ಮಂಗಳೂರು ನಗರದ ಐದು ಮಂದಿ ಬಿಲ್ಡರ್ ಗಳಿಗೆ ಮೂರು ವರ್ಷದ ಕಾರಾಗೃಹವಾಸದ ಸಜೆ, ಒಂದು ಲಕ್ಷ ರೂಪಾಯಿ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ

ಅಪರೂಪದ ಪ್ರಕರಣ ಒಂದರಲ್ಲಿ ಮಂಗಳೂರು ಗ್ರಾಹಕ ನ್ಯಾಯಾಲಯವು ಗ್ರಾಹಕರ ಪರವಾಗಿ ನೀಡಿದ್ದ ಆದೇಶವನ್ನು ಪಾಲಿಸದೆ ಉಲ್ಲಂಘನೆ ಮಾಡಿದ್ದ ಕಾರಣಕ್ಕೆ ಮಂಗಳೂರು ನಗರದ ಐದು ಮಂದಿ ಬಿಲ್ಡರ್ ಗಳಿಗೆ ಮೂರು ವರ್ಷದ ಕಾರಾಗೃಹವಾಸದ ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿ ದಂಡ ವನ್ನು ನೀಡುವಂತೆ ಆದೇಶಿಸಿದೆ. ಮಂಗಳೂರಿನ ರಾಮ್ ಭವನದಲ್ಲಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಮಾರಿಯನ್ ಇನ್‌ಫ್ರಾಸ್ಟ್ರಕ್ಚರ್‌ನ ಪಾಲುದಾರಾರಾಗಿರುವ ಉಜ್ವಲ್ ಡಿಸೋಜ ಮತ್ತು ನವೀನ್ ಕಾರ್ಡೋಝಾ ಹಾಗೂ ಅವರೊಂದಿಗೆ ಡೆವೆಲಪ್‌ಮೆಂಟ್ ಪಾಲುದಾರಾರಾಗಿರುವ ವಿಲಿಯಂ ಸಾಲ್ದಾನ್ಹ, ಗಾಯತ್ರಿ, ಮತ್ತು ಲೂಸಿ […]

Continue Reading

ಬಜಪೆ: ಗಾಂಜಾ ಆರೋಪಿಗಳ ಬಂಧನ

ಬಜಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕೈಕಂಬ ಪೊಳಲಿ ದ್ವಾರದಿಂದ ಅಡ್ಡೂರು ಕಡೆಗೆ ಗಾಂಜಾ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ದಿನಾಂಕ 17-11-2023 ಬೆಳಿಗ್ಗೆ ಸುಮಾರು 11.15 ರ ಹೊತ್ತಿಗೆ ಕಾಜಿಲ ಎಂಬಲ್ಲಿ ಉಪನಿರೀಕ್ಷಕರಾದ ಗುರಪ್ಪ ಶಾಂತಿ ಮತ್ತು ಸಿಬ್ಬಂದಿಗಳು ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ KA 19 EU 4898 ನಂಬ್ರದ ಕಪ್ಪು ಬಣ್ಣದ ಸ್ಕೂಟರ್ ನಲ್ಲಿ 3 ಜನ ಬರುತ್ತಿರುವುದನ್ನು ಗಮನಿಸಿ ನಿಲ್ಲಿಸಲು ಸೂಚಿಸಿದಾಗ ಪರಾರಿಯಾಗಲು ಯತ್ನಿಸಿದ ಮೂವರನ್ನು ಹಿಡಿದು ವಿಚಾರಿಸಿದಾಗ […]

Continue Reading

ಮಂಗಳೂರು: ಗಣಿ ಇಲಾಖೆಯಲ್ಲಿ ದಪ್ಪ ಚರ್ಮದ, ದರ್ಪದ ಅಧಿಕಾರಿಗಳದ್ದೇ ಅಂಧ ದರ್ಬಾರು.!

ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಆಟಾಟೋಪಗಳನ್ನು ಬರೆಯುತ್ತಾ ಹೋದರೆ ಅದು ಕಾದಂಬರಿಯಾದೀತು. ಲಂಚಬಾಕರ ಸ್ವರ್ಗ ಅಂದರೆ ತಪ್ಪಲ್ಲ. ಎಲ್ಲಾ ಧೋ ನಂಬರ್ ದಂಧೆಕೋರರಿಗೆ ಆಸ್ಥಾನ ಕೂಡ ಹೌದು. ಅದರಲ್ಲೂ ಗಣಿ ಇಲಾಖೆಯ ಲಂಚಬಾಕತನ ಡಿಫರೆಂಟ್. ಜಿಲ್ಲೆಯ ಗಣಿಯಲ್ಲಿರುವ ಖನೀಜಗಳನ್ನು ತೋಡಿ,ತೋಡಿ ಸಕತ್ತಾಗಿ ಮುಕ್ಕುವ ಕೆಲವು ಅಧಿಕಾರಿಗಳು. ಜಿಲ್ಲೆಯ ಹೊಯಿಗೆ, ಕಪ್ಪು, ಕೆಂಪು ಕಲ್ಲು ಕ್ವಾರಿ ಆರಂಭಿಸಲು ಕೆಲವೊಂದು ನೀತಿ ನಿಯಮಗಳಿವೆ. ಆದರೆ ಇಲ್ಲಿಯ ಅಧಿಕಾರಿಗಳಿಗೆ ಕೈ ಬೆಚ್ಚ ಮಾಡಿದರೆ ಯಾವುದೇ ರೂಲ್ಸ್ ಇಲ್ಲಿ ಮಾಯ. […]

