ಮಂಗಳೂರು: ಅತ್ಯಾಚಾರ ಪ್ರಕರಣ;ವಕೀಲರ ವಿರುದ್ಧದ FIR ರದ್ದು ಕೋರಿ ಸಲ್ಲಿಸಿದ ರಿಟ್ಟ್ ಅರ್ಜಿ ತಿರಸ್ಕರಿಸಿದ ಹೈಕೋರ್ಟ್

ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ,ನ್ಯಾಯವಾದಿ ಕೆ.ಎಸ್.ಎನ್ ರಾಜೇಶ್ ರವರು ತನ್ನ ಮೇಲಿರುವ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸುವಂತೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಮಾನ್ಯ ನ್ಯಾಯಾಲಯ ತಿರಸ್ಕರಿಸಿ ಆದೇಶಿಸಿದೆ. ಕಾನೂನು ವಿದ್ಯಾರ್ಥಿನಿಯೊಬ್ಬಳು ನ್ಯಾಯವಾದಿ ಕೆ.ಎಸ್.ಎನ್ ರಾಜೇಶ್ ರವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಮಯ ಕೆ.ಎಸ್.ಎನ್ ರಾಜೇಶ್ ರವರು ಲೈಂಗಿಕ ದೌರ್ಜನ್ಯವೆಸಗಿ, ಅತ್ಯಾಚಾರಗೈದ ಬಗ್ಗೆ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದು, ಸದ್ರಿ ದೋಷಾರೋಪಣಾ ಪಟ್ಟಿಯನ್ನು ರದ್ದುಗೊಳಿಸುವಂತೆ ಕೆ.ಎಸ್.ಎನ್ […]

Continue Reading

ಕಾರ್ಕಳ: ಶಿರ್ಲಾಲು ಮಂಗಳಬಾಕ್ಯರಿನ ಹೊಸ ಸೇತುವೆಗೆ ರಸ್ತೆ ಸಂಪರ್ಕಿಸಲು ಅಧಿಕಾರಿಗಳ ಮೀನಮೇಷ

ಜನರ ಕಷ್ಟಗಳಿಗೆ ಸ್ಪಂದಿಸದೆ ಸೋಮಾರಿತನ ತೋರಿಸುತ್ತಿರುವ ಅಧಿಕಾರಿಗಳು ಉಡುಪಿ: ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಮಂಗಳಬಾಕ್ಯಾರು ಎಂಬಲ್ಲಿ ಸರಕಾರದ ಅನುದಾನದಿಂದ ಸರಿ ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ನಾಗರಿಕರ ಅನುಕೂಲಕ್ಕಾಗಿ ಹೊಸ ಸೇತುವೆ ನಿರ್ಮಾಣಗೊಂಡಿದೆ. ಸೇತುವೆಯ ಕಾಮಗಾರಿ ಪೂರ್ಣಗೊಂಡು ಸರಿ-ಸುಮಾರು 6-7 ತಿಂಗಳು ಕಳೆದರೂ ಪ್ರಸ್ತುತ ಇರುವ ರಸ್ತೆಯನ್ನು ಹೊಸ ಸೇತುವೆಗೆ ಸಂಪರ್ಕ ಕಲ್ಪಿಸಲು ಇನ್ನೂ ಕೂಡ ಮೀನಮೇಷ ಎಣಿಸಲಾಗುತ್ತಿದೆ. ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಇಲಾಖೆಗೆ ಸಾರ್ವಜನಿಕರು ಅಲೆದು ಅಲೆದು ಸುಸ್ತಾಗಿ ಅನೇಕ ಬಾರಿ ಮನವಿ […]

Continue Reading

ಸೈಯದ್ ಬ್ಯಾರಿ ನೇತ್ರತ್ವದಲ್ಲಿ, MEIF ಸರ್ವೇ ತಂಡವು ವಿವಿದ ವಿದ್ಯಾ ಸಂಸ್ಥೆಗಳಿಗೆ ಬೇಟಿ; ಪ್ರಸ್ತಾವಿತ ಶಾಲಾ ನಿವೇಶನಗಳ ಬಗ್ಗೆ ವರದಿ ಸಂಗ್ರಹಿಸಿ,ಯೋಜನೆಗೆ ಸಿದ್ದತೆ.

