ಅಡ್ಯಾರಿನ ಬೊಂಡ ಫ್ಯಾಕ್ಟರಿಗೆ ಅಧಿಕಾರಿಗಳ ಬೇಟಿ, ಪರಿಶೀಲನೆ; ಪ್ಯಾಕ್ಟರಿ ಬಂದ್

ಮಂಗಳೂರು: ಅಡ್ಯಾರಿನ ಬೊಂಡ ಫ್ಯಾಕ್ಟರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಜಿಲ್ಲಾ ಅಂಕಿತ ಅಧಿಕಾರಿ ಆಹಾರ ಸುರಕ್ಷತೆ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ತಾಲ್ಲೂಕು ಆರೋಗ್ಯಾಧಿಕಾರಿ ಮಂಗಳೂರು ಮತ್ತು ತಂಡದವರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ಆದೇಶದವರೆಗೆ ಎಳನೀರು ಮತ್ತು ಇತರೆ ಆಹಾರ ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಅಡ್ಯಾರಿನಲ್ಲಿರುವ ನ್ಯಾಚುರಲ್ಸ್ ಐಸ್ ಕ್ರೀಂ ಕಂಪೆನಿಯ ಬೊಂಡ ಪ್ಯಾಕ್ಟರಿಯಲ್ಲಿ ಎಳನೀರು ಕುಡಿದು ಸುತ್ತ ಮುತ್ತಲಿನ ಪರಿಸರದ ನಿವಾಸಿಗಳು ಅಸ್ವಸ್ಥರಾದ ಹಿನ್ನಲೆಯಲ್ಲಿ ಬೊಂಡ ಪ್ಯಾಕ್ಟರಿಗೆ ಅಧಿಕಾರಿಗಳ ತಂಡ ಭೇಟಿ […]

Continue Reading

ಪುತ್ತೂರು ವಿಧಾನ ಸಭಾ ಕ್ಷೇತ್ರದ ಸಂಯೋಜಕರಾಗಿ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಆಯ್ಕೆ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಲೋಕಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಲು ಮತ್ತು ಗೆಲುವಿಗೆ ಸಹಕಾರಿಯಾಗಲು ಕೆ.ಪಿ.ಸಿ‌.ಸಿ. ಕಾರ್ಯದ್ಯಾಕ್ಷರಾದ ಶ್ರೀ ಮಂಜುನಾಥ ಭಂಡಾರಿ ಶಿಪಾರಸ್ಸಿನ ಮೇರೆಗೆ ಕೆ.ಪಿ.ಸಿ.ಸಿ ಅದ್ಯಕ್ಷರಾದ ಶ್ರೀ. ಡಿ.ಕೆ.ಶಿವಕುಮಾರ್ ಅವರ ಅನುಮೋದನೆಯೊಂದಿಗೆ ಪುತ್ತೂರು ವಿಧಾನ ಸಭಾ ಕ್ಷೇತ್ರದ ಸಂಯೋಜಕರಾಗಿ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಯವರನ್ನು ತಕ್ಷಣದಿಂದ ಕಾರ್ಯಪ್ರವರ್ತರಾಗುವಂತೆ ಈ ಮೂಲಕ ಆದೇಶಿಸಿಸಲಾಗಿದೆ. ಶ್ರಿಯುತರು ಈ ಹಿಂದೆ ನಡೆದ […]

Continue Reading

ಹಿಂದುತ್ವದಲ್ಲಿ ಬಂಟ-ಬಿಲ್ಲವರ ಬದುಕು-ಮರಣಕ್ಕೆ ಸಮಾನ ಗೌರವ ಸಿಕ್ಕಿತ್ತಾ ?

ತಲವಾರು ಹಿಡಿದು, ಹಿಡಿಸಿ ತಲವಾರಿಗೇ ಬಲಿಯಾದ ಬಂಟ ಸುಖಾನಂದ ಶೆಟ್ಟಿ ಮತ್ತು ಬಿಲ್ಲವ ಪೊಳಲಿ ಅನಂತು ಬದುಕು ಮತ್ತು ಸಾವು ಒಂದೆನಾ ? ಇಬ್ಬರ ಬದುಕು ಮತ್ತು ಮರಣಕ್ಕೆ ಒಂದೇ ನ್ಯಾಯ, ಒಂದೇ ಗೌರವ ಸಿಕ್ಕಿತ್ತಾ ? ✍️. ನವೀನ್‌ ಸೂರಿಂಜೆ, ಪತ್ರಕರ್ತರು ಕೊಲೆ ಮಾಡುವ ತಲವಾರಿಗೆ ಬಂಟ-ಬಿಲ್ಲವ ಎಂಬುದು ಗೊತ್ತಾಗುತ್ತೋ ಇಲ್ವೋ ! ಬಂಟ- ಬಿಲ್ಲವರನ್ನು ಬಳಸಿಕೊಳ್ಳುವ ಹಿಂದುತ್ವ ರಾಜಕಾರಣಕ್ಕಂತೂ ಸ್ಪಷ್ಟವಾಗಿ ಜಾತಿ ಗೊತ್ತಾಗುತ್ತದೆ. ಹಾಗಾಗಿ ಹಿಂದುತ್ವದಲ್ಲಿ ಬದುಕಿದ್ದಾಗಲೂ ಬಂಟ-ಬಿಲ್ಲವರಿಗೆ ಒಂದೇ ರೀತಿಯ ಪ್ರಾತಿನಿಧ್ಯ ಸಿಗುವುದಿಲ್ಲ. […]

