ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ನಿಧನ. ಡಿ.27 ರಂದು ಎಲ್ಲಾ ಸರಕಾರಿ ಕಾರ್ಯಕ್ರಮಗಳು ರದ್ದು. 7 ದಿನದ ರಾಷ್ಟ್ರೀಯ ಶೋಕಾಚರಣೆ.

ಭಾರತದ ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಗುರುವಾರ ರಾತ್ರಿ ನಿಧನ ಹೊಂದಿದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಶುಕ್ರವಾರ ಡಿ.27 ರಂದು ಎಲ್ಲಾ ಸರಕಾರಿ ಕಾರ್ಯಕ್ರಮಗಳನ್ನು ರದ್ದುಗೊಳಿಸಿ 7 ದಿನದ ರಾಷ್ಟ್ರೀಯ ಶೋಕಾಚರಣೆಯ ಘೋಷಿಸಿದೆ. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ ನಿಧನದ ಗೌರವಾರ್ಥ ರಾಜ್ಯದಲ್ಲೂ ಕಾಂಗ್ರೆಸ್‌ ನೇತೃತ್ವದ ಸರಕಾರವೂ ಏಳು ದಿನಗಳ ಶೋಕಾಚರಣೆ ಘೋಷಿಸಿದ್ದು, ಶುಕ್ರವಾರ (ಡಿ. 27) ಸರ್ಕಾರಿ ರಜೆ ಘೋಷಿಸಿದ್ದು, ಶಾಲೆ, ಕಾಲೇಜುಗಳು ಬ್ಯಾಂಕ್‌ಗಳು ಹಾಗೂ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುವುದಿಲ್ಲ. ಕೇಂದ್ರ ಸರಕಾರ ನಾಳೆ ನಡೆಯಲಿರುವ […]

Continue Reading

ಸ್ಟೆಂಟ್ ಅಳವಡಿಸಿ ಮೋಸ ಹೋಗುವ ಮೊದಲು ಯೋಚಿಸಿ.!

ಹೃದಯದಲ್ಲಿ ಸಂಭವಿಸಿದ ಬ್ಲಾಕ್(ತಡೆ)ಗಳನ್ನು ಸರಿಪಡಿಸಲು ವೈದ್ಯರುಗಳು ಸ್ಟಂಟ್‌ಗಳನ್ನು ಉಪಯೋಗಿಸಿ ಹೃದಯ ಸಂಬಂಧವಾದ ಬ್ಲಾಕ್‌ಗಳಿದ್ದರೆ ಅದನ್ನು ಸರಿಪಡಿಸುತ್ತಾರೆ. ಆದರೆ ಇದಕ್ಕೆ ಉಪಯೋಗಿಸುವ ಸ್ಟಂಟ್‌ಗೆ ಸರಿಸುಮಾರು ರೂ.7,000 ಸಾವಿರದಿಂದ 35 ಸಾವಿರ ರೂಪಾಯಿವರೆಗೆ ಬೆಲೆಬಾಳುವ ಸ್ಟಂಟ್ ಇರುತ್ತದೆ. ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಹೃದಯ ಸಂಬಂಧಿ ರೋಗಿಗಳು ಇದನ್ನು ಅಳವಡಿಸಿಕೊಳ್ಳುತ್ತಾರೆ. ಯಾವ ಕಂಪೆನಿಯಿಂದ ಯಾವ ಸ್ಟೆಂಟ್‌ನ್ನು ಡಾಕ್ಟರ್ ಅಳವಡಿಸುತ್ತಾರೆ ಎಂದು ಯಾರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಮಾತ್ರವಲ್ಲದೆ ವೈದ್ಯಾಧಿಕಾರಿಗಳು, ಸಂಬಂಧಪಟ್ಟ ಆಸ್ಪತ್ರೆಯವರು ಇದರ ಬಗ್ಗೆ ರೋಗಿಗಳ ಗಮನಕ್ಕೂ ತರುವುದಿಲ್ಲ. […]

Continue Reading

ಭಗವಾನ್ ಬಾಹುಬಲಿ ಮೂರ್ತಿಯ ಭಾವಚಿತ್ರವನ್ನು ವಿಕೃತವಾಗಿ ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ರವಾನೆ

