ಮಂಗಳೂರು: ಸುಲಿಗೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ತಲೆ ಮರೆಸಿ ಕೊಂಡಿದ್ದ ಆರೋಪಿ ನವೀನ್ ಸಿಕ್ವೇರಾ ಬಂಧನ

ತೊಕ್ಕೊಟ್ಟು ಚಂಬುಗುಡ್ಡೆ, ಪೆರ್ಮನ್ನೂರು ನಿವಾಸಿ ನವೀನ್ ಸಿಕ್ವೇರಾ ಎಂಬಾತನ ಮೇಲೆ 2011 ಹಾಗೂ 2012ರಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ 195/2011 ಕಲಂ 392 ಐಪಿಸಿ ರಂತೆ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2015 ರಲ್ಲಿ ಮೂರು ವರ್ಷಗಳ ಕಠಿಣ ಕಾರವಾಸ ಶಿಕ್ಷೆ ಹಾಗೂ ರೂಪಾಯಿ 5000 ಜುಲ್ಮಾನೆ ವಿಧಿಸಿ ತೀರ್ಪು ನೀಡಿರುತ್ತದೆ. ನಂತರ ಆರೋಪಿಯು ಮಾನ್ಯ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಾನ್ಯ ಉಚ್ಚ ನ್ಯಾಯಾಲಯಕ್ಕೆ ಕ್ರಿಮಿನಲ್ ರಿಟ್ […]

Continue Reading

ಕಾಂಗ್ರೆಸ್ ಸಂಘಟನೆಗೆ ‘ಲೀಗಲ್ ಬ್ಯಾಂಕ್’ ಬಲ; ದಕ್ಷಿಣ ಕನ್ನಡದಲ್ಲಿ ಮೊದಲ ಪ್ರಯೋಗ ಯಶಸ್ವಿ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ‘ಲೀಗಲ್ ಬ್ಯಾಂಕ್’ ಹಾಗೂ ‘ಲಾಯರ್ ಡೈರೆಕ್ಟರಿ’ ಮಂಗಳೂರು: ಪ್ರದೇಶ ಕಾಂಗ್ರೆಸ್ ಪಕ್ಷ ಇದೀಗ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದಿದೆ. ಕೇಂದ್ರದ ವಿರುದ್ಧ ‘ಓಟ್ ಚೋರಿ’ ಅಭಿಯಾನವನ್ನು ಬಿರುಸುಗೊಳಿಸಿರುವ ಕಾಂಗ್ರೆಸ್ ಪಕ್ಷ ಇದೀಗ ತನ್ನ ಈ ಹೋರಾಟವನ್ನು ಚುರುಕುಗೊಳಿಸಲು ‘ಲೀಗಲ್ ಬ್ಯಾಂಕ್’ ಅಸ್ತಿತ್ವಕ್ಕೆ ತಂದಿದೆ. ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಪರಿಕಲ್ಪನೆಯಂತೆ ಕರ್ನಾಟಕದಲ್ಲಿ ‘ಲೀಗಲ್ ಬ್ಯಾಂಕ್’ ಅಸ್ತಿತ್ವಕ್ಕೆ ಬಂದಿದೆ. ಪಕ್ಷ ಸಂಘಟನೆಗೆ ಕಾನೂನು ಶಕ್ತಿ ತುಂಬುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಆರಂಭಿಸಲಾಗಿದ್ದು, […]

Continue Reading

ರಾಜ್ಯದಲ್ಲಿ ಮಾದಕ ವಸ್ತುಗಳ ಪೂರೈಕೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ಲಿಂಕ್; ಮಕ್ಕಳೇ ಮಾದಕ ಜಾಲದ ಟಾರ್ಗೆಟ್, ಸಿಂಹಸ್ವಪ್ನರಾದ ‘ಮಂಗಳೂರು ಪೊಲೀಸರು’

