ಬಜಪೆ ಪೊಲೀಸರ ಕಾರ್ಯಾಚರಣೆ, ಚಿನ್ನಾಭರಣ ಸಮೇತ ಕುಖ್ಯಾತ ಕಳ್ಳನ ಬಂಧನ

ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕರೋಡಿ ಎಂಬಲ್ಲಿರುವ ಮನೆಯ ಬೆಡ್ ರೂಮಿನಲ್ಲಿದ್ದ ಕಬ್ಬಿಣದ ಕಪಾಟಿನ ಮಿನಿಲಾಕರ್ ನ್ನು ಮುರಿದು ಸರಿ-ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದಿರುವ ಪ್ರಕರಣದ ಅರೋಪಿ ಬಜಪೆ ತಾರೀಕಂಬ್ಳ ನಿವಾಸಿ ವಿನ್ಸೆಂಟ್ ಡಿ”ಸೋಜಾ (34) ಎಂಬಾತನನ್ನು ಬಜಪೆ ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ರವರ ತಂಡ ದಿನಾಂಕ 04-09-2023 ರಂದು ಬಜಪೆಯ ಕಿನ್ನಿಪದವು ಚೆಕ್ ಪೋಸ್ಟ್ ಬಳಿ ವಶಕ್ಕೆ ಪಡೆದು,ಸುಮಾರು 5ಲಕ್ಷ ರೂಪಾಯಿ ಮೌಲ್ಯ ಚಿನ್ನಾಭರಣಗಳನ್ನು (ಚಿನ್ನದ ಕರಿಮಣಿ ಸರ, ಬಿಳಿ ಬಣ್ಣದ […]

Continue Reading

ಗಂಜಿಮಠ ಗ್ರಾಮ ಪಂಚಾಯತ್ ದಿಢೀರ್ ಕಾರ್ಯಾಚರಣೆ: ಬಿಸಿ ಮುಟ್ಟಿಸಿದ ಜನಪ್ರತಿನಿಧಿಗಳು, ಘರ್ಜಿಸಿದ ಜೆಸಿಬಿ.!

BIG IMPACT ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ವಸತಿ ಸಮುಚ್ಚಾಯದ,ಹೊಟೇಲಿನ,ಬಾರ್,ವಸತಿಗೃಹಗಳ ಕೊಳಚೆ ನೀರು ಮತ್ತು ಡ್ರೈನೇಜ್ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಜನ ತೊಂದರೆ ಪಡುತ್ತಿದ್ದಾರೆ. ಮಾತ್ರವಲ್ಲದೆ ರೋಗ ಹರಡುವ ಸಾಧ್ಯತೆ ಇರುವ ಬಗ್ಗೆ ಜನ ಆತಂಕ ವ್ಯಕ್ತಪಡಿಸಿದ್ದಾರೆ. ವಸತಿ ಸಮುಚ್ಚಾಯದ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ತ್ಯಾಜ್ಯದಿಂದ ತುಂಬಿದ ಕೊಳಚೆ ನೀರು ಸರಾಗವಾಗಿ ರಸ್ತೆಯ ಮೇಲೆ ಹರಿಯುತ್ತಿದೆ. ಕೊಳಚೆ ನೀರು ದುರ್ವಾಸನೆ ಬೀರುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಆದರೆ ಗಂಜಿಮಠ ಗ್ರಾಮ ಪಂಚಾಯತ್ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ […]

