ಹಕ್ಕು ಪತ್ರ ಪಡೆದವರಿಗೆ ನಿವೇಶನ ಸ್ವಾಧೀನ ನೀಡದೆ ಅನ್ಯಾಯ : ಸಂತ್ರಸ್ತರಿಂದ ಕುಪ್ಪೆಪದವರು ಪಂಚಾಯತ್ ಮುಂಭಾಗ ಧರಣಿ

ಕುಪ್ಪೆ ಪದವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೂರಾರು ಸಂಖ್ಯೆಯಲ್ಲಿ ವಸತಿ ರಹಿತರು, ಮನೆ, ನಿವೇಶನಕ್ಕಾಗಿ ಗ್ರಾಮಪಂಚಾಯತ್ ಗೆ ಅರ್ಜಿ ಸಲ್ಲಿಸಿ ದಶಕದಿಂದ ಕಾಯುತ್ತಿದ್ದಾರೆ. ಇದರಲ್ಲಿ 98 ಕುಟುಂಬಗಳಿಗೆ 2018 ರಲ್ಲಿ ಶಾಸಕ ಭರತ್ ಶೆಟ್ಟಿ ನೇತೃತ್ವದಲ್ಲಿ ನಿವೇಶನ ಮಂಜೂರು ಮಾಡಿ ಹಕ್ಕು ಪತ್ರ ವಿತರಿಸಲಾಗಿತ್ತು. ಆದರೆ, ನಿವೇಶನವನ್ನು ಫಲಾನುಭವಿಗಳಿಗೆ ಸ್ವಾಧೀನ ನೀಡದೆ “ಇಂದು, ನಾಳೆ” ಎಂದು ಸತಾಯಿಸುತ್ತಾ ಬರಲಾಗಿದೆ. ಇದರಿಂದ ಬೇಸತ್ತ ಸಂತ್ರಸ್ತರು “ಮನೆ, ನಿವೇಶನ ಹೋರಾಟ ಸಮಿತಿ, ಕುಪ್ಪೆಪದವು” ಇದರ ನೇತೃತ್ವದಲ್ಲಿ ಇಂದು ಕುಪ್ಪೆಪದವು ಗ್ರಾಮ […]

Continue Reading

ದ.ಕ ಜಿಲ್ಲಾ ಕಾಂಗ್ರೆಸ್: ಮನೆಯೊಂದು ಮೂರು ಬಾಗಿಲು

ದ.ಕ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಾಂಗ್ರೆಸ್ಸಿನ ಕೆಲವು ತುಂಡು ಮುಖಂಡರೇ ಕಂಟಕ.! ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪಕ್ಷದ ಕೇಂದ್ರ ಸ್ಥಾನ ಮಂಗಳೂರಿನಲ್ಲಿದೆ. ಮಂಗಳೂರಿನಲ್ಲಿರುವ ಮಲ್ಲಿಕಟ್ಟೆ ಕಾಂಗ್ರೆಸ್ ಭವನವೇ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ಸಿನ ಕೇಂದ್ರ ಸ್ಥಾನ. ಒಂದೊಮ್ಮೆ ಜಿಲ್ಲೆಯಲ್ಲಿ ಗತವೈಭವದಿಂದ ಮೆರೆಯುತ್ತಿದ್ದ ಕಾಂಗ್ರೆಸ್ ಪಕ್ಷ ಇಂದು ಹೀನಾಯ ಸ್ಥಿತಿಗೆ ಬಂದು ತಲುಪಿದೆ. ಈ ಪರಿಸ್ಥಿತಿಗೆ ಬಂದು ತಲುಪಲು ಕಾರಣ ಯಾರು ಎಂಬ ಪ್ರಶ್ನೆಗೆ ಉತ್ತರ; ಕಾಂಗ್ರೆಸ್. ಕಾಂಗ್ರೆಸ್ಸಿಗೆ ಕಾಂಗ್ರೆಸ್ಸಿಗರೇ ಶತ್ರುಗಳು. ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಕಾಂಗ್ರೆಸ್ […]

Continue Reading

ಪುತ್ತೂರು: ಹನಿಟ್ರ್ಯಾಪ್ ಗೆ ಬಲಿಯಾದ್ರೆ ಹೈದರಾಲಿ?

