ಗಣಿಗಾರಿಕೆಗೆ ನಡೆಸಲು ರಸ್ತೆ ನಿರ್ಮಾಣಕ್ಕೆ ವಿರೋಧ, ಗಣಿ ಧನಿಯಿಂದ ಜಾಗದ ಮಾಲಿಕನಿಗೆ ಪೈರಿಂಗ್; ಆಸ್ಪತ್ರೆಗೆ ದಾಖಲು

ಚಿಕ್ಕಬಳ್ಳಾಪುರದ ಮಂಚೇನಹಳ್ಳಿ ಕನಗಾನಕೊಪ್ಪ ಎಂಬಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬರ ಕಾಲಿಗೆ ಗುಂಡು ಹಾರಿಸಲಾಗಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ರಸ್ತೆ ನಿರ್ಮಿಸಲು ವಿರೋಧ ವ್ಯಕ್ತಪಡಿಸಿದ್ದರಿಂದ ರೈತ ಚಿಕನ್‌ ರವಿ ಎಂಬುವವರ ಮೇಲೆ ಸಕಲೇಶ ಕುಮಾರ್‌ ಎಂಬಾತ ಫೈರಿಂಗ್‌ ಮಾಡಿದ್ದಾನೆ. ಗುಂಡಿನ ದಾಳಿ ನಡೆಸಿರುವ ಸಕಲೇಶಕುಮಾರ್, ಬಿಜೆಪಿ ಮಾಜಿ ಎಂಎಲ್‌ಸಿ ವೈ.ಎ. ನಾರಾಯಣಸ್ವಾಮಿ ಅವರ ಸಂಬಂಧಿ ಎನ್ನಲಾಗಿದೆ. ರಸ್ತೆ ನಿರ್ಮಾಣ ವಿರೋಧಿಸಿ ಪ್ರತಿಭಟನೆ ನಡೆಸುವ ವೇಳೆ ಚಿಕನ್ ರವಿ ಕಾಲಿಗೆ ಸಕಲೇಶಕುಮಾರ್ ಗುಂಡು ಹಾರಿಸಿದ್ದಾನೆ. ಚಿಕ್ಕಬಳ್ಳಾಪುರದ ಕನಗಾನಕೊಪ್ಪದ […]

Continue Reading

ಉಗ್ರರ ವಿರುದ್ದ ಸೆಣಸಾಡಿ, ಅವರ ಗುಂಡಿಗೆ ಹುತಾತ್ಮನಾದ ಕಾಶ್ಮೀರಿ ಮುಸ್ಲಿಂ ಯುವಕ ಆದಿಲ್

ಆದಿಲ್‌ ಮಾನವೀಯತೆಯ ನೆಲೆಯಲ್ಲಿ ಪ್ರವಾಸಿಗರನ್ನು ರಕ್ಷಿಸಲು ಮುಂದಾದಾಗ ನಿರ್ಧಯಿ ರಕ್ತಪಿಪಾಸುಗಳು ಕೊಂದೆ ಬಿಟ್ಟರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಭೀಕರ ಭಯೋತ್ಪಾದಕ ದಾಳಿಯಲ್ಲಿ ಬಲಿಯಾಗಿರುವ, ಕಾಶ್ಮೀರದ ಪಹಲ್ಗಾಮ್‌ನಲ್ಲಿ ಕುದುರೆ ಸವಾರಿ ಮಾಡಿಕೊಂಡು 28 ವರ್ಷದ ಸೈಯದ್‌ ಆದಿಲ್‌ ಹುಸೈನ್ ಶಾ ಕುಟುಂಬದ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಹಲವಾರು ವರ್ಷಗಳಿಂದಲೂ ಪಹಲ್ಗಾಮ್‌ಗೆ ಬರುವ ಪ್ರವಾಸಿಗರಿಗೆ ಕುದುರೆ ಸವಾರಿಯ ಸೇವೆ ನೀಡುತ್ತಿದ್ದರು. ಬೈಸರ್‌ ವ್ಯಾಲಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗಿ ಅವರನ್ನು ಸುರಕ್ಷಿತವಾಗಿ ಮರಳಿ ಅವರವರ ಹೋಟೆಲ್‌ಗಳಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದರು. ಏಪ್ರಿಲ್‌ […]

