ಹಿಂದೂ ಸಹೋದರನ ಕರುಣಾಜನಕ ಕಥೆ.. ಮನೆ ಬ್ಯಾಂಕ್ ಜಪ್ತಿ ತಪ್ಪಿಸಲು ಕಿಡ್ನಿ ಮಾರಲು ಮುಂದಾದ.. ನೆರವಿಗೆ ಬಂದರು ಮುಸ್ಲಿಂ ಧರ್ಮಗುರು..!

ಮುಸ್ಲಿಮರು ಜಿಹಾದಿಗಳು ಅನ್ನುವವರೇ ಕರಾವಳಿಯ ಈ ಮನಕಲಕುವ ಘಟನೆಯನ್ನೊಮ್ಮೆ ಓದಿ ಮುಸ್ಲಿಂ ಧರ್ಮಗುರುಗಳು ಜಿಹಾದಿಗಳು, ಮತಾಂತರ ಮಾಡುವವರು ಎಂದು ಒಂದು ವರ್ಗದ ಬ್ರೈನ್ ವಾಶ್ ಮಾಡಿ ರಾಜಕಾರಣದ ಲಾಭ ಪಡೆಯಲು ಯತ್ನಿಸುತ್ತಿರುವುದು ನಮಗೆಲ್ಲ ಗೊತ್ತೇ ಇದೆ. ಮದರಸಗಳು ಮಾನವೀಯತೆಯ ಮುಖವನ್ನು ಕಲಿಸುತ್ತದೆಯೇ ಹೊರತು, ಬೇರೇನೂ ಇಲ್ಲ. ಅಲ್ಲಿಯೂ ಕೆಲವು ಮತೀಯ ಶಕ್ತಿಗಳು ಭಯೋತ್ಪಾದನೆ ಕಲಿಸುತ್ತಾರೆ ಎಂದು ಇತರರನ್ನು ನಂಬಿಸುವ ಕೆಲಸ ಮಾಡಿಸುತ್ತಾರೆ. ಮೆದುಳನ್ನು ಅಡವಿಟ್ಟ ಮಂದಿ ಇದೇ ನಿಜವೆಂದು ಡಂಗುರ ಸಾರುತ್ತಾರೆ. ಆದರೆ ಕರಾವಳಿಯಲ್ಲಿ ನಡೆದ ಮನಕಲಕುವ […]

Continue Reading

ಮುಂಬೈ ದಾಳಿಯ ಅಪರಾಧಿ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ಯುಎಸ್ ಸುಪ್ರೀಂ ಕೋರ್ಟ್ ತೆರವುಗೊಳಿಸಿದೆ

ವಾಷಿಂಗ್ಟನ್: ಮುಂಬೈ ದಾಳಿಯ ಅಪರಾಧಿ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ಯುಎಸ್ ಸುಪ್ರೀಂ ಕೋರ್ಟ್ ತೆರವುಗೊಳಿಸಿದ್ದು, ಕ್ರಮದ ವಿರುದ್ಧ ಅವರು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದೆ. 2008 ರ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಪಾಕಿಸ್ತಾನಿ ಮೂಲದ ಕೆನಡಾದ ಪ್ರಜೆ ರಾಣಾ ಅವರನ್ನು ಹಸ್ತಾಂತರಿಸುವಂತೆ ಭಾರತ ಕೋರಿತ್ತು. ಭಾರತಕ್ಕೆ ಹಸ್ತಾಂತರಿಸದಿರಲು ರಾಣಾಗೆ ಇದು ಕೊನೆಯ ಕಾನೂನು ಅವಕಾಶವಾಗಿತ್ತು. ಇದಕ್ಕೂ ಮೊದಲು, ಅವರು ಸ್ಯಾನ್ ಫ್ರಾನ್ಸಿಸ್ಕೋದ ಉತ್ತರ ಸರ್ಕ್ಯೂಟ್‌ಗಾಗಿ US ಕೋರ್ಟ್ ಆಫ್ ಅಪೀಲ್ಸ್ ಸೇರಿದಂತೆ ಹಲವಾರು ಫೆಡರಲ್ […]

