ಚೆಕ್ ಅಮಾನ್ಯ ಪ್ರಕರಣ: ಸಾಮಾಜಿಕ ಕಾರ್ಯಕರ್ತ ಹಕೀಂ ಕೂರ್ನಡ್ಕ ಖುಲಾಸೆ

2021 ಜನವರಿ ತಿಂಗಳಲ್ಲಿ ಯುವತಿಯೊಬ್ಬಳು ಮಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಲಿವರ್ ನ ಸಮಸ್ಯೆಯಿಂದಾಗಿ ಒಳ ರೋಗಿಯಾಗಿ ದಾಖಲಾಗಿ ಸುಮಾರು ಹತ್ತು ದಿನದ ನಂತರ ಚಿಕಿತ್ಸೆ ಫಲಕಾರಿಯಾಗದೆ ಆ ಯುವತಿಯು ಮರಣ ಹೊಂದಿದ್ದು, ಯುವತಿಯ ಚಿಕಿತ್ಸೆಗೆ ತಗಲಿರುವ ವೆಚ್ಚ ಸರಿ ಸುಮಾರು 1,25,000 ರೂಪಾಯಿ ಸದ್ರಿ ಚಿಕಿತ್ಸಾ ವೆಚ್ಚವನ್ನು ನಾನು ಪಾವತಿಸುತ್ತೇನೆ ಎಂದು ಹಕೀಂ ಕೂರ್ನಡ್ಕ ಮೃತ ಯುವತಿಯ ಕುಟುಂಬದ ಪರವಾಗಿ ಖಾಸಗಿ ಆಸ್ಪತ್ರೆಗೆ ತನ್ನ ಚೆಕ್ಕನ್ನು ನೀಡಿರುತ್ತಾರೆ ಎಂದು ಆರೋಪಿಸಿ ಮಾನ್ಯ 9ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಖಾಸಗಿ ಆಸ್ಪತ್ರೆಯವರು ಹಕೀಂ ಕೂರ್ನಡ್ಕ […]

Continue Reading

ಕೋಮುವಾದಿಯೊಬ್ಬ ತುಳು ಅಕಾಡೆಮಿಯ ಮೆಂಬರ್.! ಮುಸ್ಲಿಂ ದ್ವೇಷಕಾರುವವನಿಗೆ ಕಾಂಗ್ರೆಸ್ಸಿನ ಪ್ರಭಾವಿ ಮುಖಂಡರಿಂದಲೇ ಅಭಯ.!

ನೇಮಕಾತಿ ಹಿಂದೆ ಕೈಚಳಕ ತೋರಿಸಿದ್ದೇ ಮಾಜಿ ಸಚಿವರೊಬ್ಬರ ಅತ್ಯಾಪ್ತ ಮಾಜಿ ಬ್ಯಾಂಕ್ ಅಧ್ಯಕ್ಷ.! ಕರಾವಳಿಯಲ್ಲಿ ಯಾವ ಸರಕಾರ ಅಸ್ತಿತ್ವದಲ್ಲಿದೆ..? ಇಲ್ಲಿ ಅಧಿಕಾರ ನಡೆಸುವವರು ಬಿಜೆಪಿಯವರೋ.? ಕಾಂಗ್ರೆಸ್ಸಿಗರೋ.? ಅನ್ನುವ ಅನುಮಾನ ಪದೇ ಪದೇ ಸೃಷ್ಟಿಯಾಗುತ್ತಲೇ ಇದೆ. ಈ ಹಿಂದೆ ವಿವಿಧ ನಿಗಮಗಳಿಗೆ ನೇಮಕಾತಿ ನಡೆದಿತ್ತು. ನೇಮಕಾತಿಗೊಂಡ ಅರ್ಧದಷ್ಟು ಜನ ಸಂಘಿ ಹಿನ್ನೆಲೆ ಹೊಂದಿದವರಾಗಿದ್ದರು. ತೋರಿಕೆಗೆ ಕೆಲವರು ಕಾಂಗ್ರೆಸ್ ಪಕ್ಷದ ಸದಸ್ಯರಾದರೂ ರಾತ್ರಿಯಾಗುತ್ತಿದ್ದಂತೆ ಬಿಜೆಪಿಯಾಗುವವರ ಸಂಖ್ಯೆಯೇ ಹೆಚ್ಚು. ನಿಷ್ಠಾವಂತ ಕಾಂಗ್ರೆಸ್ಸಿಗರು ನಾಯಕರಿಗೆ ಜೈಕಾರ ಹಾಕಲು, ನಾಯಕರ ಹಿಂದೆ ಮುಂದೆ ಸುತ್ತಾಡುತ್ತಾ […]

