ಉತ್ತರಪ್ರದೇಶ: ಅಯೋಧ್ಯೆಯಲ್ಲಿ ದಲಿತ ಭದ್ರತಾ ಸಿಬ್ಬಂದಿಯನ್ನು ಹೊಡೆದು ಹತ್ಯೆಗೈದ ದುಷ್ಕರ್ಮಿಗಳು

ಉತ್ತರಪ್ರದೇಶ: ಅಯೋಧ್ಯೆಯಲ್ಲಿ ದಲಿತ ಭದ್ರತಾ ಸಿಬ್ಬಂದಿಯೊಬ್ಬರನ್ನು ಅಪರಿಚಿತ ವ್ಯಕ್ತಿಗಳು ಹೊಡೆದು ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಮೃತನನ್ನು ಧ್ರುವಕುಮಾರ್ ಅಲಿಯಾಸ್ ಬೆಚ್ಚೈ (60) ಎಂದು ಗುರುತಿಸಲಾಗಿದೆ, ಅವರು ನಿರ್ಮಾಣ ಹಂತದಲ್ಲಿರುವ ಕಟ್ಟಡವನ್ನು ಕಾವಲು ಕಾಯುತ್ತಿದ್ದರು. ಸೋಮವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಕಬ್ಬಿಣದ ರಾಡ್ ಮತ್ತು ದೊಣ್ಣೆಗಳಿಂದ ಕುಮಾರ್ ನನ್ನು ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ..

Continue Reading

ಅಮಿತ್ ಷಾ ಆಟ ಬಲ್ಲವರಾರು.?ಯತ್ನಾಳ್ ಬಣಕ್ಕೂ ಹಲ್ವಾ.

ಪರ್ಯಾಯಕ್ಕೆ ಖರ್ಗೆ ರೆಡಿ.? ಖರ್ಗೆಯ ಕೊರಗು ಯಾತಕ್ಕೆ.! ಫೋರ್ ಮ್ಯಾನ್ ಆರ್ಮಿಯ ಅಜೆಂಡಾ ಏನು.? ✍️. ಆರ್.ಟಿ.ವಿಠ್ಠಲಮೂರ್ತಿ ವಿಧಾನಸೌಧದ ಮೂರನೇ ಅಂತಸ್ತಿನಲ್ಲಿರುವ ಗೃಹ ಸಚಿವ ಡಾ. ಪರಮೇಶ್ವರ್ ಅವರ ಕೊಠಡಿಯಲ್ಲಿ ಮೊನ್ನೆ ಶುಕ್ರವಾರ ಮಹತ್ವದ ಸಭೆ ನಡೆದಿದೆ. ಈ ಸಭೆಯಲ್ಲಿ ಮಾತನಾಡಿದ ಸಚಿವರ ಪಡೆ ಒಂದು ನಿರ್ಣಾಯಕ ಹೆಜ್ಜೆ ಇಡಲು ತೀರ್ಮಾನಿಸಿದೆ. ಮುಂದಿನ ದಿನಗಳಲ್ಲಿ ಉದ್ಭವವಾಗುವ ರಾಜಕೀಯ ಸನ್ನಿವೇಶವನ್ನು ಎದುರಿಸಲು ನಾವು ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಬೇಕು ಎಂಬುದು ಈ ತೀರ್ಮಾನ. ಅರ್ಥಾತ್, ಮುಂದಿನ ಕೆಲವೇ ದಿನಗಳಲ್ಲಿ ಅಹಿಂದ […]

Continue Reading

ಮಹಾಕುಂಭದಲ್ಲಿ ಭಕ್ತಾದಿಗಳಿಗೆ ಸುರಕ್ಷತಾ ಕ್ರಮಗಳನ್ನು ಕೋರಿ ಸಲ್ಲಿಸಿರುವ ಅರ್ಜಿ ಸುಪ್ರೀಂ ಕೋರ್ಟ್ ನಲ್ಲಿ ಇಂದು ವಿಚಾರಣೆ

