ಇನ್ಮುಂದೆ ಕೊಳವೆ ಬಾವಿ ಕೊರೆಯಲು ಕಠಿಣ ನಿಯಮಗಳನ್ನು ಪಾಲಿಸಲೇಬೇಕು: ವಿಧಾನಸಭೆಯಲ್ಲಿ ಹೊಸ ಮಸೂದೆ ಅಂಗೀಕಾರ

ವಿಫಲ ಬೋರ್ವೆಲ್ ಮುಚ್ಚದಿದ್ದರೆ 25,000 ದಂಡ, ಒಂದು ವರ್ಷ ಜೈಲು ಶಿಕ್ಷೆ ಅಲ್ಲಲ್ಲಿ ಬೋರ್ ವೆಲ್ ಗಳನ್ನು ಕೊರೆಸಿ ನೀರು ಬರಿದಾದ ನಂತರ ಅವುಗಳನ್ನು ಮುಚ್ಚದೆ ಹಾಗೆಯೇ ಬಿಡುವ ಘಟನೆಗಳು ನಡೆಯುತ್ತಿದ್ದು, ಮುಚ್ಚಿರದ ಬೋರ್ ವೆಲ್ ಗಳಲ್ಲಿ ಮಕ್ಕಳು ಬೀಳುವ ಘಟನೆಗಳು ಸಾಮಾನ್ಯವಾಗುತ್ತಿದೆ. ಇಂತಹ ಅಪಘಾತಗಳನ್ನು ತಡೆಗಟ್ಟಲು, ಕರ್ನಾಟಕ ವಿಧಾನಸಭೆಯು ಕರ್ನಾಟಕ ಅಂತರ್ಜಲ (ಅಭಿವೃದ್ಧಿ, ನಿರ್ವಹಣೆ ಮತ್ತು ನಿಯಂತ್ರಣ) ಕಾಯ್ದೆ, 2011 ಮತ್ತು ಅದಕ್ಕೆ ಸಂಬಂಧಿಸಿದ 2012ರ ನಿಯಮಗಳಿಗೆ ತಿದ್ದುಪಡಿಗಳನ್ನು ಅಂಗೀಕರಿಸಿದೆ. ಕರ್ನಾಟಕದ ಸಣ್ಣ ನೀರಾವರಿ, ವಿಜ್ಞಾನ […]

Continue Reading

ರಾಜ್ಯದಲ್ಲಿ ‘ಸಿಸೇರಿಯನ್‌ ಹೆರಿಗೆ’ ಪ್ರಮಾಣದಲ್ಲಿ ಗರಿಷ್ಠ ಏರಿಕೆ.. ಪ್ರತೀ ವರ್ಷ ಶೇಕಡಾ 10 ರಷ್ಟು ಹೆಚ್ಚಳವಾಗುತ್ತಿದೆ

ನಿಯಂತ್ರಣಕ್ಕೆ ಶ್ರೀಘ್ರದಲ್ಲಿ ವಿಶೇಷ ಕಾರ್ಯಕ್ರಮ ಘೋಷಣೆ: ಆರೋಗ್ಯ ಸಚಿವ ರಾಜ್ಯದಲ್ಲಿ ಪ್ರತಿ ವರ್ಷ `ಸಿಸೇರಿಯನ್‌ ಹೆರಿಗೆ’ ಪ್ರಮಾಣ ಹೆಚ್ಚಾಗುತ್ತಿದೆ. ಇದರ ನಿಯಂತ್ರಣಕ್ಕೆ ರಾಜ್ಯ ಸರ್ಕಾರವು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಘೋಷಣೆ ಮಾಡಿದ್ದಾರೆ. 2021-2022 ರಲ್ಲಿ 35% ಇದ್ದ ಸಿಸೇರಿಯನ್‌ ಪ್ರಮಾಣ, 2022-23 ಕ್ಕೆ 38%ಕ್ಕೆ ಏರಿಕೆಯಾಯಿತು. ಪ್ರಸ್ತುತ ರಾಜ್ಯದಲ್ಲಿ ಸಿಸೇರಿಯನ್‌ ಹೆರಿಗೆ ಪ್ರಮಾಣ 46% ಇದೆ. ತಾಯಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಸಿಸೇರಿಯನ್‌ ಹೆರಿಗೆಗೆ ನಿಯಂತ್ರಣ ಹೇರಬೇಕಿದೆ. ಈ […]

Continue Reading

ಕೆಪಿಸಿಸಿ ಪಟ್ಟಕ್ಕೆ ಜಾರಕಿ v/s ಡಿಕೆಸು.?

