ಜಿಲ್ಲಾಧಿಕಾರಿಗಳಿಗೆ ಜನಸಾಮಾನ್ಯರು, ಪರಿಸರಕ್ಕಿಂತ MRPL ಮೇಲೆ ಹೆಚ್ಚು ಕಾಳಜಿ: ಮುನೀರ್ ಕಾಟಿಪಳ್ಳ

ಜೋಕಟ್ಟೆ ನಾಗರಿಕರ ಧರಣಿ ಎರಡನೆ ದಿನಕ್ಕೆ ಕೋಕ್ ಸಲ್ಪರ್ ಘಟಕದ ಸಹಿತ ಎಮ್ ಆರ್ ಪಿಎಲ್ ನಿಂದ ಜನಸಾಮಾನ್ಯರ ಆರೋಗ್ಯ, ಪರಿಸರದ ಮೇಲಾಗುತ್ತಿರುವ ಗಂಭೀರ ಪರಿಣಾಮಗಳ ಕುರಿತು ದ.ಕ. ಜಿಲ್ಲಾಧಿಕಾರಿ ದರ್ಶನ್ ಅವರಿಗೆ ಯಾವುದೇ ಕಾಳಜಿ ಇಲ್ಲ. ಎಮ್ಆರ್ ಪಿಎಲ್ ಸಹಿತ ಮಾಲಿನ್ಯಕಾರಕ ಕೈಗಾರಿಕೆಗಳ ಹಿತಕಾಯಲು ಮಾತ್ರ ಟೊಂಕಕಟ್ಟಿ ನಿಲ್ಲುತ್ತಾರೆ. ಜೋಕಟ್ಟೆ, ಕೆಂಜಾರು ಭಾಗದಲ್ಲಿ ಗ್ರಾಮಸ್ಥರು ಎದುರಿಸುತ್ತಿರುವ ನರಕ ಸದೃಶ ಸ್ಥಿತಿಯ ಅರಿವಿದ್ದರೂ ಭೂಸ್ವಾಧೀನ, ಪುನರ್ವಸತಿಗೆ ಸಂಬಂಧಿಸಿ ಅನಗತ್ಯ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಮುನೀರ್ ಕಾಟಿಪಳ್ಳ […]

Continue Reading

ಮಂಗಳೂರು, ಬಂಟ್ವಾಳ ಆಡಳಿತ ಸೌಧ; ಹೇಳೋರಿಲ್ಲ.. ಕೇಳೋರಿಲ್ಲ.. ಇವರು ಆಡಿದ್ದೇ ಆಟ, ಆಧಿಕಾರಿಗಳದ್ದೇ ದರ್ಬಾರ್

‘ಸರಕಾರಿ ಕೆಲಸ ದೇವರ ಕೆಲಸ ‘ ಅನ್ನಲಾಗುತ್ತಿದೆ. ಇದೆಲ್ಲ ಈಗ ಮರೀಚಿಕೆಯಾಗಿಬಿಟ್ಟಿದೆ. ಜನರಿಗೆ ಸೇವೆ ನೀಡಲು ಸರಕಾರಿ ಕೆಲಸಕ್ಕೆ ಸೇರುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಎಷ್ಟು ಸಿಗುತ್ತೋ ಅಷ್ಟು ಬಾಚಿ ತಿನ್ನುವುದನ್ನೇ ಸರಕಾರಿ ಕೆಲಸ ಅಂದುಕೊಂಡವರ ಸಂಖ್ಯೆ ಹೆಚ್ಚಾಗಿದೆ. ಜನಸಾಮಾನ್ಯರು ಕೆಲಸಕ್ಕಾಗಿ ಸರಕಾರಿ ಕಚೇರಿಗೆ ಬಂದರೆ ಅಲೆದಾಡುವುದೇ ಆಗಿ ಬಿಟ್ಟಿದೆ. ಅದರಲ್ಲೂ ಮಂಗಳೂರಿನ ಮಿನಿ ವಿಧಾನಸೌಧ, ಬಂಟ್ವಾಳದ ಮಿನಿ ವಿಧಾನಸೌಧದ ಕಥೆಯೇ ಖರಾಬ್ ಆಗಿ ಬಿಟ್ಟಿದೆ. ಬಂಟ್ವಾಳ ಮಿನಿ ವಿಧಾನಸೌಧದ ಖದರ್ರೆ ಕರಕಲಾಗಿದೆ. ಇಲ್ಲಿನ ಮಿನಿ ವಿಧಾನಸೌಧದ […]

