ಗಂಜಿಮಠ: ಬೆಟ್ಟಿಂಗ್ ನಲ್ಲಿ ತೊಡಗಿದ್ದ ನಾಲ್ವರ ಆರೋಪಿಗಳ ಬಂಧನ; ಇರುವೈಲು ನಿವಾಸಿ ಧನು ಪರಾರಿ

ಕ್ರಿಕೆಟ್ ಬೆಟ್ಟಿಂಗ್ ವಿರುದ್ಧ ಕಾರ್ಯಾಚರಣೆಯನ್ನು ವ್ಯಾಪಕಗೊಳಿಸಿರುವ ಮಂಗಳೂರು ಪೊಲೀಸರು, ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕ 2 ಪ್ರಕರಣಗಳನ್ನು ಭೇದಿಸಿದ್ದು, ನಾಲ್ವರನ್ನು ಬಂಧಿಸಿದ್ದಾರೆ. ತೆಂಕ ಎಡಪದವು ಗ್ರಾಮದ ಬೋರುಗಡ್ಡೆ ನಿವಾಸಿ ಜಯಂತ ಪೂಜಾರಿ, ಮಡಪ್ಪಾಡಿ ನಿವಾಸಿ ದೇವದಾಸ ಪೂಜಾರಿ,ಕುಂದೋಡಿ ನಿವಾಸಿ ರಮೇಶ್ ಪೂಜಾರಿ, ಎಡಪದವು ಮದಪ್ಪಾಡಿ ನಿವಾಸಿ ಪ್ರವೀಣ್ ಬಂಧಿತ ಆರೋಪಿಗಳು. ಇರುವೈಲು ನಿವಾಸಿ ಧನು ಎಂಬಾತ ಪರಾರಿಯಾಗಿದ್ದಾನೆ. ಬಂಧಿತರಿಂದ 3 ಮೊಬೈಲ್ ಫೋನ್ ಹಾಗೂ 4,500 ರೂ. ನಗದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಆರೋಪಿಗಳು ತೆಂಕ ಎಡಪದವು […]

Continue Reading

ಗುರುಪುರ ಕೈಕಂಬ: ಗಾಂಜಾ, ಡ್ರಗ್ಸ್ ಹಾವಳಿಗೆ ತುತ್ತಾಗುತ್ತಿರುವ ಹದಿಹರೆಯದ ಯುವಕರು.! ಎತ್ತ ಸಾಗುತ್ತಿದೆ ಯುವ ಸಮಾಜ.?

ಮಂಗಳೂರು ನಗರದ ಆಸುಪಾಸಿನಲ್ಲಿರುವ ಗುರುಪುರ ಕೈಕಂಬ ಅತೀ ವೇಗವಾಗಿ ಬೆಳೆಯುತ್ತಿರುವ ಪ್ರದೇಶವಾಗಿದೆ. ಈ ಭಾಗದಲ್ಲಿರುವ ಗುರುಪುರ, ಗಂಜಿಮಠ, ಕಂದಾವರ, ಶಾಂತಿನಗರ, ಗುರುಕಂಬಳ, ಸೂರಲ್ಪಾಡಿ ಸೇರಿದಂತೆ ಆಸುಪಾಸಿನ ಪ್ರದೇಶಗಳಿಗೆ ಕೈಕಂಬ ಪ್ರಮುಖ ಜಂಕ್ಷನ್ ಆಗಿದೆ. ಹತ್ತಾರು ವಸತಿ ಸಮುಚ್ಛಯಗಳು ತಲೆ ಎತ್ತಿ ನಿಂತಿದೆ. ಕಾರ್ಖಾನೆಗಳು, ಕೈಗಾರಿಕಾ ಕೇಂದ್ರಗಳು ಇವೆ. ಒಟ್ಟಾರೆಯಾಗಿ ಹೇಳುವುದಾದರೆ ಗುರುಪುರ ಕೈಕಂಬ ಪ್ರಮುಖ ನಗರವಾಗಿ ಹೊರಹೊಮ್ಮುತ್ತಿದೆ. ನಗರಗಳು ಬೆಳೆದಂತೆ ಅಲ್ಲಿ ಸಮಾಜ ಬಾಹಿರ ಕೃತ್ಯಗಳು, ಅಮಲು ಪದಾರ್ಥಗಳ ದಂಧೆಕೋರರು ತಮ್ಮ ದಂಧೆಯನ್ನು ವಿಸ್ತರಿಸಿಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿವೆ. […]