Continue Reading

ದೇವದಾಸ್ ಕೆ.ಪಾಂಡೇಶ್ವರ್ (ದೇವು ಪಾಂಡೇಶ್ವರ್)ವಿಧಿವಶ

ದೇವದಾಸ್ ಕೆ. ಪಾಂಡೇಶ್ವರ್ ( ದೇವು ಪಾಂಡೇಶ್ವರ್) ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಟೀಲೇಶ್ವರಿ ಫೈನಾನ್ಸ್ ಮಾಲಕರಾಗಿದ್ದ ಇವರು ತುಳು ಚಿತ್ರ ನಿರ್ಮಾಪಕರಾಗಿಯೂ ಪ್ರಸಿದ್ಧಿ ಪಡೆದಿದ್ದರು. ಇವರ ಮೊದಲ ಚಿತ್ರ ‘ರಂಗ್’ ಯಶಸ್ವಿ ಪ್ರದರ್ಶನ ಕಂಡಿತ್ತು. ಸಮಾಜಸೇವಕರಾಗಿಯೂ ಗುರುತಿಸಿಕೊಂಡಿದ್ದ ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ಸೇವೆ ಸಲ್ಲಿಸುತ್ತಿದ್ದರು. ಕದ್ರಿ ದೇವಾಲಯದ ಸಮಿತಿಯಲ್ಲೂ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.

Continue Reading

ಅಕ್ರಮ ಮರಳುಗಾರಿಕೆ ದಾಳಿಯ ಹಿಂದಿನ ಅಸಲಿಯತ್ತು.!

ಗಣಿ ಅಧಿಕಾರಿಗಳು ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿ ಸಾವಿರಾರು ಮೆಟ್ರಿಕ್ ಟನ್ ಮರಳು ವಶಪಡಿಸಿಕೊಂಡ ಘಟನೆಗೆ ಟ್ವಿಸ್ಟ್ ದೊರೆತಿದ್ದು, ಅಸಲಿಗೆ ಮೂಲರಪಟ್ನ ನಿವಾಸಿಗಳು ಯಾರೂ ಕೂಡ ಅಕ್ರಮ ಮರಳುಗಾರಿಕೆ ನಡೆಸುತ್ತಿರಲಿಲ್ಲ, ಮಾತ್ರವಲ್ಲ ಮೂಲರಪಟ್ನ ಸೇತುವೆಯ ತಳ ಭಾಗದಿಂದ ಮರಳು ಸಂಗ್ರಹಿಸಿದ್ದು ಅಲ್ಲ. ಬೇರೆಯೇ ಕಡೆಯಲ್ಲಿ ಮರಳು ಸಂಗ್ರಹ ಮಾಡಿ,ಅನ್ಯರು ಅಕ್ರಮ ಮರಳುಗಾರಿಕೆ ನಡೆಸುತ್ತಿರುವುದು ಎಂಬುದು ಸ್ಥಳೀಯ ನಿವಾಸಿಗಳು ಮಾಹಿತಿ ನೀಡಿದ್ದಾರೆ. ಆದರೆ ಗಣಿ ಅಧಿಕಾರಿಗಳು ಮೂಲರಪಟ್ನ ದಲ್ಲಿ ಅಕ್ರಮ ಮರಳುಗಾರಿಕೆ ಜಪ್ತಿ ಮಾಡಿರುವುದಾಗಿ ಹೇಳಿಕೊಂಡಿರುವುದು […]

Continue Reading

ಬಜ್ಪೆ ಕಳವಾರು ಎಂಬಲ್ಲಿ ಯುವಕನಿಗೆ ಚೂರಿ ಇರಿತ

ಮಂಗಳೂರು ಹೊರವಲಯದ ಬಜ್ಪೆ ಸಮೀಪದ ಕಳವಾರು ಎಂಬಲ್ಲಿ ಯುವಕನೋರ್ವನಿಗೆ ಚೂರಿ ಇರಿದಿರುವ ಘಟನೆ ವರದಿಯಾಗಿದೆ. ಬಜ್ಪೆ ಕಳವಾರು ಶಾಂತಿಗುಡ್ಡೆ ನಿವಾಸಿ ಸಫ್ವಾನ್‌ (23) ಚೂರಿ ಇರಿತಕ್ಕೆ ಒಳಗಾದ ಯುವಕ ಎಂದು ತಿಳಿದು ಬಂದಿದೆ. ಚೂರಿ ಇರಿತಕ್ಕೊಳಗಾದ ಯುವಕನ್ನು ಬಜ್ಪೆಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಕಳವಾರು ಭಾಗದಲ್ಲಿ ಗಾಂಜಾ ವ್ಯಸನಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಅಮಲು ಪದಾರ್ಥಕ್ಕೆ ಸಿಲುಕಿ ಈ ಭಾಗದಲ್ಲಿ ಯುವಕರು ಸಮಾಜದ್ರೋಹಿ […]

Continue Reading

ಮೂಲರಪಟ್ನ ಹೊಸ ಸೇತುವೆ ತಳ ಬಾಗದಲ್ಲೇ ಅಕ್ರಮ ಮರಳುಗಾರಿಕೆ!