Continue Reading

ವಾರಕ್ಕೆ 90 ಗಂಟೆಗಳ ಕೆಲಸ ಅವೈಜ್ಞಾನಿಕ ಹಾಗೂ ಅಮಾನವೀಯ: ಸೈಯ್ಯದ್ ಮುಜೀಬ್

ಇತ್ತೀಚಿಗೆ ಎಲ್ ಅಂಡ್ ಟಿ ಯ ಅಧ್ಯಕ್ಷರು ವಾರದಲ್ಲಿ 90 ಗಂಟೆಯ ಕೆಲಸ ಮಾಡಬೇಕೆಂದು ಹೊರಡಿಸಿರುವ ಫಾರ್ಮಾನು ಅವೈಜ್ಞಾನಿಕ, ಅಸಮರ್ಥನೀಯ ಹಾಗೂ ಅಮಾನವೀಯವಾಗಿದೆ. ಈಗಾಗಲೇ ನಿರುದ್ಯೋಗದಿಂದ ಬಳಲುತ್ತಿರುವ ದೇಶದಲ್ಲಿ ವಾರದಲ್ಲಿ 70 ಗಂಟೆ 90 ಗಂಟೆ ಕೆಲಸದ ಚರ್ಚೆಗಳು ಮತ್ತಷ್ಟು ನಿರುದ್ಯೋಗವನ್ನು ಹುಟ್ಟು ಹಾಕಲಿದೆ. ಮಾತ್ರವಲ್ಲದೆ ಅದು ಹಲವು ಸಾಮಾಜಿಕ ಸಮಸ್ಯೆಗಳನ್ನು ಹಾಗೂ ವಿವಿಧ ಆಯಾಮಗಳ ಸಮಸ್ಯೆಗಳನ್ನು ಉಲ್ಬಣಗೊಳಿಸಲಿದೆ. ಇದ್ಯಾವುದನ್ನು ಮುಂದಾಲೋಚಿಸದೆ ಕೇವಲ ತಮ್ಮ ಲಾಭಕಷ್ಟೇ ಸೀಮಿತವಾಗಿ ಬಂಡವಾಳಗಾರರು ಅಲೋಚಿಸುತ್ತಿರುವುದು ಸಮಾಜದ ಒಟ್ಟಾರೆ ಬೆಳವಣಿಗೆಗೆ ಪೂರಕವಲ್ಲ ಎಂದು […]

Continue Reading

“RGUHS ವಿಸಿ ಪೋಸ್ಟ್ ಬಿಕರಿಯಾಗದಿರಲಿ..”, ರಾಜ್ಯ ಸರ್ಕಾರಕ್ಕೆ CRF ಹೀಗೊಂದು ಸಲಹೆ

ಲಾಭಿಗೆ ಮಣಿದು RGUHSಗೆ ಭ್ರಷ್ಟರನ್ನು ಕುಲಪತಿ ಮಾಡಿದರೆ ಜೋಕೆ; ಸರ್ಕಾರಕ್ಕೆ CRF ಪರೋಕ್ಷ ಎಚ್ಚರಿಕೆ? RGUHS ಕುಲಪತಿ ನೇಮಕ ವಿಚಾರ; ಅರ್ಜಿ ಅಹ್ವಾನ ಬೆನ್ನಲ್ಲೇ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ CRF RGUHS ಕುಲಪತಿಯಾಗಿ ಭ್ರಷ್ಟಾತೀತ ವ್ಯಕಿಯನ್ನೇ ನೇಮಕ ಮಾಡಿ; ಸರ್ಕಾರಕ್ಕೆ CRF ಪತ್ರ ಬೆಂಗಳೂರು: ಹಗರಣಗಳ ಆಗರವಾಗಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಈ ಬಾರಿಯಾದರೂ ಭ್ರಷ್ಟಾಚಾರ-ಮುಕ್ತ, ಸೂಕ್ತ ವ್ಯಕ್ತಿಯನ್ನು ಕುಲಪತಿಗಳನ್ನಾಗಿ ನೇಮಕ ಮಾಡುವಂತೆ ‘ಸಿಟಿಜನ್ ರೈಟ್ಸ್ ಫೌಂಡೇಶನ್’ ಸಿಎಂ ಹಾಗೂ ವೈದ್ಯಕೀಯ ಶಿಕ್ಷಣ […]

