ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರವೆಸಗಿದ ಪ್ರಕರಣ: ಆರೋಪಿಗೆ ಜಾಮೀನು ಮಂಜೂರು

ಆರೋಪಿ ಪರ ವಾದ ಮಂಡಿಸಿದ ಖ್ಯಾತ ನ್ಯಾಯವಾದಿ ಮಹೇಶ್ ಕಜೆ ಪುತ್ತೂರು: ಕಳೆದ October ತಿಂಗಳಿನಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು, ಅಪಹರಿಸಿ, ನಂತರ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪವನ್ನು ಎದುರಿಸುತ್ತಿದ್ದ ಕಡಬದ ಸಮೀಪದ ಯಜ್ಞೇಶ್ ಎಂಬವರಿಗೆ ಜಿಲ್ಲಾ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. October 10-2023 ರಂದು ಬೆಳಿಗ್ಗಿನ ಜಾವ 7:30 ರ ಸಮಯಕ್ಕೆ ಅಪ್ರಾಪ್ತ ಬಾಲಕಿ ತನ್ನ ಮನೆಯಿಂದ ಹೊರಟು ತನಗೆ ಇನ್ನು ಮೂರು ದಿನದ ವಿಶೇಷತರಗತಿಯಿದ್ದು, ಬೊಳುವಾರಿನ ತನ್ನ ಗೆಳತಿಯ ಮನೆಗೆ ಹೋಗಿ ಶುಕ್ರವಾರದಂದು […]

Continue Reading

ಪಂಜಿಮೊಗರು ಡಿವೈಎಫ್ಐ ವತಿಯಿಂದ ರಕ್ತದಾನ ಶಿಬಿರ

ಡಿವೈಎಫ್ಐ ಜಿಲ್ಲೆಯಲ್ಲಿ ಜನಚಳುವಳಿಯ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ರಕ್ತದಾನ ಶಿಬಿರ ಹಾಗೂ ವೈಯುಕ್ತಿಕವಾಗಿ ರಕ್ತದಾನಗಳನ್ನು ನಿರಂತರ ಮಾಡುತ್ತಿದೆ, ಜೊತೆಗೆ ಯುವಕರಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಜಿಲ್ಲೆಯಲ್ಲಿ ಸಾಕಷ್ಟು ರಕ್ತದಾನಿಗಳ ಕೊರತೆ ಇದೆ ಇದನ್ನು ನೀಗಿಸುವಲ್ಲಿ ಯುವಜನತೆ ಶ್ರಮಿಸಬೇಕಾಗಿದೆ. ರೋಗಿಗಳಿಗೆ ನೀಡಿದ ರಕ್ತಕ್ಕೆ ಬದಲಿ ರಕ್ತ ನೀಡಲೇಬೇಕೆಂಬ ನಿಯಮಗಳು ಇಲ್ಲದಿದ್ದರೂ ಖಾಸಗಿ ಆಸ್ಪತ್ರೆಗಳು ಬಡರೋಗಿಗಳನ್ನು ಸತಾಯಿಸುತ್ತವೆ ಇಂತಹ ಘಟನೆಗಳಿಂದ ರೋಗಿಗಳ ಕುಟುಂಬಸ್ಥರಿಗೂ ತೊಂದರೆಯಾಗುತ್ತಿದೆ. ಇಂತಹ ಹಲವಾರು ರೋಗಿಗಳ ಕುಂಟುಂಬಸ್ಥರಿಗೆ ನಿರಂತರ ಡಿವೈಎಫ್ಐ ಸ್ಪಂದಿಸುತ್ತಿದೆ ಎಂದು ಡಿವೈಎಫ್‌ಐ […]

