ಬಿಜೆಪಿ-ಜೆಡಿಎಸ್ ಪಕ್ಷದ ಅತೃಪ್ತ ಪ್ರಮುಖ ನಾಯಕರು ಕಾಂಗ್ರೆಸ್‍ನತ್ತ ಮುಖ.! ರಹಸ್ಯ ಮಾತುಕತೆ

ಜೆಡಿಎಸ್-ಬಿಜೆಪಿ ನಾಯಕರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ವದಂತಿಗಳಿಗೆ ಪೂರಕವಾಗಿ ಮತ್ತಷ್ಟು ಪ್ರಮುಖ ನಾಯಕರು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ರವರನ್ನು ಭೇಟಿ ಮಾಡಿದ್ದಾರೆ. ಶಾಸಕ ಮಂಜುನಾಥ್ ಅವರು ಸಿದ್ದರಾಮಯ್ಯನವರ ಜೊತೆ ರಹಸ್ಯ ಮಾತುಕತೆ ನಡೆಸಿದ್ದಾರೆ. ಸಿದ್ದುರವರನ್ನು ಭೇಟಿ ಮಾಡಿರುವ ಜೆಡಿಎಸ್‍ನ ಶಾಸಕರು ರಾಜಕೀಯ ಆಗುಹೋಗುಗಳ ಕುರಿತು ಚರ್ಚೆ ನಡೆಸಿದ್ದಾರೆ. ಮತ್ತೊಂದೆಡೆ ಬಿಜೆಪಿಯ ಶಶಿಕಲಾ ಜೊಲ್ಲೆ ಡಿ.ಕೆ.ಶಿ ಅವರನ್ನು ಭೇಟಿ ಮಾಡಿದ್ದಾರೆ. ಕಾಂಗ್ರೆಸಿಗರು ಹಾಲಿ ಶಾಸಕರನ್ನು ಪಕ್ಷಕ್ಕೆ ಸೆಳೆದುಕೊಳ್ಳುವ ಬದಲು ಮಾಜಿ ಪ್ರಭಾವಿ ಮುಖಂಡರನ್ನು ಕೇಂದ್ರೀಕರಿಸಿದ್ದಾರೆ. ಜೆಡಿಎಸ್, ಬಿಜೆಪಿ ಜೊತೆ […]

Continue Reading

ವಕೀಲ ನಾರಿಮನ್ ಮಾಡಿದ ತಪ್ಪುಗಳಿಂದ ಕಾವೇರಿ ವಿವಾದ ಜೀವಂತ: ನೀರಾವರಿ ತಜ್ಞ ಅರ್ಜುನಹಳ್ಳಿ ಪ್ರಸನ್ನ ಕುಮಾರ್

ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳು ಹಾಗೂ ವಕೀಲ ಎಫ್.ಎಸ್ ನಾರಿಮನ್ ಅವರು ಮಾಡಿದ ತಪ್ಪುಗಳಿಂದ ಕಾವೇರಿ ನೀರಿನ ವಿವಾದ ಉಂಟಾದಾಗ ರಾಜ್ಯದ ಜನತೆ ಸಮಸ್ಯೆ ಎದುರಿಸುವಂತಾಗಿದೆ ಎಂದು ನೀರಾವರಿ ತಜ್ಞ ಅರ್ಜುನಹಳ್ಳಿ ಪ್ರಸನ್ನ ಕುಮಾರ್ ಆರೋಪಿಸಿದ್ದಾರೆ. ಸಂವಿಧಾನದ 262ನೇ ಪರಿಚ್ಛೇದದ ಪ್ರಕಾರ ನ್ಯಾಯಾಲಯಕ್ಕೆ ನದಿಗಳ ವಿವಾದ ಸಂಬಂಧ ತೀರ್ಪು ಕೊಡುವ ಅಧಿಕಾರ ಇಲ್ಲ. ಅದರಂತೆ 1971 ರಲ್ಲಿ ತಮಿಳು ನಾಡಿನ ಕೃಷಿಕರು ಹಾಕಿದ ಅರ್ಜಿ, 1974 ರಲ್ಲಿ ಕರ್ನಾಟಕ ಸರ್ಕಾರ ಕೃಷ್ಣ ನದಿ ವಿವಾದದಲ್ಲಿ ಅನ್ಯಾಯವಾಗಿದೆ […]

