ಕಿದ್ವಾಯಿ ಕ್ಯಾನ್ಸರ್, ಜಯದೇವ ಹೃದಯದ ಆಸ್ಪತ್ರೆಗಳನ್ನು ಮಂಗಳೂರಿನಲ್ಲಿ ತೆರೆಯಲು ರಾಜ್ಯ ಸರಕಾರ ಪ್ರಸ್ತಾವ. ಹೋರಾಟ ಸಮಿತಿ ಸ್ವಾಗತ

ಬಲಾಢ್ಯ ಖಾಸಗಿ ಲಾಬಿಯ ಎದುರಾಗಿ ಇದು ಜಾರಿಗೆ ಬರಬೇಕಿದೆ. ಜನತೆಯ ಒಗ್ಗಟ್ಟಿನ ಹೋರಾಟ ಮಾತ್ರ ಪ್ರಸ್ತಾವನೆಯನ್ನು ಕಾರ್ಯರೂಪಕ್ಕೆ ತರುವಂತೆ ಮಾಡಲು ಸಾಧ್ಯ: ಮುನೀರ್ ಕಾಟಿಪಳ್ಳ ಕಳೆದ ಎರಡು ದಶಕಗಳಿಂದ ನಡೆಸುತ್ತಿರುವ ಹೋರಾಟದ ಆಗ್ರಹ ಸರಕಾರದ ಶಕ್ತಿ ಕೇಂದ್ರವಾದ ವಿಧಾನ ಮಂಡಲ ತಲುಪಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಆರೋಗ್ಯ ಲಾಭಿಯ ಏಕಸ್ವಾಮ್ಯದಿಂದ ಕಂಗೆಟ್ಟಿರುವ ಜನ ಸಾಮಾನ್ಯರ ನೆರವಿಗೆ ಸರಕಾರ ಮುಂದಾಗಬೇಕು, ಸಾರ್ವಜನಿಕ (ಸರಕಾರಿ) ರಂಗದ ಆಸ್ಪತ್ರೆಗಳನ್ನು ಬಲಪಡಿಸಬೇಕು ಎಂದು ಹಲವು ಹಂತಗಳಲ್ಲಿ, ವಿವಿಧ ರೀತಿಯಲ್ಲಿ ನಡೆಸುತ್ತಾ ಬಂದಿರುವ […]

Continue Reading

ಡಿಜಿಟಲ್ ಅರೆಸ್ಟ್ ಮಹಾ ವಂಚಕರಿಗೆ ತನ್ನ ಸ್ವಂತ ನಿವೇಶನವನ್ನೇ ಮಾರಿ ಎರಡು ಕೋಟಿ ಕೊಟ್ಟ ಸಾಫ್ಟವೇರ್ ಇಂಜನಿಯರ್.!, ಶಿಕ್ಷಿತ ವರ್ಗವೇ ಗುಂಡಿಗೆ ಬೀಳುತ್ತಿದ್ದಾರೆ.. ಜೋಕೆ

ಅನಕ್ಷರಸ್ಥರು, ಹೆಬ್ಬೆಟ್ಟು ದಾಸರು ಮೋಸದ ಜಾಲಕ್ಕೆ ಬಲಿಯಾಗುವ ಮುನ್ನ ಹತ್ತಾರು ಬಾರಿ ಯೋಚಿಸುತ್ತಾರೆ. ಇದರಲ್ಲಿ ನಿಜ ಯಾವುದು? ಸುಳ್ಳು ಯಾವುದು? ಎಂಬ ಬಗ್ಗೆ ಅವರಿಗೆ ಕನಿಷ್ಠ ಜ್ಞಾನವಂತೂ ಇದೆ. ಆದರೆ ನಾವು ಮಹಾ ಬುದ್ಧಿವಂತರು, ಶಿಕ್ಷಿತರು ಅನ್ನುವ ಕೆಲವರಂತೂ ಲೋಕ ಜ್ಞಾನ ಇಲ್ಲದೆ ಮಹಾ ವಂಚನೆಗೆ ಸುಲಭವಾಗಿ ತುತ್ತಾಗುತ್ತಿದ್ದಾರೆ. ಹೆಸರಿಗೆ ಇಂಜಿನಿಯರ್, ಡಾಕ್ಟರ್, ಅನ್ನುವ ಮಾಸ್ಟರ್ ಡಿಗ್ರಿ ಅಂತೂ ಇದೆ. ಅಕ್ಷರ ಜ್ಞಾನವಿಲ್ಲದ ಅನಕ್ಷರಸ್ಥರಿಗಿಂತಲೂ ಶಿಕ್ಷಿತ ವರ್ಗ ಕಡೆಯಾಗಿ ಹೋದರಲ್ಲ.. ಇಲ್ಲೊಬ್ಬರು ಸಾಫ್ಟ್ ವೇರ್ ಇಂಜಿನಿಯರ್ ಡಿಜಿಟಲ್ […]

