ಜನವರಿ 16 ಕ್ಕೆ ಕರಾವಳಿ ಉತ್ಸವ ಮುಗಿಯುತ್ತಾ.?

ಖಾಸಗಿ ಪುಡ್ ಫೆಸ್ಟ್ ಕಾರ್ಯಕ್ರಮಕ್ಕೆ ಮೂರು ದಿನ ಮುಂಚಿತವೇ ಕರಾವಳಿ ಉತ್ಸವಕ್ಕೆ ತೆರೆ.! ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆಯುತ್ತಿರುವ ಕರಾವಳಿ ಉತ್ಸವ ಜನವರಿ 19 ರವರೆಗೆ ನಡೆಯಲಿದೆ ಎಂದು ಈ ಹಿಂದೆ ಘೋಷಿಸಲಾಗಿತ್ತು. ಆದರೆ ಜನವರಿ 16 (ಇಂದು) ಮುಕ್ತಾಯಗೊಳ್ಳಲಿದೆ ಅನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಅಲ್ಲಿ ಕಾರ್ಯಾಚರಿಸುವ ಸ್ಟಾಲ್ ವ್ಯಾಪಾರಿಗಳಿಗೆಗಳಿಗೆ ಮೌಖಿಕವಾಗಿ ಈ ಬಗ್ಗೆ ಆದೇಶ ನೀಡಲಾಗಿದೆ ಅನ್ನಲಾಗಿದೆ. ಜನವರಿ 19 ಕ್ಕೆ ಮುಕ್ತಾಯವಾಗಬೇಕಿದ್ದ ಕರಾವಳಿ ಉತ್ಸವ ದಿಢೀರನೆ […]

Continue Reading

45 ಮಂದಿ ರೌಡಿ ಶೀಟರ್ ಗಳು ಗಡೀಪಾರು ; ಗೂಂಡಾ ಕಾಯ್ದೆ ಹಾಕಲು ಚಿಂತನೆ

ಗಂಭೀರ ಪ್ರಕರಣದ ಕೆಲವು ಅಪರಾಧಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಗಡೀಪಾರು ಮಾಡಿದ ಪೊಲೀಸ್ ಆಯುಕ್ತರು ಹುಬ್ಬಳ್ಳಿ -ಧಾರವಾಡ ಜಿಲ್ಲೆಯನ್ನು ಅಪರಾಧ ಮುಕ್ತ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ನಿರಂತರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಹುಬ್ಬಳ್ಳಿ-ಧಾರವಾಡದ 45 ಮಂದಿ ಅಪರಾಧಿಗಳನ್ನು ವಿವಿಧ ಜಿಲ್ಲೆಗೆ ಆರು ತಿಂಗಳ ಕಾಲ ಗಡೀಪಾರು ಮಾಡಿ ಆದೇಶಿಸಿದ್ದಾರೆ. ಕೊಲೆ, ಕೊಲೆಯತ್ನ, ಸುಲಿಗೆ, ದರೋಡೆ, ಕಳ್ಳತನ, ಹಲ್ಲೆ, ದೊಂಬಿ, ಮಾನಭಂಗ ಸೇರಿದಂತೆ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದವರನ್ನು […]

Continue Reading

ಸಿ.ಎಂ ಸಿದ್ದರಾಮಯ್ಯಗೆ ಇಂದು ಸಂಕಷ್ಟದ ದಿನ. ಮುಡಾ ಕೇಸ್ ಸಿಬಿಐಗೆ ವರ್ಗಾವಣೆ ಮಾಡುವ ಕುರಿತು ಇಂದು ನ್ಯಾಯಾಲಯ ಮಹತ್ವದ ತೀರ್ಪು ಸಾಧ್ಯತೆ.

