ಹಿಂದಿನ ಬಿಜೆಪಿ ಸರ್ಕಾರದ 40% ಕಮಿಷನ್ ಆರೋಪದ ಕುರಿತಾಗಿ ತನಿಖೆ ನಡೆಸಲು ಕಾಂಗ್ರೆಸ್ ಸರ್ಕಾರ ನಿರ್ಧಾರ

ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸಲು ಕಾರಣವಾಗಿದ್ದ 40% ಕಮಿಷನ್ ಆರೋಪದ ಕುರಿತಾಗಿ ತನಿಖೆ ನಡೆಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಪಿಎಸ್ಐ ನೇಮಕಾತಿ ಅಕ್ರಮ, ಬಿಟ್ ಕಾಯಿನ್ ಹಗರಣ ಮೊದಲಾದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇಳಿ ಬಂದ ಆರೋಪಗಳ ಬಗ್ಗೆ ತನಿಖೆ ನಡೆಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಪಿಎಸ್ಐ ನೇಮಕಾತಿ ಹಗರಣದ ತನಿಖೆಗಾಗಿ ನ್ಯಾಯಮೂರ್ತಿ ವೀರಪ್ಪ ನೇತೃತ್ವದಲ್ಲಿ ಆಯೋಗ ರಚನೆ ಮಾಡಲಾಗಿದೆ‌ ಬಿಟ್ ಕಾಯಿನ್ ಹಗರಣ ಸಂಬಂಧ ತನಿಖೆಗೆ ವಿಶೇಷ ತನಿಖಾ ದಳ ರಚಿಸಲಾಗಿದೆ. ಈಗ […]

Continue Reading

ಅಪರೇಷನ್ ಕಮಳಕ್ಕೆ ಬಲಿಯಾದವರು, ಮರಳಿ ಮಾತೃ ಪಕ್ಷ ಸೇರಲು ಕಸರತ್ತು.!

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಹಲಬರು ಮತ್ತೆ ಕಾಂಗ್ರೆಸ್​ ಕದ ತಟ್ಟಲು ಮುಂದಾಗಿದ್ದಾರೆ ಎನ್ನುವ ಗುಸು ಗುಸು ಕೇಳಿಬರುತ್ತಿದೆ. ಆಪರೇಷನ್​ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರ್ಪಡೆಗೊಂಡಿದ್ದ ನಾಯಕರು ಮರಳಿ ಮಾತೃ ಪಕ್ಷ ಕಾಂಗ್ರೆಸ್​ ಸೇರ್ಪಡೆಗೆ ತೆರೆ ಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಬಿಜಪಿ ಪಕ್ಷಕ್ಕೆ ಸೂಕ್ತ ನಾಯಕತ್ವ ಇಲ್ಲದೆ ವಲಸಿಗ ನಾಯಕರಲ್ಲಿ ಆತಂಕ ಸೃಷ್ಟಿಯಾಗಿ ತಮ್ಮ ರಾಜಕೀಯದ ಅಳಿವು ಉಳಿವಿನ ಬಗ್ಗೆ ಚಿಂತೆಯಾಗತೊಡಗಿದೆ.ಬಿಜೆಪಿಯ ಪರಮೋಚ್ಚ ನಾಯಕ ಬಿಎಸ್‌ ಯಡಿಯೂರಪ್ಪನವರು ಸೈಡ್‌ಲೈನ್‌ ಬಳಿಕ […]

Continue Reading

ಶ್ರೀ ರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ. ಪ್ರಮೋದ್ ಮುತಾಲಿಕ್ ಸ್ವಯಂ ನಿವೃತ್ತಿ ಘೋಷಣೆ

ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಪ್ರಮೋದ್ ಮುತಾಲಿಕ್ ಸ್ವಯಂ ನಿವೃತ್ತಿ ಘೋಷಿಸಿದ್ದಾರೆ. ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮೀಜಿ ಅವರನ್ನು ಆಯ್ಕೆ ಮಾಡಲಾಗಿದೆ. ಹಾವೇರಿ ಜಿಲ್ಲೆ ಸವಣೂರು ತಾಲೂಕು ಕಾರಡಗಿ ಗ್ರಾಮದಲ್ಲಿ ಶ್ರೀರಾಮ ಸೇನಾ ಪ್ರಾಂತ ಅಭ್ಯಾಸ ವರ್ಗದಲ್ಲಿ ಇಂದು ಪ್ರಮೋದ್ ಮುತಾಲಿಕ್ ನಿವೃತ್ತಿ ಘೋಷಿಸಿದ್ದು, ಕರ್ನಾಟಕ ಶ್ರೀ ರಾಮಸೇನೆಯ ರಾಜ್ಯಾದ್ಯಕ್ಷರಾಗಿದ್ದ ಸಿದ್ದಲಿಂಗ ಸ್ವಾಮೀಜಿ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಘೋಷಣೆ ಮಾಡಲಾಗಿದೆ. ಕರ್ನಾಟಕದ ಶ್ರೀರಾಮಸೇನೆ ರಾಜ್ಯಾಧ್ಯಕ್ಷರಾಗಿ ಗಂಗಾಧರ ಕುಲಕರ್ಣಿ ಅವರನ್ನು ನೇಮಕ ಮಾಡಿ ಪ್ರಮೋದ್ […]