Continue Reading

ವಿಟ್ಲ: ಸಿಂಗಾರಿ ಹಾಜಿ ಮನೆಯಲ್ಲಿ, ಇ ಡಿ ಅಧಿಕಾರಿಗಳ ಸೋಗಿನಲ್ಲಿ ದರೋಡೆ ಪ್ರಕರಣ: ಅಂತರಾಜ್ಯ ದರೋಡೆಕೋರನ ಬಂಧನ, ಕಾರು, ನಗದು ವಶ

ಜನವರಿ 3ರಂದು ರಾತ್ರಿ ದರೋಡೆ ಪ್ರಕರಣ ನಡೆದಿತ್ತು. 06 ಜನ ಅಪರಿಚಿತರು ಇ ಡಿ ಅಧಿಕಾರಿಗಳೆಂದು ನಂಬಿಸಿ, ಮನೆಯ ಶೋಧನೆ ನಡೆಸಿ, ಸುಮಾರು 30 ಲಕ್ಷ ನಗದನ್ನು ದರೋಡೆ ಮಾಡಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಟ್ಲ ಪೊಲೀಸ್‌ ಠಾಣೆಯಲ್ಲಿ ಅ.ಕ್ರ 02/2025 ರಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸ್ ಅಧೀಕ್ಷಕರಾದ ಯತೀಶ್ ಎನ್, ಐ.ಪಿ.ಎಸ್ ರವರ ಅದೇಶದ ಮೇರೆಗೆ, ಆರೋಪಿಗಳ ಪತ್ತೆಗಾಗಿ ನಾಲ್ಕು ವಿಶೇಷ ತನಿಖಾ ತಂಡ ರಚಿಸಿ, ಅಪರಾಧಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಿ ದಿನಾಂಕ 23-01-2025 ರಂದು […]

Continue Reading

ಮಂಗಳೂರಿನಲ್ಲಿ ಪಬ್ ದಾಳಿ ಮಾದರಿಯಲ್ಲಿ ಯುನಿಸೆಕ್ಸ್ ಮಸಾಜ್ ಸೆಂಟರ್ ಮೇಲೆ ದಾಳಿ ನಡೆಸಿದ ಶ್ರೀರಾಮಸೇನೆ

ಮಂಗಳೂರಿನಲ್ಲಿ ಹೋಂ ಸ್ಟೇ ದಾಳಿ, ಪಬ್ ದಾಳಿ ಯನ್ನು ನೆನಪಿಸುವ ರೀತಿಯಲ್ಲಿ ಇಂದು ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಮೀಪದ ಯುನಿಸೆಕ್ಸ್ ಮಸಾಜ್ ಸೆಂಟರ್ ಮೇಲೆ ದಾಳಿ ನಡೆಸಿದ ಘಟನೆ ವರದಿಯಾಗಿದೆ. ಕಲರ್ಸ್ ಹೆಸರಿನ ಮಸಾಜ್ ಸೆಂಟರ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಅನ್ನುವ ಆರೋಪದಲ್ಲಿ ದಾಳಿ ನಡೆಸಲಾಗಿದೆ ಅನ್ನಲಾಗಿದೆ. ಶ್ರೀರಾಮಸೇನೆ ಮುಖಂಡ ಪ್ರಸಾದ್ ಅತ್ತಾವರ ನೇತೃತ್ವದ ಹುಡುಗರು ದಾಳಿ ನಡೆಸಿದ್ದು ಎನ್ನಲಾಗಿದ್ದು, ದಾಳಿ ನಡೆಸುವ ವೇಳೆ ಕ್ಯಾಮರಾಮೆನ್ ಕರೆದುಕೊಂಡು ಹೋಗಿದ್ದರು ಅನ್ನಲಾಗಿದ್ದು ದಾಳಿಯ ವಿಡಿಯೋ ಬಿಡುಗಡೆ ಮಾಡಿದ್ದಾರೆ […]

Continue Reading

ಮೂಡಾ ಅಧ್ಯಕ್ಷರು ಭಾರೀ ಚಪ್ಪೆಯಂತೆ; ತಿಂಗಳಿಗೆ ಲಕ್ಷ, ಲಕ್ಷ ಮಾಮೂಲಿ ಹೋಗುತ್ತಿದೆಯಂತೆ.! ಕಮೀಷನರ್ ಕಮ್ಯುನಲ್ ಅಂತೆ. ಮೂಡಾ ದಲ್ಲಾಳಿಗಳ ಆಡಿಯೋ ಬಹಿರಂಗ..!

