ಶುದ್ಧ ಕುಡಿಯುವ ನೀರನ್ನು ಅನಗತ್ಯ ಪೋಲು ಮಾಡುವವರಿಂದ 5.60 ಲಕ್ಷ ದಂಡ ವಸೂಲಿ ಮಾಡಿದ ಜಲಮಂಡಳಿ

ಕುಡಿಯುವ ನೀರನ್ನು ಕೈದೋಟ, ಕಟ್ಟಡ ನಿರ್ಮಾಣಕ್ಕೆ ಬಳಸಿದವರ ಮೇಲೆ ದಾಖಲಾಯ್ತು 112 ಪ್ರಕರಣಗಳು ಕುಡಿಯುವ ನೀರಿನ ಅನಗತ್ಯ ಪೋಲು ಮಾಡುವವರ ವಿರುದ್ಧ ಬೆಂಗಳೂರು ಜಲಮಂಡಳಿಯ ದಂಡ ಅಭಿಯಾನ ಚುರುಕುಗೊಂಡಿದೆ. ಕಳೆದ ಒಂದು ವಾರದಲ್ಲಿ 112 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಕುಡಿಯುವ ನೀರಿನ ಅನಗತ್ಯ ಪೋಲು ಮಾಡಿದವರಿಂದ 5.60 ಲಕ್ಷ ರೂಪಾಯಿ ದಂಡ ವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾದ್ ಮನೋಹರ್ ತಿಳಿಸಿದ್ದಾರೆ. ಮುಂಬರುವ ಬೇಸಿಗೆಯಲ್ಲಿ […]

Continue Reading

ಪಾಸ್ ಪೋರ್ಟ್ ನಿಯಮಗಳಲ್ಲಿ ತಿದ್ದುಪಡಿ, ಅರ್ಜಿದಾರರಿಗೆ ಜನನ ಪ್ರಮಾಣಪತ್ರ, ಜನ್ಮ ದಿನಾಂಕ ಮಾತ್ರ ಪುರಾವೆ.

ಕೇಂದ್ರ ಸರಕಾರವು ಪಾಸ್‌ಪೋರ್ಟ್ ನಿಯಮಗಳನ್ನು ತಿದ್ದುಪಡಿ ಮಾಡಿದೆ. ಅಕ್ಟೋಬರ್ 1, 2023 ರಂದು ಅಥವಾ ಅದರ ನಂತರ ಜನಿಸಿದ ಅರ್ಜಿದಾರರಿಗೆ ಜನನ ಪ್ರಮಾಣಪತ್ರಗಳನ್ನು ಜನ್ಮ ದಿನಾಂಕದ ಪುರಾವೆಯಾಗಿ ಮಾತ್ರ ಮಾಡಲಾಗುತ್ತಿದೆ. ಪಾಸ್‌ಪೋರ್ಟ್ ನಿಯಮಗಳನ್ನು ತಿದ್ದುಪಡಿ ಮಾಡಿದ ಕೇಂದ್ರ ಸರಕಾರ ಅಕ್ಟೋಬರ್ 1, 2023 ರಂದು ಅಥವಾ ನಂತರ ಜನಿಸಿದ ಪಾಸ್‌ಪೋರ್ಟ್ ಅರ್ಜಿದಾರರಿಗೆ ಸೂಕ್ತ ಅಧಿಕಾರಿಗಳು ನೀಡಿದ ಜನನ ಪ್ರಮಾಣಪತ್ರಗಳನ್ನು ಜನ್ಮ ದಿನಾಂಕದ ಏಕೈಕ ಪುರಾವೆಯನ್ನಾಗಿ ಮಾಡಿದೆ. 1980 ರ ಪಾಸ್‌ಪೋರ್ಟ್ ನಿಯಮಗಳಿಗೆ ತಿದ್ದುಪಡಿ ತರುವ ಬಗ್ಗೆ ಅಧಿಕೃತ […]

