ಕುಟುಂಬದೊಳಗಿನ ಜಾಗದ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಹಣದ ಆಮಿಷಕ್ಕೆ ಬಲಿಯಾಗಿದ್ದ ದೈವದ ವೇಷಧಾರಿಗೆ ಸಂಕಷ್ಟ

ಸುಳ್ಯ ನ್ಯಾಯಾಲಯದಿಂದ ಎಫ್ ಐಆರ್ ದಾಖಲಿಸಿ ವರದಿ ನೀಡುವಂತೆ ಆದೇಶ. ದೈವ ವೇಷಧಾರಿ ಮೋಹನ, ಸಚಿನ್ ಮಡ್ತಿಲರಿಗೆ ಬಂಧನ ಭೀತಿ! ಐವರ್ನಾಡು ಗ್ರಾಮದ ಮಡ್ತಿಲದಲ್ಲಿ ಮಡ್ತಿಲ ಕುಟುಂಬದ ನೇಮೋತ್ಸವದ ಸಂದರ್ಭದಲ್ಲಿ ದೈವಧಾರಿಯು ನಿನಗೆ ಮಗು ಬೇಕಾ ಅಥವಾ ಜಾಗ ಬೇಕಾ.? ಎಂದು ಕೇಳಿ ಬೆದರಿಕೆ ಒಡ್ಡಿರುವುದಾಗಿ ಮಮತಾ ಭಾಸ್ಕರ ಮಡ್ತಿಲ ಎಂಬವರು ನೀಡಿರುವ ಪಿರ್ಯಾದಿಯನ್ನು ದಾಖಲಿಸಿಕೊಂಡು ತನಿಖೆ ಮಾಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಸುಳ್ಯ ನ್ಯಾಯಾಲಯವು ಆದೇಶ ನೀಡಿದ ಮೇರೆಗೆ ಬೆಳ್ಳಾರೆ ಪೊಲೀಸರು ದೈವಧಾರಿ ಮೋಹನ ಮತ್ತು […]

Continue Reading

ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಯ ದಣಿಗಳಿಗೆ ಕರಾರು ಒಪ್ಪಂದ; ಡಿವೈಎಫ್ಐ ವಿರೋಧ, ಒಪ್ಪಂದ ಹಿಂಪಡೆಯಲು ಆಗ್ರಹ.

ಖಾಸಗಿ ಆಸ್ಪತ್ರೆಗಳ ಲಾಭಿಗೆ ಮಣಿದು, ಸರಕಾರಿ ಆಸ್ಪತ್ರೆಗಳ ಕತ್ತು ಹಿಸುಕುವ ಹುನ್ನಾರ: ಡಿವೈಎಫ್ಐ ಹೋರಾಟದ ಎಚ್ಚರಿಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಆರೋಗ್ಯ ಸೇವೆ ಒದಗಿಸುವ ಹಿತದೃಷ್ಟಿಯಿಂದ ಖಾಸಗೀ ಆಸ್ಪತ್ರೆಗಳೊಂದಿಗೆ ಕರಾರು ಒಪ್ಪಂದ ಮಾಡಿಕೊಂಡಿರುವ ಕರ್ನಾಟಕ ರಾಜ್ಯ ಸರಕಾರದ ನಡೆಯನ್ನು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಕಟುವಾಗಿ ವಿರೋಧಿಸುತ್ತದೆ. ಇದು ಸರಕಾರಿ ಆಸ್ಪತ್ರೆಗಳನ್ನು ಸಂಪೂರ್ಣವಾಗಿ ಕತ್ತು ಹಿಸುಕಿ ಸಾಯಿಸಿ ಖಾಸಗೀ ಆಸ್ಪತ್ರೆಗಳಿಗೆ ಲಾಭಿ ಮಾಡಿಕೊಡುವ ಉದ್ದೇಶ ಈ ತೀರ್ಮಾನದ ಹಿಂದೆ ಅಡಗಿದೆ ಎಂದು ಆರೋಪಿಸಿದೆ. ಆರೋಗ್ಯ […]

Continue Reading

ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಗಳೊಂದಿಗೆ ಕರಾರು ಒಪ್ಪಂದ.