ಸಿದ್ದರಾಮಯ್ಯರವರಿಗೆ ಇಂದು ಸಂಕಷ್ಟದ ದಿನ. ಮುಡಾ ಕೇಸ್ ಸಿಬಿಐಗೆ ವರ್ಗಾವಣೆ ಮಾಡುವ ಕುರಿತು ಇಂದು ನ್ಯಾಯಾಲಯ ಮಹತ್ವದ ತೀರ್ಪು ಕೊಡಲಿದೆ. ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ದೂರುದಾರ ಸ್ನೇಹಮಹಿ ಕೃಷ್ಣ ಸಲ್ಲಿಸಿರುವ ಅರ್ಜಿಯ ಸಂಬಂಧ ಬುಧವಾರ ಮಹತ್ತರವಾದ ಆದೇಶ ಹೊರ ಬೀಳುವ ಸಾಧ್ಯತೆ ಇದೆ. ಧಾರವಾಡ ವಿಭಾಗೀಯ ಪೀಠದಲ್ಲಿ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಇಂದು ಬಹುತೇಕ ಈ ಪ್ರಕರಣದ ಆದೇಶ ನೀಡುವ ಸಾಧ್ಯತೆ ಹೆಚ್ಚಿದೆ. ದೂರುದಾರ ಸ್ನೇಹಮಹಿ ಕೃಷ್ಣ, ಇವತ್ತು ನಿಶ್ಚಿತವಾಗಿಯೂ ಪ್ರಕರಣದ ತನಿಖೆ ಸಿಬಿಐಗೆ […]

Continue Reading

ಟ್ಯಾಕ್ಸಿ ಡ್ರೈವರ್ ಗಳ ಬದುಕಿಗೆ ಬೆಳಕು ನೀಡುವ, ಸಂಕಷ್ಟಕ್ಕೆ ಮಿಡಿಯುವ, ಚಾಲಕರ ಪಾಲಿಗೆ ಆಪದ್ಭಾಂಧವ ಕರುಣ ಟ್ಯಾಕ್ಸಿ ಡ್ರೈವರ್ ಅಸೋಸಿಯೇಷನ್ (ರಿ)

ವಿಭಿನ್ನ ಕಾನ್ಸೆಪ್ಟ್ ಮೂಲಕ ಗಮನ ಸೆಳೆಯುತ್ತಿರುವ ಸಂಸ್ಥೆಯ ಎರಡನೇ ವಾರ್ಷಿಕೋತ್ಸವ ಜನವರಿ 21 ರಂದು ಬಜಪೆಯಲ್ಲಿ ಟ್ಯಾಕ್ಸಿ ಡ್ರೈವರ್ ಗಳೆಲ್ಲ ಸೇರಿ ಕರುಣ ಟ್ಯಾಕ್ಸಿ ಡ್ರೈವರ್ ಅಸೋಸಿಯೇಷನ್ (ರಿ) ಎಂಬ ಸಂಸ್ಥೆಗಳನ್ನು ಹುಟ್ಟು ಹಾಕಿ ಹಲವಾರು ವರ್ಷಗಳಿಂದ ಸಾಮಾಜಿಕ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ವಾಟ್ಸಾಪ್ ನಲ್ಲಿ ಹೆಲ್ಪ್ ಲೈನ್ ಹೆಸರಿನಲ್ಲಿ ಟ್ಯಾಕ್ಸಿ ಡ್ರೈವರ್ ಗಳೆಲ್ಲ ಒಟ್ಟು ಸೇರಿ ಕಾರ್ಯಾಚರಿಸುತ್ತಿದ್ದು, ಹಲವು ಜನಪರ ಕಾರ್ಯಕ್ರಮಗಳನ್ನು ಕೈಗೊಂಡ ಹೆಗ್ಗಳಿಕೆ ಈ ಸಂಸ್ಥೆಗಿದೆ. ಕಳೆದ ವರ್ಷ ಆಗಸ್ಟ್ 7, […]

Continue Reading

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯತಿ, ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಎಪ್ರಿಲ್, ಮೇ ತಿಂಗಳಲ್ಲಿ ಖಚಿತ.