Continue Reading

ಮೂತ್ರಶಾಸ್ತ್ರದ ಖ್ಯಾತ ತಜ್ಞ ಡಾ.ಜಿ.ಜಿ. ಲಕ್ಷ್ಮಣ ಪ್ರಭು ವಿಧಿವಶ

ಡಾಕ್ಟರ್ ಲಕ್ಷ್ಮಣ ಪ್ರಭು ವಾರದ ಹಿಂದೆ ಕರ್ತವ್ಯದಲ್ಲಿರುವಾಗ ಹೃದಯಾಘಾತಕ್ಕೆ ಒಳಗಾಗಿ, ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಇಂದು ಬೆಳಿಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ಅಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಹಲವಾರು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಅನುಭವ ಹೊಂದಿದ್ದ ಅವರು ಕೆಎಂಸಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದರು. ವೈದ್ಯಕೀಯ ಕ್ಷೇತ್ರದಲ್ಲಿ ಖ್ಯಾತಿ ಹೊಂದಿದ ಡಾ.ಲಕ್ಷ್ಮಣ ಪ್ರಭುರವರು ಯುರೊಲಿಥಿಯಾಸಿಸ್, ಆಂಡ್ರಾಲಜಿ, ಯುರೊಡೈನಾಮಿಕ್ಸ್, ರೆಕಾನ್-ಯೂರಾಲಜಿ, ಯುರೊಜಿನೆಕಾಲಜಿ ಮತ್ತು ಎಂಡೋರಾಲಜಿಯಲ್ಲಿ ಹೆಚ್ಚು ಪರಿಣತಿಯನ್ನು ಹೊಂದಿದ್ದರು.

Continue Reading

ನೇಜಾರು ಭೀಕರ ಹತ್ಯಾಕಾಂಡ: ಮಮ್ಮುಲ ಮರುಗಿ ಬಂಧುತ್ವಕ್ಕೆ ಅರ್ಥ ಕಲ್ಪಿಸಿದ ಉಡುಪಿ ಜನತೆ

ದೀಪಾವಳಿ ಆಚರಿಸದೆ ಸಂತ್ರಸ್ತ ಕುಟುಂಬದ ಬೆನ್ನಿಗೆ ನಿಂತ ಸ್ಥಳೀಯ ಹಿಂದೂ ಸಮುದಾಯ ಹೇಳಿ ಕೇಳಿ ಉಡುಪಿ ಹೆಸರು ಕೇಳಿದರೆ ಸಾಕು ರಾಜ್ಯದ ಜನತೆ ಹೌಹಾರಿ ಬಿಡುತ್ತಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಎಲ್ಲರನ್ನೂ ಹಿಂದಿಕ್ಕಿ ಫಸ್ಟ್ ಬರುತ್ತಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಇತ್ತೀಚಿನ ದಿನಗಳಲ್ಲಿ ಮತೀಯ ಕಾರಣಕ್ಕೆ ರಾಜ್ಯದಲ್ಲೇ ಫಸ್ಟ್. ಇನ್ನು ಉಡುಪಿಯಲ್ಲಿ ಹಿಜಾಬ್ ರಾದ್ಧಾಂತ ಸುದ್ದಿಯಾಗಿ ದೇಶ ವಿದೇಶಗಳಲ್ಲಿ ಉಡುಪಿಗೆ ಅಪಕೀರ್ತಿ ತಂದಿದ್ದಂತೂ ಸುಳ್ಳಲ್ಲ. ಅದರ ಜೊತೆಗೆ ರಾಜಕೀಯ ನಾಯಕರು, ಮತೀಯ ಸಂಘಟನೆಗಳು ತಲ್ವಾರ್, ಹೊಡಿ-ಬಡಿ ಹೇಟ್ […]

Continue Reading

ಮುಸ್ಲಿಂ ಯುವತಿಯರನ್ನು ಬೇಟೆಯಾಡುತ್ತಿದ್ದನೇ.. ಕಿಲ್ಲರ್ ಪ್ರವೀಣ.! ‘ಆಸೆ’ ಗೆ ಅಡ್ಡಿಪಡಿಸಿದ ಕುಟುಂಬಕ್ಕೆ ಕೊಳ್ಳಿ ಇಟ್ಟ ಕ್ರೂರಿ.!

