ಸರಕಾರದ ಹಣ ಪೋಲು ಮಾಡುತ್ತಿರುವ PWD ಇಲಾಖೆ; ಯಾರದ್ದೊ ದುಡ್ಡು ಯಲ್ಲಮ್ಮನ ಜಾತ್ರೆ

ರಿಯಲ್ ಎಸ್ಟೇಟ್ ಮಾಫಿಯಾದವರನ್ನು ತೃಪ್ತಿಪಡಿಸಲು, ಕೋಟಿ, ಕೋಟಿ ನದಿಗೆ ಸುರಿಯುತ್ತಿರುವ ಇಲಾಖೆ ಮಳವೂರು ಸೇತುವೆ ಕೆಳಗೆ ಭಾಗದ ಉಳ್ಳವರ ಖಾಸಗಿ ಜಮೀನಿಗೆ PWD ಇಲಾಖೆಯಿಂದ ತಡೆಗೋಡೆ ನಿರ್ಮಿಸುವ ಮಹತ್ಕಾರ್ಯಕ್ಕೆ ಪಿಡಬ್ಲ್ಯೊಡಿ ಇಲಾಖೆ ಕೈ ಹಾಕಿದೆ. ಶಾಂತವಾಗಿ ಹರಿಯುತ್ತಿದ್ದ ವಿಶಾಲವಾದ ಪಲ್ಗುಣಿ ನದಿಗೆ ಮಣ್ಣು ತುಂಬಿಸಿ ನದಿಯನ್ನು ಕಿರಿದಾಗಿಸುವ ಕೆಲಸವು ಭರದಿಂದ ಸಾಗುತ್ತಿದೆ. ನದಿಗೆ ಮಣ್ಣು ಹಾಕಿ ಮಣ್ಣಿನಿಂದ ಅಮೇದ್ಯ ತಿನ್ನುವ ಸಕಲಕಲಾ ಪಂಡಿತ್ಯವನ್ನು ಅರಿತ ಅಧಿಕಾರಿಗಳು ತರಾತುರಿಯಿಂದ ನದಿಗೆ ಮಣ್ಣು ತುಂಬಿಸಿ ತಡೆಗೋಡೆ ನಿರ್ಮಿಸಿ ಉಳ್ಳವರನ್ನು ಉದ್ದಾರ […]

Continue Reading

ಸೌಜನ್ಯ ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಆಕೆ ಹಾಗೂ ಕುಟುಂಬಕ್ಕೆ ನ್ಯಾಯ ಒದಗಿಸಲು ಹೋರಾಟ ನಡೆಸುತ್ತೇನೆ: ಚಿತ್ರನಟ , ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ

ಸೌಜನ್ಯ ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಆಕೆ ಹಾಗೂ ಕುಟುಂಬಕ್ಕೆ ನ್ಯಾಯ ಒದಗಿಸಲು ಹೋರಾಟ ನಡೆಸುತ್ತೇನೆ ಎಂದು ಚಲನಚಿತ್ರ ನಟ , ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹೇಳಿದರು. ಅವರು ಇಂದು ಧರ್ಮಸ್ಥಳ ಗ್ರಾಮದ ಪಾಂಗಳ ಸೌಜನ್ಯ ಮನೆಯಲ್ಲಿ ತಾಯಿ ಕುಸುಮಾವತಿ ಹಾಗೂ ಕುಟುಂಬಸ್ಥರನ್ನು ಭೇಟಿ ಮಾಡಿ ಪತ್ರಕರ್ತರೊಂದಿಗೆ ಮಾತನಾಡಿದರು ‌.ರಾಜ್ಯದ ಗೃಹ ಸಚಿವರ ಜೊತೆಗೆ ಸೌಜನ್ಯ ಮನೆಯರೊಂದಿಗೆ ಮಾತುಕತೆಗಾಗಿ ಮಧ್ಯಸ್ಥಿಕೆ ವಹಿಸುತ್ತೇನೆ. ಸೌಜನ್ಯ ನ್ಯಾಯಕ್ಕಾಗಿ ನನ್ನ ಹೋರಾಟವನ್ನು ಮೀಸಲಿಡುತ್ತೇನೆ‌. ಸೌಜನ್ಯಳು ಕುಸುಮಾವತಿರವರ ಮಗಳು ಮಾತ್ರವಲ್ಲದೆ ನಮ್ಮೆಲ್ಲರ […]

