ಅಪರಿಚಿತ ಮಹಿಳೆಯನ್ನು ‘ಡಾರ್ಲಿಂಗ್’ ಎಂದು ಕರೆಯುವುದು ಲೈಂಗಿಕ ಕಿರುಕುಳ: ಕೊಲ್ಕತ್ತಾ ಹೈಕೋರ್ಟ್

ಅಪರಿಚಿತ ಮಹಿಳೆಯನ್ನು ‘ಡಾರ್ಲಿಂಗ್’ ಎಂದು ಕರೆಯುವುದು ಲೈಂಗಿಕ ಕಿರುಕುಳ ಎಂದು ಕೊಲ್ಕತ್ತಾ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಪರಿಚಿತ ಮಹಿಳೆಯನ್ನು ‘ಡಾರ್ಲಿಂಗ್’ ಎಂದು ಕರೆಯುವುದು ಭಾರತೀಯ ದಂಡ ಸಂಹಿತೆಯ ipc ಸೆಕ್ಷನ್ 354 ಎ (ಮಹಿಳೆಯ ಗೌರವಕ್ಕೆ ಧಕ್ಕೆ) ಮತ್ತು 509 ರ ಅಡಿಯಲ್ಲಿ ಕ್ರಿಮಿನಲ್ ಅಪರಾಧವಾಗಿದೆ ಎಂದು ಕೊಲ್ಕತ್ತಾ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಕುಡಿದ ಮತ್ತಿನಲ್ಲಿ ಮಹಿಳಾ ಕಾನ್ಸ್ಟೇಬಲ್ ಒಬ್ಬರನ್ನು ‘ಡಾರ್ಲಿಂಗ್’ ಎಂದು ಕರೆದಿದ್ದ ಜನಕ್ ರಾಮ್ ಎಂಬಾತನ ಶಿಕ್ಷೆಯನ್ನು ಎತ್ತಿಹಿಡಿದ ಹೈಕೋರ್ಟ್ ನ ಪೋರ್ಟ್ ಬ್ಲೇರ್ ಪೀಠದ ಏಕಸದಸ್ಯ […]

Continue Reading

ವಾರಣಾಸಿಯಲ್ಲಿ ಮೋದಿ ಸೋತರೆ ಮಾತ್ರ ಹಿಂದೂ ರಾಷ್ಟ್ರವಾಗುವುದು: ಸುಬ್ರಹ್ಮಣ್ಯ ಸ್ವಾಮಿ

ಖಡಕ್ ಮಾತುಗಳ ಮೂಲಕ ವಿರೋಧ ಪಕ್ಷಗಳನ್ನು,ಸ್ವ ಪಕ್ಷದವರನ್ನು ಬಾಯಿ ಮುಚ್ಚಿಸುವ ಬಿಜೆಪಿ ನಾಯಕರಲ್ಲಿ ಪಕ್ಷದ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಪ್ರಮುಖರು. ವಿರೋಧ ಪಕ್ಷಗಳ ಜೊತೆಗೆ ತಮ್ಮ ಪಕ್ಷದ ತಪ್ಪುಗಳನ್ನು ಕೂಡ ಕಟುವಾಗಿಯೇ ಟೀಕಿಸುವ ಸ್ವಾಮಿ, ಬಿಜೆಪಿಗರಿಗೂ ಕೂಡ ಬಿಸಿತುಪ್ಪವಾಗಿ ಪರಿಣಮಿಸಿದ್ದಾರೆ. ಹಿಂದೂ ಹೆಮ್ಮೆಯ ಉಲ್ಬಣವು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭವಿಷ್ಯವನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಹೇಳಿದ್ದು ಮೋದಿ ಮ್ಯಾಜಿಕ್ ನಂಥದ್ದೇನೂ ಇಲ್ಲ ಎಂದು ಟೀಕಿಸಿದ್ದ ಬಿಜೆಪಿ ಹಿರಿಯ ನಾಯಕ ಮತ್ತೊಮ್ಮೆ ಪ್ರಧಾನಿ ವಿರುದ್ಧ ವಾಗ್ದಾಳಿ […]