Continue Reading

ಬೆಳ್ತಂಗಡಿಯಲ್ಲಿ ಪ್ರಪ್ರಥಮ ಬಾರಿಗೆ ಡಿಪ್ಲೋಮಾ, ಪಿಜಿ ಡಿಪ್ಲೋಮಾ, ತಾಂತ್ರಿಕ ಮತ್ತು ವೃತ್ತಿಪರ ತರಬೇತಿ ಸಂಸ್ಥೆ ಕಾರ್ಯಾರಂಭ

ಬೆಳ್ತಂಗಡಿಯಲ್ಲಿ ಮೊಟ್ಟ ಮೊದಲ ಭಾರಿ ಮೈಫ್ಸ್ MIFSE (Mangalore Institute of Fire and Safety Engineering) ಮತ್ತು ಅನುಗ್ರಹ ಟ್ರೈನಿಂಗ್ ಕಾಲೇಜು ಜಂಟಿ ಸಹಯೋಗದಲ್ಲಿ ಬೆಳ್ತಂಗಡಿಯಲ್ಲಿ ಡಿಪ್ಲೊಮಾ, ಪಿ ಜಿ ಡಿಪ್ಲೋಮಾ ಹಾಗೂ ತಾಂತ್ರಿಕ ಮತ್ತು ವೃತ್ತಿಪರ ತರಬೇತಿ ಸಂಸ್ಥೆ ಬೆಳ್ತಂಗಡಿಯ ಸಂತೆಕಟ್ಟೆ ಶ್ರೀರಾಮ ಕಾಂಪ್ಲೆಕ್ಸ್ ನಲ್ಲಿ ಪ್ರಾರಂಭ. ಶ್ರೀ. ತಲ್ ಹತ್ ಎಂ ಜಿ ಸವಣಾಲು ಇವರು ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಸುತ್ತಿರುವ ಅನುಗ್ರಹ ಎಜುಕೇಶನ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ (ರಿ) ಇದರ ಅಂಗ ಸಂಸ್ಥೆಯಾದ […]

Continue Reading

ಕರ್ನಾಟಕದ ಏಕನಾಥ ಶಿಂಧೆ ಆಗುತ್ತರಾ ಡಿಕೆಶಿ..?

ಆಪತ್ಕಾಲದಲ್ಲಿ ಬಳಸಿಕೊಂಡು ಕೈ ಬಿಡುವ ‘ಕೈ ಕಮಾಂಡ್’ ಗೆ ಎಚ್ಚರಿಕೆಯ ಕರೆಗಂಟೆ.! ಕೆಪಿಸಿಸಿ ಅಧ್ಯಕ್ಷ, ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇಶಾ ಫೌಂಡೇಶನ್ ಸಂಸ್ಥಾಪಕ ಜಗ್ಗಿ ವಾಸುದೇವ್ ಅವರ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ರಾಜಕೀಯ ವಲಯದಲ್ಲಿ ಸುಂಟರಗಾಳಿ ಎಬ್ಬಿಸಿದೆ. ರಾಜಕೀಯ ಪರಿಣಿತರಿಂದ ಹಲವು ವಿಶ್ಲೇಷಣೆಗಳು ನಡೆಯುತ್ತಿದೆ. ಉಹಾಪೋಹಗಳಿಗೂ ಕಾರಣವಾಗಿದೆ. ಡಿಕೆಶಿ ರಾಜಕೀಯ ಗುರು ಎಸ್ ಎಂ ಕೃಷ್ಣ ರಂತೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಾರಾ..?ಅಷ್ಟಕ್ಕೂ ಡಿಕೆಶಿ ಕಾಂಗ್ರೆಸ್ ಗೆ ಗುಡ್ ಬೈ ಹೇಳುತ್ತಾರಾ.? ಆಪತ್ಕಾಲದಲ್ಲಿ ಬಳಸಿಕೊಂಡ ಕೈ ಕಮಾಂಡಿಗೆ […]

