ನೀಟ್ ಫಲಿತಾಂಶ: ಕಮ್ಯೂನಿಟಿ ಸೆಂಟರ್ ನ ವಿದ್ಯಾರ್ಥಿಗಳಿಂದ ಅತ್ಯುತ್ತಮ ಸಾಧನೆ; ಹದಿನೈದಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ MBBS

ಕರಾವಳಿ

ನೀಟ್ ಎದುರಿಸಿದ 108 ವಿದ್ಯಾರ್ಥಿಗಳ ಪೈಕಿ, ಪ್ರತಿ ವಿದ್ಯಾರ್ಥಿಯು ಸರಕಾರಿ ಪ್ರಾಯೋಜಿತ ಮೆಡಿಕಲ್ ಕೋರ್ಸ್ ಗೆ ಅರ್ಹತೆ; 100% ಫಲಿತಾಂಶ

ಕಳೆದ ಐದು ವರ್ಷಗಳಿಂದ ಕಮ್ಯೂನಿಟಿ ಸೆಂಟರಿನ ನಿರಂತರ ಜಾಗೃತಿ, ಪ್ರೋತ್ಸಾಹ ಮತ್ತು ಪ್ರಯತ್ನದ ಫಲ, ನೀಟ್ ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳಿಗೆ ಬೇರೆ ಬೇರೆ ಸಂಘ ಸಂಸ್ಥೆ, ಶಿಕ್ಷಣ ಸಂಸ್ಥೆಗಳ ಬೆಂಬಲ, ಮಾರ್ಗದರ್ಶನ ಮತ್ತು ನೆರವು ಒದಗಿ ಬರುತ್ತಿದೆ. ಸಮುದಾಯದಲ್ಲೂ ಹಲವು ಶಿಕ್ಷಣ ಸಂಸ್ಥೆಗಳು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯನ್ನು ಉನ್ನತ ಶ್ರೇಣಿಯಲ್ಲಿ ಆರಂಭಿಸಿದೆ. ಫಲಿತಾಂಶದ ಪೈಪೋಟಿ ಉಂಟಾಗುತ್ತಿದೆ. ವಾರ್ಷಿಕವಾಗಿ ಕರಾವಳಿಯ ವಿದ್ಯಾರ್ಥಿಗಳ ಸಾಧನೆಯ ಅಂಕಿ ಅಂಶವೂ ಹೆಚ್ಚಾಗುತ್ತಿದೆ. ಇದೆಲ್ಲವೂ ಕಮ್ಯೂನಿಟಿ ಸೆಂಟರ್ ನ ಮಾದರಿ ಯೋಜನೆ ಮತ್ತು ಪ್ರೇರಣೆ ಎಂಬುವುದು ಎಲ್ಲರಿಗೂ ತಿಳಿದ ವಿಷಯ. ಈ ಎಲ್ಲಾ ಸಕಾರಾತ್ಮಕ ಬೆಳವಣಿಗೆಯ ನಡುವೆಯೂ ಕಮ್ಯೂನಿಟಿ ಸೆಂಟರ್ ನ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ನೀಡುವ ಮೂಲಕ ಈ ವರ್ಷವೂ ನಮಗೆಲ್ಲರಿಗೂ ಹೆಮ್ಮೆಯ ಸಾಧನೆ ಮಾಡಿದ್ದಾರೆ.

ಈ ಬಾರಿಯ ನೀಟ್ ನಲ್ಲಿ ಸುಮಾರು 15 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು MBBS ಸೀಟು ಪಡೆಯಲಿದ್ದಾರೆ. ಕೌನ್ಸಿಲಿಂಗ್ ಮುಗಿದ ನಂತರ ಅದು ಇನ್ನೂ ಹೆಚ್ಚಾಗುವ ಸಂಭವ ಇದೆ. 75 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು BDS, BAMS, ಹಾಗೂ ಇನ್ನಿತರ ಮೆಡಿಕಲ್ ಕೋರ್ಸ್ ನಲ್ಲಿ ಸರಕಾರಿ ಕೋಟಾದಲ್ಲಿ ಸಾಮಾನ್ಯ ಮೊತ್ತದಲ್ಲಿ ದಾಖಲಾತಿ ಮಾಡಲಿದ್ದಾರೆ. ಈ ಬಾರಿ 108 ವಿದ್ಯಾರ್ಥಿಗಳು ಸೆಂಟರ್ ನ ಮೂಲಕ ರಾಜ್ಯದ ವಿವಿಧ ನೀಟ್ ತರಬೇತಿ ಸಂಸ್ಥೆಯಲ್ಲಿ ಕಲಿತಿದ್ದಾರೆ. ಎಲ್ಲಾ ತರಬೇತಿ ಸಂಸ್ಥೆಯಲ್ಲಿ ಸೆಂಟರ್ ನ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ಯಾವುದಾದರೂ ಒಂದು ಮೆಡಿಕಲ್ ಕೋರ್ಸ್ ಸರಕಾರಿ ಕೋಟಾದ ಮೂಲಕ ಪಡೆಯುವ ಫಲಿತಾಂಶ ಪಡೆದಿದ್ದಾರೆ.

