ಮಂಗಳೂರು: ಆಗರ್ಭ ಶ್ರೀಮಂತರ ಸುಸೈಡ್ ಹಿಂದೆ ನಿಗೂಢ ರಹಸ್ಯ.!

ಇದು ವಿಧಿಯಾಟವೋ ದೇವನೇ ಬಲ್ಲ. ಹಮಾಲಿಗಳು, ಕೂಲಿ ಕಾರ್ಮಿಕರು ತಾವು ದುಡಿದ ಜುಜುಬಿ ಸಂಪಾದನೆಯಿಂದ ಕುಟುಂಬದ ನೊಗವನ್ನು ನೆಮ್ಮದಿಯಿಂದ ಸಾಗಿಸುತ್ತಾರೆ. ಆದರೆ ಇಲ್ಲಿನ ಕೆಲವು ಮಿಲಿಯನೇರ್ ಗಳು, ಕೋಟ್ಯಾಧೀಶ್ವರು ಕೂತು ತಿನ್ನುವಷ್ಟು ದುಡ್ಡಿದ್ದರೂ ಆತ್ಮಹತ್ಯೆಗೆ ಶರಣಾಗುತ್ತಿರುವುದು ಸೋಜಿಗ. ಆದರೆ ಕುಟುಂಬ ವರ್ಗ ಮೌನಕ್ಕೆ ಶರಣಾಗಿರುವುದರಿಂದ ಅಗರ್ಭ ಶ್ರೀಮಂತರ ಸಾವಿನ ಗುಟ್ಟು ಹೊರಗೆ ಬರದೆ ಮುಚ್ಚಿ ಹೋಗುತ್ತಿದೆ. ಒಂದಂತೂ ದಿಟ ಮನಃಶಾಂತಿ ದೊರೆಯಬೇಕಾದರೆ ದುಡ್ಡೇ ಒಂದು ಮುಖ್ಯವಲ್ಲ. ಇವರ ಸಾವು ಹಲವಾರು ಜನರಿಗೆ ಸಂದೇಶವೂ ಕೂಡ ಹೌದು. ಕೆಲವೇ […]

Continue Reading

ಕಾನ – ಬಾಳ ರಸ್ತೆಯಲ್ಲಿ ಶಾಸಕರ ಮುಖ ಕಾಣುತ್ತಿದೆ ರಸ್ತೆ ಕಳಪೆ ಕಾಮಗಾರಿಗೆ ಬಿ.ಕೆ ಇಮ್ತಿಯಾಝ್ ಆಕ್ರೋಶ

ಸುರತ್ಕಲ್ : ಸುರತ್ಕಲ್ ಎಂ.ಆರ್.ಪಿ.ಎಲ್ 4.5ಕಿಮೀ ಚತುಷ್ಪತ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದ್ದಾಗಿದ್ದು ರಸ್ತೆ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟವಾಗಿ ಕಣ್ಣಿಗೆ ಕಾಣುತ್ತಿದ್ದರೂ ಶಾಸಕ ಭರತ್ ಶೆಟ್ಟಿ ಮೌನವಾಗಿದ್ದಾರೆ ರಸ್ತೆ ಕಾಂಕ್ರಿಟಿಕರಣಗೊಂಡು ತಿಂಗಳು ಆಗುವ ಮೊದಲೇ ಸಿಮೆಂಟ್ ಎದ್ದು ಹೋಗಿದೆ ಜಲ್ಲಿಗಳಲ್ಲಿ ಶಾಸಕರ ಮುಖ ಕಾಣುತ್ತಿದೆ ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಝ್ ಆರೋಪಿಸಿದರು ಅವರು ಇಂದು ಸುರತ್ಕಲ್ ಕೊಂಕಣ ರೈಲ್ವೆ ಸೇತುವೆ ಅಕ್ಕಪಕ್ಕದ ರಸ್ತೆ ದುರವಸ್ಥೆ ಖಂಡಿಸಿ ಮತ್ತು ಕೊಂಕಣ ರೈಲ್ವೆ ರೋರೋ ಘಟಕ […]

Continue Reading

ಕರಾವಳಿಯ ಹಿಂದೂಗಳು ಮಹಿಷಾಸುರನನ್ನು ನಂಬದಿದ್ದರೆ ಸಂತಾನ ನಾಶ ! ಭೂತಾರಾಧನೆಯಲ್ಲಿ ಮಹಿಷನಿಗೇ ಅಗ್ರಸ್ಥಾನ!