Continue Reading

ಮಂಗಳೂರು ಲೋಕಸಭಾ ಚುನಾವಣೆ: ಯುವ ನೇತಾರ ಇನಾಯತ್ ಅಲಿ ಹೆಸರು ಮುಂಚೂಣಿಯಲ್ಲಿ

ಮುಂಬರುವ ಲೋಕಸಭಾ ಚುನಾವಣೆಗೆ ಮಂಗಳೂರು ಲೋಕ ಸಭಾ ಕ್ಷೇತ್ರದ ಪ್ರಬಲ ಅಭ್ಯರ್ಥಿಗಾಗಿ ಕಾಂಗ್ರೇಸ್ ಸರ್ವೆ ಕಾರ್ಯ ಆರಂಭಿಸಿದ್ದು, ಕಾಂಗ್ರೇಸ್ ಮುಖಂಡರ ಅಭಿಪ್ರಾಯ ಸಂಗ್ರಹಿಸಲು ಸಚಿವ ಮಧುಬಂಗಾರಪ್ಪ ಮಂಗಳೂರಿಗೆ ಆಗಮಿಸಿ ಸಭೆಗಳನ್ನು ನಡೆಸಿದ್ದರು. ಅಭಿಪ್ರಾಯ ಸಂಗ್ರಹಣೆಗಾಗಿ ಬಂದ ಮಧು ಬಂಗಾರಪ್ಪ ಮುಂದೆ ಮಂಗಳೂರಿನಲ್ಲಿ ಮಾಜಿ ಸಚಿವ ಬಿ‌ ರಮಾನಾಥ ರೈ ಅವರ ಹೆಸರನ್ನು ಕೆಲವರು ಸೂಚಿಸಿದ್ದಾರೆ ಎಂಬ ವಿಚಾರ ಕಾಂಗ್ರೆಸ್ ವಲಯದಿಂದ ಕೇಳಿ ಬಂದಿದೆ. ಇನ್ನುಳಿದಂತೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮತ್ತು ಇನಾಯತ್ ಆಲಿ ಪರ […]

Continue Reading

ನಕಲಿ ವೈದ್ಯರ ತಡೆಗೆ ಕಾನೂನು ಮೂಗುದಾರ; ನಕಲಿ ವೈದ್ಯರ ಹಾವಳಿ ಒಂದು ಸಾಮಾಜಿಕ ಪಿಡುಗು

ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ನಕಲಿ ವೈದ್ಯರ ಹಾವಳಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಜೋರಾಗಿದೆ. ನಾಯಿಕೊಡೆಗಳಂತೆ ಅಲ್ಲಲ್ಲಿ ಅನಧಿಕೃತ ಕ್ಲಿನಿಕ್ ಗಳು ತಲೆ ಎತ್ತಿ ನಿಂತು ಮೆಡಿಕಲ್ ಕಾನೂನಿನ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಇಂತಹ ವೈದ್ಯರ ಎಡವಟ್ಟುಗಳಿಂದ ಹಲವರ ಜೀವವೂ ಹಾರಿ ಹೋಗಿದೆ. ಆಯುರ್ವೇದಿಕ್ ಲೈಸೆನ್ಸ್ ಪಡೆದು ಇತರ ಔಷಧಿಗಳನ್ನು ನೀಡುವ ವೈದ್ಯರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007 ಮತ್ತು ಅಧಿನಿಯಮ 2017 ರ ಸೆಕ್ಷನ್(5) ರ […]

Continue Reading

ಯಾರಿಗೆ ಹೇಳಲಿ ನಮ್ಮ ಪ್ರಾಬ್ಲಂ.. ವೆನ್ಲಾಕ್ ಆಸ್ಪತ್ರೆಯಲ್ಲಿ ಕೈ ಕೊಟ್ಟ ಡಯಾಲಿಸಿಸ್ ಯಂತ್ರಗಳು.!

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಸರಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಯಂತ್ರಗಳು ಕೆಟ್ಟು ಹೋಗಿ ಬರೋಬ್ಬರಿ ಆರು ತಿಂಗಳಾದರೂ ಇನ್ನೂ ಕೂಡ ಸರಿ ಮಾಡದೇ ಇರುವುದರಿಂದ ಡಯಾಲಿಸಿಸ್ ಗೆ ಬರುವ ರೋಗಿಗಳು ಸಂಕಷ್ಟ ಎದುರಿಸುವಂತಾಗಿದೆ. ರಾಜ್ಯದ 8 ಜಿಲ್ಲೆಯ ರೋಗಿಗಳು ಡಯಾಲಿಸಿಸ್ ಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯೆ ಆಸರೆ. ಲೆಕ್ಕಕ್ಕೆ 23 ಡಯಾಲಿಸಿಸ್ ಯಂತ್ರಗಳಿವೆ. ಅದರಲ್ಲಿ 10 ಯಂತ್ರಗಳು ಕೈ ಕೊಟ್ಟಿದೆ. ಉಳಿದ 13 ಯಂತ್ರಗಳು ರೋಗಿಗಳ ಸಂಖ್ಯೆ ಹೆಚ್ಚಿರುವುದರಿಂದ ಸಾಕಾಗುತ್ತಿಲ್ಲ. ಉಡುಪಿ ಜಿಲ್ಲೆಯ ಚಿತ್ರಣ ಕೂಡ […]

Continue Reading

ಉಳ್ಳಾಲ: ‘ಗುಜರಿ’ ನಗರಸಭೆ.! ತಟ್ಟಿ ಹೋಟೆಲಲ್ಲಿ ಚಹಾ ಕುಡಿಯುವ ಇಲ್ಲಿನ ಶಾಸಕರಿಗೆ ಗುಜರಿ ವಾಹನ ಕಾಣಿಸಲಿಲ್ಲವೇ?

