ಸುರತ್ಕಲ್: ಬೆನ್ನಟ್ಟಿದ ಟ್ರಾಫಿಕ್ ಪೊಲೀಸ್; ಅಪಘಾತದಲ್ಲಿ ಬೈಕ್ ಸವಾರ ಮೃತ್ಯು

ಹೆಲ್ಮೆಟ್ ಧರಿಸದ ಕಾರಣಕ್ಕೆ ದ್ವಿಚಕ್ರ ವಾಹನ ಸವಾರನೊಬ್ಬನನ್ನು ಬೆನ್ನಟ್ಟಿದ ಟ್ರಾಫಿಕ್ ಪೊಲೀಸರನ್ನು ಕಂಡು ವೇಗವಾಗಿ ಚಲಿಸಿದ ವಾಹನ ಸವಾರ ರಸ್ತೆ ಅಪಘಾತಕ್ಕೊಳಗಾಗಿ ಮೃತಪಟ್ಟ ದುರ್ಘಟನೆ ಶುಕ್ರವಾರ ರಾತ್ರಿ ಸುರತ್ಕಲ್ ಸಮೀಪದ ಕಾನ ಎಂಬಲ್ಲಿ ಸಂಭವಿಸಿದೆ. ಕುಳಾಯಿಯಲ್ಲಿ ಟ್ಯೂಶನ್ ಗೆ ತೆರಳಿದ್ದ ಮಗನನ್ನು ಕರೆ ತರಲು ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೆ ಸಂಚರಿಸುತ್ತಿದ್ದ ಸವಾರ ಕಾನ ಬಳಿ ವಾಹನ ತಪಾಸಣೆಯಲ್ಲಿ ನಿರತರಾಗಿದ್ದ ಮಂಗಳೂರು ಉತ್ತರ ಸಂಚಾರ ಪೊಲೀಸರು ಕಂಡು ವೇಗವಾಗಿ ಚಲಿಸಿ ಪರಾರಿಯಾಗಿದ್ದ. ಈ ಸಂದರ್ಭದಲ್ಲಿ ಬೆನ್ನಟ್ಟಿದ ಪೊಲೀಸರನ್ನು […]

Continue Reading

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಿಗಳನ್ನು ಪ್ರಕರಣ ದಾಖಲಾದ 60 ದಿನಗಳ ಬಳಿಕ ಪೊಲೀಸ್‌ ವಶಕ್ಕೆ ನೀಡಲಾಗದು: ಹೈಕೊರ್ಟ್

ಮುಮ್ತಾಜ್‌ ಅಲಿ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ; ತನಿಖಾಧಿಕಾರಿಗಳು ಸಲ್ಲಿಸಿದ್ದ ಅರ್ಜಿ ವಜಾ ಹತ್ತು ವರ್ಷಗಳಿಗೂ ಕಡಿಮೆ ಅವಧಿಯ ಶಿಕ್ಷೆ ವಿಧಿಸಬಹುದಾಗಿರುವ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಿಗಳನ್ನು ಪ್ರಕರಣ ದಾಖಲಾದ 60 ದಿನಗಳ ಬಳಿಕ ಪೊಲೀಸ್‌ ವಶಕ್ಕೆ ನೀಡಲಾಗದು ಎಂದು ಹೇಳಿರುವ ಕರ್ನಾಟಕ ಹೈಕೋರ್ಟ್‌, ಮಾಜಿ ಶಾಸಕ ಮೊಯ್ದಿನ್‌ ಬಾವಾ ಸಹೋದರ ಬಿ.ಎಂ. ಮುಮ್ತಾಜ್‌ ಅಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಿಗಳನ್ನು ಪೊಲೀಸ್‌ ವಶಕ್ಕೆ ನೀಡುವಂತೆ ತನಿಖಾಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಪ್ರಕರಣ ದಾಖಲಾದ 60 ದಿನಗಳ ಬಳಿಕ […]

Continue Reading

ಸುವರ್ಣ ವಿಧಾನಸೌಧ ದಾಳಿ ಕೇಸ್; ರಾಜ್ಯ ಸರ್ಕಾರದ ವಿರುದ್ಧ ಕೇಂದ್ರಕ್ಕೆ ವರದಿ ನೀಡ್ತಾರಾ ರಾಜ್ಯಪಾಲರು.?

