ವಿಟ್ಲ ಪೊಲೀಸ್ ಠಾಣೆಯ ವ್ಯಾಪ್ತಿಯ ಕರೋಪಾಡಿ ಮುಗುಳಿ ಎಂಬಲ್ಲಿ ಅಕ್ರಮ ಗಣಿಗಾರಿಕೆಯ ನಡೆಸುತ್ತಿರುವ ಬಗ್ಗೆ, ವಿಟ್ಲ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ, ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಪೊಲೀಸರ ಆಗಮನ ಆಗುತ್ತಿದ್ದಂತೆ, ಪೊಲೀಸರ ವಾಹನವನ್ನು ಕಂಡು ಅಕ್ರಮ ಗಣಿಗಾರಿಕೆ ಮಾಡುತ್ತಿದ್ದ ಆರೋಪಿಗಳು ಅಲ್ಲಿಂದ ಪರಾರಿಯಾಗಿರುತ್ತಾರೆ.

ಸದ್ರಿ ಸ್ಥಳವನ್ನುಪೊಲೀಸರು ಪರಿಶೀಲನೆ ನಡೆಸಿದಾಗ ಅಕ್ರಮ ಕೆಂಪು ಕಲ್ಲು ಹಾಗೂ ಬಾಕ್ಸೈಟ್ ಗಣಿಗಾರಿಕೆ ಮಾಡುತ್ತಿರುವುದು ಕಂಡುಬಂದಿದ್ದು, ಕೃತ್ಯಕ್ಕೆ ಬಳಸಿದ ಯಂತ್ರೋಪಕರಣಗಳು, ಸ್ಥಳದ ಸಮೀಪದಲ್ಲೇ ಅಕ್ರಮವಾಗಿ ಮಣ್ಣು ಗಣಿಗಾರಿಕೆ ನಡೆಸುತ್ತಿರುವುದು ಹಾಗೂ ಸದ್ರಿ ಮಣ್ಣು ಗಣಿಗಾರಿಕೆಯ ಮಣ್ಣನ್ನು ತುಂಬಿಸಿಕೊಂಡು ಹೋಗುವ ಲಾರಿಗಳ ತೂಕ ಮಾಡಲು ವೇ ಬ್ರಿಡ್ಜ್ ಮತ್ತು ಕಟ್ಟಡ ರಚುಸಿರುವುದು ಹಾಗೂ ಯಂತ್ರೋಪಕರಣಗಳು ಪತ್ತೆಯಾಗಿರುತ್ತದೆ. ಸದ್ರಿ ಸೊತ್ತುಗಳನ್ನು ಪೊಲೀಸರು ವಶ ಪಡಿಸಿಕೊಂಡಿರುತ್ತಾರೆ. ಯಾವುದೇ ಪರವಾನಗಿ ಇಲ್ಲದೇ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದ ಆರೋಪಿ ಮುಳಿಗದ್ದೆ ಝಕಾರಿಯಾ ಮತ್ತು ಇತರರ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 148/2026 ರಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