ಖಾಸಗೀಕರಣ ಮಾಡಲು ಹೊರಟ ರಾಜ್ಯ ಸರಕಾರ; ಇದು ಬಡಜನರ ಮೇಲಿನ ಮರಣಶಾಸನ: ಶೇಖರ್ ಲಾಯಿಲ ದ.ಕ ಜಿಲ್ಲೆಯ ವಿವಿಧ ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಗಳೊಂದಿಗೆ ಕರಾರು ಒಪ್ಪಂದ ಮಾಡಿಕೊಳ್ಳುವ ಮೂಲಕ ರಾಜ್ಯ ಸರ್ಕಾರ ಸರ್ಕಾರಿ ಆಸ್ಪತ್ರೆಗಳನ್ನು ಖಾಸಗೀಕರಣ ಮಾಡಲು ಹೊರಟಿದೆ. ಇದು ಬಡಜನರ ಮೇಲಿನ ಮರಣಶಾಸನವಾಗಿದೆ. ಬಡಜನರಿಗೆ ಉಚಿತ ಆರೋಗ್ಯ ಸೇವೆ ನೀಡುವ ಸರ್ಕಾರಿ ಆಸ್ಪತ್ರೆಗಳು ಜನಸಾಮಾನ್ಯರಿಗೆ ವರದಾನವಾಗಿತ್ತು. ಇದೀಗ ಏಕಾಏಕಿ ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಗಳೊಂದಿಗೆ ಕರಾರು ಒಪ್ಪಂದಕ್ಕೆ ಸಹಿ ಹಾಕುವ […]

Continue Reading

ಸುಳ್ಯ: ಮಸೀದಿಯ ಕಾಣಿಕೆ ಡಬ್ಬಿ ಕಳವು ಪ್ರಕರಣದ ಆರೋಪಿಯ ಸೆರೆ

ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸಂಪಾಜೆ ಗೂನಡ್ಕ ಎಂಬಲ್ಲಿರುವ ಮಸೀದಿಯ ಆವರಣದಲ್ಲಿದ್ದ ಕಾಣಿಕೆ ಡಬ್ಬಿಯನ್ನು ದಿನಾಂಕ 30.03.2026 ರಂದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 45/2026 ಕಲಂ 303(2)BNS -2023 ಪ್ರಕರಣ ದಾಖಲಿಸಿಕೊಂಡು ತನಿಖೆ ಹಂತದಲ್ಲಿತ್ತು. ದಿನಾಂಕ 06.04.2026 ರಂದು ಸುಳ್ಯ ಕೆಮ್ರಾಜೆ ಎಲಿಮಲೆ ಎಂಬಲ್ಲಿ ಪ್ರಕರಣದ ಆರೋಪಿ ಆಂದ್ರಪ್ರದೇಶದ ಪಶ್ಚಿಮ ಗೊದಾವರಿ ಮೂಲದ ನಿವಾಸಿ ಮಹಮ್ಮದ್‌ ಸಲ್ಮಾನ್‌ ಎಂಬಾತನನ್ನು ಸುಳ್ಯ ಪೊಲೀಸರು ದಸ್ತಗಿರಿ ಮಾಡಿ, ಆರೋಪಿತನಿಂದ ಕಳವು ಮಾಡಿದ 2,000 ರೂ […]

Continue Reading

ಬಂಟ್ವಾಳ: ಅಕ್ರಮ ಗಾಂಜಾ‌ ಮಾರಾಟ ಪ್ರಕರಣ: ಆರೋಪಿಗೆ 7 ವರ್ಷಗಳ ಶಿಕ್ಷೆ; 70 ಸಾವಿರ ರೂ. ದಂಡ

ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಮೇಲ್ಕಾರ್ ಬಸ್‌ ನಿಲ್ಲಾಣದ ಬಳಿ ದಿನಾಂಕ: 10.11.2020 ರಂದು ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ, ಆಗಿನ ಬಂಟ್ವಾಳ ನಗರ ಠಾಣಾ ಪೊಲೀಸ್ ನಿರೀಕ್ಷಕರಾದ ಚೆಲುವರಾಜ್ ರವರು ಧಾಳಿ ನಡೆಸಿ ರೂ 49,000/- ಮೌಲ್ಯದ 1.480 ಕಿ.ಗ್ರಾಂ ಗಾಂಜಾ ಹಾಗೂ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಟ್ವಾಳ ನಗರ ಠಾಣೆಯಲ್ಲಿ ಅಕ್ರ 126/2020ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ಆಗಿನ ಬಂಟ್ವಾಳ ವೃತ್ತ ನಿರೀಕ್ಷಕರಾಗಿದ್ದ ಟಿ. ಡಿ. […]

Continue Reading

ಸ್ಥಳೀಯ ಟೈಲರ್‌ಗಳ ಹಿತರಕ್ಷಣೆಗೆ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹ: ಉಡುಪಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಅಂಗಡಿಗಳಿಗೆ ಭೇಟಿ ನೀಡಿ ಎಚ್ಚರಿಕೆ

