`ಸಪ್ತಪದಿ’ ಶಾಸ್ತ್ರ ನಡೆಯದಿದ್ದರೆ ವಿವಾಹ ಅಸಿಂಧು: ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು

“ಹಿಂದೂಗಳಲ್ಲಿ ಸಪ್ತಪದಿ ತುಳಿಯುವ ಶಾಸ್ತ್ರ ಮಾಡಿಲ್ಲವೆಂದಾದರೆ ಆ ಮದುವೆಯನ್ನು ಮಾನ್ಯ ಎಂದು ಪರಿಗಣಿಸಲು ಆಗುವುದಿಲ್ಲ’ ಎಂದು ಅಲಹಾಬಾದ್‌ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ನನ್ನಿಂದ ವಿಚ್ಛೇದನ ಪಡೆಯದೆಯೇ ನನ್ನ ಪತ್ನಿಯು ಎರಡನೇ ವಿವಾಹವಾಗಿದ್ದು, ಆಕೆಗೆ ಶಿಕ್ಷೆಯಾಗಬೇಕು ಎಂದು ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನೇ ಹೈಕೋರ್ಟ್‌ ರದ್ದು ಮಾಡಿ ಈ ತೀರ್ಪು ನೀಡಿದೆ. ಸ್ಮತಿ ಸಿಂಗ್‌ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್‌ ನ್ಯಾ.ಸಂಜಯ್‌ ಕುಮಾರ್‌ ಸಿಂಗ್‌ ಅವರು, “ಶಾಸ್ತ್ರೋಕ್ತ ವಿವಾಹ ಎಂದರೆ, ಸೂಕ್ತ ರೀತಿಯಲ್ಲಿ […]

Continue Reading

ಬಿಟ್ ಕಾಯಿನ್ ಕಿಂಗ್​ಪಿನ್ ರಾಜೇಂದ್ರ ಸಿಂಗ್ ಬಂಧನ; ಮಹತ್ವದ ಯಶಸ್ಸು ಸಾಧಿಸಿದ ಎಸ್ಐಟಿ ತನಿಖಾ ತಂಡ

ರಾಷ್ಟ್ರಮಟ್ಟದಲ್ಲಿ ಸಂಚಲನ ಸೃಷ್ಟಿಸಿ, ರಾಜ್ಯ ರಾಜಕೀಯ ನಾಯಕರು ಹಾಗೂ ಐಪಿಎಸ್ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿರುವ ‘ಬಿಟ್ ಕಾಯಿನ್’ ಹಗರಣದ ದಿಕ್ಕನ್ನೇ ಬದಲಿಸುವ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನಿಗೂ ಮುನ್ನವೇ ಬಿಟ್ ಕಾಯಿನ್ ಹ್ಯಾಕಿಂಗ್​ನಲ್ಲಿ ಕೈಚಳಕ ತೋರಿ ಭೂಗತನಾಗಿದ್ದ ಇನ್ನೊಬ್ಬ ಅಂತಾರಾಷ್ಟ್ರೀಯ ಹ್ಯಾಕರ್​ನನ್ನು ವಿಶೇಷ ತನಿಖಾ ದಳ ಬಂಧಿಸಿದೆ.ಇದೇ ವೇಳೆ ಹಗರಣ ಸಾಬೀತುಪಡಿಸುವ ಸಾಕ್ಷ್ಯ ಸಂಗ್ರಹಕ್ಕಾಗಿ ಎಸ್​ಐಟಿ ತಂಡವು ಕೇಂದ್ರ ತನಿಖಾ ಸಂಸ್ಥೆಗಳ ನೆರವು ಕೋರಿರುವುದರಿಂದ ಶೀಘ್ರದಲ್ಲೇ ತನಿಖೆ […]

Continue Reading

ಮಸೀದಿಯಲ್ಲಿ ಇಮಾಮರಾಗಿದ್ದ ಮೌಲ್ವಿ ಇದೀಗ ನಿಶಾ ಫಾತಿಮಾ..!ದೇವರ ನಾಡಲ್ಲಿ ಇದೆಂತಹ ವಿಚಿತ್ರ.!