Continue Reading

ಸಿಸಿಬಿ ಪೊಲೀಸರ ಕಾರ್ಯಾಚರಣೆ: ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪಿಗಳ ಬಂಧನ

ಮಂಗಳೂರು: ಸುರತ್ಕಲ್ ಮತ್ತು ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ನಿರತರಾಗಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿರುತ್ತಾರೆ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೇಳ್ಯಾರು ಪರಿಸರದ ಹಾಗೂ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಫೋನ್ ನಲ್ಲಿ ಬೆಟ್ಟಿಂಗ್ ಅ್ಯಪ್ ಉಪಯೋಗಿಸಿಕೊಂಡು, ವಿಶ್ವಕಪ್ ಕ್ರಿಕೆಟ್ ಪಂದ್ಯಾಟಗಳ ಮೇಲೆ ಬೆಟ್ಟಿಂಗ್ ಜೂಜಾಟ ಆಡುತ್ತಾ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿಕೊಂಡು ಅಕ್ರಮ ಬೆಟ್ಟಿಂಗ್ ದಂಧೆಯಲ್ಲಿ ನಿರತರಾಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮಂಗಳೂರು […]

Continue Reading

ಕೇಂದ್ರ ಸರ್ಕಾರ ಭಯವನ್ನೇ ಧರ್ಮದ ಮೂಲವನ್ನಾಗಿಸಿದೆ: ಮೀನಾಕ್ಷಿ ಬಾಳಿ

ಪ್ರಧಾನಿ ನರೇಂದ್ರ ಮೋದಿ 2014 ರಲ್ಲಿ ಗದ್ದುಗೆಗೆ ಏರುವ ಮುನ್ನ ಸುಮಾರು ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಇದ್ದ ಉದ್ಯೋಗ ಪ್ರಮಾಣವೇ ಕಡಿಮೆಯಾಗಿದೆಯೇ ಹೊರತು, ಸೃಷ್ಟಿಯಂತು ಆಗಿಲ್ಲ ಎಂದು ಮಹಿಳಾಪರ ಹೋರಾಟಗಾರ್ತಿ, ಸಂಶೋಧಕಿ ಮೀನಾಕ್ಷಿ ಬಾಳಿ ಹೇಳಿದರು. ಶಿಕ್ಷಣ, ಉದ್ಯೋಗ, ಆರೋಗ್ಯದ ಹಕ್ಕಿಗಾಗಿ, ಜಾತ್ಯಾತೀತತೆ, ಪ್ರಜಾಪ್ರಭುತ್ವ, ಸಂವಿಧಾನದ ಉಳಿವಿಗಾಗಿ ಎಂಬ ಘೋಷಣೆಯಡಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ಯುವಜನ ಸಂಘಟನೆಯ 14ನೇ ದ.ಕ ಜಿಲ್ಲಾ ಸಮ್ಮೇಳನವು ಅ. 15 […]

Continue Reading

ಪ್ರಖರ ಹಿಂದುತ್ವವಾದಿ ಶಾಸಕನ ಕ್ಷೇತ್ರದಲ್ಲಿ ನಕಲಿ ಪರಶುರಾಮ ಮೂರ್ತಿ.. ರಾತ್ರೋರಾತ್ರಿ ಮಾಯ! ಸಿಮೆಂಟ್ ಕದ್ದವರ ಭಾನಗೇಡಿತನ..!

