ರೌಡಿಶೀಟರ್ ನೌಫಲ್ ಮರ್ಡರ್: ಯಾರ ಪತ್ವಾ?, ಡಬ್ಬಲ್ ಹಂತಕನ ಖೆಡ್ಡಾಕ್ಕೆ ಕೆಡವಿದವರ್ಯಾರು.? ಹಂತಕರು ಶರಣು.?

ಅತ್ಯಾಪ್ತ ಸಹಚರ ಇಜಾಝ್ ಹತ್ಯೆಯ ದಿನದಂದೇ ನೌಫಲ್ ಗೆ ಮುಹೂರ್ತವಿಟ್ಟ ಹಂತಕ ಪಡೆ.! ಅದು 2017 ಸೆಪ್ಟೆಂಬರ್ 25,ಫರಂಗಿಪೇಟೆಯ ಪೊಲೀಸ್ ಔಟ್ ಪೋಸ್ಟ್ ಎದುರಲ್ಲೇ ರಾತ್ರೋರಾತ್ರಿ ಇಡೀ ಜಿಲ್ಲೆಯೇ ಬೆಚ್ಚಿಬೀಳಿಸುವ ಡಬ್ಬಲ್ ಮರ್ಡರ್ ಪ್ರಕರಣ ನಡೆದಿತ್ತು. ಸ್ವಿಫ್ಟ್ ಕಾರಿನಲ್ಲಿ ಐವರು ಸಹಚರರ ಜೊತೆಗೆ ಫರಂಗಿಪೇಟೆಗೆ ಬಂದಿದ್ದ ಜಿಯಾ. ಇದರ ಮುನ್ಸೂಚನೆ ಅರಿತ ಹಂತಕ ಪಡೆ ಇನೊವಾ ಕಾರಿನಲ್ಲಿ ಅತ್ತ ಧಾವಿಸಿತ್ತು. ಸ್ವಿಫ್ಟ್ ಕಾರಿನಲ್ಲಿದ್ದ ಜಿಯಾ ತಂಡದ ಮೇಲೆ ಹಂತಕ ಪಡೆ ಯದ್ವಾತದ್ವಾ ತಲವಾರು ಬೀಸಿ ಇಬ್ಬರನ್ನು ಬರ್ಬರವಾಗಿ […]

Continue Reading

ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಅರಣ್ಯ ಇಲಾಖೆ ಮುಂದಾಗಿದೆ

ಏಕಾಏಕಿ ಒಕ್ಕಲೆಬ್ಬಿಸಿ, ಬೇರೆ ಜಮೀನಾಗಲಿ, ಮನೆಯಾಗಲಿ ಇಲ್ಲದ ಅಕ್ಷರಶ ಬೀದಿ ಪಾಲಾದಂತಾಗಿದೆ. ಸಹಾಯಧನವಿಲ್ಲ, ಪುನರ್ವಸತಿ ಪ್ಯಾಕೇಜ್ ಇಲ್ಲ, ಇದೀಗ ಯಾವ ಪರಿಹಾರವೂ ನೀಡದೆ ಒಕ್ಕಲೆಬ್ಬಿಸುವ ಕಾರ್ಯ ಆರಂಭಿಸಿದ್ದಾರೆ. ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಅರಣ್ಯ ಇಲಾಖೆ ಮುಂದಾಗಿದ್ದು ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗೆ ಅರಸಿನಮಕ್ಕಿ ಎಂಬಲ್ಲಿನ ನಿವಾಸಿ ಪಿ.ಟಿ ಜೋಸೆಫ್ ಎಂಬವರನ್ನು ಅ. 31ರಂದು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಒಕ್ಕೆಲಬ್ಬಿಸಿದ್ದು ಅವರ ಕೃಷಿಯನ್ನು ಸಂಪೂರ್ಣ ವಾಗಿ ನಾಶಪಡಿಸಿ […]