ಪಂಚ ಗ್ಯಾರಂಟಿ ಮೂಲಕ ದೇಶದಾದ್ಯಂತ ಸುದ್ದಿ ಮಾಡಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಗ್ಯಾರಂಟಿ ಜೊತೆ ಜೊತೆಗೆ ಜನರ ಸಂಕಷ್ಟ ಅರಿಯಲು ಸಿಎಂ ಜನಸ್ಪಂದನ ಕಾರ್ಯಕ್ರಮ ಆಯೋಜಿಸಿದ್ದರು. ಭೇಟಿ ಮಾಡಲು ಬಂದ ಸಾರ್ವಜನಿಕರು ಸಂಕಷ್ಟ ಅನುಭವಿಸಬಾರದೆಂದು ಸ್ಥಳದಲ್ಲೇ ಊಟ ಮಾಡಿ ಇನ್ನಷ್ಟು ಸಮಯವನ್ನು ಜನಸಾಮಾನ್ಯರಿಗೆ ಮೀಸಲಿಟ್ಟಿದ್ದರು. ಈ ಕಾರ್ಯಕ್ರಮ ಅಭೂತಪೂರ್ವ ಯಶಸ್ವಿ ಕಂಡಿತ್ತು. ಸಾವಿರಾರು ಜನರು ಸಿಎಂ ಜನಸ್ಪಂದನ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು. ಎಷ್ಟೋ ವರ್ಷಗಳಿಂದ ಸರಕಾರಿ ಕಚೇರಿಗೆ ಅಲೆದಾಡಿ ಸುಸ್ತಾದವರು ಸ್ಥಳದಲ್ಲೇ ಸಮಸ್ಯೆಯನ್ನು ಪರಿಹರಿಸಿಕೊಂಡರು. ಸಿಎಂ ಕಾರ್ಯವೈಖರಿ […]

Continue Reading

ಮಂಗಳೂರು: ಅನಧಿಕೃತ ಕ್ಲಿನಿಕ್, ಆಸ್ಪತ್ರೆಗಳ ಬಾಗಿಲು ಬಂದ್.!

ಲೈಂಗಿಕ ತಜ್ಞರು, ಸ್ಕ್ಯಾನಿಂಗ್ ಸೆಂಟರ್ ಮೇಲೆ ಕಣ್ಗಾವಲು ವೈದ್ಯಕೀಯ ವ್ಯವಸ್ಥೆಗೆ ಸಂಬಂಧಿಸಿದ ಯಾವುದೇ ಸೇವೆಗಳನ್ನು ನೀಡುವ ವ್ಯಕ್ತಿ ಮತ್ತು ಸಂಸ್ಥೆಗಳು ಆರೋಗ್ಯ ಇಲಾಖೆಯಲ್ಲಿ ನೋಂದಣಿ ಮಾಡುವುದು ಕಡ್ಡಾಯವಾಗಿದೆ ಎಂಬ ತೀರ್ಮಾನಕ್ಕೆ ಬರಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಲ್ಲಿ ನಡೆದ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ದಂತ ವೈದ್ಯಕೀಯ, ಆಯುಷ್, ಹೋಮಿಯೋಪತಿ, ಫಿಸಿಯೋಥೆರಪಿ, ನ್ಯಾಚುರೋಪತಿ ಸೇರಿದಂತೆ ವೈದ್ಯಕೀಯ ಸೇವೆ ನೀಡುವ ಪ್ರತಿಯೊಂದು ಕ್ಲಿನಿಕ್, ಆಸ್ಪತ್ರೆ ಮತ್ತು ವ್ಯಕ್ತಿಗಳು, […]

Continue Reading

ದ.ಕ ಲೋಕಸಭೆ: ಬಿಜೆಪಿಯ ವಿಜಯಯಾತ್ರೆಗೆ ಬ್ರೇಕ್ ಹಾಕಬಲ್ಲ ಕಾಂಗ್ರೆಸ್ ‘ಕಲಿ’ ಯಾರು.?

‘ರಾಮಯ್ಯ’ ಗೆಲ್ಲುವ ಲೆಕ್ಕಾಚಾರ ಹೇಗಿದೆ.? ನಾವಿಕನನಿಲ್ಲದ ಹಡಗಿನಂತಾಗಿದೆ ಜಿಲ್ಲಾ ಕಾಂಗ್ರೆಸ್.! ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಈಗಾಗಲೇ ಅಭ್ಯರ್ಥಿ ಘೋಷಣೆಯಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಂಗಳೂರಿನ ಕಾರ್ಯಕ್ರಮದಲ್ಲಿ ಮುಂದಿನ ಲೋಕಸಭಾ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ರನ್ನು ಪ್ರಚಂಡ ಬಹುಮತಗಳ ಅಂತರದಿಂದ ಗೆಲ್ಲಿಸುವಂತೆ ಘಂಟಾಘೋಷವಾಗಿ ಸಾರಿದ್ದಾರೆ. ಚುನಾವಣೆ ಮುನ್ನವೇ ಅಭ್ಯರ್ಥಿ ಕನ್ಫಾರ್ಮ್ ಆಗಿ ಬಿಟ್ಟಿದೆ. ಇತ್ತ ಕಟೀಲರ ವಿರೋಧಿ ಗುಂಪು ಪುತ್ತಿಲ ಪರಿವಾರ ವಿಜಯೇಂದ್ರದ ಘೋಷಣೆಯಿಂದ ಕೆಂಡಾಮಂಡಲರಾಗಿದ್ದು ಮತ್ತೆ ಪುತ್ತಿಲ ಅನ್ನುವ ಸೋಷಿಯಲ್ ಮೀಡಿಯಾ ಕ್ಯಾಂಪೈನ್ […]