Continue Reading

ಶಿವರಾತ್ರಿ ಕಾರ್ಯಕ್ರಮ ರಾಜಕೀಯಕ್ಕೆ ಬಳಸಿಕೊಂಡ ಈಶ ಪೌಡೇಶನ್ ಗುರು ಜಗ್ಗಿ ವಾಸುದೇವ್ ಬಿ.ಜೆ.ಪಿ ಫಲಾನುಭವಿ: ವೈ.ಬಿ.ಚಂದ್ರಕಾಂತ್

ಕೊಯಮತ್ತೂರಿನ ಈಶ ಪೌಡೇಷನ್ ವತಿಯಿಂದ ಶಿವರಾತ್ರಿ ಜಾಗರಣೆಯಂದು ಕಾರ್ಯಕ್ರಮದಲ್ಲಿ ಈಶ ಪೌಡೇಶನ್‌ನ ಗುರು ಜಗ್ಗಿ ವಾಸುದೇವ್ ಅವರು ಕಾಂಗ್ರೇಸ್ ಪಕ್ಷದ ಸರ್ಕಾರದ ಬಗ್ಗೆ ಟೀಕೆ ಮಾಡಿ, ಬಿ.ಜೆ.ಪಿ. ಸರ್ಕಾರವನ್ನು ಹೊಗಳಿರುವುದು ನೋಡಿದರೆ ಬಿ.ಜೆ.ಪಿ.ಯಿಂದ ಗುರು ಜಗ್ಗಿ ವಾಸುದೇವ್ ಅವರು ಬಹುದೊಡ್ಡ ಫಲಾನುಭವಿ ಆದಂತ್ತಿದೆ ಎಂದು ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ಅವರು ಆರೋಪಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಂದಾಗಿ ದೇಶದಲ್ಲಿ ಯಾವುದೇ ಮೂಲೆಯಲ್ಲಿ ಬಾಂಬ್ ಸ್ಪೋಟದ ದುಷ್ಕೃತ್ಯಗಳು ನಡೆದಿರುವುದಿಲ್ಲ. ಅದೆ ಯು.ಪಿ.ಎ. ಸರ್ಕಾರದ ಅವಧಿಯಲ್ಲಿ ಇಂತಹ […]

Continue Reading

ವಾಟ್ಸ್ ಅಪ್ ಮೂಲಕ ಪೊಲೀಸರು ನೋಟಿಸ್ ನೀಡುವಂತಿಲ್ಲ: ಹೈಕೋರ್ಟ್

ಪೊಲೀಸರು ವಾಟ್ಸಾಪ್ ಮೂಲಕ ನೋಟಿಸ್ ನೀಡುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿ ಹೈಕೋರ್ಟ್ ಈ ಆದೇಶ ನೀಡಿದೆ. ತಮಿಳುನಾಡಿನ ಪವನ್ ಕುಮಾರ್ ಎಂಬಾತನಿಗೆ ಪೊಲೀಸರು ವಾಟ್ಸಾಪ್ ಮೂಲಕ ಆಡುಗೋಡಿ ಠಾಣೆಯ ಪೊಲೀಸರು ನೋಟಿಸ್ ನೀಡಿದ್ದರು. ಐಟಿ ಕಾಯ್ದೆಯ ಸೆಕ್ಷನ್ 66(ಸಿ), 66(ಡಿ) ಅಡಿ ಅವರಿಗೆ ನೋಟಿಸ್ ನೀಡಲಾಗಿತ್ತು. ಸುಪ್ರೀಂಕೋರ್ಟ್ ಸತ್ಯೇಂದರ್ ಕುಮಾರ್ ಅಂಟಿಲ್ ಪ್ರಕರಣದಲ್ಲಿ ಈ ಕುರಿತಾಗಿ ತೀರ್ಪು ನೀಡಿದೆ. CRPC/BNSS ಅಡಿಯಲ್ಲಿ ಸೂಚಿಸಿರುವಂತೆ ನೋಟಿಸ್ ನೀಡಬೇಕಿದೆ. ವಾಟ್ಸಾಪ್ ಮೂಲಕ ಪೊಲೀಸರು ನೋಟಿಸ್ […]

