ಅಕ್ರಮ ಗೋಹತ್ಯೆ ಪ್ರಕರಣ ಭೇದಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು; 9 ದನಗಳನ್ನು ರಕ್ಷಿಸಿ ಗೋಶಾಲೆಗೆ ಹಸ್ತಾಂತರ

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ಸಂಗಬೆಟ್ಟು ಗ್ರಾಮದ ಕೆರೆ ಬಳಿ ನಾಸಿರ್ ಮತ್ತು ಇತರರು ದನವನ್ನು ತಂದು ವಧೆ ಮಾಡುತ್ತಿರುವ ಬಗ್ಗೆ ಬಾತ್ಮಿದಾರರಿಂದ ಮಾಹಿತಿ ಪಡೆದ ಬಂಟ್ವಾಳ ಗ್ರಾಮಾಂತರ ಪೊಲೀಸರು ದಿನಾಂಕ 21.09.2025 ಇದಿನಬ್ಬ ರವರ ವಾಸದ ಮನೆ ಹಿಂಭಾಗದಲ್ಲಿರುವ ಶೆಡ್ಡಿಗೆ ದಾಳಿ ನಡೆಸಿರುತ್ತಾರೆ. ದಾಳಿ ಸಯಯದಲ್ಲಿ ನಾಸಿರ್ @ ಹುಸೇನಬ್ಬ ಸಂಗಬೆಟ್ಟು ಬಂಟ್ವಾಳ, ರಶೀದ್, ಮತ್ತು ಇತರರು ಕತ್ತಿ ಮತ್ತು ಚೂರಿಯಿಂದ ಒಂದು ದನವನ್ನು ವಧೆ ಮಾಡಿ ಹಾಕಿದ್ದರು. ಪೊಲೀಸರನ್ನು ಕಂಡು […]

Continue Reading

ಸಮಾಜಮುಖಿ ಕಾರ್ಯಗಳೇ ರಂಗಭೂಮಿಯ ಶಕ್ತಿ: ಡಾ. ಹೆಚ್.ಎಸ್.ಬಲ್ಲಾಳ್

ಉಡುಪಿ: 1965 ರಲ್ಲಿ ಆರಂಭಗೊಂಡು ನಿರಂತರವಾದ ಸಮಾಜಮುಖಿ ರಂಗ ಚಟುವಟಿಕೆಗಳೇ ರಂಗಭೂಮಿ ಸಂಸ್ಥೆಯನ್ನು ಆರು ದಶಕಗಳ ಕಾಲ ಉಳಿಸಿ ಬೆಳೆಸಿ ಮುನ್ನಡೆಸಿದೆ ಎಂದು ರಂಗಭೂಮಿ (ರಿ.) ಉಡುಪಿ ಸಂಸ್ಥೆಯ ಗೌರವಾಧ್ಯಕ್ಷರು ಹಾಗೂ ಮಾಹೆ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿಗಳಾದ ಡಾ. ಎಚ್.ಎಸ್. ಬಲ್ಲಾಳ್ ಹೇಳಿದರು. ಉಡುಪಿಯ ಹೋಟೆಲ್ ಡಯಾನದಲ್ಲಿ ಸೆ.20ರಂದು ನಡೆದ ರಂಗಭೂಮಿಯ ಸಂಸ್ಥೆಯ 60ನೇ ವಾರ್ಷಿಕ ಮಹಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಡಾ. ಟಿ ಮಾಧವ ಎ ಪೈ ಅವರ ಕಾಲದಿಂದಲೂ ರಂಗಭೂಮಿ ಸಂಸ್ಥೆಗೆ ನಿರಂತರವಾಗಿ ಮಣಿಪಾಲದ […]

Continue Reading

ಉಡುಪಿ: ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯಕ್ಕೆ ಅಮಾಯಕ ಜೀವಗಳು ಬಲಿಯಾಗುತ್ತಿವೆ.!

ಪ್ರವಾಸೋದ್ಯಮ ಇಲಾಖೆ ಎಚ್ಚೆತ್ತುಕೊಳ್ಳಲಿ ಕರಾವಳಿ ಪ್ರದೇಶ ಪ್ರವಾಸೋದ್ಯಮದ ತಾಣ. ಅದರಲ್ಲೂ ಉಡುಪಿ ಜಿಲ್ಲೆ ಪ್ರವಾಸಿಗರ ನೆಚ್ಚಿನ ತಾಣ. ಇಲ್ಲಿನ ಬೀಚುಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಕುಂದಾಪುರ, ಬೈಂದೂರು ತಾಲೂಕುಗಳು ಪ್ರವಾಸಿಗರಿಗೆ ಇನ್ನಷ್ಟು ನೆಚ್ಚಿನ ತಾಣವಾಗಿದೆ. ದೂರದೂರಿನಿಂದ ಬರುವ ಪ್ರವಾಸಿಗರು ಇಲ್ಲಿನ ಬೀಚ್ ಸೌಂದರ್ಯಕ್ಕೆ ಮನಸೋತು ಈಜಾಡಲು ತೆರಳಿ ಜೀವ ಬಲಿಯಾಗುವ ಅನೇಕ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ನಡೆಯುತ್ತಿದೆ. ಸಾಲು ಸಾಲು ಪ್ರವಾಸಿಗರು ಉಡುಪಿ ಜಿಲ್ಲೆಯಲ್ಲಿ ಸಮುದ್ರಪಾಲಾಗುತ್ತಿದ್ದರೂ ಪ್ರವಾಸೋದ್ಯಮ ಇಲಾಖೆ ಮಾತ್ರ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. […]