Continue Reading

ಲಿವ್‌ ಇನ್‌ ರಿಲೇಶನ್‌ಶಿಪ್‌ ಶರಿಯಾ ಕಾನೂನು ಪ್ರಕಾರ ಮಾನ್ಯವಲ್ಲ. ಅಂಥ ಸಂಬಂಧವು ವ್ಯಭಿಚಾರ ಮತ್ತು ಹರಾಮ್‌ ಎನಿಸಿಕೊಳ್ಳುತ್ತದೆ: ಹೈಕೋರ್ಟ್‌

ಉತ್ತರಪ್ರದೇಶ: ಲಿವ್‌-ಇನ್‌ ರಿಲೇಶನ್‌ಶಿಪ್‌ನಲ್ಲಿರುವ ವಿವಾಹಿತ ಮುಸ್ಲಿಮ್‌ ಮಹಿಳೆಗೆ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ಹೇಳಿದೆ. ಕಾನೂನುಬದ್ಧವಾಗಿ ಮದುವೆಯಾಗಿರುವ ಮುಸ್ಲಿಂ ಮಹಿಳೆಯು ವಿವಾಹೇತರ ಸಂಬಂಧವನ್ನು ಹೊಂದುವುದಾಗಲಿ ಮತ್ತು ಲಿವ್‌ ಇನ್‌ ರಿಲೇಶನ್‌ಶಿಪ್‌ಲ್ಲಿರುವುದಾಗಲಿ ಶರಿಯಾ ಕಾನೂನು ಪ್ರಕಾರ ಮಾನ್ಯವಲ್ಲ.ಅಂಥ ಸಂಬಂಧವು ಝಿನಾ(ವ್ಯಭಿಚಾರ) ಮತ್ತು ಹರಾಮ್‌ (ಹಾದರ) ಎನಿಸಿಕೊಳ್ಳುತ್ತದೆ ಎಂದು ಹೈಕೋರ್ಟ್‌ ಹೇಳಿದೆ. ಹಿಂದೂ ಪುರುಷನೊಂದಿಗೆ ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದ ಮಹಿಳೆಯೊಬ್ಬಳು ತನ್ನ ತಂದೆ ಹಾಗೂ ಸಂಬಂಧಿಕರಿಂದ ಜೀವ ಬೆದರಿಕೆ ಇದ್ದು ರಕ್ಷಣೆ ನೀಡುವಂತೆ ಕೋರ್ಟ್‌ ಮೊರೆ ಹೋಗಿದ್ದಳು. […]

Continue Reading

ಹಿಮಾಚಲದಲ್ಲೂ ಕನಕಪುರ ಬಂಡೆಯ ಕಮಾಲ್; ಬಿಜೆಪಿ ಚಾಣಕ್ಯನಿಗೆ ಸವಾಲಾದ ಬಂಡೆ.!

ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸಿನ 6 ಶಾಸಕರು ಅಡ್ಡಮತದಾನ ಮಾಡಿದ ಕಾರಣ ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರ ಪತನವಾಗುವ ಭೀತಿ ಎದುರಿಸುತಿತ್ತು. 68 ಸದಸ್ಯರ ಹಿಮಾಚಲ ಅಸೆಂಬ್ಲಿಯಲ್ಲಿ ಕಾಂಗ್ರೆಸ್ ಸಂಖ್ಯೆ 34ಕ್ಕೆ ಕುಸಿದಿತ್ತು. ಸರಳ ಬಹುಮತಕ್ಕೆ 35 ಸಂಖ್ಯೆಗಳ ಅಗತ್ಯವಿದೆ. ಅಲ್ಲದೇ, ಇದೆ ವೇಳೆ ಮಾಜಿ ಮುಖ್ಯಮಂತ್ರಿ ದಿ. ವೀರಭದ್ರಸಿಂಗ್ ಪುತ್ರ ಸಚಿವ ವಿಕ್ರಮಾದಿತ್ಯ ಸಿಂಗ್ ಕೂಡ ಸುಖವಿಂದರ್ ಸಿಂಗ್ ಸುಖು ನೇತೃತ್ವದ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು. ಈ ಬೆಳವಣಿಗೆ ಕಾಂಗ್ರಸ್ ಹೈಕಮಾಂಡ್ ಅನ್ನು […]