Continue Reading

ಯುವತಿಯ ಬಟ್ಟೆ ಬಿಚ್ಚಿ ವೀಡಿಯೋ ಕಾಲ್ ಮಾಡುವಂತೆ ಪದೇ ಪದೇ ಅಶ್ಲೀಲ ಮೆಸೇಜ್

ಸ್ಥಳೀಯರ ಕೈಗೆ ಸಿಕ್ಕಿಬಿದ್ದು, ಒದೆ ತಿಂದ ಕನ್ಯಾನ ಸಮೀಪದ ಪಂಜಾಜೆ ಸವಾದ್ ವಿಟ್ಲ: ಯುವತಿಯರ ಮೊಬೈಲ್ ಸಂಖ್ಯೆ ಪಡೆದು ಅಶ್ಲೀಲ ಮೆಸೇಜ್ ಮಾಡುತ್ತಾ ಭೇಟಿಯಾಗಲು ಬಂದ ಯುವಕನೊಬ್ಬ ಸ್ಥಳೀಯರ ಕೈಗೆ ಸಿಕ್ಕಿಬಿದ್ದು ಒದೆ ತಿಂದ ಘಟನೆ ವಿಟ್ಲ ಹೊರವಲಯದ ಕುಡ್ತಮುಗೇರು ಎಂಬಲ್ಲಿ ನಡೆದಿದೆ. ಯುವತಿಯರ ಮೊಬೈಲ್ ಸಂಖ್ಯೆಗೆ ಅಶ್ಲೀಲ ಮೆಸೇಜ್ ಕಳುಹಿಸಿ ಮಾನಸಿಕ ಹಿಂಸೆ ನೀಡುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕೊಳ್ನಾಡು ಗ್ರಾಮದ ಕುಡ್ತಮುಗೇರು ಜಂಕ್ಷನ್ ಬಳಿ ನಡೆದಿದೆ.ಯುವತಿಯೋರ್ವಳ ನಂಬರ್ ಕೇಳಿದ್ದ ಈತನಿಗೆ […]

Continue Reading

ಮಂಗಳೂರಿನ ಚಿನ್ನದ ಆಂಗಡಿ ಮಾಲೀಕನ ಕಾರಿನಲ್ಲಿ ದರೋಡೆ ಪ್ರಕರಣ; ಕುಖ್ಯಾತ ರೌಡಿ ತಲ್ಲತ್‌ ಮತ್ತು ನೌಫಾಲ್‌ ಕಾಲಿಗೆ ಅಂಕೋಲಾ ಪೊಲೀಸರಿಂದ ಪೈರಿಂಗ್

ಇತ್ತೀಚೆಗೆ ಅಂಕೋಲಾದ ರಾಮನಗುಳಿ ಬಳಿ ಕ್ರೇಟಾ ಕಾರೊಂದರಲ್ಲಿ 1.14 ಕೋಟಿ ರೂಪಾಯಿ ನಗದು ಸಿಕ್ಕಿದ ಪ್ರಕರಣಕ್ಕೆ ಸಂಬಂಧಿಸಿದ ಮೂವರು ಆರೋಪಿಗಳನ್ನು ಮುಂಬೈಯಿಂದ ಬಂಧಿಸಿ ಕರೆತರುತ್ತಿರುವಾಗ ಪೊಲೀಸರಿಗೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಇಬ್ಬರು ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ನಡೆದಿದೆ. ಮಂಗಳೂರು ಮೂಲದ ಕುಖ್ಯಾತ ರೌಡಿ ತಲ್ಲತ್‌, ನಪ್ಪಾಲ್‌ ಹಾಗೂ ಸಾಹೀಲ್‌ ಅವರನ್ನು ಅಂಕೋಲಾ ಪೊಲೀಸರು ಮುಂಬಯಿಯಲ್ಲಿ ಬಂಧಿಸಿ ಕರೆತರುತ್ತಿದ್ದಾಗ ಹಳಿಯಾಳದ ಭಾಗವತಿ ಅರಣ್ಯ ಪ್ರದೇಶದಲ್ಲಿ ಮೂತ್ರ ವಿಸರ್ಜನೆಗೆಂದು ವಾಹನ ನಿಲ್ಲಿಸಿದ್ದ ವೇಳೆ ತಲ್ಲತ್‌ […]