Continue Reading

ಅಂತರಾಜ್ಯ ವಾಹನ ಚೋರ ಹಾಗೂ ಸರಗಳ್ಳತನದ ಕುಖ್ಯಾತ ಆರೋಪಿಗಳ ಬಂಧನ

ಪೈಸಲ್ ವಿರುದ್ದ ದರೋಡೆ, ಢಕಾಯಿತಿ, ಕಳ್ಳತನ, ಕೊಲೆ ಸೇರಿದಂತೆ ಬರೋಬ್ಬರಿ 42 ಪ್ರಕರಣಗಳು  ಡಿಸೆಂಬರ್ 12 ರಂದು ಯೆಯ್ಯಾಡಿಯ ಶ್ರೀ ಹರಿ ಕಾಂಪ್ಲೆಕ್ಸ್ ನ ಪಾರ್ಕಿಂಗ್ ಬಳಿ ನಿಲ್ಲಿಸಿದ್ದ ಯಮಹಾ KA-19-ER-7755 ಮೋಟಾರ್ ಸೈಕಲ್ ನ್ನು ಕಳವುಗೈದ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಕದ್ರಿ ಕ್ರೃೆಂ ಪೊಲೀಸರಿಗೆ ದೊರೆತ ಖಚಿತ ಮಾಹಿತಿಯಂತೆ ದಿನಾಂಕ: 16-12-2025 ರಂದು ಪ್ರಕರಣದ ಪ್ರಮುಖ ಆರೋಪಿ ಪೈಸಲ್ @ ತೋಟ ಪೈಸಲ್ ಮತ್ತು ನಿತೀನ್  ಕುಮಾರ್, ಮೈಸೂರು ಎಂಬವರನ್ನು ವಶಕ್ಕೆ ಪಡೆದು […]

Continue Reading

ಕೊನೆಗೂ ಸತ್ಯಕ್ಕೆ ಸಂದ ಜಯ: ಕಾಂಗ್ರೆಸ್. ಹೃದಯವಂತ ಇನಾಯತ್ ಆಲಿಗೂ ರಿಲೀಫ್ ಕೊಟ್ಟ ತೀರ್ಪು

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಡಿಸಿಎಂ ಡಿಕೆಶಿ, ಇನಾಯತ್ ಅಲಿ ವಿರುದ್ಧದ ಪ್ರಕರಣ ಕೈಗೆತ್ತಿಕೊಳ್ಳಲು ಕೋರ್ಟ್ ನಕಾರ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿರುವ ಹಣ ವರ್ಗಾವಣೆ ಆರೋಪಪಟ್ಟಿಯನ್ನು ಪರಿಗಣಿಸಲು ದೆಹಲಿ ನ್ಯಾಯಾಲಯ ಮಂಗಳವಾರ ನಿರಾಕರಿಸಿದೆ. ಮಾತ್ರವಲ್ಲ ಚಾರ್ಜ್‌ಶೀಟ್‌ಅನ್ನು ತಿರಸ್ಕರಿಸಿದೆ. ಪ್ರಕರಣದ ವಿಚಾರಣೆ ನಡೆಸಿರುವ […]