MEIF ತಂಡವು ಕಳೆದ ಅಧಿತ್ಯವಾರದಂದು ಮೂಡಬಿದ್ರೆಯ ಬೆಳುವಾಯಿಯಲ್ಲಿನ ಜಮಿಯತುಲ್-ಫಲಾಹ್ ಇದಕ್ಕೆ ಸಂಬಂದ ಪಟ್ಟ ನಿವೇಶನವನ್ನು ಪರಿಶೀಲಿಸಿ,ಈ ನಿವೇಶನದಲ್ಲಿ PUC ಮತ್ತು ವೃತ್ತಿಪರ ಶಿಕ್ಷಣದ ತರಗತಿಗಳನ್ನು ಆರಂಭಿಸುವುದು ಸೂಕ್ತವೆಂದು ಅಭಿಪ್ರಾಯ ಪಟ್ಟು,ಯೋಜನೆಯ ನೀಲಿ ನಕಾಶೆ ತಯಾರಿಸಲು ಸದ್ರಿ ಸಂಸ್ಥೆಗೆ ಸೂಚನೆ ನೀಡಿದರು. ಕರ್ನಿರೆಯ ಅಡುವೆ ಎಂಬಲ್ಲಿ ಪ್ರದೇಶದಲ್ಲಿ EXPERTISE ಸಂಸ್ಥೆಗೆ ಸೇರಿರುವ 10 ಎಕರೆ ಜಾಮೀನನ್ನು ಪರಿಶೀಲಿಸಿ,ಅ ಜಮೀನಿನಲ್ಲಿ CBSE ಪಠ್ಯ ಕ್ರಮದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಉನ್ನತ ಮಟ್ಟದ ಶಿಕ್ಷಣ ಸಂಸ್ಥೆಯನ್ನು ಆರಂಭಿಸಲು ಮಾಲಕರಾದ ಅಶ್ರಫ್ ಕರ್ನಿರೆ ರವರು […]

Continue Reading

ಕುಡಿಯುವ ನೀರಿನ ಸಮಸ್ಯೆ; ಮಳೆಯ ನೀರನ್ನೇ ಕುಡಿದ ನಾಗರಿಕರು, ಸಮಸ್ಯೆ ಪರಿಹರಿಸದಿದ್ದಲ್ಲಿ ಮುತ್ತಿಗೆ: ಡಿವೈಎಪ್ಐ.

ಉರ್ವಾಸ್ಟೋರ್ ಸುಂಕದಕಟ್ಟೆ ಪ್ರದೇಶದಲ್ಲಿ ಕಳೆದ 12 ದಿನಗಳಿಂದ ಕುಡಿಯುವ ನೀರಿನ ವಿಪರೀತ ಸಮಸ್ಯೆ ತಲೆದೋರಿದ್ದು,ಈ ಬಗ್ಗೆ ಸ್ಥಳೀಯ ನಾಗರಿಕರು DYFI ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಆಯುಕ್ತರನ್ನು ಭೇಟಿಯಾಗಿ ಮನವಿಯನ್ನು ಅರ್ಪಿಸಿದರು. ಕಳೆದ ವಾರ ವಿಪರೀತ ಮಳೆ ಸುರಿದಿದ್ದರೂ ಉರ್ವಾಸ್ಟೋರಿನ ಸುಂಕದಕಟ್ಟೆಯ ನಾಗರಿಕರು ಮಾತ್ರ ಮಳೆಯ ನೀರನ್ನೇ ಕುಡಿಯುವ ದುಸ್ಥಿತಿ ಒದಗಿರುವುದು ತೀರಾ ದುಃಖದಾಯಕ ಸಂಗತಿಯಾಗಿದೆ.ಮಾತ್ರವಲ್ಲದೆ ಈ ಪ್ರದೇಶದಲ್ಲಿ ಬಹುತೇಕ ಹಿಂದುಳಿದ ಹಾಗೂ ದಲಿತ ಸಮುದಾಯದ ಕುಟುಂಬಗಳೇ ವಾಸಿಸುತ್ತಿದ್ದು,ಆರ್ಥಿಕವಾಗಿ ತೀರಾ ದುರ್ಬಲರಾಗಿದ್ದು ಹಣ ಕೊಟ್ಟು […]

Continue Reading

ಮಂಗಳೂರು:ಜನರ ಬದುಕಿನ ಮೇಲೆ ಚೆಲ್ಲಾಟವಾಡುತ್ತಿರುವ ಅಧಿಕಾರಿಗಳು; ನಗರದ ಬೃಹತ್ ಗಾತ್ರದ ಮರಗಳು ಜನರ ಜೀವಕ್ಕೆ ಸಂಚಕಾರ.!