Continue Reading

ಬಾಂಬ್ ಹೇಗೆ ಮತ್ತು ಎಲ್ಲಿ ತಯಾರಾಗುತ್ತದೆ.? ಪೊಲೀಸ್ ದಾಖಲೆಗಳಲ್ಲಿದೆ ಬಾಂಬ್ ಸ್ಪೋಟದ ಅಸಲೀ ಸತ್ಯ !

✍️. ನವೀನ್ ಸೂರಿಂಜೆ,ಪತ್ರಕರ್ತ ಏಪ್ರಿಲ್ 12, 2023 ರ ಮಂಗಳವಾರ ರಾತ್ರಿ ಕೇರಳದ ಕಣ್ಣೂರು ಜಿಲ್ಲೆಯ ಎರಂಜೋಲಿಪಾಲಂ ಬಳಿ ಬಾಂಬ್ ತಯಾರಿಕೆ ವೇಳೆ ಸ್ಫೋಟ ಸಂಭವಿಸಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ಗೆ ಸೇರಿದ ಯುವಕ ತೀವ್ರ ಗಾಯಗೊಂಡಿದ್ದ. ಆತನನ್ನು ವಿಷ್ಣು (20) ಎಂದು ಗುರುತಿಸಲಾಗಿದ್ದು ಆತನ ಅಂಗೈ ಒಡೆದು ಚೆಲ್ಲಾಪಿಲ್ಲಿಯಾಗಿತ್ತು.‌ ಈ ಬಗ್ಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಮಂಗಳವಾರ ರಾತ್ರಿ 12 ಗಂಟೆ ಸುಮಾರಿಗೆ ವಿಷ್ಣು, ಆತನ ಮನೆಯ ಸಮೀಪದ ಹೊಲವೊಂದರಲ್ಲಿ ಬಾಂಬ್ ತಯಾರಿಸುವ ಕಾರ್ಯದಲ್ಲಿ ತೊಡಗಿದ್ದಾಗ […]

Continue Reading

ಏರ್ ಇಂಡಿಯಾ ಸಂಸ್ಥೆಗೆ 30 ಲಕ್ಷ ರೂಪಾಯಿ ದಂಡ ವಿಧಿಸಿದ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಐ)

ಮುಂಬಯಿ ವಿಮಾನ ನಿಲ್ದಾಣದಲ್ಲಿ ಗಾಲಿ ಕುರ್ಚಿ ಸಿಗದೇ ಹಿರಿಯ ಪ್ರಯಾಣಿಕರೊಬ್ಬರು ಟರ್ಮಿನಲ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕುಸಿದುಬಿದ್ದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಏರ್ ಇಂಡಿಯಾಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) 30 ಲಕ್ಷ ರೂಪಾಯಿ ದಂಡ ವಿಧಿಸಿದೆ. ಫೆಬ್ರವರಿ 12 ರಂದು ಈ ದುರ್ಘಟನೆ ನಡೆದಿತ್ತು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಡಿಜಿಸಿಎ, ಏರ್ ಇಂಡಿಯಾಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು. ಏರ್ ಇಂಡಿಯಾ ಸಲ್ಲಿಸಿದ ವರದಿಯನ್ನು ಪರಿಶೀಲಿಸಿದ ಡಿಜೆಸಿಎ, ಈ ಪ್ರಕರಣದಲ್ಲಿ ವಿಮಾನಯಾನ ಸಂಸ್ಥೆಯ ನಿರ್ಲಕ್ಷ್ಯ ಎದ್ದು ಕಂಡುಬರುತ್ತದೆ […]