ನೀವೊಮ್ಮೆ ಊಹಿಸಿಕೊಳ್ಳಿ.. ಬಿಜೆಪಿಗರು ಅಲ್ಲದ ಬೇರೆ ಪಕ್ಷದವರು ಇಂತಹ ಕೆಲಸ ಮಾಡಿದ್ದರೆ ಏನಾಗುತ್ತಿತ್ತು. ಇಡೀ ರಾಜ್ಯದಲ್ಲಿ ಬಿಜೆಪಿ ಪ್ರತಿಕ್ರಿಯೆ ಯಾವ ರೀತಿಯಲ್ಲಿ ಇರುತ್ತಿತ್ತು? ದೇವರ ಮೂರ್ತಿಯಲ್ಲೇ ಹಣ ಕೊಳ್ಳೆ ಹೊಡೆದವರು, ಇಂತಹವರು ಹಿಂದೂಗಳೇ? ಇತ್ತ ಸಂಘಪರಿವಾರದ ಸಂಘಟನೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್ ಗೆ ಕರೆ ಕೊಡುತ್ತಿತ್ತು? ಹಿಂದುತ್ವಕ್ಕಾದ ಅವಮಾನ ಎಂದು. ಆದರೆ ಏನು ಮಾಡುವುದು, ಇದು ಮಾಡಿದ್ದು ಓರ್ವ ಬಿಜೆಪಿ ಶಾಸಕ, ಅದರಲ್ಲೂ ಪ್ರಖರ, ಹಿಂದುತ್ವವಾದಿ ಶಾಸಕ. ಕಾರ್ಕಳ ತಾಲೂಕಿನ ಬೈಲೂರು ಉಮಿಕಲ್ ಬೆಟ್ಟದ […]

Continue Reading

ಜಾತ್ರೆ ವ್ಯಾಪಾರಸ್ಥರ ಹೋರಾಟ ಫಲಶೃುತಿ; ಮುಸ್ಲಿಂ ವ್ಯಾಪಾರಿಗಳಿಗೆ ಜಾಗ ಬಿಟ್ಟು ಕೊಟ್ಟ ಹಿಂದೂ ಬಾಂಧವರು

ಮಂಗಳೂರು : ಶ್ರೀ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಜಾಗ ನಿರಾಕರಣೆ ವಿರುದ್ಧ ಜಾತ್ರೆ ಮತ್ತು ಬೀದಿಬದಿ ವ್ಯಾಪಾರಸ್ಥರ ಹೋರಾಟಕ್ಕೆ ಫಲಶ್ರುತಿ ಸಿಕ್ಕಿದೆ ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷ, ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಧ್ಯಕ್ಷರಾದ ಬಿ.ಕೆ ಇಮ್ತಿಯಾಝ್ ತಿಳಿಸಿದ್ದಾರೆ. ಇಂದು ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ನಡೆದ ಬಹಿರಂಗ ಮರುಏಲಂ ನಲ್ಲಿ ಪಾಲ್ಗೊಂಡು ಮುಸ್ಲಿಂ ವ್ಯಾಪಾರಿಗಳು ವ್ಯಾಪಾರಕ್ಕೆ ಜಾಗ ಪಡೆದುಕೊಂಡಿದ್ದಾರೆ. ಈಗಾಗಲೇ ಹರಾಜಿನಲ್ಲಿ ಪಡೆದುಕೊಂಡ ಹಿಂದೂ ಜಾತ್ರೆ ವ್ಯಾಪಾರಿಗಳು ಮುಸ್ಲಿಂ ವ್ಯಾಪಾರಿಗಳಿಗೆ ಜಾಗ ಬಿಟ್ಟು ಕೊಟ್ಟು ಸಾಮರಸ್ಯ […]

Continue Reading

ಮಂಗಳೂರು ನಗರದಲ್ಲಿ ಮತ್ತೆ ಸ್ಕಿಲ್ ಗೇಮ್ ಅಬ್ಬರಕ್ಕೆ ತಯಾರಿ. ಮನರಂಜನೆ ಆಟದ ಹೆಸರಿನಲ್ಲಿ ಜೂಜು ಕೇಂದ್ರಗಳನ್ನು ತೆರಯಲು ಕಸರತ್ತು.!

