ರುಚಿ ಗೋಲ್ಡ್ ಗೆ ಬೀಗ ಜಡಿಯಿರಿ, ಭ್ರಷ್ಟ ಪರಿಸರ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿ, ಜೀವ ನದಿ ಪಲ್ಗುಣಿ, ತುಳುನಾಡ ಪರಿಸರ ಉಳಿಸಿ

ಇದು ಜೋಕಟ್ಟೆ ಸಮೀಪ ಇರುವ ರುಚಿ ಗೋಲ್ಡ್ (ಬಾಬಾ ರಾಮ್ ದೇವ್ ಮಾಲಕತ್ವದ) ಕಂಪೆನಿ ಪಲ್ಗುಣಿ ನದಿಗೆ ಕೈಗಾರಿಕಾ ತ್ಯಾಜ್ಯದ ವಿಷ ಹರಿಸುತ್ತಿರುವುದಕ್ಕೆ ಸಾಕ್ಷ್ಯ ಒದಗಿಸುವ ಚಿತ್ರ. ನಾಗರಿಕ ಹೋರಾಟ ಸಮಿತಿಯ ಸತತ ದೂರು, ಪ್ರತಿಭಟನೆಗಳು, ಕೆಲವು ಮಾಧ್ಯಮಗಳ ಜವಾಬ್ದಾರಿಯುತ ವರದಿ ಕಾರಣಕ್ಕೆ ಪಲ್ಗುಣಿ ನದಿ ಹಾಗೂ ತೋಕೂರು ಹಳ್ಳಕ್ಕೆ MRPL, Sez, ಅದಾನಿ ವಿಲ್ಮರ್, ರುಚಿಗೋಲ್ಡ್ ಸೇರಿದಂತೆ ಹಲವು ಉದ್ಯಮಗಳು ಕೈಗಾರಿಕಾ ತ್ಯಾಜ್ಯ ಹರಿಸಿ ನದಿ ಹಾಗೂ ಪರಿಸರವನ್ನು ವಿಷಮಯಗೊಳಿಸುವ ವಿಷಯ ಹಸಿರು ಪೀಠದ ಗಮನಕ್ಕೆ […]

Continue Reading

ರಾಶಿ,ರಾಶಿ ಕಸ ಮಾಯ.! ವರದಿಗೆ ಸ್ಪಂದಿಸಿ ಶುಚಿತ್ವ ಕಾಪಾಡಿದ ಗಂಜಿಮಠ ಗ್ರಾಮ ಪಂಚಾಯತ್ ಜನಪ್ರತಿನಿದಿಗಳು

ಕೈಕಂಬ: ಕೈಕಂಬದಿಂದ ಮರ್ಕಝ್ ನಗರಕ್ಕೆ ಹೋಗುವ ರಾಜ ರಸ್ತೆಯ ಪಕ್ಕದಲ್ಲೇ ಪ್ಲಾಸ್ಟಿಕ್, ಮನೆ ಕಸ, ಹೋಟೆಲ್ ತ್ಯಾಜ್ಯ ಸೇರಿದಂತೆ ವಿವಿಧ ರೀತಿಯ ಕಸಗಳ ರಾಶಿ ಬಿದ್ದು ದುರ್ವಾಸನೆ ಬೀರುತ್ತಿರುವ ಸಮಸ್ಯೆಯಿಂದ ಪರಿಸರದ ನಿವಾಸಿಗಳಿಗೆ ಬಹಳ ತೊಂದರೆಯಾಗುತ್ತಿತ್ತು. ಹಲವು ಸಮಯಗಳಿಂದ ಕಸ ವಿಲೇವಾರಿ ಮಾಡಿಲ್ಲ. ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಾಗಿತ್ತು. ಇದು ಅಸಹ್ಯವಾಗಿ ಕಾಣುತ್ತಿತ್ತು. ಈ ಕುರಿತು ಸ್ಪೆಷಲ್ ನ್ಯೂಸ್ ಮೀಡಿಯಾ ಸಚಿತ್ರ ವರದಿಯನ್ನು ಪ್ರಕಟಿಸಿತ್ತು. ಇದೀಗ ಗಂಜಿಮಠ ಗ್ರಾಮ ಪಂಚಾಯತಿನ ಜನಪ್ರತಿನಿದಿಗಳು ಈ ಸಮಸ್ಯೆಗೆ ಸ್ಪಂದಿಸಿ, ಮುರ್ತುವರ್ಜಿ […]