ನವದೆಹಲಿ: ಜನವರಿ 29 ರಂದು ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 30 ಜನರು ಸಾವನ್ನಪ್ಪಿದ ಮತ್ತು 60 ಜನರು ಗಾಯಗೊಂಡಿರುವ ಮಹಾಕುಂಭದಲ್ಲಿ ಪಾಲ್ಗೊಳ್ಳುವ ಭಕ್ತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಿರ್ದಿಷ್ಟ ಮಾರ್ಗಸೂಚಿಗಳು ಮತ್ತು ನಿಬಂಧನೆಗಳ ಅನುಷ್ಠಾನಕ್ಕೆ ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ. ಫೆಬ್ರವರಿ 3 ರಂದು ಸುಪ್ರೀಂ ಕೋರ್ಟ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ಕಾರಣ ಪಟ್ಟಿಯ ಪ್ರಕಾರ, ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠವು ವಕೀಲ ವಿಶಾಲ್ […]

Continue Reading

ಹತ್ತು ಲಕ್ಷ ರೂಪಾಯಿಗೆ ಗಂಡನ ಕಿಡ್ನಿ ಮಾರಿಸಿ, ಪ್ರಿಯಕರನ ಜೊತೆ ಪರಾರಿಯಾದ ಚಾಲಾಕಿ ಮಹಿಳೆ.!

ಮಗಳ ವಿದ್ಯಾಭ್ಯಾಸಕ್ಕೆ ಹಣ ಸಾಕಾಗುತ್ತಿಲ್ಲ… ನಿನ್ನ ಕಿಡ್ನಿ ಮಾರು ಎಂದು ಒತ್ತಾಯಿಸುತ್ತಿದ್ದ ಮಹಿಳೆಯೊಬ್ಬಳು ಕಿಡ್ನಿ ಮಾರಿದ ಹಣ ಕೈಗೆ ಬರುತ್ತಲೇ ತನ್ನ ಪ್ರಿಯಕರನ ಜೊತೆ ರಾತ್ರೋರಾತ್ರಿ ಪರಾರಿಯಾಗಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದಲ್ಲಿ ವರದಿಯಾಗಿದೆ. ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಚಾನ್‌ಕ್ರಿಲ್‌ನಲ್ಲಿ ಈ ಘಟನೆ ನಡೆದಿದ್ದು, ಬರೋಬ್ಬರಿ 10 ಲಕ್ಷ ರೂಪಾಯಿಗೆ ಕಿಡ್ನಿ ಮಾರಿದ ಪತಿ ಈಗ ತನ್ನ ಪತ್ನಿಯ ಕುಕೃತ್ಯದ ವಿರುದ್ಧ ಮನನೊಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಸಂತ್ರಸ್ತ ವ್ಯಕ್ತಿ ವೃತ್ತಿಯಲ್ಲಿ ಪೈಂಟರ್ ಆಗಿ ಕೆಲಸ […]

Continue Reading

ವಿಟ್ಲ: ಅಕ್ರಮ ಪ್ರವೇಶ ಮಾಡಿ, ತಂದೆ ಹಾಗೂ 6 ವರ್ಷದ ಮಗುವಿನ ಮೇಲೆ ಹಲ್ಲೆ; ರಾಕ್ಷಸೀ ಕೃತ್ಯ ಎಸಗಿದ ಆರೋಪಿ ವಿರುದ್ಧ FIR..