Continue Reading

ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಸಮರ್ಥನೆ ಹಾಸ್ಯಾಸ್ಪದ. ನೈತಿಕತೆ ಇದ್ದಲ್ಲಿ ಹರೀಶ್ ಕುಮಾರ್ ಬಹಿರಂಗ ಚರ್ಚೆಗೆ ಬರಲಿ: ಸಿಪಿಐಎಂ

ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಹಸ್ತಾಂತರಿಸುವ ರಾಜ್ಯ ಸರಕಾರದ ತೀರಾ ಜನವಿರೋಧಿ, ಖಾಸಗೀಕರಣದ ಆದೇಶವನ್ನು ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಸಮರ್ಥಿಸಿರುವುದು,ಖಾಸಗೀಕರಣ ವಿರೋಧಿಸುತ್ತಿರುವವರನ್ನು ಅವಹೇಳನಗೈದಿರುವುದು ವಿಷಾದನೀಯ ಎಂದು ಸಿಪಿಎಂ ದ.ಕ. ಜಿಲ್ಲಾ ಸಮಿತಿ ಹೇಳಿದೆ. ಖಾಸಗೀ ಮೆಡಿಕಲ್ ಕಾಲೇಜುಗಳು ಸರಕಾರಿ ಆಸ್ಪತ್ರೆಗಳನ್ನು ಯಾವುದೆ ಫಲಾಪೇಕ್ಷೆ ಇಲ್ಲದೆ ತಳಮಟ್ಟದಿಂದಲೆ ಉದ್ದಾರ ಮಾಡುವ ಕುರಿತು ಹರೀಶ್ ಕುಮಾರ್ ಅವರಿಗೆ ಅಷ್ಟೊಂದು ನಂಬಿಕೆ ಇದ್ದಲ್ಲಿ ಅವರು ಬಹಿರಂಗ ಚರ್ಚೆಗೆ ಬರಲಿ ಎಂದು ಸಿಪಿಐಎಂ […]

Continue Reading

ಆರೋಗ್ಯ ಕ್ಷೇತ್ರ ಸುಧಾರಣೆ ಎಂಬ ನೆಪದಲ್ಲಿ ಖಾಸಗೀಕರಣದ ಪರ ವಾದಿಸುವ ಕಾಂಗ್ರೇಸ್ ಪಕ್ಷದ ಹತಾಶೆಯುತ ಹೇಳಿಕೆ: ಡಿವೈಎಫ್ಐ

ಬೆಳ್ತಂಗಡಿ, ಬಂಟ್ವಾಳ ದ ತಾಲೂಕು ಆಸ್ಪತ್ರೆ, ಮೂಡಬಿದ್ರೆ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ವಿಟ್ಲ ಸಮುದಾಯ ಆಸ್ಪತ್ರೆಯನ್ನು ಖಾಸಗೀ ಸಂಸ್ಥೆಗಳೊಂದಿಗೆ ಕರಾರು ಒಪ್ಪಂದ ಮಾಡಿರುವ ಆರೋಗ್ಯ ಇಲಾಖೆಯ ನಡೆಯನ್ನು ವಿರೋಧಿಸಿದ್ದು ಮತ್ತು ಈ ಒಪ್ಪಂದ ರದ್ದುಗೊಳಿಸಲು ಡಿವೈಎಫ್ಐ ಮತ್ತು ಎಡಪಕ್ಷಗಳು ಮಾಡಿರುವ ಆಗ್ರಹಗಳಿಗೆ ಜನ ಕಿವಿಕೊಡಬಾರದಂತೆ, ಸಂಘಟನೆ ಸುಳ್ಳು ಪ್ರಚಾರ, ಜನರಲ್ಲಿ ಗೊಂದಲ ಸೃಷ್ಟಿಸುತ್ತಿವೆ ಎಂದು ದ.ಕ ಜಿಲ್ಲಾ ಕಾಂಗ್ರೇಸ್ ಪಕ್ಷ ಆರೋಪಿಸಿರುವ ಹೇಳಿಕೆಯು ಹತಾಶೆಯಿಂದ ಕೂಡಿದೆ. ಆರೋಗ್ಯ ಕ್ಷೇತ್ರದ ಸುಧಾರಣೆ ಎಂಬ ನೆಪದಲ್ಲಿ ಕಾಂಗ್ರೇಸ್ ಪಕ್ಷವು […]