ಬೆಂಗಳೂರು ಹೊರತುಪಡಿಸಿದರೆ ಮಂಗಳೂರು ನಗರ ಅತ್ಯಧಿಕ ವೇಗದಲ್ಲಿ ಬೆಳೆಯುತ್ತಿದೆ. ಸ್ಮಾರ್ಟ್ ಸಿಟಿ ಎಂಬ ಗಿರಿಮೆಯೂ ಇದೆ. ಆದರೆ ಈ ಎಲ್ಲಾ ಹಿರಿಮೆ ನಗರದಲ್ಲಿ ಒಂದು ಗಂಟೆ ಮಳೆ ಸುರಿದರೆ ಬಟಾಬಯಲಾಗುತ್ತದೆ. ನೀರು ಸರಿಯಾಗಿ ಹರಿದು ಹೋಗಲು ಚರಂಡಿಯ ವ್ಯವಸ್ಥೆ ಇಲ್ಲ. ಚರಂಡಿ ಇದ್ದರೂ ಸಮರ್ಪಕವಾಗಿ ಕಾರ್ಯಗತಗೊಳಿಸಿಲ್ಲ. ಕೋಟಿ ಕೋಟಿ ನಗರಕ್ಕೆ ಸುರಿದರೂ ಅಧಿಕಾರಿಗಳಲ್ಲಿ ದೂರದೃಷ್ಟಿತ್ವದ ಕೊರತೆಯಿಂದ ನೀರಲ್ಲಿಟ್ಟ ಹೋಮದಂತಾಗಿದೆ. ಒಂದೇ ಮಳೆಗೆ ಪಂಪ್ ವೆಲ್ ಬ್ರಿಡ್ಜ್ ಅಡಿಭಾಗದ ರಸ್ತೆಗಳು ಬೃಹತ್ ಕೆರೆಯಂತಾಗಿತ್ತು. ಕೇವಲ ದುಡ್ಡು ಹೊಡೆಯಲು ಅಧಿಕಾರಿಗಳು, […]

Continue Reading

ಕರಾವಳಿ ಭಾಗದಲ್ಲಿ ದರ್ಪ ತೋರುತ್ತಿರುವ KSRTC ಬಸ್ ನ ಕೆಲವು ನಿರ್ವಾಹಕರು.!

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ವ್ಯವಸ್ಥೆ ಕಲ್ಪಿಸಿದ್ದು, ರಾಜ್ಯದಾದ್ಯಂತ ಈ ಯೋಜನೆ ಅಭೂತಪೂರ್ವ ಯಶಸ್ಸು ಕಂಡಿದೆ. ಪ್ರಯಾಣಿಕರಿಲ್ಲದೆ ಮೂಲೆ ಸೇರಿದ್ದ ಸರಕಾರಿ ಬಸ್ ಗಳು ಈ ಯೋಜನೆಯಿಂದ ದಡ ಸೇರಿದ್ದು, ಸರಕಾರಿ ಬಸ್ ಗಳಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದಾರೆ. ಕೇವಲ ಮಹಿಳಾ ಪ್ರಯಾಣಿಕರು ಮಾತ್ರವಲ್ಲ ಪುರುಷರೂ ಕೂಡ ಅಧಿಕ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದು, ನಷ್ಟದ ಸುಳಿಗೆ ಸಿಲುಕಿದ್ದ ಸಾರಿಗೆ ಇಲಾಖೆ ಯಾರೂ ನಿರೀಕ್ಷಿಸದ ರೀತಿಯಲ್ಲಿ ಭರಪೂರ ಲಾಭ ಪಡೆಯುತ್ತಿದೆ. ದಕ್ಷಿಣ ಕನ್ನಡ […]

Continue Reading

ನಿವೇಶನ ರಹಿತರಿಗೆ ಕೂಡಲೇ ಮನೆ ನಿವೇಶನ ಒದಗಿಸಲು ಒತ್ತಾಯ: ಸಿಪಿಐಎಂ.