ರಾತ್ರಿ ಹೊತ್ತು ಮನೆಯಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಮನೆಯಲ್ಲಿದ್ದ ಪುಟಾಣಿ ಹಾಗೂ ತಂದೆಯ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ರಾಕ್ಷಸೀ ಕೃತ್ಯ ಎಸಗಿದ ಘಟನೆಯೊಂದು ಬಂಟ್ವಾಳ ತಾಲೂಕು ವೀರಕಂಬ ಗ್ರಾಮದ ಮೈರ ಎಂಬಲ್ಲಿ ನಡೆದಿದೆ. ವೀರಕಂಬ ಗ್ರಾಮದ ಮೈರ ನಿವಾಸಿ ಯತೀಶ ಎಮ್. ಸಿ ಎಂಬವರು ಜ. 31ರಂದು ರಾತ್ರಿ 8:00 ಗಂಟೆ ಸುಮಾರಿಗೆ ಮನೆಯ ಅಂಗಳದಲ್ಲಿ ಮಗುವಿನ ಜೊತೆ ಆಟವಾಡುತ್ತಿದ್ದರು. ಆ ಸಂದರ್ಭ ಏಕಾಏಕಿ ಮನೆಯಂಗಳಕ್ಕೆ ನುಗ್ಗಿದ ಮೋಹನ ಗೌಡ ಎಂಬಾತ ಅವಾಚ್ಯ […]

Continue Reading

ಕನ್ಯಾಡಿ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಗೆ ಜುನಾ ಅಖಾಡ ಮೂಲಕ ಮಹಾ ಮಂಡಲೇಶ್ವರ ಪದವಿ, ಪಟ್ಟಾಭಿಷೇಕ

ಭಾರತದ ನಾಗಾ ಸಾಧು ಸನ್ಯಾಸಿ ಪರಂಪರೆಯಲ್ಲಿ ಕರ್ನಾಟಕದ ಮೊದಲ ಮಹಾ ಮಂಡಲೇಶ್ವರರಾಗಿ ಕನ್ಯಾಡಿಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಪಟ್ಟಾಭಿಶಿಕ್ತರಾಗಿದ್ದಾರೆ. ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರಿಗೆ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಜುನಾ ಅಖಾಡದ ಆಚಾರ್ಯರಾದ ಅವದೇಶಾನಂದ ಗಿರಿ ಮಹಾರಾಜರು ಕನ್ಯಾಡಿಯ ಸ್ವಾಮೀಜಿಯವರಿಗೆ ಪಟ್ಟಾಭಿಷೇಕ ನೆರವೇರಿಸಿದರು. ಕನ್ಯಾಡಿ ಶ್ರೀರಾಮಕ್ಷೇತ್ರದ ಶ್ರೀಗಳ ಮೂಲಕ ಕರ್ನಾಟಕಕ್ಕೆ ಬರುವ ಪ್ರಪ್ರಥಮ ಮಹಾಮಂಡಲೇಶ್ವರ ಪದವಿಯಾಗಿದೆ‌. ಈ ಪಟ್ಟಾಭಿಷೇಕರಾದವರಿಗೆ ಧಾರ್ಮಿಕ ಪುರುಷನಿಗೆ ರಾಷ್ಟ್ರಾದ್ಯಂತ ವಿಶೇಷ ಸೌಲಭ್ಯ ನೀಡಲಾಗುತ್ತದೆ. ಅಲ್ಲದೆ ಕನ್ಯಾಡಿ ಶ್ರೀಗಳು ಮುಂದೆ […]

Continue Reading

ರಾಮಸೇನೆ ಮುಖಂಡನ ವಾಮಾಚಾರಕ್ಕೆ ಬಿಗ್ ಟ್ವಿಸ್ಟ್; ಪ್ರಸಾದ್ ಅತ್ತಾವರ ಪತ್ನಿ ಉಡುಪಿ ಮಹಿಳಾ ಠಾಣೆ ಪಿಎಸ್ಐ ಸುಮಾ ಆಚಾರ್ಯ ಪಾತ್ರ.!