Continue Reading

ಕೆಲಸದ ಆಮಿಷವೊಡ್ಡಿ ವಾಮಂಜೂರಿನ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ: ಓರ್ವ ಆರೋಪಿಗೆ ಜಾಮೀನು

ಕೆಲಸದ ಆಮಿಷವೊಡ್ಡಿ ಯುವತಿಯನ್ನು ಕರೆಸಿ ಆಕೆಯ ಮೇಲೆ ಅತ್ಯಾಚಾರಗೈದ ಘಟನೆಗೆ ಸಂಬಂಧಿಸಿ ಬಂಧಿತ ಓರ್ವ ಆರೋಪಿಯನ್ನು ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ. ಬನ್ನೂರು ಗ್ರಾಮದ ಬನ್ನೂರು ಬೈಲು ಎಂಬಲ್ಲಿನ ಬಾಡಿಗೆ ಮನೆಯೊಂದರಲ್ಲಿ ಮಾರ್ಚ್ 13 ರಂದು ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ವಾಮಂಜೂರು ಮೂಲದ ಯುವತಿಗೆ ಪುತ್ತೂರಿನ ಯುವಕನೊಂದಿಗೆ ಇನ್ ಸ್ಟಾಗ್ರಾಮ್ ಮೂಲಕ ಸಂಪರ್ಕವಿದ್ದು, ಆಕೆಯ ಕೋರಿಕೆಯಂತೆ ಯುವಕ ಪುತ್ತೂರಿನಲ್ಲಿ ಆಕೆಗೆ ಉದ್ಯೋಗಕ್ಕಾಗಿ ತನ್ನ ಸ್ನೇಹಿತರಿಗೆ ತಿಳಿಸಿದ್ದ. ಯುವಕನ ಸ್ನೇಹಿತರಾದ ಕರ್ವೇಲು […]

Continue Reading

ಬಂಟ್ವಾಳ: ಸಜಿಪ ಬಳಿ 2015ರಲ್ಲಿ ನಡೆದಿದ್ದ ಮೊಹಮ್ಮದ್ ನಾಸಿರ್ ಕೊಲೆ ಪ್ರಕರಣ; ಕೊಲೆ ಆರೋಪ ಸಾಬೀತು.

ಬಂಟ್ವಾಳ : 2015 ಆಗಸ್ಟ್ 6ರಂದು ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತನ್ನ ಪತ್ನಿಗೆ ಊಟ ಕೊಟ್ಟು ಬಸ್ಸಿನಲ್ಲಿ ಬಂದು ಮೆಲ್ಕಾರ್ ನಿಂದ ತನ್ನ ಮನೆಗೆ ಸ್ನೇಹಿತನ ಆಟೋದಲ್ಲಿ ಹೋಗುತ್ತಿದ್ದ ಮೊಹಮ್ಮದ್ ನಾಸಿರ್ ಎಂಬವರನ್ನು ಎರಡು ಬೈಕುಗಳಲ್ಲಿ ಬಂದ ನಾಲ್ವರ ತಂಡ ಸಜಿಪ ಬಳಿಯ ಕೊಳಕೆ ಎಂಬಲ್ಲಿ ತಡೆದು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದರು. ಅಂದಿನ ಬಂಟ್ವಾಳ ಇನ್ಸ್ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ ನೇತೃತ್ವದ ಪೊಲೀಸ್ ತಂಡ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. 2015ರ ಆ.6 ರಂದು ಮೊಹಮ್ಮದ್‌ ಮುಸ್ತಾಫ‌ ಮತ್ತು ಮೊಹಮ್ಮದ್‌ […]