ಧಾರ್ಮಿಕ ಅವಹೇಳನ ಅಡಿಯಲ್ಲಿ ಬೆಳ್ತಂಗಡಿಯ ವಿಜಯ ಎಂಬಾಕೆಯ ವಿರುದ್ಧ ದೂರು ದಾಖಲು ಜೈನ ಧರ್ಮೀಯರ ಆರಾದ್ಯ ದೇವರಾದ ಭಗವಾನ್‌ ಬಾಹುಬಲಿ ಸ್ವಾಮಿಯ ಮೂರ್ತಿಯ ಭಾವಚಿತ್ರವನ್ನು ವಿರೂಪಗೊಳಿಸಿ, ತನ್ನ ಫೇಸ್‌ಬುಕ್‌ ಖಾತೆ ಹಾಗೂ ವಾಟ್ಸಪ್‌ ಮೂಲಕ ಫೋಟೋವನ್ನು ಹರಿಯಬಿಟ್ಟಿದ್ದು ಜೈನ ಧರ್ಮಕ್ಕೆ ಧಕ್ಕೆಯನ್ನು ಉಂಟು ಮಾಡಿದ್ದಾರೆ ಎಂದು ಆರೋಪಿಸಿ ವೇಣೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ಕಲ್ಮಂಜ ನಿವಾಸಿ ಪಣಿರಾಜ್‌ ಎಂಬವರು ದೂರು ನೀಡಿದ್ದು, ನಾರಾವಿ ಗ್ರಾಮದ ವಿಜಯಾ ನಾರಾವಿ ಎಂಬಾಕೆ ಜೈನ ಧರ್ಮೀಯರ ಆರಾಧ್ಯ ದೇವರಾದ […]

Continue Reading

ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಯೊಬ್ಬರ ಹೆಸರಲ್ಲಿ ಲಂಚಕ್ಕೆ ಬೇಡಿಕೆ ಆರೋಪ; ಮಹಿಳಾ ನ್ಯಾಯವಾದಿಯ ವಿರುದ್ದ ಪ್ರಕರಣ ದಾಖಲು

ಅಪರಾಧ ಪ್ರಕರಣದ ಆರೋಪಿಗೆ ಜಾಮೀನು ಮಂಜೂರು ಮಾಡುವ ಸಂಬಂಧ ಹೈಕೋರ್ಟ್‌ ನ್ಯಾಯಮೂರ್ತಿಯೊಬ್ಬರ ಹೆಸರನ್ನು ದುರ್ಬಳಕೆ ಮಾಡಿಕೊಂಡ ಆರೋಪ ಕುರಿತು ಮಹಿಳಾ ವಕೀಲರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಹೈಕೋರ್ಟ್‌ನ ಕಾನೂನು ವಿಭಾಗದ ಜಂಟಿ ರಿಜಿಸ್ಟ್ರಾರ್‌ ಎಂ. ರಾಜೇಶ್ವರಿ ನೀಡಿದ ದೂರಿನ ಮೇರೆಗೆ ಹೈಕೋರ್ಟ್‌ ವಕೀಲೆ ದಯೀನಾಬಾನು ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) 318 (4) ವಂಚನೆಯಡಿ ವಿಧಾನಸೌಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತನಾಗಿದ್ದ 24 ವರ್ಷದ ವಿಷ್ಣುದೇವನ್‌ಗೆ ಜಾಮೀನು ಸಿಗದೆ 3 ವರ್ಷಗಳಿಂದ ಜೈಲಿನಲ್ಲಿದ್ದ ಮಗನನ್ನು ಜಾಮೀನಿನ […]

Continue Reading

ಗ್ರಾಹಕ ಅಬೂಬಕ್ಕರ್ ಸಿದ್ದೀಕ್ ನ ನಕಲಿ ಚಿನ್ನಕ್ಕೆ ಅಸಲಿ ಸರ್ಟಿಫಿಕೇಟ್ ಕೊಟ್ಟ ಚಿನ್ನ ಪರೀಕ್ಷಕ ವಿವೇಕ್ ಆಚಾರ್ಯ.!