Continue Reading

ಸಚಿವ ಜಮೀರ್ ಅಹ್ಮದ್ ಕಾರ್ಯವೈಖರಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮೆಚ್ಚುಗೆ

ಸಚಿವರ ವಿರುದ್ಧ ಆಕ್ರೋಶ ಹೊರತಾಗಿಯೂ ವಕ್ಫ್ ಮತ್ತು ಅಲ್ಪಸಂಖ್ಯಾತ ಅಭಿವೃದ್ಧಿ ಸಚಿವ ಜಮೀರ್ ಅಹ್ಮದ್ ಖಾನ್ ಕಾರ್ಯವೈಖರಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿ ಎಲ್ ಪಿ) ಸಭೆಯಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಯಾವುದೇ ಶಾಸಕರು ಭೇಟಿಯಾದರೂ ಅವರು ಅತ್ಯಂತ ಗೌರವ ಹಾಗೂ ಸೌಜನ್ಯದಿಂದ ನಡೆಸಿಕೊಳ್ಳುತ್ತಾರೆ. ಅಗತ್ಯ ಕೆಲಸಗಳನ್ನು ಆದ್ಯತೆ ಮೇರೆಗೆ ಮಾಡಿಸಿ ಕೊಡುತ್ತಾರೆ. ಈ ವಿಚಾರದಲ್ಲಿ ಜಮೀರ್ ಮಾದರಿ ಎಂದು ಹಿರಿಯ ಶಾಸಕ ಸಿ.ಎಸ್. ನಾಡಗೌಡ ಹೇಳಿದ್ದಾರೆ.ಇದಕ್ಕೆ ಕಾಂಗ್ರೆಸ್ ನ ಇತರ ಶಾಸಕರೂ ದನಿಗೂಡಿಸಿದರು.ಜಮೀರ್ ಅಹ್ಮದ್ ಕಾರ್ಯವೈಖರಿಯನ್ನು ಶಾಸಕ […]

Continue Reading

ಪವಿತ್ರ ಕುರಾನ್ ಮತ್ತು ಹದೀಸ್ ಹೇಳಿರುವಂತೆ ಪತ್ನಿ-ಮಕ್ಕಳನ್ನು ಸಾಕುವುದು, ನಿರ್ವಹಣೆ ಮಾಡುವುದು ಪತಿಯ ಆದ್ಯ ಕರ್ತವ್ಯ: ಕರ್ನಾಟಕ ಹೈಕೋರ್ಟ್

ಪತ್ನಿ ಹಾಗೂ ಮಕ್ಕಳಿಗೆ ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಪವಿತ್ರ ಕುರಾನ್ ನಲ್ಲಿ ಹೇಳಿರುವಂತೆ ಪತ್ನಿ ಹಾಗೂ ಮಕ್ಕಳನ್ನು ಪೋಷಿಸುವುದು ಪತಿಯ ಆದ್ಯ ಕರ್ತವ್ಯ. ಇಬ್ಬರು ಪುತ್ರಿಯರಲ್ಲಿ ಒಬ್ಬರು ವಿಶೇಷ ಚೇತನೆ, ಮತ್ತೊಬ್ಬರು ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ಪತ್ನಿ ಮತ್ತು ಮಕ್ಕಳಿಗೆ ಮಾಸಿಕ 25 ಸಾವಿರ ರೂಪಾಯಿ ಜೀವನಾಂಶ ನೀಡಲೇಬೇಕೆಂದು ಆದೇಶಿಸಿದೆ. ಜೀವನಾಂಶ ಮೊತ್ತ ಇಳಿಕೆ ಕೋರಿ ಬೆಂಗಳೂರಿನ ಮೊಹಮ್ಮದ್ ಅಮ್ಜದ್ ಪಾಷಾ […]