ಸುವರ್ಣ ವಿಧಾನಸೌಧ ದಾಳಿ; ರಾಜ್ಯಪಾಲರ ಅಂಗಳ ಸೇರಿದ ಪ್ರಕರಣ; ರಾಜ್ಯ ಸರ್ಕಾರ ವಜಾಕ್ಕೆ ‘CRF’ ಆಗ್ರಹ; ರಾಜ್ಯಪಾಲರಿಗೆ ಮನವಿ ▪️ ಸುವರ್ಣ ವಿಧಾನಸೌಧ ದಾಳಿ ಕೇಸ್; ರಾಜ್ಯ ಸರ್ಕಾರದ ವಿರುದ್ಧ ಕೇಂದ್ರಕ್ಕೆ ವರದಿ ನೀಡ್ತಾರಾ ರಾಜ್ಯಪಾಲರು.? ▪️ ಸುವರ್ಣ ವಿಧಾನಸೌಧ ದಾಳಿ; ರಾಜ್ಯಪಾಲರ ಅಂಗಳ ಸೇರಿದ ಪ್ರಕರಣ; ರಾಜ್ಯ ಸರ್ಕಾರ ವಜಾಕ್ಕೆ ಆಗ್ರಹ ▪️ ರಾಜ್ಯ ಸರ್ಕಾರ ವಜಾಕ್ಕೆ ‘CRF’ ಆಗ್ರಹ; ರಾಜ್ಯಪಾಲರಿಗೆ ಮನವಿ ▪️ ಸುವರ್ಣ ವಿಧಾನಸೌಧ ದಾಳಿ ಪ್ರಕರಣ; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ […]

Continue Reading

ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರವೀಣ್ ನೆಟ್ಟಾರ್ ಹತ್ಯಾ ಆರೋಪಿ ಮುಹಮ್ಮದ್ ಶರೀಫ್ ಅರೆಸ್ಟ್

ಇಡೀ ರಾಜ್ಯಾದಾದ್ಯಂತ ಸಂಚಲನ ಸೃಷ್ಟಿಸಿದ್ದ ಪ್ರವೀಣ್ ನೆಟ್ಟಾರ್ ಹತ್ಯಾ ಪ್ರಕರಣದ ಆರೋಪಿಯಾದ ಮುಹಮ್ಮದ್ ಶರೀಫ್ ಎಂಬಾತನನ್ನು ಎನ್ ಐಎ ಅಧಿಕಾರಿಗಳು ಬಂಧಿಸಿರುವುದಾಗಿ ವರದಿಯಾಗಿದೆ. ಪ್ರವೀಣ್ ನೆಟ್ಟಾರ್ ಆರೋಪಿ ಯಾಗಿದ್ದ ಮುಹಮ್ಮದ್ ಶರೀಫ್ ಕೋಡಾಜೆ ನಿವಾಸಿಯಾಗಿದ್ದು, ನೆಟ್ಟಾರ್ ಹತ್ಯೆ ಬಳಿಕ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ. ಈತನ ಬಂಧನಕ್ಕೆ ಎನ್ ಐಎ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು. ಇದೀಗ ದಿಲ್ಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.

Continue Reading

ಅಬ್ಬರಿಸಿದ ಲಕ್ಷ್ಮೀ..ರವಿಯ ರಾಜಕೀಯ ಯುಗಾಂತ್ಯ.!

ಅಕಸ್ಮಾತ್ ಇದು ನಿಜವಾದರೆ, ಸಿಟಿ ರವಿಯ ರಾಜಕೀಯ ಜೀವನವೇ ಅಂತ್ಯ.? ಹೆಬ್ಬಾಳ್ಕರ್ ಅವರ ವಿರುದ್ಧ ಬಾಯಿಗೆ ಬಂದ ರೀತಿ ಮಾತನಾಡಿ, ಅಶ್ಲೀಲ ಪದ ಬಳಕೆ ಮಾಡಿರುವ ಆರೋಪ ಹೊತ್ತಿರುವ ಸಿಟಿ ರವಿಗೆ ಇದೀಗ ನಡುಕ ಶುರುವಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತವೇ ಇದ್ದು, ಇನ್ನೊಂದು ಕಡೆ ಈ ರೀತಿ ಮಹಿಳಾ ಸಚಿವರ ಬಗ್ಗೆ ವಿರೋಧ ಪಕ್ಷದ ನಾಯಕ ಅಸಭ್ಯವಾಗಿ ಮಾತನಾಡಿದ್ದಾರೆ ಎಂಬ ಆರೋಪ ಹೊಸ ಅಸ್ತ್ರವಾಗಿದೆ. ಈ ಕಾರಣಕ್ಕೆ ಸಿಟಿ ರವಿ ವಿರುದ್ಧ ದೊಡ್ಡ ಅಸ್ತ್ರ ಪ್ರಯೋಗ ಮಾಡಲು […]

Continue Reading

ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ(CITU) ದ.ಕ. ಜಿಲ್ಲಾ ಸಮಿತಿಯ ನೇತ್ರತ್ವದಲ್ಲಿ ಪ್ರತಿಭಟನೆ

ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ(CITU) ದ.ಕ.ಜಿಲ್ಲಾ ಸಮಿತಿಯ ನೇತ್ರತ್ವದಲ್ಲಿ 19-22-2024ರಂದು ಮಂಗಳೂರು ಮಿನಿ ವಿಧಾನ ಸೌಧದ ಮುಂದುಗಡೆ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು. ಪ್ರತಿಭಟನೆಯನ್ನು ಉದ್ಘಾಟಿಸುತ್ತಾ ಸಂಘದ ಜಿಲ್ಲಾಸಮಿತಿಯ ಗೌರವ ಅಧ್ಯಕ್ಷರಾದ ಪದ್ಮಾವತಿ ಶೆಟ್ಟಿಯವರು ಕಾಂಗ್ರೆಸ್ ಸರಕಾರ ಚುನಾವಣಾ ಪೂರ್ವದಲ್ಲಿ ಘೋಷಿಸಿರುವಂತೆ ಬಿಸಿಯೂಟ ನೌಕರರಿಗೆ ಮಾಸಿಕ ವೇತನ ರೂ, 6000 ಕೂಡಲೇ ಏರಿಸಬೇಕು. ನಿವೃತ್ತ ನೌಕರರಿಗೆ ಒಪ್ಪಿಕೊಂಡಂತೆ ಇಡಿಗಂಟು ವಿತರಣೆ ಮಾಡಬೇಕು. 2014ರಿಂದ ಕೇಂದ್ರ ಸರಕಾರ ಅನುದಾನವನ್ನೇ ನೀಡದಿರುವುದು ಖಂಡನೀಯವೆಂದ ಅವರು ರಾಜ್ಯ ಮತ್ತು ಕೇಂದ್ರ […]

Continue Reading

ಇನ್ಮುಂದೆ ಕೊಳವೆ ಬಾವಿ ಕೊರೆಯಲು ಕಠಿಣ ನಿಯಮಗಳನ್ನು ಪಾಲಿಸಲೇಬೇಕು: ವಿಧಾನಸಭೆಯಲ್ಲಿ ಹೊಸ ಮಸೂದೆ ಅಂಗೀಕಾರ

ವಿಫಲ ಬೋರ್ವೆಲ್ ಮುಚ್ಚದಿದ್ದರೆ 25,000 ದಂಡ, ಒಂದು ವರ್ಷ ಜೈಲು ಶಿಕ್ಷೆ ಅಲ್ಲಲ್ಲಿ ಬೋರ್ ವೆಲ್ ಗಳನ್ನು ಕೊರೆಸಿ ನೀರು ಬರಿದಾದ ನಂತರ ಅವುಗಳನ್ನು ಮುಚ್ಚದೆ ಹಾಗೆಯೇ ಬಿಡುವ ಘಟನೆಗಳು ನಡೆಯುತ್ತಿದ್ದು, ಮುಚ್ಚಿರದ ಬೋರ್ ವೆಲ್ ಗಳಲ್ಲಿ ಮಕ್ಕಳು ಬೀಳುವ ಘಟನೆಗಳು ಸಾಮಾನ್ಯವಾಗುತ್ತಿದೆ. ಇಂತಹ ಅಪಘಾತಗಳನ್ನು ತಡೆಗಟ್ಟಲು, ಕರ್ನಾಟಕ ವಿಧಾನಸಭೆಯು ಕರ್ನಾಟಕ ಅಂತರ್ಜಲ (ಅಭಿವೃದ್ಧಿ, ನಿರ್ವಹಣೆ ಮತ್ತು ನಿಯಂತ್ರಣ) ಕಾಯ್ದೆ, 2011 ಮತ್ತು ಅದಕ್ಕೆ ಸಂಬಂಧಿಸಿದ 2012ರ ನಿಯಮಗಳಿಗೆ ತಿದ್ದುಪಡಿಗಳನ್ನು ಅಂಗೀಕರಿಸಿದೆ. ಕರ್ನಾಟಕದ ಸಣ್ಣ ನೀರಾವರಿ, ವಿಜ್ಞಾನ […]

Continue Reading

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ‌.ಪಿ.ನಡ್ಡಾ ಬದಲಿಗೆ ಹೊಸ ಅಧ್ಯಕ್ಷರ ಆಯ್ಕೆ ಫೆಬ್ರವರಿ ತಿಂಗಳಲ್ಲಿ ನಡೆಯುವ ಸಾಧ್ಯತೆ