Continue Reading

ವಿಟ್ಲ: ದಲಿತ ಬಾಲಕಿಯ ಮುಕ್ಕಿದ ವಿಕೃತ ಕಾಮುಕ ಮಹೇಶ್ ಭಟ್ಟನನ್ನು ಬಂಧಿಸಿ ಪೊಲೀಸರೇ. ಇಲ್ಲವೇ ಖಾಕಿ ಕಳಚಿ ಭಟ್ಟನ ತೋಟದಲ್ಲಿ ಕೆಲಸ ಮಾಡಿ: ಸಂತೋಷ್ ಕುಮಾರ್ ಬಜಾಲ್

ವಿಟ್ಲ : ಅಪ್ರಾಪ್ತ ದಲಿತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಬಂಧಿಸಬೇಕು ಹಾಗೂ ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಸಂತ್ರಸ್ತಗೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ವಿಟ್ಲದಲ್ಲಿ ಸಮಾನ ಮನಸ್ಕ ಸಂಘಟನೆಗಳಿಂದ ಆಕ್ರೋಶ ಮೆರವಣಿಗೆ ನಡೆಯಿತು.ವಿಟ್ಲದ ಖಾಸಗಿ ಬಸ್ ನಿಲ್ದಾಣದಿಂದ ಮೆರವಣಿಗೆಯಲ್ಲಿ ಹೊರಟ ಪ್ರತಿಭಟನಾಕಾರರು ನಾಡ ಕಛೇರಿ ಬಳಿ ಸಾರ್ವಜನಿಕ ಸಭೆ ನಡೆಸಿದರು. ದಲಿತ ಹಕ್ಕುಗಳ ರಾಜ್ಯ ಸಮಿತಿ ಮುಖಂಡರಾದ ಈಶ್ವರಿ ಪದ್ಮುಂಜ ಮಾತನಾಡುತ್ತಾ ದಲಿತ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ […]

Continue Reading

ಉಳಾಯಿಬೆಟ್ಟು: ‘ಮರಣದ’ ಹಂಪ್ಸ್ ಗೆ ಕೊನೆಗೂ ಮುಕ್ತಿ.. ವೈಜ್ಞಾನಿಕ ರೀತಿಯಲ್ಲಿ ಕಾಮಗಾರಿಗೆ ಸೂಚನೆ

ಸ್ಪೆಷಲ್ ನ್ಯೂಸ್ ವರದಿಗೆ ಸ್ಪಂದಿಸಿದ ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಉಳಾಯಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರ್ಮಂಕಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಳಿಯ ಲೋಕೋಪಯೋಗಿ ರಸ್ತೆಯಲ್ಲಿ ಅಪಾಯಕಾರಿ ಹಂಪ್ಸ್ ಮರಣದ ಹಂಪ್ಸ್ ಆಗಿ ಹಲವಾರು ಪ್ರಾಣ ಹಾನಿಗಳು ಸಂಭವಿಸಿದ ಬಗ್ಗೆ ಕೆಲವು ದಿನಗಳ ಹಿಂದೆಯಷ್ಟೇ ಸ್ಪೆಷಲ್ ನ್ಯೂಸ್ ಮೀಡಿಯಾ ವಿಸ್ತೃತ ವರದಿಯನ್ನು ಬಿತ್ತರಿಸಿತ್ತು. ಇತ್ತೀಚೆಗೆ ನಾಲ್ಕರಿಂದ ಐದು ಅಪಘಾತ ಪ್ರಕರಣಗಳು ಅವೈಜ್ಞಾನಿಕ ಹಂಪ್ಸ್ ನಿಂದಾಗಿ ನಡೆದಿತ್ತು. ಮೊನ್ನೆಯಷ್ಟೇ ಇಫ್ತಾರ್ ಗಾಗಿ ಸಂಬಂಧಿಕರ ಮನೆಗೆ ಬಂದಿದ್ದ ಗುರುಪುರದ ಮಹಿಳೆಯೊಬ್ಬರು […]

