ರಾಷ್ಟ್ರೀಯ ಹೆದ್ದಾರಿ 169 ಕಾಮಗಾರಿ; ಮೂಲಭೂತ ಸೌಕರ್ಯಕ್ಕೆ ಕಂಟಕ.! ಮನೆಗೆ ನುಗ್ಗುತ್ತಿದೆ ಕೃತಕ ನೆರೆ. ಎಲ್ಲಿ ನೋಡಿದರೂ ಮರಣ ಗುಂಡಿ.!

ದಿಗ್ಭಂಧನದಲ್ಲಿ ಕೈಕಂಬ,ವಿಕಾಸ ನಗರದ ನಾಗರಿಕರು,ರಸ್ತೆಯೇ ಮಾಯ.! ರಾಷ್ಟ್ರೀಯ ಹೆದ್ದಾರಿ ಕೃಪೆ. ಮೂಡಬಿದ್ರೆ: ರಾಷ್ಟ್ರೀಯ ಹೆದ್ದಾರಿ ಬಿಕರ್ನಕಟ್ಟೆ- ಸಾಣೂರು 169 ರ ರಸ್ತೆ ಅಗಲೀಕರಣ ಕಾಮಗಾರಿ ಕಳೆದ ಕೆಲವು ತಿಂಗಳಿನಿಂದ ನಡೆಯುತ್ತಿದ್ದು, ಕಾಮಗಾರಿಯೂ ಅವೈಜ್ಞಾನಿಕವಾಗಿ ಆಮೆಗತಿಯಲ್ಲಿ ಸಾಗುತ್ತಿದೆ. ಈ ನಡುವೆ ಗಂಜಿಮಠ, ಸೂರಲ್ಪಾಡಿ, ಕೈಕಂಬ, ವಿಕಾಸನಗರ,ಸಾಣೂರು ಸಮೀಪದಿಂದ ಹಾದು ಹೋಗುವ ರಸ್ತೆಗೆ ಮಣ್ಣು ಹಾಕಲಾಗಿದ್ದು ಪರಿಸರ ಕೆಸರುಮಯವಾಗಿ ಕಂಬಳದ ಗದ್ದೆಯಂತಾಗಿದೆ. ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುವ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯವಸ್ಥಿತವಾಗಿ ಮಾಡಬೇಕಾಗಿರುವುದು ಸಂಬಂಧಿಸಿದವರ ಜವಾಬ್ದಾರಿಯಾಗಿರುತ್ತದೆ. ಆದರೆ ಈ […]

Continue Reading

ಬಾರೀ ಅಕ್ರಮ ಮರಳು ದಾಸ್ತಾನು, ಗಣಿ ಇಲಾಖಾ ಅಧಿಕಾರಿಗಳಿಂದ ದಾಳಿ.!

ಅಕ್ರಮವಾಗಿ ಖಾಸಗಿ ಜಾಗದಲ್ಲಿ ಬಾರೀ ಮರಳು ದಾಸ್ತಾನು ಮಾಡಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಉಡುಪಿ ಗಣಿ ಇಲಾಖಾ ಅಧಿಕಾರಿಗಳು ದಾಳಿ ನಡೆಸಿ ಮರಳು ಪತ್ತೆ ಮಾಡಿ ಆರೋಪಿಗೆ ನೋಟೀಸು ನೀಡಿದ್ದಾರೆ. ಅಕ್ರಮ ಮರಳುದಂಧೆಯ ಆರೋಪಿ ಮೂಲತಃ ಹೊರ ಜಿಲ್ಲೆಯವನ್ನಾಗಿದ್ದು ಇದೀಗ ಎರ್ಮಾಳಿನಲ್ಲಿ ನೆಲೆಸಿರುವ ಗಿರೀಶ್ ಎರ್ಮಾಳು, ಈತ ಪಡುಬಿದ್ರಿಯ ಅಬ್ಬೇಡಿ ರಸ್ತೆಯ ನಾಗರಾಜ ನಗರ ಬಳಿ, ಎರ್ಮಾಳಿನ ಪೂಂದಾಡು ಮೈದಾನ ಸಮೀಪ ಹಾಗೂ ಬೆಳಪುವಿನ ಪಡುಬಿದ್ರಿ ರೈಲ್ವೆ ಸ್ಟೇಷನ್ ಬಳಿಯ ಖಾಸಗಿ ಸ್ಥಳದಲ್ಲಿ ಅಕ್ರಮವಾಗಿ ಸಮುದ್ರ […]