500 ನಕಲಿ ಚಿನ್ನದ ಬಳೆಗಳು..2 ಕೋಟಿ ಮಕ್ಮಲ್ ಟೋಪಿ.. ಪಡೀಲ್ ಸಮಾಜ ಸೇವಾ ಸಹಕಾರಿ ಸಂಘದ ಸ್ವಾಹಾ ಪುರಾಣ.! ವ್ಯಕ್ತಿಯೋರ್ವ ನಕಲಿ ಚಿನ್ನ ಅಡವಿಟ್ಟು ಎರಡು ಕೋಟಿಗೂ ಅಧಿಕ ರೂಪಾಯಿ ಸಾಲ ಪಡೆದು ಮಂಗಳೂರಿನ ಸಮಾಜ ಸೇವಾ ಸಹಕಾರಿ ಸಂಘಕ್ಕೆ ವಂಚಿಸಿರುವ ಆರೋಪ ಕೇಳಿ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮಂಗಲ ಗ್ರಾಮದ ಅಬೂಬಕ್ಕರ್ ಸಿದ್ದೀಕ್ ವಂಚಿಸಿದ ಆರೋಪಿ. 500 ನಕಲಿ ಚಿನ್ನದ ಬಳೆಗಳನ್ನು ಅಡವಿಟ್ಟು ಅಬೂಬಕ್ಕರ್ ಸಿದ್ದೀಕ್ 2,11,89,800 ರೂಪಾಯಿ ಸಾಲ ಪಡೆದು, ಮೋಸ […]

Continue Reading

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಗಣನೀಯ ಇಳಿಕೆ: ಎಐಎಸ್ ಎಚ್ ಇ ವರದಿಯಲ್ಲಿ ಉಲ್ಲೇಖ

ಭಾರತ ಕೋಮು ಧ್ರುವೀಕರಣದತ್ತ ಸಾಗುತ್ತಿರುವುದು ಇಂತಹ ಬೆಳವಣಿಗೆಗೆ ಕಾರಣ ಎಂದ ವರದಿ ಭಾರತದ ಉನ್ನತ ಶಿಕ್ಷಣದಲ್ಲಿ 2021-22 ರ ಅವಧಿಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಪ್ರಾತಿನಿಧ್ಯ ಶೇಕಡಾ 4.87 ಕ್ಕೆ ಇಳಿಕೆಯಾಗಿದೆ ಎಂದು ಎಐಎಸ್ ಎಚ್ ಇ ವರದಿಯೊಂದು ಬಹಿರಂಗಪಡಿಸಿದೆ. ದಾಖಲಾದ 43,268,181 ವಿದ್ಯಾರ್ಥಿಗಳಲ್ಲಿ ಮುಸ್ಲಿಮರು ಕೇವಲ 2,108,033 ಇದ್ದಾರೆ. ಇದು 2020 ರಲ್ಲಿ ಶೇಕಡಾ 5.5 ಇದ್ದುದು 2021 ರಲ್ಲಿ ಶೇಕಡಾ 4.6 ಕ್ಕೆ ನಿರಂತರ ಇಳಿಕೆಯಾಗಿರುವುದನ್ನು ಸೂಚಿಸಿದೆ. ರಾಷ್ಟ್ರೀಯ ಒಟ್ಟು ದಾಖಲಾತಿ ಅನುಪಾತ (ಜಿಇಆರ್) ಶೇಕಡಾ […]

Continue Reading

ಸಿ.ಟಿ. ರವಿ ಬಂಧನ ಹೈಡ್ರಾಮಾ ಪ್ರಕರಣ; ಖಾನಾಪುರ ಠಾಣೆಯೊಳಗೆ ಬಿಜೆಪಿ ನಾಯಕರಿಗೆ ಸಭೆ ನಡೆಸಲು ಅವಕಾಶ ಮಾಡಿಕೊಟ್ಟ ಇನ್ಸ್ ಪೆಕ್ಟರ್ ಅಮಾನತು

ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರಿಗೆ ಅಶ್ಲೀಲ ಪದ ಬಳಕೆ ಮಾಡಿದ ಕಾರಣಕ್ಕಾಗಿ ಬಂಧನಕ್ಕೊಳಪಡಿಸಲಾಗಿತ್ತು. ಇದು ರಾಜ್ಯ ರಾಜಕಾರಣದಲ್ಲಿ ಹೈಡ್ರಾಮಾ ಕ್ಕೆ ಕಾರಣವಾಗಿತ್ತು. ಸಿ ಟಿ ರವಿ ಅವರನ್ನು ಬಂಧಿಸಿ ಖಾನಾಪುರ ಠಾಣೆಗೆ ಕರೆತಂದ ಇನ್ಸ್ ಪೆಕ್ಟರ್ ಮಂಜುನಾಥ ನಾಯ್ಕ ಕರ್ತವ್ಯ ಲೋಪ, ಬೇಜಬ್ದಾರಿತನ ಪ್ರದರ್ಶನ ಆರೋಪ ಹಾಗೂ ಅಪಾಧಿತರನ್ನು ಹೊರತುಪಡಿಸಿ ಠಾಣೆಯೊಳಗೆ ಯಾರನ್ನೂ ಬಿಡದಂತೆ ಆದೇಶ ನೀಡಿದ್ದರೂ ನಿರ್ಲಕ್ಷ್ಯ ವಹಿಸಿ ಬಿಜೆಪಿ ನಾಯಕರನ್ನು ಠಾಣೆಯೊಳಗೆ ಬಿಟ್ಟಿರುವ ಆರೋಪದ ಮೇಲೆ ಅಮಾನತು ಮಾಡಲಾಗಿದೆ. […]

Continue Reading

ದ.ಕ ಜಿಲ್ಲಾ ಪೊಲೀಸ್‌ ವ್ಯಾಪ್ತಿಯ ಸೆನ್‌ (ಸೈಬರ್‌ ಕ್ರೈಂ) ಪೊಲೀಸ್‌ ಠಾಣೆಯು ಶೀಘ್ರವೇ ಬಂಟ್ವಾಳಕ್ಕೆ ಸ್ಥಳಾಂತರ

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರವಾದ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿದ್ದ ಜಿಲ್ಲಾ ಪೊಲೀಸ್‌ ವ್ಯಾಪ್ತಿಯ ಸೆನ್‌ (ಸೈಬರ್‌ ಕ್ರೈಂ) ಪೊಲೀಸ್‌ ಠಾಣೆಯು ಶೀಘ್ರವೇ ಬಂಟ್ವಾಳಕ್ಕೆ ಸ್ಥಳಾಂತರಗೊಳ್ಳಲಿದೆ. ಇದರಿಂದ ಜಿಲ್ಲೆಯ ಗ್ರಾಮಾಂತರ ಭಾಗದ ಜನತೆಗೆ ಸೈಬರ್ ಕ್ರೈಂ ಗೆ ಸಂಬಂಧ ಪಟ್ಟ ಪ್ರಕರಣಗಳ ಬಗ್ಗೆ ದೂರು ನೀಡಲು ಅನುಕೂಲವಾಗಲಿದೆ. ಬಂಟ್ವಾಳ ನಗರ ಪೊಲೀಸ್‌ ಠಾಣೆಯ ಹಳೆಯ ಕಟ್ಟಡವನ್ನು ನವೀಕರಿಸುವ ಕಾರ್ಯ ಭರದಿಂದ ಸಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ ಬರುವ ಯಾವುದೇ ಪ್ರದೇಶದಲ್ಲಿ ಸೈಬರ್‌ ಕ್ರೈಮ್‌ ಪ್ರಕರಣಗಳು ನಡೆದರೂ ಸಂತ್ರಸ್ತರು […]

Continue Reading

ಆರು ಜನರ ತಂಡದಿಂದ ಯುವಕನ ಅಪಹರಿಸಿ ಮನಬಂದಂತೆ ಹಲ್ಲೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು.