ಹೊಸ ಶಕ್ತಿಯೊಂದನ್ನು ಕಟ್ಟಲು ಹಲವು ನಾಯಕರಿಂದ ಯೋಚನೆ. ✍️. ಆರ್.ಟಿ.ವಿಠ್ಠಲಮೂರ್ತಿ ಇನ್ನು ಕೆಲ ಕಾಲ ನಿಂತಿದ್ದ ಕೆಪಿಸಿಸಿ ಅಧ್ಯಕ್ಷ ಹುದ್ದೆಯ ರೇಸು ಪುನ: ಆರಂಭವಾಗಿದ್ದು,ಈ ಬಾರಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಡಿಸಿಎಂ ಡಿಕೆಶಿ ಅವರ ಸಹೋದರ ಡಿ.ಕೆ.ಸುರೇಶ್ ಹೆಸರು ರೇಸಿನಲ್ಲಿ ಕಾಣಿಸಿಕೊಂಡಿವೆ.ಈ ಮಧ್ಯೆ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಅವರು ರೇಸಿನಲ್ಲಿ‌ ಕಾಣಿಸಿಕೊಂಡಿದ್ದರೂ ಸತೀಶ್ ಜಾರಕಿಹೊಳಿ ಮತ್ತು ಡಿ.ಕೆ.ಸುರೇಶ್ ನಡುವಣ ಫೈಟು ಟಫ್ ಆಗಿದೆ. ಅಂದ ಹಾಗೆ ಮೊನ್ನೆ ಮೊನ್ನೆಯ ತನಕ ಕೂಲ್ ಆಗಿದ್ದ ಕೆಪಿಸಿಸಿ […]

Continue Reading

ವಿಜಯೇಂದ್ರ ಟೀಮಿಗೆ ಸರ್ಜರಿ ಫಿಕ್ಸ್. ವಿಜಯೇಂದ್ರ ಯಾಕೆ ಹಿಂದೆ ಸರಿದರು.?

ವಿಜಯೇಂದ್ರ ವಿರುದ್ಧ ಧ್ವನಿ ಎತ್ತುತ್ತಿರುವ ಯತ್ನಾಳ್ ಗ್ಯಾಂಗು ಯಾಕೆ ಮೌನವಾಗಿದೆ. ✍️. ಆರ್.ಟಿ. ವಿಠ್ಠಲಮೂರ್ತಿ ಕಳೆದ ವಾರ ದಿಲ್ಲಿಯಲ್ಲಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನದಾಸ್ ಅಗರ್ವಾಲ್ ಅವರು ಕೇಂದ್ರ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಕರ್ನಾಟಕದ ವಿದ್ಯಮಾನಗಳ ಬಗ್ಗೆ ಅವರು ವಿವರಿಸಿದ್ದಾರೆ. ‘ಸರ್, ಕರ್ನಾಟಕದಲ್ಲಿ ಪಕ್ಷ ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಒಂದು ಸುತ್ತಿನ ಚರ್ಚೆ ನಡೆಸಿ ಬಂದಿದ್ದೇನೆ. ಅದನ್ನು ಸರಿಪಡಿಸಬೇಕೆಂದರೆ ತುರ್ತಾಗಿ ಕೆಲ ಬದಲಾವಣೆಗಳನ್ನು ಮಾಡಬೇಕು. ಮತ್ತು ನಾಯಕರಲ್ಲಿರುವ ಪ್ರತಿಷ್ಟೆಗೆ […]