Continue Reading

ರಾಜ್ಯದಲ್ಲಿ ಡೆಂಗ್ಯೂ ಭೀತಿ. 10,000 ಮಿಕ್ಕ ಮಂದಿಗೆ ಡೆಂಗ್ಯೂ ಸೋಕು.! ದಕ್ಷಿಣ ಕನ್ನಡದಲ್ಲಿ 210 ಡೆಂಗ್ಯೂ ಪ್ರಕರಣ

ರಾಜ್ಯದಲ್ಲಿ ದಿನೇ ದಿನೇ ಡೆಂಗ್ಯೂ ಕೇಸ್ ಗಳ ಸಂಖ್ಯೆ ಹೆಚ್ಚಾಗುತ್ತಿವೆ. ಕೇವಲ ಒಂದು ತಿಂಗಳಲ್ಲಿ 3,797 ಮಂದಿಗೆ ಡೆಂಗ್ಯೂ ತಗುಲಿರುವುದು ವರದಿಯಿಂದ ದೃಢಪಟ್ಟಿದೆ. ಈ ಮೂಲಕ ಪ್ರಕರಣಗಳ ಒಟ್ಟು ಸಂಖ್ಯೆ 10,000 ಗಡಿಯನ್ನು ದಾಟಿದೆ.ರಾಜ್ಯದಲ್ಲಿ ಡೆಂಗ್ಯೂ ಹೆಚ್ಚಳಗೊಳ್ಳುತ್ತಿರುವ ಹಿನ್ನಲೆಯಲ್ಲಿ, ಆರೋಗ್ಯ ಇಲಾಖೆಯಿಂದ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಶಂಕಿತರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಅವರಲ್ಲಿ 70 ಸಾವಿರಕ್ಕೂ ಅಧಿಕ ಮಂದಿ ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 5,756 ಹಾಗೂ ಇತರೆ ಜಿಲ್ಲೆಗಳಲ್ಲಿ […]

Continue Reading

ಶಿವಮೊಗ್ಗ: ರಾಗಿಗುಡ್ಡೆಯನ್ನು ಕೋಮುವಾದಿಗಳು ಟಾರ್ಗೆಟ್ ಮಾಡಿರುವುದರ ಹಿಂದಿದೆ’ಭೂ’ ಮಾಫಿಯಾ

✍️. ಪತ್ರಕರ್ತ ನವೀನ್ ಸೂರಿಂಜೆ ಈಗ ರಾಗಿಗುಡ್ಡವನ್ನೇ ಕೋಮುವಾದಿಗಳು ಟಾರ್ಗೆಟ್ ಮಾಡಿರುವುದರ ಹಿಂದೆ ಧಾರ್ಮಿಕ ಮತ್ತು ಭೂಮಾಫಿಯಾ ಇದೆ. ಪ್ರಕೃತಿ ಸೌಂದರ್ಯದ ಸ್ವರ್ಗವಾಗಿರುವ ರಾಗಿಗುಡ್ಡ ಭೂ ಅತಿಕ್ರಮಣಕಾರರಿಗೂ ಸ್ವರ್ಗವಾಗಿದೆ. ಒಂದು ಕಡೆಯಲ್ಲಿ ಶ್ರೀಮಂತರು ಭೂಮಿಯನ್ನು ಅತಿಕ್ರಮಣ ಮಾಡುತ್ತಿದ್ದರೆ, ಇನ್ನೊಂದೆಡೆ ರಾಜ್ಯ, ಕೇಂದ್ರ ಸರ್ಕಾರದ ಯೋಜನೆಗಳಿಗಾಗಿ ಇಲ್ಲಿ ಭೂಸ್ವಾಧೀನ ಮಾಡಲಾಗುತ್ತಿದೆ ಶಿವಮೊಗ್ಗದ ರಾಗಿಗುಡ್ಡವನ್ನೇ ಕೋಮುಗಲಭೆಗೆ ಕೋಮುವಾದಿಗಳು ಯಾಕೆ ಆಯ್ಕೆ ಮಾಡಿಕೊಂಡರು? ಶಿವಮೊಗ್ಗ ಗಲಭೆ ಅನ್ನುವ ಬದಲು ರಾಗಿಗುಡ್ಡ ಧಗಧಗ, ರಾಗಿಗುಡ್ಡ ಕೊತಕೊತ ಎಂಬ ತಲೆಬರಹಗಳೇ ಯಾಕೆ ಓಡಾಡಿದವು? ಕೋಮುಗಲಭೆಯ […]

