ಚೆಕ್ ಬೌನ್ಸ್ ಪ್ರಕರಣ ಪೊಲೀಸರ ವಿರುದ್ಧ ಬಂಧನ ವಾರೆಂಟ್‌

ಮೂರು ಮಂದಿ ಪೊಲೀಸರ ವಿರುದ್ಧ ಮಂಗಳೂರಿನ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದೆ. ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವಾರೆಂಟ್ ಹೊರಡಿಸಲಾಗಿದೆ.ಐದನೇ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಈ ಆದೇಶ ಹೊರಡಿಸಿದ್ದು, ಮೂವರು ಮಂದಿ ಪೊಲೀಸರಿಗೆ ಇದೀಗ ಸಂಕಷ್ಟ ಎದುರಾಗಿದೆ. ಮಂಗಳೂರಿನ ಹಣಕಾಸು ಸಂಸ್ಥೆಯಿಂದ ಈಮೂರು ಮಂದಿ ಪೊಲೀಸ್ ಸಿಬ್ಬಂದಿಗಳು ಸಾಲ ಪಡೆದುಕೊಂಡಿದ್ದರು. ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಸುಸ್ತಿದಾರರಾಗಿದ್ದರು.ಈ ಬಗ್ಗೆ ಹಣಕಾಸು ಸಂಸ್ಥೆಗೆ ಪೊಲೀಸ್ ಸಿಬ್ಬಂದಿಗಳು ಚೆಕ್ ನೀಡಿದ್ದರು ಎನ್ನಲಾಗಿದೆ. […]

Continue Reading

ಪವಿತ್ರ ಹಜ್‌ ಯಾತ್ರೆಗೆ ಮಂಗಳೂರಿನಿಂದ ನೇರ ವಿಮಾನ ಯಾನ ರದ್ದು

ಪ್ರಸಕ್ತ ಸಾಲಿನ ಪವಿತ್ರ ಹಜ್‌ ಯಾತ್ರೆಗಾಗಿ ಮಂಗಳೂರು ವಿಮಾನ ನಿಲ್ದಾಣದಿಂದ ನೇರ ಪ್ರಯಾಣ ಅವಕಾಶವನ್ನು ರದ್ದುಪಡಿಸಲಾಗಿದೆ.ಕೋವಿಡ್‌ ಸಾಂಕ್ರಾಮಿಕದ ಬಳಿಕ ಮತ್ತೆ ಮಂಗಳೂರು ವಿಮಾನ ನಿಲ್ದಾಣದಿಂದ ಹಜ್‌ ಯಾತ್ರೆಗೆ ತೆರಳಲು ಯಾತ್ರಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಹಜ್‌ ಯಾತ್ರೆಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿಯೂ ಯಾತ್ರಿಗಳಿಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ವಿಮಾನ ಹತ್ತುವ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ, ಭಾರತೀಯ ಹಜ್‌ ಸಮಿತಿಯು ದೇಶದ ಹಲವಾರು ರಾಜ್ಯಗಳಲ್ಲಿನ ವಿಮಾನ ಹತ್ತುವ ಕೇಂದಗಳನ್ನು ರದ್ದು ಪಡಿಸಿದ್ದು, ಇದರಲ್ಲಿ ಮಂಗಳೂರು ವಿಮಾನ […]