Continue Reading

ರಾಜ ರಸ್ತೆಯಲ್ಲೇ “ರಾಶಿ,ರಾಶಿ ಕಸ,ಬೀರುತ್ತಿದೆ ಗಬ್ಬು ನಾತ” ಸಮಸ್ಯೆಗೆ ಸ್ಪಂದಿಸದ ಗಂಜಿಮಠ ಗ್ರಾಮ ಪಂಚಾಯತ್ ಅಧಿಕಾರಿಗಳು.!!

ಕೈಕಂಬ: ಕೈಕಂಬದಿಂದ ಮರ್ಕಝ್ ನಗರಕ್ಕೆ ಹೋಗುವ ರಾಜ ರಸ್ತೆಯ ಪಕ್ಕದಲ್ಲೇ ಪ್ಲಾಸ್ಟಿಕ್, ಮನೆ ಕಸ, ಹೋಟೆಲ್ ತ್ಯಾಜ್ಯ ಸೇರಿದಂತೆ ವಿವಿಧ ರೀತಿಯ ಕಸಗಳ ರಾಶಿ ಬಿದ್ದು ದುರ್ವಾಸನೆ ಬೀರುತ್ತಿರುವ ಸಮಸ್ಯೆಯಿಂದ ಪರಿಸರದ ನಿವಾಸಿಗಳಿಗೆ ಬಹಳ ತೊಂದರೆಯಾಗುತ್ತಿದೆ.ಸಾರ್ವಜನಿಕರು ನಡೆದಾಡುವ ದಾರಿಯ ಪರಿಸ್ಥಿತಿಯೇ ಹೀಗಾದರೆ ಹೇಗೆ.? ಹಲವು ಸಮಯಗಳಿಂದ ಕಸ ವಿಲೇವಾರಿ ಮಾಡಿಲ್ಲ. ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಿದೆ. ವಾಹನ ಸವಾರರಿಗೆ ಅಸಹ್ಯವಾಗಿ ಕಾಣುತ್ತಿದೆ. ಇದರ ಬಗ್ಗೆ ಗಂಜಿಮಠ ಗ್ರಾಮ ಪಂಚಾಯತಿನ ಸಂಬಂಧ ಪಟ್ಟ ಅಧಿಕಾರಿಗಳಲ್ಲಿ ಎಷ್ಟು ಸಲ ಹೇಳಿದ್ರು,ಈ […]

Continue Reading

ಸುರತ್ಕಲ್ ಟೋಲ್ ಗೇಟ್ ಮುಚ್ಚಿ ಆರು ತಿಂಗಳು ಕಳೆದರೂ, ಖಾಸಗಿ ಬಸ್ ಅಪರೇಟರುಗಳು ಜನರನ್ನು ಲೂಟಿ ಮಾಡುತ್ತಿದ್ದಾರೆ:ಬಿ.ಕೆ ಇಮ್ತಿಯಾಝ್