Continue Reading

ಬೆಳ್ತಂಗಡಿ: ಚಿನ್ನದ ಕರಿಮಣಿ ಸರ ಕಳ್ಳತನ ಪ್ರಕರಣ: ಆರೋಪಿ ಉಮೇಶ್ ಗೌಡನಿಗೆ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ, 5,000 ಸಾವಿರ ರೂ. ದಂಡ

ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೋಬ್ಬರ ಕುತ್ತಿಗೆಯಿಂದ ಚಿನ್ನದ ಕರಿಮಣಿ ಸರ ಎಳೆದು ತುಂಡರಿಸಿ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿ ಬೆಳ್ತಂಗಡಿ ಪೊಲೀಸ್ ಠಾಣೆಯ ನಿರೀಕ್ಷಕರಾದ ಸುಬ್ಬಾಪುರ್ ಮಠ್ ದೋಷರೋಪಣ ಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಸಂದೇಶ್ ರವರು ಆರೋಪಿಯ ಮೇಲೆ ಆರೋಪ ಸಾಬೀತಾದ ಕಾರಣ, ಆರೋಪಿ ಉಮೇಶ್ ಗೌಡ ಎಂಬವರಿಗೆ ಮೂರು 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ, ಹಾಗೂ 5,000 […]

Continue Reading

ಪುತ್ತೂರು: ಮೊಬೈಲ್ ಟವರಿಗೆ ಅಳವಡಿಸಿದ್ದ ಬ್ಯಾಟರಿಗಳ ಕಳ್ಳತನ ಪ್ರಕರಣ: ಆರೋಪಿಯ ಬಂಧನ, ಬ್ಯಾಟರಿ ವಶ

ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನರಿಮೊಗರು ಗ್ರಾಮದ ಪುರುಷರಕಟ್ಟೆ ಎಂಬಲ್ಲಿ ಮೊಬೈಲ್ ಟವರಿಗೆ ಅಳವಡಿಸಿದ್ದ ಬ್ಯಾಟರಿಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ದಿನಾಂಕ 13.09.2025 ರಂದು ಅ ಕ್ರ: 79/2025 ಕಲಂ: 331(3), 331(4), 305 BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪುತ್ತೂರು ಠಾಣಾ ಪೊಲೀಸರು ಕೇರಳದ ಕೊಲ್ಲಂ ಮೂಲದ ನಿವಾಸಿ ಇಟ್ಟಿ ಫನಿಕ್ಕರ್ ಎಂಬಾತನನ್ನು ಬಂಧಿಸಿದ್ದಾರೆ. ವಶಕ್ಕೆ ಪಡೆದೆ ಆರೋಪಿ ಪನಿಕ್ಕರ್ ನನ್ನು ವಿಚಾರಣೆ ನಡೆಸಿ, ಆರೋಪಿಯು ಕಳವುಗೈದ ಬ್ಯಾಟರಿಗಳನ್ನು ಪೊಲೀಸರು […]

Continue Reading

ಮೂಗಿನ ಶಸ್ತ್ರಚಿಕಿತ್ಸೆ ಒಳಗಾಗಿದ್ದ ವ್ಯಕ್ತಿಗೆ ಆಸ್ಪತ್ರೆಯ ವೆಚ್ಚ ಭರಿಸಲು ಕೇರ್ ಹೆಲ್ತ್ ಇನ್ಸೂರೆನ್ಸ್ ಕಂಪನಿಗೆ ಆದೇಶಿಸಿದ ದ.ಕ ಜಿಲ್ಲಾ ಗ್ರಾಹಕ ನ್ಯಾಯಾಲಯ