ಗಣಿ ಅಧಿಕಾರಿಗಳ ದಾಳಿ ಸಾವಿರಾರು ಮೆಟ್ರಿಕ್ ಟನ್ ಮರಳು ಜಪ್ತಿ ಬಡಗಬೆಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಾರಟೀಲ್ ಬೆಟ್ಟು, ಗುಡಾಲಪಡ್ಪುವಿನ ನದಿ ಬದಿ ಸುಮಾರು 8 ಕಡೆಗಳಲ್ಲಿ ಅಕ್ರಮವಾಗಿ ದಾಸ್ತಾನಿರಿಸಲಾದ 2130 ಮೆಟ್ರಿಕ್ ಟನ್ ಮರಳನ್ನು ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ. ಅಕ್ರಮವಾಗಿ ಮರಳು ದಾಸ್ತಾನಿರಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಬಡಗಬೆಳ್ಳೂರು ವ್ಯಾಪ್ತಿಯಲ್ಲಿ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಮರಳು ಜಪ್ತಿ […]

Continue Reading

ಕಟೀಲು ದೇಗುಲದ ಆಡಳಿತಕ್ಕಾಗಿ ಹಗ್ಗಜಗ್ಗಾಟ..!ದೇಗುಲದ ಟ್ರಸ್ಟಿ ಹಕ್ಕು ಕೊಡೆತ್ತೂರು ಗುತ್ತಿನವರದ್ದು: ಅರುಣ್ ಕುಮಾರ್ ಶೆಟ್ಟಿ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಟ್ರಸ್ಟಿ ಆಗುವ ಹಕ್ಕು ಕೊಡೆತ್ತೂರು ಗುತ್ತು ಕುಟುಂಬದ ಹಿರಿಯ ಸದಸ್ಯರಿಗೆ ಸೇರಿದ್ದು ಎಂದು ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯ ಆದೇಶ ನೀಡಿದೆ ಎಂದು ಕೊಡೆತ್ತೂರು ಗುತ್ತಿನ ಅರುಣ್ ಕುಮಾರ್ ಶೆಟ್ಟಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತಿಗೆ ಗುತ್ತಿನ ಸನತ್ ಕುಮಾರ್ ಶೆಟ್ಟಿ ಅವರು ತಾನೇ ಕೊಡೆತ್ತೂರು ಗುತ್ತಿನವ ಎಂದು ಹೇಳಿ ಕಟೀಲು ದೇಗುಲದ ಟ್ರಸ್ಟಿ ಆಗಲು ಪ್ರಯತ್ನಿಸಿ ಕೊಡೆತ್ತೂರು ಗುತ್ತಿಗೆ ಸಲ್ಲಬೇಕಾದ ಹಲವಾರು ಗೌರವ, ಮರ್ಯಾದೆ, ಮನ್ನಣೆಗಳನ್ನು […]

Continue Reading

ಹೆಗ್ಗಡೆಯವರ ಕುಟುಂಬದ ಮತ್ತು ಕ್ಷೇತ್ರದ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡದಂತೆ ತಿಮರೋಡಿಗೆ ಹೈಕೋರ್ಟ್ ಆದೇಶ

ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳದ ಮತ್ತು ಹೆಗ್ಗಡೆ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ ಎನ್ನಲಾಗುತ್ತಿರುವ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಕೋರ್ಟು ಆದೇಶ ಉಲ್ಲಂಘಿಸದಂತೆ ಎಚ್ಚರಿಕೆ ನೀಡಿದೆ.ಇದಕ್ಕೆ ತಪ್ಪಿದಲ್ಲಿ ಡಿ.ಜಿ. ಮತ್ತು ಐ.ಜಿ., ಸರಕಾರದ ಮುಖ್ಯ ಕಾರ್ಯದರ್ಶಿ, ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸೇರಿದಂತೆ ಪೋಲಿಸ್ ಉನ್ನತ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ನ್ಯಾಯಾಲಯ ಆದೇಶ ಹೊರಡಿಸಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಹೆಗ್ಗಡೆ ಕುಟುಂಬಸ್ಥರ ಪರವಾಗಿ ಖ್ಯಾತ ಹಿರಿಯ […]

Continue Reading

ಕಾನ ಬಾಳ ಚತುಷ್ಪಥ ರಸ್ತೆ ಕಾಮಗಾರಿಯಲ್ಲಿ ಭ್ರಷ್ಟಾಚಾರ; ತನಿಖೆಗೆ ಡಿವೈಎಫ್ಐ ಒತ್ತಾಯ

ಮಂಗಳೂರು : ಜನರ ಸುಧೀರ್ಘ ಹೋರಾಟದ ಪ್ರತಿಫಲವಾಗಿ ನಿರ್ಮಾಣಗೊಳ್ಳುತ್ತಿರುವ ಚತುಷ್ಪಥ ರಸ್ತೆ ಕಾಮಗಾರಿ ಒಂದು ವರ್ಷ ಕಳೆದರೂ ಪೂರ್ಣಗೊಂಡಿಲ್ಲ ಮೂಲ ನಕ್ಷಯಂತೆ ರಸ್ತೆ ನಿರ್ಮಿಸದೆ ಅಗಲ ಕಿರಿದಾಗಿ ರಸ್ತೆ ನಿರ್ಮಿಸಲಾಗುತ್ತಿದೆ ಮತ್ತು ಅತ್ಯಂತ ಕಳಪೆ ಗುಣಮಟ್ಟದ್ದಾಗಿದೆ ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಆರೋಪಿಸಿದ್ದಾರೆ ಅವರು ಇಂದು ಕಾನ ಬಾಳ ಚತುಷ್ಪಥ ರಸ್ತೆ ಕಾಮಗಾರಿಯನ್ನು ಪರಿಶೀಲನೆ ನಡೆಸಿ ಮಾತನಾಡಿದ ಅವರು ರಸ್ತೆ ಕಾಮಗಾರಿ ಆರಂಭಿಸಿ ವರ್ಷ ದಾಟಿದರೂ ಚತುಷ್ಪಥ ರಸ್ತೆ ಇನ್ನೂ ಪೂರ್ಣಗೊಂಡಿಲ್ಲ, ರಸ್ತೆ ನಿರ್ಮಾಣಗೊಂಡಲ್ಲಿ ಚರಂಡಿ […]

Continue Reading

ಅಬ್ದುಲ್ ಖಾದರ್ ಬೆಳುವಾಯಿ ರಸ್ತೆ ಅಪಘಾತದಲ್ಲಿ ನಿಧನ

ಇಸ್ಮಾಯಿಲ್ ಮೂಡುಶೆಡ್ಡೆರವರ ಬಾವ ಅಬ್ದುಲ್ ಖಾದರ್ ಗುಂಡು ಕಲ್,ಬೆಳುವಾಯಿ ರವರು ರಸ್ತೆ ಅಪಘಾತದಲ್ಲಿ ನಿಧನ ಹೊಂದಿರುತ್ತಾರೆ.ಹಲವಾರು ವರ್ಷಗಳಿಂದ ಸ್ಪೆಷಲ್ ನ್ಯೂಸ್ ಪತ್ರಿಕೆ ಯ ವಿತರಕರಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾದ್ಯಂತ ಕಾರ್ಯ ನಿರ್ವಹಿಸುತ್ತಿದ್ದರು. ಅವರ ನಿಧನಕ್ಕೆ ಪತ್ರಿಕಾ ಬಳಗ ತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದು ಭಗವಂತನು ಅವರ ಕುಟುಂಬಕ್ಕೆ ದುಃಖಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ.

Continue Reading