Continue Reading

ದಕ್ಷಿಣ ಕನ್ನಡ ಜಿಲ್ಲೆಯ ಐದು ತಾಲೂಕಿನ ಶಾಲೆಗಳಿಗೆ ಇಂದು ರಜೆ ಷೋಷಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಹಿನ್ನೆಲೆಯಲ್ಲಿ ಇಂದು ಐದು ತಾಲೂಕುಗಳಲ್ಲಿನ ಶಾಲಾ- ಕಾಲೇಜುಗಳಿಗೆ ರಜೆ ನೀಡಲಾಗಿದೆ. ಮಂಗಳೂರು, ಮೂಲ್ಕಿ, ಉಳ್ಳಾಲ, ಮೂಡಬಿದರೆ ಮತ್ತು ಬಂಟ್ವಾಳ ತಾಲೂಕುಗಳ ಶಾಲಾ-‌ ಕಾಲೇಜುಗಳಿಗೆ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ರಜೆ ಘೋಷಿಸಿದ್ದಾರೆ. ಕರಾವಳಿಯಲ್ಲಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು,ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ಘೋಷಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ತಹಶೀಲ್ದಾರ್ ರವರಿಗೆ,ಅವರವರ ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವ ಅಧಿಕಾರ ನೀಡಿ ಡಿಸಿ ಆದೇಶಿಸಿದ್ದಾರೆ.

Continue Reading

ಸೌಜನ್ಯಾ ರೇಪ್ ಆಂಡ್ ಮರ್ಡರ್ ಪ್ರಕರಣ: ವಿಶೇಷ ತನಿಖಾ ತಂಡ(SIT) ರಚನೆಗೆ ಆಗ್ರಹಿಸಿ ‘ನೈಜ ಹೋರಾಟಗಾರರ ವೇದಿಕೆ’‌ ವತಿಯಿಂದ ಗೃಹ ಸಚಿವರಿಗೆ ಮನವಿ

ಧರ್ಮಸ್ಥಳದಲ್ಲಿ ನಡೆದಿದ್ದ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಪ್ರಕರಣ ರಾಜ್ಯ ಹಾಗೂ ದೇಶದ ಮಟ್ಟದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿತ್ತು. ಪ್ರಭಾವೀ ಗಳ ಹೆಸರು ರೇಪ್ ಆಂಡ್ ಮರ್ಡರ್ ಪ್ರಕರಣದಲ್ಲಿ ತಳುಕು ಹಾಕಿಕೊಂಡಿತ್ತು. ಸ್ಥಳೀಯವಾಗಿ ಕೆಲವೊಂದು ಪ್ರಭಾವಿಗಳ ಹೆಸರು ಹರಿದಾಡುತ್ತಿದ್ದರೂ ಕೊನೆಗೆ ಪೊಲೀಸರು ಒತ್ತಡಕ್ಕೆ ಮಣಿದು ಮಾನಸಿಕ ಅಸ್ವಸ್ಥ ಸಂತೋಷ ರಾವ್ ರನ್ನು ಆರೋಪಿಯನ್ನಾಗಿ ಫಿಕ್ಸ್ ಮಾಡಿದ್ದರು. ಇದೀಗ ಆರೋಪಿ ಸಂತೋಷ್ ರಾವ್ ರನ್ನು ನಿರ್ದೋಷಿ ಎಂದು ಸಿಬಿಐ ನ್ಯಾಯಾಲಯ ತೀರ್ಪು ನೀಡಿದ್ದು, ಈಗ ನಿಜವಾದ ಆರೋಪಿ ಯಾರೆನ್ನುವ ಪ್ರಶ್ನೆ […]