ಮುಗಿಯದ ಮೂಡಾ ಕರ್ಮಕಾಂಡ.! ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮುಂಡಾಮೋಚ್ ಪುರಾಣಕ್ಕೆ ಕೊನೆಯೇ ಇಲ್ಲವೇ ಅನ್ನುವ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿದೆ. ಹಿಂದಿನ ಆಯುಕ್ತರಾಗಿದ್ದ ಮನ್ಸೂರ್ ಅಲಿ ಲೋಕಾಯುಕ್ತ ರೈಡ್ ಗೆ ಸಿಲುಕಿ ಜೈಲು ಪಾಲಾಗಿದ್ದರು. ಆನಂತರ ಬಂದ ಆಯುಕ್ತೆ ರಫ್ ಅಂಡ್ ಟಫ್ ಅನ್ನುವ ಮಾತುಗಳು ಕೇಳಿ ಬಂದಿತ್ತು. ಮೂಡಾದ ಹಣೆಬರಹವೋ ಏನೋ ಮೂರೇ ತಿಂಗಳಲ್ಲಿ ಟಫ್ ಅಧಿಕಾರಿ ಠುಸ್ ಆಗಿದ್ದರು. ಲೋಕಾಯುಕ್ತ ಭೇಟೆ ಕಚೇರಿಗೆ ಮಾಮೂಲಿಯಾಯಿತು. ದಲ್ಲಾಳಿಗಳ ಸಾಮ್ರಾಜ್ಯವಾಗಿ ಮೂಡಾ ಪರಿವರ್ತನೆಗೊಂಡಿತು. ಅಧಿಕಾರಿಗಳು ಇಲ್ಲದೇ ಇದ್ದಾಗ […]

Continue Reading

ಆಪೆ ಗೂಡ್ಸ್ ಚಾಲಕನ ಹುಚ್ಚಾಟ.ಆಪೆ ಚಾಲಕನ ಬದುಕಿಸಲು ಹೋಗಿ ಅಪಘಾತಕ್ಕೀಡಾದ ಬಸ್..

ವಿಟ್ಲ-ಸಾಲೆತ್ತೂರು ರಸ್ತೆಯ ಕಡಂಬು ಇಳಿಜಾರು ರಸ್ತೆಯಲ್ಲಿ ಭೀಕರ ಆಕ್ಸಿಡೆಂಟ್ ನಡೆದಿದೆ. ವಿಟ್ಲದ ಕಡೆಗೆ ಹೋಗುತ್ತಿದ್ದ ಗೂಡ್ಸ್ ಆಪೆ ರಿಕ್ಷಾ ಚಾಲಕ ತೀರಾ ನಿರ್ಲಕ್ಷ್ಯದಿಂದ ಚಲಾಯಿಸಿದ ಕಾರಣ ವಿಟ್ಲದಿಂದ ಮುಡಿಪು ಮಾರ್ಗವಾಗಿ ಮಂಗಳೂರಿಗೆ ಸಂಚರಿಸುವ ಖಾಸಗಿ ಬಸ್ಸಿಗೆ ಡಿಕ್ಕಿ ಹೊಡೆಯಲು ಮುಂದಾಗಿದೆ. ಅಪಘಾತದ ಮುನ್ಸೂಚನೆ ಅರಿತ ಬಸ್ ಚಾಲಕನ ಸಮಯಪ್ರಜ್ಞೆಯಿಂದಾಗಿ ಗೂಡ್ಸ್ ಆಪೆ ಚಾಲಕನ ಪ್ರಾಣ ಉಳಿಯುವಂತಾಗಿದೆ.ಬಸ್ಸಿಗೆ ಡಿಕ್ಕಿ ಹೊಡೆಯಲು ಶರವೇಗದಲ್ಲಿ ಬಂದ ಆಪೆ ಗೂಡ್ಸ್ ವಾಹನವನ್ನು ತಪ್ಪಿಸುವ ಭರದಲ್ಲಿ ಬಸ್ ರಸ್ತೆ ಬದಿಯ ಧರೆಗೆ ಡಿಕ್ಕಿ ಹೊಡೆದಿದ್ದರೂ […]