ಹಂತಕನಿಗಿತ್ತಾ ಮತೀಯ ನಂಟು.? ಗಗನ ಸಖಿ, ಫ್ಯಾಮಿಲಿ ಮರ್ಡರ್ ಮಿಸ್ಟರಿ.! ರಾಜ್ಯವನ್ನೇ ಬೆಚ್ಚಿಬೀಳಿಸಿದ ಭಯಾನಕ, ಭೀಭತ್ಸ ಘಟನೆ ಉಡುಪಿ ಜಿಲ್ಲೆಯ ನೇಜಾರು ತೃಪ್ತಿ ನಗರದಲ್ಲಿ ನವೆಂಬರ್ 12 ರಂದು ನಡೆದಿತ್ತು. ಗಗನ ಸಖಿ ಮತ್ತಾಕೆಯ ಫ್ಯಾಮಿಲಿಯನ್ನು ಬೋಳುಮಂಡೆಯ ದುಷ್ಕರ್ಮಿಯೊಬ್ಬ ಸಿನಿಮೀಯ ಶೈಲಿಯಲ್ಲಿ ಬಂದು.. ಕೊಂದು..ಹೊರಟು ಹೋಗಿದ್ದ. ಆ ಬೋಳುಮಂಡೆಯ ಕ್ರಿಮಿನಲ್ ಅನ್ನು ಅದೇ ಸಿನಿಮಾ ಶೈಲಿಯಲ್ಲಿ ಪೊಲೀಸರು ಟ್ರೇಸ್ ಮಾಡಿ ತಮ್ಮ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಕೆಲವು ವರ್ಷಗಳ ಹಿಂದೆ ಕರಾವಳಿ ಭಾಗದಲ್ಲಿ ಹಿಂದೂ ಯುವತಿಯರ ನಾಪತ್ತೆ […]

Continue Reading

ವರದರಾಜ್ ಕೋರ್ಡೆಲ್ ವಿಧಿವಶ

ಎಡಪದವು ಕೋರ್ಡೆಲ್ ನಿವಾಸಿಯಾಗಿರುವ ವರದರಾಜ್ ಕೋರ್ಡೇಲ್ ರವರು ಇಂದು ಮಧ್ಯಾಹ್ನ ವಿಧಿವಶರಾಗಿದ್ದಾರೆ. ಸ್ಥಳೀಯವಾಗಿ ಜನರ ಪ್ರೀತಿಗೆ ಪಾತ್ರರಾಗಿದ್ದ ವರದರಾಜ್ ಸಾಮಾಜಿಕವಾಗಿ ಜನಜನಿತರಾಗಿದ್ದರು. ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಊರಿನ ಯುವಕರಿಗೆ ಸ್ಪೂರ್ತಿ ನೀಡಿ, ಯುವಕರ ಮಾರ್ಗದರ್ಶಕರಾಗಿದ್ದರು. ಪ್ರಸ್ತುತ ಕೊಂಚಾಡಿಯಲ್ಲಿ ವಾಸವಿರುವ ಅವರ ಅಂತಿಮ ಸಂಸ್ಕಾರ ಕಾರ್ಯ ಎಡಪದವು ಕೋರ್ಡೆಲ್ ನಲ್ಲಿರುವ ಅವರ ಮನೆಯಲ್ಲಿ ನಡೆಯಲಿರುವುದಾಗಿ ಕುಟುಂಬ ವರ್ಗ ತಿಳಿಸಿದೆ. ವರದರಾಜ್ ನಿಧಾನಕ್ಕೆ ಸ್ಪೆಷಲ್ ನ್ಯೂಸ್ ಪತ್ರಿಕಾ ಬಳಗ ತೀವ್ರ ಸಂತಾಪವನ್ನು ಸೂಚಿಸುತ್ತದೆ.

Continue Reading

ನೇಜಾರು ಕೊಲೆ ಪ್ರಕರಣ: ಬೆಳಗಾವಿಯ ಕುಡುಚಿಯಲ್ಲಿ ಪ್ರವೀಣ್ ಅರುಣ್ ಚೌಗಲೆ ಬಂಧನ; ಈತ ಮಂಗಳೂರು ಏರ್ ಪೋರ್ಟ್ ಸೆಕ್ಯೂರಿಟಿ

