ಅಂಗಿ ತೆಗೆದು ಸೋಫಾದ ಮೇಲೆ ಇಟ್ಟಿದ್ದೆ ಮುಳುವಾಯಿತು; ಸೊಸೆಯಿಂದ ಮಾವನಿಗೆ ವಾಕಿಂಗ್ ಸ್ಟಿಕ್‌ನಿಂದ ಕಾಲಿಗೆ, ಸೊಂಟಕ್ಕೆ ಹಲ್ಲೆ
ಕುಲಶೇಖರ ಹಾಲಿನ ಡೇರಿ ಬಳಿಯ ಮನೆಯೊಂದರಲ್ಲಿ 87 ವರ್ಷದ ಮಾವ ಪದ್ಮನಾಭ ಎಂಬವರಿಗೆ ಸೊಸೆ ಹಲ್ಲೆ ನಡೆಸಿದ ಘಟನೆಯ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾವನಿಗೆ ಹಲ್ಲೆ ನಡೆಸಿದ ಆರೋಪಿಯಾಗಿರುವ ಮಂಗಳೂರಿನ ಮೆಸ್ಕಾಂ ಸಿಬ್ಬಂದಿ ಉಮಾಶಂಕರಿ ಎಂಬುವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಹಲ್ಲೆಗೊಳಗಾದ ಪದ್ಮನಾಭ ಅವರ ಮಗ ಪ್ರೀತಮ್ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಪ್ರೀತಂ ಅವರ ಹೆಂಡತಿ ಮೆಸ್ಕಂ ಉದ್ಯೋಗಿ ಉಮಾಶಂಕರಿಯವರೊಂದಿಗೆ ಪದ್ಮನಾಭ ಅವರು ಕುಲಶೇಖರದ ಮನೆಯಲ್ಲಿ ವಾಸವಿದ್ದಾರೆ. ನೀವು ಯಾಕೆ ಈ ಮನೆಯಲ್ಲಿದ್ದೀರಿ, […]
Continue Reading