ಮಂಗಳೂರು ಮಹಾನಗರ ಪಾಲಿಕೆ ವಸತಿ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿರುವ ಸಾವಿರಾರು ಫಲಾನುಭವಿ ನಿವೇಶನರಹಿತರಿಗೆ ಕೂಡಲೇ ಮನೆ ನಿವೇಶನ ಒದಗಿಸಿಕೊಡಬೇಕೆಂದು ಮಂಗಳೂರು ಮಹಾನಗರ ಪಾಲಿಕೆ ಆಡಳಿತವನ್ನು ಹಾಗೂ ಶಾಸಕ ವೇದವ್ಯಾಸ ಕಾಮತ್ ರನ್ನು CPIM ಮಂಗಳೂರು ನಗರ ದಕ್ಷಿಣ ಸಮಿತಿಯು ಒತ್ತಾಯಿಸುತ್ತದೆ. ಭೂಮಿಗೆ ವಿಪರೀತ ಬೆಲೆ ಏರಿಸುವ ಮೂಲಕ ಭೂದಂಧೆಯಾಗಿ ಮಾರ್ಪಡಿಸಿರುವ ಮಂಗಳೂರು ನಗರದಲ್ಲಿ ಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದ ಜನತೆ ಭೂಮಿ ಖರೀದಿಸಿ ಮನೆ ನಿರ್ಮಿಸುವುದು ಕನಸಿನ ಮಾತಾಗಿದೆ. ನಗರ ಪಾಲಿಕೆ ಅಸ್ತಿತ್ವಕ್ಕೆ ಬಂದ ನಂತರ ಕಳೆದ […]

Continue Reading

ಬಜಪೆ: ಲೋಕಾಯುಕ್ತ ದಾಳಿ ನಿರಂಜನ ಸ್ವಾಮಿ ಸರ್ಕಾರಿ ಅನುದಾನಿತ ಶಾಲಾ ಸಂಚಾಲಕಿಯ ಬಂಧನ

ದಕ್ಷಿಣ ಕನ್ನಡ ಜಿಲ್ಲಾ ಲೋಕಾಯಯಕ್ತ ಪೊಲೀಸರು ಇಂದು ದೊಡ್ಡ ಮಿಕವೊಂದನ್ನು ಬೇಟೆಯಾಡಿದ್ದು, ನಿವೃತ್ತ ಶಿಕ್ಷಕಿಯೊಬ್ಬರು ಪೆನ್ಷನ್ ಹಣ ಪಡೆಯಲು ಅಗತ್ಯ ದಾಖಲೆ ಸಿದ್ಧಪಡಿಸಲು ಐದು ಲಕ್ಷ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದ ಶಾಲಾ ಸಂಚಾಲಕಿಯನ್ನು ರೆಡ್ ಹ್ಯಾಂಡಾಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಜ್ಪೆ ನಿರಂಜನ ಸ್ವಾಮಿ ಸರ್ಕಾರಿ ಅನುದಾನಿತ ಶಾಲೆಯ ಸಂಚಾಲಕಿ ಜ್ಯೋತಿ ಪೂಜಾರಿ ರೆಡ್ ಹ್ಯಾಂಡಾಗಿ ಸೆರೆಯಾದವ ರಾಗಿದ್ದಾರೆ. ಸುಂಕದಕಟ್ಟೆಯಲ್ಲಿರುವ ಶ್ರೀ ನಿರಂಜನ ಸ್ವಾಮಿ ಶಿಕ್ಷಣ ಪ್ರತಿಷ್ಠಾನಕ್ಕೆ ಸೇರಿದ ಶ್ರೀ ನಿರಂಜನ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ […]