ಬಿಜೆಪಿ ರಾಷ್ಟ್ರಾಧ್ಯಕ್ಷರಾದ ಜೆ‌.ಪಿ.ನಡ್ಡಾ ಬದಲಿಗೆ ಬಿಜೆಪಿಗೆ ಹೊಸ ಅಧ್ಯಕ್ಷರ ಆಯ್ಕೆ ಫೆಬ್ರವರಿ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ. 2020 ರ ಫೆಬ್ರವರಿಯಲ್ಲಿ ಬಿಜೆಪಿ ರಾಷ್ಟ್ರೀಯ ಅದ್ಯಕ್ಷರಾಗಿ ಆಯ್ಕೆಯಾದ ನಡ್ಡಾ ಪ್ರಸ್ತುತ ಕೇಂದ್ರ ಸಚಿವರೂ ಆಗಿದ್ದಾರೆ. ಅವರ ಅವಧಿ ಮುಗಿದಿದ್ದರೂ 2024ರ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ವಿಸ್ತರಿಸಲಾಗಿತ್ತು. ಅಧ್ಯಕ್ಷರ ಆಯ್ಕೆಯನ್ನು ಚುನಾವಣೆ ಮೂಲಕ ನಡೆಸಲಾಗುತ್ತದೆಯೋ, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಅವಿರೋಧವಾಗಿ ಆಯ್ಕೆ ಮಾಡಲಾಗುತ್ತದೋ ಎಂದು ಮುಂದಷ್ಟೇ ಗೊತ್ತಾಗಬೇಕು. ಇಲ್ಲಿಯವರೆಗೆ ಬಹುತೇಕ ಅವಿರೋಧ ಆಯ್ಕೆಯೇ […]

Continue Reading

ಕಾರ್ಮಿಕ ವರ್ಗಕ್ಕೆ ದ್ರೋಹವೆಸಗಿದ ಯಾವುದೇ ಸರಕಾರಗಳು ಉಳಿದಿಲ್ಲ: ಸುನಿಲ್ ಕುಮಾರ್ ಬಜಾಲ್

ಸಮಾಜದ ಅಭಿವೃದ್ಧಿಯಲ್ಲಿ ಕಾರ್ಮಿಕ ವರ್ಗದ ಪಾತ್ರವೇ ಪ್ರಧಾನವಾದುದ್ದು. ಅಂತಹ ಕಾರ್ಮಿಕ ವರ್ಗದ ಉತ್ತಮ ಬದುಕಿಗಾಗಿ ಅವಿಶ್ರಾಂತವಾಗಿ ಶ್ರಮಿಸಬೇಕಾದ ಆಳುವ ವರ್ಗಗಳು ನಿತ್ಯ ನಿರಂತರವಾಗಿ ಬಂಡವಾಳಶಾಹಿಗಳ ಹಿತಾಸಕ್ತಿಗಳನ್ನು ಕಾಪಾಡಲು ಹಾತೊರೆಯುತ್ತಿದೆ. ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಕಾರ್ಮಿಕ ವರ್ಗಕ್ಕೆ ದ್ರೋಹವೆಸಗಿದ ಯಾವುದೇ ಸರಕಾರಗಳು ಇವತ್ತಿನವರೆಗೆ ಉಳಿದಿಲ್ಲ, ಜೊತೆಗೆ ಮಣ್ಣು ಮುಕ್ಕಿದೆ ಎಂದು CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಅಭಿಪ್ರಾಯ ಪಟ್ಟರು. ಅವರು ನಗರದಲ್ಲಿಂದು(18-12-2024) CITU ನೇತ್ರತ್ವದಲ್ಲಿ ಜರುಗಿದ ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸುತ್ತಾ ಈ‌ ಮಾತುಗಳನ್ನು […]

Continue Reading

ಬಜ್ಪೆ : ಒಂಟಿ ಮಹಿಳೆಯ ಚಿನ್ನದ ಸರ ಎಳೆದು ಪರಾರಿಯಾಗಿದ್ದ ಆರೋಪಿ ಅಂದರ್.!

ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ತಾಲೂಕು ತೆಂಕ ಎಡಪದವು ಗ್ರಾಮದ ಶಿಬ್ರಿಕೆರೆ ಗಣೇಶ್ ಮಿಲ್ ಬಳಿ ಇರುವ ಒಳ ರಸ್ತೆಯಲ್ಲಿ ಡಿ. 12ರಂದು ಮಧ್ಯಾಹ್ನ ವೇಳೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಒಂಟಿ ಮಹಿಳೆಯ ಬಳಿ ಸ್ಕೂಟರ್‌ನಲ್ಲಿ ಬಂದು ವಿಳಾಸ ಕೇಳುವ ನೆಪದಲ್ಲಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಬಜಪೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಹಳೆಯಂಗಡಿ ಇಂದಿರಾ ನಗರದ ನಿವಾಸಿ ಅಬ್ದುಲ್ ರವೂಫ್ ಯಾನೆ ಆಟೋ ರವೂಫ್(30) ಎಂದು ಗುರುತಿಸಲಾಗಿದೆ. ಆರೋಪಿ ಮತ್ತು […]

Continue Reading