ಸುರತ್ಕಲ್ ಟೋಲ್ ಗೇಟ್ ಮುಚ್ಚಿ ಇಂದಿಗೆ ಅರ್ಧ ವರ್ಷ ಆಯಿತು ಜನರ ಜೇಬಿಗೆ ಬರೋಬ್ಬರಿ 27 ಕೋಟಿ ರೂಪಾಯಿ ಉಳಿಯಿತು.ಆದರೆ ಮಂಗಳೂರಿನಿಂದ ಉಡುಪಿ ಕುಂದಾಪುರ ಕಡೆಗೆ ಹೋಗಿ ಬರುವ ಖಾಸಗಿ ಬಸ್ಸುಗಳು (express) ಸುರತ್ಕಲ್ ಟೋಲ್ ಸುಂಕದ ಹೆಸರಲ್ಲಿ ಪ್ರಯಾಣಿಕರಿಂದ ಪ್ರತಿ ಟಿಕೇಟಿನ ಮೇಲೆ ₹5 ಹೆಚ್ಚುವರಿ ಯಾಗಿ ಪಡೆಯುತ್ತಿದ್ದ ಹಣವನ್ನು ಸುರತ್ಕಲ್ ಗೇಟ್ ಮುಚ್ಚಿ 6ತಿಂಗಳು ಕಳೆದರೂ ಖಾಸಗಿ ಬಸ್ ಅಪರೇಟರುಗಳು ಲೂಟಿ ಮಾಡುತ್ತಿದ್ದಾರೆ. 6 ತಿಂಗಳಿಂದ ಪ್ರಯಾಣಿಕರ ಜೇಬಿನಿಂದ ಸುಲಿಗೆ ಮಾಡಿದ ಹಣದ ಲೆಕ್ಕ […]

Continue Reading

50 ಹುದ್ದೆಯ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ಸಿಗದಿದ್ದಲ್ಲಿ MRPLಗೆ ಮುತ್ತಿಗೆ – ಬಿ.ಕೆ ಇಮ್ತಿಯಾಜ್

ಕೇಂದ್ರ ಸರಕಾರದ ಅದೀನದಲ್ಲಿರುವ ಸಾರ್ವಜನಿಕ ಉದ್ದಿಮೆ mrpl ನಲ್ಲಿ 50 ಉದ್ಯೋಗದ ನೇಮಕಾತಿಗೆ ರಾಷ್ಟ ಮಟ್ಟದಲ್ಲಿ ಅರ್ಜಿ ಆಹ್ವಾನಿಸಿದರಲ್ಲಿ ಈ‌ ಬಾರಿಯೂ ಸ್ಥಳೀಯರಿಗೆ ಆದ್ಯತೆ ನೀಡದೆ ವಂಚಿಸುವ ಹುನ್ನಾರ ಅಡಗಿದೆ. ಕಳೆದ 234 ಹುದ್ದೆಯ ನೇಮಕಾತಿಯಲ್ಲಿ ವಂಚಿಸಿದಂತೆ ಈ ಬಾರಿಯ 50 ಹುದ್ದೆಗಳ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ‌ ಸಿಗದಿದ್ದಲ್ಲಿ‌ ಡಿವೈಎಫ್ಐ ಸಂಘಟನೆಯು ಎಮ್.ಆರ್.ಪಿ.ಎಲ್ ಗೆ‌ ಮುತ್ತಿಗೆ ಹಾಕಿ ಪ್ರತಿಭಟಿಸಲಿದ್ದೇವೆ ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ “ತುಳುನಾಡಿನ ಅಭಿವೃದ್ಧಿಯಲ್ಲಿ ತುಳುನಾಡಿನ ಯುವಜನತೆಗೆ ದೊಡ್ಡ ಪಾಲು, MRPL ಉದ್ಯೋಗದಲ್ಲಿ […]

Continue Reading

ರೋಗಿಗಳಿಗೆ ರಕ್ತ ಹೊಂದಿಸುವುದು ದಾಖಲಾದ ಆಸ್ಪತ್ರೆಗಳ (ರಕ್ತ ನಿಧಿ) ಜವಾಬ್ದಾರಿ ಹೊರತು ರೋಗಿಗಳ ಸಂಬಂಧಿಕರದ್ದು ಅಲ್ಲ: ಸಂತೋಷ್ ಬಜಾಲ್, ಡಿವೈಎಪ್ಐ