ಪುತ್ತೂರು ತಾಲೂಕಿನ ಕುಂಬ್ರ ಗಟ್ಟಿಮನೆ ಸನ್ಯಾಸಿಗುಡ್ಡೆ ನಿವಾಸಿ ಹೈದರಾಲಿ ಎಂಬವರು ಡಿಸೆಂಬರ್ 15 ರಂದು ಮನೆ ಸಮೀಪದ ಖಾಸಗಿಯವರಿಗೆ ಸೇರಿದ ರಬ್ಬರ್ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಈ ಆತ್ಮಹತ್ಯೆ ಹಿಂದೆ ಹನಿಟ್ರ್ಯಾಪ್ ಸಂಚು ಇರುವುದಾಗಿ ಹೈದರಾಲಿ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಮರದ ವ್ಯಾಪಾರಿಯಾಗಿರುವ 37 ವರ್ಷದ ಹೈದರಾಲಿ ಆತ್ಮಹತ್ಯೆಯ ಬಗ್ಗೆ ಸ್ಥಳೀಯವಾಗಿ ನಾನಾ ಊಹಾಪೋಹಗಳು ಎದ್ದಿದ್ದು ಈ ಬಗ್ಗೆ ಹೈದರಾಲಿ ಅಣ್ಣ ಸಯ್ಯದ್ ಅಲವಿ ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಮ್ಮನ […]

Continue Reading

ಎಮರ್ಜೆನ್ಸಿ ಬ್ಲಡ್ ಹೆಲ್ಪ್ ಲೈನ್ ದ.ಕ ಮತ್ತು SKSSF ಮಾಣಿ ಇದರ ವತಿಯಿಂದ ಬ್ರಹತ್ ರಕ್ತದಾನ ಶಿಬಿರ, ಸಾಧಕರಿಗೆ ಸನ್ಮಾನ

ಬಂಟ್ವಾಳ: ಎಮರ್ಜೆನ್ಸಿ ಬ್ಲಡ್ ಹೆಲ್ಪ್ ಲೈನ್ ದ.ಕ ಕರ್ನಾಟಕ ಮತ್ತು SKSSF ಮಾಣಿ ಸೂರಿಕುಮಾರ್ ನೀರಪಾದೆ ಯೂನಿಟ್ ಇದರ ವತಿಯಿಂದ ಯೆನಪೋಯ ಆಸ್ಪತ್ರೆ ದೇರಳಕಟ್ಟೆ ಸಹಭಾಗಿತ್ವದಲ್ಲಿ ಬ್ರಹತ್ ರಕ್ತದಾನ ಶಿಬಿರವು 05/01/25 ಆದಿತ್ಯವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯ ತನಕ ಬದ್ರಿಯಾ ಜುಮ್ಮಾ ಮಸೀದಿ ಸೋರಿಕುಮಾರ್ ವಠಾರದಲ್ಲಿ ಮರ್ಹೂಮ್ ಮೊಹಮ್ಮದ್ ಸರ್ಫ್ರಾಝ್ ವೇದಿಕೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ 63 ರಕ್ತದಾನಿಗಳು ರಕ್ತವನ್ನು ನೀಡುವ ಮೂಲಕ ಜೀವಾಧಾನಿಯಾದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿBJM ಸೂರಿಕುಮೇರ್ ಸ್ಥಳೀಯ ಖತೀಬರಾದ […]

Continue Reading

ಸಿಂಗಾರಿ ಬೀಡಿ ಮಾಲಿಕನ ಮನೆಗೆ ತಡರಾತ್ರಿಯಲ್ಲಿ ಇ.ಡಿ.ಅಧಿಕಾರಿಗಳ ಸೋಗಿನಲ್ಲಿ ಬಂದ ದರೋಡೆಕೋರರು.