Continue Reading

ಬಾನಿನ ಚಿಟ್ಟೆ ಭಯಾನಕತೆ..! ಇಲ್ಲಿ ಒಬ್ಬೊಬ್ಬರದ್ದು ಒಂದೊಂದು ಮನಕಲಕುವ ಕಥೆ

ಇರ್ಫಾನ್, ಅರ್ಜುನ್, ಡೇನಿಯಲ್.. ಕನಸು ಹೊತ್ತು ಸುಟ್ಟು ಕರಕಲಾದರು.! ಒಂದು ವಿಮಾನ ಪ್ರಯಾಣ ನೂರಾರು ಕುಟುಂಬಗಳ ಪಾಲಿಗೆ ಎಂದೆಂದೂ ಮರೆಯಲಾಗದ ದುಃಸ್ವಪ್ನವಾಗಿ ಬದಲಾಗಿದೆ.ಅದೆಷ್ಟೋ ಮಂದಿ ಕನಸನ್ನು ಹೊತ್ತು ಬದುಕಿನ ಬಗ್ಗೆ ನಾನಾ ಲೆಕ್ಕಾಚಾರದೊಂದಿಗೆ ವಿಮಾನ ಹತ್ತಿದವರೆಲ್ಲ ಸುಟ್ಟು ಕರಕಲಾಗಿದ್ದಾರೆ.‌ ಅಯ್ಯೋ ವಿಧಿಯೇ.. ಒಬ್ಬರಿಗೆ ಅಪ್ಪ ಇಲ್ಲವಾದರೆ, ಇನ್ನೊಬ್ಬರಿಗೆ ಅಮ್ಮ ಇಲ್ಲ, ಇನ್ನೊಬ್ಬರಿಗೆ ಮಗಳಿಲ್ಲ, ಮತ್ತೊಬ್ಬರಿಗೆ ಅಣ್ಣ ತಂಗಿ, ಅಕ್ಕ ತಮ್ಮ ಇಲ್ಲ. ಮತ್ತೊಬ್ಬರಿಗೆ ಮೊಮ್ಮಗ ಇಲ್ಲ, ಇನ್ಯಾರಿಗೂ ಅಜ್ಜ ಅಜ್ಜಿ ಇಲ್ಲ. ಮತ್ಯಾರದೋ ಇಡೀ ಕುಟುಂಬವೇ ಇಲ್ಲ. […]

Continue Reading

ಈ ಬಾರಿಯ ಕಠಿಣ ನೀಟ್ ಪರೀಕ್ಷೆಯಲ್ಲಿ ಪುತ್ತೂರು ಕಮ್ಯೂನಿಟಿ ಸೆಂಟರ್ ನ ಅದ್ಭುತ ಸಾಧನೆ

ಹದಿನೇಳಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಮೆರಿಟ್ ಸರಕಾರಿ MBBS ಸೀಟ್. ಉಳಿದಂತೆ 50 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ BDS/BAMS ಸರಕಾರಿ ಸೀಟು. ಈ ಬಾರಿಯ ಕಠಿಣ ನೀಟ್ ಪರೀಕ್ಷೆಯಲ್ಲಿ ಪುತ್ತೂರು ಕಮ್ಯೂನಿಟಿ ಸೆಂಟರ್ ನ 91 ವಿದ್ಯಾರ್ಥಿಗಳ ಪೈಕಿ 17 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಮೆರಿಟ್ ನಲ್ಲಿ MBBS ಸರಕಾರಿ ಸೀಟು ಗಳಿಸಲು ಅರ್ಹತೆ ಪಡೆದಿದ್ದು, ಉಳಿದಂತೆ 2B, ಗ್ರಾಮೀಣ ಮತ್ತು ಕನ್ನಡ ಮೀಡಿಯಂನಲ್ಲಿ ಹೆಚ್ಚಿನ ವಿದ್ಯಾರ್ಥಿಗಳಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಉಳಿದಂತೆ 50 ಕ್ಕಿಂತ ಹೆಚ್ಚು […]