Continue Reading

ಗಂಜಿಮಠ: ಗಬ್ಬು ನಾರುತ್ತಿದೆ ಮಾರ್ಕೆಟ್, ರಸ್ತೆಯಲ್ಲೇ ಹರಿಯುತ್ತಿದೆ ಕೊಳಚೆ ನೀರು; ರೋಗದ ಭೀತಿಯಲ್ಲಿ ನಾಗರಿಕರು, ಗಂಜಿಮಠ ಪಿಡಿಓ ಮೌನ.!

ಇದು ಗಂಜಿಮಠ ಗ್ರಾಮ ಪಂಚಾಯತ್ ನ ಕಥೆ-ವ್ಯಥೆ. ಇಲ್ಲಿನ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ. ಜನಪ್ರತಿನಿಧಿಗಳು ನಿದ್ದೆಯಲ್ಲಿದ್ದಾರೆ. ಜನರ ಗೋಳು ಕೇಳುವವರೇ ಇಲ್ಲವಾಗಿದೆ. ಗಂಜಿಮಠ ಪಂಚಾಯತಿಗೊಬ್ಬ ಪಂಚಾಯತ್ ಅಭಿವೃದ್ದಿ ಅಧಿಕಾರಿ. ಅದು ಯಾವ ಕರ್ಮಕ್ಕೊ ಗೊತ್ತಾಗುತ್ತಿಲ್ಲ. ಇಲ್ಲಿ ಎಲ್ಲವೂ ಲಂಚಮಯ. ಲಕ್ಷ, ಲಕ್ಷ ಕೊಟ್ಟರೆ ಎಲ್ಲವೂ ರೆಡಿ.9/11,ಪರವಾನಿಗೆ, ಕ್ಲಿಯೆರೆನ್ಸ್, ಯಾವುದು ಬೇಕು ಅದಕ್ಕೆ ಇಂತಿಷ್ಟು ಬಿಸಾಕಿದರೆ ಸಾಕು. ಮನೆ ಬಾಗಿಲಿಗೆ ಬರುತ್ತದೆ ದಾಖಲೆ ಪತ್ರ. ಮಿಟಿಂಗ್ ನಲ್ಲಿ ಇಟ್ಟು ಚರ್ಚೆ ಇಲ್ಲ. ಸದಸ್ಯರ ಗಮನಕ್ಕೂ ಬರುವುದಿಲ್ಲ. ಇಲ್ಲಿನ […]

Continue Reading

ಜುಲಾಯಿ 8 ರಂದು ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿಯವರಿಗೆ ಅಭಿನಂದನಾ ಸಮಾರಂಭ: ಅಭಿನಂದನಾ ಸಮಿತಿ

ಬೆಳ್ತಂಗಡಿ : ರಾಜ್ಯದ ವಿವಿಧ ಪತ್ರಿಕೆಗಳಲ್ಲಿ 12 ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ, 194 ಪುಸ್ತಕಗಳನ್ನು ಹೊರತಂದ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಅವರ ಸಪ್ತತಿ ಪ್ರಯುಕ್ತ ಸಾರ್ವಜನಿಕ ಅಭಿನಂದನಾ ಸಮಾರಂಭವು ಜು.8 ರಂದು ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ನಡೆಯಲಿದೆ ಎಂದು ಪ.ರಾಮಕೃಷ್ಣ ಶಾಸ್ತ್ರಿ ಅಭಿನಂದನಾ ಸಮಿತಿ ಸಂಚಾಲಕ ಸಂಪತ್ ಬಿ. ಸುವರ್ಣ ತಿಳಿಸಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ವಿವರ ನೀಡಿದ ಅವರು 1953 ರಲ್ಲಿ ಪುತ್ತೂರಿನ ಪೋಳ್ಯದಲ್ಲಿ ಜನಿಸಿದ ರಾಮಕೃಷ್ಣ ಶಾಸ್ತ್ರಿಅವರು ಎಳವೆಯಲ್ಲಿಯೇ ಬೆಳ್ತಂಗಡಿ […]