ಎರಡೂವರೆ ಗಂಟೆಗಳ ಕಾಲ ತಪಾಸಣೆ ನಾಟಕ. ಮೂಟೆಗಟ್ಟಲೆ ನಗದು ಹಣ, ಮೊಬೈಲ್ ಹೊತ್ತೊಯ್ದ ಖದೀಮರು. ಬಂಟ್ವಾಳ: ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಪ್ರಸಿದ್ಧ ಬೀಡಿ ಉದ್ಯಮಿ ಸಿಂಗಾರಿ ಹಾಜಿ ಸುಲೈಮಾನ್ ರವರ ಮನೆಯಲ್ಲಿ ಇ.ಡಿ.ಅಧಿಕಾರಿಗಳ ಸೋಗಿನಲ್ಲಿ ಬಂದು ದರೋಡೆ ನಡೆಸಿದ್ದಾರೆ. ಶುಕ್ರವಾರ ರಾತ್ರಿ ಎಂಟೂವರೆ ಗಂಟೆಗೆ ತಮಿಳುನಾಡು ನೋಂದಣಿಯ ಬಿಳಿ ಬಣ್ಣದ ಎರ್ಟಿಗಾ ಕಾರಿನಲ್ಲಿ ಬಂದ ಏಳು ಜನರ ತಂಡ ವ್ಯವಸ್ಥಿತವಾಗಿ ದರೋಡೆ ನಡೆಸಿ ಪರಾರಿಯಾಗಿದೆ. ಹಿಂದಿ, ತಮಿಳು, ಇಂಗ್ಲಿಷ್ ಮತ್ತು ಕನ್ನಡ ಭಾಷೆ ಮಾತನಾಡುವ […]

Continue Reading

ರಂಗಭೂಮಿ ರಂಗ ಶಿಕ್ಷಣ ಮಕ್ಕಳ ನಾಟಕೋತ್ಸವ ಸಮಾರೋಪ

ರಂಗ ಶಿಕ್ಷಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ : ಡಾ.ಜೀವನ್‌ರಾಂ ಸುಳ್ಯ ಉಡುಪಿ : ನಾಟಕ, ಯಕ್ಷಗಾನ, ನೃತ್ಯ ಮೊದಲಾದ ಕಲಾ ಕೌಶಲಗಳನ್ನು ಮಕ್ಕಳಿಗೆ ಕಲಿಸಿದರೆ ಅವರ ಶೈಕ್ಷಣಿಕ ಪ್ರಗತಿಗೆ ತೊಡಕಾಗುತ್ತದೆ ಎಂಬ ಆತಂಕ ಪಡುವುದು ಅಗತ್ಯವಿಲ್ಲ. ರಂಗ ಶಿಕ್ಷಣ ಮಕ್ಕಳ ಪ್ರಗತಿಗೆ ಪೂರಕವಾಗಲಿದೆ ಎಂಬುದನ್ನು ಹೆತ್ತವರು ಅರಿತುಕೊಳ್ಳಬೇಕು ಎಂದು ಖ್ಯಾತ ರಂಗ ಕರ್ಮಿ ಡಾ.ಜೀವನರಾಮ್ ಸುಳ್ಯ ಹೇಳಿದರು. ಅವರು ರಂಗಭೂಮಿ ಉಡುಪಿ ವತಿಯಿಂದ ಹಮ್ಮಿಕೊಂಡ ಶಾಲಾ ಮಕ್ಕಳಿಗೆ ರಂಗ ಶಿಕ್ಷಣ ಅಭಿಯಾನದ ಅಂಗವಾಗಿ ಎಂಜಿಎo ಕಾಲೇಜಿನ […]