ಕರಾವಳಿ ಅಂದರೆ ಶಿಕ್ಷಣಕ್ಕೆ ಹೆಸರುವಾಸಿ. ಇಲ್ಲಿರುವ ಶಿಕ್ಷಣ ಸಂಸ್ಥೆಗಳು ತಮ್ಮ ಅತ್ಯುತ್ತಮ ಮೌಲ್ಯಯುತ ಶಿಕ್ಷಣಕ್ಕೆ ಹೆಸರುವಾಸಿ. ‘ಎಜ್ಯುಕೇಶನ್ ಹಬ್’ ಎನಿಸಿಕೊಂಡಿರುವ ಮಂಗಳೂರಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಹೊರಜಿಲ್ಲೆ, ಹೊರರಾಜ್ಯಗಳ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇವರು ಸೇರಿದಂತೆ ಯುವ ಸಮೂಹ ಡ್ರಗ್ಸ್ ಮಾರುಕಟ್ಟೆಯ ಮುಖ್ಯ ಟಾರ್ಗೆಟ್. ನೆಲ, ಜಲ, ವಾಯು ಸಂಪರ್ಕ ಎಲ್ಲವನ್ನು ಜಿಲ್ಲೆ ಹೊಂದಿರುವುದರಿಂದ ಡ್ರಗ್ಸ್ ಕಾಳದಂಧೆಗೆ ಅನುಕೂಲಕರವಾಗಿ ಪರಿಣಮಿಸಿದೆ. ರಾತ್ರಿಯಾದರೆ ಸಾಕು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ನಶಾ ಲೋಕದಲ್ಲಿ ತೇಲಾಡುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ. ಮುಖದಲ್ಲೊಂದು ಕುರುಚಲು […]

Continue Reading

ಅಗಲಿಕೆಗೆ ನಾಲ್ಕು ವರ್ಷ; ಜಾತಿ-ಧರ್ಮ ಮೀರಿ ಬೆಳೆದ ಝಾಕೀರ್ ಸೂರಲ್ಪಾಡಿ ನೆನಪು ಮಾತ್ರ

ಗಂಜಿಮಠ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಆರ್.ಎಸ್.ಝಾಕೀರ್ ಸೂರಲ್ಪಾಡಿ ಕಾಂಗ್ರೆಸ್ಸಿನ ನಿಷ್ಠಾವಂತ ಕಾರ್ಯಕರ್ತ. ಹಗಲು-ರಾತ್ರಿಯೆನ್ನದೆ ಜನರ ಕಷ್ಟ ಕಾರ್ಪಣ್ಯಗಳಿಗೆ,ಸಾರ್ವಜನಿಕ ಕರೆಗೆ ಸ್ಪಂದಿಸುತ್ತಿದ್ದ ವ್ಯಕ್ತಿ. 15 ವರ್ಷಗಳಿಂದ ಗ್ರಾಮ ಪಂಚಾಯತ್ ಸದಸ್ಯರಾಗಿ, ಸೋಲಿಲ್ಲದ ಸರದಾರನಾಗಿ, ಬಡವರ ಪಾಲಿನ ಬಂಧುವಾಗಿ ಕ್ಷೇತ್ರದಾದ್ಯಂತ ಜನ ಮನ್ನಣೆಗಳಿಸಿದ್ದ ಗಂಜಿಮಠ ಗ್ರಾಮ ಪಂಚಾಯತ್ತಿನ ಅಭಿವೃದ್ಧಿಯ ಹರಿಕಾರ. ಪಂಚಾಯತ್ ವ್ಯಾಪ್ತಿಯ ನಂಬರ್ ಒನ್ ಸದಸ್ಯ. ಗ್ರಾ.ಪಂ ಚುನಾವಣೆಯಲ್ಲಿ ಜಿಲ್ಲೆಯಲ್ಲೆ ದಾಖಲೆ ಮಟ್ಟದ ಮತ (1020)ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದ ವ್ಯಕ್ತಿ. ಚಾಲೆಂಜರ್ಸ್ ಫ್ರೆಂಡ್ಸ್ ಕ್ಲಬ್ ಸೂರಲ್ಪಾಡಿ ಇದರ ಮೂಲಕ […]

Continue Reading

ತಂದೆಯ ಮೃತದೇಹ ನೋಡಲು ಪಾಸ್ ಪೋರ್ಟ್ ಇಲ್ಲದೇ ಕಂಗಾಲಾದ ಮಗನಿಗೆ ನೆರವಾದ ಮಾಜಿ ಶಾಸಕ.!