Continue Reading

ಮಂಗಳೂರು: ಪೊಲೀಸ್ ಇಲಾಖೆಯನ್ನು ಕ್ಯಾರೇ ಮಾಡದೆ ನಡೆಯುತ್ತಿದೆ ಭರ್ಜರಿ ಮಟ್ಕಾ ದಂಧೆ

ಮಂಗಳೂರಿನ ಹೃದಯ ಭಾಗದಲ್ಲಿ ಏನುಂಟು.? ಏನಿಲ್ಲ.? ಕೆಲವು ಅಕ್ರಮ ದಂಧೆಗಳನ್ನು ಮಟ್ಟಹಾಕಿದ ಪೊಲೀಸ್ ಇಲಾಖೆ ಮಟ್ಕಾ ದಂಧೆಯನ್ನು ಮಟ್ಟ ಹಾಕದೆ ರಾಜಾರೋಷವಾಗಿ ನಡೆಯಲು ಬಿಟ್ಟಿರುವುದು ಪೊಲೀಸ್ ಇಲಾಖೆಯನ್ನು ಸಂಶಯದ ದೃಷ್ಟಿಯಿಂದ ನೋಡುವಂತಾಗಿದೆ. ನಗರದ ಹೃದಯ ಭಾಗವಾದ ಸ್ಟೇಟ್ ಬ್ಯಾಂಕ್, ಹಂಪನಕಟ್ಟೆ, ಸುರತ್ಕಲ್, ಲೇಡಿಗೋಷನ್ ಬಳಿ ಲಿಂಕಿಂಗ್ ಟವರ್ ಏರಿಯಾಗಳಲ್ಲಿ ಅವ್ಯಾಹತವಾಗಿ ಮಟ್ಕಾ ದಂಧೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಲೇಡಿಗೋಷನ್ ಬಳಿಯ ಕೆಲವು ಏರಿಯಾಗಳಲ್ಲಿ ಯಾರಿಗೂ ಅನುಮಾನ ಬರದಂತೆ ಮಟ್ಕಾಕುಳಗಳು ಮಟ್ಕಾ ನಂಬರ್ ಬರೆಯುವ ದಂಧೆ ನಡೆಸುತ್ತಿದ್ದಾರೆ. ಕೇರಳದಿಂದ ಬಂದಿರುವ […]

Continue Reading

ಕೈಕಂಬ:ಮರ್ಕಝ್ ನಗರ ಬಳಿ ರಾಜಾ ಕಾಲುವೆ ಒತ್ತುವರಿ ಮಾಡಿ ಲೇಔಟ್ ನಿಮಾಣ; ಭಾರಿ ಭೂ ಕುಸಿತ.! ಆತಂಕದಲ್ಲಿ ನಾಗರಿಕರು

ಅಧಿಕಾರಿಗಳ ಅಂಧಾದುಂಧಿ ದರ್ಬಾರಿಗೆ ಇದೊಂದು ಅಪ್ಪಟ ಉದಾಹರಣೆ. ಗುರುಪುರ ಕೈಕಂಬದ ಮರ್ಕಝ್ ನಗರದ ಹತ್ತಿರವಿರುವ LUSHY GREENERY RESIDENTIAL LAYOUT ಮತ್ತು ADYANTHAYA FARMS ಎಂಬ ಹೆಸರಿನಲ್ಲಿ ಅರಬಿ ಎಂಬ ಇಳಿಜಾರು ಪ್ರದೇಶದಲ್ಲಿ ಲೇ ಔಟ್ ನಿರ್ಮಿಸಲಾಗಿದೆ. ಇಡೀ ಗಂಜಿಮಠ ಗ್ರಾಮದ ಮಳೆ ನೀರು ಹರಿದು ಹೋಗುವ ‘ಅರಬಿ’ಎಂಬ ಹೆಸರಿನ ರಾಜಾ ಕಾಲುವೆಯೊಂದು ಈ ಪ್ರದೇಶದಲ್ಲಿದೆ. ಕೇವಲ ಮಳೆಗಾಲ ಮಾತ್ರವಲ್ಲ ಬೇಸಿಗೆ ಕಾಲದಲ್ಲೂ ಈ ರಾಜಾ ಕಾಲುವೆಯಲ್ಲಿ ಬೃಹತ್ ಪ್ರಮಾಣದಲ್ಲಿ ನೀರು ಹರಿಯುತ್ತಿರುತ್ತದೆ.ಈ ರಾಜಾ ಕಾಲುವೆಯನ್ನು ಅತಿಕ್ರಮಣ […]

Continue Reading