ಬೆಚ್ಚಿಬೀಳಿಸುವ ಸುದ್ದಿಯೊಂದು ದೇವರ ನಾಡು ಎಂದು ಕರೆಸಿಕೊಳ್ಳುವ ಕೇರಳದಲ್ಲಿ ವರದಿಯಾಗಿದೆ. 6-7 ವರ್ಷಗಳ ಕಾಲ ದರ್ಸ್ ನಲ್ಲಿ ಮುತಅಲ್ಲಿಂ ಕಲಿತು ಮಸೀದಿಯೊಂದರಲ್ಲಿ ಖತೀಬರಾಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಯೊಬ್ಬರು ಸರ್ಜರಿ ನಡೆಸಿ ಇದೀಗ ಹೆಣ್ಣಾಗಿ ಬದಲಾಗಿದ್ದಾರೆ. ನಾವು ಈವರೆಗೂ ಸಿನಿಮಾ ನಟರು, ಕೆಲ ಯುವಕರು ಲಿಂಗ ಬದಲಾಯಿಸಿ ಹೆಣ್ಣಾಗಿ ಪರಿವರ್ತನೆಯಾದ ಕಹಾನಿಗಳನ್ನೆಲ್ಲಾ ಕೇಳಿದ್ದೇವೆ. ಇತ್ತೀಚೆಗೆ ಮಂಗಳೂರಿನ ಆಸುಪಾಸಿನ ಯುವಕನೊಬ್ಬ ಹೆಣ್ಣಾಗಿ ಬದಲಾದ ಸುದ್ದಿ ವ್ಯಾಪಕ ವೈರಲ್ ಆಗಿತ್ತು. ಆದರೆ ಇದೇ ಮೊದಲ ಬಾರಿಗೆ ಎಂಬಂತೆ ಮುತಅಲ್ಲಿಂ ಆಗಿ, ಧಾರ್ಮಿಕ […]

Continue Reading

ನಿಯಮ ಉಲ್ಲಂಘಿಸಿದರೆ ವೈದ್ಯಕೀಯ ಕಾಲೇಜುಗಳಿಗೆ ಕೋಟಿ ರೂಪಾಯಿ ದಂಡ: ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ಅಧಿಸೂಚನೆ

ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ನಿಯಮಗಳು ಹಾಗೂ ಶಾಸನಬದ್ಧ ನಿಯಮಗಳನ್ನು ಪಾಲಿಸದಿರುವ ವೈದ್ಯಕೀಯ ಕಾಲೇಜುಗಳಿಗೆ, ಇನ್ನು ಮುಂದೆ ಪ್ರತಿ ನಿಯಮ ಉಲ್ಲಂಘನೆಗೆ ರೂಪಾಯಿ ಒಂದು ಕೋಟಿ ವರೆಗೂ ದಂಡ ವಿಧಿಸಬಹುದಾಗಿದೆ. ವಿವಿಧ ನಿಯಮಗಳ ಕುರಿತು ಆಯೋಗವು ಸೆ.27ರಂದು ಅಧಿಸೂಚನೆ ಹೊರಡಿಸಿದೆ. ರೋಗಿಗಳ ಕುರಿತ ಸುಳ್ಳುದಾಖಲೆ ಮತ್ತು ಕಡತವನ್ನು ಒದಗಿಸುವ ವೈದ್ಯಕೀಯ ಕಾಲೇಜುಗಳ ವಿಭಾಗಗಳ ಮುಖ್ಯಸ್ಥರು, ಡೀನ್‌ಗಳು, ನಿರ್ದೇಶಕರು, ವೈದ್ಯರಿಗೆ ತಲ ರೂಪಾಯಿ 5 ಲಕ್ಷದ ವರೆಗೂ ದಂಡ ವಿಧಿಸಲು ಅವಕಾಶವಿದೆ. ದುರ್ನಡತೆಗಾಗಿ ನೋಂದಾಯಿತ ವೈದ್ಯರುಗಳಿಗೆ ನಿಯಮಗಳು ಹಾಗೂ […]

Continue Reading

ಪೋಕ್ಸೋ ಕಾಯ್ದೆ ಅಡಿಯ ಲೈಂಗಿಕ ಸಮ್ಮತಿ ವಯಸ್ಸನ್ನು 18ರಿಂದ 16ಕ್ಕೆ ಇಳಿಕೆ.!