ಗಂಜಿಮಠದ ಯುವಕನಿಗೆ ಒಂದೇ ದಿನದಲ್ಲಿ ಪಾಸ್ ಪೋರ್ಟ್ ಮಾಡಿಸಿಕೊಟ್ಟು ಮಾನವೀಯತೆ ಮೆರೆದ ಮೊಹಿದ್ದೀನ್ ಬಾವಾ ತಂದೆ ವಿದೇಶದಲ್ಲಿ ಮರಣ, ಮಗ ಊರಿನಲ್ಲಿ. ತಂದೆಯ ಮುಖವನ್ನು ಕೊನೆಯ ಬಾರಿ ನೋಡಿ ಬೀಳ್ಕೊಡಬೇಕಾದ ಮಗನಿಗೆ ಪಾಸ್ ಪೋರ್ಟ್ ಇಲ್ಲದೇ ಊರಿನಲ್ಲಿಯೇ ಬಾಕಿಯಾಗುವ ದುಃಖತಪ್ತದ ವಾತಾವರಣ. ಆ ಸಂದರ್ಭದಲ್ಲಿ ಕುಟುಂಬಕ್ಕೆ ನೆನಪಾಗಿದ್ದು ಮಾಜಿ ಶಾಸಕ ಮೊಹಿದ್ದೀನ್ ಬಾವಾ. ವಿಷಯ ತಿಳಿಯುತ್ತಿದ್ದಂತೆ ಮಗನಿಗೆ ಒಂದೇ ದಿನದಲ್ಲಿ ಪಾಸ್ ಪೋರ್ಟ್ ಮಾಡಿಸಿ ತಂದೆಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಅನುವು ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ ಮೊಹಿದ್ದೀನ್ ಬಾವಾ. […]

Continue Reading

ಕುಂಬಳೆ ಟೋಲ್ ಗೇಟ್ ತೆರವು ಹೋರಾಟಕ್ಕೆ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಬೆಂಬಲ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿಯೂ ಅಂತರದ ನಿಯಮ ಪಾಲಿಸಲು ಆಗ್ರಹ: ಮುನೀರ್ ಕಾಟಿಪಳ್ಳ ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಸಂಗ್ರಹ ಆರಂಭಿಸಿರುವುದು ಜನತೆಯ ತೀವ್ರ ಆಕ್ರೋಶಕ್ಕೆ‌ ಕಾರಣವಾಗಿದೆ.‌ ಪ್ರತಿಭಟನೆಗಳು ಭುಗಿಲೆದ್ದಿವೆ.‌ ಮಂಜೇಶ್ವರದ ಶಾಸಕರೂ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ‘ಕರ್ನಾಟಕದ ಗಡಿಭಾಗದಲ್ಲಿ ಕಾರ್ಯಾಚರಿಸುತ್ತಿರುವ ತಲಪಾಡಿ ಟೋಲ್ ಗೇಟ್ ನಿಂದ ಕುಂಬಳೆ ಟೋಲ್ ಗೇಟ್ ಗೆ ಇರುವ ಅಂತರ ಕೇವಲ 26 ಕಿ ಮೀ ಮಾತ್ರ, ಹೆದ್ದಾರಿ ಪ್ರಾಧಿಕಾರದ ನಿಯಮಗಳ ಪ್ರಕಾರ ಎರಡು ಟೋಲ್ ಗೇಟ್ ಗಳ […]

Continue Reading

ಜಿಲ್ಲೆಯಲ್ಲಿ ಮತ್ತೆ ಚಿಗಿತುಕೊಳ್ಳುತ್ತಿರುವ ಅನೈತಿಕ ಪೊಲೀಸ್ ಗಿರಿ.!