Continue Reading

ಮುಸ್ಲಿಂ ಸಮಾಜವನ್ನು ನಂಬಿ ಕೂತಿಲ್ಲ ಅಂದ ಕುಮಾರಸ್ವಾಮಿ.! ಬಾವಾ ಬ್ರದರ್ಸ್’ ಮುಂದಿನ ನಡೆ ಏನು.?

ಬಿಜೆಪಿ ಅಧಿಕಾರಕ್ಕೇರಿದರೆ ಬಾವಾ ಸಹೋದರ ರಾಜ್ಯಸಭಾ ಸದಸ್ಯ ರಾಜ್ಯದಲ್ಲಿ ಬಿಜೆಪಿಯೊಂದಿಗೆ ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ತೀರ್ಮಾನದ ವಿರುದ್ಧ ಆ ಪಕ್ಷದಲ್ಲಿ ಗುರುತಿಸಿಕೊಂಡಿರುವ ಅಲ್ಪಸಂಖ್ಯಾತ ನಾಯಕರು ಹಾಗೂ ಜಾತ್ಯತೀತ ಹಿಂದೂ ನಾಯಕರು ಭ್ರಮನಿರಸನಗೊಂಡಿದ್ದು ಜೆಡಿಎಸ್ ಗೆ ಕೈ ಕೊಟ್ಟು ಕಾಂಗ್ರೆಸ್ ಸೇರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಈಗಾಗಲೇ ಜೆಡಿಎಸ್ ಪಕ್ಷದ ಮುಸ್ಲಿಂ ಮುಖಂಡರು ಸಭೆ ಸೇರಿ ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದು, ಈ ಬಗ್ಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಕುಮಾರಸ್ವಾಮಿ ಪಕ್ಷ ಬಿಡುವವರು ಬಿಡಲಿ, ಜೆಡಿಎಸ್ ಮುಸ್ಲಿಂ ಸಮಾಜವನ್ನು […]

Continue Reading

ಮಹಿಳಾ ಪೊಲೀಸ್ ಪೇದೆಯ ಹತ್ಯೆ ಆರೋಪಿ ಪೊಲೀಸ್ ಕಾನ್ಸ್‌ಟೇಬಲ್‌ ಬಂಧನ; ಅಸ್ಥಿಪಂಜರ ಪತ್ತೆ

ಎರಡು ವರ್ಷಗಳ ಹಿಂದೆ ಮಹಿಳಾ ಪೇದೆಯನ್ನು ಕೊಲೆ ಮಾಡಿ ನಂತರ ಆಕೆಯ ಶವವನ್ನು ವಿಲೇವಾರಿ ಮಾಡಿದ ಆರೋಪದಲ್ಲಿ ದೆಹಲಿ ಪೊಲೀಸ್‌ ಹೆಡ್ ಕಾನ್‌ಸ್ಟೆಬಲ್ ಹಾಗೂ ಆತನ ಇಬ್ಬರು ಸಹಚರರನ್ನು ಬಂಧಿಸಲಾಗಿದೆ.ಪ್ರಮುಖ ಆರೋಪಿ ಸುರೇಂದ್ರ ಸಿಂಗ್, ರವೀನ್ ಮತ್ತು ರಾಜ್‌ಪಾಲ್ ಬಂಧಿತರು. 2021ರ ಅಕ್ಟೋಬರ್ 20ರಂದು ಮಹಿಳೆಯೊಬ್ಬರು ಕಾಣೆಯಾದ ವರದಿ ದಾಖಲಾಗಿತ್ತು. ತಿಂಗಳಾದರೂ ಆಕೆ ಪತ್ತೆಯಾಗಲಿಲ್ಲ. ಹೀಗಾಗಿ ಆಕೆಯನ್ನು ಹುಡುಕಲು ಪ್ರಾರಂಭಿಸಿದ್ದರು.ಆರೋಪಿ ಸುರೇಂದ್ರ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಮಾಜಿ ಮಹಿಳಾ ಕಾನ್‌ಸ್ಟೆಬಲ್‌ನ ಅಸ್ಥಿಪಂಜರವನ್ನು ಬುರಾರಿ ಪ್ರದೇಶದ ಚರಂಡಿಯಿಂದ […]