​ಉಡುಪಿ: ಜಿಲ್ಲೆಯಲ್ಲಿ ಹೊರರಾಜ್ಯದ ವ್ಯಾಪಾರಿಗಳಿಂದ ಸ್ಥಳೀಯ ಟೈಲರ್‌ಗಳಿಗೆ (ಹೊಲಿಗೆ ವೃತ್ತಿ ಮಾಡುವವರಿಗೆ) ಆಗುತ್ತಿರುವ ಅನ್ಯಾಯವನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಘಟಕ ಇಂದು ಬೃಹತ್ ಪ್ರತಿಭಟನಾತ್ಮಕ ಅಭಿಯಾನವನ್ನು ಹಮ್ಮಿಕೊಂಡಿತ್ತು. ​ಉಡುಪಿ ಜಿಲ್ಲೆಯಲ್ಲಿ ಹೊರರಾಜ್ಯಗಳಿಂದ ಬಂದ ವ್ಯಾಪಾರಿಗಳು ಬಟ್ಟೆ ಹಾಗೂ ಇತರ ಸಾಮಗ್ರಿಗಳನ್ನು ಮಾರಾಟ ಮಾಡುವುದರ ಜೊತೆಗೆ, ಸ್ಥಳದಲ್ಲೇ ಟೈಲರಿಂಗ್ ಕೆಲಸವನ್ನೂ ವಹಿಸಿಕೊಂಡು ಮಾಡುತ್ತಿದ್ದಾರೆ. ಇದರಿಂದಾಗಿ ದಶಕಗಳಿಂದ ಈ ವೃತ್ತಿಯನ್ನೇ ನಂಬಿಕೊಂಡಿರುವ ಸ್ಥಳೀಯ ಟೈಲರ್‌ಗಳ ಬದುಕಿಗೆ ಪೆಟ್ಟು ಬಿದ್ದಿದೆ. ಈ ಕುರಿತು ನೊಂದ ಟೈಲರ್‌ಗಳು ಉಡುಪಿ […]

Continue Reading

ಮಂಗಳೂರು: ಕೋಟ್ಯಂತರ ರೂಪಾಯಿ ಸಾಲ ಕೊಡಿಸುವುದಾಗಿ ನಂಬಿಸಿ ಕಮಿಷನ್‌ ಪಡೆದು ಮೋಸ; ಎಫ್ಐಆರ್ ರದ್ದುಗೊಳಿಸಲು ಹೈಕೋರ್ಟ್ ನಿರಾಕರಣೆ

ಬ್ಯಾಂಕುಗಳಿಂದ ಕೋಟ್ಯಂತರ ರೂಪಾಯಿ ಸಾಲ ಕೊಡಿಸುವುದಾಗಿ ನಂಬಿಸಿ ಕಮಿಷನ್‌ ಪಡೆದು 40 ಕೋಟಿ ರೂ. ವಂಚನೆ ಮಾಡಿದ್ದಾರೆ ಎನ್ನಲಾದ ಮಂಗಳೂರು ಮೂಲದ ರೋಶನ್ ಸಲ್ಡಾನಾ ಮತ್ತು ಆತನ ಪತ್ನಿ ಹಾಗೂ ಚಿತ್ರದುರ್ಗದ ಚಂದ್ರಶೇಖರ್, ಈ ಪ್ರಕರಣದ ಮೂವರು ಆರೋಪಿಗಳ ವಿರುದ್ಧದ 11 ಎಫ್‌ಐಆರ್ ಗಳನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಈ ಸಂಬಂಧ ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ. ಪ್ರಕರಣದ ಅಪರಾಧದ ಆರೋಪಗಳು ತನಿಖಾ […]

Continue Reading

ಮಂಗಳೂರು: ಪೊಲೀಸ್ ಇಲಾಖೆಯಲ್ಲಿ ದಕ್ಷ, ಪ್ರಾಮಾಣಿಕ ಸೇವೆ ಸಲ್ಲಿಸಿದ ಸತೀಶ್, ಜಯಾನಂದ ರವರಿಗೆ ಪ್ರತಿಷ್ಠಿತ ಮುಖ್ಯಮಂತ್ರಿ ಪದಕ ಪ್ರದಾನ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ 153 ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ 2025ನೇ ಸಾಲಿನ “ಮುಖ್ಯಮಂತ್ರಿ ಪದಕ” ಲಭಿಸಿದೆ. ಏಪ್ರಿಲ್ 2 ರಂದು ಬೆಂಗಳೂರಿನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಪದಕ ಪ್ರದಾನ ಮಾಡಿದ್ದಾರೆ. ಕುರಿಯ ಗ್ರಾಮದ ಮಾವಿನಕಟ್ಟೆ ನಿವಾಸಿ ಸತೀಶ್ ಅವರು ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ರೌಡಿನಿಗ್ರಹ ದಳ, ಅಪರಾಧ ಪತ್ತೆ ದಳ, ಸೈಬರ್ ಅಪರಾಧ ಪತ್ತೆ ದಳ, ಜಿಲ್ಲಾ ವಿಶೇಷ ತನಿಖಾ ತಂಡ ಸೇರಿದಂತೆ ಹಲವು ಪ್ರಮುಖ ವಿಭಾಗಗಳಲ್ಲಿ […]

Continue Reading

ಅನಾಗರಿಕರಿಗೆ ಗುಂಡಿ ತೋಡಿದ ಪಟ್ಟಣ ಪಂಚಾಯತ್; ಸೋಮಾವತಿ ನದಿ ಉಳಿಸಲು ಪಣ.

