‘ಪಿಲಿ’ ತುಳುಚಿತ್ರ ಪ್ರದರ್ಶನಕ್ಕೆ ನ್ಯಾಯಾಲಯ ತಡೆಯಾಜ್ಞೆ

ಕರಾವಳಿ

ಕರಾವಳಿಯಾದ್ಯಂತ ನಾಳೆ ತೆರೆಗೆ ಸಿದ್ದವಾಗಿರುವ “ಪಿಲಿ” ತುಳು ಚಿತ್ರ ಪ್ರದರ್ಶನ ಕಾಣದಂತೆ ನ್ಯಾಯಾಲಯದಿಂದ ತಡೆ ನೀಡಲಾಗಿದೆ.

ಈ ಚಿತ್ರಕ್ಕೆ 40 ಲಕ್ಷ ಬಂಡವಾಳ ಹೂಡಿದ ನಿರ್ಮಾಪಕ ಮನ್ಜೀತ್ ನಾಗರಾಜ್ ಅವರನ್ನು ಕಡೆಗಣಿಸಿ ಬೇರೆ ನಿರ್ಮಾಪಕರ ಹೆಸರನ್ನು ಬಳಸಿಕೊಂಡು ಚಿತ್ರ ಬಿಡುಗಡೆಗೆ ಸಿದ್ದತೆ ಮಾಡಿಕೊಂಡಿದ್ದಾರೆ. ಆದ್ದರಿಂದ ಈ ಚಿತ್ರ ಪ್ರದರ್ಶನ ಕಾಣದಂತೆ ತಡೆ ನೀಡುವಂತೆ ಮನ್ಜೀತ್ ನಾಗರಾಜ್ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ನಿರ್ಮಾಪಕ ಮಂದೀಪ್ ಅವರ ಮನವಿ ಪುರಸ್ಕರಿಸಿದ ನ್ಯಾಯಾಲಯವು ನಾಳೆ ಬಿಡುಗಡೆಗೊಳ್ಳಲಿರುವ “ಪಿಲಿ” ಚಿತ್ರದ ಪ್ರದರ್ಶನವನ್ನು ತಡೆ ಹಿಡಿದಿದೆ.

ನಿರ್ಮಾಪಕ ಮನ್ಜೀತ್ ನಾಗರಾಜ್ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಭರತ್ ಭಂಡಾರಿ ಎಂಬವರು ಚಿತ್ರದ ನಿರ್ಮಾಣಕ್ಕಾಗಿ ನನ್ನಿಂದ 40 ಲಕ್ಷ ಬಂಡವಾಳ ಪಡೆದು ಮೊದಲ ಹಂತದ ಚಿತ್ರೀಕರಣ ಮುಗಿದ ಬಳಿಕ ಹಣ ಪಡೆದು ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಆದರೆ ಇದೀಗ ಬೇರೆ ಯಾವುದೋ ನಿರ್ಮಾಪಕರ ಹೆಸರು ಹಾಕಿಕೊಂಡು ಚಿತ್ರ ಬಿಡುಗಡೆ ಮಾಡುತ್ತಿದ್ದಾರೆ. ಈ ಮೂಲಕ ನನಗೂ ಹಾಗೂ ಹಣ ಪಡೆದ ಇತರ ಸಹ ನಿರ್ಮಾಪಕರಿಗೂ ವಂಚಿಸಿದ್ದಾರೆ ಎಂದು ಮಂದೀಪ್ ನಾಗರಾಜ್ ಅವರು ಆರೋಪಿಸಿದ್ದಾರೆ. ಹಾಗೂ ಕೋರ್ಟ್ ನಲ್ಲಿ ಭರತ್ ಭಂಡಾರಿ ವಿರುದ್ಧ ಮತ್ತು ಚಿತ್ರ ಪ್ರದರ್ಶನ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದಾಗಿ ತಿಳಿಸಿದ್ದಾರೆ.