Continue Reading

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಗಡಿಬಿಡಿ.! ಶಾಸಕ ಸ್ಥಾನವನ್ನೇ ಕಳೆದುಕೊಳ್ಳುವ ಸಾಧ್ಯತೆ

ಇತ್ತೀಚೆಗೆ ಬಿಜೆಪಿಯ ಹದಿನೆಂಟು ಮಂದಿ ಶಾಸಕರ ಅಮಾನತಿನೊಂದಿಗೆ ಇದೀಗ ಮತ್ತೊಬ್ಬ ಶಾಸಕ ತನ್ನ ಸ್ಥಾನವನ್ನೇ ಕಳೆದುಕೊಳ್ಳುವ ಸಾಧ್ಯತೆ ಇದೆ. ಮಾರ್ಚ್ ತಿಂಗಳಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ಸ್ಪೀಕರ್ ಯು.ಟಿ ಖಾದರ್ ರವರು 18 ಬಿಜೆಪಿ ಶಾಸಕರನ್ನು ಅಮಾನತು ಮಾಡಿದ್ದರು. ಆದರೆ ತಮ್ಮ ಪಕ್ಷದ ಶಾಸಕರ ಅಮಾನತು ಆದೇಶ ವಾಪಸ್ ಪಡೆಯಬೇಕು ಎಂಬ ಹೋರಾಟವನ್ನು ಬಿಜೆಪಿ ಮುಂದುವರೆಸಿದ್ದು, ಈ ಅಮಾನತು ಆದೇಶದ ಮಧ್ಯೆ ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ ಕೂಡಾ ಶಾಸಕ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಬೆಳ್ತಂಗಡಿ […]

Continue Reading

ಪಹಲ್ಗಾಮ್ ಭಯೋತ್ಪಾದಕ ದಾಳಿ ಮನುಷ್ಯತ್ವದ ಮೇಲಿನ ದಾಳಿ, ಭಯೋತ್ಪಾದಕರನ್ನು ಹೆಡೆಮುರಿ ಕಟ್ಟಲು ಇದು ಸಕಾಲ

ಸ್ವರ್ಗದಲ್ಲಿ ರಕ್ತಪಾತ; ತುಂಬಿದೆ ಪಾಪಿಸ್ತಾನದ ಪಾಪದ ಕೊಡ: ✍️. ಇಸ್ಮಾಯಿಲ್ ಸುನಾಲ್, ವಕೀಲರು ಮಂಗಳೂರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್‌ನ ಸುಂದರ ಹುಲ್ಲುಗಾವಲಿಯಲ್ಲಿ 2025ರ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯು ಭಾರತವನ್ನು ಮಾತ್ರವಲ್ಲದೆ ಇಡೀ ಮನುಕುಲವನ್ನೇ ಆಘಾತಕ್ಕೀಡು ಮಾಡಿದೆ. ಈ ದಾಳಿಯಲ್ಲಿ 26ಕ್ಕೂ ಹೆಚ್ಚು ಅಮಾಯಕ ಪ್ರವಾಸಿಗರು, ಸ್ಥಳೀಯರು ಮತ್ತು ಒಬ್ಬ ನೌಕಾಪಡೆಯ ಅಧಿಕಾರಿಯ ಸೇರಿದಂತೆ ಜೀವಗಳು ಬಲಿಯಾಗಿವೆ. ಈ ಕೃತ್ಯವು ಕೇವಲ ಒಂದು ದಾಳಿಯಲ್ಲ, ಮಾನವೀಯತೆಯ ಮೇಲಿನ ಕ್ರೂರ ಆಕ್ರಮಣವಾಗಿದೆ. ಈ ಕೃತ್ಯವನ್ನು […]