Continue Reading

ಪಟ್ಟಾಭಿರಾಮ ಸೋಮಯಾಜಿ ನಿಧನಕ್ಕೆ ಮಂಗಳೂರು ನಾಗರಿಕ ಸಂಘಟನೆಗಳ ಸಂತಾಪ

ಪಟ್ಟಾಭಿಯವರ ಅಗಲಿಕೆಯು ಕರ್ನಾಟಕದ ಕೋಮುವಾದ ವಿರೋಧಿ ಚಳವಳಿಗೆ ದೊಡ್ಡ ನಷ್ಟ:ಮುನೀರ್ ಕಾಟಿಪಳ್ಳ. ಪ್ರೊ. ಪಟ್ಟಾಭಿರಾಮ ಸೋಮಯಾಜಿ ಯವರನ್ನು ವಿದ್ಯಾರ್ಥಿ ದೆಸೆಯಿಂದಲೇ ಪ್ರತಿಭಾನ್ವಿತರಾಗಿದ್ದರು. ಕನ್ನಡ ಸಾಹಿತ್ಯದ ಪ್ರಖರ ವಿಮರ್ಶಕರಾಗಿದ್ದರು. ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಧ್ಯಾಪಕರಾಗಿ, ಸಾರ್ವಜನಿಕ ಚಿಂತಕರಾಗಿ ಬೌದ್ದಿಕ ವಲಯದಲ್ಲಿ ಹೆಸರು ಮಾಡಿದ್ದರು. ಹಿಂದುತ್ವದ ಕೋಮುವಾದದ ಅಪಾಯವನ್ನು ಬಹಳ ನಿಶಿತವಾಗಿ ವಿರೋಧಿಸಿದ್ದರು. ಅಲ್ಪಸಂಖ್ಯಾತರ ಪರಿಸ್ಥಿತಿ ಅತ್ಯಂತ ಅಪಾಯದಲ್ಲಿದೆ ಎಂಬ ಆತಂಕ ಅವರನ್ನು ಕಳವಳಕ್ಕೀಡು ಮಾಡಿತ್ತು. ತಾನು ಪ್ರತಿಪಾದಿಸುತ್ತಿದ್ದ ನಿಲುವುಗಳಿಗೆ ತೋರಿದ ಬದ್ದತೆಗಾಗಿ ಹಿಂದುತ್ವದ ಕೋಮುವಾದಿಗಳಿಂದ ತೀವ್ರ […]

Continue Reading

ಸಾವಿರ, ಸಾವಿರ ಕೋಟಿ ಒಡೆಯ ತಹಶೀಲ್ದಾರ್‌ ಅಜಿತ್‌ ರೈ.!ಲೋಕಾಯುಕ್ತ ಅಧಿಕಾರಿಗಳಿಗೆ ಶಾಕ್.!