Continue Reading

ಉದ್ಯಮಿ ರಾಕೇಶ್‌ ವೈಷ್ಣವ್‌ ಎಂಬುವರ ಹನಿಟ್ರ್ಯಾಪ್‌; ಲಕ್ಷಾಂತರ ಸುಲಿಗೆ ಪ್ರಕರಣ

ಡಿವೈಎಸ್ಪಿ, ಪಿಎಸ್‌ಐ ಹೆಸರು ಬಳಸಿ ಹಣ ವಸೂಲಿ, ಸಿಸಿಬಿ ಪೊಲೀಸರ ತನಿಖೆಯಿಂದ ಬಹಿರಂಗ ಉದ್ಯಮಿ ರಾಕೇಶ್‌ ವೈಷ್ಣವ್‌ ಎಂಬುವರನ್ನು ಹನಿಟ್ರ್ಯಾಪ್‌ ಮಾಡಿ ಲಕ್ಷಾಂತರ ರೂ. ಸುಲಿಗೆ ಮಾಡಿದ್ದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಶಿಕ್ಷಕಿ ಮತ್ತು ಆಕೆಯ ಪ್ರಿಯಕರ ಸೇರಿ ಮೂವರು ಆರೋಪಿಗಳು ಡಿವೈಎಸ್ಪಿ ಹಾಗೂ ಪಿಎಸ್‌ಐ ಹೆಸರು ಬಳಸಿಕೊಂಡಿರುವುದು ಸಿಸಿಬಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಡಿವೈಎಸ್ಪಿ ಅರುಣ್‌ ಮತ್ತು ಪಿಎಸ್‌ಐ ಮುರಳಿ ಎಂಬುವರ ಹೆಸರು ಬಳಸಿಕೊಂಡಿದ್ದಾರೆ. ಆದರೆ, ಪ್ರಕರಣಕ್ಕೂ ಅಧಿಕಾರಿಗಳಿಗೂ ಯಾವುದೇ ಸಂಬಂಧ ಇಲ್ಲ ಎಂಬುದು ಸದ್ಯದ […]

Continue Reading

ಕೋಟೆಕಾರ್ ಬೀದಿಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು CITU ಒತ್ತಾಯ

ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ನೂರಾರು ಸಂಖ್ಯೆಯ ಬೀದಿಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು CITU ಸಂಯೋಜಿತ ದ.ಕ.ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘವು ಕೋಟೆಕಾರ್ ಪಟ್ಟಣ ಪಂಚಾಯತ್ ಆಡಳಿತವನ್ನು ಒತ್ತಾಯಿಸಿದೆ. ಈ ಬಗ್ಗೆ ಇಂದು(02-04-2025) ಸಂಘದ ಉನ್ನತ ಮಟ್ಟದ ನಿಯೋಗವೊಂದು ಪಂಚಾಯತ್ ನ ಮುಖ್ಯಾಧಿಕಾರಿಗಳನ್ನು ಭೇಟಿಯಾಗಿ ಮನವಿಯನ್ನು ಅರ್ಪಿಸಿತು. ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನೂರಾರು ಸಂಖ್ಯೆಯ ಬೀದಿಬದಿ ವ್ಯಾಪಾರಸ್ಥರು ತಮ್ಮ‌ಪಾಡಿಗೆ ಬದುಕು ಕಟ್ಟಿಕೊಂಡು ದಿನಕಳೆಯುತ್ತಿದ್ದಾರೆ.ಅದರಲ್ಲಿ ಕೋಟೆಕಾರ್ ಬೀರಿ ಜಂಕ್ಷನ್ ಬಳಿ ಕಳೆದ ಹಲವಾರು ವರ್ಷಗಳಿಂದ ದೈನಂದಿನ […]