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯತಿಗೆ, ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದು ಬಾಕಿ ಇದೆ. ಈ ಚುನಾವಣೆಗೆ ಈಗ ಮುಹೂರ್ತ ಫಿಕ್ಸ್ ಆದಂತೆ ಆಗಿದೆ. ಜಿಲ್ಲಾ, ತಾಲೂಕು ಪಂಚಾಯತಿಗೆ ಏಪ್ರಿಲ್, ಮೇ ಒಳಗೆ ಚುನಾವಣೆ ನಡೆಯೋದು ಖಚಿತವಾಗಿದೆ. ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡಿರುವಂತ ರಾಜ್ಯ ಚುನಾವಣಾ ಆಯುಕ್ತ ಸಂಗ್ರೇಶಿರವರು ಚುನಾವಣಾ ಆಯೋಗದಿಂದ ಜಿಲ್ಲಾ, ತಾಲೂಕು ಪಂಚಾಯತಿಗೆ ಚುನಾವಣೆಗೆ ತಯಾರಿ, ಸಿದ್ಧತೆ ಮಾಡಿಕೊಳ್ಳಲಾಗಿದೆ. ಏಪ್ರಿಲ್ ಒಳಗೆ ಜಿಲ್ಲಾ, ತಾಲೂಕು ಪಂಚಾಯತಿಗೆ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ ಎಂದರು. ಜಿಲ್ಲಾಧಿಕಾರಿಗಳ […]

Continue Reading

ಬೀದಿಬದಿ ವ್ಯಾಪಾರಿಗಳ ಐಕ್ಯತೆಯನ್ನು ಮುರಿದು ಹೋರಾಟವನ್ನು ಹತ್ತಿಕ್ಕಲು ಶಾಸಕ ಕಾಮತ್ ಕುಮ್ಮಕ್ಕು: ಸುನಿಲ್ ಕುಮಾರ್ ಬಜಾಲ್ ಆಕ್ರೋಶ

ಮಂಗಳೂರು : ನಗರದ ಬೀದಿ ವ್ಯಾಪಾರ ವಲಯ ಶಾಸಕ ವೇದವ್ಯಾಸ ಕಾಮತ್ ಬೀದಿ ವ್ಯಾಪಾರಿಗಳಿಗೆ ಮುಂಗೈಗೆ ಬೆಲ್ಲ ಹಚ್ಚಿ ಬಡ ಬೀದಿ ವ್ಯಾಪಾರಿಗಳಿಗೆ ಸಂಕಷ್ಟ ತಂದೊಡ್ಡಿದ್ದಾರೆ. ಬೀದಿ ವ್ಯಾಪಾರ ವಲಯ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಆರೋಪಿಸಿದರು ಅವರು ಇಂದು ನಗರದ ಬೀದಿ ವ್ಯಾಪಾರ ವಲಯದ ಎದುರು ಅವೈಜ್ಞಾನಿಕ, ಅಸುರಕ್ಷಿತ ಮತ್ತು ಅಸಮರ್ಪಕ ಬೀದಿ ವ್ಯಾಪಾರ ವಲಯದಲ್ಲಿ ವ್ಯಾಪಾರ ಮಾಡಲು ಬಲವಂತ ಮಾಡುತ್ತಿರುವ ನಗರ ಪಾಲಿಕೆ ಅಧಿಕಾರಿಗಳ ದಬ್ಬಾಳಿಕೆ […]