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಕೆಆರ್‌ಪುರಂ ತಹಶೀಲ್ದಾರ್‌ ಅಜಿತ್‌ ರೈ ಮನೆಯಲ್ಲಿರುವ ಸ್ವತ್ತುಗಳನ್ನು ನೋಡಿ ಲೋಕಾಯುಕ್ತ ಅಧಿಕಾರಿಗಳೇ ದಂಗಾಗಿದ್ದಾರೆ.ಅಜಿತ್ ರೈ ಬಳಿ ಹಲವಾರು ರ್ಯಾಡೋ ವಾಚ್‌ ಪತ್ತೆಯಾಗಿದೆ.ವಾಚ್ ಗಳ ಬೆಲೆ 5 ಲಕ್ಷ ಕ್ಕೂ ಅಧಿಕ ಇರಬಹುದು ಎಂದು ಅಂದಾಜಿಸಲಾಗಿದೆ. ದಾಳಿ ವೇಳೆ ಸಿಕ್ಕ ಅಷ್ಟೂ ವಾಚ್ ಗಳ ಬೆಲೆ ಬರೋಬ್ಬರಿ ಹತ್ತು ಲಕ್ಷ ರೂ ಅಧಿಕ ಎಂದು ಅಂದಾಜಿಸಲಾಗಿದೆ. ತಪಾಸಣೆಯ ಬೇಳೆ ಅಜಿತ್ ರೈ ಬ್ರಾಂಡ್ ಲೋಗೋ ಸೀಕ್ರೇಟ್ ರಿವೀಲ್ ಆಗಿದೆ. ASR […]

Continue Reading

ಮಿಜಾರು: ನವೀನ್ ಹತ್ಯಾ ಆರೋಪಿಗಳಾದ ಪೊಂಗು ರಮೇಶ ಮತ್ತು ನಿತ್ಯಾನಂದ ಇಬ್ಬರಿಗೆ ಜೀವಾವಧಿ ಶಿಕ್ಷೆ

ಬಡಗ ಎಡಪದವಿನ ನವೀನ ಎಂಬವರ ಕೊಲೆ ಪ್ರಕರಣದ ಆರೋಪಿಗಳಿಗೆ ಮಂಗಳೂರಿನ 6 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಎಸ್.ವಿ ಅವರು ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಮಂಗಳೂರು ತಾಲೂಕು ಬಡಗ ಎಡಪದವು ನಿವಾಸಿ ರಮೇಶ್ ಶೆಟ್ಟಿಗಾರ್ ಯಾನೆ ಪೊಂಗು ರಮೇಶ ಮತ್ತು ನಿತ್ಯಾನಂದ ಶಿಕ್ಷೆಗೊಳಗಾದ ಆರೋಪಿಗಳು. ಹಣದ ವ್ಯವಹಾರ ಮತ್ತು ರಮೇಶ್ ಶೆಟ್ಟಿಗಾರ್ ಯಾನೆ ಪೊಂಗು ರಮೇಶನ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾನೆ ಎಂಬ ದ್ವೇಷದಿಂದ ಆರೋಪಿಗಳು 2019 ರ […]

Continue Reading

ಅಕ್ರಮ ಮದ್ಯ ಮಾರಾಟ ಪ್ರಕರಣ : ಆರೋಪಿಗೆ ನಿರೀಕ್ಷಣಾ ಜಾಮೀನು

ಪುತ್ತೂರು :ಅಕ್ರಮ ಮದ್ಯ ಮಾರಾಟ ಪ್ರಕರಣದ ಆರೋಪಿ ಎನ್ನಲಾಗಿದ್ದ ವಿನೋದ್ ಕುಮಾರ್ ರೈ ಯವರಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.ಪುತ್ತೂರು ತಾಲೂಕು ಒಳಮೋಗ್ರು ಗ್ರಾಮದ ಕೈಕಾರ ಪನಡ್ಕ ಎಂಬಲ್ಲಿ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ, ಗೋಣಿ ಚೀಲದಲ್ಲಿ ಮದ್ಯವನ್ನು ಮಾರಾಟ ಮಾಡಿ, ಹಣ ಪಡೆದಿರುವುದಾಗಿ ಆರೋಪಿಯೆನ್ನಲಾಗಿದ್ದ ವಿನೋದ್ ಕುಮಾರ್ ರೈ ಯವರ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಅಬಕಾರಿ ಕಾಯಿದೆಯನ್ವಯ ಪ್ರಕರಣ ದಾಖಲಿಲಾಗಿತ್ತು. ಈ […]

Continue Reading