ಅಮೆರಿಕದಂತೆ ಭಾರತದಲ್ಲೂ ಜಾರಿಯಾಗಲಿದೆ ಅಕ್ರಮ ವಿದೇಶಿ ವಲಸಿಗರ ಮಸೂದೆ; ಬಜೆಟ್ ಅಧಿವೇಶನದಲ್ಲಿ ಮಂಡಿಸಲು ಗೃಹ ಸಚಿವ ಅಮಿತ್ ಷಾ ಸಿದ್ಧತೆ.!

ಅಮೆರಿಕದಲ್ಲಿ ಕಠಿಣ ವಲಸೆ ನಿಯಮ ಜಾರಿಗೆ ತಂದ ಬೆನ್ನಲ್ಲೇ ಭಾರತ ಕೂಡ ಕಠಿಣ ವಲಸೆ ನಿಯಮ ಜಾರಿಗೆ ತರಲು ಮುಂದಾಗಿದೆ. ಮಾರ್ಚ್ ನಲ್ಲಿ ನಡೆಯುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಲಸೆ ಮತ್ತು ಅಕ್ರಮ ವಿದೇಶಿ ವಲಸಿಗರ ಮಸೂದೆಯನ್ನು ಮಂಡಿಸುವ ಸಾಧ್ಯತೆಯಿದೆ. ಭಾರತದ ಪಾಸ್‌ಪೋರ್ಟ್ ಕಾಯ್ದೆ 1920, ವಿದೇಶಿಯರ ನೋಂದಣಿ ಕಾಯ್ದೆ 1939, ವಿದೇಶಿಯರ ಕಾಯ್ದೆ 1946 ಮತ್ತು ವಲಸೆ ಕಾಯ್ದೆ 2000, ಇವು ಪ್ರಸ್ತುತ ಭಾರತದಲ್ಲಿ ವಿದೇಶಿಯರಿಗೆ ಸಂಬಂಧಿಸಿದ ವಿವಿಧ […]

Continue Reading

ಮಂಗಳೂರು: “ದಕ್ಷಿಣ ಕನ್ನಡ ಮುಸ್ಲಿಂ ಜನಪ್ರಧಿನಿಧಿಗಳ ಒಕ್ಕೂಟ” ಅಸ್ತಿತ್ವಕ್ಕೆ; ಅಧ್ಯಕ್ಷರಾಗಿ ಸಿರಾಜ್ ಬಜಪೆ ಆಯ್ಕೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಇರುವ ಕಾಂಗ್ರೆಸ್ ನಲ್ಲಿರುವ ಮುಸ್ಲಿಂ ಸಮುದಾಯದ ಜನಪ್ರತಿನಿಧಿಗಳನ್ನು ಒಗ್ಗೂಡಿಸಿಕೊಂಡ “ದಕ್ಷಿಣ ಕನ್ನಡ ಮುಸ್ಲಿಂ ಜನಪ್ರಧಿನಿಧಿಗಳ ಒಕ್ಕೂಟ” ನೂತನ ಸಂಘಟನೆಯು ಫೆ.24ರಂದು ನಗರದ ಜಮೀಯ್ಯತುಲ್ ಫಲಾಹ್ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಅಸ್ತಿತ್ವಕ್ಕೆ ತರಲಾಯಿತು. ಪ್ರಥಮ ಹಂತದಲ್ಲಿ 252 ಸದಸ್ಯರನ್ನೊಳಗೊಂಡ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಸಿರಾಜ್ ಬಜ್ಪೆ, ಉಪಾಧ್ಯಕ್ಷರಾಗಿ ಹಾಜಿರಾ ಗಫೂರ ಕಲ್ಮಡ್ಕ ಸುಳ್ಯ, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಸಜಿಪ ನಡು ಅವರನ್ನು ಸಭೆಯು ಸರ್ವನಾಮತದಿಂದ ಆಯ್ಕೆಮಾಡಿತು. ಅಲ್ಲದೆ ಮುಂದಿನ ಸಭೆಯಲ್ಲಿ ಉಳಿದ […]

