ಬಜ್ಪೆ ಪಟ್ಟಣ ಪಂಚಾಯತ್ ಸೇರಿದಂತೆ ನಾಲ್ಕು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಮುದಾಯ ಆಸ್ಪತ್ರೆ ಇಲ್ಲದಿರುವುದು ಬಜ್ಪೆ ನಾಗರಿಕರ ದುರಂತ: ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ

ಇತ್ತೀಚೆಗೆ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ವತಿಯಿಂದ ಬಜ್ಪೆ ಪಟ್ಟಣ ಪಂಚಾಯತ್ ಸಭಾಭವನದಲ್ಲಿ ಬಜ್ಪೆ ನಾಗರಿಕರ ಹಿತ ರಕ್ಷಣೆಯ ಬಗ್ಗೆ ನಡೆಸಿ, ಬಜ್ಪೆ ಪೇಟೆಯ ಸರ್ವಾಂಗೀಣ ಅಭಿವೃದ್ದಿ, ಬೆಳೆಯುತ್ತಿರುವ ಬಜ್ಪೆ ಪಟ್ಟಣ ಪಂಚಾಯತ್ನೊಳಗೊಂಡಂತೆ,ಸಮೀಪದ 4 ಗ್ರಾಮಪಂಚಾಯತ್ ಸೇರಿಸಿಕೊಂಡು, ಬಜ್ಪೆ ಪ್ರಾಥಮಿಕ ಅರೋಗ್ಯ ಕೇಂದ್ರವನ್ನು ,ಸಮುದಾಯ ಅರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸುವುದರ ಬಗ್ಗೆ ರಾಜಕೀಯ ಪಕ್ಷಗಳು, ನಮಗೆ ಇದುವರೆಗೆ ಆಶ್ವಾಸನೆ ಕೊಟ್ಟದು ಸಾಕು, ನಾವು ಇನ್ನೂ ತಡಮಾಡದೆ ಹಿತ ರಕ್ಷಣಾ ವೇದಿಕೆಯ ಮುಂದಾಳತ್ವದಲ್ಲಿ ಬೀದಿಗಿಳಿದು ಹೋರಾಟ ಮಾಡುವುದಾಗಿ ತೀರ್ಮಾನಿಸಲಾಯಿತು. […]

Continue Reading

ದಕ್ಷಿಣ ಕನ್ನಡ ಜಿಲ್ಲೆಯ ಟೈಕ್ವಾಂಡೋ ತಂಡಕ್ಕೆ ಮೈಸೂರು ವಿಭಾಗ ಮಟ್ಟದ ಟೈಕ್ವಾಂಡೋ ಚಾಂಪಿಯನ್ ಶಿಪ್, ಒಂದು ಚಿನ್ನ, ಒಂದು ಬೆಳ್ಳಿ ಪದಕ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಟೈಕ್ವಾಂಡೋ ತಂಡಕ್ಕೆ ಮೈಸೂರು ವಿಭಾಗ ಮಟ್ಟದ ಟೈಕ್ವಾಂಡೋ ಚಾಂಪಿಯನ್ ಶಿಪ್-2025ರಲ್ಲಿ 2 ಪದಕಗಳು ದೊರೆತಿವೆ. ಚಿಕ್ಕಮಗಳೂರು ಶತಮಾನೋತ್ಸವ ಒಳಾಂಗಣ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ ಮೈಸೂರು ವಿಭಾಗ ಮಟ್ಟದ ಟೈಕ್ವಾಂಡೋ ಚಾಂಪಿಯನ್ ಶಿಪ್-2025 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಟೈಕ್ವಾಂಡೋ ತಂಡ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಕ್ರೀಡಾಪಟುಗಳು 1 ಚಿನ್ನ ಹಾಗೂ 1 ಬೆಳ್ಳಿ ಸಹಿತ ಒಟ್ಟು 2 ಪದಕಗಳನ್ನು ತಮ್ಮದಾಗಿಸಿಕೊಂಡು ಸಾಧನೆಗೈದಿದ್ದಾರೆ. ಮೊಹಮ್ಮದ್ ನಿಹಾಲ್ ನಝೀರ್ ಅವರು 69 ಕೆಜಿ ವಿಭಾಗದಲ್ಲಿ […]