Continue Reading

ಬಂಟ್ವಾಳದಲ್ಲಿ ಸಮರ್ಥ ಜಾತ್ಯತೀತ ನಾಯಕ ರಮಾನಾಥ ರೈ ಪರ ಹೆಚ್ಚಿನ ಮತದಾರರ ಒಲವು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಪ್ರಬಲ ಪೈಪೋಟಿಯ ಕ್ಷೇತ್ರಗಳಲ್ಲಿ ಒಂದು. ಬಿಜೆಪಿಯ ಹಾಲಿ ಶಾಸಕ ರಾಜೇಶ್ ನಾಯಕ್ ಎದುರಾಳಿಯಾಗಿ ಕಾಂಗ್ರೆಸ್ ನಿಂದ ರಮಾನಾಥ ರೈ ಸ್ಪರ್ಧೆ ಮಾಡುತ್ತಿದ್ದಾರೆ. ರಮಾನಾಥ ರೈ ಅವರಿಗೆ ಇದು ಒಂಭತ್ತನೇ ಚುನಾವಣೆ. ಎರಡು ಬಾರಿ ಸೋತಿದ್ದರೂ ಆರು ಬಾರಿ ಗೆದ್ದು ಪ್ರಬಲ ಮಂತ್ರಿಗಿರಿ ಗಿಟ್ಟಿಸಿಕೊಂಡಿದ್ದ ಸಮರ್ಥ ನಾಯಕ. ಒಮ್ಮೆ ನಾಗರಾಜ ಶೆಟ್ಟಿಯವರ ಎದುರು ಸೋಲು ಕಂಡಿದ್ದ ರಮಾನಾಥ ರೈ, ಆ ಸಂದರ್ಭದಲ್ಲಿ ಎದ್ದ ಹಿಂದೂ ಸಮಾಜೋತ್ಸವ ಬಿರುಗಾಳಿಗೆ ಜಾತ್ಯತೀತ ನಾಯಕ […]

Continue Reading

ಜಿಲ್ಲೆಯಲ್ಲಿ ಮತ್ತೆ ಮರುಕಳಿಸಿದ ಅನೈತಿಕ ಪೊಲೀಸ್‌ಗಿರಿ, ಕಾಲೇಜು ವಿದ್ಯಾರ್ಥಿ ಮೇಲೆ ಹಲ್ಲೆ

ಪುತ್ತೂರಿನಲ್ಲಿ ಅನ್ಯ ಧರ್ಮದ ಸಹಪಾಠಿ ವಿದ್ಯಾರ್ಥಿನಿಯರ ಜೊತೆಯಲ್ಲಿದ್ದ ಮುಸ್ಲಿಂ ಯುವಕನ ಮೇಲೆ ಕೋಮುವಾದಿ ದುಷ್ಕರ್ಮಿಗಳ ತಂಡವೊಂದು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಹಲ್ಲೆಗೊಳಗಾದ ಮೊಹಮ್ಮದ್ ಫಾರಿಸ್ ಕಬಕ ಸರ್ಕಾರಿ ಕಾಲೇಜಿನ ವಿದ್ಯಾರ್ಥಿ.ಮಧ್ಯಾಹ್ನ 1 ಗಂಟೆ ಸುಮಾರಿಗೆ ಪುತ್ತೂರು ಬಸ್ ನಿಲ್ದಾಣದ ಬಳಿಯ ಅಂಗಡಿಯೊಂದರಲ್ಲಿ ಫಾರಿಸ್ ಮತ್ತು ಆತನ ಕಾಲೇಜು ಸಹಪಾಠಿಗಳು ಜ್ಯೂಸ್ ಕುಡಿಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಸ್ಥಳೀಯ ಆಟೋ ಚಾಲಕ ಮತ್ತು ಅವನ ಸ್ನೇಹಿತರು ಅನ್ಯ ಧರ್ಮದ ಸಹಪಾಠಿ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿದ್ದಕ್ಕಾಗಿ ಫಾರಿಸ್ ಅವರನ್ನು ಥಳಿಸಿದ್ದಾರೆ. […]

Continue Reading

ಉತ್ತರ ಕ್ಷೇತ್ರದ ಅಭ್ಯರ್ಥಿ ಇನಾಯತ್‌ಅಲಿ ಚುನಾವಣೆಯಲ್ಲಿ ಗೆದ್ದರೆ ಯಕ್ಷಗಾನ ಸೇವೆ ಮಾಡಿಸುವೆ:ಯಕ್ಷಗಾನ ಕಲಾವಿದ ಶ್ರೀನಿವಾಸ್ ಸಾಲಿಯಾನ್