Continue Reading

ಬಾಲಕಿಯರ ಅತ್ಯಾಚಾರದ ವಿಡಿಯೊ ಮಾಡಿ ಬ್ಲಾಕ್ ಮೈಲ್, ಮನನೊಂದ ಅಪ್ರಾಪ್ತ ಬಾಲಕಿಯರು ಆತ್ಮಹತ್ಯೆಗೆ ಶರಣು

ಉತ್ತರ ಪ್ರದೇಶದ ಕಾನ್ಪುರ ಘಟಂಪುರ್ ಕೊಟ್ವಾಲಿ ಗ್ರಾಮದ ಇಟ್ಟಿಗೆ ಗೂಡು ಬಳಿ ಇಬ್ಬರು ಬಾಲಕಿಯರ ದೇಹ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಟ್ಟಿಗೆ ಗೂಡುಗಳ ಗುತ್ತಿಗೆದಾರ, ಆತನ ಮಗ ಮತ್ತು ಸೋದರಳಿಯ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ ಕೆಲವು ದಿನಗಳ ನಂತರ ಈ ಬಾಲಕಿಯರ ಮೃತದೇಹ ಪತ್ತೆಯಾಗಿದೆ. ಇಟ್ಟಿಗೆ ಗೂಡುಗಳ ಗುತ್ತಿಗೆದಾರ ರಾಮ್ ರೂಪ್ ನಿಷಾದ್,ಆತನ ಮಗ ರಾಜು ಮತ್ತು ಸೋದರಳಿಯ ಸಂಜಯ್ ಕೆಲವು ದಿನಗಳ ಹಿಂದೆ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದರು ಎಂದು […]

Continue Reading

ಸರ್ಕಾರ ತಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಂಡಾಗ ಪರಿಹಾರಕ್ಕೆ ಅರ್ಹರಾದವರಿಗೆ ಪರಿಹಾರ ನೀಡುವುದು ಸರ್ಕಾರ ಮಾಡುವ ದಾನವಲ್ಲ: ಸುಪ್ರೀಂ ಕೋರ್ಟ್‌

ಸರ್ಕಾರ ತಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಂಡಾಗ ಪರಿಹಾರಕ್ಕೆ ಅರ್ಹರಾದವರಿಗೆ ಪರಿಹಾರ ನೀಡುವುದು ಸರ್ಕಾರ ಮಾಡುವ ದಾನವಲ್ಲ. ಸರ್ಕಾರ ಮತ್ತು ಅದರ ಅಂಗಗಳು ದಯಾಪರತೆಯಿಂದ ಭೂಮಾಲೀಕರಿಗೆ ಪರಿಹಾರ ನೀಡಿವೆ ಎಂದು ಬಿಂಬಿಸಿಕೊಳ್ಳುವಂತಿಲ್ಲ ಎಂಬುದಾಗಿ ನ್ಯಾಯಾಲಯ ಸ್ಪಷ್ಟಪಡಿಸಿದೆ. ಸಂವಿಧಾನದ 300-ಎ ವಿಧಿಯಡಿ ಆಸ್ತಿಯ ಹಕ್ಕು ಈಗಲೂ ಸಾಂವಿಧಾನಿಕ ಹಕ್ಕು ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ತಿಳಿಸಿತು. ಇಪ್ಪತ್ತು ವರ್ಷಗಳ ಕಾಲ ಜಮೀನು ಬಳಸುವ ನಾಗರಿಕರ ಸಾಂವಿಧಾನಿಕ ಹಕ್ಕು ಕಸಿದುಕೊಂಡು ಆ ಬಳಿಕ ಪರಿಹಾರ […]