Continue Reading

ತೇಜಸ್ವಿನಿ‌ ಆಸ್ಪತ್ರೆಯ ನಿರ್ಲಕ್ಷ್ಯವೇ ಪಂಜಿಮೊಗರು ನಿವಾಸಿ ಹಾಮದ್ ಸಾವಿಗೆ ಕಾರಣ: ಸಂತೋಷ್ ಬಜಾಲ್

ತೇಜಸ್ವಿನಿ ಆಸ್ಪತ್ರೆಯ ವೈದ್ಯಕೀಯ ನಿರ್ಲಕ್ಷ್ಯಕ್ಕೆ ಒಳಗಾಗಿ ಸಾವನ್ನಪ್ಪಿದ ಪಂಜಿಮೊಗರು ನಿವಾಸಿ ಹಾಮದ್ ಎಂಬವರ ಸಾವಿಗೆ ನ್ಯಾಯ ಒದಗಿಸುವ ಮತ್ತು ಸಂತ್ರಸ್ತ ಕುಟುಂಬಕ್ಕೆ ಗರಿಷ್ಠ ಪ್ರಮಾಣದ ಪರಿಹಾರ ಒದಗಿಸಲು ಒತ್ತಾಯಿಸಿ ಡಿವೈಎಫ್ಐ ಪಂಜಿಮೊಗರು ಘಟಕ ನೇತೃತ್ವದಲ್ಲಿ ಇಂದು ಮಿನಿವಿಧಾನಸೌಧದ ಮುಂಭಾಗ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿದರು. ಡಿಸೆಂಬರ್ 21ರಂದು ಅಪಘಾತಗೊಳಗಾದ ಹಾಮದ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರೂ ಗಂಭೀರ ಗಾಯಗಳನ್ನು ಗುರುತಿಸಿ ಚಿಕಿತ್ಸೆ ನೀಡುವಲ್ಲಿ ತೇಜಸ್ವಿನಿ ಆಸ್ಪತ್ರೆ ಬೇಜಾವಾಬ್ದಾರಿ ವರ್ತನೆ […]

Continue Reading

ಉಪವಾಸ ಕ್ಯಾನ್ಸರ್ ವೈರಾಣು ವಿರುಧ್ದ ಹೋರಾಡುತ್ತೆ: ಜಪಾನ್ ನೋಬಲ್ ವಿಜೇತ ವಿಜ್ಞಾನಿ ಯೋಶಿನೋರಿ ಓಹ್ಸುಮಿ

ಜಪಾನಿನ ನೊಬೆಲ್ ಶಾಂತಿ ವಿಜೇತ ವಿಜ್ಞಾನಿ, ಯೋಶಿನೋರಿ ಓಹ್ಸುಮಿ ರಂಜಾನ್ ಸಮಯದಲ್ಲಿ ಉಪವಾಸ ಮಾಡುವುದರಿಂದ ನಮ್ಮ ದೇಹವು ಕ್ಯಾನ್ಸರ್ ವಿರುದ್ಧ ಹೋರಾಡಬಹುದು ಎಂದು ಸೂಚಿಸಿದ್ದಾರೆ. ಜಪಾನಿನ ವಿಜ್ಞಾನಿ ಯೋಶಿನೋರಿ ರವರು ಜೀವಕೋಶಗಳು ಅದರ ವಿಷಯವನ್ನು ಹೇಗೆ ಮರುಬಳಕೆ ಮಾಡುತ್ತವೆ ಎಂಬುದನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕ್ರಿಯೆಯನ್ನು ಆಟೊಫ್ಯಾಜಿ ಎಂದು ಕರೆಯಲಾಗುತ್ತದೆ. ಇದನ್ನು ಗ್ರೀಕ್ ಭಾಷೆಯಲ್ಲಿ ಸ್ವಯಂ-ತಿನ್ನುವುದು ಎಂದೂ ಕರೆಯುತ್ತಾರೆ. ಜೀವಕೋಶಗಳು ಪ್ರೋಟೀನ್ ಮತ್ತು ಎಲ್ಲಾ ಅನಿವಾರ್ಯವಲ್ಲದ ಘಟಕಗಳನ್ನು ಒಡೆದು ಶಕ್ತಿಗಾಗಿ ಇವೆಲ್ಲವನ್ನೂ ಮರುಬಳಕೆ ಮಾಡಿದಾಗ ಇದು ಒಂದು ನಿರ್ಣಾಯಕ […]

