ಅನಿವಾಸಿ ಉದ್ಯಮಿ ಹಾಜಿ ಅಬ್ದುಲ್ ಸಲಾಂ ಕೊಲೆ ಪ್ರಕರಣ: ಆರು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಘೋಷಿಸಿದ ನ್ಯಾಯಾಲಯ
ಅನಿವಾಸಿ ಉದ್ಯಮಿ ಅಬ್ದುಲ್ ಸಲಾಂ ಹಾಜಿ ಕೊಲೆಗೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 1.50 ಲಕ್ಷ ರೂಪಾಯಿ ದಂಡ ವಿಧಿಸಿ ಕಾಸರಗೋಡು ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ. ಕಾಸರಗೋಡು ಮೊಗ್ರಾಲ್ ಪೆಟ್ಟಾಡಿ ಮೂಲೆಯ ನಿವಾಸಿ ಹಾಜಿ ಅಬ್ದುಲ್ ಸಲಾಂ ಅವರನ್ನು 2017 ಏಪ್ರಿಲ್ 30 ರಂದು ಮಾಲಿಯಂಗರ ಕೋಟೆ ಸಮೀಪ ಕೊಲೆಗೈಯ್ಯಲಾಗಿತ್ತು. ಅವರ ಜೊತೆಗಿದ್ದ ನೌಶಾದ್ ಎಂಬಾತ ಗಂಭೀರ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದ. ಅಬ್ದುಲ್ ಸಲಾಂ ಜೊತೆಗಿದ್ದವರು ಸಿದ್ದೀಕ್ […]
Continue Reading