Continue Reading

ಕಂಕನಾಡಿ ನಗರ ಪೊಲೀಸರ ಕಾರ್ಯಾಚರಣೆ: ಕೇರಳ ರಾಜ್ಯಕ್ಕೆ ಅಕ್ರಮ ಜಾನುವಾರು ಸಾಗಾಟ ಪ್ರಕರಣ; ನಾಲ್ಕು ಮಂದಿ ಆರೋಪಿಗಳ ಬಂಧನ, 27 ಕೋಣಗಳ ರಕ್ಷಣೆ

ಮಂಗಳೂರು: ಕರ್ನಾಟಕ ರಾಜ್ಯದಿಂದ ಮಂಗಳೂರು ಮಾರ್ಗವಾಗಿ ಕೇರಳ ರಾಜ್ಯದ ತಲಿಪರಂಬು ಎಂಬಲ್ಲಿಗೆ ಯಾವುದೇ ದಾಖಲೆ ಪತ್ರಗಳಿಲ್ಲದೆ ಸುಮಾರು 27 ಕೋಣಗಳನ್ನು ಈಚರ್ ಲಾರಿಯಲ್ಲಿ ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿ, ಸಾಗಾಟ ಮಾಡುತ್ತಿರುವುದನ್ನು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಪ್ಪಿನಮೊಗರು ಸಮೀಪ ದಿನಾಂಕ 16-05-2026 ರಂದು ಬೆಳಿಗ್ಗಿನ ಜಾವ 6:00ರ ಸಮಯಕ್ಕೆ ಕಂಕನಾಡಿ ನಗರ ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ. ನಾಗರಾಜ್ ರವರ ನೇತ್ರತ್ವದ ಕಂಕನಾಡಿ ಪೊಲೀಸರ ತಂಡ ಬೃಹತ್ ಕಾರ್ಯಾಚರಣೆ ನಡೆಸಿ, ಅಕ್ರಮ ಜಾನುವಾರು ಸಾಗಾಟವನ್ನು ಪತ್ತೆ […]

Continue Reading

ಉಡುಪಿ: ವೈದ್ಯ ಗುರುದತ್ ಎಡವಟ್ಟು; ಸಿಡಿದೆಡ್ಡ ದಲಿತ ಸಂಘಟನೆಗಳು

ಉಡುಪಿ ಜಿಲ್ಲೆಯ ಅಜ್ಜರಕಾಡು ಸರಕಾರಿ ಆಸ್ಪತ್ರೆಯ ಪುರಾಣ ಒಂದೊಂದಾಗಿ ಬಯಲಿಗೆ ಬರುತ್ತಲೇ ಇದೆ. ಈ ಹಿಂದೆ ಇದೇ ಆಸ್ಪತ್ರೆಯ ಜಿಲ್ಲಾ ಸರ್ಜನ್ ಆಗಿದ್ದ ಡಾ ಅಶೋಕ್ ಎಂಬಾತ ಕರ್ತವ್ಯ ನಿರತ ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ಕಿರುಕುಳದ ಆರೋಪ ಹೊತ್ತಿದ್ದರು. ಆದರೆ ಇದೀಗ ಇಲ್ಲಿನ ವೈದ್ಯ ಗುರುದತ್ ಎಂಬಾತ ದಲಿತ ಮುಖಂಡನಿಗೆ ಚಿಕಿತ್ಸೆ ನಿರಾಕರಿಸುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ. ಉಡುಪಿ ನಗರದ ನಿಟ್ಟೂರು ಸಮೀಪದ ಕೊಡಂಕೂರು ಎಂಬಲ್ಲಿ ದಲಿತ ಮುಖಂಡ ಮುರಳಿಯವರ ಮೇಲೆ ಹಲ್ಲೆ ಯತ್ನ ನಡೆದಿತ್ತು. […]