Continue Reading

ಸೋನಿಯಾ ಹೆಗಲಿಗೆ ಡಿಕೆಶಿ ಗಂಟು; ಇತಿಹಾಸ ಮರುಕಳಿಸಿದರೆ ಡಿಕೆಶಿಗೆ ಪಟ್ಟ

ಕೆಳಗಿಳಿಯಲು ಸಿದ್ದು ಒಪ್ಪುತ್ತಾರಾ.? ಇತಿಹಾಸದ ಈ ಘಟನೆಗಳು ಮರುಕಳಿಸಿದರೆ ಡಿಕೆಶಿ ಪಟ್ಟಾಭಿಷೇಕ ಅಸಂಭವವೇನಲ್ಲ. ✍️. ಆರ್.ಟಿ.ವಿಠ್ಠಲಮೂರ್ತಿ ಕಳೆದ ವಾರ ರಾಜ್ಯ ಕಾಂಗ್ರೆಸ್ ನ ಹಿರಿಯ ನಾಯಕರ ಪಡೆ ಸದಾಶಿವನಗರದ ನಿವಾಸದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದೆ. ಪಕ್ಷದಲ್ಲಿ ಭುಗಿಲೆದ್ದಿರುವ ಬಣ ಸಂಘರ್ಷದ ಬಗ್ಗೆ ಈ ಸಂದರ್ಭದಲ್ಲಿ ಅದು ಆತಂಕ ವ್ಯಕ್ತಪಡಿಸಿದೆ. ಅಂದ ಹಾಗೆ ವಿ.ಎಸ್. ಉಗ್ರಪ್ಪ, ಹೆಚ್.ಎಂ.ರೇವಣ್ಣ, ಡಾ.ಎಲ್.ಹನುಮಂತಯ್ಯ, ಪ್ರಕಾಶ್ ರಾಥೋಡ್, ಕೊಂಡಜ್ಜಿ ಮೋಹನ್ ಸೇರಿದಂತೆ ರಾಜ್ಯ ಕಾಂಗ್ರೆಸ್ ನ ಹಲ ಹಿರಿಯರು ಸೇರಿ ಒಂದು […]

Continue Reading

ಮತ್ತೊಂದು ಚಂಡಮಾರುತ; ಕರ್ನಾಟಕ ಸೇರಿ ದೇಶಾದ್ಯಂತ 20 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಬಿರುಗಾಳಿ ಮತ್ತು ಭಾರೀ ಮಳೆಯಾಗುವ ಸಾಧ್ಯತೆ

ಮತ್ತೊಂದು ಚಂಡಮಾರುತ ಸಿದ್ಧವಾಗಿದೆ. ಜನವರಿ 16 ರವರೆಗೆ ಕರ್ನಾಟಕ ಸೇರಿ ದೇಶಾದ್ಯಂತ 20 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಬಿರುಗಾಳಿ ಮತ್ತು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆಯ ಪ್ರಕಾರ, ಮಧ್ಯ ಪಾಕಿಸ್ತಾನ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ಪಶ್ಚಿಮದ ಅವಾಂತರಗಳು ಚಂಡಮಾರುತದ ಪ್ರಸರಣದ ರೂಪದಲ್ಲಿ ಸಕ್ರಿಯವಾಗಿವೆ. ಪಶ್ಚಿಮ ರಾಜಸ್ಥಾನ ಮತ್ತು ಪಕ್ಕದ ಪ್ರದೇಶಗಳ ಮೇಲೆ ಚಂಡಮಾರುತದ ಅವಾಂತರಗಳು ಸಕ್ರಿಯವಾಗಿವೆ. ಇದರಿಂದಾಗಿ, ಈಶಾನ್ಯ ಅರೇಬಿಯನ್ ಸಮುದ್ರದಿಂದ ಪಶ್ಚಿಮ ಮಾರುತಗಳು ಬೀಸುತ್ತಿವೆ. […]

Continue Reading

ಕೆಐಎಡಿಬಿ ಕರ್ಮಕಾಂಡ; ಬಾಳಪ್ಪ ಹಂದಿಗುಂದ ವಿರುದ್ಧ ತನಿಖೆಗೆ ನಿರ್ದೇಶನ ಕೋರಿ ರಾಜ್ಯಪಾಲರಿಗೆ ದೂರು.