ಖಡಕ್ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಮಂಗಳೂರಿನಲ್ಲಿ ಪೂರ್ತಿ ಬಾಗಿಲು ಮುಚ್ಚಿದ್ದ ಸ್ಕಿಲ್ ಗೇಮ್ ಮಾಫಿಯಾಗಳು ಇದೀಗ ಮತ್ತೆ ತಲೆ ಎತ್ತಲು ಆರಂಭಿಸಿದೆ. ಇದೀಗ ಸಣ್ಣ ಮಟ್ಟದಲ್ಲಿ ಸುರತ್ಕಲ್, ಬಿಜೈ, ಫಳ್ನೀರ್ ಪ್ರದೇಶಗಳಲ್ಲಿ ಬಾಗಿಲು ತೆರೆದಿರುವ ಸ್ಕಿಲ್ ಗೇಮ್ ನಗರದ ಹಲವಾರು ಕಡೆ ಮತ್ತೆ ಆರಂಭವಾಗುವ ಸಾಧ್ಯತೆ ಇದೆ. ಜೂಜಾಟದ ಹೆಸರಿನಲ್ಲಿ ಮತ್ತೆ ನಗರವನ್ನು ಹಂಡಾಲೆಬ್ಬಿಸಲು ತಯಾರಾಗಿದ್ದಾರೆ. ಆದರೆ ಪೊಲೀಸ್ ಇಲಾಖೆ ಮೌನಕ್ಕೆ ಜಾರಿದಂತಿದೆ. ಡ್ರೈವರ್ ಗಳು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಬಹುತೇಕ […]

Continue Reading

ನಗರಪಾಲಿಕೆ ಜಾಗದಲ್ಲಿ ತುರ್ತು ಟೆಂಡರು ಕರೆದು ನಾಳೆ ಬೆಳಿಗ್ಗೆಯೇ ಬಹಿರಂಗ ಹರಾಜು ಮಾಡಿ; ಮಹಾ ನಗರಪಾಲಿಕೆಗೆ ಜಿಲ್ಲಾಡಳಿತ ಆದೇಶ

ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಸಂದರ್ಭ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡದಿರುವ ಕುರಿತು ಶುಕ್ರವಾರ ಅಪರ ಜಿಲ್ಲಾಧಿಕಾರಿ ಜಿ.‌ಸಂತೋಷ್ ಕುಮಾರ್ ಅಧ್ಯಕ್ಷತೆಯಲ್ಲಿ ಅವರ‌ ಕಚೇರಿಯಲ್ಲಿ ಸಭೆ‌ ನಡೆಯಿತು. ಹಿಂದೂ ಸನಾತನ ಜಾತ್ರೆ ವ್ಯಾಪಾರಸ್ಥರ ಅರ್ಜಿ ಆಧಾರದಲ್ಲಿ ಸಂಘರ್ಷ ನಡೆಯಬಹುದು ಎಂದು ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಲು ನಿರಾಕರಿಸಲಾಗಿದೆ ಎಂದು ದೇವಸ್ಥಾನದ ಪ್ರತಿ ನಿಧಿಗಳು ಸಭೆ‌ಯಲ್ಲಿ ತಪ್ಪು ಒಪ್ಪಿಕೊಂಡ ಘಟನೆಯೂ ನಡೆಯಿತು. ನವರಾತ್ರಿ ವೇಳೆ ಮುಸ್ಲಿಂ ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳನ್ನು ಹಾಕಿದರೆ ಸಂಘರ್ಷ ನಡೆಯುವುದಾಗಿಮುಸ್ಲಿಂ ವ್ಯಾಪಾರಿಗಳನ್ನು ಭಯ ಹುಟ್ಟಿಸಿ ಅವರನ್ನು […]