ಉಸಿರಾಟ ಸಮಸ್ಯೆಗೆ ಮೂಗಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸೂರ್ಯ ಗ್ರಾಮದ ನಿವಾಸಿಯೊಬ್ಬರಿಗೆ ಶಸ್ತ್ರ ಚಿಕಿತ್ಸೆಯ ನಂತರ ಆಸ್ಪತ್ರೆಯ ವೆಚ್ಚವನ್ನು ಮಂಜೂರು ಮಾಡಲು ನಿರಾಕರಿಸಿದ್ದ ಕೇರ್ ಹೆಲ್ತ್ ಇನ್ಸೂರೆನ್ಸ್ ಸಂಸ್ಥೆಗೆ ದ.ಕ ಜಿಲ್ಲಾ ಗ್ರಾಹಕ ನ್ಯಾಯಾಲಯ ಚಿಕಿತ್ಸಾ ವೆಚ್ಚವನ್ನು ಪರಿಹಾರ ಮತ್ತು ವ್ಯಾಜ್ಯ ವೆಚ್ಚ ಸಮೇತ ಪಾವತಿಸಲು ಆದೇಶ ನೀಡಿದೆ. ದೂರುದಾರರು ತನ್ನ ಕುಟುಂಬಕ್ಕೆ ಕೇರ್ ಹೆಲ್ತ್ ಇನ್ಸೂರೆನ್ಸ್ ಸಂಸ್ಥೆಯ ಪಾಲಿಸಿಯನ್ನು 2021 ರಿಂದಲೇ ಹೊಂದಿದ್ದು, 2024 ಇಸವಿಯಲ್ಲಿ ದೂರುದಾರರ ಮಗಳಿಗೆ ಉಸಿರಾಟದ ಸಮಸ್ಯೆ ಇದ್ದ ಕಾರಣ ವೈದ್ಯರು ರಿನೋ […]

Continue Reading

ಕೈರಂಗಳ: ಯಕ್ಷಗಾನ ಅಕಾಡೆಮಿಯಿಂದ ಯಕ್ಷಧಾರೆ ಸಂಪನ್ನ; ಯಕ್ಷಗಾನ ಬೆಳೆಸಲು ಕಲಾಪೋಷಕರ ಕೊಡುಗೆ ಅಗತ್ಯ: ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು

ಉಡುಪಿ: ಸರಕಾರ ಯಕ್ಷಗಾನ ಅಕಾಡೆಮಿಗೆ ನೀಡುವ ಅನುದಾನವನ್ನು ಯಕ್ಷಗಾನ ಕಲೆಯ ಬೆಳವಣಿಗೆಗೆ ಪೂರಕವಾದ ಚಟುವಟಿಕೆಗಳನ್ನು ನಡೆಸುವ ಸಂಘಸoಸ್ಥೆಗಳಿಗೆ ತಲುಪಿಸಬೇಕು ಎಂಬುದೇ ಅಕಾಡೆಮಿಯ ಆಶಯವಾಗಿದೆ. ಯಕ್ಷಗಾನ ಕಲೆ ಇಂದು ದೇಶವಿದೇಶದಲ್ಲಿ ಇಷ್ಟೊಂದು ಜನಪ್ರಿಯತೆ ಪಡೆಯಲು ಕಾರಣ ಅದಕ್ಕೆ ಸಿಕ್ಕಿರುವ ಜನಾದಾರದ ಜೊತೆಗೆ ಕಲಾಪೋಷಕರ ಪಾತ್ರ ಹಿರಿದಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಭಾನುವಾರ ದ.ಕ.ಜಿಲ್ಲೆಯ ಕೈರಂಗಳ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ […]

Continue Reading

ಅಸಹಜ ಸಾವು, ಅತ್ಯಾಚಾರ, ಕೊಲೆ, ಭೂ ಮಾಫಿಯಾ, ಮೈಕ್ರೋ ಫೈನಾನ್ಸ್ ದೌರ್ಜನ್ಯಗಳ ತನಿಖೆಗೆ ಒತ್ತಾಯಿಸಿ ಸೆ. 25 ರಂದು ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ನ್ಯಾಯ ಸಮಾವೇಶ

ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಅಸಹಜ ಸಾವುಗಳು, ಅತ್ಯಾಚಾರ, ಕೊಲೆ, ಭೂ ಮಾಫಿಯಾ, ಮೈಕ್ರೋ ಫೈನಾನ್ಸ್ ದೌರ್ಜನ್ಯಗಳ ಬಗ್ಗೆ ತನಿಖೆಗೆ ಒತ್ತಾಯಿಸಿ ಸೆಪ್ಟೆಂಬರ್ 25 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ನ್ಯಾಯ ಸಮಾವೇಶ ನಡೆಯಲಿದೆ. ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಎಲ್ಲಾ ಅಸಹಜ ಸಾವುಗಳು , ಅತ್ಯಾಚಾರ, ಕೊಲೆ ಪ್ರಕರಣಗಳನ್ನು ಎಸ್ಐಟಿ ತನಿಖೆಗೆ ಒಳಪಡಿಸಬೇಕು, ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಭೂ ಮಾಫಿಯಾ, ಮೈಕ್ರೋ ಫೈನಾನ್ಸ್ ಅಕ್ರಮ, ದೌರ್ಜನ್ಯಗಳ ಬಗ್ಗೆ ತನಿಖೆಗೆ ಪ್ರತ್ಯೇಕ ಸಮಿತಿ ರಚಿಸಬೇಕು, ಎಸ್ಐಟಿ ತಂಡಕ್ಕೆ […]