Continue Reading

ಭಾರತೀಯ ಅಂಚೆ ಇಲಾಖೆಗೆ ಡಿಜಿಟಲ್ ಸ್ಪರ್ಶ.. ಪಿನ್ ಕೋಡ್ ಯುಗಾಂತ್ಯ..ಡಿಜಿಪಿನ್ ಜಮಾನ.!

ಅಂಚೆ ವಿಳಾಸಗಳನ್ನು ತಿಳಿಸುತ್ತಿದ್ದ ಪಿನ್ ಕೋಡ್ ಯುಗ ಮುಕ್ತಾಯವಾಗಲಿದೆ. ಅದರ ಬದಲಿಗೆ ಪ್ರತಿ ಮನೆಗೂ ಡಿಜಿಟಲ್ ಐಡಿ ಬರಲಿದೆ. ಸುದೀರ್ಘ ವರ್ಷದ ನಂತರ ಭಾರತೀಯ ಅಂಚೆ ಇಲಾಖೆ ಬದಲಾವಣೆಗೆ ತೆರೆದುಕೊಳ್ಳುತ್ತಿದೆ. ಇವತ್ತು ಎಲ್ಲಾ ಇಲಾಖೆಗಳು ಡಿಜಿಟಲ್ ಯುಗಕ್ಕೆ ಮಾರ್ಪಾಡು ಆಗಿದ್ದರೂ, ಭಾರತೀಯ ಅಂಚೆ ಇಲಾಖೆ ಯಾವುದೇ ಬದಲಾವಣೆಗೆ ಒಳಗಾಗದೆ ಓಬಿರಾಯನ ಕಾಲದಂತೆ ಇದ್ದ ಪದ್ಧತಿಯಲ್ಲೇ ಇತ್ತು. ಆದರೆ ಇದೀಗ ಅಂಚೆ ಇಲಾಖೆಯಲ್ಲೂ ಕೂಡ ಡಿಜಿಟಲ್ ಸ್ಪರ್ಶಕ್ಕೆ ತಯಾರಿ ನಡೆಯುತ್ತಿದ್ದು, ಇನ್ಮುಂದೆ ವಿಳಾಸ ಪತ್ತೆಗೆ ಇದ್ದ ಪಿನ್ ಕೋಡ್ […]

Continue Reading

ದುಬೈ: ದಶಮಾನೋತ್ಸವ ಸಡಗರದಲ್ಲಿರುವ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ (YAKU)

ವರ್ಷಂಪ್ರತಿ, ದುಬಾಯಿ ಅಥವಾ ತಾಯಿನಾಡಿನ ಯಕ್ಷಗಾನ ರಂಗದ ಸಾಧಕರೊಬ್ಬರನ್ನು ಗುರುತಿಸಿ, ನೀಡುತ್ತಾ ಬಂದಿರುವಂತೆ, 2024-2025 ನೇ ಸಾಲಿನ ಯಕ್ಷಶ್ರೀ ರಕ್ಷಾ ಗೌರವ ಪ್ರಶಸ್ತಿಯನ್ನು ಯಕ್ಷಗಾನದ ಪ್ರಾತಿನಿಧಿಕ ಕಲಾವಿದ, ಕಾಸರಗೋಡು ಶ್ರೀಯುತ ಸುಬ್ರಾಯ ಹೊಳ್ಳರಿಗೆ ನೀಡಲಾಗುವುದೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ದಶಮಾನೋತ್ಸವ ಕಾರ್ಯಕ್ರಮದಂಗವಾಗಿ ಜೂ.29 ರಂದು ಯಕ್ಷಧ್ರುವ ಪಟ್ಲ ಪೌಂಡೇಶನ್ ದುಬೈ (ಯುಎಇ) ಘಟಕದ ಸಹಯೋಗದೊಂದಿಗೆ ಕರಾಮದ ಇಂಡಿಯನ್ ಹೈಸ್ಕೂಲ್ ನ ಶೇಖ್ ರಷೀದ್ ಆಡಿಟೋರಿಯಂನಲ್ಲಿ ನಡೆಯಲಿರುವ ದುಬಾಯಿ ಯಕ್ಷೋತ್ಸವ 2025 ಕಾರ್ಯಕ್ರಮದಲ್ಲಿ […]