ರಾಮಸೇನೆ ಮುಖ್ಯಸ್ಥ ಪ್ರಸಾದ್ ಅತ್ತಾವರ ಎಂಬವರ ಪತ್ನಿ, ಉಡುಪಿ ಮಹಿಳಾ ಪೊಲೀಸ್ ಠಾಣೆಯ ಪಿಎಸ್‌ಐ ಸುಮಾ ಆಚಾರ್ಯ ಅವರ ಹೆಸರೂ ಕೂಡ ವಾಮಾಚಾರ ಪ್ರಕರಣದಲ್ಲಿ ಬಯಲಾಗಿದೆ. ಇತ್ತೀಚೆಗೆ ಪ್ರಸಾದ್ ಅತ್ತಾವರ ಮತ್ತು ಸಹಚರರಿಂದ ಮಂಗಳೂರಿನ ಸ್ಪಾ ಮತ್ತು ಪಾರ್ಲರ್ ಮೇಲಿನ ದಾಳಿ ಪ್ರಕರಣದಲ್ಲಿ ರಾಮಸೇನೆ ಮುಖ್ಯಸ್ಥ ಪ್ರಸಾದ್ ಅತ್ತಾವರ ಎಂಬವರನ್ನು ಬಂಧಿಸಲಾಗಿತ್ತು. ಪ್ರಕರಣದ ತನಿಖೆಯ ಭಾಗವಾಗಿ ಪೊಲೀಸರು ಅತ್ತಾವರ ಮೊಬೈಲ್ ಪರಿಶೀಲಿಸಿದಾಗ, ಸ್ನೇಹಮಯಿ ಕೃಷ್ಣ ಹಾಗೂ ಗಂಗರಾಜು ಅವರಿಗೆ ಬಲ ತುಂಬಲು 5 ಕುರಿಗಳನ್ನು ಕಾಳಿದೇವಿಗೆ ಬಲಿ […]

Continue Reading

ಯೋಗಿ ಆದಿತ್ಯನಾಥ್ ಸುಳ್ಳುಗಾರ, ಸಿ.ಎಂ ಪದವಿಯಲ್ಲಿರಲು ಯೋಗ್ಯರಲ್ಲ, ರಾಜೀನಾಮೆ ಕೊಡಲಿ: ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ

ಮಹಾಕುಂಭಮೇಳದಲ್ಲಿ ಮೌನಿ ಅಮಾವಾಸ್ಯೆಯಂದು ಸಂಭವಿಸಿದ್ದ ಕಾಲ್ತುಳಿತ ಘಟನೆ ಬಗ್ಗೆ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಮಾತನಾಡಿರುವುದು ಈಗ ವ್ಯಾಪಕ ಸುದ್ದಿಯಾಗುತ್ತಿದೆ. ಕಾಲ್ತುಳಿತದಲ್ಲಿ ಉಂಟಾದ ಸಾವು-ನೋವುಗಳ ಬಗ್ಗೆ ಸಿ.ಎಂ ಯೋಗಿ ಆದಿತ್ಯನಾಥ್ ನಿಖರ ಮಾಹಿತಿಯನ್ನು ಹಲವು ಗಂಟೆಗಳ ಕಾಲ ಮುಚ್ಚಿಟ್ಟಿದ್ದರು ಎಂದು ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಆರೋಪಿಸಿದ್ದಾರೆ. ಘಟನೆಯ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ಸುಳ್ಳು ಹೇಳಿದ್ದಾರೆ. ನಾವು ಜ.29 ರಂದು ಬೆಳಿಗ್ಗೆ ಎದ್ದ ಕೂಡಲೇ ಕಾಲ್ತುಳಿತ ಉಂಟಾಗಿ 17 ಮಂದಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಬಂದಿತ್ತು. ನಾವು ತೆರಳಬೇಕಿದ್ದ […]

Continue Reading

ರಾಮಸೇನೆ ಮುಖಂಡ ಅತ್ತಾವರ ಮೊಬೈಲ್ ನಲ್ಲಿತ್ತು ವಾಮಚಾರದ ವಿಡಿಯೋ.. ಬಿತ್ತು ಮತ್ತೊಂದು ಕೇಸು.!

ಮಂಗಳೂರಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿಯ ಕಲರ್ಸ್ ಯುನಿಸೆಕ್ಸ್ ಮಸಾಜ್ ಸೆಂಟರ್ ಗೆ ತನ್ನ ಹುಡುಗರ ಮೂಲಕ ದಾಳಿ ನಡೆಸಿ ಮಸಾಜ್ ಪುಡಿಗೈದ ಆರೋಪದಲ್ಲಿ ಪೊಲೀಸರು ಪ್ರಸಾದ್ ಅತ್ತಾವರ ಸೇರಿದಂತೆ ಹದಿನಾಲ್ಕು ಮಂದಿಯನ್ನು ಬಂಧಿಸಿದ್ದರು. ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸುದ್ದಿ ಮಾಡಿದ್ದ ಪಬ್, ಹೋಂ ಸ್ಟೇ ದಾಳಿಯ ರೀತಿಯಲ್ಲೇ ಖಾಸಗಿ ಕ್ಯಾಮರಾಮೆನ್ ಒಬ್ಬರನ್ನು ಕರೆದುಕೊಂಡು ಹೋಗಿ ದಾಳಿ ನಡೆಸಿ, ಸ್ವತಃ ಆ ವಿಡಿಯೋ ಗಳನ್ನು ಬಿಡುಗಡೆಗೊಳಿಸಿದ್ದರು. ಈ ದಾಳಿಯ ಬಗ್ಗೆ ಜಿಲ್ಲೆಯಲ್ಲಿ ಪರ-ವಿರೋಧ ಚರ್ಚೆಗಳು ನಡೆದಿತ್ತು. ಅನೈತಿಕ ಪೊಲೀಸ್ […]

Continue Reading

ಜನಾಕ್ರೋಶಕ್ಕೂ ಮಣಿಯದ ಬಿಜೆಪಿ ಪಾಲಿಕೆ ಆಡಳಿತದಿಂದ ಸಾಮಾನ್ಯ ಸಭೆಯಲ್ಲಿ ಟಿಡಿಆರ್ ಹಗರಣದ ಫೈಲ್ ಪಾಸ್.!

ವಿಪಕ್ಷದ ಆಕ್ಷೇಪ ನಡುವೆಯೂ ಮಂಜೂರು; ರಾಜ್ಯ ಕಾಂಗ್ರೆಸ್ ಸರಕಾರ ಈಗೇನು ಮಾಡುತ್ತದೆ: ಮುನೀರ್ ಕಾಟಿಪಳ್ಳ ಪ್ರಶ್ನೆ ಮಂಗಳೂರು ನಗರ ಪಾಲಿಕೆಯ ಬಿಜೆಪಿ ಆಡಳಿತ ನಿರ್ಲಜ್ಜತೆಯ ಚರಮ ಸೀಮೆ ತಲುಪಿದೆ. ಐದು ವರ್ಷಗಳ ಆಡಳಿತದ ಕೊನೆಯ ತಿಂಗಳಿನಲ್ಲಿಯೂ ಭ್ರಷ್ಟಾಚಾರದಲ್ಲಿ ಮುಳುಗಿದೆ. ಪದವು ಗ್ರಾಮದ 3.50 ಎಕರೆ ಜಮೀನಿನ ಟಿ‌.ಡಿ.ಆರ್ ಹಗರಣವನ್ನು ನಾವು ನಿನ್ನೆಯಷ್ಟೆ ಬಯಲು ಪಡಿಸಿದ್ದೆವು. ಪೂರ್ವಾನ್ವಯ ಮಂಜೂರಾತಿ ನೀಡಿ ಹತ್ತಾರು ಕೋಟಿ ಮೌಲ್ಯದ ಟಿ.ಡಿ.ಆರ್ ನೀಡಿರುವುದು, ವಿಪಕ್ಷ ಕಾಂಗ್ರೆಸ್ ಪಾಲಿಕೆ ಸದಸ್ಯರು ಮೌನವಹಿಸಿರುವುದನ್ನು ಪ್ರಶ್ನಿಸಿದ್ದೆವು. ಇಂದು ನಡೆದ […]

Continue Reading