Continue Reading

ಹಿಂದುಸ್ಥಾನದ ಬಹಳ ಕಡೆಗಳಲ್ಲಿ ಇಸ್ಲಾಮಿನ ಹುಖೂಮತ್ ಸ್ಥಾಪನೆಯಾಗಲಿದೆ

ಮಣ್ಣಿನಡಿಯಲ್ಲಿ ಹುದುಗಿದ್ದ “ತೌಫತುಲ್ ಅಘಾನಿ” ಎಂಬ ಗ್ರಂಥದಲ್ಲಿ ಅಡಗಿದ್ದ ಭವಿಷ್ಯವಾಣಿ.? ಒಂದು ಸಮುದಾಯವನ್ನು ಅಳಿಸಲು, ಆ ಸಮುದಾಯದ ಜನರನ್ನು ಕೊಂದು ಮುಗಿಸಬೇಕೆಂದಿಲ್ಲ. ಅವರ ಸಾಹಿತ್ಯ, ಸಂಸ್ಕ್ರತಿಯನ್ನು ಅಳಿಸಿದರೆ ಸಾಕು. ಇದು ಸಮುದಾಯಯ ವಿರೋಧಿಗಳ ಷಡ್ಯಂತ್ರ.! ಇಸ್ಲಾಮಿನ ಅಸ್ಥಿತ್ವವನ್ನು ಅಳಿಸಲು ಇಸ್ಲಾಮಿನ ಕಟ್ಟರ್ ವಿರೋಧಿಗಳಾದ ಯಹೂದಿಗಳು ಮತ್ತು ಪಾಶ್ಚಾತ್ಯ ಸಾಮ್ರಾಜ್ಯಶಾಹಿ ಆತಂಕಿಗಳು ಕಂಡುಕೊಂಡ ಷಡ್ಯಂತ್ರಗಳು ಹಲವಾರು. ಒಂದು, ಇಸ್ಲಾಂ ಆಗಿ ಅದರೊಳಗಿದ್ದುಕೊಂಡೇ, ಇಸ್ಲಾಮಿನ ಇತಿಹಾಸ, ಕರ್ಮಶಾಸ್ತ್ರವನ್ನು ತಿರುಚುತ್ತಾ, ಶಿರ್ಕ್ ಗಳನ್ನು ಸೃಷ್ಟಿಸಿ, ಬಲವನ್ನು ಕುಂದಿಸುವುದು. ಇಸ್ಲಾಮ್ ಸಾಹಿತ್ಯ, ಆರ್ಥಿಕ […]

Continue Reading

ನೀರಿನ ಸಮಸ್ಯೆಯಿಂದ ಒದ್ದಾಡುತ್ತಿದ್ದ ಕುಟುಂಬಗಳಿಗೆ ಕೊಳವೆ ಬಾವಿ ಕೊಡುಗೆ ನೀಡಿದ ಜಮಾತೇ ಇಸ್ಲಾಂ ಹಿಂದ್ ಸಂಘಟನೆ.

ಸಾಮಾಜಿಕ ಕಾರ್ಯಕರ್ತನ ಸೇವೆಗೆ ಕೊಳ್ನಾಡು ಜನತೆಯ ಶಹಬ್ಬಾಸ್. ವಿಟ್ಲ : ಆರು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆಯಿಂದ ಒದ್ದಾಡುತ್ತಿದ್ದ ಕೊಳ್ನಾಡು ಗ್ರಾಮದ ಅರುವತ್ತಕ್ಕೂ ಹೆಚ್ಚು ಕುಟುಂಬಗಳಿಗೆ ಜೆ.ಐ.ಹೆಚ್. ಸಂಘಟನೆಯ ಕಾರ್ಯಕರ್ತರೊಬ್ಬರು ಕೊಳವೆ ಬಾವಿ ಕೊರೆಸಿ ಹೃದಯವಂತಿಕೆ ಮೆರೆದ ಘಟನೆ ಕೊಳ್ನಾಡು ಗ್ರಾಮದಲ್ಲಿ ನಡೆದಿದೆ. ಕೊಳ್ನಾಡು ಗ್ರಾಮದ ಸೆರ್ಕಳ ಪರಿಸರದ ಸುಮಾರು ಅರುವತ್ತು ಮನೆಗಳಿಗೆ ಈವರೆಗೆ ಪಂಚಾಯತು ಕುಡಿಯುವ ನೀರಿನ ವ್ಯವಸ್ಥೆ ಮಾಡಿತ್ತು. ಕಳೆದ ಆರು ತಿಂಗಳಿಂದ ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾದ ಕಾರಣ ಪರಿಸರದ […]