✍️.ನವೀನ್ ಸೂರಿಂಜೆ.ಪತ್ರಕರ್ತ ಮಂಗಳೂರು-ಉಡುಪಿಯಲ್ಲಿ ಮಹಿಷಾಸುರನ ಆರಾಧನೆ ಅಥವಾ ಮಹಿಷ ದಸರಾ ಮಾಡಲು ಬಿಡುವುದಿಲ್ಲ ಎಂದು ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ಪತ್ರಿಕಾಗೋಷ್ಠಿ ಮಾಡಿ ಹೇಳಿದೆ. ಇದು ಕರಾವಳಿಯ ಸಂಸ್ಕೃತಿ, ಹಿಂದೂ ಆರಾಧನಾ ಕ್ರಮಗಳ ಮೇಲಿನ ದಾಳಿಯಲ್ಲವೇ ? ಕರಾವಳಿಯಲ್ಲಿ ಮಹಿಷಾಸುರನ ಆರಾಧನೆ ಎಂಬುದು ಪ್ರಾಚೀನ ಕಾಲದಿಂದಲೂ ಇದೆ, ಈಗಲೂ ಇದೆ. ಕರಾವಳಿಯ ಭೂತಾರಾಧನೆ ಮತ್ತು ಅಳಿಯ ಸಂತಾನ ಕಟ್ಟು ಪ್ರಾರಂಭವಾಗುವುದೇ ಮಹಿಷಾಸುರನಿಂದ ಎಂಬುದು ಹಿಂದೂ ಧರ್ಮ ರಕ್ಷಕ(?)ರಿಗೆ ಗೊತ್ತಿಲ್ಲದಿರುವುದು ವಿಪರ್ಯಾಸ ! ಮಹಿಷಾಸುರ ಕರಾವಳಿಯ ಮೂಲ ದೈವ. […]

Continue Reading

ರಾಷ್ಟ್ರೀಯ ಹೆದ್ದಾರಿ ಬಿಕರ್ನಕಟ್ಟೆ-ಸಾಣೂರು 169: ಹೈಕೋರ್ಟ್ ನಿರ್ದೇಶನದಂತೆ ಭೂ ಮಾಲಿಕರಿಗೆ ಪರಿಹಾರ ಪಡೆದುಕೊಳ್ಳಲು ಸೂಚನೆ.

ರಾಷ್ಟ್ರೀಯ ಹೆದ್ದಾರಿ 169(13) ಸಾಣೂರು ಜಂಕ್ಷನ್ ಬಿಕರ್ನಕಟ್ಟೆ ವಿಭಾಗದಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಗಾಗಿ ಮೂಡಬಿದ್ರೆ ತಾಲೂಕು ಪಡುಮಾರ್ನಾಡು ಮತ್ತು ಪುತ್ತಿಲ ಗ್ರಾಮಗಳಿಗೆ ಭೂ ಸ್ವಾಧೀನಗೊಂಡ ಜಮೀನನ್ನು ಭೂ ಮಾಲೀಕರಿಗೆ ಹೈಕೋರ್ಟ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಆದೇಶದಂತೆ ಪರಿಹಾರ ಪಡೆದುಕೊಳ್ಳಲು ದಾಖಲೆಗಳೊಂದಿಗೆ ಕೋರಿಕೆ ಪತ್ರ ಸಲ್ಲಿಸುವಂತೆ ಸೂಚನಾ ಪತ್ರವನ್ನು ಕಚೇರಿಯಿಂದ ಜಾರಿ ಮಾಡಲಾಗಿದೆ. ಈ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು ಈವರೆಗೆ ಕ್ಲೇಮ್ ಅರ್ಜಿ ಸಲ್ಲಿಸದಿರುವ ಭೂ ಮಾಲೀಕರು ವಾರದೊಳಗೆ ಕ್ಲೇಮ್ ಅರ್ಜಿಯನ್ನು ವಿಶೇಷ ಭೂ ಸ್ವಾಧೀನಾಧಿಕಾರಿ […]

Continue Reading

ವಾಸ್ತವ ಸತ್ಯವನ್ನು ಮರೆಮಾಚಿ ಮಾವಿನಕಟ್ಟೆಗೆ,ಗಣಪತಿ ಕಟ್ಟೆ ಎಂದು ನಾಮಕರಣ ಮಾಡಿದ್ದೆ ಕೆಲವು ಮಾಧ್ಯಮಗಳು.