Continue Reading

‘ಒಂದು ದೇಶ, ಒಂದು ಚುನಾವಣೆ’ ಮಾದರಿಯಲ್ಲೇ ‘ಶಿಕ್ಷಣದಲ್ಲೂ ಏಕರೂಪ’? ಕೇಂದ್ರ ಸರ್ಕಾರದಿಂದ ಪ್ರಕ್ರಿಯೆ ಆರಂಭ!

ನವದೆಹಲಿ: ‘ಒಂದು ದೇಶ, ಒಂದು ಚುನಾವಣೆ’ ತೀರ್ಮಾನ ಮೂಲಕ ದೇಶದ ಗಮನ ಸೆಳೆದಿರುವ ಕೇಂದ್ರ ಸರ್ಕಾರ ಇದೀಗ ‘ಒಂದು ದೇಶ ಏಕರೂಪದ ಶಿಕ್ಷಣ ವ್ಯವಸ್ಥೆ’ ಜಾರಿ ಬಗ್ಗೆ ಚಿಂತನೆ ನಡೆಸಿದೆ. ಈ ಸಂಬಂಧ ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ (Department of Higher Education) ಇಂದು (13.062025 ಶುಕ್ರವಾರ) ಯುಜಿಸಿ ಗೆ ಮಹತ್ವದ ನಿರ್ದೇಶನ ನೀಡಿದೆ. ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಹದೆಗೆಟ್ಟಿದ್ದು ಕಾರ್ಪೊರೇಟ್ ಲಾಭಿಯಿಂದಾಗಿ ಶಾಲೆಗಳಲ್ಲಿ ದುಬಾರಿ ಶುಲ್ಕ ವಿಧಿಸಲಾಗುತ್ತಿದೆ. ಏಕರೂಪ ಶಿಕ್ಷಣ ಹಾಗೂ ಅಗತ್ಯ […]

Continue Reading

ಭಾರತದ ಬ್ಯಾಂಕ್ ಗಳಲ್ಲಿ ವಾರಿಸುದಾರರಿಲ್ಲದ 78,000 ಕೋಟಿ ರೂಪಾಯಿ ಪತ್ತೆ

ಭಾರತದ ಬ್ಯಾಂಕ್‌ಗಳಲ್ಲಿ ವಾರಿಸುದಾರರಿಲ್ಲದ 78,000 ಕೋಟಿ ಗೂ ಮಿಕ್ಕ ಹಣ ವಿವಿಧ ಬ್ಯಾಂಕ್ ಗಳಲ್ಲಿ ಸಂಗ್ರಹವಿದೆ. ಈ ಹಣ ನಮ್ಮದು ಎಂದು ಯಾವ ಗ್ರಾಹಕರು ಮುಂದಾಗಿಲ್ಲ. ಈ ಸಂಬಂಧ ಮಂಗಳವಾರ ಸಭೆ ನಡೆಸಿರುವ ಕೇಂದ್ರ ಹಣಕಾಸು ಸಚಿವೆ ಯಾರು ಕ್ಲೈಮ್ ಮಾಡದ ಹಣವನ್ನು ನಿಜವಾದ ಮಾಲೀಕರಿಗೆ ಹಿಂದಿರುಗಿಸುವಂತೆ ಬ್ಯಾಂಕಿಂಗ್ ನಿಯಂತ್ರಕರಿಗೆ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ. ಕಳೆದ ಕೆಲವು ವರ್ಷಗಳಿಂದ ಬ್ಯಾಂಕ್‌ಗಳಲ್ಲಿ ವಾರಸುದಾರರಿಲ್ಲದ ಹಣದ ಮೊತ್ತ ಏರಿಕೆಯಾಗುತ್ತಿದೆ. ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿಯ (FSDC) 29 […]