Continue Reading

ಮಂಗಳೂರು ಮನಪಾ ಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತದಲ್ಲಿ ಅವ್ಯವಸ್ಥೆ; ಜನರ ದುರ್ಗತಿಗೆ ಕಾರಣರಾದವರ ನಿಷ್ಕ್ರಿಯತೆ

ಖಾಲಿ ಜಮೀನುಗಳಿಗೆ ಇ-ಖಾತಾ ಪಡೆಯಲು ಎನ್‌ಕಂಬರೆನ್ಸ್ ಸರ್ಟಿಫಿಕೇಟ್ (ಇಸಿ) ಡಿ.ಸಿ. ಹೊಸ ಕಟ್ಟಡದ ನಿರ್ಮಾಣದಲ್ಲಿ ಬ್ಯುಸಿ”; ಶಾಸಕರು, ಸಂಸದರು ಈ ಸಮಸ್ಯೆಯ ಬಗ್ಗೆ ಮೌನಿ.! ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಒಂದು ವಿಚಿತ್ರ ಪರಿಸ್ಥಿತಿ ಎದುರಾಗಿದೆ. ಖಾಲಿ ಜಮೀನುಗಳಿಗೆ ಹೊಸ ಇ-ಖಾತಾ ನೀಡುವ ಸಂಬಂಧ ಮಂಗಳೂರು ಮಹಾನಗರಪಾಲಿಕೆ ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ಕಾವೇರಿ 2.0 ಸಾಫ್ಟ್‌ವೇರ್‌ನ ರಾಜ್ಯ ಮಟ್ಟದ ಮೇಲ್ವಿಚಾರಕರು ಜನರನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಖಾಲಿ ಜಮೀನುಗಳಿಗೆ ಇ-ಖಾತಾ ಪಡೆಯಲು ಎನ್‌ಕಂಬರೆನ್ಸ್ […]

Continue Reading

ವಕ್ಫ್ ಆಸ್ತಿಯೆಂದು ಗುರುತಿಸಿದ ಹಾಗೂ ಘೋಷಿಸಿದ ಸರ್ಕಾರದ ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಪರಿಗಣಿಸಲಾಗುವುದಿಲ್ಲ

ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಿದೆ. ಕಾನೂನು ಸಚಿವ ಕಿರೆಣ್ ರಿಜಿಜು ವಿರೋಧ ಪಕ್ಷಗಳ ಗದ್ದಲದ ನಡುವೆಯೂ ಈ ಮಸೂದೆಯನ್ನು ಮಂಡಿಸಿದ್ದಾರೆ. ವಕ್ಫ್ ತಿದ್ದುಪಡಿ ಮಸೂದೆಯಲ್ಲಿನ ಪ್ರತಿ ಅಂಶವನ್ನೂ ಸದನಕ್ಕೆ ಕಾನೂನು ಸಚಿವರು ಓದಿ ಹೇಳಿದಾಗ ಎನ್‌ಡಿಎ ಸಂಸದರು ಬೆಂಚ್ ತಟ್ಟುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿದರೆ, ವಿರೋಧ ಪಕ್ಷಗಳು ಕೆಲ ಕಾಲ ಗದ್ದಲ ಎಬ್ಬಿಸಿದವು. ವಕ್ಫ್ ತಿದ್ದುಪಡಿ ಮಸೂದೆಯಲ್ಲಿರುವ ಅಂಶಗಳ ಪೈಕಿ ಈ ಮಸೂದೆ ಅಂಗೀಕಾರವಾಗುವ ಮುನ್ನ ಹಾಗೂ ಅಂಗೀಕಾರವಾದ ನಂತರ ವಕ್ಫ್ ಆಸ್ತಿಯೆಂದು […]

Continue Reading