Continue Reading

ಹಲವು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಕುಖ್ಯಾತ ಆರೋಪಿ ಅಬ್ದುಲ್ ರವೂಫ್ @ ಮೀಸೆ ರವೂಫ್ ಬಂಧನ

ಹಲವು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಕುಖ್ಯಾತ ಆರೋಪಿ ಅಬ್ದುಲ್ ರವೂಫ್ @ ಮೀಸೆ ರವೂಫ್, ಮುಸ್ತಫಾ ಮಂಜಿಲ್, ಉಪ್ಪಳ, ಕಾಸರಗೋಡು. ಎಂಬಾತನ ಮೇಲೆ ಕೇರಳದ ಕಾಸರಗೋಡು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸರಿ ಸುಮಾರು 19 ಪ್ರಕರಣಗಳು ದಾಖಲಾಗಿದ್ದು, ದ.ಕ ಜಿಲ್ಲೆಯ ಮಂಗಳೂರು ನಗರದ ಕಾವೂರು ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ಹಾಗೂ ಕೋಣಾಜೆ ಪೊಲೀಸ್ ಠಾಣೆಯಲ್ಲಿ 5 ಪ್ರಕರಣಗಳು ಸೇರಿ ಒಟ್ಟು 25 ಪ್ರಕರಣಗಳು ದಾಖಲಾಗಿರುತ್ತದೆ. ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ […]

Continue Reading

ವಿಪರೀತ ರಸ್ತೆ ಅಪಘಾತ: ಹೈವೇ ಬದಿಯ ಅಕ್ರಮ ಢಾಬಾಗಳ ತೆರವಿಗೆ ಸುಪ್ರೀಂ ಕೋರ್ಟ್ ಸೂಚನೆ

ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್ ಪ್ರೆಸ್ ವೇಗಳಲ್ಲಿ ಅಪಘಾತಗಳು ಹೆಚ್ಚುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ರಸ್ತೆ ಅಪಘಾತಗಳನ್ನು ತಡೆಗಟ್ಟಲು ಅಖಿಲ ಭಾರತ ಮಾರ್ಗಸೂಚಿ ರೂಪಿಸುವ ಬಗ್ಗೆ ಒಲವು ತೋರಿದೆ. ಇದರ ಪರಿಣಾಮ ಹೆದ್ದಾರಿ ಪಕ್ಕದ ಅಕ್ರಮ ಢಾಬಾಗಳಿಗೆ ಕಡಿವಾಣ ಬೀಳುವ ಸಾಧ್ಯತೆ ಹೆಚ್ಚಾಗಿದೆ. ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್ ಪ್ರೆಸ್ ವೇ ಗಳ ಎರಡೂ ಬದಿಗಳಲ್ಲಿ ಅಕ್ರಮ ಢಾಬಾಗಳ ನಿರ್ಮಾಣವು ರಸ್ತೆ ಅಪಘಾತಗಳಿಗೆ ಸಂಭವನೀಯ ಕಾರಣ ಎಂದು ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ಹೇಳಿದೆ. ಅಲ್ಲದೆ […]

Continue Reading

ಮುಕ್ಕ: ಒಂಟಿ ಮಹಿಳೆಯ ಮನೆಗೆ ನುಗ್ಗಿ, ಚಿನ್ನಾಭರಣ ದರೋಡೆ ಪ್ರಕರಣ, ಕುಖ್ಯಾತ ಆರೋಪಿಗಳ ಬಂಧನ, ಸ್ವತ್ತು ವಶ