Continue Reading

ಪರಂಗಿಪೇಟೆ: ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣ: ನಾಳೆ ಪರಂಗಿಪೇಟೆ ಬಂದ್ ಗೆ ಕರೆ.

ಮನೆಯ ಪಕ್ಕದಲ್ಲಿರುವ ರೈಲ್ವೆ ಹಳಿ ಬಳಿ ಆತನ ಪಾದರಕ್ಷೆಗಳು ಹಾಗೂ ಮೊಬೈಲ್‌ ಪತ್ತೆ. ಸರಿ ಸುಮಾರು ಮೂರು ದಿನದಿಂದ ನಾಪತ್ತೆಯಾಗಿರುವ ಕಪಿತಾನಿಯೋ ಕಾಲೇಜಿನ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಫರಂಗಿಪೇಟೆಯ ಪ್ರದೇಶದ ವಿದ್ಯಾರ್ಥಿಯ ಕುರಿತು ಯಾವುದೇ ಸುಳಿವು ಸಿಗದಿದ್ದರೂ ಸಾಕಷ್ಟು ಜಟಿಲವಾಗಿರುವ ಜತೆಗೆ ಅನುಮಾನಗಳನ್ನೂ ಸೃಷ್ಟಿಸಿದೆ. ಪೊಲೀಸರು ಆತನ ಪತ್ತೆಗೆ ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಮುಂದುವರಿಸಿದ್ದು, ಗುರುವಾರ ಬೆಳಗ್ಗೆ ಸ್ಥಳೀಯ ಮುಖಂಡರು ಫರಂಗಿಪೇಟೆಯಲ್ಲಿ ಪ್ರತಿಭಟನೆ ನಡೆಸಿ ಪ್ರಕರಣವನ್ನು ಶೀಘ್ರ ಭೇದಿಸಿ ವಿದ್ಯಾರ್ಥಿಯನ್ನು ಪತ್ತೆ ಮಾಡುವಂತೆ ಆಗ್ರಹಿಸಿದರು. ಫೆ. […]

Continue Reading

ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನಿಂದ ವಿದ್ಯಾರ್ಥಿ ವೇತನ ವಿತರಣೆ

ಫೆ. 26: ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನ ಮಂಗಳೂರು ಶಾಖೆಯಿಂದ ಸಿಎಸ್‌ಆರ್ ಯೋಜನೆಯಡಿ ಜಿಲ್ಲೆಯ ಸರಕಾರಿ ಶಾಲೆಗಳ 462 ಕಾಲೇಜು ವಿದ್ಯಾರ್ಥಿನಿಯರಿಗೆ 37.28 ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಬುಧವಾರ ನಡೆಯಿತು. ‘ಶಿಕ್ಷಣ ಸಬಲೀಕರಣ, ಮಹಿಳಾ ಸಬಲೀಕರಣ’ ಎಂಬ ಧ್ಯೇಯ ವಾಕ್ಯದಡಿ ನಡೆದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಂಗಳೂರು ಸ್ಟೋರ್ ಮುಖ್ಯಸ್ಥ ಶರತ್‌ ಚಂದ್ರನ್, ಸಂಸ್ಥೆಯು ತನ್ನ ಲಾಭಾಂಶದ ಶೇ. 5ರಷ್ಟನ್ನು ಪ್ರತಿವರ್ಷ ಸಿಎಸ್‌ಆರ್ ಯೋಜನೆಯಡಿ ವಿವಿಧ […]

Continue Reading