ಈ ಬಾರಿಯ ಚುನಾವಣೆಯಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಗೆದ್ದರೆ ಅವರ ಹೆಸರಿನಲ್ಲಿ ಯಕ್ಷಗಾನ ಸೇವೆ ನೀಡುವುದಾಗಿ ಕಾಂಗ್ರೆಸ್ ಕಾರ್ಯಕರ್ತ ಹಿರಿಯ ಯಕ್ಷಗಾನ ಪ್ರಸಂಗಕರ್ತರಾದ ಬೋಂದೆಲ್ ಕೃಷ್ಣನಗರ ನಿವಾಸಿ ಶ್ರೀನಿವಾಸ್ ಸಾಲಿಯಾನ್ ಹೇಳಿದ್ದಾರೆ. ಬೋಂದೆಲ್ ಕೃಷ್ಣಾನಗರದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಇನಾಯತ್ ಅಲಿ ಅವರು ಪುನೀತ್ ರಾಜ್ ಕುಮಾರ್ ಅವರಂತಹ ನಿಷ್ಕಲ್ಮಶ ಹೃದಯವುಳ್ಳ ಸಮಾಜ ಸೇವಕ. ಯಾವತ್ತೂ ಬಡವರಿಗೆ ನೊಂದವರಿಗೆ ದಾನ ಮಾಡಿದ್ದನ್ನು ಹೇಳಿಕೊಂಡು ಓಡಾಡಿದವರಲ್ಲ. […]

Continue Reading

ಕಾಂಗ್ರೇಸ್ ಜಗಳದಲ್ಲಿ ಫೈರ್‌ಬ್ರಾಂಡ್ ಭರತ್ ಶೆಟ್ಟಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುತ್ತಾರೋ..?

ಮಂಗಳೂರು ಉತ್ತರ: ಸದ್ಯಕ್ಕೆ ಬಿಜೆಪಿಯ ಫೈರ್‌ಬ್ರಾಂಡ್ ಭರತ್ ಶೆಟ್ಟಿ ಇಲ್ಲಿನ ಶಾಸಕರು. ಈ ಕ್ಷೇತ್ರದ ವಿಶೇಷ ಏನೆಂದರೆ ಇಲ್ಲಿ ಒಮ್ಮೆ ಕಾಂಗ್ರೇಸ್ ಗೆದ್ದರೆ,ಮತ್ತೊಮ್ಮೆ ಬಿಜೆಪಿ ಗೆಲುವು ಸಾಧಿಸುತ್ತಾ ಬರುತ್ತಿದೆ. 1957,1958 ರಲ್ಲಿ ಕಾಂಗ್ರೇಸ್ ಪಕ್ಷದ ಪಿ.ಆರ್. ಕರ್ಕೇರ ಹಾಗೂ ಕೆ. ದೂಮಪ್ಪ ಶಾಸಕರಾಗಿದ್ದರು. ಆದರೆ 1962,1967 ರಲ್ಲಿ ಪ್ರಜಾ ಸೋಷಲಿಸ್ಟ್ ಪಾರ್ಟಿಯ ಸಂಜೀವನಾಥ್ ಐಕಳ ಹಾಗೂ ಡಿ.ಪಿ. ಐತಾಳ್ ಗೆದ್ದು ಬಂದರು. ಇನ್ನು 1922ರಲ್ಲೂ ಬಿ.ಸುಬ್ಬಯ್ಯ ಶೆಟ್ಟಿ ಗೆಲ್ಲುವುದರ ಮೂಲಕ ಈ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ ತನ್ನ […]

Continue Reading

ದರ್ಗಾ ಝಿಯಾರತ್ತ್ ಮುಗಿಸಿ ಕುಟುಂಬಸ್ಥರ ಜೊತೆ ಬೀಚ್ ಗೆ ತೆರಳಿದ್ದ ಗಂಜಿಮಠ ಮಳಲಿ ನಿವಾಸಿ ಸಮುದ್ರ ಪಾಲು