ತೀವ್ರ ಕುತೂಹಲ ಕೆರಳಿಸಿದ್ದ ಮುಕ್ಕ ಬಳಿ ಡಿಸೆಂಬರ್ 3ರಂದು ರಾತ್ರಿ ಸಮಯದಲ್ಲಿ ನಡೆದ ಶ್ರೀಮತಿ ಜಲಜ, ಪ್ರಾಯ 85 ವರ್ಷ, ಮಿತ್ರ ಪಟ್ಣ, ಸಸಿಹಿತ್ಲು ಮುಕ್ಕ, ಎಂಬ ಒಂಟಿ ಮಹಿಳೆಯ ಮನೆಗೆ ರಾತ್ರಿ ಸುಮಾರು 2:30 ಹೊತ್ತಿಗೆ ಯಾರೋ ಅಪರಿಚಿತರು ಮನೆಯ ಬಾಗಿಲು ಬಡಿದು ಕುಡಿಯಲು ನೀರು ಬೇಕು ಬಾಗಿಲು ತೆರೆಯಿರಿ ಎಂದು ಹೇಳಿದ್ದು, ಜಲಜ ಬಾಗಿಲು ತೆಗೆಯದೇ ಇದ್ದುದರಿಂದ ಆರೋಪಿತರು ಮನೆಯ ಹಂಚನ್ನು ತೆಗೆದು ಮನೆಯ ಒಳಗೆ ಪ್ರವೇಶಿಸಿ ಪಿರ್ಯಾದಿದಾರರನ್ನು “ಬಂಗಾರ್ ಒಲ್ಪ ಉಂಡು” (ಬಂಗಾರ […]

Continue Reading

ಮಂಗಳೂರಿನಲ್ಲಿ ಮತ್ತೆ ತಲೆ ಎತ್ತುತ್ತಿದೆ ಯುನಿಸೆಕ್ಸ್ ಸ್ಪಾ ಸೆಂಟರ್ ಗಳು.? ಪೊಲೀಸರು ಚಾಪೆ ಕೆಳಗೆ ನುಗ್ಗಿದರೆ, ದಂಧೆಕೋರರು ರಂಗೋಲಿ ಕೆಳಗೆ ನುಸುಳ್ತಾರೆ.!

ಮಂಗಳೂರಿನಲ್ಲಿ ಮಸಾಜ್ ಸೆಂಟರ್ ಗಳು ಭರ್ಜರಿ ಕಮಾಯಿ ಮಾಡುತ್ತಿದ್ದ ಕಾಲವೊಂದಿತ್ತು. ಎಲ್ಲವೂ ಸೆಟ್ಟಿಂಗ್, ಡೀಲಿಂಗ್ ಮೂಲಕವೇ ನಡೆಯುತ್ತಿತ್ತು. ಅಧಿಕಾರಿಗಳಿಗೆ ಮಂತ್ಲಿ ಕಪ್ಪ ಕಾಣಿಕೆ ಕೊಟ್ಟೇ ರಾಜಾರೋಷವಾಗಿ ನಡೆಯುತ್ತಿತ್ತು. ಮಂಗಳೂರು ನಗರದಾದ್ಯಂತ ಅಣಬೆಗಳಂತೆ ಮಸಾಜ್, ಸ್ಪಾ ಸೆಂಟರ್ ಗಳು ಹುಟ್ಟಿಕೊಂಡಿತ್ತು. ಗ್ರಾಹಕರು ಮಸಾಜ್ ಸೆಂಟರ್ ಗೆ ನುಗ್ಗಿದರೆ ದೇಹ ತಣಿಸಿಕೊಂಡೇ ಹೋಗುವ ಸಂಪೂರ್ಣ ವ್ಯವಸ್ಥೆ ಅಲ್ಲಿತ್ತು. ಗಂಟೆಗೆ ಇಂತಿಷ್ಟು ರೇಟ್ ಫಿಕ್ಸ್ ಮಾಡಿಕೊಂಡು ಚೆಂದುಳ್ಳಿ ಚೆಲುವೆಯರಿಂದಲೇ ದೇಹ ತಣಿಸುವ ಸಕಲ ಏರ್ಪಾಡುಗಳು ನಡೆಯುತ್ತಿತ್ತು. ಚೆಲುವೆಯರಿಗೆ ಎಕ್ಸ್ ಟ್ರಾ ಟಿಪ್ಸ್ […]

Continue Reading

ವಕ್ಫ್ ಅಧ್ಯಕ್ಷ ರೇಸ್‍ನಲ್ಲಿ ಯಾರ್ಯಾರು?, ಎಲ್ಲರ ಚಿತ್ತ.. ವಕ್ಫ್ ಇಲಾಖೆಯತ್ತ..