Continue Reading

ಹಳ್ಳಿ ಗದ್ದುಗೆಗೆ ಇನ್ನೂ ‘ಪಕ್ಷ’ ಅಧಿಕೃತ.. ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷದ ಚಿಹ್ನೆಗಳಡಿ ಅಭ್ಯರ್ಥಿಗಳ ಸ್ಪರ್ಧೆಗೆ ರಾಜ್ಯ ಸರ್ಕಾರ ಚಿಂತನೆ

ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳ ಚಿಹ್ನೆಗಳಡಿ ಅಭ್ಯರ್ಥಿಗಳ ಸ್ಪರ್ಧೆಗೆ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮೂರು ದಶಕಗಳ ಹಿಂದೆ ರಾಜಕೀಯ ಪಕ್ಷಗಳ ಚಿಹ್ನೆಗಳನ್ನು ಬಳಸಿಕೊಳ್ಳಲಾಗುತ್ತಿತ್ತು. ಕರ್ನಾಟಕದಲ್ಲಿ ಮೊದಲ ಬಾರಿ 1987ರಲ್ಲಿ ನಡೆದಿದ್ದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಆ ಬಳಿಕ ರೂಪಿಸಿದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ ರಾಜ್‌ ಅಧಿ ನಿಯಮ-1993ರ ಪ್ರಕಾರ ರಾಜಕೀಯ ಪಕ್ಷಗಳ ಚಿಹ್ನೆ ಬಿಟ್ಟು ಚುನಾವಣೆ ನಡೆಸಲು ನಿಯಮ […]

Continue Reading

ರಾಜ್ಯದಲ್ಲಿ 20 ಸಾವಿರ ಜನಸಂಖ್ಯೆ ಮೇಲ್ಪಟ್ಟ ಗ್ರಾಮ ಪಂಚಾಯತಿಗಳಿಗೆ ಮಾತ್ರ ಪಟ್ಟಣ ಪಂಚಾಯತಿ ಭಾಗ್ಯ.!

ಸರಕಾರದ ಬಳಿ 50 ಕ್ಕೂ ಹೆಚ್ಚು ಗ್ರಾಮ ಪಂಚಾಯತ್, ಸ್ಥಳೀಯ ಸಂಸ್ಥೆ ಮೇಲ್ದರ್ಜೆಗೆ ಪ್ರಸ್ತಾವನೆ ಇದೆ: ನಗರಾಭಿವೃದ್ಧಿ ಸಚಿವರು ರಾಜ್ಯದ ವಿವಿಧ ಗ್ರಾಮ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿಗಳನ್ನಾಗಿ, ಪಟ್ಟಣ ಪಂಚಾಯತಿಗಳನ್ನು ಪುರಸಭೆಗಳನ್ನಾಗಿ, ಪುರಸಭೆಗಳನ್ನು ನಗರಸಭೆಗಳನ್ನಾಗಿ ಮೇಲ್ದರ್ಜೆಗೇರಿಸುವ ಸಂಬಂಧ 50 ಕ್ಕೂ ಹೆಚ್ಚು ಪ್ರಸ್ತಾವನೆಗಳು ರಾಜ್ಯ ಸರಕಾರದ ಮುಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿ ಹಂತ ಹಂತವಾಗಿ ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಆದರೆ 2011 ರ ಜನಗಣತಿಯ ಆಧಾರ 20,000 ಕ್ಕೂ ಅಧಿಕ […]

Continue Reading

ಕೋವಿಡ್ ವೇಳೆ ಹೈಕೋರ್ಟ್ ಆದೇಶಕ್ಕೆ ಡೋಂಟ್ ಕೇರ್.. ದುಪ್ಪಟ್ಟು ಡೊನೇಷನ್ ಪೀಕಿಸಿ ಬರೋಬ್ಬರಿ 346 ಕೋಟಿ ಲೂಟಿಗೈದ ಖಾಸಗಿ ಶಾಲೆಗಳು.!