Continue Reading

ನಕ್ಷೆ ಉಲ್ಲಂಘನೆ ಪ್ರಕರಣಗಳಲ್ಲಿ ಒಂದು ಬಾರಿಗೆ ದಂಡ ವಿಧಿಸಿ ಪರಿಷ್ಕೃತ ಕಟ್ಟಡ ನಕ್ಷೆ ಮಂಜೂರು ತೀರ್ಮಾನ

ಕಟ್ಟಡ ನಕ್ಷೆ ಉಲ್ಲಂಘನೆ ಪ್ರಕರಣಗಳಿಗೆ ಸರ್ಕಾರ ದಂಡ ನಿಗದಿ: ನಗರಾಭಿವೃದ್ಧಿ ಇಲಾಖೆ ಆದೇಶ ರಾಜ್ಯದಾದ್ಯಂತ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಟ್ಟಡ ನಕ್ಷೆ ಉಲ್ಲಂಘನೆ ಪ್ರಕರಣಗಳಲ್ಲಿ ಒಂದು ಬಾರಿಗೆ ದಂಡ ವಿಧಿಸಿ ಪರಿಷ್ಕೃತ ಕಟ್ಟಡ ನಕ್ಷೆ ಮಂಜೂರು ಮಾಡಲು ತೀರ್ಮಾನಿಸಿದೆ. ಕಟ್ಟಡ ನಕ್ಷೆ ಉಲ್ಲಂಘನೆ ಪ್ರಕರಣಗಳಿಗೆ ಸರ್ಕಾರ ದಂಡ ನಿಗದಿ ಮಾಡಿದ್ದು, ಈ ಬಗ್ಗೆ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಕಟ್ಟಡ ಪರವಾನಗಿ ಪಡೆದು ಸೆಟ್ ಬ್ಯಾಕ್‌, ಕವರೇಜ್‌ಗಳಲ್ಲಿ ಶೇ 15 ರ ಮಿತಿಯೊಳಗೆ ಉಲ್ಲಂಘನೆ ಮಾಡಿರುವ […]

Continue Reading

ಪೊಲೀಸ್, ಜಡ್ಜ್ ರೀತಿ ಬಿಂಬಿಸಿ ಸೈಬರ್ ಕಳ್ಳರ ಕೈ ಚಳಕ; ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 17 ಲಕ್ಷ ಹಣ ವರ್ಗಾವಣೆ

ಸೂಕ್ತ ಕ್ರಮ ಕೈಗೊಂಡು ತ್ವರಿತಗತಿಯಲ್ಲಿ ದೂರುದಾರರಿಗೆ ಹಣವನ್ನು ಹಿಂದುರುಗಿಸಿರುವ ಸೈಬರ್ ಠಾಣಾ ಪೊಲೀಸರು ಅಕ್ಟೋಬರ್ 23 ರಂದು ಬೆಳಿಗ್ಗೆ ಸುಮಾರು 10:00 ರ ಸಮಯಕ್ಕೆ ಬಿಜೈ ನಿವಾಸಿ 79 ವರ್ಷ ಪ್ರಾಯದ ಹಿರಿಯ ಮಹಿಳಾ ನಾಗರೀಕರಿಗೆ ಯಾರೋ ಅಪರಿಚಿತ ವ್ಯಕ್ತಿಯು ಫೋನ್ ಕರೆ ಮಾಡಿ ಪಿರ್ಯಾದಿದಾರರ ಮೇಲೆ ಅರೆಸ್ಟ್ ವಾರೆಂಟ್ ಜಾರಿಯಾಗಿರುವುದಾಗಿ ಹಾಗೂ ಪಿರ್ಯಾದಿದಾರರನ್ನು ಬಂಧಿಸುವುದಾಗಿ ಹೆದರಿಸಿರುತ್ತಾರೆ. ನಂತರ ಬಂಧನದಿಂದ ಪಾರಾಗಲು ಪಿರ್ಯಾದಿದಾರರು ಹಣವನ್ನು ಆರ್ ಬಿ ಐ ನಲ್ಲಿ ಡೆಪಾಸಿಟ್ ಇಡುವುವಂತೆ ಹಾಗೂ ಸದ್ರಿ ಡೆಪಾಸಿಟ್ […]