Continue Reading

ರೈತರ ಕೃಷಿಭೂಮಿ ರಿಯಲ್ ಎಸ್ಟೇಟ್ ದಂಧೆಕೋರರ, ಮಾಫಿಯಾಗಳ ಪಾಲಾಗುತ್ತಿದೆ: ಕೆ ಯಾದವ ಶೆಟ್ಟಿ

ಗೇಣಿದಾರ ರೈತರು, ಬೀಡಿ, ಹೆಂಚು ಕಾರ್ಮಿಕರ ಸಮರಶೀಲ ಚಳವಳಿಗಳಿಂದ ಖ್ಯಾತಿ ಪಡೆದಿದ್ದ ಉಳ್ಳಾಲ ತಾಲೂಕಿನಲ್ಲಿ ಇಂದು ಜನ ಸಾಮಾನ್ಯರಿಗೆ ಧ್ವನಿಯೇ ಇಲ್ಲದಂತಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಇರುವ ಮನೆ, ನಿವೇಶನ ರಹಿತರಿಗೆ ಕಳೆದ ಒಂದೂವರೆ ದಶಕದಿಂದ ಒಂದು ವಸತಿ ಯೋಜನೆಯೂ ಜಾರಿಯಾಗಿಲ್ಲ, ಪಂಚಾಯತ್ ಗಳು ಕನಿಷ್ಟ ನಿವೇಶನರಹಿತರ ಪಟ್ಟಿಗಳನ್ನೂ ಸಿದ್ದಪಡಿಸಿಲ್ಲ ಎಂಬುದು ಇಲ್ಲಿನ ಜನಪ್ರತಿನಿಧಿಗಳ ಆದ್ಯತೆಯನ್ನು ಎತ್ತಿತೋರಿಸುತ್ತದೆ. ಬಡವರ, ಶ್ರಮಿಕರ, ಜನ ಸಾಮಾನ್ಯರ ಬೇಡಿಕೆಗಳು ಇಲ್ಲಿನ ರಾಜಕಾರಣದಲ್ಲಿ ಆದ್ಯತೆಯಾಗಿ ಉಳಿದಿಲ್ಲ. ರೈತರ ಕೈಯಲ್ಲಿರುವ ಅಲ್ಪ ಸ್ವಲ್ಪ ಜಮೀನು ವಿವಿಧ […]

Continue Reading

ಕರಾವಳಿಯಲ್ಲಿ UPSC ಪರೀಕ್ಷೆಯ ಸಾಧನೆಗೆ ಮುನ್ನುಡಿ ಬರೆದ ACE IAS ಅಕಾಡಮಿ

✍️. ಹನೀಫ್ ಪುತ್ತೂರು ಹಲವಾರು ವರ್ಷದ ಕನಸು ನಿರಂತರ ಪರಿಶ್ರಮ ಮೂಲಕ ನನಸಾಗಿದೆ. Ace IAS academy ಇದುವರೆಗೂ ಹಲವಾರು ಸರಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಕಳುಹಿಸಿದೆ. ಪೊಲೀಸ್ ಇಲಾಖೆ, ಇನ್ ಕಂ ಟ್ಯಾಕ್ಸ್, PWD, ಸರಕಾರಿ ಇಲಾಕೆಗಳಾದ ಕೃಷಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಹೀಗೆ ಹಲವಾರು ಇಲಾಖೆಯಲ್ಲಿ ಸಂಸ್ಥೆಯಲ್ಲಿ ಕೋಚಿಂಗ್ ಪಡೆದ ಅಭ್ಯರ್ಥಿಗಳು ಅಧಿಕಾರಿಗಳಾಗಿ, ಸಿಬ್ಬಂದಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿಶೇಷವಾಗಿ ಎಲ್ಲಾ ವರ್ಗದ ಅಭ್ಯರ್ಥಿಗಳು ಈ ಸಂಸ್ಥೆಯ ಪ್ರಯೋಜನ ಪಡೆದಿದ್ದಾರೆ. ಇದೆ ಮೊದಲ ಬಾರಿ ಯುಪಿಎಸ್ಸಿ […]

Continue Reading

ಮಾಲೀಕತ್ವ ಮರುಸ್ಥಾಪನೆ ಕಾನೂನು ಬಾಹಿರ: ಪರಿಶಿಷ್ಟರು ಜಮೀನು ಮಾರಿ ಮತ್ತೆ ಕೇಳಲಾಗದು; ಹೈಕೋರ್ಟ್ ಆದೇಶ