Continue Reading

ಜನತಾಕಾಲನಿ ಸರಕಾರಿ ಶಾಲೆ ಭೂ ವಿವಾದ, ಪ್ರತಿಭಟನಾ ಧರಣಿ

ಸುರತ್ಕಲ್ : ದ.ಕ.ಜಿ. ಪಂ ಹಿರಿಯ ಪ್ರಾಥಮಿಕ ಶಾಲೆ ಕಾನ ಕಟ್ಲ ಜನತಾಕಾಲನಿಯ ಭೂ ಕಬಳಿಕೆಯ ಸಮಗ್ರ ಹಾಗೂ ಗಂಭೀರ ತನಿಖೆಗೆ ಒತ್ತಾಯಿಸಿ ಸರಕಾರಿ ಶಾಲೆ ಉಳಿಸಿ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಧರಣಿ ನಡೆಯಿತು. ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಹೋರಾಟ ಸಮಿತಿಯ ಸಂಚಾಲಕ,ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಮಾತನಾಡುತ್ತಾ ಕಳೆದ 27ವರ್ಷಗಳಿಂದ ಬಡ ಮಕ್ಕಳ ಭವಿಷ್ಯಕ್ಕಾಗಿ ಸದ್ಭಳಕೆ ಆದ ಶಾಲೆ ಮತ್ತು ಆಟದ ಮೈದಾನಕ್ಕೆ ಈಗ ಏಕಏಕಿ ತನ್ನದೆಂದು ಹೇಳಿಕೊಳ್ಳುವ ವ್ಯಕ್ತಿ ಇದುವರೆಗೂ ಯಾಕೆ ನ್ಯಾಯಾಲಯದಲ್ಲಿ […]

Continue Reading

ಸುರತ್ಕಲ್ ಅಥರ್ವ ಆಸ್ಪತ್ರೆಯಲ್ಲಿ ಬಾಲಕ ಫರ್ಹಾನ್ ಅಸಹಜ ಸಾವು ಪ್ರಕರಣದಲ್ಲಿ ಉತ್ತರ ಸಿಗಬೇಕಾದ ಪ್ರಶ್ನೆಗಳು

ನ್ಯಾಯದ ನಿರಾಕರಣೆ, ಬಲಾಢ್ಯ ಲಾಬಿಯ ರಕ್ಷಣೆಯೆ ಆದ್ಯತೆ ಎಂದಾದರೆ ಈ ಪ್ರಕರಣ ದೊಡ್ಡ ಹೋರಾಟಕ್ಕೆ ನಾಂದಿ ಹಾಡಲಿದೆ ✍️. ಮುನೀರ್ ಕಾಟಿಪಳ್ಳ ಸುರತ್ಕಲ್ “ಅಥರ್ವಾ” ಆಸ್ಪತ್ರೆಯಲ್ಲಿ ಆಪರೇಷನ್ ಸಂದರ್ಭ ವೈದ್ಯಕೀಯ ನಿರ್ಲಕ್ಷ್ಯಕ್ಕೆ ಬಲಿಯಾದ ಕುಳಾಯಿಯ 16 ವರ್ಷದ ಬಾಲಕ ಮೊಯ್ದಿನ್ ಫರ್ಹಾನ್ ಕಾಲಿನ ಪಾದದ ಮೇಲ್ಭಾಗದಲ್ಲಿ ಆಗಿದ್ದ ಗಾಯ ಏಳು ಹೊಲಿಗೆ ಮಾತ್ರ ಹಾಕುವಷ್ಟು ಸಣ್ಣದು. ಪಾದದ ಮೂಳೆಗೆ ಯಾವುದೇ ಹಾನಿ ಆಗದೆ ಇದ್ದ ಸಾಮಾನ್ಯ ಗಾಯ ಇದು. ಇಂತಹ ಗಾಯಕ್ಕೆ ಸಾಮಾನ್ಯವಾಗಿ MBBS ವೈದ್ಯರು ತಮ್ಮ […]

Continue Reading