ಖಾಸಗೀ ಆಸ್ಪತ್ರೆಗಳ ಆಟಾಟೋಪ ಅತಿಯಾಗಿ ರೋಗಿಗಳು ಮತ್ತು ಅವರ ಮನೆಮಂದಿ ಅನುಭವಿಸುವ ಕಷ್ಟಗಳ ಅರಿವು ಈಗ ಸರ್ವೇ ಸಾಮಾನ್ಯ. ಮತ್ತು ಖಾಸಗೀ ಆಸ್ಪತ್ರೆಗಳ ದುಬಾರಿ ಬಿಲ್ಲು, ತಪ್ಪಾದ ಚಿಕಿತ್ಸಾ ಕ್ರಮಗಳ ಅನುಭವ ಬಹುತೇಕರಿಗೆ ಕೊರೋನಾ ಕಾಲದಲ್ಲಿ ಮತ್ತು ಈಗೀಗ ಸ್ವತಃ ಅನುಭವಕ್ಕೆ ಬಂದಿರುತ್ತದೆ. ಆದರೆ ಅವುಗಳ ನಡುವೆ ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ರಕ್ತ ಹೊಂದಿಸುವುದು ಮಾತ್ರ ನಮ್ಮದೇ ಜವಾಬ್ದಾರಿಯೆಂದು ರೋಗಿಗಳ ಸಂಬಂಧಿಕರು ಮತ್ತು ನಾವು ಜನಸಾಮಾನ್ಯರು ಅಂದುಕೊಂಡದ್ದಿದೆ. ಹಾಗೆ ಅಂದು ಕೊಂಡಿದ್ದರೆ ಅದು ತಪ್ಪು. ಯಾಕೆಂದರೆ ರಕ್ತಕ್ಕೆ […]

Continue Reading

ಪುತ್ತಿಲ ಕೌಂಟರ್: ನಳಿನ್‌ಗೆ ‘ಕೈ’ ಕೊಟ್ಟು ‘ಚೌಟ’ ರತ್ತ ಮುಖ ಮಾಡಿದ ಬಿಜೆಪಿ.!

ಕರಾವಳಿ ಈ ಬಾರಿ ಬಿಜೆಪಿಯನ್ನು ಕೈ ಹಿಡಿದು ಬೂಸ್ಟ್ ನೀಡಿರುವ ಪ್ರದೇಶ. ಇಲ್ಲವಾದರೆ ಬಿಜೆಪಿ ವಿರೋಧ ಪಕ್ಷ ಅಪಪ್ರಚಾರ ಮಾಡಿದಂತೆ 40 ಸ್ಥಾನಗಳಿಗೆ ಬಂದು ನಿಲ್ಲುತ್ತಿತ್ತು. ಇಡೀ ಕರಾವಳಿ ಗೆದ್ದರೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಿಗೆ ತನ್ನ ಸ್ವಕ್ಷೇತ್ರ ಪುತ್ತೂರನ್ನು ಗೆಲ್ಲಿಸಿಕೊಡಲು ಸಾಧ್ಯವಾಗಿಲ್ಲ. ಇದು ಕಟೀಲು ರಿಗೆ ಹೈಕಮಾಂಡ್ ಮಟ್ಟದಲ್ಲಿ ತೀವ್ರ ಹಿನ್ನಡೆಯನ್ನು ತಂದುಕೊಟ್ಟಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಸದಾ ಅದೃಷ್ಟದಿಂದ ರಾಜಕೀಯ ಸ್ಥಾನಮಾನ ಪಡೆಯುತ್ತಿದ್ದ ಕಟೀಲು , ಕರಾವಳಿಯಲ್ಲಿ ಎಷ್ಟೇ ಟ್ರೋಲ್ […]