Continue Reading

ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಕಮೆಂಟ್ ಶೇರ್; ಶರಣ್ ಪಂಪ್‌ವೆಲ್ ಕದ್ರಿ ಪೊಲೀಸರು ವಶಕ್ಕೆ

ಇತ್ತೀಚೆಗೆ ಆರ್‌ಎಸ್‌ಎಸ್‌ ಮುಖಂಡರೊಬ್ಬರ ಭಾಷಣದ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದಡಿ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಎಂಬವರನ್ನು ಇಂದು ಮಂಗಳೂರಿನ ಕದ್ರಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಹಾಕಿದ್ದ ಆಕ್ಷೇಪಾರ್ಹ ಕಮೆಂಟ್ ಅನ್ನು ಶೇರ್ ಮಾಡಿದ ಕಾರಣಕ್ಕೆ ವಿಎಚ್‌ಪಿ ಮುಖಂಡ ಶರಣ್ ಶರಣ್ ಪಂಪ್‌ವೆಲ್‌ರನ್ನು ವಿಚಾರಣೆಗೆ ಪೊಲೀಸ್ ಠಾಣೆಗೆ ಕರೆಸಲಾಗಿದೆ ಎಂದು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ತಿಳಿಸಿದ್ದಾರೆ. ಕದ್ರಿ ಪೊಲೀಸ್ ಠಾಣೆಗೆ ವಿಚಾರಣೆಗೆ ಕರೆಸಲಾಗಿದ್ದು, […]

Continue Reading

ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣ; ಪಿಎಫ್ಐ ಮಾಜಿ ಸದಸ್ಯ ಸೇರಿದಂತೆ 11 ಮಂದಿಯ ವಿರುದ್ಧ NIA ಕೋರ್ಟ್ ಗೆ ಆರೋಪ ಪಟ್ಟಿ ಸಲ್ಲಿಕೆ

ಮಂಗಳೂರಿನ ಬಜ್ಜೆಯ ಕಿನ್ನಿಪದವು ಬಳಿ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ನಿಷೇಧಿತ ಸಂಘಟನೆ ಪ್ಯಾಫುಲರ್‌ಫ್ರಂಟ್‌ ಆಫ್ ಇಂಡಿಯಾದ ಮಾಜಿ ಸದಸ್ಯ ಸೇರಿದಂತೆ 11 ಮಂದಿಯ ವಿರುದ್ಧ NIA ಕೋರ್ಟ್ ಗೆ ಆರೋಪ ಪಟ್ಟಿಯನ್ನು ಸಲ್ಲಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಪರ ಸಂಘಟನೆಗಳ ಸಂಘಟನೆಯಲ್ಲಿ ರೌಡಿ ಸುಹಾಸ್ ಸಕ್ರಿಯನಾಗಿದ್ದ. ಈತನ ಚಟುವಟಿಕೆಗೆ ಕಡಿವಾಣ ಹಾಕಲು ಆರೋಪಿಗಳು ಸಂಚು ರೂಪಿಸಿ ಸುಹಾಸ್ ಶೆಟ್ಟಿಯನ್ನು ಮೇ. ಒಂದರಂದು ಆತನ ಮೇಲೆ ಭೀಕರವಾಗಿ ಹಲ್ಲೆ […]

Continue Reading

ವಿದೇಶಕ್ಕೆ ತೆರಳಲು ವೀಸಾ ಕೊಡಿಸುವುದಾಗಿ ನಂಬಿಸಿ, ಹಲವಾರು ಮಂದಿಗೆ ಕೊಟ್ಯಾಂತರ ರೂ. ವಂಚನೆ. ಆರೋಪಿಗಳ ಬಂಧನ