KIADB scam: ಸಿದ್ದು ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ಸಿಟಿಜನ್ ರೈಟ್ಸ್ ಫೌಂಡೇಶನ್ ದೂರು. ಕೆಐಎಡಿಬಿ ಕರ್ಮಕಾಂಡಕ್ಕೆ ರೋಚಕತೆ ತುಂಬಿದ CRF; ಹಂದಿಗುಂದ ಎತ್ತಂಗಡಿಗೆ ಆಗ್ರಹ ಕೆಐಎಡಿಬಿ ಕರ್ಮಕಾಂಡಕ್ಕೆ ರೋಚಕತೆಯ ತಿರುವು. ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಸವಾಲಾದ ‘ಹಂದಿಗುಂದ ಪ್ರಕರಣ’. ಕೆ.ಎ.ಎಸ್ ಅಧಿಕಾರಿ ಬಾಳಪ್ಪ ಹಂದಿಗುಂದ ವಿರುದ್ಧ ರಾಜ್ಯಪಾಲರಿಗೆ ದೂರು ತನಿಖೆಗೆ ನಿರ್ದೇಶನ ಕೋರಿ ರಾಜ್ಯಪಾಲರಿಗೆ CRF (ಸಿಟಿಜನ್ ರೈಟ್ಸ್ ಫೌಂಡೇಶನ್) ಅಧ್ಯಕ್ಷ ಕೆ.ಎ.ಪಾಲ್ ರಿಂದ ದೂರು ಕೆಎಎಸ್ ಅಧಿಕಾರಿ ಬಾಳಪ್ಪ ಹಂದಿಗುಂದ ವಿರುದ್ದ ಹಲವಾರು ದೂರು ಇದೆ. […]

Continue Reading

ವಿಶ್ವದ ಬಲಿಷ್ಠ ಪಾಸ್ ಪೋರ್ಟ್ ಶ್ರೇಯಾಂಕದಲ್ಲಿ ಭಾರತ ಗಣನೀಯ ಕುಸಿತ

ಹೆನ್ಲೆ ಇಂಡೆಕ್ಸ್ ಶ್ರೇಯಾಂಕದಲ್ಲಿ 85 ಸ್ಥಾನಕ್ಕೆ ಜಾರಿದ ಭಾರತ ಹೆನ್ಲೆ ಇಂಡೆಕ್ಸ್ ನೀಡುವ ವಿಶ್ವದ ಬಲಿಷ್ಠ ಪಾಸ್ ಪೋರ್ಟ್ ಶ್ರೆಯಾಂಕದಲ್ಲಿ ಭಾರತ ಐದು ಸ್ಥಾನದ ಕುಸಿತವನ್ನು ಕಂಡು, 2024ರಲ್ಲಿದ್ದ 80ನೇ ಸ್ಥಾನದಿಂದ, 2025ರ ಹೊಸ ವರ್ಷದಲ್ಲಿ 85 ಸ್ಥಾನಕ್ಕೆ ಕುಸಿದಿದೆ. ಮೋಸ್ಟ್ ಪವರಫುಲ್ ಪಾಸ್ ಪೋರ್ಟ್ ನಲ್ಲಿ ಸಿಂಗಾಪುರ ಮೊದಲನೇ ಸ್ಥಾನ ಪಡೆದರೆ ಜಪಾನ್ ನಂತರದ ಸ್ಥಾನದಲ್ಲಿದೆ. ಹಲವು ಮಾನದಂಡಗಳನ್ನು ಆಧರಿಸಿ ಹೆನ್ಲೆ ಪಾಸ್ ಪೋರ್ಟ್ ಇಂಡೆಕ್ಸ್ ನೀಡಲಾಗುವ ವಿಶ್ವದ ಬಲಿಷ್ಠ ಪಾಸ್ ಪೋರ್ಟ್ ಶ್ರೇಯಾಂಕದಲ್ಲಿ ಭಾರತ […]

Continue Reading