ಒಮ್ಮೆ ಮಾರಿದ್ದ ಜಮೀನನ್ನು ಹಿಂಪಡೆದು ಮತ್ತೆ ಎರಡನೇ ಬಾರಿಗೆ ಮಾರಾಟ ಮಾಡುವುದು ಅಪರಾಧ ಪ್ರಕ್ರಿಯೆಯಾಗಲಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸರಕಾರವು ಮಂಜೂರು ಮಾಡಿದ್ದ ಜಮೀನನ್ನು ಕರ್ನಾಟಕ ಎಸ್ ಸಿ-ಎಸ್ ಟಿ ( ಕೆಲವು ಜಮೀನುಗಳ ಪರಭಾರೆ ನಿಷೇಧ- ಪಿಟಿಸಿಎಲ್) ಕಾಯ್ದೆಯಡಿ ಹಿಂಪಡೆದು, ಮತ್ತೆ ಮಾರಾಟ ಮಾಡಿ ಪುನಃ ತಮಗೆ ಹಿಂದಿರಿಗಿಸುವಂತೆ ನಿರ್ದೇಶನ ಕೋರಿ ಪಿಟಿಸಿಎಲ್ ಕಾಯ್ದೆಯಡಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕಾನೂನು ಬಾಹಿರ ನಡೆ ಎಂದು ಹೈಕೋರ್ಟ್ ಹೇಳಿದೆ. ಸರ್ಕಾರದಿಂದ ಮಂಜೂರಾಗಿದ್ದ ಜಮೀನನ್ನು ಎರಡನೇ ಬಾರಿ […]

Continue Reading

ಪಂಕ್ಚರ್ ಹೆಸರಲ್ಲಿ ಭಾರತದ ಸಂವಿಧಾನವನ್ನು ಪಂಕ್ಚರ್ ಮಾಡಲು ಹೊರಟವರು –ದ್ವೇಷದ ಹಿನ್ನೆಲೆಯ ವಿಶ್ಲೇಷಣೆ

“ಸಂವಿಧಾನದ ಶಕ್ತಿ ಕಾನೂನಿನಲ್ಲಿ ಮಾತ್ರವಲ್ಲ – ಜನರ ನಂಬಿಕೆಯಲ್ಲಿ ಇರುತ್ತದೆ. ಆ ನಂಬಿಕೆಯನ್ನು ಪಂಕ್ಚರ್ ಮಾಡುವವರನ್ನು ನಾವು ನಿರ್ಬಂಧಿಸಲೇಬೇಕು”. ✍️. ಇಸ್ಮಾಯಿಲ್ ಸುನಾಲ್ ವಕೀಲರು, ಮಂಗಳೂರು ಭಾರತದ ಸಂವಿಧಾನ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಾರ್ಗದರ್ಶನದಲ್ಲಿ ರೂಪುಗೊಂಡ, ಧರ್ಮನಿರಪೇಕ್ಷತೆ, ಸಮಾನತೆ, ನ್ಯಾಯ, ಮತ್ತು ವ್ಯಕ್ತಿಸ್ವಾತಂತ್ರ್ಯದ ಆದರ್ಶಗಳ ತಾಳೆಗಂಬವಾಗಿ ದೇಶವನ್ನು ನಿಲ್ಲಿಸಿದೆ. ಆದರೆ ಇತ್ತೀಚಿನ ಕಾಲದಲ್ಲಿ, ಕೆಲ ರಾಜಕೀಯ ನಾಯಕರ ಹೇಳಿಕೆಗಳು ಮತ್ತು ನಡವಳಿಕೆಗಳು ಈ ತತ್ವಗಳಿಗೆ ಬಿರುಕು ತರುವಂತದ್ದಾಗಿವೆ. ಈ ಹೇಳಿಕೆಗಳು ಕೇವಲ ನಿಲ್ಲದ ವಾಗ್ದಾಳಿ ಅಲ್ಲ, […]