Continue Reading

ಸೌಜನ್ಯ ಪರ ನೋಟಾ ಬಳಕೆ ರಾಜಕೀಯ ವಂಚನೆ

ಎದುರಾಳಿ ಪಕ್ಷದ ವಿರುದ್ದ ಮತ ಚಲಾಯಿಸಿ ಎಂದು ಕರೆ ಕೊಡದೇ, ನೋಟಾ ಬಳಸುವಂತೆ ಜಾಗೃತಿ ಮೂಡಿಸುವುದು ರಾಜಕೀಯ ವಂಚನೆ ✍️. ನವೀನ್ ಸೂರಿಂಜೆ, ಪತ್ರಕರ್ತರು ಧರ್ಮಸ್ಥಳ ಗ್ರಾಮದಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಸೌಜನ್ಯ ಪರ ಹೋರಾಟಗಾರರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನೋಟಾಗೆ ಮತ ಚಲಾಯಿಸುವಂತೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇದು ಹೋರಾಟಗಾರರ ‘ರಾಜಕೀಯ ವಂಚನೆ’ಯಲ್ಲದೆ ಇನ್ನೇನೂ ಅಲ್ಲ. 2012ರ ಅಕ್ಟೋಬರ್ 9 ರಂದು ಸೌಜನ್ಯಾ ಅವರನ್ನು ಅಪಹರಿಸಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಬೆಳ್ತಂಗಡಿ […]

Continue Reading

ಉಡುಪಿ ಲೋಕಸಭೆ: ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತರೆ ನಿರ್ಣಾಯಕ.. ಬಿಜೆಪಿ ‘ಕೋಟೆ’ ಗೆ ಕನ್ನ ಹಾಕುತ್ತರಾ ಹೆಗ್ಡೆ..?

ದಕ್ಷಿಣ ಕನ್ನಡ ಜಿಲ್ಲೆಯಂತೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕದನ ರಂಗೇರುತ್ತಿದೆ. ಎರಡೂ ಪಕ್ಷಕ್ಕೂ ಗೆಲ್ಲುವ ಸಮಾನ ಅವಕಾಶ ಇರುವ ಕ್ಷೇತ್ರವಿದ್ದರೆ ಅದು ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ. ಈ ಕ್ಷೇತ್ರದ ವ್ಯಾಫ್ತಿಯ ಚಿಕ್ಕಮಗಳೂರಿನಲ್ಲಿ ನಾಲ್ಕರಲ್ಲಿ ನಾಲ್ಕು ಕಾಂಗ್ರೆಸ್ ಶಾಸಕರಿದ್ದರೆ, ಉಡುಪಿಯ ನಾಲ್ಕರಲ್ಲಿ ಬಿಜೆಪಿ ಶಾಸಕರಿದ್ದಾರೆ. ಈ ದೃಷ್ಟಿಯಲ್ಲಿ ನೋಡುವುದಾದರೆ ಗೆಲ್ಲಲು ಎರಡು ಪಕ್ಷಕ್ಕೂ ಸಮಾನ ಅವಕಾಶವಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ-ಕಾಂಗ್ರೆಸ್ ಮಧ್ಯದಲ್ಲಿ ನಡೆಯುವ ಚುನಾವಣಾ ತೀರ್ಮಾನಗಳು ಪಕ್ಕದ ಮಂಗಳೂರು ಲೋಕಸಭಾ ಕ್ಷೇತ್ರದ ಮೇಲೆ ಭಾರಿ ಪರಿಣಾಮ ಬೀರುವ […]

Continue Reading

‘ಕಾಂತಾರ’ ಸಿನಿಮಾ ರೀಲ್ ಕಥೆಯಾದರೆ, ‘ಪದ್ಮನಾಭ ಸಾಮಂತ್’ ರದ್ದು ‘ಕಾಂತಾರ’ ಸಿನಿಮಾವನ್ನೇ ಹೋಲುವ ರಿಯಲ್ ಸ್ಟೋರಿ