ಪುಚ್ಚಮೊಗರು ಶಾಂತಿನಗರ ಕಾಲೋನಿಯ ರಸ್ತೆ ಬದಿಯ ಕಟ್ಟೆಯಲ್ಲಿ ಈದ್ ಮಿಲಾದ್ ಸಂದರ್ಭ ಹಾಕಲಾದ ಹಸಿರು ಧ್ವಜವನ್ನು ಪೊಲೀಸರು ತೆರವು ಮಾಡಿರುವುದು ಸರಿಯಾದ ಕ್ರಮವಾಗಿದ್ದು, ಸಮುದಾಯದ ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ ಹಾಗೂ ಕೆಲವು ಮಾಧ್ಯಮಗಳಲ್ಲಿ ವರದಿಯಾದಂತೆ ಆ ಕಟ್ಟೆ ಸರಕಾರಿ ಜಾಗದಲ್ಲಿರುವ ಮಾವಿನಕಟ್ಟೆಯೇ ಹೊರತು ಗಣಪತಿ ಕಟ್ಟೆ ಅಲ್ಲ ಎಂದು ಪುಚ್ಚಮೊಗರು ಜಮಾಅತ್ ಕಮಿಟಿ ಸ್ಪಷ್ಟಪಡಿಸಿದೆ. ಕೆಲವು ದೃಶ್ಯ ಮಾಧ್ಯಮಗಳಲ್ಲಿ ಈ ಕಟ್ಟೆಯನ್ನು ಗಣಪತಿ ಕಟ್ಟೆ ಎಂದು ಹೇಳಿದೆ, ಇದು ಗಣಪತಿ ಕಟ್ಟೆ ಅಲ್ಲ, ಪುಚ್ಚಮೊಗರಿನಲ್ಲಿ ಗಣಪತಿ […]

Continue Reading

ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದ ಆರೋಪಿಯನ್ನು ಬಂಧಿಸಿದ ಮಂಗಳೂರು ಸಿಸಿಬಿ ಪೊಲೀಸರು

ಆಧಾರ್ ಕಾರ್ಡ್, ರೇಷನ್ ಕಾರ್ಡ್, ಅಂಕಪಟ್ಟಿ, ಜನನ ಪ್ರಮಾಣ ಪತ್ರ ಸೇರಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ತಯಾರಿಸಿ ದಂಧೆ ಮಾಡುತ್ತಿದ್ದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ನಗರದ ಬಿರ್ಕನಕಟ್ಟೆ, ಬಜ್ಜೋಡಿಯ ಇನ್ ಪ್ಯಾಂಟ್ ಮೇರಿ ಚರ್ಚ್ ಹತ್ತಿರದ ನಿವಾಸಿ ಬರ್ನಾಡ್ ರೋಶನ್ ಮೆಸ್ಕರೆನಸ್ ಬಂಧಿತ ಆರೋಪಿ. ನಗರದ ಕಂಕನಾಡಿ – ಪಂಪ್ ವೆಲ್ ಹಳೆಯ ರಸ್ತೆಯ ವಿಶ್ವಾಸ್ ಅಪಾರ್ಟ್ ಮೆಂಟ್ ನೆಲಮಹಡಿಯಲ್ಲಿ ‘ಹೆಲ್ಪ್ ಲೈನ್ ಮಂಗಳೂರು’ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದ. ಈತ ಆಧಾರ್ ಕಾರ್ಡ್, […]

Continue Reading

ಜೆಡಿಎಸ್ ಬಿಟ್ಟು ಬರಲ್ವಾಂತೆ ಮೊಹಿದ್ದೀನ್ ಬಾವಾ.? ಒಂದೇ ಕಲ್ಲಿಗೆ ಎರಡು ಹಣ್ಣು ಉದುರಿಸುವ ಮೆಗಾ ಪ್ಲ್ಯಾನ್ ರೆಡಿ.. ಏನಿದು?

ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ನಡೆಸಿದಾಗ ಇತ್ತೀಚೆಗೆ ಜೆಡಿಎಸ್ ಸೇರಿದ ಮೊಹಿದ್ದೀನ್ ಬಾವಾ ರ ಕಥೆಯೇನು? ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಮೊಹಿದ್ದೀನ್ ಬಾವಾ ಸಹೋದರ ಬಿ.ಎಂ ಫಾರೂಕ್ ಜೆಡಿಎಸ್ ನಲ್ಲೇ ಉಳಿಯಲಿದ್ದಾರೆ. ಅವರಿಗೆ ಮುಂದಿನ ರಾಜ್ಯಸಭಾ ಸೀಟು ಫಿಕ್ಸ್ ಅನ್ನುವ ಮಾತುಗಳು ಕೇಳಿ ಬಂದಿತ್ತು. ಆದರೆ ಮೊಹಿದ್ದೀನ್ ಬಾವಾ ಕಾಂಗ್ರೆಸ್ ಸೇರಲಿದ್ದಾರೆ ಅನ್ನುವ ಗುಲ್ಲು ಹರಡಿತ್ತು. ಮೊಹಿದ್ದೀನ್ ಬಾವಾ ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ. ಆದರೆ ಕೆಪಿಸಿಸಿ ಅಧ್ಯಕ್ಷ ಕಡೆಯಿಂದ ಯಾವುದೇ ಗ್ರೀನ್ ಸಿಗ್ನಲ್ […]

Continue Reading

ಪುಚ್ಚಮೊಗರಿನಲ್ಲಿ ಪೆಚ್ಚು ಮೋರೆ ಹಾಕಿದ ಪಿಡಿಒ.! ಸಿಂಗಂ ಸಂದೇಶ್ ಡೈನಾಮಿಕ್ ಸ್ಟೈಲಿಗೆ ಸಾರ್ವಜನಿಕರು ಫಿದಾ

ಶಾಂತಿ ಭಂಗ ಕಡದುವವರಿಗೆ ಖಡಕ್ ವಾರ್ನಿಂಗ್ ಕೊಟ್ಟ ಮೂಡಬಿದ್ರೆ ಇನ್ಸ್ ಪೆಕ್ಟರ್ ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಿದ್ದಾರೆ ಮೂಡಬಿದ್ರೆ ಇನ್ಸ್ ಪೆಕ್ಟರ್ ಸಂದೇಶ್. ಮೂಡುಬಿದಿರೆ ಠಾಣೆಯಲ್ಲಿ ಸಂದೇಶ್ ಚಾರ್ಜ್ ತೆಗೆದುಕೊಳ್ಳುತ್ತಿದ್ದಂತೆ ಬಿಲ ಸೇರಿಕೊಂಡುಬಿಟ್ಟಿದ್ದಾರೆ ಖತರ್ನಾಕ್ ಖದೀಮರು. ಇಲ್ಲಿ ಧೋ ನಂಬರ್ ದಂಧೆಗಳಿಗೆ ಪುಲಿಸ್ಟಾಪ್ ಬಿದ್ದುಬಿಟ್ಟಿದೆ. ಆದರೂ ಕೆಲವೊಂದು ಕಿಡಿಗೇಡಿಗಳು ಶಾಂತಿಭಂಗ ಉಂಟು ಮಾಡಲು ರಾತ್ರೋರಾತ್ರಿ ಕಸರತ್ತು ನಡೆಸುತ್ತಿದ್ದರೂ ಯಾರಿಗೂ ಕ್ಯಾರೇ ಅನ್ನದೆ ತನ್ನ ಡೈನಾಮಿಕ್ ಸ್ಟೈಲಿನಲ್ಲಿ ಕಿಡಿಗೇಡಿಗಳಿಗೆ ಮೈ ಪರಚುಕೊಳ್ಳುವಂತೆ ಮಾಡುತ್ತಿದ್ದಾರೆ. […]

Continue Reading

ಜಿ.ಆರ್ ಮೆಡಿಕಲ್ ಕಾಲೇಜಿನ ಮಾನ್ಯತೆಯ ತಕರಾರು.! ಇದರ ಹಿಂದಿರುವ ಕಾಣದ ಕೈಗಳು ಯಾವುವು.?

