ಪೋಷಕರಿಲ್ಲದ ಸಂದರ್ಭ ಬಾಲಕ ನೇಣಿಗೆ ಶರಣು.. ವಿಟ್ಲ ಸಮೀಪದ ಕಡಂಬು ನೆತ್ರಕೆರೆ ಎಂಬಲ್ಲಿ ಘಟನೆ.

ಕರಾವಳಿ

ಮನೆಯಲ್ಲಿ ಪೋಷಕರು ಇಲ್ಲದ ಸಂದರ್ಭ ತನ್ನ ಮನೆಯೊಳಗೆ ಬಾಲಕ ನೇಣಿಗೆ ಶರಣಾದ ಘಟನೆ ವಿಟ್ಲ ಸಮೀಪ ನಡೆದಿದೆ. ವಿಟ್ಲ ಸಮೀಪದ ಕಡಂಬು ನೆತ್ರಕೆರೆ ನಿವಾಸಿ ದಿವಾಕರ ಶೆಟ್ಟಿಗಾರ್ ಪುತ್ರ ವಿಶಾಲ್(22) ಆತ್ಮಹತ್ಯೆ.

ತಂದೆ ವಿಟ್ಲದ ಅಯ್ಯಪ್ಪ ದೇವಸ್ಥಾನಕ್ಕೆ ಹೋಗಿದ್ದು ತಾಯಿ ಪೇಟೆಗೆ ಹೋಗಿದ್ದ ಸಂದರ್ಭದಲ್ಲೇ ವಿಶಾಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಕಾರಣ ಏನೆಂಬುದು ಇನ್ನಷ್ಟೇ ತಿಳಿಯಬೇಕಾಗಿದ್ದು ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ತನಿಖೆ ಆರಂಭಿಸಿದ್ದಾರೆ.‌

Oplus_131072

ಮೃತ ವಿಶಾಲ್ ತಂದೆ, ತಾಯಿ, ಪುಟ್ಟ ತಂಗಿಯನ್ನು ಅಗಲಿದ್ದಾನೆ. ಪ್ರತಿನಿತ್ಯ ಯವ ಸಮೂಹ ಅಲ್ಲಲ್ಲಿ ಆತ್ಮಹತ್ಯೆ, ಪರಾರಿ ಪ್ರಕರಣ ಬಯಲಾಗುತ್ತಿದ್ದು ಪೋಷಕರ ಆತಂಕಕ್ಕೆ ಕಾರಣವಾಗಿದೆ.