Continue Reading

ಕರಾವಳಿ ಭಾಗದ 16 ಕಡೆಗಳಲ್ಲಿ NIA ಅಧಿಕಾರಿಗಳಿಂದ ದಾಳಿ

ಕರಾವಳಿ ಭಾಗದ 16 ಕಡೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಬಂಟ್ವಾಳ, ಬೆಳ್ತಂಗಡಿ, ಉಪ್ಪಿನಂಗಡಿ, ವೇಣೂರು ಸೇರಿದಂತೆ 16 ಕಡೆ ಹಲವರ ಮನೆ, ಕಚೇರಿ,ಆಸ್ಪತ್ರೆಗಳ ಮೇಲೆ ದಾಳಿಮಾಡಿ ಪರಿಶೀಲನೆ ನಡೆಸಲಾಗುತ್ತಿದೆ. ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದರು ಎಂಬ ಆರೋಪದ ಮೇಲೆ NIA ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.ಹವಾಲಾ ಫಂಡಿಂಗ್, ಭಯೋತ್ಪಾದಕ ಕೃತ್ಯಕ್ಕೆ ವಿದೇಶ ರಾಷ್ಟ್ರಗಳಿಂದ ಹವಾಲಾ ಹಣ ಬಳಕೆ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದೆ ಎನ್ನಲಾಗಿದೆ.ಈ ಕುರಿತು ಹೆಚ್ಚಿನ […]

Continue Reading

ಬೆಳ್ತಂಗಡಿ: ಮಿಡ್ ನೈಟ್ ಟೆಕ್ಕಿ ರೆಸ್ಕ್ಯೂ ಆಪರೇಷನ್ ; ಸಮಾಜ ಸೇವಕ ಸಿನಾನ್ ಮತ್ತವರ ತಂಡಕ್ಕೆ ವ್ಯಾಪಕ ಪ್ರಶಂಸೆ

ಬೆಂಗಳೂರು ಜೆ.ಪಿ ನಗರದ ಪರೋಸ ಅಗರ್ವಾಲ್ ಅನ್ನುವ ಯುವಕ ಟ್ರೆಕ್ಕಿಂಗ್ ಗಾಗಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ರಾಣಿಝರಿ ಪ್ರದೇಶದ ಮೂಲಕ ಬೆಳ್ತಂಗಡಿ ಬಂಡಾಜೆ ಫಾಲ್ಸ್ ಕಡೆ ತೆರಳಿ ಟ್ರೆಕ್ಕಿಂಗ್ ಗೆ ಬಂದ ಬೆಂಗಳೂರಿನ ಯುವಕನೊಬ್ಬ ದಾರಿ ತಪ್ಪಿ ನಾಪತ್ತೆಯಾದ ಪ್ರಸಂಗ ಆದಿತ್ಯವಾರದಂದು ನಡೆದಿದ್ದು, ಈ ಪ್ರದೇಶದಲ್ಲಿ ಕೆಲವು ಕಾಲ ಆತಂಕಕ್ಕೆ ಒಳಗಾದ ಪ್ರಸಂಗವೂ ನಡೆದಿದೆ. ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದ ಪರೇಶ್ ಕಿಶಾನ್ ಲಾಲ್ ಅಗರ್ವಾಲ್ ಅನ್ನುವ 25 ರ ಯುವಕ ಟ್ರೆಕ್ಕಿಂಗ್ ಗಾಗಿ ಬಂದು […]

Continue Reading

ಪ್ರತಿಷ್ಠಿತ ಖಾಸಗಿ ಕಂಪನಿಯೊಂದಕ್ಕೆ ಈ ಕೆಳಗಿನ ಹುದ್ದೆಗಳಿಗೆ ಜನ ಬೇಕಾಗಿದ್ದಾರೆ

ಪ್ರತಿಷ್ಠಿತ ಖಾಸಗಿ ಕಂಪನಿಯೊಂದಕ್ಕೆ ಈ ಕೆಳಗಿನ ಹುದ್ದೆಗಳಿಗೆ ಜನ ಬೇಕಾಗಿದ್ದಾರೆ.ಆಕರ್ಷಕ ವೇತನ ನೀಡಲಾಗುವುದು.ಹೆಚ್ಚಿನ ಮಾಹಿತಿಗಾಗಿ ಇದರಲ್ಲಿರುವ ಮೊಬೈಲ್ ನಂಬರಿಗೆ ಸಂಪರ್ಕಿಸಬಹುದು

Continue Reading