Continue Reading

ಮಾರಣಾಂತಿಕ ರಸ್ತೆ ಗುಂಡಿಗಳು- ದುರಂತಗಳ ಹಿಂದೆ ಇರುವ ವ್ಯವಸ್ಥೆಯ ವೈಫಲ್ಯ; ಭ್ರಷ್ಟಾಚಾರಕ್ಕೆ ಬಲಿಯಾಗುತ್ತಿರುವ ಅಮಾಯಕ ಜೀವಗಳು.

ಜೀವಕಳೆದುಕೊಂಡವರ ಆತ್ಮಕ್ಕೆ ಮೋಕ್ಷ ಸಿಗಬೇಕಾದರೆ, ಅದು ದುಃಖದಿಂದಲ್ಲ. ಬದಲಾಗಿ ಈ ಅವ್ಯವಸ್ಥೆಗೆ ಕಾರಣೀಕರ್ತರನ್ನು ಹೊಣೆಗಾರನ್ನಾಗಿ ಮಾಡುವುದರಿಂದ. ✍️. ಇಸ್ಮಾಯಿಲ್ ಸುನಾಲ್, ವಕೀಲರು ಮಂಗಳೂರು 2025ರ ಸೆಪ್ಟೆಂಬರ್ 9ರಂದು, ಮಂಗಳೂರಿನ ಪಣಂಬೂರು ಕೂಳೂರು ರಾಷ್ಟ್ರೀಯ ಹೆದ್ದಾರಿ-66ಯಲ್ಲಿ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಲ್ಯಾಬ್ ತಂತ್ರಜ್ಞೆ ಮಾಧವಿ ಎಂಬವರು, ಮಾರಣಾಂತಿಕ ರಸ್ತೆ ಗುಂಡಿಗೆ ಬಿದ್ದು ಅವರ ಮೇಲೆ ಮೀನಿನ ಲಾರಿ ಹರಿದು ದಾರುಣವಾಗಿ ಮೃತಪಟ್ಟಿರುತ್ತಾರೆ. ಯಾರದೋ ತಪ್ಪಿಗೆ ಆ ಅಮಾಯಕ ಮಹಿಳೆ ತಮ್ಮ ಜೀವನ್ನೇ ಕಳೆದುಕೊಳ್ಳುವಂತಾಗಿದ್ದು, ದುರದೃಷ್ಟವೇ ಸರಿ.ಸುರತ್ಕಲ್‌ನ ಟೋಲ್ ಗೇಟ್ ವಿರುದ್ಧ […]

Continue Reading

ಜೀವ ಕಸಿಯುವ ಅಲೆಗಳು ಹಾಗೂ ನೀರಿನಿಂದ ದೂರವಿರಿ, ಹುಚ್ಚು ಸಾಹಸಕ್ಕೆ ಯುವ ಜೀವಗಳು ಬಲಿಯಾಗದಿರಲಿ.