‘ಕಾಂತಾರ’ಕ್ಕೂ ಸಾಮಂತರ ಪ್ರಕರಣಕ್ಕೂ ಸಾಮ್ಯತೆ ಏನಂತೀರ.? ‘ಕಾಂತಾರ’ ಸಿನಿಮಾ ರೀಲ್ ಕಥೆಯಾದರೆ, ‘ಸಾಮಂತ್’ ರದ್ದು ‘ಕಾಂತಾರ’ ಸಿನಿಮಾವನ್ನೇ ಹೋಲುವ ರಿಯಲ್ ಸ್ಲೋರಿ. ಕಾಂತಾರಕ್ಕೂ ಸಾವಂತರ ಸಾವಿಗೂ ಸಾಮ್ಯತೆ ಕಂಡು ಬರುತ್ತದೆ. ಕಾಂತಾರದಲ್ಲಿ ಒಂದು ಸಾವಿನ ನಂತರದ ಕ್ಲೈಮ್ಯಾಕ್ಸ್‌ಗಾಗಿ ಪ್ರೇಕ್ಷಕರು ಕಾದು ಕುಳಿತರೆ, ಪದ್ಮನಾಭ ಸಾವಂತರ ಸಾವಿನ ಕಥಾನಕ ಯಾವ ಕ್ಲೈಮ್ಯಾಕ್ಸ್‌ನತ್ತ ಕೊಂಡೊಯ್ಯುತ್ತೋ ಎಂಬುದು ಕುತೂಹಲ. ಅಷ್ಟಕ್ಕೂ ‘ಕಾಂತಾರ’ಕ್ಕೂ ಈ ಪ್ರಕರಣಕ್ಕೂ ಸಾಮ್ಯತೆ ಏನಂತೀರ? ‘ಕಾಂತಾರ’ ಸಿನಿಮಾದಲ್ಲಿ ಸರ್ಕಾರಿ ಜಮೀನನ್ನು ಪ್ರಭಾವಿಯೊಬ್ಬ ಕಬಳಿಸಿದ್ದು, ಅನಂತರ ಪ್ರಕರಣ ಬಯಲಾಗದಂತೆ ದೈವ […]

Continue Reading

ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ : ಆರೋಪಿಗಳ ಖುಲಾಸೆ

ಮಂಗಳೂರು: ಏಳು ವರ್ಷಗಳ ಹಿಂದೆ ಬಲ್ಮಠ ಸರ್ಕಲ್ ಬಳಿ ಅನಧಿಕೃತವಾಗಿ ಫ್ಲೇಕ್ಸ್ ಮತ್ತು ಬಂಟಿಂಗ್ಸ್ ಅಳವಡಿಸಿದ್ದು ಅದನ್ನು ತೆರವುಗೊಳಿಸುವ ಕರ್ತವ್ಯಕ್ಕೆ ನೇಮಿಸಿದ್ದಾರೆ ಎನ್ನಲಾದ ಮಂಗಳೂರು ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದ ಮಂಗಳೂರಿನ ಕಾರ್ಪೊರೇಟರ್ ವಿಜಯ್ ಕುಮಾರ್ ಶೆಟ್ಟಿ, ಹಿಂದಿನ ಮಹಾಪೌರರಾಗಿದ್ದ ದಿವಾಕರ್ ಪಾಂಡೇಶ್ವರ, ನವೀನ್ ಚಂದ್ರ, ರಾಜೇಂದ್ರ, ಮೋನಪ್ಪ ಭಂಡಾರಿ ಮತ್ತು ರೂಪಾ.ಡಿ ಬಂಗೇರ ಇವರುಗಳನ್ನು ಮಂಗಳೂರಿನ 6ನೇ ಜೆಎಂಎಫ್‌ಸಿ ನ್ಯಾಯಾಲಯವು ನಿರಪರಾಧಿಗಳೆಂದು ಬಿಡುಗಡೆಗೊಳಿಸಿದೆ. ದಿನಾಂಕ 08/03/2018 ರಂದು ಮಂಗಳೂರು […]

Continue Reading

ಬಜಪೆ ಪೊಲೀಸರ ಯಶಸ್ವಿ ಕಾರ್ಯಾಚರಣೆ; ಬೀಗ ಮುರಿದು ಗೃಹೋಪಯೋಗಿ ವಸ್ತುಗಳನ್ನು ಕಳವುಗೈದಿದ್ದ ಆರೋಪಿಗಳ ಬಂಧನ

ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಬಡಗ ಎಡಪದವು ತಿಪ್ಪಬೆಟ್ಟುವ ಯುವರಾಜ್ ಆಚಾರ್ಯ ಎಂಬವರ ಮನೆಯ ಬೀಗ ಮುರಿದು ಗೃಹೋಪಯೋಗಿ ವಸ್ತುಗಳನ್ನು ಕಳವುಗೈದಿದ್ದ ಇಬ್ಬರು ಆರೋಪಿಗಳನ್ನು ಮಾಲು ಸಹಿತ ಬಂಧಿಸುವಲ್ಲಿ ಬಜ್ಪೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂದಿತರನ್ನು ಬಡಗ ಎಡಪದವು ನಿವಾಸಿ ರವಿ ಶೆಟ್ಟಿ, ಮೂಡುಬಿದಿರೆ ತೋಡಾರು ಗ್ರಾಮದ ಶಿವಪ್ರಸಾದ್ ಶೆಟ್ಟಿ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ಕಳವುಗೈದ ಗೃಹಪಯೋಗಿ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಇದರ ಒಟ್ಟು ಮೌಲ್ಯ ಒಂದು ಲಕ್ಷದ ನಲವತ್ತು ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ‌. ಮಂಗಳೂರು […]

Continue Reading