ಗಾಯಾಳು ಯುವಕ ವೆನ್ಲಾಕ್ ಆಸ್ಪತ್ರೆಗೆ ದಾಖಲು. ಜಿಲ್ಲಾ ಎಸ್ಪಿಗೆ ದೂರು. ವಿಟ್ಲ : ವೈದ್ಯರ ಬಳಿ ಚಿಕಿತ್ಸೆಗೆ ಹೋಗುತ್ತಿದ್ದ ಆಟೋ ಚಾಲಕನನ್ನು ಕಬಕ ಬಳಿ ತಂಡವೊಂದು ಅಪಹರಿಸಿ ಮನಬಂದಂತೆ ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿದ ಘಟನೆ ನಡೆದಿದೆ. ಬೋಳಂತೂರು ನಿವಾರಿಸಿ ರಹೀಂ ಯಾನೆ ಅಬ್ದುಲ್ ರಹಿಮಾನ್ ಎಂಬವರು ತಂಡದಿಂದ ಹಲ್ಲೆಗೊಂಡು ಆಸ್ಪತ್ರೆಗೆ ದಾಖಲಾದ ಆಟೋ ಚಾಲಕ. ತನ್ನ ಆಟೋದಲ್ಲಿ ಪುತ್ತೂರಿನ ವೈದ್ಯರಲ್ಲಿಗೆ ಚಿಕಿತ್ಸೆ ಪಡೆಯುವುದಕ್ಕಾಗಿ ಹೋಗುತ್ತಿದ್ದ ಸಂದರ್ಭ ಕುಕ್ಕರಬೆಟ್ಟು ಎಂಬಲ್ಲಿಗೆ ತಲುಪುತ್ತಿದ್ದಂತೆ ಹಿಂದಿನಿಂದ ಮಾರುತಿ ಬ್ರೆಝಾ ಕಾರೊಂದು ಹಿಂಬಾಲಿಸಿತ್ತೆನ್ನಲಾಗಿದೆ‌. […]

Continue Reading

ಸಾಲಗಾರರ ಫೋಟೋ , ಖಾಸಾಗಿ ದಾಖಲೆ ಪ್ರಕಟಿಸುವ ಮೂಲಕ ಬಾಕಿ ಪಾವತಿಸಲು ಬ್ಯಾಂಕ್‌ಗಳು ಒತ್ತಾಯಿಸಲು ಸಾಧ್ಯವಿಲ್ಲ.

ಇದು ಗೌಪ್ಯತೆ ಮತ್ತು ಖ್ಯಾತಿಯ ಹಕ್ಕನ್ನು ಉಲ್ಲಂಘಿಸುತ್ತದೆ: ಕೇರಳ ಹೈಕೋರ್ಟ್ ಸಾಲ ಮಾಡಿದ ಸಾಲಗಾರರಿಗೆ ಅವರ ಫೋಟೋಗಳನ್ನು ಪ್ರಕಟಿಸುವ ಮೂಲಕ ಬಾಕಿ ಪಾವತಿಸಲು ಬ್ಯಾಂಕ್‌ಗಳು ಒತ್ತಾಯಿಸಲು ಸಾಧ್ಯವಿಲ್ಲ, ಇದು ಗೌಪ್ಯತೆ ಮತ್ತು ಖ್ಯಾತಿಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಕೇರಳ ಹೈಕೋರ್ಟ್ ಹೇಳಿದೆ. ಸಾಲವನ್ನು ಮರುಪಾವತಿಸುವಂತೆ ಒತ್ತಾಯಿಸಲು ಸಾಲಗಾರರ ಡೀಫಾಲ್ಟ್ ಮಾಡಿದವರ ಫೋಟೋ ಮತ್ತು ವಿವರಗಳನ್ನು ಬ್ಯಾಂಕ್ ಪ್ರಕಟಿಸುವಂತಿಲ್ಲ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಇಂತಹ ಕೃತ್ಯಗಳು ವ್ಯಕ್ತಿಯ ಘನತೆ ಮತ್ತು ಪ್ರತಿಷ್ಠೆಯಿಂದ ಬದುಕುವ ಹಕ್ಕನ್ನು ಆಕ್ರಮಿಸುತ್ತದೆ ಎಂದು […]

Continue Reading