು ಜನ ಸಾಮಾನ್ಯರಿಗೆ ತಿಳಿದಿರುವುದಿಲ್ಲ. ನಾವು ಉಪಯೋಗಿಸುವ ಸ್ಟಂಟ್ ವಿಮೆ ಇದ್ದ ಸ್ಟಂಟ್ ಹಾಕಿದರೆ ಆರು ತಿಂಗಳ ಒಳಗೆ ಪುನಃ ಹೃದಯದಲ್ಲಿ ಬ್ಲಾಕ್ ಆದರೆ ಆರು ತಿಂಗಳವರೆಗೆ ಯಾವುದೇ ಬ್ಲಾಕ್ ಇದ್ದರೆ ಹಣ ಖರ್ಚು ಮಾಡುವ ಅಗತ್ಯತೆ ಇರುವುದಿಲ್ಲ. ಮಾತ್ರವಲ್ಲದೇ ಒಂದು ವರ್ಷದೊಳಗೆ ಹೃದಯದ ಸರ್ಜರಿ ಮಾಡುವ ಅಗತ್ಯತೆ ಕಂಡುಬಂದರೆ ಅದಕ್ಕೂ ನಯಾ ಪೈಸೆ ಖರ್ಚು ಮಾಡುವ ಅಗತ್ಯತೆ ಬರುವುದಿಲ್ಲ.
ಅದೆಲ್ಲವನ್ನು ನಾವು ಅಳವಡಿಸಿರುವ ಈ ಸ್ಟಂಟ್ ಕಂಪೆನಿಯವರು ವಿಮೆ ಮುಖಾಂತರ ಸರಿಪಡಿಸುತ್ತಾರೆ. ಅದು ಅವರ ಕರ್ತವ್ಯವು ಆಗಿರುತ್ತದೆ.
ಆದರೆ ಸರಕಾರಿ ಆಸ್ಪತ್ರೆಯಲ್ಲಿ ಅಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿ ಇಂತಹ ವಿಮೆ ಇರುವ ಸ್ಟಂಟ್‌ಗಳನ್ನು ಉಪಯೋಗಿಸುವುದಿಲ್ಲ. ಕಾರಣ ಖಾಸಗಿ ಆಸ್ಪತ್ರೆಗಳಲ್ಲಿ ವಿಮೆ ಇರುವ ಸ್ಟಂಟ್ ಉಪಯೋಗ ಮಾಡಿದರೆ, ಅವರು ಮಾಡಿದ ಶಸ್ತ್ರಚಿಕಿತ್ಸೆಯ ಎಲ್ಲಾ ವಿವರಗಳನ್ನು ವಿಮೆ ಕಂಪೆನಿಗೆ ನೀಡಬೇಕಾಗುತ್ತದೆ. ಅದನ್ನು ನೀಡಿದರೆ ಚಿಕಿತ್ಸೆಯಲ್ಲಿ ಮಾಡಿರುವಂತಹ ಮೋಸ, ಕಳ್ಳತನದ ಬಗೆ ಎಲ್ಲವೂ ಹೊರಬರುತ್ತದೆ. ಚಿಕಿತ್ಸೆಯಲ್ಲಿ ಮೋಸ, ಕಳ್ಳತನ ನಡೆಯಲ್ಲ ಎಲ್ಲವೂ ನ್ಯಾಯ ಸಮ್ಮತವಾಗಿ ನಡೆಯುತ್ತದೆ. ನಮ್ಮನ್ನು ಆಸ್ಪತ್ರೆಯವರು ಲೂಟಿ ಮಾಡಲು ಆಗಲ್ಲ.

ಖಾಸಗಿ ಆಸ್ಪತ್ರೆಗಳು ಬ್ಲಾಕ್ ಸರಿಪಡಿಸಲು ನಮ್ಮಿಂದ ವಸೂಲಿ ಮಾಡಿದ ನಮ್ಮ ಸಂಪಾದನೆಯ ಲಕ್ಷಾಂತರ ರೂಪಾಯಿ ಹಣವಾಗಿರಬಹುದು. ಒಂದು ಸಮಯದಲ್ಲಿ ಬ್ಲಾಕ್ ಸರಿಪಡಿಸಲು ಖಾಸಾಗಿ ಆಸ್ಪತ್ರೆಯವರು ಉಪಯೋಗಿಸಿದ ಸ್ಟಂಟ್ ವಿಮೆ ಇಲ್ಲದ್ದಾಗಿರಬಹುದು. ಅದಕ್ಕಾಗಿ ಎಂಜೋಪ್ಲಾಸ್ಟ್ ಮಾಡುವುದಕ್ಕಿಂತ ಮುಂಚೆ ಜಾಗೃತೆ ವಹಿಸಬೇಕಾಗಿದೆ. ನಿಮ್ಮ ವೈದ್ಯರಲ್ಲಿ ಈ ಬಗ್ಗೆ ವಿಚಾರಿಸಿ ಮಾಹಿತಿ ವಿನಿಮಯ ಮಾಡಿಕೊಂಡು, ವಿಮೆ ಇರುವ ಸ್ಟಂಟ್‌ಗಳನ್ನೇ ಅಳವಡಿಸಲು ಒತ್ತಡ ಹೇರಬೇಕು. ಅದನ್ನೇ ಉಪಯೋಗಿಸಬೇಕು. ಕಾರಣ ನಿಮ್ಮ ನಿಮ್ಮ ಜೀವದ ಪ್ರಶ್ನೆ ಹಾಗೂ ನಾವು ಜೀವನದಲ್ಲಿ ಕಷ್ಟಪಟ್ಟು ಕೂಡಿಟ್ಟ ಸಂಪಾದನೆಯಾಗಿದೆ ಖಾಸಗಿ ಆಸ್ಪತ್ರೆಯವರು ನಮ್ಮಿಂದ ವಸೂಲಿ ಮಾಡಿ ಕೊಳ್ಳೆ ಹೊಡೆಯುವುದು. ಈ ಬಗ್ಗೆ ಎಚ್ಚರ ಅಗತ್ಯ. ಖಾಸಗಿ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಚಿಕಿತ್ಸೆ ಪಡಕೊಂಡಿದ್ದರೆ ಚಿಕಿತ್ಸೆಯ ಬಗ್ಗೆ ಇರುವ ಸಂಪೂರ್ಣ ಮಾಹಿತಿ ಸಂಬಂಧ ಪಟ್ಟ ದಾಖಲಾತಿ, ಸಿ.ಡಿ. ವಿಮೆ ಪತ್ರ ಎಲ್ಲವನ್ನು ಅವರಿಂದ ಪಡಕೊಂಡು ಖಾಸಗಿ ಅಸ್ಪತ್ರೆಗಳ ಮೋಸದ ಜಾಲದಿಂದ ಬಚಾವು ಆಗಬಹುದು.