Continue Reading

ಸಿಎಎ ಭಾರತದಲ್ಲಿರುವ ಮುಸ್ಲಿಮರ ಪೌರತ್ವವನ್ನು ಕಿತ್ತುಕೊಳ್ಳುವುದಕ್ಕಾಗಿ ನಾವು ಜಾರಿಗೆ ತರುತ್ತಿಲ್ಲ: ಅಮಿತ್ ಶಾ

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು 370 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಎನ್​ಡಿಎ ಒಕ್ಕೂಟವು 400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ವಿಜಯಪತಾಕೆ ಹಾರಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ. ಮೂರನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರಚನೆ ಮಾಡುವ ಬಗ್ಗೆ ವಿಶ್ವಾಸ ಇದೆ ಎಂದಿರುವ ಅಮಿತ್ ಶಾ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಗೆಲುವು ಸಿಗಲಿದೆ ಅನ್ನೋದ್ರ ಬಗ್ಗೆ ಯಾವುದೇ ಸಸ್ಪೆನ್ಸ್ ಆಗಿ ಉಳಿದಿಲ್ಲ. ಕಾಂಗ್ರೆಸ್​ಗೆ ಕೂಡ ಅದು ಅರ್ಥ […]

Continue Reading

ಪರೀಕ್ಷೆಗಾಗಿ ವಿದ್ಯಾರ್ಥಿನಿ ಸೇವಿಸುತ್ತಿದ್ದ ಮಾತ್ರೆ ಉಗ್ರರು ಬಲಸುತ್ತಿದ್ದ ಮಾತ್ರೆ.! ಒಂದು ಮಾತ್ರೆ ಸೇವಿಸಿದರೆ 40 ಗಂಟೆಗಳ ಕಾಲ ನಿದ್ರೆ ಬರೊಲ್ಲ

ಪರೀಕ್ಷೆ ಹತ್ತಿರ ಬರುತ್ತಿಂದಂತೆ, ವಿದ್ಯಾರ್ಥಿಗಳು ಆತಂಕಗೊಳಗಾಗುತ್ತಾರೆ, ಓದಲು ಶುರುವಿಡುತ್ತಾರೆ. ಓದಿದ್ದನ್ನು ನೆನಪಿನಲ್ಲಿಡಬೇಕೆಂದು ಹಲವು ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ನಿದ್ರೆಬಿಟ್ಟು ಹಗಲು ರಾತ್ರಿ ಓದುತ್ತಾರೆ. ನಿದ್ದೆ ಬರಬಾರದೆಂದು ಟೀ, ಕಾಫಿ ಸೇವಿಸುತ್ತಾರೆ. ಆದರೆ ಉತ್ತರ ಪ್ರದೇಶದ ವಿದ್ಯಾರ್ಥಿನಿಯೊಬ್ಬಳು ತನಗೆ ರಾತ್ರಿ ನಿದ್ರೆ ಬರಬಾರದು. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ, ಪಾಸಾಗಬೇಕು ಎಂದು, ಮಾತ್ರೆಯನ್ನು ಸೇವಿಸಿ ಓದಲು ಪ್ರಾರಂಭಿಸಿದ್ದಾಳೆ. ಈಕೆ ಉತ್ತರಪ್ರೇದಶದ 10ನೇ ತರಗತಿ ಓದುವ ವಿದ್ಯಾರ್ಥಿನಿ. ಪರೀಕ್ಷೆ ಸಮಯದಲ್ಲಿ ಮನೆಯಲ್ಲಿ, ಶಾಲೆಯಲ್ಲಿ ಒತ್ತಡ ಹೆಚ್ಚಾಗಿರುತ್ತದೆ. ಹತ್ತನೇ ಕ್ಲಾಸಿನಲ್ಲಿ ಉತ್ತಮ […]

Continue Reading