Continue Reading

ಫಿತ್ರ್ ಝಕಾತಿನ ತತ್ವ ಮತ್ತು ಸಿದ್ಧಾಂತಗಳ ಬೆಳಕಿನಲ್ಲಿ ಅವುಗಳ ವಿತರಣೆಯಲ್ಲಿ ಸುಧಾರಿತ ಕ್ರಮವೊಂದರ ಅವಶ್ಯಕತೆ ಇದೆಯೇ.? ಎಂಬ ಬಗ್ಗೆ ಚಿಂತಿಸಬೇಕಾಗಿದೆ.

✍️. ಅಶ್ಫಕ್ ಅಹ್ಮದ್ ಕಾಟಿಪಳ್ಳ ಫಿತ್ರ್ ಝಕಾತಿನ ತತ್ವ ಮತ್ತು ಸಿದ್ಧಾಂತಗಳ ಬೆಳಕಿನಲ್ಲಿ ಅವುಗಳ ವಿತರಣೆಯಲ್ಲಿ ಸುಧಾರಿತ ಕ್ರಮವೊಂದರ ಅವಶ್ಯಕತೆ ಇದೆಯೇ ಎಂಬ ಬಗ್ಗೆ ಚಿಂತಿಸಬೇಕಾಗಿದೆ. ಕಾಲ ಮತ್ತು ಪರಿಸ್ಥಿತಿಗಳಿಗೆ ಅನುಗುಣವಾಗಿ ಫಿಕ್ಹ್ ಗಳ ಪರಿಷ್ಕರಣೆ ಮತ್ತು ಸುಧಾರಣೆಯನ್ನು ಧಾರ್ಮಿಕ ಪಂಡಿತರು ಕೂಲಂಕುಷವಾಗಿ ಸಂಶೋದಿಸಿ ಸಮುದಾಯದ ಒಳಿತಿಗಾಗಿ ಯಾರದ್ದೆ ಮೂಲಾಜಿಲ್ಲದೆ ಧೀನಿ ಕಾರ್ಯವನ್ನು ನಿರ್ವಹಿಸಬೇಕಾಗಿದೆ. ಧಾರ್ಮಿಕ ವಿದ್ವಾಂಸರು ತಮ್ಮ ಸುತ್ತಲಿನ ವಾಸ್ತವಗಳಿಗೆ ಪ್ರತಿಕ್ರಿಯೆಯಾಗಿ ನೀಡುವ ಕೆಲವೊಂದು ತೀರ್ಪುಗಳನ್ನು ನಾವು ಕಂಡುಕೊಂಡಿದ್ದೇವೆ, ಈ ಫತ್ವಾಗಳಲ್ಲಿ ಕೆಲವು ಬಳಕೆಯಲ್ಲಿಲ್ಲ, ಏಕೆಂದರೆ […]