Continue Reading

ಯುಎಇ: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ವಾರ್ಷಿಕ ಮಹಾಸಭೆ

ಸಲಹಾ ಸಮಿತಿ ಅಧ್ಯಕ್ಷರಾಗಿ ಅಶ್ರಫ್ ಶಾ, ಗೌ.ಅ ನ್ಯಾಯವಾದಿ ಇಬ್ರಾಹಿಂ ಖಲೀಲ್, ಅಧ್ಯಕ್ಷರಾಗಿ ಅಮರ್ ಕಲ್ಲುರಾಯ, ಪ್ರ. ಕಾರ್ಯದರ್ಶಿ ಇಬ್ರಾಹಿಂ ಆಯ್ಕೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಸೋಮಣ್ಣ ಬೇಬಿನಮರ ಹಾಗೂ ಪ್ರಾಧಿಕಾರದ ಸದಸ್ಯರಾದ ಡಾ. ಸಂಜೀವ ಕುಮಾರ ಅತಿವಾಲೆ, ಶ್ರೀ ಶಿವರೆಡ್ಡಿ ಖ್ಯಾಡೆದ್, ಅವರ ಉಪಸ್ಥಿತಿಯಲ್ಲಿ ದಿನಾಂಕ 19/04/25 ರಂದು ದುಬಾಯಿಯಲ್ಲಿ ನಡೆದ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ವಾರ್ಷಿಕ ಮಹಾ ಸಭೆಯಲ್ಲಿ ಜಿಸಿಸಿಯ ಸಲಹಾ ಸಮಿತಿ ಅಧ್ಯಕ್ಷರನ್ನಾಗಿ ಶ್ರೀ ಅಶ್ರಫ್ […]

Continue Reading

ಜನರ ಬದುಕಿನ ಕುರಿತು ಧ್ವನಿ‌ ಎತ್ತುವುದು, ಹೋರಾಟಗಳನ್ನು ಸಂಘಟಿಸುವುದೇ ನಿಜವಾದ ರಾಜಕಾರಣ: ಮುನೀರ್ ಕಾಟಿಪಳ್ಳ

ಜನರ ಬದುಕಿನ ಕುರಿತು ಧ್ವನಿ ಎತ್ತುವುದು, ಹೋರಾಟಗಳನ್ನು ಸಂಘಟಿಸುವುದು ನಿಜವಾದ ರಾಜಕಾರಣ. ಆದರೆ, ತುಳುನಾಡು ಅದಕ್ಕೆ ವಿರುದ್ಧವಾಗಿ ಚಲಿಸುತ್ತಿದೆ. ಇಲ್ಲಿನ ಬಿಜೆಪಿ, ಕಾಂಗ್ರೆಸ್ ಪಕ್ಷದ ಮುಖಂಡರು, ಜನಪ್ರತಿನಿಧಿಗಳು ಅಬ್ಬರದ ಕಂಬಳ, ಹುಲಿ ಕುಣಿತ, ಹೊನಲು ಬೆಳಕಿನ ಕ್ರೀಡಾಕೂಟಗಳನ್ನು ಹಮ್ಮಿಕೊಂಡು ಜನರ ಗಮನ ಸೆಳೆಯುವುದೇ ರಾಜಕಾರಣವನ್ನಾಗಿಸಿವೆ. ಇಲ್ಲಿನ ಪ್ರತಿಯೊಬ್ಬ ಶಾಸಕ, ಮಾಜಿ ಶಾಸಕನಿಗೆ ಪ್ರತಿಷ್ಟೆ ಮೆರೆಯುವ ಒಂದೊಂದು ಕಂಬಳಗಳಿವೆ. ಇದರಿಂದ ಜನ ಸಾಮಾನ್ಯರ ಬದುಕಿನ ಬೇಡಿಕೆಗಳ ಧ್ವನಿ ಕಳೆದುಕೊಂಡಿವೆ. ಸಿಪಿಐಎಂ ಪಕ್ಷ ಮಾತ್ರ ಇದಕ್ಕೆ ವಿರುದ್ದವಾಗಿ ನಿಜವಾದ ಜನ […]

Continue Reading