Continue Reading

ನಕಲಿ ದಾಖಲೆ ಸೃಷ್ಟಿಸಿ, ಬ್ಯಾಂಕ್‌ಗಳಿಗೆ ವಂಚಿಸುತ್ತಿದ್ದ ಕುಖ್ಯಾತ ಆರೋಪಿಯ ಬಂಧನ

ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ಗಳಿಂದ ಕೋಟ್ಯಾಂತರ ರೂಪಾಯಿ ಸಾಲ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ‌. ಸರಿ ಸುಮಾರು ಹತ್ತು ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಕೃಷ್ಣಕುಮಾರ್ ಎಂಬಾತನೇ ಬಂದಿತ ಆರೋಪಿ. ಈತ ಬ್ಯಾಂಕ್​ಗಳಿಗೆ ಸುಮಾರು 20 ಕೋಟಿ ರೂ ವಂಚಿಸಿರುವ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಬೇರೆಯವರ ಜಾಗ, ಬಿಡಿಎ ನಿವೇಶನಗಳನ್ನು ಖರೀದಿಸುವ ನೆಪದಲ್ಲಿ ಅಲ್ಪ ಪ್ರಮಾಣದ ಎಡ್ವನ್ಸ್ ಹಣ ನೀಡಿ ದಾಖಲೆಗಳ ಜೆರಾಕ್ಸ್ ಪ್ರತಿ ಪಡೆದುಕೊಳ್ಳುತ್ತಿದ್ದ. ನಂತರ ಇವರ ಗ್ಯಾಂಗ್ ಅದಕ್ಕೆ ತಾವೇ ಮಾಲೀಕರು […]

Continue Reading

ಕೊಲ್ಲೂರು: ಗುಂಡಿಕ್ಕಿ ದನಗಳ ಹತ್ಯೆ, 10-15 ದನಗಳಿಗೆ ಗಾಯ, ಆರೋಪಿ ನರಸಿಂಹ ವಿರುದ್ಧ ಪ್ರಕರಣ ದಾಖಲು

ಕೊಲ್ಲೂರು ಬೆಳ್ಳಾಲ ಗ್ರಾಮದ ಅಂಗಡಿ ಜೆಡ್ಡು ಎಂಬಲ್ಲಿ ವ್ಯಕ್ತಿಯೋರ್ವ ಕಳೆದ ಒಂದು ತಿಂಗಳ ಅವಧಿಯಲ್ಲಿ ಕೋವಿಯಿಂದ ಗುಂಡಿಕ್ಕಿ ನಾಲ್ಕು ದನಗಳನ್ನು ಹತ್ಯೆಗೈದು, 10-15 ದನಗಳನ್ನು ಗಾಯಗೊಳಿಸಿರುವ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೇಯಲು ಬಿಟ್ಟಿದ್ದ ಅಂಗಡಿ ಜೆಡ್ಡುವಿನ ಗುಲಾಬಿ ಹಾಗೂ ಇತರರಿಗೆ ಸೇರಿದ ದನಗಳಿಗೆ ಸ್ಥಳೀಯ ನಿವಾಸಿ ನರಸಿಂಹ ಎಂಬಾತ ಸೆಪ್ಟೆಂಬರ್ 23 ರಂದು ಕೋವಿಯಿಂದ ಗುಂಡಿಕ್ಕಿದ್ದಾನೆ. ಇದರ ಪರಿಣಾಮ ಗಾಯಗೊಂಡ ದನ ಸಾವನ್ನಪ್ಪಿದೆ. ಇದನ್ನು ಪ್ರಶ್ನಿಸಿದ ಗುಲಾಬಿಗೂ ಆರೋಪಿ ಅವಾಚ್ಯವಾಗಿ ನಿಂದಿಸಿ ಕೋವಿಯಿಂದ […]