Continue Reading

ತುಳುನಾಡಿನ ಮಹಾಚೇತನಗಳಾದ ವಿ.ಟಿ ರಾಜಶೇಖರ, ಡೇಸಾ, ಅಸ್ಸಾದಿ ಇವರಿಗೆ ನುಡಿ ನಮನ

ದಮನಿತರ ಧ್ವನಿಯಾಗಿದ್ದ ಈ ಮೂವರು ಮುಂದಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬೇಕಾದರೆ ಇವರ ಜೀವನ ಚರಿತ್ರೆ ಪಠ್ಯದಲ್ಲಿ ಸೇರಿಸಿ: ಗಣ್ಯರ ಒಕ್ಕೊರಲ ಅಭಿಪ್ರಾಯ ಇತ್ತೀಚೆಗೆ ನಮ್ಮನ್ನಗಲಿದ ವಿ.ಟಿ ರಾಜಶೇಖರ, ಪಿ.ಬಿ ಡೇಸಾ, ಪ್ರೊ. ಮುಝಫರ್ ಅಸ್ಸಾದಿ ಸ್ಮರಣಾರ್ಥ ಅವರ ಸ್ನೇಹಿತ ಬಳಗದಿಂದ ನಗರದ ಹೋಟೆಲ್ ಶ್ರೀನಿವಾಸ ಸಭಾಂಗಣದಲ್ಲಿ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಮೂವರು ಮಹಾ ಚೇತನಗಳು ತುಳುನಾಡಿನವರು ಅನ್ನುವುದೇ ನಮ್ಮ ಹೆಮ್ಮೆ. ಅವರ ಜೀವನ ಚರಿತ್ರೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಪಠ್ಯದಲ್ಲಿ ಸೇರಿಸುವ ಮೂಲಕ ಮುಂದಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬ […]

Continue Reading

ಮಲೆನಾಡಿನಲ್ಲಿ ಕೆ ಎಫ್ ಡಿ ಕಾಟ.! 54 ವರ್ಷ ಪ್ರಾಯದ ಮಹಿಳೆಯೊಬ್ಬರು ಕೆಎಫ್ ಡಿ ಸೋಂಕಿಗೆ ಬಲಿ.

ಮಲೆನಾಡಿನಲ್ಲಿ ಮಂಗನ ಕಾಯಿಲೆಗೆ ಈ ವರ್ಷದ ಮೊದಲ ಬಲಿಯಾಗಿದೆ. 54 ವರ್ಷ ಪ್ರಾಯದ ಮಹಿಳೆಯೊಬ್ಬರು ಕೆಎಫ್ ಡಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.ಶಿವಮೊಗ್ಗದ ತೀರ್ಥಹಳ್ಳಿ ತಾಲೂಕನ ಕೊನೇರಿಪುರ ಗ್ರಾಮದ ಮಹಿಳೆ ಹಲವು ಸಮಯದಿಂದ ಮಂಗನ ಕಾಯಿಲೆಯ ಸೋಂಕಿಂದ ಬಳಲುತ್ತಿದ್ದರು. ಅವರನ್ನು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಜನವರಿ ತಿಂಗಳ 23 ರಂದು ಈ ಮಹಿಳೆಗೆ ಕೆಎಫ್‌ಡಿ ಪಾಸಿಟಿವ್‌ ಬಂದಿತ್ತು. ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಿ ಸುಧಾರಣೆ ಕಾಣದ ಕಾರಣ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ […]

Continue Reading

ಪೆರ್ಲದಲ್ಲಿ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಭೇತಿ ಕೇಂದ್ರದ 20ನೇ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ

ಯಕ್ಷಗಾನ ಕಲಿಕೆಗೆ ಅಕಾಡೆಮಿಯಿಂದ ಪ್ರೋತ್ಸಾಹ ; ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಉಡುಪಿ : ರಾಜ್ಯ ಯಕ್ಷಗಾನ ಅಕಾಡೆಮಿ ವತಿಯಿಂದ ಯಕ್ಷಗಾನ ತರಬೇತಿ ನೀಡುವ ಅರ್ಹ ಸಂಘ ಸಂಸ್ಥೆ ಗಳಿಗೆ ಅನುದಾನ ನೀಡಲಾಗುತ್ತದೆ. ಮಕ್ಕಳಿಗೆ ಯಕ್ಷಗಾನವನ್ನು ಕಲಿಸಿ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಭಾನುವಾರ ಕಾಸರಗೋಡು ಪೆರ್ಲದಲ್ಲಿ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ […]

Continue Reading

ಕೈ ಪಾಳೆಯದಲ್ಲಿ ಕಾಣಿಸುತ್ತಿದೆ ತೃತೀಯ ಶಕ್ತಿ; ಡಿಕೆಶಿಗೆ ಫುಲ್ಲು ವಿಶ್ವಾಸವಿದೆ. ಒಲ್ಲೆ ಅಂದ್ರು ಜಾರಕಿಹೊಳಿ.?