Continue Reading

ಶಿಲ್ಪಾ ಆಚಾರ್ಯ ಮನೆಗೆ ಭೇಟಿ ನೀಡಿದ ಡಿವೈಎಫ್ಐ ನಿಯೋಗ, ಹೋರಾಟ ತೀವೃಗೊಳಿಸಲು ನಿರ್ಧಾರ

ಇತೀಚೆಗೆ ಎಜೆ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿ ವೈದ್ಯರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಗೆ ಜೀವವನ್ನೇ ಕಳೆದುಕೊಂಡ ವೇಣೂರಿನ ಶಿಲ್ಪಾ ಆಚಾರ್ಯ ಮನೆಗೆ ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ನಿಯೋಗ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನವನ್ನು ವ್ಯಕ್ತಪಡಿಸಿದೆ. ಶಿಲ್ಪಾ ಆಚಾರ್ಯಳ ಹೆರಿಗೆಗಾಗಿ ನಡೆದ ಶಸ್ತ್ರಚಿಕಿತ್ಸೆಯ ವೇಳೆ ಎಡವಟ್ಟಾಗಿ ಗರ್ಭಕೋಶವನ್ನು ಕಳೆದುಕೊಂಡಿದ್ದಲ್ಲದೆ ಮೆದುಳು ನಿಷ್ಕ್ರಿಯಗೊಂಡು ಕೋಮಕ್ಕೆ ತೆರಳಿ ಪ್ರಾಣವನ್ನು ಕಳೆದುಕೊಳ್ಳುವಂತಹ ಸ್ಥಿತಿಗೆ ಕಾರಣರಾದ ವೈದ್ಯರ ಹಾಗೂ ಎಜೆ ಆಸ್ಪತ್ರೆಯ ವಿರುದ್ಧ ಜಿಲ್ಲಾಡಳಿತ ಕಠಿಣ ಕಾನೂನು ಕ್ರಮಕೈಗೊಳ್ಳಲು ಹಾಗೂ ಸಾವಿಗೆ ನ್ಯಾಯಯುತ ಪರಿಹಾರವನ್ನು […]

Continue Reading

ಸೌಜನ್ಯ ಪ್ರಕರಣ ಮರು ತನಿಖೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಹೇಳಿಕೆ

ಬೆಂಗಳೂರು: ದರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹತ್ವದ ಹೇಳಿಕೆ ನೀಡಿದ್ದು,ಮರು ತನಿಖೆ ಎಸ್ಐಟಿ ಮಾಡುವ ಬಗ್ಗೆ ಕಾನೂನು ತಜ್ಞರ ಜೊತೆಗೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ. ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಬೇಕೆಂದು ವಿವಿಧ ಸಂಘಟನೆಗಳ ಸದಸ್ಯರು ಸಿ.ಎಂ ಸಿದ್ದರಾಮಯ್ಯರನ್ನು ಬೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.ಈ ವೇಳೆ ಮರು ತನಿಖೆಗೆ ಎಸ್ಐಟಿ ರಚನೆ ಮಾಡುವ ಬಗ್ಗೆ ಕಾನೂನು ತಜ್ಞರ ಜೊತೆಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಸೌಜನ್ಯಳಿಗೆ […]

Continue Reading

ವಿವಾಹ ವಿಚ್ಛೇದನ ಪ್ರಕರಣಗಳು ಒಂದು ವರ್ಷದೊಳಗೆ ಇತ್ಯರ್ಥಗೊಳಿಸಬೇಕು: ಕರ್ನಾಟಕ ಹೈಕೋರ್ಟ್‌ ಆದೇಶ

ವಿವಾಹ ವಿಚ್ಛೇದನ ಪ್ರಕರಣಗಳು ವರ್ಷಾನುಗಟ್ಟಲೆ ನಡೆಯುತ್ತಿರುವುದಕ್ಕೆ ಹೈಕೋರ್ಟ್‌ ಗರಂ ಆಗಿದೆ. ಇನ್ನು ಮುಂದಕ್ಕೆ ಒಂದು ವರ್ಷದೊಳಗೆ ವಿವಾಹ ವಿಚ್ಛೇಧನ ಪ್ರಕರಣಗಳ ವಿಚಾರಣೆ ತ್ವರಿತವಾಗಿ ನಡೆಸಿ ಇತ್ಯರ್ಥ ಮಾಡಬೇಕು ಎಂದು ಕೆಳ ಹಂತದ ಎಲ್ಲಾ ನ್ಯಾಯಾಲಯಗಳಿಗೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.ವಿವಾಹ ವಿಚ್ಛೇದನ ಸೇರಿ ವೈವಾಹಿಕ ಪ್ರಕರಣಗಳ ವಿಲೇವಾರಿಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್‌, ವೈವಾಹಿಕ ಪ್ರಕರಣಗಳನ್ನು ಗರಿಷ್ಠ ಒಂದು ವರ್ಷದೊಳಗೆ ಇತ್ಯರ್ಥಪಡಿಸಬೇಕು ಎಂದು ಕೌಟುಂಬಿಕ ನ್ಯಾಯಾಲಯಗಳಿಗೆ ಆದೇಶಿಸಿದೆ. ತನ್ನ ವಿವಾಹ ವಿಚ್ಛೇದನ ಅರ್ಜಿ ತ್ವರಿತಗತಿಯಲ್ಲಿಇತ್ಯರ್ಥಪಡಿಸುವಂತೆ ಕೌಟುಂಬಿಕ […]