ಗಂಜಿಮಠ ಗೂಡಂಗಡಿಗೆ ನುಗ್ಗಿ ಜೀವ ಬೆದರಿಕೆ ಒಡ್ಡಿದ ದುರ್ಷ್ಕರ್ಮಿಗಳು; ಎಫ್ ಐ ಆರ್ ದಾಖಲು ಜಿಲ್ಲೆಯಲ್ಲಿ ಮತ್ತೆ ಅನೈತಿಕ ಪೊಲೀಸ್ ಗಿರಿ ಚಿಗಿತುಕೊಳ್ಳುತ್ತಿದ್ದು, ಬಾಲ ಬಿಚ್ಚುವ ದುರ್ಷ್ಕರ್ಮಿಗಳ ಬಾಲ ಕಟ್ ಮಾಡುವ ಕೆಲಸ ಪೊಲೀಸ್ ಇಲಾಖೆ ಮಾಡುತ್ತಿದೆ. ಜಿಲ್ಲೆಯಲ್ಲಿ ಇಬ್ಬರು ಖಡಕ್ ಆಫೀಸರ್ಸ್ ಇಲ್ಲದೇ ಇದ್ದರೆ ಇಂತಹ ಕ್ಷುಲ್ಲಕ ಘಟನೆಗಳು ಕೋಮು ಗಲಭೆಗಳಿಗೆ ಕಾರಣವಾಗುತ್ತಿತ್ತು. ಆ ಮಟ್ಟಿಗೆ ಇಲ್ಲಿನ ಪೊಲೀಸ್ ಇಲಾಖೆಯ ಸ್ಥೈರ್ಯವನ್ನು ಮೆಚ್ಚಲೇಬೇಕು. ಗಂಜಿಮಠ ಗಾಂಧಿನಗರ ಬಳಿಯಲ್ಲಿ ಗೂಡಂಗಡಿ ಇಟ್ಟು ವ್ಯಾಪಾರ ಮಾಡುವ, ಜಾತ್ರೆ, ಕಾರ್ಯಕ್ರಮಗಳಿಗೆ […]

Continue Reading

ಬುದ್ದಿವಂತರ ಜಿಲ್ಲೆಯಲ್ಲಿ “ದೇಶಭಕ್ತ” ಸೋಗಿನ ಕ್ರಿಮಿನಲ್ ಗಳು; ಬೀದಿ ವಿಚಾರಣೆ, ನ್ಯಾಯ ತೀರ್ಮಾನ ಅತೀ ಅಪಾಯಕಾರಿ: ಸಿಪಿಐಎಂ ಖಂಡನೆ

ಮಂಗಳೂರು ನಗರದ ಕೂಳೂರು ಬಳಿ ಜಾರ್ಖಂಡ್ ನ ವಲಸೆ ಕಾರ್ಮಿಕ ದಿಲ್ ಜಾನ್ ಅನ್ಸಾರಿಯನ್ನು “ಬಾಂಗ್ಲಾ ನುಸುಳುಕೋರ” ಎಂದು ಆಪಾದಿಸಿ ಹಲ್ಲೆ ನಡೆಸಿರುವುದು, ಈ ಸಂದರ್ಭ ಆತನಿಂದ ಹಲವು ಬಾರಿ “ಜೈ ಶ್ರೀರಾಮ್” ಘೋಷಣೆ ಹಾಕಸಿರುವುದನ್ನು ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ಕಟುವಾಗಿ ಖಂಡಿಸುತ್ತದೆ. ಈ ಹಲ್ಲೆಕೋರರು ಸಂಘಪರಿವಾರದ “ಹಿಂದು ಜಾಗರಣ ವೇದಿಕೆ” ಗುಂಪಿಗೆ ಸೇರಿದವರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಪೊಲೀಸರು ಈ “ದೇಶಭಕ್ತ” ಸೋಗಿನ ಕ್ರಿಮಿನಲ್ ಗಳ ಮೇಲೆ ಕೊಲೆಯತ್ನ ಸಹಿತ ಗಂಭೀರ ಸೆಕ್ಷನ್ […]