Continue Reading

ಕರಾವಳಿಯ ಸಾಮರಸ್ಯಕ್ಕೆ ಹೊಸ ಭಾಷ್ಯ ಬರೆದ ಹೃದಯವಂತ ಶಿಕ್ಷಕ

ಕಣ್ಣೀರ ನಡುವೆಯಲ್ಲೂ ಮೊಂಟೆಪದವು ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯ ಸಂತೋಷ್ ಕಾರ್ಯಕ್ಕೆ ಮಿಡಿಯಿತು ಹೃದಯಗಳು.! ಶಿಕ್ಷಕರು ಎಂದರೆ ಕೇವಲ ಮಕ್ಕಳ ಭವಿಷ್ಯ ರೂಪಿಸುವವರಲ್ಲ, ಬದಲಾಗಿ ಮಾನವೀಯತೆಯ ಜೊತೆಗೆ ಅಕ್ಷರ ಜ್ಞಾನದ ಮೂಲಕ ಶಿಕ್ಷಣ ನೀಡುವ ಮಹಾನ್ ವ್ಯಕ್ತಿಗಳು. ಮೊನ್ನೆ ಮಂಜನಾಡಿ ಗ್ಯಾಸ್ ದುರಂತದಲ್ಲಿ ಮರಣ ಹೊಂದಿದ ಇಬ್ಬರು ಶಾಲಾ ಬಾಲಕಿಯರು, ಮತ್ತು ಚೇತರಿಸಿಕೊಳ್ಳುತ್ತಿರುವ ಒಂದು ಪುಟಾಣಿ ಇದೇ ಮೊಂಟೆಪದವು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು. ಮೂವರೂ 14, 12, 9 ವರ್ಷದ ಹೆಣ್ಣು ಮಕ್ಕಳು. ಇವರು ಗ್ಯಾಸ್ ದುರಂತ ಸಂಭವಿಸಿದ […]

Continue Reading

ಗುರುಪುರ ಪಲ್ಘುಣಿ ನದಿಯಲ್ಲಿ ಅಕ್ರಮ ಮರಳು ದಂಧೆ: ರಾಷ್ಟ್ರಪ್ರೇಮಿ ಮುಖಂಡರದ್ದೇ ಕಾರ್ಬಾರು.!

ಪ್ರಭಾವಿ ಗುತ್ತಿಗೆದಾರನ ಕಾಂಕ್ರೀಟ್ ಮಿಕ್ಸಿಂಗ್ ಪ್ಲಾಂಟಿಗೆ ಹರಿದು ಬರುತ್ತಿದೆ ದಿನನಿತ್ಯ ನೂರಾರು ಲೋಡ್ ಅಕ್ರಮ ಮರಳು .! ಗ್ರಾಮ ಪಂಚಾಯತ್, ಪೊಲೀಸ್, ಗಣಿ, ಕಂದಾಯ ಇಲಾಖೆಯನ್ನೇ ಬಾಯಿಮುಚ್ಚಿಸಿದ ಕರಾಮತ್ತಾದರೂ ಏನು.? ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ವ್ಯಾಪಕವಾಗಿ ನಡೆಯುತ್ತಿದ್ದು, ಇದನ್ನು ನಿಯಂತ್ರಿಸುವಲ್ಲಿ ಅಧಿಕಾರಿ ವರ್ಗ ಸಂಪೂರ್ಣ ವಿಫಲವಾಗಿದೆ. ಸರಕಾರದ ಅಧಿಕೃತ ಕಾನೂನುಗಳನ್ನು ಕಸದ ಬುಟ್ಟಿಗೆ ಎಸೆದು ಪ್ರಭಾವಿಗಳು ತಮಗೆ ಬೇಕಾದ ರೀತಿಯಲ್ಲಿ ಕಾನೂನುಗಳನ್ನು ರಚಿಸಿ ಅಧಿಕಾರಿ ವರ್ಗಕ್ಕೆ ‘ಮಾಮೂಲಿ’ ಸಂದಾಯ ಮಾಡಿ ಮರಳನ್ನು ದೋಚುತ್ತಿದ್ದಾರೆ. […]