Continue Reading

ಮಂಗಳೂರು: ನಾಳೆ ಗುರುವಾರ ಕೊರಗರ ಆಕ್ರೋಶ ರಾಲಿಯಲ್ಲಿ ನವೀನ್ ಸೂರಿಂಜೆ ಬರೆದಿರುವ ‘ಕೊರಗರು-ತುಳುನಾಡಿನ ಮಾತೃಸಮುದಾಯ’ ಪುಸ್ತಕ ಬಿಡುಗಡೆ

ಕೊರಗ ಸಮುದಾಯದ ಬೇಡಿಕೆಗಳ ಈಡೇರಿಕೆಗಾಗಿ ಜನವರಿ 23 ಗುರುವಾರದಂದು ನಡೆಯುತ್ತಿರುವ ಐತಿಹಾಸಿಕ ‘ಆದಿವಾಸಿ ಆಕ್ರೋಶ ರ‌್ಯಾಲಿ’ಯಲ್ಲಿ ಪತ್ರಕರ್ತ, ಬರಹಗಾರ ನವೀನ್ ಸೂರಿಂಜೆ ಬರೆದಿರುವ ‘ಕೊರಗರು-ತುಳುನಾಡಿನ ಮಾತೃಸಮುದಾಯ’ ಪುಸ್ತಕ ಬಿಡುಗಡೆ ನಡೆಯಲಿದೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಪ್ರಕಟನೆ ತಿಳಿಸಿದೆ. ಕರಾವಳಿಯ ಮೂಲನಿವಾಸಿ ಕೊರಗ ಸಮುದಾಯ ಇಂದು ಅಳಿವಿನಂಚಿನಲ್ಲಿದೆ. ಸಾಂಸ್ಕೃತಿಕವಾಗಿ, ಐತಿಹ್ಯವಾಗಿ ಈ ಕೊರಗ ಸಮುದಾಯ ಕರಾವಳಿಯನ್ನು ಒಂದು ಕಾಲದಲ್ಲಿ ಆಳ್ವಿಕೆ ಮಾಡಿತ್ತು. ಆದರೆ ಕಾನೂನಾತ್ಮಕವಾಗಿ ತುಂಡು ಭೂಮಿಯನ್ನೂ ಹೊಂದಿಲ್ಲ. ಜಾತ್ರೆ, ನೇಮ, ಕೋಲ, ಕಂಬಳ, […]

Continue Reading

ನೆಟ್ಟಾರು ಹತ್ಯೆ: 21ನೇ ಆರೋಪಿ ಪೊಲೀಸ್ ಬಲೆಗೆ

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಅತಿಕ್ ಅಹಮದ್ ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಂಧಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ 2022ರ ಜುಲೈನಲ್ಲಿ ಪ್ರವೀಣ್ ನೆಟ್ಟಾರ್ ಹತ್ಯೆ ನಡೆದಿತ್ತು. ಪೊಲೀಸರು ಈವರೆಗೂ 21 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅತೀಕ್, ಪ್ರಕರಣದ ಮುಖ್ಯ ಪಿತೂರಿಕಾರ ಮುಸ್ತಫಾ ಪೈಚಾರ್ ಅವರಿಗೆ ಆಶ್ರಯ ನೀಡಿ ಸಹಾಯ ಮಾಡಿದ್ದರು. ಮುಸ್ತಫಾ ಈ ಹತ್ಯೆಯನ್ನು ಯೋಜಿಸಿ ನಡೆಸಿದ್ದರು. ಆನಂತರ ಮುಸ್ತಫಾ ಪರಾರಿಯಾಗಿದ್ದರು ಮತ್ತು ಅತೀಕ್ ಅವರ ಪರಾರಿಗೆ ಸಹಾಯ […]

Continue Reading