Continue Reading

ಮೂಡಬಿದ್ರೆ ಪೊಲೀಸರ ಕಾರ್ಯಾಚರಣೆ; ಅಕ್ರಮ ಜಾನುವಾರು ಸಹಿತ ಆರೋಪಿಗಳ ಬಂಧನ

ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಅಳಿಯೂರು ಎಂಬಲ್ಲಿ ದಿನಾಂಕ 14-05-2026 ರಂದು ಬೆಳಗ್ಗಿನ ಜಾವ 7:00ರ ಸಮಯಕ್ಕೆ ಮೂಡಬಿದ್ರೆ ಪೊಲೀಸ್ ಠಾಣೆಯ ಪಿಎಸ್ಐ ಕೃಷ್ಣಪ್ಪ ಮತ್ತು ಸಿಬ್ಬಂದಿಗಳು ರೌಂಡ್ಸ್ ಕರ್ತವ್ಯದಲ್ಲಿರುವಾಗ ಬೆಳುವಾಯಿ ಕಡೆಯಿಂದ ಮಾರ್ನಾಡು ಅಳಿಯೂರು ಕಡೆಗೆ ಮಾರುತಿ ಬ್ರೀಜಾ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟದ ಬಗ್ಗೆ ಬಾತ್ಮೀದಾರರಿಂದ ಬಂದ ಮಾಹಿತಿಯಂತೆ, ಪಡುಮಾರ್ನಾಡು ಗ್ರಾಮದ ಗುಂಡುಕಲ್ಲು ಕ್ರಾಸ್ ಬಳಿ ವಾಹನ ತಪಾಸಣೆ ನಡೆಸುತ್ತಿರುವಾಗ ಬೆಳುವಾಯಿ ಕಡೆಯಿಂದ KA19 MK4265 ನಂಬರಿನ ಮಾರುತಿ ಬ್ರೀಜಾ ಕಾರು ಅತೀ ವೇಗವಾಗಿ […]

Continue Reading

ಮಂಗಳೂರು: ಮಲಬಾರ್ ಗೋಲ್ಡ್ & ಡೈಮಂಡ್ಸ್ ನ ಅಂಗಸಂಸ್ಥೆಯಾದ ಮಲಬಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿವೇತನ ವಿತರಣೆ

ಜಿಲ್ಲೆಯ 70 ಸರ್ಕಾರಿ ಹಾಗೂ ಅನುದಾನಿತ ಕಾಲೇಜಿನ 586 ವಿದ್ಯಾರ್ಥಿನಿಯರಿಗೆ 47.64 ಲಕ್ಷ ರೂ. ವಿದ್ಯಾರ್ಥಿವೇತನ ವಿತರಣೆ ಮಂಗಳೂರು: ಮಲಬಾರ್ ಗೋಲ್ಡ್ & ಡೈಮಂಡ್ಸ್ ಇದರ ಅಂಗಸಂಸ್ಥೆಯಾದ ಮಲಬಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜಿಲ್ಲೆಯ 70 ಸರ್ಕಾರಿ ಹಾಗೂ ಅನುದಾನಿತ ಕಾಲೇಜಿನ ಸುಮಾರು 586 ವಿದ್ಯಾರ್ಥಿನಿಯರಿಗೆ ಸುಮಾರು 47.64 ಲಕ್ಷ ಮೊತ್ತದ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ಗುರುವಾರದಂದು ಮಂಗಳೂರು ನಗರದ ಪುರಭವನದಲ್ಲಿ ನಡೆಯಿತು. ಶಾಸಕರಾದ ಶ್ರೀ ಉಮಾನಾಥ ಕೋಟ್ಯಾನ್ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ ಮಕ್ಕಳು ವಿದ್ಯಾವಂತರಾಗಿ […]