ಕುಟುಂಬಸ್ಥರ ಜೊತೆ ಉಳ್ಳಾಲ ಸೈಯ್ಯದ್ ಮದನಿ ದರ್ಗಾ ಝಿಯಾರತ್ ಮುಗಿಸಿ ಬೀಚಿಗೆ ತೆರಳಿದ್ದ ವ್ಯಕ್ತಿಯೋರ್ವರು ಸಮುದ್ರ ಪಾಲಾದ ಘಟನೆ ನಡೆದಿದೆ.ಗಂಜಿಮಠ ಸಮೀಪದ ಮಳಲಿ ನಿವಾಸಿ ಖಾಲಿದ್ ಎಂಬವರು ಸಮುದ್ರ ಪಾಲಾದ ವ್ಯಕ್ತಿ. ಮಳಲಿಯ ಖಾಲಿದ್ ಅವರು ತನ್ನ ಕುಟುಂಸ್ಥರ ಜೊತೆ ಉಳ್ಳಾಲ ಸೈಯ್ಯದ್ ದರ್ಗಾ ಝಿಯಾರತ್ ಮುಗಿಸಿದ ಬಳಿಕ ಉಳ್ಳಾಲ ಬೀಚ್ ಗೆ ಹೋಗಿ ಸಮುದ್ರಕ್ಕೆ ಇಳಿದಿದ್ದರು.ಅ ವೇಳೆ ಸಮುದ್ರ ಬೃಹತ್ತ್ ಅಲೆಯೊಂದಕ್ಕೆ ಖಾಲಿದ್ ಹಾಗೂ ಅವರ ಮಗ ಸಿಲುಕಿ ಸಮುದ್ರಪಾಲಾಗಿದ್ದರು.ಇದನ್ನು ಕಂಡ ಅಲ್ಲಿದ್ದ ಈಜುಗಾರರು ಬಾಲಕನನ್ನು […]

Continue Reading

ನನ್ನನ್ನು ಅಪಹರಿಸಿ ನಾಮಪತ್ರ ವಾಪಾಸ್ ಪಡೆಯುವಂತೆ ಮಾಡಿದ್ದಾರೆ”- ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಕುಂಪಲ ಆರೋಪ.

ಮಂಗಳೂರು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಪಕ್ಷದಿಂದ ಕಣಕ್ಕಿಳಿಸಿದ್ದ ನನ್ನನ್ನು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ತಂಡವೊಂದು ಅಪಹರಿಸಿ ಕರೆದೊಯ್ದು ಬಲವಂತವಾಗಿ ನಾಮಪತ್ರ ಹಿಂತೆಗೆಯುವಂತೆ ಮಾಡಿದ್ದಾರೆ.ಎಂದು ಮಂಗಳೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ಅಲ್ತಾಫ್ ಕುಂಪಲ ಆರೋಪಿಸಿದ್ದಾರೆ.ನಾನು ಎಲ್ಲೂ ಓಡಿಹೋಗಿಲ್ಲ, ನನ್ನನ್ನು ಅಪಹರಿಸಿ ಬೆದರಿಸಿ ನನ್ನಿಂದ ನಾಮಪತ್ರ ಹಿಂದೆ ಪಡೆಯುವಂತೆ ಮಾಡಲಾಗಿದೆ. ನನಗೆ ಯಾವುದೇ ರೀತಿಯಲ್ಲಿ ಆಮಿಷ ಒಡ್ಡಲಾಗಿಲ್ಲ. ಈ ಕುರಿತು ಪೊಲೀಸ್ ಕಮಿಷನರ್ ಅವರಿಗೆ ಭದ್ರತೆ ನೀಡುವಂತೆ ಮನವಿ ಮಾಡಲಾಗಿದೆ” ಎಂದರು. ಬಳಿಕ ಮಾತಾಡಿದ ಜೆಡಿಎಸ್ ರಾಜ್ಯ ವಕ್ತಾರ ಎಂ.ಬಿ. ಸದಾಶಿವ […]

Continue Reading

ಭರತ್ ಶೆಟ್ಟಿ ಗೆಲುವಿನ ನಾಗಾಲೋಟಕ್ಕೆ ಕಡಿವಾಣ ಹಾಕುವವರು ಯಾರು.?