Continue Reading

ನಿಮ್ಮ ಮನೆ ಸುತ್ತಮುತ್ತಲ ಪ್ರದೇಶ ಸರಿಪಡಿಸಿ, ಅನಂತರ ‘ಬ್ರಾಂಡ್ ಬೆಂಗಳೂರು’ ಬಗ್ಗೆ ಕನವರಿಸಿ; ಡಿಕೆಶಿಗೆ ಸಾರ್ವಜನಿಕರ ತರಾಟೆ

ಬೆಂಗಳೂರು: ಉದ್ಯಾನ ನಗರಿ ಎಂಬ ಖ್ಯಾತಿಗೊಳಗಾಗಿರುವ ಬೆಂಗಳೂರು ಅಧ್ವಾನ ನಗರಿ ಎಂಬ ಕುಖ್ಯಾತಿಗೆ ಗುರಿಯಾಗಲು ಬಿಬಿಎಂಪಿಯ ಕೆಲವು ಹೆಲ್ತ್ ಇನ್‌ಸ್ಪೆಕ್ಟರ್ಸ್ ಮತ್ತು ಮಾರ್ಷಲ್‌ಗಳು ಕಾರಣ ಅಲ್ಲದೇ ಬೇರೇನೂ ಇಲ್ಲ. ಬೆಂಗಳೂರಿನ ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುತ್ತಿರುವ ಸನ್ನಿವೇಶಗಳು ‘ಬ್ರಾಂಡ್ ಬೆಂಗಳೂರು’ ಪರಿಕಲ್ಪನೆಗೆ ಕರಿ ಚುಕ್ಕೆಯಾಗಿದೆ. ರಾಜಧಾನಿ ಬೆಂಗಳೂರಿನ ಎಲ್ಕೆಂದರಲ್ಲಿ ತ್ಯಾಜ್ಯಗಳ ರಾಶಿ ಕಂಡುಬರುತ್ತಿವೆ. ಈ ಪೈಕಿ ‘ಬ್ರಾಂಡ್ ಬೆಂಗಳೂರು’ ಮಂತ್ರ ಪಠಿಸುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಖಾಸಗಿ ನಿವಾಸವಿರುವ ಸದಾಶಿವ ನಗರದಿಂದ ಕೂಗಳತೆ ದೂರದಲ್ಲಿರುವ ವಯ್ಯಾಲಿಕಾವಲ್ ಬಳಿಯ ‘ನರಕ […]

Continue Reading

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಅಪೂರ್ಣ ಕಾಮಗಾರಿ ಅಪಘಾತಕ್ಕೆ ಕಾರಣ: 25 ಅಪಘಾತ ವಲಯ : ಎಡಿಜಿಪಿ.ಅಲೋಕ್ ಕುಮಾರ್

ಮೈಸೂರು-ಬೆಂಗಳೂರು ಹೆದ್ದಾರಿ ಕಾಮಗಾರಿ ಅಪೂರ್ಣವಾಗಿದೆ, ಹೆದ್ದಾರಿಯಲ್ಲಿ ಉಂಟಾಗುವ ಅಪಘಾತ, ಸಾವು ನೋವುಗಳನ್ನು ತಡೆಯಲೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡಲೇ ಅಪೂರ್ಣ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.ಹೆದ್ದಾರಿಯಲ್ಲಿ ಸುಮಾರು20-25 ಕಡೆಗಳಲ್ಲಿ ಅಪಘಾತ ವಲಯಗಳಿವೆ.ಎಲ್ಲ ಕಡೆಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ.ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದರು. ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಹಲವಾರು ಕಾಮಗಾರಿಗಳು ಬಾಕಿ ಉಳಿದಿವೆ. ಸಿಸಿ ಕ್ಯಾಮರಾಗಳ ಅಳವಡಿಕೆ ಬಾಕಿ ಇದೆ. ಈಗಾಗಲೇ ಹೆದ್ದಾರಿ ಉದ್ಘಾಟನೆ ಆಗಿದೆ. ಬಾಕಿ […]

Continue Reading