ಆರ್ ಟಿಇ ಅಡಿಯಲ್ಲಿ ಸೇರ್ಪಡೆಯಾದ ಮಕ್ಕಳಿಂದಲೂ ಶುಲ್ಕ ಸಂಗ್ರಹ.. ಸಿಎಜಿ ವರದಿಯಲ್ಲಿ ಬಹಿರಂಗ..ಸರಕಾರ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಹಾಮಾರಿ ಕೋವಿಡ್ ಸಾಮಾನ್ಯ ಜನತೆಗೆ ಸಂಕಷ್ಟ ತಂದೊಡ್ಡಿದ್ದರೆ, ಇದನ್ನೇ ಬಂಡವಾಳ ಮಾಡಿಕೊಂಡು ದುಡ್ಡು ಲೂಟಿಗೈದವರೂ ಇದ್ದಾರೆ. ಇದಕ್ಕೊಂದು ಸ್ಪಷ್ಟ ನಿದರ್ಶನ ಎಂಬಂತೆ ಕೋವಿಡ್ ಸಂಕಷ್ಟದ ಸಮಯದಲ್ಲಿ ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಬರೋಬ್ಬರಿ 346 ಕೋಟಿ ರೂಪಾಯಿ ಲೂಟಿಗೈದಿರುವುದಾಗಿ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿ ಬೆಳಕು ಚೆಲ್ಲಿದೆ. ಕೋವಿಡ್ ಸಂದರ್ಭದಲ್ಲಿ […]

Continue Reading

ಕೂಡ್ಲಿಗಿ: ಪ.ಪೂ.ಕಾಲೇಜು ವಿದ್ಯಾರ್ಥಿಗಳಿಗೆ ಅಧಿವೇಶನ ವೀಕ್ಷಿಸುವ ಸುವರ್ಣಾವಕಾಶ ಕಲ್ಪಿಸಿದ ಶಾಸಕ ಡಾ. ಎನ್. ಟಿ. ಶ್ರೀನಿವಾಸ್

ಕೂಡ್ಲಿಗಿ ಪಟ್ಟಣದ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ, ಪಿಯುಸಿ ತರಗತಿಯ ವಿದ್ಯಾರ್ಥಿಗಳು ಪ್ರಸ್ತುತ ಬೆಳಗಾವಿಯ ಸುವರ್ಣ ಸೌಧದಲ್ಲಿ, ಜರುಗುತ್ತಿರುವ ಚಳಿಗಾಲದ ಅಧಿವೇಶನವನ್ನು ಖುದ್ದು ನೇರವಾಗಿ ವೀಕ್ಷಿಸುವ ಸುವರ್ಣಾವಕಾಶವನ್ನು, ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರು ಕಲ್ಪಿಸಿ ಕೊಟ್ಟಿದ್ದಾರೆ. ಶಾಸಕರು ಒಟ್ಟು 200 ವಿದ್ಯಾರ್ಥಿಗಳಿಗೆ ಅಧಿವೇಶನ ವೀಕ್ಷಿಸುವ ಸುವರ್ಣಾವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅಧಿವೇಶನ ಆರಂಭಗೊಂಡ ಎರಡನೇ ದಿನವಾದ, ಡಿಸೆಂಬರ್10ರಂದು ಕೂಡ್ಲಿಗಿಯ ಸ.ಸಂ.ಪ.ಪೂ.ಕಾಲೇಜಿನ ಪಿಯುಸಿ ತರಗತಿಯ 54 ವಿದ್ಯಾರ್ಥಿಗಳು. ಸುವರ್ಣ ಸೌಧದಲ್ಲಿ ಜರುಗುವ ಅಧಿವೇಶನವನ್ನು, ಖುದ್ದು ವೀಕ್ಷಿಸಿ ಕಣ್ತುಂಬಿಸಿಕೊಂಡಿದ್ದಾರೆ. ಅಧಿವೇಶನ […]

Continue Reading

ಅಧಿಕಾರ ರಾಜಕಾರಣಕ್ಕಿಂತ ತತ್ವ ಸಿದ್ಧಾಂತದ ಬದ್ಧತೆ ಹೊಂದಿರುವ ಡೈನಾಮಿಕ್ ರಾಜಕಾರಣಿ ಬಿ. ಕೆ ಹರಿಪ್ರಸಾದ್