ಮೆಡಿಕಲ್ ಕಾಲೇಜು ವಿವಾದ: ಸರ್ಕಾರಗಳ ಕಣ್ಣಾಮುಚ್ಚಾಲೆ ಬಗ್ಗೆ CRF ಅಸಮಾಧಾನ ಈ ಹಿಂದೆ ಜಿಂದಾಲ್ ಭೂ ಅಕ್ರಮ ಕುರಿತಂತೆ ಕೆ.ಎ.ಪಾಲ್ ಹೂಡಿದ್ದ ಸಾರ್ವಜನಿಕ ಹಿತಾಸಕ್ತಿ ಧಾವೆಯಿಂದಾಗಿ ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ್ದರು. ಬಿಟ್ ಕಾಯಿನ್ ಹಗರಣ, ಮತದಾರರ ಪಟ್ಟಿ ಅಕ್ರಮ, ಬಿಬಿಎಂಪಿ ಕರ್ಮಕಾಂಡ, ಕೋವಿಡ್ ಹಗರಣ ಸಹಿತ ಹಲವಾರು ಕರ್ಮಕಾಂಡಗಳ ವಿರುದ್ಧ ಸಾರ್ವಜನಿಕ ಹಿತಾಸಕ್ತಿಗಾಗಿ ಕಾನೂನು ಹೋರಾಟ ನಡೆಸಿ ಯಶಸ್ವಿಯಾಗಿರುವ ಕೆ.ಎ.ಪಾಲ್ ಸಾರಥ್ಯದ ಸಿಟಿಜನ್ ರೈಟ್ಸ್ ಫೌಂಡೇಶನ್, ಇದೀಗ ವೈದ್ಯಕೀಯ ಕಾಲೇಜುಗಳ ವಿಚಾರದಲ್ಲೂ ಅಖಾಡಕ್ಕಿಳಿದಿದೆ. ಬೆಂಗಳೂರು: […]

Continue Reading

ಬಜಪೆ ಚತುಷ್ಪಥ ರಸ್ತೆ ಕಾಮಗಾರಿ; ಕಳಪೆ ಮತ್ತು ಅವೈಜ್ಞಾನಿಕ. ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಬೇಸೆತ್ತು ಹೋರಾಟಕ್ಕೆ ಧುಮುಕಿದ ನಾಗರೀಕರು

ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ಮುಖ್ಯ ರಸ್ತೆಯು ಚತುಷ್ಪಥ ರಸ್ತೆಯ ನಕಾಶೆ ಸಿದ್ದವಾಗಿದ್ದರೂ ಅದನ್ನು ಸಮರ್ಪಕವಾಗಿ ಮುಂದುವರಿಸದೆ ಜನತೆಗೆ ವಂಚಿಸಿದ್ದು, ಮಾತ್ರವಲ್ಲ ನಿರ್ಮಾಣವಾಗಿರುವ ರಸ್ತೆ ಕಳಪೆ ಕಾಮಗಾರಿಕೆಯಿಂದ ಕೂಡಿರುವುದು ಸ್ಥಳೀಯ ನಾಗರೀಕರನ್ನು ಕೆರಳಿಸಿದೆ. ಬಜಪೆ ಪಟ್ಟಣ ಪಂಚಾಯತ್ ಆಗಿ ಪರಿವರ್ತನೆ ಆದ ನಂತರ ಮೂಲಭೂತ ಸೌಕರ್ಯ ಹಾಗೂ ಇನ್ನಿತರ ಹಲವಾರು ಸಮಸ್ಯೆಗಳು ತಾಂಡವವಾಡುತ್ತಿದೆ. ಈ ಸಮಸ್ಯೆಗಳ ಬಗ್ಗೆ ಹಲವಾರು ಜನಪ್ರತಿನಿಧಿಗಳು, ವಿವಿಧ ಪಕ್ಷಗಳ ಮುಖಂಡರು ಹಲವು ಬಾರಿ ಪಟ್ಟಣ ಪಂಚಾಯತ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. […]

Continue Reading