ಪ್ರಭಾವೀ ಬ್ಯಾರಿ ನಾಯಕನ ಒಲವು ಯಾರ ಕಡೆ? ನಿಗಮ ಮಂಡಳಿಗಳ ಗಡಿಬಿಡಿ ಬಹುತೇಕ ಮುಗಿದಿದೆ. ಈಗ ಏನಿದ್ದರೂ ರಾಜ್ಯದಲ್ಲಿ ಸಿಎಂ ಸಿದ್ಧರಾಮಯ್ಯ ಪೂರ್ಣಾವಧಿ ಸಿಎಂ ಆಗುತ್ತಾರೋ? ಡಿಕೆಶಿ ಸಿಎಂ ಆಗುತ್ತಾರೋ ಅನ್ನುವ ಕುತೂಹಲ ಗರಿಗೆದರಿದೆ. ಈ ಮಧ್ಯೆ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅವಧಿ ಮುಗಿದು ಎರಡು ತಿಂಗಳಾಗುತ್ತಾ ಬಂದಿದೆ. ಜಿಲ್ಲಾ ವಕ್ಫ್ ಸಮಿತಿಗೆ ಅಧ್ಯಕ್ಷರಾಗುವ ಕನಸಿನಲ್ಲಿ ಹಲವರು ತೆರೆಮರೆಯ ಲಾಬಿ ನಡೆಸುತ್ತಿದ್ದಾರೆ ಅನ್ನುವ ಸಮಾಚಾರಗಳು ಸಿಗತೊಡಗಿದೆ. ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಜಿಲ್ಲಾ […]

Continue Reading

ನಿಖಿಲ್ ಪತ್ತೆ ಮಾಡಿದ ಚಿದಂಬರ ರಹಸ್ಯ…!!

ಬಿಜೆಪಿ ಭಿನ್ನರ ಲೇಟೆಸ್ಟು ಚಿಂತೆ; ನಡ್ಡಾಗೆ ತಲುಪಿದ ಕಂಪ್ಲೇಂಟು ಪಟ್ಟಿ ಆರ್.ಟಿ.ವಿಠ್ಟಲಮೂರ್ತಿ* ಇತ್ತೀಚೆಗೆ ದಿಲ್ಲಿಯ ಎಐಸಿಸಿ ಪಡಸಾಲೆಯಿಂದ ಬರುತ್ತಿರುವ ಒಂದು ವರ್ತಮಾನ ಸಿಎಂ ಸಿದ್ದರಾಮಯ್ಯ ಅವರ ಪಾಳಯಕ್ಕೆ ಹಿತಕರವಾಗಿ ಕೇಳಿಸುತ್ತಿಲ್ಲ‌.ಹಾಗಂತ ಸಿಎಂ ಬದಲಾವಣೆ ಆಗಿ ಬಿಡುತ್ತದೆ ಅಂತಲೂ ಅವರು ಭಾವಿಸಿಲ್ಲ. ಯಾಕೆಂದರೆ, ಪಕ್ಷದ ವರಿಷ್ಟ ರಾಹುಲ್ ಗಾಂಧಿ ಅವರ ಇದುವರೆಗಿನ ಹೆಜ್ಜೆಗಳಲ್ಲಿ ಸಣ್ಣ ಅನುಮಾನವೂ ಅವರಿಗೆ ಗೋಚರಿಸಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಕೆಲ ಕಾಲದ ಹಿಂದೆ ದಿಲ್ಲಿಯಲ್ಲಿ ನಡೆದ ಪಕ್ಷದ ಸಮಾವೇಶವೊಂದರಲ್ಲಿ ಸಿಎಂ ಸಿದ್ಧರಾಮಯ್ಯ ಅವರ ಬಗ್ಗೆ ರಾಹುಲ್ […]

Continue Reading