Continue Reading

ಆರ್‌ಟಿಐ ಕಾರ್ಯಕರ್ತರ ಮೂಗುದಾರಕ್ಕೆ ಸಿದ್ದತೆ.! ಕೆಂಗಣ್ಣಿಗೆ ಗುರಿಯಾಗಲಿದೆ ರಾಜ್ಯ ಸರಕಾರ

ಆರ್‌ಟಿಐ ಕಾರ್ಯಕರ್ತರನ್ನು ಬೆದರಿಸಿ,ಮೂಗುದಾರ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆಯಾ ಎಂಬ ಪ್ರಶ್ನೆ ಇದೀಗ ಮೂಡುತ್ತಿದೆ.?ಏಕೆಂದರೆ, ಹೆಚ್ಚೆಚ್ಚು ಆರ್‌ಟಿಐ ಅರ್ಜಿ ಹಾಕುವ ಕಾರ್ಯಕರ್ತರ ಮಾಹಿತಿಯನ್ನು ಕ್ರೋಢೀಕರಿಸಲು ಸರ್ಕಾರ ಮುಂದಾಗಿದ್ದು, ಹೊಸ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಆರ್‌ಟಿಐ ಅರ್ಜಿ ಹಾಕುವವರ ಮಾಹಿತಿ ಪಡೆದು ಏನು ಮಾಡಲು ಹೊರಟಿದೆ ರಾಜ್ಯ ಕಾಂಗ್ರೆಸ್ ಸರ್ಕಾರ.? ಮುಖ್ಯ ಕಾರ್ಯದರ್ಶಿ ಕಚೇರಿ, ಇಲಾಖೆಗಳು, ಸಚಿವಾಲಯಗಳಲ್ಲಿ ಮಾಹಿತಿ ಕೇಳುವವರ ಮಾಹಿತಿ ಕಲೆ ಹಾಕಲು ಸರ್ಕಾರ ಮುಂದಾಗಿದೆ. ಹೆಚ್ಚು ಬಾರಿ ಆರ್‌ಟಿಐ ಅರ್ಜಿ ಸಲ್ಲಿಸುತ್ತಿರುವ ಅರ್ಜಿದಾರರ ಪಟ್ಟಿಯನ್ನು ಒದಗಿಸಲು ಸರ್ಕಾರ […]

Continue Reading

‘ನಿಫಾ ಮುಕ್ತ’ ಕೇರಳ ಎಂದ ಆರೋಗ್ಯ ಸಚಿವೆ ವೀಣಾ ಜಾರ್ಜ್

ಕೇರಳದ ಕೋಯಿಕ್ಕೋಡ್ ನಗರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಲ್ವರು ನಿಫಾ ಸೋಂಕಿತರ ರಕ್ತದ ಮಾದರಿಯ ಪರೀಕ್ಷಾ ಫಲಿತಾಂಶವು ನೆಗೆಟಿವ್ ಬಂದಿದ್ದು, ಎಲ್ಲರೂ ನಿಫಾ ಸೋಂಕಿನಿಂದ ಮುಕ್ತರಾಗಿದ್ದಾರೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ 9 ವರ್ಷದ ಬಾಲಕ ಸೇರಿದಂತೆ ಎಲ್ಲಾ ರೋಗಿಗಳ ರಕ್ತದ ಮಾದರಿಯ ಪರೀಕ್ಷೆಯಲ್ಲಿ ‘ನೆಗೆಟಿವ್’ ಎಂಬ ಫಲಿತಾಂಶವು ಎರಡು ಬಾರಿ ಬಂದಿದೆ ಎಂದು ಸಚಿವೆ ವೀಣಾ ಹೇಳಿದ್ದಾರೆ. ‘ಡಬಲ್ ನೆಗೆಟಿವ್’ ಎಂದರೆ ನಿರ್ದಿಷ್ಟ ಸಮಯದ ನಂತರ ತೆಗೆದುಕೊಂಡ ನಿಫಾ ರೋಗಿಯ […]

Continue Reading