ಲೈಂಗಿಕ ಅಪರಾಧಗಳಿಂದ ಮಕ್ಕಳಿಗೆ ರಕ್ಷಣೆ ನೀಡುವ ಪೋಕ್ಸೋ ಕಾಯ್ದೆ ಅಡಿಯ ಲೈಂಗಿಕ ಸಮ್ಮತಿ ವಯಸ್ಸನ್ನು 18ರಿಂದ 16ಕ್ಕೆ ಇಳಿಕೆ ಮಾಡುವ ವರದಿಯನ್ನು ಕಾನೂನು ಆಯೋಗವು ಅಂತಿಮಗೊಳಿಸಿದೆ ಎನ್ನಲಾಗಿದೆ.ಅಲ್ಲದೇ, ಆನ್ ಲೈನ್ ಮೂಲಕವೂ ಎಫ್ ಐಆರ್ ಸಲ್ಲಿಸಲು ಅವಕಾಶ ಕಲ್ಪಿಸುವ ಶಾಸನಕ್ಕಾಗಿ ಮತ್ತೊಂದು ಶಿಫಾರಸನ್ನು ಆಯೋಗವು ಅಂತಿಮಗೊಳಿಸಿದೆ ಎನ್ನಲಾಗಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ಒಪ್ಪಿಗೆಯ ಕನಿಷ್ಠ ವಯಸ್ಸನ್ನು 18ರಿಂದ 16ಕ್ಕೆ ಇಳಿಸುವ ವರದಿಯನ್ನು ಭಾರತೀಯ ಕಾನೂನು ಆಯೋಗ ಅಂತಿಮಗೊಳಿಸಿದೆ. ಮೊದಲ ಮಾಹಿತಿ ವರದಿಗಳ ಆನ್ ಲೈನ್ […]

Continue Reading

ಅರೆನಗ್ನ ಸ್ಥಿತಿಯಲ್ಲಿ ಅಪ್ರಾಪ್ತ ಬಾಲಕಿ, ಲೈಂಗಿಕ ದೌರ್ಜನ್ಯಎಸಗಿ ರಸ್ತೆ ಬದಿ ಎಸೆದ ದುರುಳರು; ನೆರವಿಗೆ ಮೊರೆ ಇಟ್ಟರೂ ಕರುಣೆ ತೊರದ ರಾಕ್ಷಸರು

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ 12 ವರ್ಷದ ಬಾಲಕಿ ಸುರಿಯುವ ರಕ್ತದ ನಡುವೆ, ಅರೆನಗ್ನ ಸ್ಥಿತಿಯಲ್ಲಿ ನರಳಾಡುತ್ತಿದ್ದರೂ ಒಬ್ಬರು ಆಕೆಯ ನೆರವಿಗೆ ಬಾರದಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ. ಈ ಘಟನೆ ಮಾಧ್ಯಮದಲ್ಲಿ ವರದಿಯಾಗುತ್ತಿದ್ದಂತೆಯೇ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ತನಿಖೆಗೆ ಎಸ್ ಐ ಟಿ ರಚಿಸಿದ್ದಾರೆ. ಪ್ರಕರಣದಲ್ಲಿ ಒಬ್ಬ ಶಂಕಿತನನ್ನು ಬಂಧಿಸಲಾಗಿದೆ. ಮಕ್ಕಳ ಹಕ್ಕುಗಳ ರಕ್ಷಣೆ ಕುರಿತ ರಾಷ್ಟ್ರೀಯ ಆಯೋಗವು ( ಎನ್ ಸಿ ಪಿಸಿ ಆರ್) ಉಜ್ಜಯಿನಿ ಪೊಲೀಸರಿಗೆ ನೋಟಿಸ್ ಜಾರಿ […]

Continue Reading

ಸಿನಿಮಾದಲ್ಲಿ ಹೆಣ್ಣಿನ ಪಾತ್ರ; ನಿಜ ಜೀವನದಲ್ಲೂ ಹೆಣ್ಣಾಗಿ ಬದಲಾದ ಯುವಕ.!

ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗಿರುವ ಲಿಂಗ ಬದಲಾವಣೆ; ಕೆಲವು ಯುವಕರ ಬದುಕನ್ನು ಮೂರಾಬಟ್ಟೆಯಾಗಿಸಿದರೆ, ಇನ್ನು ಕೆಲವು ಕುಟುಂಬಗಳನ್ನು ಕಣ್ಣೀರ ಕೋಡಿಯಲ್ಲಿ ಮುಳುಗಿಸಿದೆ. ಇಲ್ಲೊಬ್ಬ ಯುವಕ ಸಿನಿಮಾ,ಸೀರಿಯಲ್ ಗಳಲ್ಲಿ ಹೆಣ್ಣಿನ ಪಾತ್ರ ಮಾಡುತ್ತಾ ಹಲವು ಯುವಕರ ನಿದ್ದೆಗೆಡಿಸಿದ ಪಿಂಕಿ ಆಲಿಯಾಸ್ ಸಾಯಿತೇಜ್, ಪ್ರಿಯಾಂಸಾ ಸಿಂಗ್ ಆಗಿ ಬದಲಾಗಿದ್ದಾನೆ. ಸಾಯಿ ತೇಜ್ ಹುಟ್ಟಿದ್ದು, ಬೆಳೆದಿದ್ದು ಗಂಡಾಗಿ. 2013 ರಲ್ಲಿ ತೆಲುಗಿನ ಖ್ಯಾತ ಕಿರುತೆರೆ ಶೋ ಜಬರ್ದಸ್ತ್ ಮೂಲಕ ಪ್ರೇಕ್ಷಕರಿಗೆ ಪರಿಚಯವಾದರು. ಆದರೆ ಇಲ್ಲಿ ಸಾಯಿತೇಜ್ ಗೆ ತನ್ನ ಪ್ರತಿಭೆ ತೋರಿಸಲು […]

Continue Reading

ಕಾವೇರಿ ಅಖಾಡದಲ್ಲಿ ವಕೀಲರು; ಅತ್ತ ‘ಸುಪ್ರೀಂ’ ಸಮರದಲ್ಲೂ ಇಂಪ್ಲೀಡ್, ಇತ್ತ ಹೋರಾಟದಲ್ಲೂ ಸಾಥ್

ಬೆಂಗಳೂರು: ಕಾವೇರಿ ನದಿ ನೀರು ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಆರೋಪಿಸಿ ಕನ್ನಡ ಪರ ಸಂಘಟನೆಗಳು ರೊಚ್ಚಿಗೆದ್ದಿವೆ. ಕಳೆದ ವಾರಾಂತ್ಯದಲ್ಲಿ ಮಂಡ್ಯ ಬಂದ್ ಆಚರಿಸಿರುವ ರೈತ, ಕನ್ನಡಪರ ಸಂಘಟನೆಗಳು, ನಾಳೆ ಬೆಂಗಳೂರು ಬಂದ್‌ಗೆ ಕರೆ ನೀಡಿವೆ. ರೈತ ಸಂಘಟನೆಗಳ ಒಕ್ಕೂಟದ ಮುಂದಾಳುತ್ವದಲ್ಲಿ ರಚನೆಯಾಗಿರುವ ಜಲಸಂರಕ್ಷಣಾ ಸಮಿತಿ ನಾಳಿನ ಬೆಂಗಳೂರು ಬಂದ್‌ಗೆ ಕರೆ ನೀಡಿದ್ದು, ಈ ಬಂದ್ ಕರೆಗೆ ವಕೀಲರ ಸಂಘಟನೆಯೂ ಬೆಂಬಲ ಘೋಷಿಸಿದೆ. ನಾಳಿನ ಬಂದ್’ನಲ್ಲಿ ವಕೀಲರ ಸಂಘವೂ ಭಾಗಿಯಾಗಿ ಕಾವೇರಿ ಹೋರಾಟಕ್ಕೆ ಶಕ್ತಿ ನೀಡಲಿದೆ ಎಂದು ಬೆಂಗಳೂರು […]