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುವುದು ಬಹುತೇಕ ಖಚಿತವಾದಂತೆ ತೋರುತ್ತಿದೆ. ಬಿಜೆಪಿಯಿಂದ ಹಾಲಿ ಶಾಸಕ ಭರತ್ ಶೆಟ್ಟಿ, ಕಾಂಗ್ರೆಸ್ ನಿಂದ ಯುವ ಮುಖ ಇನಾಯತ್ ಅಲಿ ಹಾಗೂ ಜೆಡಿಎಸ್ ನಿಂದ ಮೊಹಿದ್ದೀನ್ ಬಾವಾ ಕಣಕ್ಕಿಳಿದಿರುವುದು ಉತ್ತರದ ಒಟ್ಟಾರೆ ಲೆಕ್ಕಾಚಾರವನ್ನೇ ಬದಲಾಯಿಸಿದೆ. ತ್ರಿಕೋನ ಸ್ಪರ್ಧೆ ಇರುವ ಕ್ಷೇತ್ರಗಳು ಬಹುತೇಕ ಬಿಜೆಪಿ ಪಕ್ಷಕ್ಕೆ ಲಾಭವಾಗಿರುವುದು ಈ ಎಲ್ಲಾ ಹಿಂದಿನ ಚುನಾವಣೆಗಳು ಸಾಬೀತು ಪಡಿಸಿದೆ. ಬಿಜೆಪಿಯಿಂದ ಕಣಕ್ಕಿಳಿದಿರುವ ಹಾಲಿ ಶಾಸಕ ಭರತ್ ಶೆಟ್ಟಿ ಬಗ್ಗೆ ಕ್ಷೇತ್ರಾದ್ಯಂತ […]

Continue Reading

ಶಾಸ್ತ್ರಿ ಶೂಟೌಟ್ ಪ್ರಕರಣ; ರಾಘವೇಶ್ವರ ಶ್ರೀ, ಡಾ.ಪ್ರಭಾಕರ ಭಟ್ ವಿರುದ್ದದ ಪ್ರಕರಣ ರದ್ದು; ಹೈಕೋರ್ಟ್ ತೀರ್ಪು

ಬೆಂಗಳೂರು: ರಾಘವೇಶ್ವರ ಶ್ರೀ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್ ಇಂದು ಮಹತ್ವದ ಆದೇಶ ನೀಡಿದೆ. ಪುತ್ತೂರಿನಲ್ಲಿ ರಾಮಚಂದ್ರಾಪುರ ಮಠದ ಭಕ್ತನೆನ್ನಲಾದ ಬಂಟ್ವಾಳ ಸಮೀಪದ ಕೆದಿಲ ನಿವಾಸಿ ಶ್ಯಾಮಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಪ್ರಕರಣದಲ್ಲಿ ರಾಘವೇಶ್ವರ ಶ್ರೀ ಹಾಗೂ ಆರ್.ಎಸ್.ಎಸ್. ನಾಯಕ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ದದ ಆರೋಪಗಳನ್ನು ಹೈಕೋರ್ಟ್ ರದ್ದುಪಡಿಸಿದೆ. ಕರಾವಳಿ-ಮಲೆನಾಡು ಜಿಲ್ಲೆಗಳಲ್ಲಿ ಶಾಸ್ತ್ರಿ ಆತ್ಮಹತ್ಯೆ ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ರಾಘವೇಶ್ವರ ಶ್ರೀಗಳ ವಿರುದ್ದ ಹಲವು ಪ್ರಕರಣಗಳು ಮುನ್ನಲೆಗೆ ಬಂದ ಸಂದರ್ಭದಲ್ಲೇ ರಾಮಚಂದ್ರಾಪುರ ಮಠದ ಭಕ್ತ ಎನ್ನಲಾಗಿದ್ದ […]

Continue Reading