Continue Reading

ಬಸ್ಸಿನಲ್ಲಿ ತಿಗಣೆ ಕಾಟ, ಆರೋಗ್ಯದ ಮೇಲೆ ಅಡ್ಡ ಪರಿಣಾಮ ಪ್ರಕರಣ: ಸಂತ್ರಸ್ತ ಮಹಿಳೆಗೆ 1 ಲಕ್ಷದ 29 ಸಾವಿರ ರೂಪಾಯಿ 6% ಬಡ್ಡಿ ವಿಧಿಸಿ ಪರಿಹಾರ: ದ.ಕ ಜಿಲ್ಲಾ ಗ್ರಾಹಕ ಆಯೋಗ

ಮಂಗಳೂರಿನಿಂದ ಬೆಂಗಳೂರಿಗೆ ಖಾಸಗಿ ಬಸ್‌ನಲ್ಲಿ ರಾತ್ರಿ ಪ್ರಯಾಣಿಸುತ್ತಿದ್ದಾಗ ಮಹಿಳೆಯೊಬ್ಬರಿಗೆ ತಿಗಣೆ ಕಚ್ಚಿ, ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆಗೆ 1 ಲಕ್ಷದ 29 ಸಾವಿರ ರೂಪಾಯಿಯನ್ನು ಶೇಕಡಾ 6% ಬಡ್ಡಿ ವಿಧಿಸಿ ಪರಿಹಾರವಾಗಿ ನೀಡುವಂತೆ ಬಸ್ಸಿನ ಮಾಲಕರಿಗೆ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. ಮಹಿಳೆ ನೀಡಿದ ದೂರನ್ನು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಸೋಮಶೇಖರಪ್ಪ ಕೆ.ಹಂಡಿಗೋಲ್‌ ಮತ್ತು ಶಾರದಮ್ಮ ಎಚ್‌.ಜಿ. ಈ ಆದೇಶ ನೀಡಿದ್ದಾರೆ. ಸೀ […]

Continue Reading

ಮುಲ್ಕಿ ಉಳಿಪ್ಪಾಡಿಯಲ್ಲಿ ಅಕ್ರಮ ಮರಳುಗಾರಿಕೆ ದಂಧೆ; ಗ್ರಾಮ ಪಂಚಾಯತ್ ಅಧ್ಯಕ್ಷರೇ ಅಕ್ರಮದಲ್ಲಿ ಶಾಮೀಲಂತೆ.!

ಮಂಗಳೂರು ತಾಲೂಕಿನ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಉಳಿಪ್ಪಾಡಿ ಕರಿಯತ್ತಲ ಗುಂಡಿ ಏತ ನೀರಾವರಿ ಪಂಪು ಬಳಿ ದಿನಂಪ್ರತಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಯಾವುದೇ ದಾಖಲೆ ಪತ್ರಗಳಿಲ್ಲದೆ ಮರಳು ಸಾಗಾಟ ಮಾಡಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ. ಎಲ್ಲಾ ಕಾನೂನು ಕ್ರಮಗಳನ್ನು ಗಾಳಿಗೆ ತೂರಿ ಇಲ್ಲಿ ಅಕ್ರಮ ಮರಳುಗಾರಿಕೆ ನಡೆಸಲಾಗುತ್ತಿದೆ. ಐಕಳ ಪಂಚಾಯತ್ ಅಧ್ಯಕ್ಷರ ಮುಂದಾಳತ್ವದಲ್ಲಿಯೇ ಅಕ್ರಮ ಮರಳು ಸಾಗಾಟ ಪ್ರತಿನಿತ್ಯ ಹಗಲು ರಾತ್ರಿ ನಡೆಸಲಾಗುತ್ತಿದೆ ಎಂಬ ಆರೋಪ ನಾಗರಿಕರದ್ದು. ಮುಲ್ಕಿ ಠಾಣಾ ಪೊಲೀಸರು, ಗಣಿ-ಭೂ ವಿಜ್ಞಾನ ಇಲಾಖೆಯ […]

Continue Reading