ಕಾವೂರು: ವಿದೇಶದಲ್ಲಿ ಉದ್ಯೋಗ ಮಾಡಲು ವೀಸಾ ಕೊಡಿಸುವುದಾಗಿ ನಂಬಿಸಿ ಹಲವಾರು ಮಂದಿಯಿಂದ ಹಣ ಪಡೆದುಕೊಂಡು ಬಳಿಕ ಉದ್ಯೋಗ ಕೊಡಿಸದೆ ವಂಚಿಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬೆಂಗಳೂರಿನ ಆನೆಕಲ್ ತಾಲೂಕಿನ ಪ್ರ್ರಕೃತಿ ಯು ಮತ್ತು ಕುಂದಾಪುರ ತಾಲೂಕಿನ ಗಂಗೊಳ್ಳಿಯ ಆಲ್ಡನ್ ರೆಬೇರೋ ಎಂದು ಗುರುತಿಸಲಾಗಿದೆ. ಕಾವೂರು ಠಾಣಾ ವ್ಯಾಪ್ತಿಯ ಹಲವಾರು ಮಂದಿಗೆ ವಿದೇಶದಲ್ಲಿ ಉದ್ಯೋಗ ಮಾಡಲು ವೀಸಾ ಕೊಡಿಸುವುದಾಗಿ ಹೇಳಿ 1 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಪಡೆದುಕೊಂಡು ವಂಚಿಸಿತಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. […]

Continue Reading

ಉಡುಪಿ: ಜಿಲ್ಲೆಯಲ್ಲಿ ಮಾದಕ ವಸ್ತು ಮಾರಾಟ ಹಾಗೂ ಬಳಕೆಗೆ ಕಡಿವಾಣ ಹಾಕುವಂತೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮನವಿ

ಉಡುಪಿ: ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಉಡುಪಿ ಜಿಲ್ಲೆಯಲ್ಲಿ ಮಾದಕ ವಸ್ತು ಮಾರಾಟ ಹಾಗೂ ಬಳಕೆಗೆ ಕಡಿವಾಣ ಹಾಕುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮನವಿಯನ್ನು ನೀಡಲಾಯಿತು. ಉಡುಪಿ ಜಿಲ್ಲಾದಂತ್ಯ ಮಾದಕ ವಸ್ತುಗಳ ಮಾರಾಟ ಹಾಗೂ ಬಳಕೆಯಿಂದಾಗಿ ಎಷ್ಟೋ ಯುವಕರು ದಾರಿ ತಪ್ಪಿ ಅವರ ಕುಟುಂಬಗಳು ಬೀದಿಗೆ ಬಂದಿದೆ. ಕೆಲವು ಜಾಗಗಳಲ್ಲಿ ಮಾದಕ ವಸ್ತುಗಳು ಅಂಗಡಿಗಳಲ್ಲಿ ಚಾಕಲೇಟ್ ದೊರೆಯುವಷ್ಟು ಸಲೀಸಾಗಿ ದೊರೆಯುತ್ತಿರುವುದು ದುರಾದೃಷ್ಟಕರ, ಇದಕ್ಕೆ ಬಲಿಯಾಗಿರುವ ಮಕ್ಕಳ ತಂದೆ-ತಾಯಿಯರ ರೋದನೆ ಕೆಳತೀರದ್ದು. ಇತ್ತೀಚೆಗೆ ಹನಿಟ್ರ್ಯಾಪ್‌ನಂತಹ […]

Continue Reading

ರಾಜ್ಯ ಮಟ್ಟದ ಪಿಯು ಟೇಕ್ವಾಂಡೋ ಚಾಂಪಿಯನ್‌ಶಿಪ್‌; ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ಕಂಚಿನ ಪದಕ