ನಾಗರಿಕ ಸಮಾಜ ವಿಕಸನಗೊಳ್ಳುತ್ತಿದ್ದಂತೆಯೇ ಅನಾಗರಿಕತನವೂ ಹೆಚ್ಚುತ್ತಿದೆ ಬೆಳ್ತಂಗಡಿ ತಾಲೂಕಿನ ಪ್ರಮುಖ ನದಿಗಳಲ್ಲಿ ಒಂದಾಗಿ ಬೆಳ್ತಂಗಡಿ ಪಟ್ಟಣ ವ್ಯಾಪ್ತಿಯಲ್ಲಿ ಜೀವನದಿಯಾಗಿ ಹರಿಯುತ್ತಿರುವ ಸೋಮಾವತಿಯ ಒಡಲನ್ನು ಡಂಪಿಂಗ್ ಯಾರ್ಡ್ ಮಾಡಲು ಹೊರಟ ಖದೀಮರಿಗೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ಗುಂಡಿ ತೋಡಿದ ಅಪರೂಪದ ಸಂಗತಿ ಬೆಳಕಿಗೆ ಬಂದಿದೆ. ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಜೀವನಾಡಿಯಾಗಿ ಜನರಿಗೆ ಕುಡಿಯುವ ನೀರು ಒದಗಿಸುವ ಏಕೈಕ ನದಿ ಸೋಮಾವತಿ. ಸಾವಿರಾರು ಜನರ ಜೀವ ಉಳಿಸಿದ ಈಕೆಯ ಮೇಲೆ ಮನುಷ್ಯ ಪ್ರಾಣಿ ದಿನನಿತ್ಯ ಅತ್ಯಾಚಾರ ನಡೆಸುತ್ತಿದ್ದಾನೆ. ಇದು […]

Continue Reading

ಬೆಳ್ತಂಗಡಿ ಲಾಯಿಲ ಗ್ರಾಮದ ದಲಿತ ಕುಟುಂಬಗಳು ವಾಸಿಸುವ ಊರಿನ ರಸ್ತೆಯ ಕಥೆ ವ್ಯಥೆ ಇದು

ಪರಿಶಿಷ್ಟರ ಬಗ್ಗೆ ಮೊಸಳೆ ಕಣ್ಣೀರು ಹಾಕುವ ಸರಕಾರಗಳು; ಪರಿಶಿಷ್ಟ ಕುಟುಂಬಗಳು ವಾಸಿಸುವ ರಸ್ತೆಯ ಯಾತನೆಗೆ ಇನ್ನಾದರೂ ಕಿವಿ ಕೊಡುತ್ತಾ..? ಇದು ತಾಲೂಕು ಕೇಂದ್ರದಿಂದ ಕೂಗಳತೆಯ ದೂರದಲ್ಲಿರುವ ಲಾಯಿಲ ಗ್ರಾಮದ ಅತ್ಯಂತ ಹೆಚ್ಚು ಪರಿಶಿಷ್ಟ ಜಾತಿ ಜನಸಂಖ್ಯೆಯನ್ನು ಹೊಂದಿರುವ ರಸ್ತೆಯ ಕರುಣಾಮಯ ಕಥೆ. ಇಲ್ಲಿ 80 ಕ್ಕೂ ಹೆಚ್ಚು ಕೇವಲ ದಲಿತ ಕುಟುಂಬಗಳೇ ಇವೆ. ಆದರೆ ಇಲ್ಲಿನ ರಸ್ತೆ ಮಾತ್ರ ಇಂದಿಗೂ ಡಾಮರೀಕರಣವನ್ನೇ ಕಂಡಿಲ್ಲ. ಒಂದು ಕಿ.ಮೀ. ಡಾಮರೀಕರಣಗೊಂಡ ರಸ್ತೆಯಲ್ಲಿ ಡಾಮರೀಕರಣದ ಅಸ್ತಿಪಂಜರಗಳು ಕಾಣಸಿಗುತ್ತದೆ. ಲಾಯಿಲ ಗ್ರಾಮದ ಲಾಯಿಲ […]

Continue Reading