ದುರಂತಗಳು ನಮಗೆ ನೀಡುವ ಸಂದೇಶ ಸರಳ “ಜೀವನವೇ ಮೊದಲ ಆದ್ಯತೆ” “ಸಾಹಸ, ಉಲ್ಲಾಸ, ಸೆಲ್ಫಿಎಲ್ಲವೂ ನಗಣ್ಯ” ✍️. ಇಸ್ಮಾಯಿಲ್ ಸುನಾಲ್, ವಕೀಲರು ಮಂಗಳೂರು ಪ್ರಕೃತಿ ಯಾವಾಗಲೂ ಮಾನವನನ್ನು ಆಕರ್ಷಿಸಿ, ತನ್ನತ್ತ ಸೆಳೆಯುತ್ತದೆ. ಕಡಲತೀರದ ಅಲೆಗಳು, ಜಲಪಾತಗಳ ಘರ್ಜನೆ, ನದಿಗಳ ಹರಿವು ಈ ಎಲ್ಲವೂಗಳು ವಿಸ್ಮಯಕಾರಿಗಳಾಗಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಸ್ಥಳಗಳು ಅನೇಕ ಕುಟುಂಬಗಳಿಗೆ ಸಂತೋಷದ ನೆನಪಿಗಿಂತ ದುಃಖದ ಕಣ್ಣೀರನ್ನು ನೀಡುತ್ತಿವೆ. ಇದರಲ್ಲಿ ಪ್ರಕೃತಿಯ ತಪ್ಪಿಲ್ಲವಾದರೂ, ಮನುಷ್ಯ ತನ್ನ ಪ್ರವೃತ್ತಿಯಿಂದ ತನಗೆ ತಾನೇ ಕಂಕಟಕಾರಿಯಾಗಿ ಪರಿಣಮಿಸುತ್ತಾನೆ. ವಿಶೇಷವಾಗಿ […]

Continue Reading

ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು, ಇದರ ಆಶ್ರಯದಲ್ಲಿ ಸೆಪ್ಟೆಂಬರ್ 11 ರಂದು ಸಂತ ಮದರ್ ತೆರೇಸಾರವರ ನೆನಪಿನಲ್ಲಿ ಜಿಲ್ಲಾಮಟ್ಟದ ವಿಚಾರ ಸಂಕಿರಣ

ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು ಇದರ ಆಶ್ರಯದಲ್ಲಿ ‘ಪ್ರೀತಿ ಹರಡಲಿ ಎಲ್ಲೆಡೆ’ ಎಂಬ ಘೋಷವಾಕ್ಯದೊಂದಿಗೆ ಮಾನವೀಯತೆಯ ಪ್ರತಿರೂಪ ಸಂತ ಮದರ್ ತೆರೇಸಾರವರ 28ನೇ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ತಾ. 11-09-2025 ರಂದು ಗುರುವಾರ ಬೆಳಿಗ್ಗೆ 10ಕ್ಕೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ಸಹಬಾಳ್ವೆಗೆ ಎದುರಾಗಿರುವ ಅಪಾಯಗಳು; ಪ್ರಜಾಪ್ರಭುತ್ವದ ಮುಂದಿರುವ ಸವಾಲುಗಳು’ ಎಂಬ ವಿಷಯದಲ್ಲಿ ದ.ಕ. ಜಿಲ್ಲಾ ಮಟ್ಟದ ವಿಚಾರ ಸಂಕಿರಣವು ಜರುಗಲಿದೆ. ವಿಚಾರ ಸಂಕಿರಣವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇದರ ಅಧ್ಯಕ್ಷರಾದ ಪ್ರೊ. […]

Continue Reading

26 ವರ್ಷಗಳ ಹಿಂದಿನ ಕೋಮು ಗಲಭೆ: ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳು ಅರೆಸ್ಟ್

1998 ಡಿಸೆಂಬರ್ 31ರಂದು ಮುಲ್ಕಿ ಠಾಣಾ ವ್ಯಾಪ್ತಿಯ ಹಳೆಯಂಗಡಿಯಲ್ಲಿ ನಡೆದ ಕೋಮು ಗಲಭೆ, ಬೆಂಕಿ ಹಚ್ಚಿ ನಡೆಸಿದ ಗಲಾಟೆ ಪ್ರಕರಣದಲ್ಲಿ ಕಳೆದ 26 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಲೀಲಾಧರ್ ಮತ್ತು ಚಂದ್ರಹಾಸ್ ಕೇಶವ ಶೆಟ್ಟಿ ಕಳೆದ 26 ವರ್ಷಗಳಿಂದ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದರು. ಹಿಂದಿನ ತನಿಖಾಧಿಕಾರಿಗಳು ಇವರ ವಿರುದ್ದ ತಲೆಮರೆಸಿಕೊಂಡಿರುವ ಬಗ್ಗೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಇಬ್ಬರು ಆರೋಪಿಗಳು ತನಿಖಾಧಿಕಾರಿಯವರಿಗೆ ಸಿಗದೇ ನ್ಯಾಯಾಲಯ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡು ಪರಾರಿಯಾಗಿದ್ದ ಮೇರೆಗೆ […]