Continue Reading

ಕರಾವಳಿಯಲ್ಲಿ ಶಾಂತಿ ಪಾಲನೆಗೆ ಪೊಲೀಸ್ ವ್ಯವಸ್ಥೆ ಸಿದ್ಧವಿದೆ. ಸಮಾಜಘಾತುಕ ಶಕ್ತಿಗಳನ್ನು ಸಹಿಸುವುದಿಲ್ಲ: ಪೊಲೀಸ್ ಮಹಾ ನಿರ್ದೇಶಕ ಎಂ.ಎ.ಸಲೀಂ

ಕರಾವಳಿ ಪ್ರದೇಶಗಳಲ್ಲಿ ಶಾಂತಿ ಪಾಲನೆಗೆ ಪೊಲೀಸ್ ಕರ್ನಾಟಕ ವ್ಯವಸ್ಥೆ ಸಿದ್ಧವಿದೆ. ಸಮಾಜಘಾತುಕ ಶಕ್ತಿಗಳನ್ನು ಸಹಿಸುವುದಿಲ್ಲ ಎಂದು ಪೊಲೀಸ್ ಮಹಾ ನಿರ್ದೇಶಕ ಎಂ.ಎ.ಸಲೀಂ ಎಚ್ಚರಿಕೆ ನೀಡಿದರು. ಕೋಮು ಸಂಘರ್ಷ ನಿಗ್ರಹಕ್ಕಾಗಿ ನೂತನವಾಗಿ ಆರಂಭಿಸಲಾಗಿರುವ ವಿಶೇಷ ಕಾರ್ಯಪಡೆಯ ಉದ್ಘಾಟನಾ ಸಮಾರಂಭ ಮಂಗಳೂರಿನ ಎಸ್ಎಎಫ್‌ ಕಚೇರಿಯಲ್ಲಿಂದು ನಡೆಯಿತು. ಪ್ರಾಸ್ತಾವಿಕ ಮಾತುಗಳನ್ನಾಡಿದ ಪೊಲೀಸ್ ಮಹಾನಿರ್ದೇಶಕರು, ಕರಾವಳಿ ಜಿಲ್ಲೆಗಳಲ್ಲಿ ಪೊಲೀಸ್ ಬೆಳವಣಿಗೆ ಅಪಾರವಾಗಿದೆ, ಹೆಚ್ಚುವರಿಯಾಗಿ ಇಂದು ಕೋಮು ಹಿಂಸೆ ನಿಗ್ರಹ ವಿಶೇಷ ಪಡೆಯನ್ನು ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಆರಂಭಿಸಲಾಗುತ್ತಿದೆ ಎಂದು ಹೇಳಿದರು. ಈ […]

Continue Reading

ಅಖಿಲ ಭಾರತ ಬಾರ್ ಎಕ್ಸಾಮ್ ರದ್ದತಿಗೆ AILU ಒತ್ತಾಯ; ಮುಖ್ಯಮಂತ್ರಿಗಳಿಗೆ ಮನವಿ

ಅಖಿಲ ಭಾರತ ವಕೀಲರ ಒಕ್ಕೂಟದ ವತಿಯಿಂದ ಅವೈಜ್ಞಾನಿಕವಾದ ಅಖಿಲ ಭಾರತ ಬಾರ್ ಎಕ್ಸಾಮ್ (AIBE) ಸೇರಿದಂತೆ ವಕೀಲ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಾದ್ಯಂತ ವಕೀಲರಿಂದ ಸಹಿ ಸಂಗ್ರಹ ಅಭಿಯಾನದ ಭಾಗವಾಗಿ ಅಖಿಲ ಭಾರತ ವಕೀಲರ ಒಕ್ಕೂಟ,ದ.ಕ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಸಹಿ ಸಂಗ್ರಹ ನಡೆಸಿ ಇಂದು ದಿನಾಂಕ 13-06-2026ರಂದು ಅಪರ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಅಖಿಲ ಭಾರತ ವಕೀಲರ ಒಕ್ಕೂಟದ ಜಿಲ್ಲಾ ಅಧ್ಯಕ್ಷರರಾದ ಹಿರಿಯ ವಕೀಲರಾದ […]

Continue Reading