ಬಿಜೆಪಿ ಪಾಳಯದ ಲೆಕ್ಕಾಚಾರಗಳೇನು? ✍️. ಆರ್.ಟಿ.ವಿಠ್ಠಲಮೂರ್ತಿ ಕಳೆದ ವಾರ ತಮಗೆ ತಲುಪಿದ ಸಂದೇಶದಿಂದ ದಿಲ್ಲಿಯ ಬಿಜೆಪಿ ನಾಯಕರು ಖುಷಿಯಾಗಿದ್ದಾರೆ. ಈ ಸಂದೇಶದ ಪ್ರಕಾರ ಕರ್ನಾಟಕದ ಕಾಂಗ್ರೆಸ್ ಪಾಳಯದಲ್ಲಿ ತೃತೀಯ ಶಕ್ತಿ ತಲೆ ಎತ್ತುತ್ತಿದೆ. ಅಂದ ಹಾಗೆ ಕರ್ನಾಟಕದ ಕಾಂಗ್ರೆಸ್ ಪಾಳಯದಲ್ಲಿ ಎರಡು ಶಕ್ತಿಗಳಿರುವುದು ರಹಸ್ಯದ ವಿಷಯವೇನಲ್ಲ.ಈ ಪೈಕಿ ಒಂದು ಶಕ್ತಿ ಸಿಎಂ ಸಿದ್ದರಾಮಯ್ಯ ಅವರ ಜತೆಗಿದ್ದರೆ, ಮತ್ತೊಂದು ಶಕ್ತಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಜತೆಗಿದೆ.ಈ ಎರಡು ಶಕ್ತಿಗಳ ನಡುವೆ ಇರುವ ಭಿನ್ನಾಭಿಪ್ರಾಯವೆಂದರೆ ಅಧಿಕಾರ ಹಂಚಿಕೆಯದು. 2023 ರಲ್ಲಿ […]

Continue Reading

ಕುಕ್ಕಿಲ ದಾರಿಮಿ ಪ್ರಭಾಷಣಕ್ಕೆ ಜಿಲ್ಲೆಯ ಮುಸ್ಲಿಂ ಸಮುದಾಯ ಫಿದಾ..!

ಲಕ್ಷ ಲಕ್ಷ ಕೊಟ್ಟು ಕೇರಳದಿಂದ ಆಮದು ಮಾಡಿಕೊಳ್ಳುವ ಪ್ರಭಾಷಣಕಾರರ ಬಗ್ಗೆ ಸಮುದಾಯ ಚಿಂತಿಸಬೇಕಾದ ಸಮಯವಿದು.! ತಾಲ-ಮ್ಯಾಲ-ಕೊಲಕ್ಕೆ ರೆಡಿಯಾಯಿತು.. ಕುಕ್ಕಿಲರ ಸೊಂಟೆ.!! ಎಲ್ಲೂ ಸಲ್ಲದವರು ಕೊನೆಗೆ ಸಲ್ಲುವುದು ಬುದ್ಧಿವಂತರ ಜಿಲ್ಲೆಯಲ್ಲಿ ಅನ್ನುವುದು ದಿಟ. ಇಲ್ಲಿ ಧಾರ್ಮಿಕತೆಯ ಹೆಸರಿನಲ್ಲಿ ಮಂಗ ಮರಳು ಮಾಡಿ ಹಣ, ಖ್ಯಾತಿ ಪಡೆಯುವುದು ಸುಲಭ. ಜಿಲ್ಲೆಯ ಬಹುತೇಕ ಮಸೀದಿ, ಸಂಘಸಂಸ್ಥೆಗಳು ಪ್ರಭಾಷಣಕ್ಕೆ ಕೇರಳದ ಬಿರುದುದಾರಿಗಳನ್ನು ನೆಚ್ಚಿಕೊಂಡಿರುವುದು ಇದಕ್ಕೆಲ್ಲ ಕಾರಣ. ನಮ್ಮಲ್ಲೇ ಒಳ್ಳೆಯ ಪ್ರಭಾಷಣಕಾರರು ಇದ್ದರೂ ಅವರಿಗೆ ವೇದಿಕೆ ನೀಡಲು ನಮ್ಮವರೇ ಹಿಂಜರಿಯುತ್ತಾರೆ. ಮಸೀದಿಯಲ್ಲಿ ಇಮಾಮ್, ಮುಅದ್ದೀನ್ […]

Continue Reading