Continue Reading

ಬಿಕ್ರಮ ಭಜರಂಗಿ ಪೌರಾಣಿಕ ನಾಟಕ ಬಿಡುಗಡೆ ಪೌರಾಣಿಕ ಪ್ರಸಂಗಳ ಸಂದೇಶದಿoದ ನೈತಿಕ ಸಮಾಜದ ನಿರ್ಮಾಣ ಸಾಧ್ಯ: ಡಾ.ತಲ್ಲೂರು

ಉಡುಪಿ : ಮಕ್ಕಳಿಗೆ, ಯುವ ಜನತೆಗೆ ನೈತಿಕ ಸಂದೇಶ ಬಿತ್ತಲು ನಮ್ಮ ಪೌರಾಣಿಕ ಪ್ರಸಂಗಗಳು ಹೆಚ್ಚು ಪರಿಣಾಮಕಾರಿಯಾಗಿವೆ. ಅದು ಯಕ್ಷಗಾನವಿರಬಹುದು, ನಾಟಕವೇ ಆಗಿರಬಹುದು ಪುರಾಣ ಪ್ರಸಂಗಳಲ್ಲಿ ಅಡಕವಾಗಿರುವ ಸತ್ಯ, ಧರ್ಮ, ನಿಷ್ಠೆ, ಪ್ರಾಮಾಣಿಕತೆ ಮೊದಲಾದ ಮೌಲ್ಯಗಳು ನೈತಿಕ ಪ್ರಜ್ಞೆಯನ್ನು ಬಡಿದೆಬ್ಬಿಸುವ ಶಕ್ತಿಯನ್ನು ಹೊಂದಿವೆ. ನಾವು ನಂಬಿರುವ ದೇವರು, ದೈವಗಳ ಇರಿಹಾಸವನ್ನು ಇಂದು ನಾಟಕ, ಯಕ್ಷಗಾನಗಳಲ್ಲಿ ಕಟ್ಟಿಕೊಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಶನಿವಾರ ಉಪ್ಪೂರಿನ ಶ್ರೀರಾಮಾಂಜನೇಯ […]

Continue Reading

ಮಂಗಳೂರು ಏರ್ ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಸ್ಫೋಟಿಸುವುದಾಗಿ ಬೆದರಿಕೆ ಕರೆ: ಆರೋಪಿ ಶಶಿಕುಮಾರ್ ಅರೆಸ್ಟ್

ಕಮೀಷನರ್ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆಗಳ ಮೂಲ ಬೇರು ಪತ್ತೆ ಹಚ್ಚಿ ಕಂಬಿ ಹಿಂದೆ ತಳ್ಳುತ್ತಿದೆ ಪೊಲೀಸ್ ಇಲಾಖೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ ಬಿಲ್ಡಿಂಗ್ ಸ್ಫೋಟಿಸುವುದಾಗಿ ಬೆದರಿಕೆ ಕರೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಅಗಸ್ಟ್ 29 ರಂದು ರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆ ಮಾಡಿದ ಅನಾಮಿಕ ವ್ಯಕ್ತಿಯೊಬ್ಬ ಟರ್ಮಿನಲ್ ಬಿಲ್ಡಿಂಗ್ ನ್ನು ಖಾಲಿ ಮಾಡಬೇಕು ಇಲ್ಲವಾದರೆ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಮಾಡುವುದಾಗಿ ಬೆದರಿಕೆ ಕರೆ ಮಾಡಿದ್ದ, ಕರೆ […]

Continue Reading

ಕೆಂಪುಕೋಟೆಯಲ್ಲಿ ಪ್ರಶಸ್ತಿ ಸ್ವೀಕರಿಸಿದ್ದ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಫಿಸಾ ಲೋಕಾಯುಕ್ತ ಬಲೆಗೆ