ಮುಚ್ಚುಮರೆಯಿಲ್ಲದೆ ಹುಳುಕುಗಳನ್ನು ತೆರೆದಿಡುವ ಗಟ್ಟಿ ಧ್ವನಿಯ ಏಕೈಕ ನಾಯಕ ಕರಾವಳಿಯ ಕೋಮು ರಾಜಕಾರಣ ಕೊನೆಯಾಗಬೇಕಾದರೆ ಬಿ. ಕೆ ಹರಿಪ್ರಸಾದ್ ಉಸ್ತುವಾರಿ ಮಂತ್ರಿಯಾಗಲಿ ಸಣ್ಣ ಪುಟ್ಟ ಅಧಿಕಾರಕ್ಕಾಗಿ ತತ್ವ ಸಿದ್ಧಾಂತಕ್ಕೆ ಎಳ್ಳು ನೀರು ಬಿಟ್ಟು ಬಕೆಟ್ ಹಿಡಿಯುವ ಅದೆಷ್ಟೋ ರಾಜಕಾರಣಿಗಳನ್ನು ನಾವು ಕಂಡಿದ್ದೇವೆ. ಅಂತಹುದರಲ್ಲಿ ಅಧಿಕಾರ, ರಾಜಕಾರಣಕ್ಕಿಂತ ತತ್ವ ಸಿದ್ಧಾಂತವೇ ಮೇಲು ಅನ್ನುತ್ತಾ ಇದೇ ಕಾರಣದಿಂದ ಮಂತ್ರಿಯಾಗುವ ಭಾಗ್ಯ ಕಳೆದುಕೊಂಡ ಈ ಕಾಲಘಟ್ಟದ ಏಕೈಕ ರಾಜಕಾರಣಿಯಿದ್ದರೆ ಅದು ಬಿ. ಕೆ ಹರಿಪ್ರಸಾದ್ ಮಾತ್ರ ಅನ್ನುವುದು ಸುಳ್ಳಲ್ಲ. ಕಾಂಗ್ರೆಸ್ ಪಕ್ಷದ […]

Continue Reading

ಹೊಲದ ವಿಚಾರ ದಾಯಾದಿ ಕಲಹ; ಮೂರು ದಿನಗಳಾದರೂ ಕೇಸು ದಾಖಲಿಸದ ಹೊಸಹಳ್ಳಿ ಪೊಲೀಸರು

ಪೊಲೀಸ್ ಸಿಬ್ಬಂದಿಯೇ ಶಾಮೀಲು ಶಂಕೆ.! ಪೊಲೀಸ್ ಸಿಬ್ಬಂದಿಯನ್ನೇ ಅಪರಾಧಿಯನ್ನಾಗಿ ಪರಿಗಣಿಸಬೇಕು; ಗಾಯಾಳುಗಳ ಆಕ್ರೋಶ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣಾವ್ಯಾಪ್ತಿಯ, ಸೂಲದಹಳ್ಳಿ ಯಲ್ಲಿ ಡಿ.5ರಂದು ಹೊಲದ ವಿಚಾರದಲ್ಲಿ, ದಾಯಾದಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ ಒಂದು ಗುಂಪಿನವರ ಮೇಲೆ ಮತ್ತೊಂದು ಗುಂಪು ಮಾರಣಾಂತಿಕ ಹಲ್ಲೆಮಾಡಿದ ಪರಿಣಾಮ ಮೂವರು ತೀವ್ರವಾಗಿ ಮಾರಣಾಂತಿಕ ಗಾಯಗೊಂಡಿದ್ದಾರೆ. ಗಾಯಳುಗಳು ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ, ತುರ್ತಾಗಿ ಅಗತ್ಯ ಪ್ರಥಮ ಚಿಕಿತ್ಸೆ ಪಡಿದಿದ್ದಾರೆ. ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ, […]

Continue Reading