Continue Reading

ಬಂಟ್ವಾಳ: ಅಳಿಕೆ ಗ್ರಾಮದ ಬರೆಂಗೋಡಿಯಲ್ಲಿ ಅಕ್ರಮ ಗಣಿಗಾರಿಕೆ, ಹಲವು ಮನೆಗಳು ಬಿರುಕು; ಬಿಜೆಪಿ-ಕಾಂಗ್ರೆಸ್ ರಾಜಕೀಯ ‌ಜುಗಲ್ ಬಂದಿ

ಗಣಿಗಾರಿಕೆಯನ್ನು ಶೀಘ್ರ ಸ್ಥಗಿತಗೊಳಿಸುವಂತೆ ಕೋರಿ ಜಿಲ್ಲಾಧಿಕಾರಿಗಳಿಗೆ ದೂರು. ಮಂಗಳೂರು: ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಬರೆಂಗೋಡಿ, ಕೋಡಿಜಾಲು ಎಂಬಲ್ಲಿ ಕಪ್ಪು ಕಲ್ಲು ಗಣಿಗಾರಿಕೆಯಲ್ಲಿ ಬಾರಿ ಪ್ರಮಾಣದ ಕಲ್ಲಿನ ಸ್ಪೋಟದ ತೀವ್ರತೆಗೆ ಸ್ಥಳೀಯ ಹಲವು ಮನೆಗಳು ಬಿರುಕು ಬಿಟ್ಟಿದ್ದು, ಜೀವ ಭಯದಿಂದ ದಿನ ಕಳೆಯುತ್ತಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿ, ಶೀಘ್ರ ಪರಿಶೀಲಿಸಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸುವಂತೆ ಕೋರಿ ಸ್ಥಳೀಯರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಅವರಿಗೆ ದೂರು ಸಲ್ಲಿಸಿದ್ದಾರೆ.ಗಣಿಗಾರಿಕೆಗೆ ಪರವಾನಿಗೆ ನೀಡುವ ಸಂಧರ್ಭದಲ್ಲಿ ಸ್ಥಳೀಯ ಪಂಚಾಯತ್ ಆಡಳಿತ ಹಾಗೂ ಅಧಿಕಾರಿಗಳು […]

Continue Reading

ಮಂಗಳೂರು ಪೊಲೀಸರಿಗೂ ಬಂತು ದಮ್ಮು, ತಾಕತ್ತು.!

ಉಸ್ಕು ದಮ್ಮಿಲ್ಲದ ದ್ವೇಷ ಭಾಷಣಕೋರರು, ರಿವಾಲ್ವರ್ ಹಿಡಿದಿಲ್ಲ.., ಲಾಠಿ ಬೀಸಲಿಲ್ಲ.., ಮಂಗಳೂರು ಶಾಂತ ಶಾಂತ.. That is police ಪವರ್.! ಮಂಗಳೂರಿನಲ್ಲಿ ಗಣೇಶೋತ್ಸವ ಮೆರವಣಿಗೆಗಳು ಮಸೀದಿ ಮುಂದೆ ಹಾದು ಹೋದರೂ, ಕೇಕೆ ಹಾಕಿ ಕುಣಿಯಲಿಲ್ಲ ಭಕ್ತರು, ಈದ್ ಮಿಲಾದ್ ಜಾಥಾದಲ್ಲಿ ಯುವಕರ ಗುಂಪು ಕರ್ಕಶ ಹಾರ್ನ್ ಹಾಕಿ ನಾಗರೀಕರ ನೆಮ್ಮದಿ ಕಸಿದುಕೊಂಡಿಲ್ಲ. ಡಿಜೆ ಅಬ್ಬರವಿಲ್ಲ, ಹತ್ತು ಗಂಟೆಗೆ ಸುಚ್ ಆಪ್. ಇದಕ್ಕೆಲ್ಲ ಕಾರಣ ಮಂಗಳೂರು ಪೊಲೀಸ್ ಅಧಿಕಾರಿಗಳ ದಿಟ್ಟತನದ ನಿರ್ಧಾರ. ರಾಜಿ ರಹಿತವಾಗಿ ಕಾನೂನು ಪಾಲಿಸಿಕೊಂಡ ಪರಿಣಾಮ, […]

Continue Reading