ಅಧ್ಯಕ್ಷೆಯ ತಾಳಕ್ಕೆ ಹೆಜ್ಜೆ ಹಾಕಿದ ಬಿಲ್ ಕಲೆಕ್ಟರ್ ವಿಲಿಯಂ ಕೂಡಾ ಅಂದರ್ ವಿಟ್ಲ: ಕೃಷಿ ಜಮೀನಿಗೆ ಕೊಳವೆ ಬಾವಿ ಮಂಜೂರಾತಿಗೆ ಹತ್ತು ಸಾವಿರ ಲಂಚ ಪಡೆಯುತ್ತಿದ್ದಾಗ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಫೀಸಾ ಹಾಗೂ ಬಿಲ್ ಕಲೆಕ್ಟರ್ ವಿಲಯಂ ಎಂಬಿಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಪೆರುವಾಯಿ ಗ್ರಾಮದ ದೂರುದಾರರ ಮಾವನಾದ ವೃದ್ಧ (75) ರೊಬ್ಬರ ಒಂದು ಎಕರೆ ಕೃಷಿ ಜಮೀನಿಗೆ ಸರಕಾರದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಕೊಳವೆ ಬಾವಿಗಾಗಿ 2024ರಲ್ಲಿ ಪೆರುವಾಯಿ ಗ್ರಾ […]

Continue Reading

ಬಲಿಷ್ಠ ವಿರೋಧ ಪಕ್ಷಗಳ ಅಗತ್ಯತೆ – ಕರ್ನಾಟಕದ ನೋಂದಣಿ ಕಾಯ್ದೆ ತಿದ್ದುಪಡಿ, ನೋಂದಣಿ ಶುಲ್ಕ ಹೆಚ್ಚಳ ಮತ್ತು ಜನಜೀವನದ ಮೇಲೆ ಅದರ ಪರಿಣಾಮ

ವಿರೋಧ ಪಕ್ಷಗಳು ತಮ್ಮ ಕರ್ತವ್ಯವನ್ನು ಮರೆತರೆ, ಪ್ರಜಾಪ್ರಭುತ್ವವೇ ದುರ್ಬಲವಾಗುತ್ತದೆ. ✍️. ಇಸ್ಮಾಯಿಲ್ ಸುನಾಲ್, ವಕೀಲರು ಮಂಗಳೂರು ಕೆಲವು ಮಂತ್ರಿಗಳು ದೊಣ್ಣೆ ನಾಯಕರಂತೆ ವರ್ತಿಸಿ ಹೊಸ ಹೊಸ ಕಾನೂನುಗಳನ್ನು ಜ್ಯಾರಿಗೆ ತರುವಾಗ ಅದರ ಸಾಧಕ ಬಾಧಕಗಳ ಬಗ್ಗೆ ವಿವರವಾದ, ಸಾಕಾರಣಾತ್ಮಕ ಚರ್ಚೆ ಮಾಡಿ ವಿದೇಯಕಗಳನ್ನು ಅಂಗೀಕರಿಸುವ ಬದಲಿಗೆ, ವಿರೋಧ ಪಕ್ಷದ ನಾಯಕರು ಸಹಿತ, ಆ ಸರಕಾರ ಹೇಳಿದ್ದನ್ನೆಲ್ಲ ಅಜ್ಞಾನಿಗಳಂತೆ ಕೇಳಿ, ಕಾನೂನು ಮಂಡಿಸಿದ ಮಂತ್ರಿಗಳಿಗೆ ಜಯಕಾರ ಮಾಡುತ್ತಿರುವುದು ಸಂವಿಧಾನದ ಆಶಯೋತ್ತರಗಳಿಗೆ ವಿರುದ್ಧ ಎನ್ನದೆ ವಿಧಿಯಿಲ್ಲ. ಪ್ರಜಾಪ್ರಭುತ್ವವು ಕೇವಲ ಮತದಾನದ […]

Continue Reading