Continue Reading

ಭಾರತದಲ್ಲಿ ಶೈಕ್ಷಣಿಕ ಅರ್ಹತೆ ಹೊಂದಿರುವ ರಾಜಕಾರಣಿಗಳ ತುರ್ತು ಅಗತ್ಯತೆ ಬಗ್ಗೆ ಒಂದು ಅವಲೋಕನ

✍️. ಇಸ್ಮಾಯಿಲ್ ಎಸ್. ನ್ಯಾಯವಾದಿಗಳು ಮಂಗಳೂರು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾದ “ಭಾರತ”ವು ತನ್ನ ಇತಿಹಾಸದ ನಿರ್ಣಾಯಕ ಘಟ್ಟದಲ್ಲಿ ನಿಂತಿದೆ. “ಭಾರತ”ವು ಅಸಂಖ್ಯಾತ ಸಂಕೀರ್ಣ ಸವಾಲುಗಳನ್ನು ಎದುರಿಸುತ್ತಿದೆ. ಈ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಮತ್ತು ರಾಷ್ಟ್ರವನ್ನು ಸಮೃದ್ಧಿಯತ್ತ ಕೊಂಡೊಯ್ಯಲು, ಶೈಕ್ಷಣಿಕ ಅರ್ಹತೆ ಹೊಂದಿರುವ ರಾಜಕಾರಣಿಗಳ ಅಗತ್ಯವು ತೀರಾ ಅನಿವಾರ್ಯವಾಗಿದೆ ಈ ಲೇಖನದಲ್ಲಿ, ಬಲವಾದ ಶೈಕ್ಷಣಿಕ ಹಿನ್ನೆಲೆಯನ್ನು ಹೊಂದಿರುವ ರಾಜಕಾರಣಿಗಳ ಚುನಾವಣೆಗೆ ಭಾರತವು ಏಕೆ ಆದ್ಯತೆ ನೀಡಬೇಕು ಎಂಬುದಕ್ಕೆ ಬಲವಾದ ಕಾರಣಗಳನ್ನು ಹುಡುಕೋಣ. ವೈವಿಧ್ಯಮಯ ಮತ್ತು ಸಂಕೀರ್ಣ ರಾಷ್ಟ್ರ ಭಾರತವು […]

Continue Reading

ಗಂಡ ಮತ್ತು ಹೆಂಡತಿಯ ನಡುವೆ ನಡೆಯುವ ಯಾವುದೇ ಕೆಲಸವನ್ನು ‘ಅಸ್ವಾಭಾವಿಕ’ ಲೈಂಗಿಕ ಸಂಭೋಗ ಎಂದು ಲೇಬಲ್ ಮಾಡಲಾಗುವುದಿಲ್ಲ: ಮದ್ಯಪ್ರದೇಶ ಹೈಕೋರ್ಟ್

ಮದ್ಯಪ್ರದೇಶ: ವೈವಾಹಿಕ ಅತ್ಯಾಚಾರವನ್ನು ಭಾರತೀಯ ಕಾನೂನು ಪ್ರಸ್ತುತ ಮಾನ್ಯ ಮಾಡದ ಕಾರಣ, ಪತ್ನಿಯೊಂದಿಗೆ ಸಹಮತವಿಲ್ಲದ ‘ಅಸ್ವಾಭಾವಿಕ’ ಲೈಂಗಿಕತೆಗಾಗಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 377ರ ಅಡಿಯಲ್ಲಿ ಪತಿಯನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಆದೇಶ ನೀಡಿದೆ. ಸಾಮಾನ್ಯ ಲೈಂಗಿಕ ಸಂಭೋಗವೆಂದು ಪರಿಗಣಿಸುವುದಕ್ಕಿಂತ ಹೆಚ್ಚಿನದನ್ನು ಗಂಡ ಮತ್ತು ಹೆಂಡತಿಯ ನಡುವೆ ಮಾಡುವ ಯಾವುದೇ ಕೆಲಸವನ್ನು ‘ಅಸ್ವಾಭಾವಿಕ’ ಲೈಂಗಿಕ ಸಂಭೋಗ ಎಂದು ಸ್ಪಷ್ಟವಾಗಿ ಲೇಬಲ್ ಮಾಡಲಾಗುವುದಿಲ್ಲ. ಯಾಕೆಂದರೆ, ವೈವಾಹಿಕ ಸಂಬಂಧವು ಕೇವಲ ಸಂತಾನೋತ್ಪತ್ತಿಗಿಂತ ಮಹತ್ವದ್ದಾಗಿದೆ ಎಂದು […]

Continue Reading