Continue Reading

ಜಾತ್ರೆ ವ್ಯಾಪಾರಿಗಳಿಗೆ ಬದುಕುವ ಗ್ಯಾರಂಟಿ ಕೊಡಿ: ಬಿ.ಕೆ ಇಮ್ತಿಯಾಝ್

ಮಂಗಳೂರು : ದೇಶದ ಸಂವಿಧಾನ ಎಲ್ಲರಿಗೂ ಬದುಕುವ ಹಕ್ಕನ್ನು ನೀಡಿದೆ ಆದರೆ ಮಂಗಳೂರಿನಲ್ಲಿ ಜಾತ್ರೆ ವ್ಯಾಪಾರವನ್ನೇ ನಂಬಿಕೊಂಡು ಬದುಕುವ ಜಾತ್ರೆ ವ್ಯಾಪಾರಿಗಳಿಗೆ ವ್ಯಾಪಾರದ ಹಕ್ಕನ್ನು ನಿರಾಕರಿಸಲಾಗಿದೆ ಬಿಜೆಪಿ ಸರಕಾರದ ಕಾಲಕ್ಕಿಂತಲೂ ಕಟುವಾದ ಪರಿಸ್ಥಿತಿ ನಿರ್ಮಾಣ ಆಗಿದ್ದು ರಾಜ್ಯದ ಕಾಂಗ್ರೆಸ್ ಸರಕಾರ ಅನೇಕ ಗ್ಯಾರೆಂಟಿಗಳನ್ನು ಕೊಟ್ಟಿದೆ ಜಾತ್ರೆ ವ್ಯಾಪಾರಿಗಳಿಗೆ ಬದುಕುವ ಗ್ಯಾರೆಂಟಿ ಕೊಡಿ ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷ, ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಧ್ಯಕ್ಷರಾದ ಬಿ.ಕೆ ಇಮ್ತಿಯಾಝ್ ಆಗ್ರಹಿಸಿದರು. ಅವರು ಇಂದು ನಗರದ ಪುರಭವನದ ಬಳಿ ನಿರ್ದಿಷ್ಟ ಧರ್ಮದ ಜಾತ್ರೆ […]

Continue Reading

ಬಜಪೆ ಪೊಲೀಸರ ಕಾರ್ಯಚರಣೆ ಗಾಂಜಾ ಸೇವನೆ ಮಾಡುತ್ತಿದ್ದ ಐವರ ಬಂಧನ

ಬಜಪೆ ಪೊಲೀಸ್ ಠಾಣೆಯ ವ್ಯಾಪ್ತಿಯ ಕೆಂಜಾರು,ಪೋರ್ಕೊಡಿ ಎಂಬಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಪೋರ್ಕೊಡಿ ನಿವಾಸಿ ಮೊಹಮ್ಮದ್ ಮುನಾಜ್ ಮತ್ತು ಕಸಬಾ ಬೆಂಗ್ರೆಯ ನಿವಾಸಿ ಮೊಹಮ್ಮದ್ ಆಫ್ರಾರ್ ಎಂಬವರನ್ನು ವಶಕ್ಕೆ ಪಡೆದು ಅವರನ್ನು ತಪಾಸಣೆಗೈದಾಗ ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದರಿಂದ ಇವರ ವಿರುದ್ಧ ಬಜಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಕೊಳಂಬೆ ಗ್ರಾಮದ ಫನಾ ಕಾಲೇಜ್ ಬಳಿ ಹಾಗು ಕಂದಾವರ ಗ್ರಾಮದ ಅದ್ಯಪಾಡಿ ದ್ವಾರದ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ಬಡಗುಳಿಪಾಡಿ ಗ್ರಾಮದ […]

Continue Reading