Continue Reading

ಬ್ಯಾರಿ, ಕೊಂಕಣಿ ಭವನಕ್ಕೆ ಇನ್ನೂ ಸೂರಿಲ್ಲ! ಎರಡೆರಡು ಬಾರಿ ಶಿಲಾನ್ಯಾಸಗೊಂಡರೂ ಬ್ಯಾರಿಗಿಲ್ಲ ಬ್ಯಾರಿ ಭವನ

ಮಂಗಳೂರಿನಲ್ಲಿ ತುಳು ಭವನ ಸ್ವಂತ ಕಟ್ಟಡವನ್ನು ಹೊಂದಿ ಕಾರ್ಯಾಚರಿಸುತ್ತಿದೆ. ಆದರೆ ಕರಾವಳಿ ಭಾಗದಲ್ಲಿ ಪ್ರಮುಖವಾಗಿರುವ ಬ್ಯಾರಿ ಹಾಗೂ ಕೊಂಕಣಿ ಭಾಷೆಗಳಿಗೆ ಅಕಾಡೆಮಿ ಏನೂ ಸಿಕ್ಕಿದೆ. ಆದರೆ ಕೊಂಕಣಿ ಭವನ, ಬ್ಯಾರಿ ಭವನ ಮೇಲೇರದೆ ಹಾಗೆಯೇ ಉಳಿದಿದೆ. ಇದು ಕರಾವಳಿಯನ್ನು ಪ್ರತಿನಿಧಿಸುತ್ತಿರುವ ಶಾಸಕರು ಇಚ್ಛಾಶಕ್ತಿಯ ಕೊರತೆ ಅಲ್ಲದೇ ಮತ್ತೇನು..? ಬರೋಬ್ಬರಿ 1200 ವರ್ಷಗಳ ಇತಿಹಾಸದ ದಾಖಲೆಯನ್ನು ಹೊಂದಿರುವ ಬ್ಯಾರಿ ಭಾಷೆ 25 ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ. ಕರಾವಳಿ ಕರ್ನಾಟಕವಾದ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳಲ್ಲಿ ಬ್ಯಾರಿಗಳ […]

Continue Reading

ಮಂಗಳೂರು ನಗರ ಪೊಲೀಸರ ಕಾರ್ಯಾಚರಣೆ; 3.138 ಕೆ.ಜಿ ಗಾಂಜಾದೊಂದಿಗೆ ಆರೋಪಿಯ ಬಂಧನ

ಮೇರಿಹಿಲ್ ಹ್ಯಾಲಿಪ್ಯಾಡ್ ಮೈದಾನದ ಬಳಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಗಾಂಜಾ ಮಾದಕ ವಸ್ತುವನ್ನು ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಆರೋಪಿ ಇರ್ಷಾದ್ @ ಇರ್ಷಾ ಹಿಲರಿಯ ನಗರ ಮುಕ್ಕಚೇರಿ ಉಳ್ಳಾಲ ಎಂಬಾತನನ್ನು ಕಾವೂರು ಪೊಲೀಸರು ವಶಕ್ಕೆ ಪಡೆದು, ಆತನ ಬಳಿ ಇದ್ದ ಸುಮಾರು 3 ಕೆಜಿ 138 ಗ್ರಾಂ ತೂಕದ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ ಮೊಬೈಲ್ ಪೋನ್, ಸ್ಕೂಟರ್ ಮತ್ತು ಇತರ ಸೊತ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ. ಆರೋಪಿತನ ವಿರುದ್ದ ಕಾವೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. ಸಂ: 74/2026 […]

Continue Reading