ಉಡುಪಿಯ ನೇಜಾರಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಉಡುಪಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗಾವಿಯ ಕುಡುಚಿಯಲ್ಲಿ ಪ್ರವೀಣ್ ಅರುಣ್ ಚೌಗಲೆ ಎಂಬಾತನನ್ನು ಬಂಧಿಸಿದ್ದಾರೆ.ಈತ ಮಂಗಳೂರು ಏರ್ ಏರ್ಪೋರ್ಟ್ ಸೆಕ್ಯೂರಿಟಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಸಿಆರ್‌ ಪಿಎಫ್‌ ಸಿಬ್ಬಂದಿ ಎನ್ನಲಾಗಿದೆ. ಆರೋಪಿ ಮಹಾರಾಷ್ಟ್ರ ಸಾಂಗ್ಲಿ ಮೂಲದವನಾಗಿದ್ದಾನೆ. ಕುಡಚಿಯಲ್ಲಿ ನೀರಾವರಿ ಇಲಾಖೆಯ ಕೆಲಸ ಮಾಡುತ್ತಿದ್ದ ಆತನ ಸಂಬಂಧಿಯೊಬ್ಬರ ಮನೆಯಲ್ಲಿ ಆರೋಪಿ ಅವಿತುಕೊಂಡಿದ್ದು, ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಉಡುಪಿ ಪೊಲೀಸರು ಈತನನ್ನು ಬಂಧಿಸಿದ್ದಾರೆ ಎಂದು […]

Continue Reading

ಇನ್ ಪ್ಯಾಶನ್ ಮಾಲಕ ಪಿ.ಬಿ. ಅಬ್ದುಲ್ ರಝಾಕ್ ನಿಧನ

ಸಮಾಜ ಸೇವಕ, ಧಾರ್ಮಿಕ ಮತ್ತು ಸಾಮಾಜಿಕ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಪಿ.ಬಿ ಅಬ್ದುಲ್ ರಝಾಕ್ ರವರು ಸೋಮವಾರ ತಡರಾತ್ರಿ ದುಬೈಯ ಆ್ಯಸ್ಟ‌ರ್ ಆಸ್ಪತ್ರೆಯಲ್ಲಿ ನಿಧನರಾದರು. ಮೂಲತಃ ಕಾಟಿಪಳ್ಳದವರಾಗಿದ್ದು, ಮಂಗಳೂರಿನ ಕುಲಶೇಖರದಲ್ಲಿ ವಾಸವಾಗಿದ್ದಾರೆ. ಮಂಗಳೂರಿನಲ್ಲಿ ಇನ್ ಫ್ಯಾಶನ್ ರೆಡಿಮೇಡ್ ಬಟ್ಟೆಯಂಗಡಿ ನಡೆಸುತ್ತಿದ್ದರು. ತಿಂಗಳ ಹಿಂದೆ ದುಬೈಗೆ ತೆರಳಿದ್ದು ಅಲ್ಲಿ ಮೆದುಳು ರಕ್ತಸ್ರಾವಕ್ಕೀಡಾದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಜಂಇಯ್ಯತುಲ್ ಫಲಾಹ್ ದ.ಕ.ಮತ್ತು ಉಡುಪಿ ಜಿಲ್ಲಾಧ್ಯಕ್ಷರಾಗಿದ್ದ ಇವರು ಜಂಇಯ್ಯತುಲ್ ಫಲಾಹ್ ಮಂಗಳೂರು ನಗರ ಘಟಕದ […]

Continue Reading

ಮುಸ್ಲಿಂ ಸೆಂಟ್ರಲ್ ಕಮಿಟಿ ಉಪಾಧ್ಯಕ್ಷರಾದ ಭಾಷಾ ತಂಙಳ್ ವಿಧಿವಶ

ಮಂಗಳೂರು ಬಂದರ್ ನಿವಾಸಿಯಾಗಿರುವ ಮಂಗಳೂರು ಸೆಂಟ್ರಲ್ ಕಮಿಟಿ ಉಪಾಧ್ಯಕ್ಷರಾದ ಸೈಯ್ಯದ್ ಭಾಷಾ ತಂಞಳ್ ಇಂದು ಸಂಜೆ ವಿಧಿವಶರಾಗಿದ್ದಾರೆ. ಬಂದರ್ ಕೇಂದ್ರ ಮಸೀದಿಯಲ್ಲಿ ಹಲವು ವರ್ಷಗಳಿಂದ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಜನಾನುರಾಯಿಯಾಗಿ ಗುರುತಿಸಿಕೊಂಡಿದ್ದರು. ಹಲವಾರು ಸಾಮಾಜಿಕ, ಧಾರ್ಮಿಕ ಸಂಘಟನೆಗಳಲ್ಲಿ ಮುಂಚೂಣಿಯಾಗಿ, ಮುಸ್ಲಿಂ ಲೀಗ್ ಪಕ್ಷದಲ್ಲೂ ಗುರುತಿಸಿಕೊಂಡಿದ್ದರು.

Continue Reading