ಮನೆ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ, ಕಳವುಗೈದ ಸೊತ್ತು ವಶ.

ಕರಾವಳಿ

ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳ್ಪಾಡಿ ಎಂಬಲ್ಲಿ, ಮನೆಯೊಂದರಲ್ಲಿ ನಡೆದ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಅ.ಕ್ರ. 71/2026 ಕಲಂ: 303(2) ಬಿ ಎನ್‌ ಎಸ್‌ -2023 ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿರುವ ಪೊಲೀಸರು ಆರೋಪಿಗಳಾದ ಬಂಟ್ವಾಳ ಬಾಳ್ತಿಲ ನಿವಾಸಿ ಕುಮಾರಿ ಪೃಥ್ವಿ ಹಾಗೂ ಮಂಗಳೂರು ಸುರತ್ಕಲ್‌ ನಿವಾಸಿ ಕಿಶಾನ್‌ ಎಂಬವರುಗಳನ್ನು ಬಂಧಿಸಿ, ಆರೋಪಿಗಳು ಕಳವುಗೈದಿರುವ ಒಟ್ಟು ರೂ 2,50,000. ರೂ. ಮೌಲ್ಯದ 21 ಗ್ರಾಂ ಚಿನ್ನಾಭರಣ ಮತ್ತು ಆರು ನೂರು ರೂಪಾಯಿ ನಗದನ್ನು ಆರೋಪಿಗಳಿಂದ ಸ್ವಾಧೀನಪಡಿಸಲಾಗಿದೆ.

ಆರೋಪಿಗಳ ಪತ್ತೆ ಕಾರ್ಯದಲ್ಲಿ ಪ್ರಕರಣದ ತನಿಖಾಧಿಕಾರಿ ಎ.ಎಸ್.ಐ ನವೀನ್, ಹೆಡ್ ಕಾನ್‌ಸ್ಟೇಬಲ್‌ಗಳಾದ ಸುರೇಶ್ ಕುಮಾರ್‌, ರಾಜೇಶ್, ರಕ್ಷೀತ್, ಕಾನ್‌ಸ್ಟೇಬಲ್‌ಗಳಾದ ಬಸವರಾಜ ಕುಡಗುಂಟಿ, ನಾಗನಾಥ, ಮತ್ತು ರೇವತಿ, ಭಾಗ್ಯಮ್ಮ, ಮಾಲಾಶ್ರೀ ರವರುಗಳು ಪಾಲ್ಗೊಂಡಿದ್ದು, ಜಿಲ್ಲಾ ಬೆರಳಚ್ಚು ಘಟಕದ ಸಚಿನ್ ಮತ್ತು ಉದಯ್ ಹಾಗೂ ಜಿಲ್ಲಾ ಗಣಕಯಂತ್ರ ವಿಭಾಗದ ದಿವಾಕರ ಮತ್ತು ಸಂಪತ್‌ರವರು ಆರೋಪಿ ಪತ್ತೆ ಕಾರ್ಯದಲ್ಲಿ ಸಹಕರಿಸಿರುತ್ತಾರೆ.