ದಕ್ಷಿಣ ಕನ್ನಡ ಜಿಲ್ಲಾ ಟೇಕ್ವಾಂಡೋ ತಂಡವು 2025-26ರ ರಾಜ್ಯ ಮಟ್ಟದ ಪ್ರಿ-ಯೂನಿವರ್ಸಿಟಿ ಟೇಕ್ವಾಂಡೋ ಚಾಂಪಿಯನ್‌ಶಿಪ್‌ನಲ್ಲಿ ಮನ್ನಣೆ ಗಳಿಸಿತು, ಎರಡು ಕಂಚಿನ ಪದಕಗಳನ್ನು ಗಳಿಸಿತು. ಈ ಚಾಂಪಿಯನ್‌ಶಿಪ್ ಚಿಕ್ಕಬಳ್ಳಾಪುರದ ಅಗಲಗುರ್ಕಿಯ ಜ್ಞಾನಗಂಗೋತ್ರಿ ಕ್ಯಾಂಪಸ್‌ನಲ್ಲಿರುವ ಬಿಜಿಎಸ್ ರೂರಲ್ ಕಾಂಪೋಸಿಟ್ ಪಿಯು ಕಾಲೇಜಿನಲ್ಲಿ ಕರ್ನಾಟಕದಾದ್ಯಂತ ಪಿಯು ಕಾಲೇಜು ಕ್ರೀಡಾಪಟುಗಳು ಭಾಗವಹಿಸಿದ್ದರು. ಬಾಲಕರ ಸ್ಪರ್ಧೆಯಲ್ಲಿ, ತುಂಬೆಯ ಬಿಎ ಪಿಯು ಕಾಲೇಜಿನ ಮೊಹಮ್ಮದ್ ಅಯಾನ್, ಶಿಸ್ತಿನ ಕೌಶಲ್ಯ ಮತ್ತು ಬಲವಾದ ಸ್ಪರ್ಧಾತ್ಮಕ ಮನೋಭಾವವನ್ನು ಪ್ರದರ್ಶಿಸುವ ಮೂಲಕ 75 ಕೆಜಿ ವಯಸ್ಸಿನೊಳಗಿನ ವಿಭಾಗದಲ್ಲಿ ಕಂಚಿನ ಪದಕವನ್ನು […]

Continue Reading

ರಾಜಾಂಗಣದಲ್ಲಿ ಯಕ್ಷ ಪಂಚಮಿ ಸಮಾರೋಪ : ಕಲಾವಿದ ಅಜ್ರಿ ಗೋಪಾಲ ಗಾಣಿಗರಿಗೆ ತಲ್ಲೂರ್ಸ್ ಪ್ಯಾಮಿಲಿ ಟ್ರಸ್ಟ್ ಯಕ್ಷ ಪ್ರಶಸ್ತಿ ಪ್ರದಾನ

ಯಕ್ಷಗಾನಕ್ಕೆ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಕೊಡುಗೆ ಅಭಿನಂದನೀಯ : ಪರ್ಯಾಯ ಪುತ್ತಿಗೆ ಶ್ರೀ ಉಡುಪಿ : ಯಕ್ಷಗಾನ ಕಲೆಗೆ ಉಡುಪಿಯ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ನೀಡುತ್ತಿರುವ ಕೊಡುಗೆ ಶ್ಲಾಘನೀಯ. ಇಂದಿನ ಪ್ರಶಸ್ತಿ ಪ್ರಧಾನ ಯಕ್ಷ ಕಲೆಗೆ ವಿಶೇಷ ಉತ್ತೇಜನ ಕೊಟ್ಟ ಹಾಗೆ. ತಲ್ಲೂರು ಶಿವರಾಮ ಶೆಟ್ಟಿ ಎಂದರೆ ಯಕ್ಷಗಾನ ಎಂಬುವುದೇ ಅಲ್ಲಿ ಪ್ರಸಿದ್ದಿಯಾಗಿದೆ. ಯಕ್ಷಗಾನ ಕಲೆಗೆ ಅವರು ನೀಡುತ್ತಿರುವ ಉತ್ತೇಜನ ಪ್ರೋತ್ಸಾಹ ಹೀಗೆ ಮುಂದುವರೆಯಲಿ. ನಮ್ಮ ನಾಡಿನ ಹೆಮ್ಮೆಯ ಕಲೆ ಯಕ್ಷಗಾನ ಚಿರಸ್ಥಾಯಿಯಾಗಲಿ ಎಂದು ಪರ್ಯಾಯ ಪುತ್ತಿಗೆ […]

Continue Reading