Continue Reading

ಮೂಲ್ಕಿ: ಕಂಬಳದ ಕೋಣ ಮಾಲೀಕರಿಗೆ ಹಲ್ಲೆ, ಸುಲಿಗೆ ಪ್ರಕರಣ; ಮೂವರು ಆರೋಪಿಗಳ ವಿರುದ್ಧ ಕೆಕೋಕಾ ಪ್ರಕರಣ ದಾಖಲು

ಪಡು ಪಣಂಬೂರು ಮೂಲ್ಕಿ ಸೀಮೆ ಅರಸು ಕಂಬಳದಲ್ಲಿ 2 ನೇ ಬಹುಮಾನ ಗೆದ್ದ ಸಂಶುದ್ದೀನ್ ಅವರ ಬಳಿ ಸುಲಿಗೆ ಮಾಡಲು ಯತ್ನಿಸಿ ಹಲ್ಲೆ ನಡೆಸಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಮೂಲ್ಕಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳು ಹಲವು ಪ್ರಕರಣಗಳಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕೆಕೋಕಾ (ಕರ್ನಾಟಕ ಕಂಟ್ರೋಲ್ ಅರ್ಗನೈಸ್ಡ್ ಕ್ರೈಂ ಆಕ್ಟ್) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲು ಆದೇಶ ನೀಡಲಾಗಿದೆ. ಹಲವು ಪ್ರಕರಣಗಳಲ್ಲಿ ಭಾಗಿಯಾದ ಸುವಿನ್ ಕಾಂಚನ್ ಹೆಜಮಾಡಿ, ಅಕ್ಷಯ್ ಪೂಜಾರಿ ಕಾರ್ನಾಡ್ […]

Continue Reading

ವಲಸೆ ಕಾರ್ಮಿಕನ ರಾಷ್ಟ್ರೀಯತೆ ಪ್ರಶ್ನಿಸಿ, ಗುರುತಿನ ದಾಖಲೆ ತೋರಿಸುವಂತೆ ಒತ್ತಾಯ; ಗಂಭೀರ ಹಲ್ಲೆ, ಪ್ರಕರಣ ದಾಖಲು

ಹಲ್ಲೆ.ಬಾಂಗ್ಲಾದೇಶದ ಪ್ರಜೆ ಎಂದು ಶಂಕಿಸಿ ಜಾರ್ಖಂಡ್‌ನ ವಲಸೆ ಕಾರ್ಮಿಕನೊಬ್ಬನ ಮೇಲೆ ಗಂಭೀರ ಹಲ್ಲೆ ನಡೆಸಿದ ಪ್ರಕರಣ ಕೂಳೂರು ಸಮೀಪ ನಡೆದಿದೆ. ಹಲವಾರು ವರ್ಷಗಳಿಂದ ಮಂಗಳೂರಿನಲ್ಲಿ ವಲಸೆ ಕಾರ್ಮಿಕನಾಗಿ ದುಡಿಯುತ್ತಿರುವ ಸಂತ್ರಸ್ತನನ್ನು ಆತನ ರಾಷ್ಟ್ರೀಯತೆ ಯಾವುದೆಂದು ಪ್ರಶ್ನಿಸಿ, ಗುರುತಿನ ದಾಖಲೆಗಳನ್ನು ತೋರಿಸುವಂತೆ ಆರೋಪಿಗಳು ಒತ್ತಾಯಿಸಿದ್ದಾರೆ. ತಾನು ಭಾರತೀಯ ಪ್ರಜೆ ಎಂದು ಪದೇ ಪದೆ ಹೇಳುತ್ತಿದ್ದರೂ, ಆರೋಪಿಗಳು ಆತನಿಗೆ ಕಿರುಕುಳ ನೀಡುತ್ತ, ಅವಾಚ್ಯ ಪದಗಳಿಂದ ನಿಂದಿಸಿದ್ದರು ಎಂದು ಆರೋಪಿಸಲಾಗಿದೆ. ಸಂತ್ರಸ್ತನಿಗೆ ಸೇರಿದ ಉಪಕರಣಗಳಿಂದಲೇ ಆತನ ಮೇಲೆ ಹಲ್ಲೆ ನಡೆಸಲಾಗಿದೆ. ಇದರ […]

Continue Reading