ಬೆಂಗಳೂರಿನ ಪಾಲ್ಕನ್ ನಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಸಬಾ ಎಂಬ ನಮ್ಮ ಸೆಂಟರ್ ನ ವಿದ್ಯಾರ್ಥಿನಿ. ಶಾಹಿನ್ ಶೆಫರ್ಡ್ ನಲ್ಲಿ ಮೊದಲ ಸ್ಥಾನ ಕಮ್ಯೂನಿಟಿ ಸೆಂಟರ್ ನ ತನ್ಸಿಹಾ ಎಂಬ ವಿದ್ಯಾರ್ಥಿನಿಗೆ ಲಭಿಸಿದೆ. ಅತ್ಯುತ್ತಮ ಆಯ್ಕೆ ಪ್ರಕ್ರಿಯೆ, ಕೌನ್ಸಿಲಿಂಗ್, ಮೆಂಟರ್ಶಿಪ್, ಮಾನಿಟರಿಂಗ್ ಸಿಸ್ಟಮ್, ನಿರಂತರ ಪ್ರೇರಣೆ ಮತ್ತು ಮೌಲ್ಯಮಾಪನ, ಅರ್ಹರಿಗೆ ವಿದ್ಯಾರ್ಥಿ ವೇತನ ಸೆಂಟರ್ ನೀಡಿದೆ.

ಪ್ರತಿಷ್ಠಿತ ನೀಟ್ ತರಬೇತಿ ಕೇಂದ್ರಗಳಾದ ಪಾಲ್ಕನ್ ಮತ್ತು ಮಂಗಳೂರಿನ ಶಾಹಿನ್ ಶೆಫರ್ಡ್ ಆಡಳಿತ ಮಂಡಳಿಯ ನಿರಂತರ ಪ್ರೋತ್ಸಾಹ ಹಾಗೂ ಬೆಂಬಲವು ಈ ವಿದ್ಯಾರ್ಥಿಗಳಿಗೆ ಸಿಕ್ಕಿದೆ. ಉಳಿದಂತೆ ಬೇರೆ ಬೇರೆ ನೀಟ್ ಪರೀಕ್ಷಾ ತರಬೇತಿ ಕೇಂದ್ರದಲ್ಲೂ ಕಲಿತು ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ.

ಭಾರತ್ ಇನ್ಪ್ರಾಟೆಕ್ ನ ಎಸ್.ಎಂ ಮುಸ್ತಾಫಾ, ಅಲ್ ಮುಝೈನ್ ನ ಝಕರಿಯಾ ಜೋಕಟ್ಟೆ, ಸೆಂಟರ್ ನ ಸಂಚಾಲಕರಾದ ಸತ್ತಾರ್ ಪರ್ಲಡ್ಕ, ವೈಟ್ ಸ್ಟೋನ್ ನ ಬಿ.ಎಂ. ಶರೀಫ್ ಹಾಜಿ, ವರ್ಲ್ಡ್ ವೈಡ್ ಡೆಲ್ಟಾ ಗ್ರೂಪ್ ನ ಅಹ್ಮದ್ ಮೊಹಿದ್ದೀನ್, ಜಿ. ಎ ಬಾವಾ, ಅಸ್ಲಂ ಗುರುಕ್ಕಲ್, ಬೀ ಹ್ಯೂಮನ್ ಸ್ಥಾಪಕರಾದ ಆಸಿಫ್ ಡೀಲ್ಸ್ ರವರು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.