ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆಗೆ ಬಿಗ್ ಟ್ವಿಸ್ಟ್; ಹತ್ಯೆಯಲ್ಲಿ ಮಂಗಳೂರಿನ ನಟೋರಿಯಸ್ ಗ್ಯಾಂಗ್ ಕೈವಾಡ.? ಸುಹಾಸ್ ನಿಂದಲೇ ಹತ್ಯೆಯಾಗಿದ್ದ ಕೀರ್ತಿ ಹುಡುಗರು ಸಾಥ್.!

ಕರಾವಳಿ

ಇಡೀ ರಾಜ್ಯಾದಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದ, ಹಿಂದೂ ಕಾರ್ಯಕರ್ತ, ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಬಿಗ್ ಟ್ವಿಸ್ಟ್ ದೊರಕಿದ್ದು, ಹತ್ಯೆಯ ಹಿಂದೆ ಪಾಝಿಲ್ ಹತ್ಯೆಗೆ ರಿವೇಂಜ್ ಎಂದು ಶಂಕಿಸಲಾಗಿತ್ತು. ಆದರೆ ಇದೀಗ ದೊರೆತ ಮಾಹಿತಿಗಳ ಪ್ರಕಾರ ಪಾಝಿಲ್ ಹತ್ಯೆಗೂ ಸುಹಾಸ್ ಹತ್ಯೆಗೂ ಯಾವುದೇ ಸಂಬಂಧವಿಲ್ಲ. ಪೊಲೀಸರು ಈ ಬಗ್ಗೆ ಇನ್ನಷ್ಟೇ ಸಮಗ್ರ ಮಾಹಿತಿ ನೀಡಬೇಕಾಗಿದೆ.

ಸುಹಾಸ್ ಶೆಟ್ಟಿ ಮೂಲತಃ ಬಜ್ಪೆಯ ಕಳವಾರು ನಿವಾಸಿ. 2020 ರಲ್ಲಿ ದಲಿತ ಯುವಕ ಕೀರ್ತಿ ಹತ್ಯೆಯಲ್ಲಿ ಭಾಗಿಯಾಗಿದ್ದ. 2022 ರಲ್ಲಿ ನಡೆದಿದ್ದ ಪ್ರವೀಣ್ ನೆಟ್ಟಾರ್ ಹತ್ಯೆಗೆ ಪ್ರತೀಕಾರವಾಗಿ ಪಾಝಿಲ್ ಹತ್ಯೆಗೈದ ಪ್ರಮುಖ ಆರೋಪಿಯಾಗಿದ್ದ. ಜೈಲಿಗೆ ಹೋಗಿ ಬಂದ ನಂತರ ಸುಹಾಸ್ ತನ್ನದೇ ಆದ ಒಂದು ತಂಡವನ್ನು ಕಟ್ಟಿಕೊಂಡು ಮೆರೆದಾಡುತ್ತಿದ್ದ. ಬಡ್ಡಿ, ಫೈನಾನ್ಸ್ ದಂಧೆಯಲ್ಲೂ ತೊಡಗಿದ್ದ.

ಈ ಮಧ್ಯೆ ಮಂಗಳೂರಿನ ಕುಖ್ಯಾತ ನಟೋರಿಯಸ್ ಗ್ಯಾಂಗ್ ಜೊತೆಗೆ ಸುಹಾಸ್ ಕಿರಿಕ್ ಮಾಡುತ್ತಿದ್ದಾನಂತೆ. ಸುಹಾಸ್ ಗ್ಯಾಂಗ್ ನಿಂದ ಈ ಹಿಂದೆ ನಟೋರಿಯಸ್ ಗ್ಯಾಂಗ್ ನ ಇಬ್ಬರು ಹಲ್ಲೆಗೊಳಗಾಗಿದ್ದರಂತೆ. ಈ ಎಲ್ಲಾ ದ್ವೇಷದಿಂದ ಸುಹಾಸ್ ಶೆಟ್ಟಿ ಹತ್ಯೆ ನಡೆದಿರುವುದಾಗಿ ಮಾಹಿತಿ ಹೊರಬರುತ್ತಿದೆ. ಈಗಾಗಲೇ ಚಿಕ್ಕಮಗಳೂರಿನ ಕಲಶದ ಇಬ್ಬರು ಸೇರಿ ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಅವರಿಬ್ಬರು ಹಿಂದೂ ಸಮುದಾಯಕ್ಕೆ ಸೇರಿದವರೆಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಇದೀಗ ಪೊಲೀಸರು ಹತ್ಯೆಯ ಪ್ರಧಾನ ಸೂತ್ರಧಾರನ ಬಂಧನಕ್ಕೆ ಬಲೆ ಬೀಸಿದ್ದು, ಆರೋಪಿಗಳ ಬಂಧನದ ಬಗ್ಗೆ ಅಧಿಕೃತ ಮಾಹಿತಿ ಪೊಲೀಸರು ಇವತ್ತು ಬಿಡುಗಡೆಗೊಳಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.